‘4 ಸೀಟು ಗೆದ್ದ ಕೆಲವು ನಾಯಿಗಳು ಪಾಕಿಸ್ತಾನ್‌ ಜಿಂದಾಬಾದ್‌ ಕೂಗುತ್ತಾರೆ’; ಈಶ್ವರಪ್ಪ ಕಿಡಿ

: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮಂಗಳೂರಿನಲ್ಲಿ ಬೆಂಬಲಿತ 4 ಸಾವಿರಕ್ಕೂ ಹೆಚ್ಚು ಮಂದಿ ಗೆದ್ದಿದ್ದಾರೆ. 4 ಸೀಟು ಗೆದ್ದ ಕೆಲವು ನಾಯಿಗಳು ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಕೂಗುತ್ತಾರೆ. ಕಾನೂನು ಪ್ರಕಾರವೇ ಅವರ ನಾಲಿಗೆ ಕಿತ್ತು ಹಾಕುವ ಸಂದರ್ಭ ಬರುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ಎಚ್ಚರಿಕೆ ನೀಡಿದರು. ನಗರದಲ್ಲಿ ಬುಧವಾರ ಆಯೋಜಿಸಿದ್ದ ಜನ ಸೇವಕ ಸಮಾವೇಶ ಉದ್ಘಾಟಿಸಿ ಮಾತನಾಡಿ, ನಿಮ್ಮೂರಲ್ಲಿ ಕೂಡ ಇಂತಹ ದೇಶದ್ರೋಹಿಗಳು, ಗೋ ಹಂತಕರು ಇರಬಹುದು. ಒಂದು ಹಸುವನ್ನೂ ಕಳವು ಮಾಡಲು, ಕಡಿಯಲು ಬಿಡಬೇಡಿ. ಗೋರಕ್ಷಕರಿಗೆ ಪೊಲೀಸರು ತೊಂದರೆ ಕೊಟ್ಟರೆ ಅವರು ಕೂಡ ಅನುಭವಿಸುವ ದಿನ ಬರುತ್ತದೆ ಎಂದರು. ಬ್ರಿಟಿಷರು, ಮೊಘಲರ ಕಾಲದಲ್ಲಿ ನಾಶವಾಗಿದ್ದ ಭಾರತೀಯ ಸಂಸ್ಕೃತಿ ಎತ್ತಿ ಹಿಡಿಯುವುದು ಸ್ವಾತಂತ್ರ್ಯ ಹೋರಾಟಗಾರರ ಆಶಯವಾಗಿತ್ತು. ಈ ಬಗ್ಗೆ ಕಾಂಗ್ರೆಸ್‌ ಯೋಚನೆಯನ್ನೇ ಮಾಡಲಿಲ್ಲ. ಭಾರತದ ಅಭಿವೃದ್ಧಿಗೆ, ಕಾಶ್ಮೀರವನ್ನು ಭಾರತಕ್ಕೆ ಸೇರಿಸಲು, ರಾಮ ಮಂದಿರ ಕಟ್ಟಲು ಬಿಜೆಪಿ ಮತ್ತು ಮೋದಿಯೇ ಬರಬೇಕಾಯಿತು ಎಂದರು. ದೇಶದ್ರೋಹಿಗಳಿಗೆ ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಕೂಗುವ ಸೊಕ್ಕು ಬಂದಿರುವುದೇ ಕಾಂಗ್ರೆಸ್‌ನಿಂದ. ನಿಮ್ಮ ಗ್ರಾಮ ನಿಮ್ಮದು, ನಿಮ್ಮದೇ ಆಡಳಿತ. ಗೋಹತ್ಯೆಗೆ ಅವಕಾಶ ಕೊಡಬೇಡಿ. ದೇವಸ್ಥಾನಗಳನ್ನೂ ಕಟ್ಟಿ ಎಂದು ಸಲಹೆ ಮಾಡಿದರು. ಇನ್ನು ಲವ್‌ ಜಿಹಾದ್‌ ಎಂದರೆ ಅರ್ಥವೇನು? ನಮ್ಮ ಹೆಣ್ಣುಮಕ್ಕಳನ್ನು ಮುಟ್ಟಿದರೆ ಕೈಕಾಲು ಮುರಿಯುವ ಭಯ ಇರಬೇಕು. ತ್ರಿಬಲ್‌ ತಲಾಕ್‌ ನಿಷೇಧಿಸಿದ್ದೇವೆ. ಮುಂದೆ ಲವ್‌ ಜಿಹಾದ್‌ ನಿಷೇಧ ಕಾಯಿದೆ ಕೂಡ ಜಾರಿಗೆ ತರುತ್ತೇವೆ. ಎಲ್ಲ ಮುಸಲ್ಮಾನರು ದೇಶದ್ರೋಹಿಗಳಲ್ಲ. ಆದರೆ, ಯಾರೋ ಕೆಲವರು ಮಾಡುವ ಕೃತ್ಯದಿಂದ ಸಮುದಾಯಕ್ಕೆ ಅಪವಾದ. ದೇಶಭಕ್ತ ಮುಸಲ್ಮಾನರು, ಕ್ರಿಶ್ಚಿಯನ್ನರು ದೊಡ್ಡ ಸಂಖ್ಯೆಯಲ್ಲಿದ್ದಾರೆ ಎಂದು ಹೇಳಿದರು.


from India & World News in Kannada | VK Polls https://ift.tt/39omynG

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...