ಅನಿವಾಸಿ ಕನ್ನಡಿಗರ 'ಕಾವೇರಿ ಕನ್ನಡ ಸಂಘ'ಕ್ಕೆ 2021ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ

ವಾಷಿಂಗ್ಟನ್‌: ವಾಷಿಂಗ್ಟನ್‌ನಲ್ಲಿರುವ ಮುನ್ನಡೆಸುವ ಕಾವೇರಿ ಕನ್ನಡ ಸಂಘದ 2021ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ವಿದೇಶದಲ್ಲಿದ್ದು ಕನ್ನಡ ಮತ್ತು ನಾಡಿನ ಸಾಂಸ್ಕೃತಿಕ, ಸಾಹಿತ್ಯ ಲೋಕಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿರುವ ಈ ಬಾರಿಯೂ ಹೊಸ ನಿರೀಕ್ಷೆಯೊಂದಿಗೆ ಮತ್ತಷ್ಟು ಕೆಲಸ ಕಾರ್ಯಗಳನ್ನು ಮಾಡಲು ಮುಂದಾಗಿದೆ. ಈ ಕುರಿತು ಪ್ರಕಟಣೆ ಹೊರಡಿಸಿದ್ದು, ಹೊಸ ವರ್ಷದ ಶುಭಾಶಯದೊಂದಿಗೆ ಆದಷ್ಟು ಬೇಗ ಕೊರೊನಾ ಸಾಂಕ್ರಾಮಿಕ ರೋಗ ನಿವಾರಣೆಯಾಗಬಹುದೆಂಬ ನಿರೀಕ್ಷಣೆಯೊಂದಿಗೆ ಹಾಗು ಗುಣಮಟ್ಟದ/ವೈಶಿಷ್ಟಕರವಾದ ಕಾರ್ಯಕ್ರಮಗಳನ್ನು ಕೊಡಬೇಕೆಂಬ ಆಕಾಂಕ್ಷೆಗಳೊಂದಿಗೆ ಈ ವರ್ಷವನ್ನು ನಮ್ಮ ಸಮಿತಿಯು ಎದುರು ನೋಡುತ್ತಿದೆ. ಉತ್ತಮ ಆಕಾಂಕ್ಷೆ ಮತ್ತು ಹೊಸ ಹುರುಪಿನೊಂದಿಗೆ 2021ರ ಹೊಸ ವರ್ಷವನ್ನು ಸ್ವಾಗತಿಸೋಣ ಎಂದು ಕಾವೇರಿ ಕಾರ್ಯಕಾರಿ ಸಮಿತಿ ಪರವಾಗಿ ಮೈತ್ರಿ ಜಯದೇವ್ ಹೇಳಿದ್ದಾರೆ. ಹಿರಿಯ ಸದಸ್ಯರ ವಿಭಾಗದಲ್ಲಿ 2021ನೇ ಸಾಲಿನ ಹಿರಿಯ ಸಂಯೋಜಕರಾಗಿ ಬಿಂದು ಗುರುರಾಜ್ ಮತ್ತು ರಾಜೀವ ಚಿಕ್ಕಪುಟ್ಟಯ್ಯ, ಅಧ್ಯಕ್ಷರಾಗಿ ವಿಪ್ರ ಭಟ್ ಮತ್ತು ಮಿಲನ್ ಮಂಜುನಾಥ್, ಉಪಾಧ್ಯಕ್ಷರಾಗಿ ನಿಧಿ ನಾಗಶಂಕರ್, ಕಾರ್ಯದರ್ಶಿಗಳಾಗಿ ಸಿಮ್ರಾನ್ ಮಟ್ಟಿಕಳ್ಳಿ ಮತ್ತು ಸುಚಿತ್ ಕೋಪರ್ದೆ, ಜತೆ ಕಾರ್ಯದರ್ಶಿಗಳಾಗಿ ಮನಸ್ವಿ ಶರ್ಮಾ ಮತ್ತು ಅದಿತಿ ಭಟ್, ಖಜಾಂಚಿಯಾಗಿ ತುಷಾರ್‌ ರಂಗಸ್ವಾಮಿ ಮತ್ತು ಯಾಮಿನಿ ರವಿ, ಸಹಖಜಾಂಚಿಯಾಗಿ ಪೌರವ್‌ ಕಣನೂರ್ ಆಯ್ಕೆಯಾಗಿದ್ದಾರೆ. ಇನ್ನು ಕಿರಿಯರ ವಿಭಾಗದಲ್ಲಿ ಕಿರಿಯ ಅಧ್ಯಕ್ಷರಾಗಿ ಮಾನ್ಯ ಮಹೇಶ್ ಮತ್ತು ಸಮರ್ಥ್ ಸುದರ್ಶನ, ಜ್ಯೂ.ಚೇರ್‌ಚಾರಿಟಿಯಾಗಿ ವೇದಮೂರ್ತಿ, ಉಪಾಧ್ಯಕ್ಷರಾಗಿ ಶ್ರೇಷ್ಠ ಪಾರ್ತಾಜೆ ಮತ್ತು ರೋಹನ್ ಕಣನೂರ್, ಕಾರ್ಯದರ್ಶಿಯಾಗಿ ಮಾನ್ಯ ಮಂಜುನಾಥ್, ಜತೆ ಕಾರ್ಯದರ್ಶಿಯಾಗಿ ನಿಖಿತಾ ರಾಜು, ವಿಭವ ಭಟ್ ಮತ್ತು ಸಿರಿ ದೇವರಾಜು, ಖಜಾಂಚಿಯಾಗಿ ಸಿದ್ಧಾಂತ್‌ ವಿನಯ್, ಸಹ ಖಜಾಂಚಿಯಾಗಿ ಶ್ರೇಯಾ ದೇವರಾಜ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಕ್ಷಯ್‌ ದಾಸ್‌ ಆಯ್ಕೆಯಾಗಿದ್ದಾರೆ.


from India & World News in Kannada | VK Polls https://ift.tt/3rNCxnK

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...