'ಅಡಿಲೇಡ್‌ ಆಘಾತದ ಬಳಿಕ ಭಾರತಕ್ಕೆ ರಹಾನೆಯಂಥ ಆಟಗಾರನ ಅಗತ್ಯವಿತ್ತು' ರಾಜಾ

ಹೊಸದಿಲ್ಲಿ: ಟೀಮ್‌ ಇಂಡಿಯಾದ ಬೆಂಚ್‌ ಸಾಮರ್ಥ್ಯಕ್ಕೆ ಆಕರ್ಷಿತರಾಗಿರುವ ಪಾಕಿಸ್ತಾನ ತಂಡದ ಮಾಜಿ ನಾಯಕ , ಪ್ರಸ್ತುತ ವಿಶ್ವ ಕ್ರಿಕೆಟ್‌ನಲ್ಲಿ ಭಾರತ ತಂಡ ಪಡೆದಿರುವ ಸ್ಥಾನಕ್ಕೆ ಅರ್ಹವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಅಡಿಲೇಡ್‌ ಟೆಸ್ಟ್ ಹೀನಾಯ ಸೋಲಿನ ಹೊರತಾಗಿಯೂ ಬಲಿಷ್ಠವಾಗಿ ಕಮ್‌ಬ್ಯಾಕ್‌ ಮಾಡಿದ ನಾಯಕತ್ವದ ಭಾರತ ತಂಡ 2-1 ಅಂತರದಲ್ಲಿ ಟೆಸ್ಟ್ ಸೆರಣಿ ಗೆದ್ದು ಐತಿಹಾಸಿಕ ಸಾಧನೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಪಾಕ್‌ ಮಾಜಿ ನಾಯಕ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ವಿರಾಟ್‌ ಕೊಹ್ಲಿ ಅನುಪಸ್ಥಿತಿಯಲ್ಲಿ ಅಜಿಂಕ್ಯ ರಹಾನೆ ಭಾರತ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು. ಮೆಲ್ಬೋರ್ನ್‌ನಲ್ಲಿ ಜಯ, ಸಿಡ್ನಿಯಲ್ಲಿ ಡ್ರಾ ಹಾಗೂ ಬ್ರಿಸ್ಬೇನ್‌ನಲ್ಲಿ 32 ವರ್ಷಗಳ ಬಳಿಕ ಮೊದಲ ಬಾರಿ ಆಸ್ಟ್ರೇಲಿಯಾ ತಂಡಕ್ಕೆ ಸೋಲಿನ ಆಘಾತ ನೀಡಿತ್ತು. ಕೊಹ್ಲಿ ಇಲ್ಲದೆ ರಹಾನೆ ಹಾಗೂ ರವಿಶಾಸ್ತ್ರಿ ಅವರ ಸಾಧನೆ ಅದ್ಭುತವಾದದ್ದು ಎಂದು ರಮೀಜ್‌ ರಾಜಾ ಅಭಿಪ್ರಾಯ ವ್ಯಕ್ತಪಡಿಸಿದರು. ಭಾರತ ತಂಡದಲ್ಲಿ ಆಕ್ರಮಣಶೀಲತೆಯ ಸಂಸ್ಕೃತಿಯನ್ನು ಪ್ರಚೋದಿಸಿರುವ ವಿರಾಟ್‌ ಕೊಹ್ಲಿಯನ್ನು ರಮೀಜ್ ರಾಜಾ ಶ್ಲಾಘಿಸಿದರು, ಜೊತೆಗೆ ರಹಾನೆ ಅವರ ಶಾಂತತೆ ಮತ್ತು ತಂಡ ಕೆಳಗಿರುವಾಗ ಆಟಗಾರರನ್ನು ಪ್ರೇರೇಪಿಸುವ ಶಾಸ್ತ್ರಿ ಅವರ ಇಚ್ಚಾಶಕ್ತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. "ನಾನು ವಿರಾಟ್ ಕೊಹ್ಲಿಯನ್ನು ನಿಜವಾಗಿಯೂ ಇಷ್ಟಪಡುತ್ತೇನೆ ಏಕೆಂದರೆ ಅವರು ವ್ಯವಸ್ಥೆಯಲ್ಲಿ ಎಲ್ಲರನ್ನೂ ಎತ್ತಿದ್ದಾರೆ ಮತ್ತು ಆಕ್ರಮಣಶೀಲತೆಯನ್ನು ಒದಗಿಸಿದ್ದಾರೆ. ಭಾರತ ತಂಡಕ್ಕೆ ಅವರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಅಡಿಲೇಡ್‌ ಟೆಸ್ಟ್ ದ್ವಿತೀಯ ಇನಿಂಗ್ಸ್‌ನಲ್ಲಿ 36ಕ್ಕೆ ಆಲೌಟ್‌ ಆದ ಬಳಿಕ ತಂಡದಲ್ಲಿ ಶಾಂತತೆ ರೂಪಿಸಲು ಅಜಿಂಕ್ಯ ರಹಾನೆ ಅವರಂಥ ಆಟಗಾರ ಭಾರತಕ್ಕೆ ಅಗತ್ಯವಿತ್ತು. ಅದನ್ನು ಅವರು ಅದ್ಭುತವಾಗಿ ನಿರ್ವಹಿಸಿದರು," ಎಂದು ರಾಜಾ ಯೂಟ್ಯೂಬ್‌ ಚಾನೆಲ್‌ವೊಂದರಲ್ಲಿ ತಿಳಿಸಿದರು. "ಅಡಿಲೇಡ್‌ ಟೆಸ್ಟ್‌ನಲ್ಲಿ 36 ರನ್‌ಗೆ ಆಲೌಟ್ ಹಾಗೂ ಹಿರಿಯರ ಅನುಪಸ್ಥಿತಿಯಿಂದ ಭಾರತದ ಆಟಗಾರರ ಮೇಲೆ ಒತ್ತಡವಿತ್ತು. ಈ ವೇಳೆ ಡ್ರೆಸ್ಸಿಂಗ್ ಕೊಠಡಿಯಲ್ಲಿ ಉತ್ತಮ ವಾತಾವರಣ ಸೃಷ್ಠಿಸಿವುದು ತಮಾಷೆಯ ವಿಷಯವಾಗಿರಲಿಲ್ಲ. ಹಲವು ಏರಿಳಿತಗಳ ನಡುವೆ ಆಟಗಾರರನ್ನು ಪ್ರೇರೇಪಿಸಿದ ಮುಖ್ಯ ಕೋಚ್‌ ರವಿಶಾಸ್ತ್ರಿಗೂ ನಾನು ಹೆಚ್ಚಿನ ಮನ್ನಣೆ ನೀಡುತ್ತೇನೆ," ಎಂದರು. ಇತ್ತೀಚೆಗೆ ಶ್ರೀಲಂಕಾ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿ ಗೆಲುವಿನ ವಿಶ್ವಾಸದಲ್ಲಿ ತೇಲುತ್ತಿರುವ ಇಂಗ್ಲೆಂಡ್‌ ತಂಡಕ್ಕೆ ಭಾರತದ ವಿರುದ್ಧ ನಾಲ್ಕು ಹಣಾಹಣಿಗಳ ಟೆಸ್ಟ್ ಸರಣಿಯಲ್ಲಿ ಕಠಿಣ ಸವಾಲು ಎದುರಾಗಲಿದೆ. ಬಲಿಷ್ಠ ಬೆಂಚ್‌ ಆಟಗಾರರನ್ನು ಹೊಂದಿರುವ ಟೀಮ್‌ ಇಂಡಿಯಾ, ಆಂಗ್ಲರ ವಿರುದ್ಧ ಪ್ರಾಬಲ್ಯ ಸಾಧಿಸಲಿದೆ ಎಂದು ರಮೀಜ್‌ ರಾಜಾ ಭಾವಿಸಿದ್ದಾರೆ. "ಭಾರತ ತಂಡದ ಪರ ಒಳ್ಳೆಯ ಸಂಗತಿ ಏನೆಂದರೆ, ಎರಡನೇ ಹಾಗೂ ಮೂರನೇ ದರ್ಜೆಯ ಆಟಗಾರರು ಆಸ್ಟ್ರೇಲಿಯಾ ನೆಲದಲ್ಲಿ ಅದ್ಭುತ ಪ್ರದರ್ಶನ ತೋರಿದ್ದರು. ಆ ಮೂಲಕ ಸತತ ಎರಡನೇ ಬಾರಿ ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ್ದರು. ವಿರಾಟ್‌ ಕೊಹ್ಲಿ ಹಾಗೂ ಪ್ರಮುಖ ಆಟಗಾರರು ಮರಳುವಿಕೆಯ ಜತೆಗೆ ಯುವ ಆಟಗಾರರ ವಿಶ್ವಾಸ ಹೇಗಿರಬಹುದೆಂದು ಊಹಿಸಿಕೊಳ್ಳಿ," ಎಂದು ಹೇಳಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2MLOOZK

ಯುವಕರ ನಿರೀಕ್ಷೆ ಮತ್ತು ಲಾಕ್‌ಡೌನ್‌ ವೇಳೆಯ ನಷ್ಟಕ್ಕೆ ಬಜೆಟ್‌ನಲ್ಲಿ ಪರಿಹಾರ ಸಿಗೋದು ಕಾಣಿಸ್ತಿಲ್ಲ; ಡಿಕೆಶಿ

ಬೆಂಗಳೂರು: ದೇಶದ ಜನರ ಕಣ್ಣು ಕೇಂದ್ರ ಸರ್ಕಾರ ಮಂಡಿಸುತ್ತಿರುವ ಈ ಬಾರಿಯ ಬಜೆಟ್‌ನತ್ತ ನೆಟ್ಟಿದ್ದು, ಇತ್ತ ಕೆಪಿಸಿಸಿ ಅಧ್ಯಕ್ಷ ಕೂಡ ಬಜೆಟ್ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಕುರಿತಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ರಾಜ್ಯಕ್ಕೆ ಹಾಗೂ ಎಲ್ಲ ಯುವಕರ ನಿರೀಕ್ಷೆ, ಕೊರೊನಾ ಸಂದರ್ಭದಲ್ಲಿ ಆದ ನಷ್ಟಕ್ಕೆ ಬಜೆಟ್‌ನಿಂದ ಪರಿಹಾರ ಸಿಗುವುದು ಕಾಣುತ್ತಿಲ್ಲ. ಉಳಿದ ವಿಚಾರಗಳ ಬಗ್ಗೆ ಸಂಜೆ ಪ್ರತಿಕ್ರಿಯೆ ನೀಡುತ್ತೇನೆ ಎಂದು ಪತ್ರಕರ್ತರೊಂದಿಗೆ ಹೇಳಿದರು. ಬಿಎಸಿ ಸಭೆಗೆ ಕಾಂಗ್ರೆಸ್ ಭಾಗಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಯಾವುದೇ ಮಸೂದೆಯನ್ನು ಚರ್ಚೆ ಮಾಡಿ ಮಂಡನೆ ಮಾಡಬೇಕು. ಏಕಾಏಕಿ ಸದನದಲ್ಲಿ ಮಂಡನೆ ಮಾಡಬಾರದು ಎಂಬ ಬೇಡಿಕೆ ಇಟ್ಟಿದ್ದೇವೆ. ಬೆಳಗಾವಿಯಲ್ಲಿ ಅಧಿವೇಶನ ನಡೆಸದೆ ಉತ್ತರ ಕರ್ನಾಟಕದ ಜನರಿಗೆ ಅನ್ಯಾಯ ಮಾಡುತ್ತಿದ್ದೀರಿ. ಬಜೆಟ್ ಅಧಿವೇಶವನ್ನು ಬೆಳಗಾವಿಯಲ್ಲಿ ಮಾಡಬೇಕು ಎಂಬ ಬೇಡಿಕೆ ಇಟ್ಟಿದ್ದೇವೆ ಎಂದರು. ಇನ್ನು ಬಜೆಟ್ ಅಧಿವೇಶನದ ಬಳಿಕ ಮುಂದಿನ ಅಧಿವೇಶನವನ್ನು ಬೆಳಗಾವಿಯಲ್ಲಿ ಮಾಡುತ್ತೇವೆ ಎಂದಿದ್ದಾರೆ ಎಂದ ಡಿಕೆಶಿ, ಸುವರ್ಣ ಸೌಧ ಬೆಳಗಾವಿಯಲ್ಲಿ ಏಕೆ ಕಟ್ಟಿದ್ದಾರೆ ಎಂದು ಮರೆತು ಬಿಟ್ಟಿದ್ದಾರೆ. ಈ ಕಾರಣಕ್ಕಾಗಿ ಅಲ್ಲೇ ಮಾಡಬೇಕು ಎಂದು ಒತ್ತಾಯ ಮಾಡಿದ್ದೇವೆ ಎಂದರು.


from India & World News in Kannada | VK Polls https://ift.tt/3ovTFM0

ಅಮೆರಿಕದಲ್ಲಿ ಕನ್ನಡ ಅಕಾಡೆಮಿಯಿಂದ ಮೈಸೂರು ವಿವಿಯ ಸರ್ಟಿಫಿಕೇಟ್‌ ಕೋರ್ಸ್‌: ಸಚಿವ ಸುರೇಶ್‌ ಕುಮಾರ್‌ ಚಾಲನೆ

ವರದಿ: ಶ್ರೀವಿದ್ಯಾ ಪ್ರಶಾಂತ್, ನ್ಯೂ ಜೆರ್ಸಿ ನ್ಯೂಯಾರ್ಕ್‌: ಅಮೆರಿಕದಲ್ಲಿರುವ ಅನಿವಾಸಿಗಳು ಕನ್ನಡ ಕಲಿಗೆ ಸ್ಥಾಪಿಸಿರುವ ಏರ್ಪಡಿಸಿದ್ದ ಮೈಸೂರು ವಿಶ್ವ ವಿದ್ಯಾನಿಲಯದ ಸರ್ಟಿಫಿಕೇಟ್ ಕೋರ್ಸಗಳ ಪ್ರಾರಂಭೋತ್ಸವ ಯಶಸ್ವಿಯಾಗಿ ನೆರವೇರಿತು. ಅಂತರ್ಜಾಲದಲ್ಲಿ ಬಿತ್ತರವಾದ ಈ ಕಾರ್ಯಕ್ರಮದಲ್ಲಿ ವಿಶ್ವದಾದ್ಯಂತ ಕನ್ನಡ ಶಿಕ್ಷಕರು, ಪೋಷಕರು, ಕನ್ನಡಿಗರು ಭಾಗವಹಿಸಿದ್ದರು. ಕನ್ನಡ ಶಾಲೆಯ ಮಕ್ಕಳು, ಕನ್ನಡ ಅಕ್ಯಾಡೆಮಿಯ ಸಂಕೇತ ಗೀತೆ, "ಹಚ್ಚೇವು ಕನ್ನಡದ ದೀಪ" ಹಾಡುವುದರೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಈ ಸಮಾರಂಭದಲ್ಲಿ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಮೈಸೂರು ವಿಶ್ವ ವಿದ್ಯಾನಿಲಯದ ಕನ್ನಡ ಭಾಷಾ ಸರ್ಟಿಫಿಕೇಟ್ ಕೋರ್ಸ್ ಗಳನ್ನು ಉದ್ಘಾಟಿಸಿದರು. ಕನ್ನಡ ಅಕ್ಯಾಡೆಮಿಯ ಅಧ್ಯಕ್ಷರಾದ ಶಿವ ಗೌಡೆರ್, ಅಕ್ಯಾಡೆಮಿಯ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸುತ್ತಾ ಜಗತ್ತಿನಾದ್ಯಂತ 2000 ಕ್ಕೂ ಹೆಚ್ಚು ಮಕ್ಕಳು ಈ ಕನ್ನಡ ಕಲಿಕೆಯ ಲಾಭ ಪಡೆಯುತ್ತಿದ್ದಾರೆ, 400ಕ್ಕೂ ಹೆಚ್ಚು ಶಿಕ್ಷಕರನ್ನು ತರಬೇತಿಗೊಳಿಸಲಾಗಿದೆ ಎಂದು ತಿಳಿಸಿದರು. ಮೈಸೂರು ವಿಶ್ವವಿದ್ಯಾಲಯದ ಈ ಸೆರ್ಟಿಫಿಕೇಷನ್ ಕೋರ್ಸ್ ಗಳು, ವಿದೇಶಿ ಕನ್ನಡಿಗರ ಕನ್ನಡ ಕಲಿಕೆಯಲ್ಲಿ ಮತ್ತೊಂದು ಮೈಲಿಗಲ್ಲು ಎಂದರು. ಜಗತ್ತಿನಾದ್ಯಂತ ಕನ್ನಡ ಕಲಿಕೆಗಾಗಿ ಕನ್ನಡ ಅಕಾಡೆಮಿ ಮಾಡುತ್ತಿರುವ ಕೆಲಸಗಳನ್ನು ಶ್ಲಾಘಿಸಿ, ಮೈಸೂರು ವಿಶ್ವವಿದ್ಯಾನಿಲಯ ಮತ್ತು ಕನ್ನಡ ಅಕಾಡೆಮಿ ಜೊತೆ ಸೇರಿ ಮಾಡುತ್ತಿರುವ ಈ ಕಾರ್ಯಕ್ಕೆ ಸರ್ಕಾರದ ಸಂಪೂರ್ಣ ಬೆಂಬಲ ವ್ಯಕ್ತ ಪಡಿಸಿದರು. ಇದೆ ರೀತಿ ಇತರೆ ವಿಶ್ವವಿದ್ಯಾಲಯಗಳು ಕೂಡ ಜೊತೆ ಸೇರಿದರೆ ಈ ಕಾರ್ಯ ಮತ್ತಷ್ಟು ವಿಸ್ತಾರ ಹಾಗೂ ವಿಕಸನವಾಗುತ್ತದೆ ಎಂದರು. ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಹೇಮಂತ್ ಕುಮಾರ್ ರವರು ಮಾತನಾಡುತ್ತಾ, ಕನ್ನಡ ಭಾಷೆಯ ಅಭಿವೃದ್ಧಿಗೆ ಪ್ರತಿಯೊಂದು ತಲೆಮಾರಿನವರೂ ತಮ್ಮ ಕೊಡುಗೆ ನೀಡಿದ್ದಾರೆ ಮತ್ತು ಜಗತ್ತಿನ ಶೇಷ್ಠವಾದ 20 ಭಾಷೆಗಳಲ್ಲಿ ಕನ್ನಡವೂ ಒಂದು ಎಂದು ನೆನೆದಾಗ ಅಭಿಮಾನ ಉಕ್ಕಿ ಬರುತ್ತದೆ ಎಂದರು. ಕನ್ನಡದ ಒಲುಮೆ, ಕನ್ನಡದ ನಲ್ಮೆ, ಕನ್ನಡಿಗರ ಜಾಣ್ಮೆ ಹಾಗೂ ಕನ್ನಡಿಗರ ಮೇಲ್ಮೆಯ ಬಗ್ಗೆ ಶತಮಾನದ ಹಿಂದೆ ಕವಿ ಶ್ರೀ ಬಿ.ಎಂ.ಶ್ರೀಕಂಠಯ್ಯನವರು ಕಂಡ ಕನಸು ಇನ್ನೂ ನನಸಾಗಬೇಕಿದೆ. ಈ ನಿಟ್ಟಿನಲ್ಲಿ ವಿದೇಶದಲ್ಲಿ ನೆಲೆಸಿರುವ ಕನ್ನಡ ಮಕ್ಕಳಿಗೆ ಅನ್ಯ ಭಾಷಿಕರಿಗೆ ಮತ್ತು ಕನ್ನಡ ಕಲಿಯುವ ಆಸಕ್ತರಿಗೆ ಈ ಸರ್ಟಿಫಿಕೇಟ್ ಕೋರ್ಸ್ ಗಳು ವರದಾನವಾಗಲಿ ಎಂದು ಹಾರೈಸಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ. ಎಸ್. ನಾಗಾಭರಣ ರವರು ಮಾತನಾಡಿ, ಈಗಾಗಲೇ ಪ್ರಾಧಿಕಾರದಿಂದ 86ಕ್ಕೂ ಹೆಚ್ಚು ದೇಶಗಳಲ್ಲಿ ಕನ್ನಡ ಶಿಬಿರಗಳನ್ನು ಅಯೋಜಿಸಿರುವುದರ ಬಗ್ಗೆ ತಿಳಿಸಿದರು. ಕನ್ನಡ ಅಕಾಡೆಮಿ ಹೊರದೇಶದ ಮಕ್ಕಳ ಕಲಿಕೆಗಾಗಿ ಪಠ್ಯ ಪುಸ್ತಕ ಸಿದ್ಧ ಪಡಿಸಿದ್ದನ್ನು ಶ್ಲಾಘಿಸುತ್ತಾ, ಭಾಷಾ ತಜ್ಞರ ಜೊತೆಗೂಡಿ ಕೆಲಸ ಮಾಡುತ್ತಿರುವುದನ್ನು ಪ್ರಶಂಸಿಸಿದರು. ಅತ್ಯಂತ ಕಡಿಮೆ ಅವಧಿಯಲ್ಲಿ ಉತ್ತಮ ಸಾಧನೆಯನ್ನು ಮಾಡಿದ ಕನ್ನಡ ಅಕಾಡೆಮಿ, ಮುಂದೆ ಪ್ರೊ. ಕೃಷ್ಣೇಗೌಡ ಮತ್ತು ಪ್ರೊ.ತಳವಾರ್ ರವರ ಸಲಹೆ ಹಾಗೂ ಮೈಸೂರು ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಇನ್ನೂ ಹೆಚ್ಚಿನ ಎತ್ತರಕ್ಕೆ ಎರಲಿ ಎಂದು ಹಾರೈಸಿದರು. ಕನ್ನಡ ಪ್ರಮಾಣಿಕೃತ ಪರೀಕ್ಷೆಗಳ ಬಗ್ಗೆ ಮಾತನಾಡುತ್ತಾ, ಕರ್ನಾಟಕ ಸರಕಾರದ "ಕನ್ನಡ ಕಾಯಕ ವರ್ಷ" ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಮೈಸೂರು ವಿಶ್ವವಿದ್ಯಾಲಯದ ಮುಖ್ಯಾಧಿಕಾರಿಗಳಾದ ಪ್ರೊ. ಎನ್.ಎಂ.ತಳವಾರ್ ರವರು ಸರ್ಟಿಫಿಕೇಟ್ ಕೋರ್ಸ್ ಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು. ಕನ್ನಡ ಅಕಾಡೆಮಿಯ ಪದಾಧಿಕಾರಿ ಮಧುರಂಗಪ್ಪ ಗೌಡರ್ ರವರು ಈಗಾಗಲೇ ಪ್ರಾರಂಭವಾದ ಕೋರ್ಸ್ ಗಳಿಗೆ ನೋಂದಾಯಿಸಿರುವ ಮಕ್ಕಳ ಬಗ್ಗೆ ಮತ್ತು ಪ್ರಾoಶುಪಾಲರಾದ ಶ್ರೀಯುತ ಹರೀಶ್ ತರಗತಿಗಳ ಬಗ್ಗೆ ತಿಳಿಸಿದರು. ಕನ್ನಡ ಅಕಾಡೆಮಿಯ ಸಲಹೆಗಾರರಾದ ಪ್ರೊ. ಕೃಷ್ಣೇ ಗೌಡ ಅವರು ಕನ್ನಡ ಭಾಷೆಯ ಸಮೃದ್ಧಿ ಈಗಿನ ಮಕ್ಕಳಿಗೂ ತಿಳಿಯುವಂತಾಗಬೇಕು. ಒಂದು ಉತ್ತಮ ಉದ್ದೇಶ ಸಾಕಾರಗೊಳ್ಳಬೇಕಾದರೆ ವೃತ್ತಿಪರತೆ ಮತ್ತು ಸ್ವಯಂ ಸೇವಕತ್ವ ಬಹುಮುಖ್ಯ ಮತ್ತು ಅದನ್ನು ಅಕಾಡೆಮಿಯ ಕಾರ್ಯಗಳಲ್ಲಿ ಕಾಣಬಹುದು ಎಂದರು. ಖ್ಯಾತ ಸಾಹಿತಿಗಳಾದ ಶಿವರಾಮ ಕಾರಂತರ ಬಗ್ಗೆ ಹೇಳುತ್ತಾ, ಸಾಹಿತ್ಯದಲ್ಲಿ ಆಗುವ ಪಾತ್ರಗಳ ಸೃಷ್ಟಿ ಮನುಷ್ಯನನ್ನು ಬೇರೊಂದು ಲೋಕಕ್ಕೆ ಕರೆದೊಯ್ಯುವಂತಾಗಬೇಕು ಎಂದು ಆಶಿಸಿದರು. ಕಾರ್ಯಕ್ರಮದ ವಂದನಾರ್ಪಣೆಯನ್ನು ಕನ್ನಡ ಅಕಾಡೆಮಿಯ ಶ್ರೀ ಅರುಣ್ ಸಂಪತ್ ಅವರು ನಡೆಸಿ ಕೊಟ್ಟರು. ಶ್ರೀಮತಿ ಸೂಷ್ಮ ಚಾರ್ ಕಾರ್ಯಕ್ರಮವನ್ನು ನಿರೂಪಿಸಿದರು. ಕನ್ನಡ ಅಕಾಡೆಮಿ, ಅಮೆರಿಕದಲ್ಲಿನ ಒಂದು ಲಾಭ-ರಹಿತ ಸಂಸ್ಥೆಯಾಗಿದ್ದು, ಸುಮಾರು 70 ಸ್ವಯಂಸೇವಕರು ಪ್ರಪಂಚದ ಮೂಲೆ ಮೂಲೆಗಳಲ್ಲಿರುವ ಕನ್ನಡ ಶಾಲೆಗಳನ್ನು ಗುರುತಿಸಿ, ಬೆಂಬಲಿಸಿ, ಹಾಗೂ ಅವುಗಳ ಬೆಳವಣಿಗೆಗೆ ಸತತವಾಗಿ ಶ್ರಮಿಸುತ್ತಿದ್ದಾರೆ. ಅಕಾಡೆಮಿಯಿಂದ ಅಮೆರಿಕಾ, ಕೆನಡಾ, ಯುಕೆ, ನಾರ್ವೆ, ಸ್ವೀಡನ್‌ ಹಾಗೂ ಮಲೇಶಿಯಾದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, 60 ಶಾಲೆಗಳಲ್ಲಿ ಸುಮಾರು 2000 ಕ್ಕೂ ಹೆಚ್ಚು ವಿದ್ಯಾರ್ಥಿಗಳು, 400 ಕ್ಕೂ ಹೆಚ್ಚು ಕನ್ನಡ ಶಿಕ್ಷಕರನ್ನು ಒಳಗೊಂಡಿದೆ. ಯುಎಸ್ಎ, ಯುಕೆ ಮತ್ತು ಸ್ವೀಡನ್ ನಲ್ಲಿ ಈಗಾಗಲೇ 35 ಕ್ಕೂ ಹೆಚ್ಚು ಪ್ರೌಢಶಾಲೆಗಳಲ್ಲಿ ಕನ್ನಡವನ್ನು ಅಧಿಕೃತ ವಿದೇಶಿ ಭಾಷೆಯಾಗಿ ಭೋದಿಸಲು ಅನುಮೋದನೆಯನ್ನು ಪಡೆದಿದೆ. ಇನ್ನೂ ಹೆಚ್ಚಿನ ಶಾಲೆ, ಕಾಲೇಜುಗಳಿಗೂ ವಿಸ್ತರಿಸುವ ಪ್ರಯತ್ನದಲ್ಲಿದೆ. ಮೈಸೂರು ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಕನ್ನಡದ ಸರ್ಟಿಫಿಕೇಶನ್ ಕೋರ್ಸ ಗಳನ್ನು ಪ್ರೌಢಶಾಲೆಯ ಮಕ್ಕಳಿಗೆ ಪ್ರಾರಂಭಿಸಿದ್ದು ಮತ್ತೊಂದು ಮೈಲಿಗಲ್ಲು.


from India & World News in Kannada | VK Polls https://ift.tt/3akMqRV

ಕೊಪ್ಪ ಆಸ್ಪತ್ರೆಯಲ್ಲಿ ಮಾರಾಟವಾಗಿದ್ದ ಮಗು ಬಾಳೆಹೊನ್ನೂರಿನಲ್ಲಿ ಪತ್ತೆ!

ಚಿಕ್ಕಮಗಳೂರು: ಕೊಪ್ಪ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಮಾರಾಟ ಮಾಡಿದ್ದ ಬಾಳೆಹೊನ್ನೂರಿನಲ್ಲಿ ಪತ್ತೆಯಾಗಿದ್ದು ರಕ್ಷಣೆ ಮಾಡಲಾಗಿದೆ. ತೀರ್ಥಹಳ್ಳಿಯ ಯುವತಿಯೊಬ್ಬಳಿಗೆ ವಿವಾಹ ಪೂರ್ವದಲ್ಲಿ ಜನಿಸಿದ್ದ ಮಗುವನ್ನು ಅಲ್ಲಿನ ವೈದ್ಯ ಡಾ.ಬಾಲಕೃಷ್ಣ ಮತ್ತು ಇಬ್ಬರು ನರ್ಸ್‌ಗಳು ಬೇರೊಬ್ಬರಿಗೆ ಮಾರಾಟ ಮಾಡಿದ್ದು, ಈ ಬಗ್ಗೆ ಕೊಪ್ಪ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಶೃಂಗೇರಿಯ ಮಹಿಳೆಯೊಬ್ಬರ ಬಳಿ ಇದ್ದ ಮಗುವನ್ನು ಮಕ್ಕಳ ರಕ್ಷಣಾ ಸಮಿತಿ ವಶಕ್ಕೆ ಪಡೆದಿತ್ತು. ಆದರೆ, ಈ ಮಗುವಿನ ವಯಸ್ಸು ಮಾರಾಟ ಮಾಡಿದ್ದ ಮಗುವಿಗಿಂತ ಹೆಚ್ಚಾಗಿತ್ತು. ಹೀಗಾಗಿ ಮಗುವನ್ನು ಯಾರಿಗೆ ಮಾರಾಟ ಮಾಡಲಾಗಿದೆ ಎಂದು ವಿಚಾರಣೆ ನಡೆಸುತ್ತ ಹೋದಾಗ ಬಾಳೆಹೊನ್ನೂರಿನ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿರುವುದು ಗೊತ್ತಾಗಿದೆ. 9 ತಿಂಗಳ ಹಿಂದೆ ಮಾರಾಟವಾಗಿದ್ದ ಈ ಮಗುವನ್ನು ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ವಶಕ್ಕೆ ಪಡೆದುಕೊಂಡಿದೆ. ಸಿಗದ ಉತ್ತರ ಶೃಂಗೇರಿಯಲ್ಲಿ ಪತ್ತೆಯಾಗಿದ್ದ ಮಗು ಯಾರದ್ದು ಎಂಬ ಪ್ರಶ್ನೆ ಎದ್ದಿದ್ದು ಕೊಪ್ಪ ತಾಲೂಕು ಆಸ್ಪತ್ರೆಯಲ್ಲಿ ಮಕ್ಕಳ ಮಾರಾಟ ನಿರಂತರವಾಗಿ ನಡೆದಿರುವುದಕ್ಕೆ ಇದು ಸಾಕ್ಷಿಯಾಗಿದೆ.


from India & World News in Kannada | VK Polls https://ift.tt/2L5c84k

ಕೃಷಿ ಕಾಯ್ದೆ ಜಾರಿ ವಿರೋಧಿಸಿ ಸಂಸತ್ತಿಗೆ ಕಪ್ಪು ಗೌನ್ ಹಾಕಿಕೊಂಡು ಬಂದ ಕಾಂಗ್ರೆಸ್ ಸಂಸದರು!

ಹೊಸದಿಲ್ಲಿ: ಕೇಂದ್ರ ಬಜೆಟ್ 2021 ಮಂಡನೆಗೆ ಕ್ಷಣಗಣೆ ಶುರುವಾಗಿದ್ದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇನ್ನೇನು ಕೆಲವೇ ಕ್ಷಣಗಳಲ್ಲಿ ಸಂಸತ್ತಿನಲ್ಲಿ ಬಜೆಟ್ ಮಂಡಿಸಲಿದ್ದಾರೆ. ಈ ಮಧ್ಯೆ ಕೇಂದ್ರದ ಕೃಷಿ ಕಾಯ್ದೆಗಳ ಜಾರಿ ವಿರೋಧಿಸಿ ಕಾಂಗ್ರೆಸ್ ಸಂಸದರಾದ ಜಸ್ಬೀರ್ ಸಿಂಗ್ ಗಿಲ್ ಹಾಗೂ ಗುರ್ಜಿತ್ ಸಿಂಗ್ ಅಹುಜಾ, ಸಂಸತ್ತಿಗೆ ಹಾಕಿಕೊಂಡು ಪ್ರವೇಶ ಮಾಡಿದ್ದಾರೆ. ಕೃಷಿ ಕಾಯ್ದೆಗಳ ಹೆಸರಲ್ಲಿ ಕೇಂದ್ರ ಸರ್ಕಾರ ದೇಶದ ರೈತ ಸಮುದಾಯವನ್ನೇ ನಾಶ ಮಾಡಲು ಹೊರಟಿದ್ದು, ಈ ಕೂಡಲೇ ಕೃಷಿ ಕಾಯ್ದೆಗಳನ್ನು ರದ್ದು ಮಾಡಬೇಕು ಎಂದು ಈ ಇಬ್ಬರೂ ಆಗ್ರಹಿಸಿದರು. ಕೃಷಿ ಕಾಯ್ದೆಗಳ ಜಾರಿ ವಿರೋಧಿಸಿ ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲಕ ಸೂಚಿಸಲು ಸಂಸತ್ತಿಗೆ ಕಪ್ಪು ಗೌನ್ ಹಾಕಿಕೊಂಡು ಬಂದಿರುವುದಾಗಿ ಜಸ್ಬೀರ್ ಸಿಂಗ್ ಗಿಲ್ ಹಾಗೂ ಗುರ್ಜಿತ್ ಸಿಂಗ್ ಅಹುಜಾ ಸ್ಪಷ್ಟಪಡಿಸಿದರು. ಪ್ರತಿಭಟನಾನಿರತ ರೈತರನ್ನು ದೇಶದ್ರೋಹಿಗಳಂತೆ ಬಿಂಬಿಸಲಾಗುತ್ತಿದ್ದು, ಇದಕ್ಕೆ ಕೇಂದ್ರ ಸರ್ಕಾರದ ಕುಮ್ಮಕ್ಕು ಇದೆ ಎಂದು ಈ ಇಬ್ಬರೂ ಕಾಂಗ್ರೆಸ್ ಸಂಸದರು ಗಂಭೀರ ಆರೋಪ ಮಾಡಿದರು. ಕೇಂದ್ರ ಸರ್ಕಾರ ಪ್ರತಿಭಟನಾನಿರತ ರೈತರ ಬೇಡಿಕೆಗಳನ್ನು ಆಲಿಸಬೇಕು. ಕೃಷಿ ಕಾಯ್ದೆಗಳನ್ನು ಶಾಶ್ವತವಾಗಿ ಹಿಂಪಡೆದು ರೈತ ಸಮುದಾಯದ ನಾಶವನ್ನು ತಡೆಯಬೇಕು ಎಂದು ಈ ವೇಳೆ ಜಸ್ಬೀರ್ ಸಿಂಗ್ ಗಿಲ್ ಹಾಗೂ ಗುರ್ಜಿತ್ ಸಿಂಗ್ ಅಹುಜಾ ಒತ್ತಾಯಿಸಿದರು. ಕೇಂದ್ರದ ಕೃಷಿ ಕಾಯ್ದೆಗಳ ಜಾರಿ ವಿರೋಧಿಸಿ ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಗೆ ಕಾಂಗ್ರೆಸ್ ಬೆಂಬಲ ಸೂಚಿಸಿದೆ. ಅಲ್ಲದೇ ಬಜೆಟ್ ಅಧಿವೇಶನದಲ್ಲಿ ಕೃಷಿ ಕಾಯ್ದಗಳ ಕುರಿತು ಚರ್ಚಿಸುವ ಯೋಜನೆ ರೂಪಿಸಿದೆ.


from India & World News in Kannada | VK Polls https://ift.tt/2NIBt51

ಬೆಂಗಳೂರು: OLXನಲ್ಲಿ ಕಾರು ಖರೀದಿಸಲು ಹೋಗಿ ₹7.80 ಲಕ್ಷ ಕಳೆದುಕೊಂಡ ವ್ಯಕ್ತಿ..!

ಬೆಂಗಳೂರು: ಒಎಲ್‌ಎಕ್ಸ್‌ನಲ್ಲಿದ್ದ ಜಾಹೀರಾತು ನೋಡಿ ಕಾರು ಖರೀದಿಗೆ ಮುಂದಾದ ವ್ಯಕ್ತಿಯೊಬ್ಬರಿಗೆ ಸಾಲ ಒದಗಿಸುವ ನೆಪದಲ್ಲಿ ಬ್ಯಾಂಕ್‌ ಮ್ಯಾನೇಜರ್‌ ಹೆಸರಿನಲ್ಲಿ ಮಾತನಾಡಿದ ಆನ್‌ಲೈನ್‌ ಖದೀಮರು, 7.80 ಲಕ್ಷ ರೂ. ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ ಘಟನೆ ನಡೆದಿದೆ. ಸದಾಶಿವ ನಗರದ ವರುಣ ಮಹೇಶ ವಂಚನೆಗೊಳಗಾದ ವ್ಯಕ್ತಿಯಾಗಿದ್ದು, ಒಎಲ್‌ಎಕ್ಸ್‌ನಲ್ಲಿ 2020ರ ಮಾಡೆಲ್‌ನ ಹೋಂಡಾ ಕ್ರೆಟಾ ಕಾರನ್ನು ಮಾರಾಟಕ್ಕೆ ಇಟ್ಟಿರುವುದನ್ನು ಗಮನಿಸಿದ ಮಹೇಶ್‌, ಕಾರು ಖರೀದಿಸಲು ಆಸಕ್ತಿ ತೋರಿಸಿದ್ದರು. ಜಾಹೀರಾತಿನಲ್ಲಿದ್ದ ಫೋನ್‌ ನಂಬರ್‌ ಸಂಪರ್ಕಿಸಿದಾಗ, ಕಾರಿನ ಬೆಲೆ 12.50 ಲಕ್ಷ ರೂ. ಆದರೆ, ಕಾರಿನ ಮೇಲೆ 8.9 ಲಕ್ಷ ರೂ. ಸಾಲ ಇದೆ. ಅದನ್ನು ಕಟ್ಟಿದರೆ ಕಾರನ್ನು ನಿಮಗೆ ನೀಡಲಾಗುತ್ತದೆ ಎಂದಿದ್ದರು ಎಂದು ದೂರಿನಲ್ಲಿ ಮಹೇಶ್‌ ವಿವರಿಸಿದ್ದಾರೆ. ಮಾತನಾಡಿದ ಬಳಿಕ ಬ್ಯಾಂಕ್‌ ಮ್ಯಾನೇಜರ್‌ ಎಂದು ಹೇಳಿ ವ್ಯಕ್ತಿಯೊಬ್ಬರ ಫೋನ್‌ ನಂಬರ್‌ ನೀಡಿದ್ದರು. ಅದಕ್ಕೆ ಕರೆ ಮಾಡಿದಾಗ, ಲೋನ್‌ ಕಟ್ಟಿದರೆ ಕಾರನ್ನು ನಿಮಗೆ ಕೊಡುತ್ತೇವೆ ಎಂದು ಹೇಳಿ ಆಧಾರ್‌ ಕಾರ್ಡ್‌, ಪಾನ್‌ ಕಾರ್ಡ್‌ ಫೋಟೋವನ್ನು ವಾಟ್ಸ್‌ಆ್ಯಪ್‌ ಮೂಲಕ ತೆಗೆದುಕೊಂಡರು. ಮುಂಗಡವಾಗಿ ಒಂದು ಲಕ್ಷ ರೂ. ಕೊಟ್ಟು ವಾಹನ ಖರೀದಿ ನಿಶ್ಚಯ ಮಾಡಿಕೊಳ್ಳಿ. ಇಲ್ಲದಿದ್ದರೆ ಕಾರನ್ನು ಬೇರೆಯವರಿಗೆ ನೀಡುತ್ತೇವೆ ಎಂದು ಹಲವು ಕಾರಣಗಳನ್ನು ನೀಡಿದ್ದರು. ಆತನ ಮಾತು ನಂಬಿ ಬ್ಯಾಂಕ್‌ ಖಾತೆಯಿಂದ ಅಪರಿಚಿತ ನೀಡಿದ್ದ ಉಜ್ಜೀವನ್‌ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ ಖಾತೆಗೆ ಹಂತ- ಹಂತವಾಗಿ ಒಟ್ಟು 7,80,000 ರೂ. ವರ್ಗಾವಣೆ ಮಾಡಿದ್ದೇನೆ ಎಂದು ದೂರಿನಲ್ಲಿ ಮಹೇಶ್‌ ವಿವರಿಸಿದ್ದಾರೆ. ಬೇರೆ ಬೇರೆ ಶುಲ್ಕ, ನೆಪ ಹೇಳಿ ಹಣ ವರ್ಗಾವಣೆ ಮಾಡಿಕೊಂಡು ಮೋಸ ಮಾಡಿರುವ ಆರೋಪಿಯನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಕೋರಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಸೈಬರ್‌ ಕ್ರೈಂ ಪೊಲೀಸರು, ತನಿಖೆ ಕೈಗೊಂಡಿದ್ದಾರೆ.


from India & World News in Kannada | VK Polls https://ift.tt/3j5KuAH

ಉಪನ್ಯಾಸಕರಿಗೆ ವರ್ಗಾವಣೆ ಭಾಗ್ಯ: ಒಂದೇ ಸ್ಥಳದಲ್ಲಿ 4 ವರ್ಷ ಇದ್ದವರಿಗೆ ಅವಕಾಶ!

ಬೆಂಗಳೂರು: ಪದವಿ ಹಾಗೂ ತಾಂತ್ರಿಕ ಕಾಲೇಜುಗಳ ಬೋಧನಾ ಸಿಬ್ಬಂದಿಗಳಿಗೆ ಭಾಗ್ಯಕ್ಕೆ ಸರಕಾರ ಮುನ್ನುಡಿ ಬರೆದಿದೆ. ಈ ಬಗ್ಗೆ ಗೆಜೆಟ್‌ ಅಧಿಸೂಚನೆ ಹೊರಡಿಸಿದ್ದು, ಹೊಸ ನಿಯಮಗಳ ಅನ್ವಯ ಶೇ.15ರಷ್ಟು ಮೀರದಂತೆ ವರ್ಗಾವಣೆಗೆ ಕ್ರಮ ಕೈಗೊಂಡಿದೆ. ಈ ಬಗ್ಗೆ ಮಾಹಿತಿ ನೀಡಿರುವ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ''ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿರುವ ಎಲ್ಲಾ ಸರಕಾರಿ ಪದವಿ, ಎಂಜಿನಿಯರಿಂಗ್‌ ಮತ್ತು ಡಿಪ್ಲೊಮಾ ಕಾಲೇಜುಗಳ ಉಪನ್ಯಾಸಕರ ವರ್ಗಾವಣೆ ಪ್ರಕ್ರಿಯೆ ಕೌನ್ಸೆಲಿಂಗ್‌ ಮೂಲಕ ನಡೆಯಲಿದ್ದು, ಶೈಕ್ಷಣಿಕ ಹಿತದೃಷ್ಟಿಯಿಂದ ಹೊಸ ನಿಯಮಗಳನ್ವಯ ಶೇ.9ರಷ್ಟು ಬೋಧನಾ ಸಿಬ್ಬಂದಿಯನ್ನು ಕಡ್ಡಾಯ ವರ್ಗಾವಣೆ ಮಾಡಲಾಗುವುದು,'' ಎಂದರು. ''ಒಂದೇ ಸ್ಥಳದಲ್ಲಿ ಸುಮಾರು 4 ವರ್ಷ ಕೆಲಸ ಮಾಡಿರುವ ಬೋಧಕರು ವರ್ಗಾವಣೆಗೆ ಅರ್ಹರಾಗಿದ್ದು, ಇದರ ಆಧಾರದ ಮೇಲೆ ವರ್ಗಾವಣೆ ಪ್ರಮಾಣವನ್ನು ನಿಗದಿಪಡಿಸಲಾಗಿದೆ. ಪದವಿ ಹಾಗೂ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುವ ಬೋಧಕರಿಗೆ ಇದು ಅನ್ವಯವಾಗಲಿದ್ದು, ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ವರ್ಗಾವಣೆಗೆ ಚಾಲನೆ ಸಿಗಲಿದೆ. ಆದಷ್ಟು ಬೇಗ ವರ್ಗಾವಣೆ ಪ್ರಕ್ರಿಯೆಗಳ ದಿನಾಂಕವನ್ನು ಪ್ರಕಟಿಸಲಾಗುವುದು,'' ಎಂದು ಹೇಳಿದರು. ಐದು ವಲಯಗಳಾಗಿ ವಿಂಗಡಣೆ ವರ್ಗಾವಣೆಗೆ ಅನುಕೂಲವಾಗಿ ಐದು ವಲಯಗಳ ವಿಂಗಡಣೆ ಮಾಡಲಾಗಿದ್ದು, ಒಂದು ವಲಯದಲ್ಲಿ ಕನಿಷ್ಠ 4 ವರ್ಷ ಕೆಲಸ ಮಾಡಿದವರು ಬೇರೊಂದು ವಲಯಕ್ಕೆ ವರ್ಗಾವಣೆಗೊಳ್ಳಲು ಅರ್ಹರಾಗಿರುತ್ತಾರೆ.
  • ಎ ವಲಯ: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿ
  • ಬಿ ವಲಯ: ಬಿಡಿಎ ಮತ್ತು ಬೆಂಗಳೂರು ಬಿಟ್ಟು ಇತರ ನಗರ ಪಾಲಿಕೆಗಳ ವ್ಯಾಪ್ತಿ
  • ಸಿ ವಲಯ: ಜಿಲ್ಲಾಕೇಂದ್ರ ಹಾಗೂ ನಗರಸಭೆಗಳ ವ್ಯಾಪ್ತಿಯ ಪ್ರದೇಶ
  • ಡಿ ವಲಯ: ತಾಲೂಕು ಕೇಂದ್ರ ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿ
  • ಇ ವಲಯ: ಮೇಲಿನ ಎಲ್ಲ ವ್ಯಾಪ್ತಿಗಳಿಗೆ ಹೊರತಾದ ಪ್ರದೇಶದ ಕಾಲೇಜು
ಶೇ.15ರಷ್ಟು ವರ್ಗಾವಣೆ ವಿವರ
  • ಬೋಧನಾ ಸಿಬ್ಬಂದಿಯ ಪೈಕಿ ಶೇ.9ರಷ್ಟು ಕಡ್ಡಾಯ ವರ್ಗಾವಣೆ
  • ಪತಿ-ಪತ್ನಿ ಪ್ರಕರಣದಲ್ಲಿ ಶೇ.3ರಷ್ಟು
  • ವಿಧವೆಯರು, ಡಿವೋರ್ಸ್‌ ಪಡೆದವರು, ವಿಶೇಷಚೇತನರ ಹೊಣೆಗಾರಿಕೆ ಇರುವವರು, ಸೇನೆ ಅಥವಾ ಅರೆ ಸೇನಾಪಡೆಯಲ್ಲಿ ಕೆಲಸ ಮಾಡುತ್ತಿರುವವರ ಪ್ರಕರಣಗಳಲ್ಲಿ ಶೇ.1
  • ದೈಹಿಕ ವಿಶೇಷಚೇತನರು ಮತ್ತು ಗಂಭೀರ ಆರೋಗ್ಯ ಸಮಸ್ಯೆ ಹೊಂದಿದವರಿಗೆ ತಲಾ ಶೇ.1
ವರ್ಗಾವಣೆಯಲ್ಲಿ ಪಾರದರ್ಶಕತೆ ವರ್ಗಾವಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು ಸರಕಾರದ ಮುಖ್ಯ ಉದ್ದೇಶವಾಗಿದೆ. ನಾಲ್ಕು ವರ್ಷಗಳಿಗೂ ಹೆಚ್ಚು ಕಾಲದಿಂದ ಒಂದೇ ಕಡೆ ಠಿಕಾಣಿ ಹೂಡಿರುವ ಬೋಧನಾ ಸಿಬ್ಬಂದಿಯನ್ನು ಮುಲಾಜಿಲ್ಲದೆ ವರ್ಗ ಮಾಡಲಾಗುವುದು. ಈ ಹಿಂದೆ ಅಧ್ಯಾಪಕರ ವರ್ಗಾವಣೆ, ದೊಡ್ಡ ಪ್ರಹಸನದಂತೆ ನಡೆಯುತ್ತಿತ್ತು. ಆದರೆ, ಇಡೀ ವರ್ಗಾವಣೆ ಪ್ರಕ್ರಿಯೆಗಳನ್ನು ಆನ್‌ಲೈನ್‌ ಮೂಲಕ ನಡೆಸಲಾಗುತ್ತದೆ'' ಎಂದು ಡಿಸಿಎಂ ಅಶ್ವತ್ಥ ನಾರಾಯಣ ಮಾಹಿತಿ ನೀಡಿದರು.


from India & World News in Kannada | VK Polls https://ift.tt/36vpdLJ

ಆಸ್ಟ್ರೇಲಿಯಾದಲ್ಲಿ ಜನ ಪ್ರತಿನಿಧಿಯಾಗಿ ಆಯ್ಕೆಯಾದ ಕನ್ನಡತಿ ಸಹನಾಗೆ ರಣಧೀರ ಪಡೆಯಿಂದ ಸನ್ಮಾನ

ಮೆಲ್ಬೋರ್ನ್: ಆಸ್ಟ್ರೇಲಿಯಾದ ನ ವಿಂಧಂ ಕೌನ್ಸಿಲ್ ನಿಂದ ಜನಪ್ರತಿನಿಧಿಯಾಗಿ ಆಯ್ಕೆಯಾದ ಸಹನಾ ರಮೇಶ್ ಅವರಿಗೆ ಕರ್ನಾಟಕ ರಣಧೀರ ಪಡೆಯ ಅಂತಾರಾಷ್ಟ್ರೀಯ ಘಟಕದ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನ ಸಮಾರಂಭವನ್ನು ಫೇಸ್ ಬುಕ್ ಮುಖಾಂತರ ನೇರ ಪ್ರಸಾರ ಮಾಡಲಾಗಿದ್ದು ಮೂವತ್ತೆರಡು ಸಾವಿರಕ್ಕೂ ಮಿಕ್ಕಿ ಜನರು ಸನ್ಮಾನ ಸಮಾರಂಭವನ್ನು ವೀಕ್ಷಿಸಿ ಅಭಿನಂದನೆಗಳ ಮಹಾಪೂರವನ್ನೇ ಹರಿಸಿದ್ದಾರೆ. ಸನ್ಮಾನ ಸಮಾರಂಭವನ್ನು ಅಂತಾರಾಷ್ಟ್ರೀಯ ಘಟಕದ ಉಪಾಧ್ಯಕ್ಷರಾದ ರವಿ ಶಿರೂರು, ಸಂಚಾಲಕರಾದ ಪ್ರವೀಣ್ ಕಳಸದ ಮತ್ತು ಪ್ರಧಾನ ಕಾರ್ಯದರ್ಶಿ ಪ್ರದೀಪ್ ತೊರೆನೂರು ನೆರವೇರಿಸಿದರು. ಸನ್ಮಾನಿತರಿಗೆ ಶಾಲು, ಕನ್ನಡ ಬಾವುಟ ಮತ್ತು ಕನ್ನಡ ಪೇಟವನ್ನು ತೊಡಿಸುವ ಮೂಲಕ ಗೌರವಿಸಲಾಯ್ತು. ಶ್ರೀಹರ್ಷ ಸ್ವಾಗತ ಕೋರಿದರೆ ಕರಪದ ರಾಜ್ಯಾಧ್ಯಕ್ಷರಾದ ಬಿ ಹರೀಶ್ ಕುಮಾರ್‌ ಆನ್ ಲೈನ್ ಮುಖಾಂತರ ಉಪಸ್ಥಿತರಿದ್ದು ಆಶಯ ನುಡಿಗಳನ್ನು ಮತ್ತು ಅಭಿನಂದನೆಗಳನ್ನು ಸನ್ಮಾನಿತರಿಗೆ ತಿಳಿಸಿದರು. ಸನ್ಮಾನದ ನಂತರ ಸಹನಾ ರಮೇಶ್ ಅವರೊಂದಿಗೆ ಸಂವಾದ ಕಾರ್ಯಕ್ರಮ ಇತ್ತು. ಸಿಡ್ನಿಯಲ್ಲಿ ನೆಲೆಸಿರುವ ಶ್ರೀಹರ್ಷ ಸಾಲಿಮಠ ಮತ್ತು ಉಪಾಧ್ಯಕ್ಷ ರವಿ ಶಿರೂರು ನಡೆಸಿಕೊಟ್ಟರು. ಸಂವಾದಕರು ಮುಂದಿಟ್ಟ ಪ್ರಶ್ನೆಗಳಿಗೆ ವಿನಯಶೀಲ, ನೇರ ಮತ್ತು ಸ್ಪಷ್ಟ ಉತ್ತರಗಳನ್ನು ಕೊಟ್ಟ ಸಹನಾ ರಮೇಶ್ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಮುಂದಿನ ದಿನಗಳಲ್ಲಿ ಆಸ್ಟ್ರೇಲಿಯಾದಲ್ಲಿ ಆಡಳಿತ ನುಡಿಯಾಗಿ ಕನ್ನಡವನ್ನು ಅಳವಡಿಸುವ ಬಗೆಗೆ ಹಾಗೂ ಶಿಕ್ಷಣದಲ್ಲಿ ಕನ್ನಡ ಕಲಿಸುವ ಬಗೆಗೆ ಸೂಕ್ತ ಹೆಜ್ಜೆ ಇಡುವುದಾಗಿ ಸಹನಾ ರಮೇಶ್ ತಿಳಿಸಿದರು. ಹತ್ತು ವರ್ಷಗಳ ಹಿಂದೆ ವಿದ್ಯಾರ್ಥಿನಿಯಾಗಿ ಆಸ್ಟ್ರೇಲಿಯಾಕ್ಕೆ ಬಂದು ಸಂಶೋಧಕಿ ಯಾಗಿ ಮತ್ತು ಉದ್ಯಮಿಯಾಗಿ ಬೆಳೆದು ರಾಜಕೀಯ ರಂಗದಲ್ಲಿ ತಾವು ಛಾಪು ಮೂಡಿಸಿದ ಹಿನ್ನೆಲೆಗಳನ್ನು ಮತ್ತು ವಿವರಗಳನ್ನು ಸಮಗ್ರವಾಗಿ ವಿವರಿಸಿದರು. ಕನ್ನಡಿಗರು ಉದ್ಯಮಶೀಲರಾಗಲು ಹಿಂಜರಿಕೆ ಇರಬಾರದು ತಾಯ್ತಂದೆಯರೂ ಸಹ ತಮ್ಮ ಮಕ್ಕಳಿಗೆ ಹದುಳವಲಯದಿಂಧ ಆಚೆ ಬಂದು ಜೀವನದಲ್ಲಿ ಸಾಹಸಗಳನ್ನು ಕೈಗೊಳ್ಳಲು ಪ್ರೇರೇಪಿಸಬೇಕು ಎಂದು ಕಿವಿಮಾತು ಹೇಳಿದರು. ಕರ್ನಾಟಕ ಸರಕಾರವು ಉದ್ಯಮಿಗಳಿಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿದೆಯಾದರೂ ಇನ್ನೂ ಹೆಚ್ಚಿನ ಮಟ್ಟದ ಸಹಕಾರ ರಾಜಕೀಯ ಇಚ್ಛಾಶಕ್ತಿ ಮತ್ತು ಅಧಿಕಾರಿಗಳ ಸಹಕಾರ ಸಿಗಬೇಕು ಅಲ್ಲದೇ ಉದ್ಯಮ ಸ್ಥಾಪಿಸಲು ಅಡ್ಡಗಾಲು ಹಾಕುತ್ತಿರುವ ಭ್ರಷ್ಟಾಚಾರ ಮತ್ತು ಕಾನೂನಾತ್ಮಕ ಕೊರತೆಗಳನ್ನು ನೀಗಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಕರ್ನಾಟಕ ರಣಧೀರ ಪಡೆಯ ಕನ್ನಡಪರ ನಿಲುವನ್ನು ಮುಕ್ತಕಂಠದಿಂದ ಶ್ಲಾಘಿಸಿದ ಸಹನಾ ಸಂಘಟನೆಯು ಕೈಗೊಳ್ಳುವ ಎಲ್ಲಾ ಕನ್ನಡಪರ ಕೆಲಸಗಳಿಗೆ ಒತ್ತಾಸೆಯಾಗಿ ನಿಲ್ಲುವುದಾಗಿ ಭರವಸೆ ನೀಡಿದರು. ಸಂವಾದದಲ್ಲಿ ನಡುವೆ ವೀಕ್ಷಕರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಹರೀಶ್ ಅವರು ಅನಿವಾಸಿ ಕನ್ನಡಿಗರು ಜಗತ್ತಿನೆಲ್ಲೆಡೆ ಕನ್ನಡವನ್ನು ಪಸರಿಸಲು ಸಾಧ್ಯವಾಗುವಂತೆ ತಮ್ಮ ವತಿಯಿಂದ ಸಂಪೂರ್ಣ ಬೆಂಬಲ ಹಾಗೂ ಶ್ರಮದಾನ ನೀಡುವುದಾಗಿ ಘೋಷಿಸಿದರು. ಕಾರ್ಯಕ್ರಮದ ನಿರ್ವಹಣೆಯ ಹೊಣೆಯನ್ನು ಸಿಡ್ನಿಯಲ್ಲಿ ನೆಲೆಸಿರುವ ಸುಷ್ಮಾ ದಯಾನಂದ್ ವಹಿಸಿಕೊಂಡಿದ್ದು ಸಂವಾದವನ್ನೂ ಸಹ ಯಶಸ್ವಿಯಾಗಿ ನಿರ್ವಹಿಸಿದರು. ಅಂತರರಾಷ್ಟ್ರೀಯ ಘಟಕದ ಪರವಾಗಿ ಆಶಯ ನುಡಿಗಳನ್ನು ನುಡಿದ ಪ್ರಧಾನ ಕಾರ್ಯದರ್ಶಿ ಪ್ರದೀಪ್ ತೊರೆನೂರು ಸಹನಾ ರಮೇಶ್ ಅವರಿಗೆ ಸಮಸ್ತ ಕನ್ನಡಿಗರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿ ಅಂತತರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಬೆಳವಣಿಗೆ ಮತ್ತು ಸಂಘಟನೆಯ ಕಡೆಗೆ ಕಟಿಬದ್ಧರಾಗಿರುವುದಾಗಿ ತಿಳಿಸಿದರು.


from India & World News in Kannada | VK Polls https://ift.tt/3amgUD9

ಕನಕಪುರ: ಹಸು ತೊಳೆಯುವಾಗ ನೀರಿನಲ್ಲಿ ಮುಳುಗಿ ಇಬ್ಬರು ಸಾವು..!

ಕನಕಪುರ: ಗ್ರಾಮದ ಕುಂಟೆಯಲ್ಲಿ ಹಸುವನ್ನು ತೊಳೆಯಲು ಹೋಗಿದ್ದ 11 ವರ್ಷದ ಬಾಲಕ ಮತ್ತು ಮಹಿಳೆ ಕಾಲುಜಾರಿ ಕುಂಟೆಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೃತರನ್ನು ತಾಲೂಕಿನ ಕಸಬಾ ಹೋಬಳಿಯ ಹುಣಸೆಮರದದೊಡ್ಡಿ ಗ್ರಾಮದ ದೀಪು(11), ಭಾರತಿ (30) ಎಂದು ಗುರುತಿಸಲಾಗಿದೆ. ಜಮೀನಿನಲ್ಲಿದ್ದ ಕುಂಟೆಯಲ್ಲಿ ಬಾಲಕ ದೀಪು ಹಸು ತೊಳೆಯಲು ಹೋಗಿದ್ದ. ಹಸು ತೊಳೆಯುತ್ತಿದ್ದಾಗ ದೀಪು ಕಾಲು ಜಾರಿ ಬಿದ್ದ ನೀರಿನಲ್ಲಿ ಮುಳುಗತೊಡಗಿದ. ಅದನ್ನು ಕಂಡ ಭಾರತಿ, ದೀಪುವನ್ನು ರಕ್ಷಿಸಲು ಕುಂಟೆಗೆ ಇಳಿದರು. ಕುಂಟೆಯಲ್ಲಿಆಳವಾದ ಕೆಸರಿನಲ್ಲಿ ಸಿಲುಕಿಕೊಂಡು ಇಬ್ಬರೂ ಪ್ರಾಣ ಬಿಟ್ಟರು. ಘಟನೆ ಸಂಬಂಧ ಕನಕಪುರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೃತ ಶವಗಳನ್ನು ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.


from India & World News in Kannada | VK Polls https://ift.tt/2MIfHhu

ಅಜಿಂಕ್ಯ ರಹಾನೆಗೆ ಫುಲ್‌ ಟೈಮ್‌ ನಾಯಕತ್ವ ನೀಡಿ ಎಂದ ಶೇನ್‌ ಲೀ!

ಹೊಸದಿಲ್ಲಿ: ಆಸ್ಟ್ರೇಲಿಯಾ ನೆಲದಲ್ಲಿ (2-1) ಐತಿಹಾಸಿಕ ಟೆಸ್ಟ್ ಸರಣಿ ಗೆಲುವು ಟೀಮ್‌ ಇಂಡಿಯಾ ನಾಯಕತ್ವಕ್ಕೆ ಸಂಬಂಧಿಸಿದ ಚರ್ಚೆಯನ್ನು ಪುನರುಚ್ಚರಿಸಿತು. ನಾಯಕತ್ವದಲ್ಲಿ ಟೀಮ್ ಇಂಡಿಯಾ ಅಡಿಲೇಡ್‌ ಟೆಸ್ಟ್‌ನಲ್ಲಿ ಹೀನಾಯ ಸೋಲು ಅನುಭವಿಸಿತ್ತು. ಬಳಿಕ ನಾಯಕತ್ವದಲ್ಲಿ ಭಾರತ ತಂಡ, ಇನ್ನುಳಿದ ಮೂರು ಪಂದ್ಯಗಳಲ್ಲಿ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ ತೋರಿತ್ತು. ವಿರಾಟ್‌ ಕೊಹ್ಲಿ ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ ಎಂಬ ಅಂಶವನ್ನು ನಿರ್ಲಕ್ಷಿಸಿದ ಅಭಿಮಾನಿಗಳು ಹಾಗೂ ಮಾಜಿ ಕ್ರಿಕೆಟಿಗರು, ಅಜಿಂಕ್ಯ ರಹಾನೆ ಅವರನ್ನೇ ಫುಲ್ ಟೈಮ್ ನಾಯಕನಾಗಿ ನೇಮಿಸಬೇಕೆಂದು ಆಗ್ರಹಿಸಿದ್ದರು. ಇನ್ನು ಕೆಲವರು, ವಿರಾಟ್‌ ಕೊಹ್ಲಿ ಟೆಸ್ಟ್ ತಂಡದ ನಾಯಕತ್ವದ ದಾಖಲೆ ಒಮ್ಮೆ ನೋಡಿ, ಆ ಮೇಲೆ ಈ ಬಗ್ಗೆ ಯೋಚಿಸಬೇಕೆಂದು ಕಾಯಂ ನಾಯಕನ ಪರ ಬ್ಯಾಟ್‌ ಬೀಸಿದ್ದರು. ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ಭಾರತ ತಂಡ ನಿರಾಳವಾಗಿದೆ ಎಂದು ಆಸ್ಟ್ರೇಲಿಯಾ ಮಾಜಿ ಆಲ್‌ರೌಂಡರ್‌ ಅಭಿಪ್ರಾಯ ವ್ಯಕ್ತಪಡಿಸಿದರು. ತಂಡದಲ್ಲಿ ಫಿಟ್ನೆಸ್ ಬೆಳೆಸಿದ ಸಂಸ್ಕೃತಿಗಾಗಿ ವಿರಾಟ್‌ ಕೊಹ್ಲಿ ಮೆಚ್ಚುಗೆಗೆ ಪಾತ್ರರಾದರೂ, ಕಾಯಂ ನಾಯಕನ ಬಗ್ಗೆ ಭಾರತೀಯ ಆಟಗಾರರು ಬಹುತೇಕ ಭಯಭೀತರಾಗಿದ್ದಾರೆ ಎಂದ ಲೀ, ಅದೇ ರಹಾನೆ ಅಡಿಯಲ್ಲಿ ಆಟಗಾರರು ಸ್ವತಂತ್ರವಾಗಿದ್ದು, ಭಯ ರಹಿತವಾಗಿ ಕಾಣುತ್ತಿದ್ದಾರೆ ಎಂದರು. "ಅಜಿಂಕ್ಯ ರಹಾನೆ ನಾಯಕತ್ವ ನೀವು ನೋಡಬಹುದು, ಟೆಸ್ಟ್‌ ಸರಣಿಯಲ್ಲಿ ಅವರು 10ಕ್ಕೆ 10 ಅಂಕಗಳನ್ನು ಪಡದುಕೊಂಡಿದ್ದಾರೆ. ಅವರು ಅದ್ಭುತವಾಗಿದ್ದು, ಟೀಮ್‌ ಇಂಡಿಯಾವನ್ನು ಅತ್ಯುತ್ತಮವಾಗಿ ಮುನ್ನಡೆಸಿದ್ದಾರೆ," ಎಂದು ಲೀ 'ಅಪ್ಟರ್‌ನೂನ್‌ ಸ್ಪೋರ್ಟ್ಸ್‌'ಗೆ ತಿಳಿಸಿದ್ದಾರೆ. "ನೋಡಿ, ಅವರು(ರಹಾನೆ) ಇರುವುದು ತಂಡಕ್ಕಾಗಿ ಎಂದು ಭಾವಿಸುತ್ತೇನೆ, ಅವರನ್ನು ನಾಯಕನಾಗಿ ಆಡಿಸುತ್ತೇನೆ. ವಿರಾಟ್‌ ಕೊಹ್ಲಿ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ಆದರೆ ತಂಡದೊಳಗಿನ ಆಟಗಾರರಿಂದ ಅವರು(ಕೊಹ್ಲಿ) ಬಹುತೇಕ ಪೂಜ್ಯನೆಂದು ನಾನು ಭಾವಿಸುತ್ತೇನೆ. ಕೊಹ್ಲಿ ಇದ್ದಾಗ ಆಟಗಾರರು ಒಂದು ಹೆಜ್ಜೆ ಮುಂದೆ ಇಡಲು ಭಯಪಡುತ್ತಿದ್ದಾರೆ," ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. "ಆಟಗಾರರು ಫಿಟ್ ಆಗಿರಬೇಕು, ಮೈದಾನದಲ್ಲಿ ಉತ್ತಮ ಫೀಲ್ಡಿಂಗ್‌ ಹಾಗೂ ಕ್ಯಾಚ್ ಹಿಡಿಯಬೇಕು ಎಂಬಂತೆ ಸಂಪೂರ್ಣ ವೃತ್ತಿಪರತೆಯನ್ನು ವಿರಾಟ್‌ ಕೊಹ್ಲಿ ಭಾರತ ತಂಡದಿಂದ ಬಯಸುತ್ತಾರೆ. ಇದರಿಂದಾಗಿ ಆಟಗಾರರು ಭಯಬೀತರಾಗುತ್ತಾರೆ. ಆದರೆ, ಅಜಿಂಕ್ಯ ರಹಾನೆ ನಾಯಕತ್ವದಲ್ಲಿ ನಾನು ನಿಜವಾಗಿಯೂ ಶಾಂತ ತಂಡವನ್ನು ನೋಡುತ್ತೇನೆ," ಎಂದು ಹೇಳಿದರು. "ವಿರಾಟ್‌ ಕೊಹ್ಲಿ ನಾಯಕತ್ವವನ್ನು ಬಿಟ್ಟುಕೊಡುತ್ತಾರೆಯೇ? ಇದು ನನಗೆ ಅನುಮಾನ. ಒಂದು ವೇಳೆ ನಾನು ಭಾರತೀಯ ಕ್ರಿಕೆಟ್‌ ಆಯ್ಕೆದಾರನಾಗಿದ್ದರೆ, ಅಜಿಂಕ್ಯ ರಹಾನೆಗೆ ನಾಯಕತ್ವವನ್ನು ಫುಲ್‌ ಟೈಮ್‌ ನೀಡುತ್ತಿದ್ದೆ ಹಾಗೂ ವಿರಾಟ್‌ ಕೊಹ್ಲಿಯನ್ನು ಬ್ಯಾಟಿಂಗ್‌ಗೆ ಮಾತ್ರ ಬಳಸಿಕೊಳ್ಳುತ್ತಿದ್ದೆ . ಆಗ ತಂಡ ಅತ್ಯುತ್ತಮವಾಗಿ ಕಾಣುತ್ತಿತ್ತು. ಆದರೆ, ಈ ವಿಷಯವನ್ನು ಸಮಯವೇ ನಿರ್ಧರಿಸಬೇಕು," ಎಂದು ಶೇನ್‌ ಲೀ‌ ತಿಳಿಸಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/39ADEQD

ಚಂಡಕಾಪುರ ಗ್ರಾಪಂನ 7 ಜನ ಸದಸ್ಯರ ಅಪಹರಣ: ಪೊಲೀಸರಿಂದ ರಕ್ಷಣೆ, ಇಬ್ಬರು ಆರೋಪಿಗಳ ವಶ!

ಬಸವಕಲ್ಯಾಣ: ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಹಿನ್ನೆಲೆಯಲ್ಲಿ ಅಧ್ಯಕ್ಷ ಹುದ್ದೆಯ ಆಕಾಂಕ್ಷಿಯೊಬ್ಬರ ಕಡೆಯಿಂದ ಅಪಹರಣಕ್ಕೆ ಒಳಗಾಗಿದ್ದ ತಾಲೂಕಿನ ಚಂಡಕಾಪೂರ ಗ್ರಾಮ ಪಂಚಾಯತಿಯ 7 ಜನ ಸದಸ್ಯರನ್ನು ರಕ್ಷಿಸುವಲ್ಲಿ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯ ಮತದಾನಕ್ಕಾಗಿ ತೆರಳುತ್ತಿದ್ದ ವೇಳೆ ತಾಲೂಕಿನ ತಡೋಳಾ ಗ್ರಾಮದ ಸಮೀಪ ಸದಸ್ಯರ ಮೇಲೆ ಅಧ್ಯಕ್ಷ ಹುದ್ದೆಯ ಆಕಾಂಕ್ಷಿ ಪುತಳಾಬಾಯಿ ಎನ್ನುವವರ ಕುಟುಂಬದವರು ಹಾಗೂ ಇತರರು ಹಲ್ಲೆ ನಡೆಸಿ, ಅಪಹರಿಸಿದ್ದರು. ಅಪಹರಣಕ್ಕೆ ಒಳಗಾಗಿದ್ದ 3 ಜನ ಮಹಿಳಾ ಸದಸ್ಯರು ಹಾಗೂ 4 ಜನ ಪುರುಷ ಸದಸ್ಯರನ್ನು 24 ಗಂಟೆಯೊಳಗೆ ಪತ್ತೆ ಮಾಡಿದ ಪೊಲೀಸರ ತಂಡ ಎಲ್ಲರನ್ನು ಸುರಕ್ಷಿತವಾಗಿ ರಕ್ಷಿಸಿದೆ. ಪ್ರಕರಣ ನಡೆಯುತ್ತಿದ್ದಂತೆ ತಕ್ಷಣ ಕಾರ್ಯಾಚರಣೆಗೆ ಇಳಿದ ಪೊಲೀಸ್‌ ಇಲಾಖೆ ಅಧಿಕಾರಿಗಳ ತಂಡ, ಅಪಹರಣಕಾರರು ಮತ್ತು ಅಪಹರಣಕ್ಕೆ ಒಳಗಾದ ಸದಸ್ಯರ ಪತ್ತೆಗಾಗಿ 3 ಜನ ಪೊಲೀಸ್‌ ಅಧಿಕಾರಿಗಳ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿತ್ತು. ಮಹಾರಾಷ್ಟ್ರದ ಉಮ್ಮರಗಾ ಬಳಿ ಮೂವರು ಜನ ಮಹಿಳಾ ಸದಸ್ಯರನ್ನು ಬಿಟ್ಟು ಉಳಿದ ನಾಲ್ಕು ಜನ ಪುರುಷ ಸದಸ್ಯರನ್ನು ಅಪಹರಣಕಾರರು ಕರೆದುಕೊಂಡು ಹೋಗಿದ್ದಾರೆ ಎನ್ನುವ ಖಚಿತ ಮಾಹಿತಿ ಪಡೆದು ಶನಿವಾರ ಸಂಜೆಯೇ 3 ಜನ ಮಹಿಳಾ ಸದಸ್ಯರನ್ನು ರಕ್ಷಣೆ ಮಾಡಲಾಗಿದೆ. ನಾಲ್ಕು ಜನ ಸದಸ್ಯರು ಭಾನುವಾರ ಗಡಿಯಲ್ಲಿ ಕಾರಿನಲ್ಲಿಆಗಮಿಸುತ್ತಿದ್ದಾರೆ ಎನ್ನುವ ಮಾಹಿತಿ ಪಡೆದು ಅವರನ್ನು ಕೂಡ ರಕ್ಷಿಸಿ ಠಾಣೆಗೆ ಕರೆ ತಂದಿದ್ದಾರೆ. ಅಧ್ಯಕ್ಷ ಆಕಾಂಕ್ಷಿ ಕುಟುಂಬದ 6 ಜನ ಹಾಗೂ ಇತರರ ಮೇಲೆ ಅಪಹರಣ ಪ್ರಕರಣ ದಾಖಲಿಸಲಾಗಿದ್ದು, ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಆದಷ್ಟು ಬೇಗ ಎಲ್ಲ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಎಲ್‌.ನಾಗೇಶ ತಿಳಿಸಿದ್ದಾರೆ. ಐಜಿಪಿ ಭೇಟಿ ಗ್ರಾಪಂ ಸದಸ್ಯರ ಅಪಹರಣ ಪ್ರಕರಣದ ಹಿನ್ನೆಲೆಯಲ್ಲಿ ಗ್ರಾಮೀಣ ಪೊಲೀಸ್‌ ಠಾಣೆಗೆ ಕಲಬುರಗಿ ವಲಯ ಐಜಿಪಿ ಮುನಿಷ ಖರ್ಬಿಕರ್‌ ಹಾಗೂ ಎಸ್ಪಿ ಡಿ.ಎಲ್‌, ನಾಗೇಶ ಸೇರಿದಂತೆ ಪೊಲೀಸ್‌ ಇಲಾಖೆ ಹಿರಿಯ ಅಧಿಕಾರಿಗಳ ತಂಡ ಭೇಟಿ ನೀಡಿ ಪ್ರಕರಣದ ಮಾಹಿತಿ ಪಡೆದರು. ಡಿವೈಎಸ್ಪಿ ಸೋಮಲಿಂಗ ಕುಂಬಾರ, ಸಿಪಿಐ ಮಹೇಶಗೌಡ ಪಾಟೀಲ್‌, ಜೆ.ಎಸ್‌.ನ್ಯಾಮಗೌಡರ್‌, ಪಿಎಸ್‌ಐ ವಸೀಮ್‌ ಪಟೇಲ್‌, ಅರುಣಕುಮಾರ, ಜಯಶ್ರೀ ಎಚ್‌. ಇದ್ದರು.


from India & World News in Kannada | VK Polls https://ift.tt/36qH46A

ಮತ್ತೊಮ್ಮೆ 94 ಸಿ ಯೋಜನೆ ಜಾರಿಗೊಳಿಸಲು ಪ್ರಯತ್ನ ಮಾಡಲಾಗಿದೆ: ಸಚಿವ ಅಂಗಾರ

ಕಡಬ: ಸರಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡು ವಾಸವಾಗಿರುವ ಬಡ ಕುಟುಂಬಗಳಿಗೆ ಅಡಿಸ್ಥಳದ ಹಕ್ಕುಪತ್ರ ನೀಡುವ 94ಸಿ ಯೋಜನೆ ರಾಜ್ಯದಲ್ಲಿ ಲಕ್ಷಾಂತರ ಕುಟುಂಬಗಳಿಗೆ ನೆರಳು ನೀಡಿದೆ. ಈ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಅವಕಾಶ ಕೊಡುವಂತೆ ಕೇಳಿಕೊಳ್ಳಲಾಗಿದೆ ಎಂದು ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಅಂಗಾರ ಹೇಳಿದರು. ಕೊಂಬಾರು ಶಾಲೆಯಲ್ಲಿ ಭಾನುವಾರ ನಡೆದ ಪತ್ರಕರ್ತರ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳೊಂದಿಗೆ ಸಾರ್ವಜನಿಕರ ಸಂವಾದದಲ್ಲಿ ಅವರು ಮಾತನಾಡಿದರು. ಡೀಮ್ಡ್‌ ಫಾರೆಸ್ಟ್‌ ಸಮಸ್ಯೆ ಬಗ್ಗೆ ಕಂದಾಯ ಸಚಿವ ಅರವಿಂದ ಲಿಂಬಾವಳಿ ಜತೆ ಈಗಾಗಲೇ ಮಾತುಕತೆ ನಡೆಸಲಾಗಿದೆ. ಅಧಿವೇಶನದ ಸಂದರ್ಭ ಕರಾವಳಿಯ ಎಲ್ಲ ಶಾಸಕರ ನಿಯೋಗದ ವಿಶೇಷ ಸಭೆಗೆ ಅವಕಾಶ ಸೃಷ್ಟಿಸಲಾಗಿದೆ ಎಂದರು. ಕೊಂಬಾರು- ಸಿರಿಬಾಗಿಲು ಗ್ರಾಮದ ಪ್ರಮುಖ 4 ರಸ್ತೆಗಳ ಅಭಿವೃದ್ಧಿಗೆ ಪ್ರಯತ್ನಿಸಲಾಗುವುದು. ಭಾಗಶಃ ಅರಣ್ಯ ಪ್ರದೇಶದಲ್ಲಿನ ಕಂದಾಯ ಇಲಾಖೆ ಭೂಮಿ ಪ್ರತ್ಯೇಕಿಸಿ ಕಂದಾಯ ಭೂಮಿಯನ್ನು ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ನುಡಿದರು. ಗ್ರಾಮಸ್ಥರ ಪರವಾಗಿ ದಾಮೋದರ, ಮಧುಸೂಧನ್‌ ಬೇಡಿಕೆಗಳನ್ನು ಮಂಡಿಸಿದರು. ದ.ಕ. ಜಿಲ್ಲಾಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್‌ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು.


from India & World News in Kannada | VK Polls https://ift.tt/3tfuKzJ

'ನಾಯಕನಾಗಿ ನನಗೆ ಎಲ್ಲವನ್ನೂ ಕಲಿಸಿದ್ದಾರೆ' ಗಂಭೀರ್ ಸಹಾಯ ನೆನೆದ ಕುಲ್ದೀಪ್‌!

ಹೊಸದಿಲ್ಲಿ: ಭಾರತ 19 ವಯೋಮಿತಿ ತಂಡದಿಂದ ಅನೇಕ ಪ್ರತಿಭೆಗಳು ಟೀಮ್‌ ಇಂಡಿಯಾಗೆ ಲಗ್ಗೆ ಇಟ್ಟು ಯಶಸ್ವಿಯಾಗಿದ್ದಾರೆ. ಅದರಂತೆ ಚೈನಾಮನ್‌ ಖ್ಯಾತಿಯ ಇದರಿಂದ ಹೊರತಾಗಿಲ್ಲ. 2014ರ ಕಿರಿಯರ ವಿಶ್ವಕಪ್‌ ಟೂರ್ನಿಯಲ್ಲಿ ಅದ್ಭುತ ಸ್ಪಿನ್‌ ಮೋಡಿ ಮಾಡಿದ್ದ ಕುಲ್ದೀಪ್‌, 2016ರಲ್ಲಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ತಂಡಕ್ಕೆ ಆಯ್ಕೆಯಾಗಿದ್ದರು. ಐಪಿಎಲ್‌ ಟೂರ್ನಿಯಲ್ಲಿ ಗಮನಾರ್ಹ ಪ್ರದರ್ಶನ ತೋರುವ ಮೂಲಕ ಚೈನಾಮನ್‌, ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೂ ಪ್ರವೇಶ ಮಾಡಿ ಯಶಸ್ವಿಯಾಗಿದ್ದಾರೆ. ಸ್ಪಿನ್‌ ದಂತಕತೆ ಶೇನ್‌ವಾರ್ನ್‌ ಅವರಿಂದ ಸ್ಪೂರ್ತಿ ಪಡೆದಿರುವ ಕುಲ್ದೀಪ್‌, ಭಾರತದ ಕೆಲವು ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನ ತೋರಿರುವುದನ್ನು ಮರೆಯುವಂತಿಲ್ಲ. ತಮ್ಮ ಕ್ರಿಕೆಟ್‌ ವೃತ್ತಿ ಜೀವನದ ಆರಂಭಿಕ ದಿನಗಳಲ್ಲಿ ಬೆಳವಣಿಗೆ ಸಾಧಿಸಲು ಕೋಲ್ಕತಾ ನೈಟ್‌ ರೈಡರ್ಸ್ ಮಾಜಿ ನಾಯಕ ಗೌತಮ್‌ ಗಂಭೀರ್‌ ತೋರಿದ್ದ ಮಾರ್ಗದರ್ಶನ ಹಾಗೂ ಸಹಾಯವನ್ನು ಇದೀಗ ಕುಲ್ದೀಪ್‌ ಯಾದವ್‌ ಸ್ಮರಿಸಿಕೊಂಡಿದ್ದಾರೆ. "2014ರ 19 ವಯೋಮಿತಿ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡದಲ್ಲಿ ನಾನು ಹಿರಿಯ ಆಟಗಾರನಾಗಿದ್ದೆ, ಹಾಗಾಗಿ ನಿರೀಕ್ಷೆಯಂತೆ ನನ್ನಿಂದ ಉತ್ತಮ ಪ್ರದರ್ಶನ ಮೂಡಿಬಂದಿತ್ತು. ಆ ವೇಳೆ ಕೆಕೆಆರ್‌ ತಂಡಕ್ಕೆ ಆಯ್ಕೆಯಾದ ಬಳಿಕ, ನನ್ನ ಜೀವನವೇ ಬದಲಾಯಿತು. ಸೇರಿದಂತೆ ಹಲವು ಹಿರಿಯ ಆಟಗಾರರ ಜತೆ ಕೋಲ್ಕತಾ ಫ್ರಾಂಚೈಸಿಯಲ್ಲಿ ಮೌಲ್ಯಯುತ ಸಮಯ ಕಳೆದಿದ್ದೇನೆ," ಎಂದು ಕೆಕೆಆರ್‌ ಪೋಸ್ಟ್‌ ಮಾಡಿರುವ ವಿಡಿಯೋದಲ್ಲಿ ಕುಲ್ದೀಪ್‌ ತಿಳಿಸಿದ್ದಾರೆ. "ಅವರು (ಗಂಂಭೀರ್) ಹೇಳಿದ್ದನ್ನೇ ಯೋಚನೆ ಮಾಡುತ್ತಿದ್ದೆ. ನಾಯಕನಾಗಿ ಅವರು ನನಗೆ ಅತ್ಯುತ್ತಮ ಮಾರ್ಗದರ್ಶನ ನೀಡಿದ್ದಾರೆ ಹಾಗೂ ಎಲ್ಲವನ್ನೂ ಕಲಿಸಿದ್ದಾರೆ. ಚಾಂಪಿಯನ್ಸ್ ಲೀಗ್‌ ಆಡುವ ಮುನ್ನ, ಹೇಗೆ ಬೌಲಿಂಗ್‌ ಮಾಡಬೇಕು ಹಾಗೂ ಕೌಶಲವನ್ನು ಅಭಿವೃದ್ದಿಪಡಿಸಿಕೊಂಡು ವಿಶ್ವಾಸದ ಆಟಗಾರನಾಗುವುದು ಹೇಗೆಂದು ಗಂಭೀರ್ ಸಲಹೆ ನೀಡಿದ್ದರು," ಎಂದರು. 2012ರಲ್ಲಿಯೇ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಯ್ಕೆಯಾಗಿದ್ದ ಕುಲ್ದೀಪ್‌ ಯಾದವ್‌, ಅಂತಿಮ 11ರಲ್ಲಿ ಅವಕಾಶ ಪಡೆಯಲು ಸಾಧ್ಯವಾಗಿರಲಿಲ್ಲ. ನಂತರ ಕೋಲ್ಕತಾ ನೈಟ್‌ ರೈಡರ್ಸ್‌ ತಂಡಕ್ಕೆ ಆಯ್ಕೆಯಾಗಿದ್ದ ಕುಲ್ದೀಪ್‌, 2016ರಲ್ಲಿ ಐಪಿಎಲ್‌ ಚೊಚ್ಚಲ ಪಂದ್ಯವಾಡಿದ್ದರು. ಆ ಆವೃತ್ತಿಯಲ್ಲಿ ಮೂರು ಪಂದ್ಯಗಳಿಂದ ಅವರು 6 ವಿಕೆಟ್‌ ಕಿತ್ತಿದ್ದರು. ಮುಂದಿನ ಆವೃತ್ತಿಯಲ್ಲಿ ನಾಯಕ ಗೌತಮ್‌ ಗಂಭೀರ್‌ ಅಡಿಯಲ್ಲಿ ತುಂಬಾ ಅವಕಾಶಗಳನ್ನು ಪಡೆದ ಲೆಗ್‌ ಸ್ಪಿನ್ನರ್,‌ 2017 ಮತ್ತು 2018ರ ಆವೃತ್ತಿಗಳಲ್ಲಿ ಒಟ್ಟು 29 ವಿಕೆಟ್‌ ಕಬಳಿಸಿದ್ದರು. "ಕೋಲ್ಕತಾ ನೈಟ್‌ ರೈಡರ್ಸ್‌ ಪರ ನನ್ನ ಮೊದಲ ಆವೃತ್ತಿಯಲ್ಲಿ, ಸುನೀಲ್‌ ನರೇನ್‌, ಪಿಯೂಷ್‌ ಚಾವ್ಲಾ ಸೇರಿದಂತೆ ಅತ್ಯುತ್ತಮ ಸ್ಪಿನ್ನರ್‌ಗಳು ತಂಡದಲ್ಲಿದ್ದರು. ಆಗ ನಾನು ಯುವ ಆಟಗಾರನಾಗಿದ್ದೆ. ಹಾಗಾಗಿ, ಆಟವನ್ನು ಇನ್ನಷ್ಟು ಕಲಿಯಲು ಇದು ಸರಿಯಾದ ಸಮಯ ಎಂದು ಭಾವಿಸಿದ್ದೆ. 19 ವಯೋಮಿತಿ ಕ್ರಿಕೆಟ್‌ ಮುಗಿಸಿಕೊಂಡು ಬಂದಿದ್ದ ನನ್ನನ್ನುಕೆಕೆಆರ್‌ ಬೆಂಬಲಿಸಿತು ಹಾಗೂ ನನ್ನ ಮೊದಲನೇ ಐಪಿಎಲ್‌ ಅತ್ಯಂತ ಮುಖ್ಯವಾಗಿತ್ತು," ಎಂದು ಕುಲ್ದೀಪ್‌ ಯಾದವ್‌ ಸ್ಮರಿಸಿಕೊಂಡರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3j1BjS0

ರಾಜಕೀಯ ಒಳಸುಳಿಗೆ ಸಭಾಪತಿ ಸ್ಥಾನ; ಬಿಜೆಪಿ ಜೆಡಿಎಸ್‌ ಲೆಕ್ಕಾಚಾರ ಉಲ್ಟಾ ಮಾಡಲು ಕಾಂಗ್ರೆಸ್‌ ತಂತ್ರ..!

ಬೆಂಗಳೂರು: ಉಪಸಭಾಪತಿ ಆಯ್ಕೆ ಬಳಿಕ ಸಭಾಪತಿ ಪದಚ್ಯುತಿಗೆ ಬಿಜೆಪಿ-ಜೆಡಿಎಸ್‌ ಎದುರು ನೋಡುತ್ತಿವೆ. ಆದರೆ, ಈ ವಿಚಾರದಲ್ಲಿ ಸಂಘರ್ಷ ಮುಂದುವರಿಸಿ ರಾಜಕೀಯ ದಾಳಿ ನಡೆಸುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ ಇದೆ. ಸಭಾಪತಿ ಸ್ಥಾನದ ಸಂಬಂಧ ಕಾಂಗ್ರೆಸ್‌ಗೆ ನೀಡಿದ ಬೆಂಬಲ ಹಿಂಪಡೆದಿರುವುದಾಗಿ ಕಳೆದ ಅಧಿವೇಶನದ ವೇಳೆ ಪರಿಷತ್‌ ಕಾರ್ಯದರ್ಶಿಗೆ ಜೆಡಿಎಸ್‌ ಪತ್ರ ನೀಡಿತ್ತು. ಇದರ ಮಧ್ಯೆ ಉಪಸಭಾಪತಿಯಾಗಿದ್ದ ಜೆಡಿಎಸ್‌ನ ಧರ್ಮೇಗೌಡ ನಿಧನ ಹೊಂದಿದ್ದರು. ಈ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್‌ ಬಲದೊಂದಿಗೆ ಬಿಜೆಪಿಯ ಎಂ.ಕೆ.ಪ್ರಾಣೇಶ್‌ ಉಪಸಭಾಪತಿ ಹುದ್ದೆ ವಹಿಸಿಕೊಂಡಿದ್ದಾರೆ. ಹಾಗೂ ಜೆಡಿಎಸ್‌ ನಡುವಿನ ಒಪ್ಪಂದದಂತೆ ಸಭಾಪತಿ ಹುದ್ದೆಯನ್ನು ಜೆಡಿಎಸ್‌ಗೆ ಬಿಟ್ಟು ಕೊಡಬೇಕಿದೆ. ಪರಸ್ಪರ ಸಹಕಾರದಲ್ಲಿ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ಅವರಿಗೆ ಸಭಾಪತಿ ಸ್ಥಾನ ನೀಡಲು ಸಹಮತಕ್ಕೆ ಬರಲಾಗಿದೆ. ಆದರೆ, ಹಾಲಿ ಸಭಾಪತಿ ಕೆ.ಪ್ರತಾಪ್‌ಚಂದ್ರ ಶೆಟ್ಟಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕಾಗುತ್ತದೆ. ಇಲ್ಲದಿದ್ದರೆ ಅವಿಶ್ವಾಸ ನಿರ್ಣಯ ಮೂಲಕ ಪದಚ್ಯುತಗೊಳಿಸಬೇಕಾಗುತ್ತದೆ. ಅಲ್ಲಿಯವರೆಗೂ ಏನೇ ಕಸರತ್ತು ಮಾಡಿದರೂ ಹೊಸ ಸಭಾಪತಿ ಆಯ್ಕೆ ಸಾಧ್ಯವಾಗುವುದಿಲ್ಲ. ಸಭಾಪತಿಗೆ ಒತ್ತಡ: ನೂತನ ಉಪ ಸಭಾಪತಿ ಆಯ್ಕೆ ಬಳಿಕ ಸಭಾಪತಿ ಕೆ.ಪ್ರತಾಪ್‌ಚಂದ್ರ ಶೆಟ್ಟಿ ರಾಜೀನಾಮೆ ನೀಡಲು ಬಯಸಿದ್ದರು. ಬಿಜೆಪಿ-ಜೆಡಿಎಸ್‌ ನಡುವೆ ಮೈತ್ರಿ ಆಗಿರುವುದರಿಂದ ಕಾಂಗ್ರೆಸ್‌ಗೆ ಸಭಾಪತಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಅರಿವಿದ್ದರೂ ರಾಜಕೀಯ ತಂತ್ರಗಾರಿಕೆ ಉದ್ದೇಶದಿಂದ ತಕ್ಷಣಕ್ಕೆ ರಾಜೀನಾಮೆ ನೀಡಬಾರದು ಎಂದು ಪಕ್ಷದ ನಾಯಕರು ಹಾಲಿ ಸಭಾಪತಿ ಅವರಿಗೆ ನಿರ್ಬಂಧಿಸಿದ್ದಾರೆ. ಹೀಗಾಗಿ ಸಭಾಪತಿಯವರು ತಮ್ಮ ವಿರುದ್ಧದ ಅವಿಶ್ವಾಸ ನಿರ್ಣಯದ ನೋಟಿಸ್‌ ಅನ್ನು ಇತ್ಯರ್ಥಪಡಿಸುವವರೆಗೂ ಸ್ಥಾನದಿಂದ ಕದಲಬಾರದು ಎಂಬ ಯೋಚನೆಯಲ್ಲಿದ್ದಾರೆ. ಈ ಕುರಿತ ಸಾಧಕ, ಬಾಧಕದ ಬಗ್ಗೆಯೂ ಪರಿಶೀಲನೆ ನಡೆಸುತ್ತಿದ್ದಾರೆ. ಜತೆಗೆ ಅನಗತ್ಯ ಸಂಘರ್ಷಕ್ಕಿಂತ ರಾಜೀನಾಮೆ ನೀಡುವುದು ಉತ್ತಮವೆಂದೂ ಕಾಂಗ್ರೆಸ್‌ ನಾಯಕರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.


from India & World News in Kannada | VK Polls https://ift.tt/3r7BZIj

ಕಡಲೆ ಬೆಂಬಲ ಬೆಲೆಗೆ ಆಗ್ರಹ; ದರ ಕುಸಿತಕ್ಕೆ ರೈತ ಕಂಗಾಲು!

ಮಂಜುನಾಥ ಕೊಣಸೂರು ವಿಜಯಪುರ ಬೆಂಗಳೂರು: ರಾಜ್ಯದ ಬಹುತೇಕ ಭಾಗದ ಮಳೆಯಾಶ್ರಿತ ಪ್ರದೇಶದ ಹಿಂಗಾರು ಹಂಗಾಮಿನ ವಾಣಿಜ್ಯ ಬೆಳೆಯಾಗಿದ್ದು, ಸದ್ಯ ರಾಶಿ ಕಾರ್ಯ ನಡೆದು ಮಾರುಕಟ್ಟೆಗೆ ಬರಲಾರಂಭಿಸಿದೆ. ಮುಕ್ತ ಮಾರುಕಟ್ಟೆಯಲ್ಲಿ ಕುಸಿತ ಕಂಡಿದೆ. ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿ ಆರಂಭಿಸಿದರೆ ದರ ಕುಣಿತ ತಪ್ಪಿಸಿ ಮಳೆಯಿಂದ ಮುಂಗಾರು ಬೆಳೆ ನಷ್ಟವನ್ನಾದರೂ ಸರಿದೂಗಿಸಿಕೊಳ್ಳಬಹುದು. ಸರಕಾರ ತಕ್ಷಣ ಕಾರ್ಯಪ್ರವೃತ್ತರಾದರೆ ನಾವು ಉಸಿರಾಡುತ್ತೇವೆ ಎಂದು ಕಂಗಾಲಾದ ರು ಬೇಡಿಕೆಯಿಟ್ಟಿದ್ದಾರೆ. ಪ್ರಸಕ್ತ ಮುಂಗಾರಿನಲ್ಲಿ ರಾಜ್ಯದ ಬಹುತೇಕ ಪ್ರದೇಶದಲ್ಲಿ ಅತಿವೃಷ್ಟಿಯಿಂದಾಗಿ ಬೆಳೆ ಸರಿಯಾಗಿ ಬರಲಿಲ್ಲ. ತೊಗರಿ ಕಣಜದಲ್ಲೂ ಆ ಬೆಳೆ ನೀರು ಕುಡಿದು ಸಾಕಷ್ಟು ರೈತರಿಗೆ ನಷ್ಟ ಉಂಟಾಗಿದೆ. ಹಾನಿಯಾದ ತೊಗರಿಯನ್ನು ಕಿತ್ತೊಗೆದ ರೈತರು ಹಿಂಗಾರಿ ಹಂಗಾಮಿನ ಕಡಲೆ ಬಿತ್ತಿದ್ದರು. ಕಡಲೆ ಉತ್ತಮ ಬೆಳೆ ಬಂದಿದ್ದು, ಈಗ ಕೊಯ್ಲು ನಡೆಯುತ್ತಿದೆ. ಕೆಲ ದಿನಗಳ ಹಿಂದೆ ಕ್ವಿಂಟಾಲ್‌ಗೆ 4800-5000 ರೂ. ಇದ್ದ ಕಡಲೆ ದರ 4000-4350ರೂ.ಗೆ ಕುಸಿದಿದೆ. ಎಕರೆಗೆ 8-10 ಸಾವಿರ ರೂ. ಖರ್ಚಾಗಿದ್ದು, ದರ ಕುಸಿತದಿಂದ ಕಂಗಾಲಾಗಿದ್ದಾರೆ. ಬೆಂಬಲ ಬೆಲೆಯಲ್ಲಿ ಖರೀದಿಸಿಸರಕಾರ ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ರಾಜ್ಯಾದ್ಯಂತ 362 ಖರೀದಿ ಕೇಂದ್ರಗಳನ್ನು ತೆರೆದಿತ್ತು. 1,14,742 ರೈತರು ನೋಂದಣಿ ಮಾಡಿಸಿದ್ದರು. 4875 ರೂ. ಬೆಲೆಯಲ್ಲಿ ಪ್ರತಿ ರೈತರಿಂದ ಕನಿಷ್ಠ 3 ಕ್ವಿಂಟಾಲ್‌ ಗರಿಷ್ಠ 10 ಕ್ವಿಂಟಾಲ್‌ನಂತೆ 1,23,211 ರೈತರಿಂದ 10,17,839 ಕ್ವಿಂಟಾಲ್‌ ಕಡಲೆ ಖರೀದಿಸಿತ್ತು. ಗದಗ ಜಿಲ್ಲೆಯಲ್ಲಿ 2.53 ಲಕ್ಷ ಕ್ವಿಂಟಾಲ್‌, ಧಾರವಾಡ ಜಿಲ್ಲೆಯಲ್ಲಿ 2.05 ಲಕ್ಷ ಕ್ವಿಂಟಾಲ್‌ ಅತಿ ಹೆಚ್ಚು ಕಡಲೆ ಖರೀದಿಸಲಾಗಿತ್ತು. ಆದರೆ ಪ್ರಸಕ್ತ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆಯಡಿ ಕಡಲೆ ಖರೀದಿಸುವ ನಿರ್ಧಾರವನ್ನು ಸರಕಾರ ಕೈಗೊಂಡಿಲ್ಲ. ವಿಜಯಪುರ ಜಿಲ್ಲೆಯೊಂದರಲ್ಲೇ 1.50 ಲಕ್ಷ ಹೆಕ್ಟೇರ್‌ ಕಡಲೆ ಬೆಳೆಯಿದ್ದು, 3 ಲಕ್ಷ ಮೆಟ್ರಿಕ್‌ ಟನ್‌ ಉತ್ಪಾದನೆ ನಿರೀಕ್ಷೆ ಇದೆ. ಸದ್ಯ ಬೆಲೆ ಕುಸಿತಕ್ಕೆ ರೈತರು ತತ್ತರಿಸಿದ್ದಾರೆ. ಬೆಂಬಲ ಬೆಲೆಯಡಿ ಖರೀದಿ ಕುರಿತು ಸರಕಾರದಿಂದ ಯಾವುದೇ ನಿರ್ದೇಶನ ಬಂದಿಲ್ಲ ಎನ್ನುತ್ತಾರೆ ಎಪಿಎಂಸಿ ಅಧಿಕಾರಿಗಳು. ಸರಕಾರ ಕನಿಷ್ಠ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ ಆರಂಭಿಸಿದ್ದರಿಂದ ಮುಕ್ತ ಮಾರುಕಟ್ಟೆಯಲ್ಲೂ 5800-5900 ರೂ. ಬೆಲೆ ಸಿಗುತ್ತಿದೆ. ಇದೇ ರೀತಿ ಸರಕಾರ ಕಡಲೆಗೂ ಕನಿಷ್ಠ ಪ್ರಕಟಿಸಿದರೆ ಖಾಸಗಿ ಮಾರುಕಟ್ಟೆಯಲ್ಲೂ ಬೆಲೆ ಏರಬಹುದು. ಸರಕಾರ ತಕ್ಷಣ ಕಾರ್ಯಪ್ರವೃತ್ತವಾಗಬೇಕೆಂದು ಆಗ್ರಹಿಸಿದ್ದಾರೆ. ಮುಕ್ತ ಮಾರುಕಟ್ಟೆಯಲ್ಲಿ 4800 ರೂ. ಇದ್ದ ಕಡಲೆಗೆ ದರ ಈಗ 4000 ರೂ.ಗೆ ಕುಸಿದಿದೆ. ಎಕರೆಗೆ 10 ಸಾವಿರ ರೂ. ಖರ್ಚಾಗಿದ್ದರಿಂದ ಕ್ವಿಂಟಾಲ್‌ಗೆ 5000 ರೂ. ಬೆಲೆ ಸಿಕ್ಕಿದರೆ ಲಾಭದಾಯಕ. ಹೀಗಾಗಿ ಸರಕಾರ ತಕ್ಷಣ ಕನಿಷ್ಠ ಬೆಂಬಲ ಬೆಲೆಯಲ್ಲಿ ಕಡಲೆ ಖರೀದಿಗೆ ಮುಂದಾಗಬೇಕು. ಮೆಹಬೂಬ್‌ ದರ್ಗಾ, ಖತಿಜಾಪುರದ ರೈತ


from India & World News in Kannada | VK Polls https://ift.tt/2YuGWyr

ಮ್ಯಾನ್ಮಾರ್‌ನಲ್ಲಿ ಸೇನಾ ದಂಗೆ?: ಆಡಳಿತ ಪಕ್ಷದ ನಾಯಕಿ ಆಂಗ್ ಸಾನ್ ಸೂಕಿ ಸೇರಿ ಹಲವು ನಾಯಕರ ಬಂಧನ

ನಾಯ್ಪಿಟಾವ್: ಅತೀ ಹೆಚ್ಚು ಬುದ್ದರಿರುವ ದೇಶವಾಗಿರುವ ಮ್ಯಾನ್ಮಾರ್‌ನಲ್ಲಿ ಇದೀಗ ಮತ್ತೆ ಸೇನಾ ದಂಗೆಯ ಆತಂಕ ಎದುರಾಗಿದೆ. ಅಲ್ಲಿನ ಮಿಲಿಟರಿ ಮತ್ತೆ ಆಡಳಿತಾರೂಢ ಸರಕಾರವನ್ನು ಉರುಳಿಸಿ ಅಧಿಕಾರವನ್ನು ಕಸಿಯಲಿದ್ಯಾ ಎನ್ನುವ ಸಂಶಯ ಮೂಡಿಸಿದೆ. ಅದಕ್ಕೆ ಕಾರಣ ಮ್ಯಾನ್ಮಾರ್‌ ನಾಯಕರನ್ನು ಮಿಲಿಟರಿ ಬಂಧಿಸಿರುವುದು. ಹೌದು, ಆಡಳಿತ ಪಕ್ಷದ ಪ್ರಮುಖ , ಪ್ರಧಾನಿ ವಿನ್ ಮೈಂಟ್ ಸೇರಿ ಹಲವರನ್ನು ಮಿಲಿಟರಿ ಬಂಧಿಸಿದೆ ಎಂದು ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ ವಕ್ತಾರ ಮೈಯೊ ನ್ಯುಂಟ್ ಆರೋಪಿಸಿದ್ದಾರೆ. ಮಿಲಿಟರಿ ಪ್ರಮುಖ ಆಡಳಿತ ಪಕ್ಷದ ನಾಯಕರನ್ನು ಬಂಧಿಸಿದ ಬೆನ್ನಲ್ಲೇ ಮಾಧ್ಯಮಗಳ ಮುಂದೆ ಬಂದು ಈ ರೀತಿಯ ಆರೋಪ ಮಾಡಿದ್ದಾರೆ. ಅಲ್ಲದೆ ಮಿಲಿಟರಿ ಸರಕಾರವನ್ನು ಉರುಳಿಸಿ ಸರ್ವಾಧಿಕಾರ ನಡೆಸಲು ಮುಂದಾಗಿದೆ ಎಂದು ಟೀಕಿಸಿದ್ದಾರೆ. "ಆಂಗ್ ಸಾನ್ ಸೂಕಿ ಮತ್ತು ಪ್ರಧಾನಿ ವಿನ್ ಮೈಂಟ್ ಅವರನ್ನು ಸೋಮವಾರ ಮುಂಜಾನೆ ಮಿಲಿಟರಿ ಬಂಧಿಸಿದೆ. ಆದರೆ ಜನರು ಯಾರು ಕೂಡ ಕೋಪದಿಂದ ವರ್ತಿಸಬೇಡಿ, ಕಾನೂನಿನ ಪ್ರಕಾರವೇ ನಾವು ಮುಂದುವರಿಯೋಣ ಎಂದು ನಾನು ಜನರಿಗೆ ಹೇಳಲು ಬಯಸುತ್ತಿರುವುದಾಗಿ" ತಿಳಿಸಿದ್ದಾರೆ. ಮಿಲಿಟರಿ ನಮ್ಮ ಸರಕಾರವನ್ನು ಸ್ವಾಧಿನಪಡಿಸಲು ಮುಂದಾಗಿದೆ ಎಂದು ಅವರು ಮಾಧ್ಯಮಗಳ ಮುಂದೆ ತಿಳಿಸಿದರು. ಇನ್ನು ಮಿಲಿಟರಿ ದಂಗೆಯ ಆರೋಪವನ್ನು ಅಲ್ಲಿನ ಸೇನೆ ತಳ್ಳಿ ಹಾಕಿದೆ. ಆದರೆ ಆಡಳಿತ ಪಕ್ಷವು ನವೆಂಬರ್ ಚುನಾವಣೆಯಲ್ಲಿ ಭರ್ಜರಿ ಜಯವನ್ನು ಘೋಷಿಸಿದಾಗಿನಿಂದ ದೇಶದಲ್ಲಿ ಉದ್ವಿಗ್ನತೆ ಹೆಚ್ಚುತ್ತಿದೆ. ಚುನಾವಣೆಯಲ್ಲಿ ವಂಚನೆ ನಡೆದಿದೆ ಎಂದು ಅಲ್ಲಿನ ಮಿಲಟರಿ ಆರೋಪಿಸಿದೆ. ಇದೇ ಕಾರಣಕ್ಕೆ ಇದೀಗ ಇಲ್ಲಿನ ಸೇನೆ ಸರಕಾರವನ್ನು ಉರುಳಿಸಲು ಮುಂದಾಗಿದೆ ಎನ್ನಲಾಗಿದೆ. ಇನ್ನು ಮ್ಯಾನ್ಮಾರ್‌ನಲ್ಲಿ ಹೊಸದಾಗಿ ಚುನಾಯಿತವಾದ ಸಂಸತ್ತು ಫೆಬ್ರವರಿ 1 ರಂದು ನಾಯ್ಪಿಟಾವ್‌ನಲ್ಲಿ ತನ್ನ ಮೊದಲ ಅಧಿವೇಶನಕ್ಕೆ ಸಭೆ ಸೇರುವ ನಿರೀಕ್ಷೆಯಿತ್ತು. ಈ ನಡುವೆ ಈ ಘಟನೆ ನಡೆದಿದೆ. ಅಲ್ಲದೆ ಕಳೆದ ಕೆಲವು ದಿನಗಳಿಂದ ಮ್ಯಾನ್ಮಾರ್‌ ರಾಜಧಾನಿ ಸೇರಿ ಪ್ರಮುಖ ನಗರಗಳಲ್ಲಿ ಸೇನೆಯ ಓಡಾಟ ಇತ್ತು, ಇಂಟರ್‌ನೆಟ್‌ಗಳನ್ನು ಸ್ಥಗಿತಗೊಳಿಸಲಾಗಿತ್ತು ಎಂದು ತಿಳಿದುಬಂದಿದೆ. ಕಳೆದ ಹಲವು ವರ್ಷಗಳಿಂದ ಮ್ಯಾನ್ಮಾರ್‌ನಲ್ಲಿ ಸರ್ವಾಧಿಕಾರದ ಆಡಳಿತವಿದೆ. ಆದರೆ 2010ರಿಂದ ನಾಗರಿಕರಿಗೆ ಆಡಳಿತವನ್ನು ಸೇನೆ ಹಸ್ತಾಂತರ ಮಾಡಿತ್ತು. ಬಳಿಕ ಚುನಾವಣೆಯಲ್ಲಿ ಗೆದ್ದು ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ ನಾಯಕಿ ಆಂಗ್ ಸಾನ್ ಸೂಕಿ ಅಧಿಕಾರ ಚುಕ್ಕಾಣಿ ಹಿಡಿದಿದ್ದರು. ಇದೀಗ ಮತ್ತೆ ಅಲ್ಲಿನ ಆಡಳಿತ ಮಿಲಿಟರಿ ಕೈ ಸೇರುವ ಸಾಧ್ಯತೆ ದಟ್ಟವಾಗಿದೆ.


from India & World News in Kannada | VK Polls https://ift.tt/3jc9DtO

ಕೇಂದ್ರ ಬಜೆಟ್‌ಗೆ ಕಲಬುರಗಿ ಜಿಲ್ಲೆಯಲ್ಲಿ ನೂರೆಂಟು ನಿರೀಕ್ಷೆ!

ವೆಂಕಟೇಶ ಏಗನೂರು ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ವಿಭಾಗೀಯ ಕೇಂದ್ರವಾಗಿರುವ ಕಲಬುರಗಿ ಜಿಲ್ಲೆ ನಿರೀಕ್ಷೆಯಂತೆಯೇ ಹಲವು ಯೋಜನೆಗಳಿಗೆ ಕೇಂದ್ರ ಸರಕಾರದಿಂದ ನಿರೀಕ್ಷೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಈ ಬಜೆಟ್‌ ಲೆಕ್ಕದ ಮೇಲೆ ಎಲ್ಲರ ಗಮನ ಹರಿದಿದ್ದು, ಜಿಲ್ಲೆಗೆ ಏನು ಸಿಗಲಿದೆ ಎಂಬ ಲೆಕ್ಕಾಚಾರದಲ್ಲಿ ಜಿಲ್ಲೆಯ ಜನರು ತೊಡಗಿದ್ದಾರೆ. ನಿಮ್ಜ್ ಗೆ ದೊರೆಯುವುದೇ ಚಾಲನೆಅಂದಿನ ಯುಪಿಎ ಸರಕಾರ 2014ರಲ್ಲಿ ಜಿಲ್ಲೆಗೆ ರಾಷ್ಟ್ರೀಯ ಹೂಡಿಕೆ ಮತ್ತು ಉತ್ಪಾದನಾ ವಲಯವನ್ನು ಘೋಷಿಸಿತ್ತು. ಆದರೆ, ಈ ಯೋಜನೆ ಕೇವಲ ಘೋಷಣೆಗೆ ಮಾತ್ರ ಸೀಮಿತವಾಗಿದ್ದು, ಈ ಯೋಜನೆಗೆ ಕೇಂದ್ರ ಅನುದಾನ ಘೋಷಿಸಿ ಚಾಲನೆ ನೀಡಬೇಕಾದ ಅನಿವಾರ್ಯತೆಯಿದ್ದು, ಈ ಬಾರಿ ಈ ಯೋಜನೆಯತ್ತ ಸರಕಾರ ಗಮನ ಹರಿಸಬೇಕಿದೆ ಎಂಬುದು ಸಾರ್ವಜನಿಕರ ಒತ್ತಾಯವೂ ಆಗಿದೆ. ರೈಲ್ವೆ ಡಿವಿಷನ್‌ಗೆ ಅನುದಾನ ವಿಭಾಗೀಯ ಕೇಂದ್ರ ಸ್ಥಾನವಾಗಿರುವ ಕಲಬುರಗಿ ಜಿಲ್ಲೆಗೆ ಅನೇಕ ವರ್ಷಗಳಿಂದ ರೈಲ್ವೆ ಡಿವಿಷನ್‌ ಬೇಡಿಕೆ ಈಡೇರಿಸಬೇಕೆಂಬ ಹಕ್ಕೊತ್ತಾಯ ಈ ಭಾಗದ ಜನರದ್ದಾಗಿದೆ. ಜಸ್ಟಿಸ್‌ ಸರಿನ್‌ ವರದಿ ಪ್ರಕಾರ ಒಟ್ಟು 9 ರೈಲ್ವೆ ಡಿವಿಷನ್‌ಗಳಾಗಬೇಕು ಎಂದು ಶಿಫಾರಸು ಮಾಡಿದ್ದರು. ಆದರೆ, ಎಲ್ಲ ಎಂಟು ಡಿವಿಷನ್‌ಗಳ ಬೇಡಿಕೆ ಈಡೇರಿದ್ದರೂ ಕಲಬುರಗಿ ರೈಲ್ವೆ ಡಿವಿಷನ್‌ ಬೇಡಿಕೆ ಇನ್ನು ಕನಸಾಗಿಯೇ ಉಳಿದಿದೆ. ಜಿಲ್ಲೆಗೆ ಘೋಷಣೆಯಾಗಲಿ ಏಮ್ಸ್‌ ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರತಿ ರಾಜ್ಯಕ್ಕೆ ಒಂದು ಏಮ್ಸ್‌ ನೀಡುತ್ತೇವೆ ಎಂದು ಈ ಹಿಂದೆ ಘೋಷಿಸಿದ್ದರು. ಅದೇ ರೀತಿ ಸಿಎಂ ಯಡಿಯೂರಪ್ಪ ಸಹ ಬಳ್ಳಾರಿಯಲ್ಲಿ ಕಲಬುರಗಿ ಏಮ್ಸ್‌ಗೆ ಸೂಕ್ತ ಎಂದು ಘೋಷಿಸಿದ್ದರು. ಕಲಬುರಗಿಯಲ್ಲಿ ಇರುವ ಇಎಸ್‌ಐಸಿ ಆಸ್ಪತ್ರೆ 1400 ಕೋಟಿ ರೂ.ಯಲ್ಲಿ ನಿರ್ಮಾಣಗೊಂಡಿದ್ದು, ಇದರಲ್ಲಿ ಕೇವಲ ಶೇ.12ರಷ್ಟು ಮಾತ್ರ ಬಳಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಏಮ್ಸ್‌ ಘೋಷಣೆಯಾದರೆ ಜಿಲ್ಲೆ ಮೆಡಿಕಲ್‌ ಹಬ್‌ ಆಗಿ ಪರಿವರ್ತನೆಯಾಗಿ, ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳು ದೊರೆಯಲಿವೆ. ಇಂಡಸ್ಟ್ರಿಯಲ್‌ ಕಾರಿಡಾರ್‌ಗೆ ವಿಶೇಷ ಅನುದಾನ ತೆಲಂಗಾಣ ಮತ್ತು ವಿಧರ್ಬಾಗಳಲ್ಲಿ 371ನೇ ಕಲಂನಂತೆ ವಿಶೇಷ ಅನುದಾನ ನೀಡಿ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಅದೇ ರೀತಿ ಕಲ್ಯಾಣ ಕರ್ನಾಟಕ ಭಾಗಕ್ಕೂ 371ಜೆ ಯಡಿ ವಿಶೇಷ ಅನುದಾನ ಘೋಷಣೆ ಮಾಡಬೇಕು. ಈ ಭಾಗದಲ್ಲಿ ಕೈಗಾರಿಕೆಗಳನ್ನು ಅಭಿವೃದ್ಧಿ ಪಡಿಸಿ ಇಂಡಸ್ಟ್ರಿಯಲ್‌ ಕಾರಿಡಾರ್‌ಗೆ ಒತ್ತು ನೀಡಬೇಕೆಂಬುದು ಜನರ ಬೇಡಿಕೆಯಾಗಿದೆ. ಕೇಂದ್ರದ ಬಜೆಟ್‌ ಮೇಲೆ ಜಿಲ್ಲೆಗೆ ಅನೇಕ ನಿರೀಕ್ಷೆಗಳಿದ್ದು, ಪ್ರಮುಖವಾದ ನಿಮ್ಜ್, ಏಮ್ಸ್‌, ಇಂಡಸ್ಟ್ರಿಯಲ್‌ ಕಾರಿಡಾರ್‌, ರೈಲ್ವೆ ಡಿವಿಷನ್‌ ಮತ್ತು ಐಸಿಡಿ ಆರಂಭಕ್ಕೆ ಅನುದಾನ ಬಿಡುಗಡೆ ಮಾಡಿದರೆ, ಈ ಭಾಗ ಮತ್ತಷ್ಟು ಅಭಿವೃದ್ಧಿ ಹೊಂದಲಿದೆ. ಅಮರನಾಥ ಪಾಟೀಲ್‌ ಅಧ್ಯಕ್ಷ ಎಚ್‌ಕೆಸಿಸಿಐ ಕಲಬುರಗಿ ಕಲಬುರಗಿಗೆ ಪ್ರಮುಖವಾಗಿ ಏಮ್ಸ್‌, ನಿಮ್ಜ್, ರೈಲ್ವೆ ಡಿವಿಷನ್‌ ಜತೆಗೆ ಕಲಬುರಗಿಗೆ ಬೈಪಾಸ್‌ (ಎರಡನೇ ರಿಂಗ್‌ ರಸ್ತೆ)ಗೆ ಅನುದಾನ, ಹುಮನಬಾದ್‌-ಕಲಬುರಗಿ-ಬಳ್ಳಾರಿ ಚತುಷ್ಫಥವಾಗಲಿ. ಸುನೀಲ್ ಕುಲಕರ್ಣಿ ಟೆಕ್ಕಿ


from India & World News in Kannada | VK Polls https://ift.tt/3tg3f9i

30 ವರ್ಷಗಳ ನಂತರ ಸಾಮರಸ್ಯದಿಂದ ಸಂಕ್ರಾಂತಿ ಆಚರಿಸಿದ ಕಲ್ಲಹಳ್ಳಿ ಗ್ರಾಮಸ್ಥರು..!

: ಹೊಸಕೋಟೆ ತಾಲೂಕು ಕಸಬಾ ಹೋಬಳಿಯ ಕಲ್ಲಹಳ್ಳಿ ಸುಮಾರು 30 ವರ್ಷಗಳ ಕಾಲ ಜಿದ್ದಾಜಿದ್ದಿ ರಾಜಕೀಯಕ್ಕೆ ಬಲಿಯಾದ ಪರಿಣಾಮ ಗ್ರಾಮಸ್ಥರ ನಡುವೆ ಒಡಕು, ದ್ವೇಷ, ರಾಜಕೀಯ ಮೇಲಾಟವೇ ನಡೆಯಿತು. ಇದರಿಂದ ಗ್ರಾಮದ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಹಬ್ಬಗಳ ಆಚರಣೆ ಮೇಲೆ ಪರಿಣಾಮ ಬೀರಿ, ಗ್ರಾಮಸ್ಥರು ಪ್ರತ್ಯೇಕವಾಗಿ ಹಬ್ಬಗಳನ್ನು ಆಚರಿಸುತ್ತಾ ಬಂದಿದ್ದರು. ಆದರೆ ಈ ಬಾರಿ ಹಳೆಯ ರಾಜಕೀಯ ವೈಷಮ್ಯ ಮರೆತು ಗ್ರಾಮಸ್ಥರೆಲ್ಲಾ ಒಗ್ಗೂಡಿ ಸಂಕ್ರಾಂತಿ ಹಬ್ಬ ಆಚರಿಸಿ, ಮಾದರಿ ಗ್ರಾಮ ಎಂಬುದನ್ನು ಹಲವಾರು ವರ್ಷಗಳ ನಂತರ ಸಾಬೀತು ಮಾಡಿದ್ದಾರೆ. ಇದೇ ರೀತಿ ಮುಂದಿನ ದಿನಗಳಲ್ಲಿ ಒಗ್ಗಟ್ಟಾಗಿ ಗ್ರಾಮದಲ್ಲಿ ಸಾಮರಸ್ಯ ಮೂಡುವುದು ಖಂಡಿತ ಎಂದು ಕೆಲವು ಮುಖಂಡರು ತಿಳಿಸಿದ್ದಾರೆ. ಗ್ರಾಮ ದೇವತೆ ಮಾರಮ್ಮ, ಸಪ್ಪಲಮ್ಮ, ದೂಡ್ಡದೇವಿಗೆ ಮಹಿಳೆಯರು ತಂಬಿಟ್ಟಿನ ಆರತಿ ಹೊತ್ತು ಪೂಜೆ ಸಲ್ಲಿಸಿದ್ದು ವಿಶೇಷವಾಗಿತ್ತು. ಗ್ರಾಪಂ ಸದಸ್ಯರಾದ ಕೆ.ಬಿ. ಮುನೇಗೌಡ, ಬಿಂದು, ಮಾಜಿ ಸದಸ್ಯರಾದ ಮುನೇಗೌಡ, ಬ್ಯಾಟೇಗೌಡ, ರಾಮಾಂಜಿನಪ್ಪ, ಕೆ.ಟಿ ರಮೇಶ್‌, ಮೀನಾ ಶ್ರೀನಿವಾಸ್‌ ಮತ್ತಿತರರು ಇದ್ದರು.


from India & World News in Kannada | VK Polls https://ift.tt/3aje4Pi

ಕಾಶ್ಮೀರದಲ್ಲಿ ಉಗ್ರ ಕೃತ್ಯ ನಡೆಸಲು ನವಾಜ್‌ ಷರೀಫ್‌ಗೆ ನಿರಂತರವಾಗಿ ಆರ್ಥಿಕ ನೆರವು ನೀಡಿದ್ದ ಲಾಡೆನ್!

ಇಸ್ಲಾಮಾಬಾದ್‌: ಪಾಕಿಸ್ತಾನದ ಅವರಿಗೆ ಅಲ್‌ಕೈದಾ ಉಗ್ರ ಸಂಘಟನೆ ಮುಖ್ಯಸ್ಥನಾಗಿದ್ದ ಒಸಾಮಾ ಬಿನ್‌ ಲಾಡೆನ್‌ ನಿರಂತರವಾಗಿ ಆರ್ಥಿಕ ಸಹಾಯ ಮಾಡಿದ್ದ ಎಂದು ಅಮೆರಿಕದಲ್ಲಿನ ಪಾಕಿಸ್ತಾನದ ಮಾಜಿ ರಾಯಭಾರಿ ಅಬಿದಾ ಹುಸೇನ್‌ ಆರೋಪಿಸಿದ್ದಾರೆ. ''ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಅವರನ್ನು ಒಸಾಮಾ ಬಿನ್‌ ಲಾಡೆನ್‌ ಸದಾ ಬೆಂಬಲಿಸುತ್ತಿದ್ದ. ಅವರಿಗೆ ವೈಯಕ್ತಿಕವಾಗಿ ಹಾಗೂ ಕಾಶ್ಮೀರದಲ್ಲಿ ಜಿಹಾದ್‌ ಕೃತ್ಯಗಳನ್ನು ನಡೆಸುವುದಕ್ಕೆ ಹಣ ಕೊಡುತ್ತಿದ್ದ,'' ಎಂಬ ಅಬಿದಾ ಹೇಳಿಕೆಯನ್ನು 'ಎಕ್ಸ್‌ಪ್ರೆಸ್‌ ಟ್ರಿಬ್ಯೂನ್‌' ಪ್ರಕಟಿಸಿದೆ. 1990-93, 97-98 ಹಾಗೂ 2013-17ರವರೆಗೆ ಪಾಕಿಸ್ತಾನದ ಪ್ರಧಾನಿಯಾಗಿದ್ದ ಮುಸ್ಲಿಮ್‌ ಲೀಗ್‌ ಪಕ್ಷದ ನವಾಜ್‌ ಷರೀಫ್‌ ಅವರನ್ನು ಅಲ್ಲಿನ ಸುಪ್ರೀಂ ಕೋರ್ಟ್‌ ಭ್ರಷ್ಟಾಚಾರದ ಆರೋಪದ ಮೇಲೆ ಪದಚ್ಯುತಗೊಳಿಸಿದೆ. ಅವರು ಅಧಿಕಾರದಲ್ಲಿದ್ದ ಅವಧಿಯಲ್ಲಿ ಬಿನ್‌ ಲಾಡೆನ್‌ ನೇತೃತ್ವದ ಅಲ್‌ಕೈದಾ ಹೆಚ್ಚು ಚಟುವಟಿಕೆಯಿಂದ ಇತ್ತು. ಅಲ್ಲದೆ, ಜಗತ್ತಿನ ನಾನಾ ಮೂಲೆಗಳಲ್ಲಿಈ ಸಂಘಟನೆ ವಿಧ್ವಂಸಕ ಕೃತ್ಯಗಳನ್ನು ಎಸಗಿದೆ. ಲಾಡೆನ್‌ ಕೃತ್ಯಗಳ ಹಿನ್ನೆಲೆಯಲ್ಲಿ ಪಾಕಿಸ್ತಾನ ಸರಕಾರವೂ ಇದೆ ಎಂಬ ಆರೋಪ ಆಗಲೇ ಕೇಳಿಬಂದಿತ್ತು. ಆರೋಪಗಳಿಗೆ ಸಮಾಜಾಯಿಷಿ ಕೊಡದೆ ಸುಮ್ಮನಾಗುತ್ತಿದ್ದ ಸರಕಾರದ ನೀತಿಯು ಷರೀಫ್‌ ಸರಕಾರದಲ್ಲಿ ಸಚಿವರೂ ಆಗಿದ್ದ ಅಬಿದಾ ಹೇಳಿಕೆಯಿಂದ ಬಯಲಾಗಿದೆ. ಅಬಿದಾ ಹೇಳಿಕೆ ನೀಡುವ ಮುನ್ನಾ ದಿನ, ತೆಹ್ರೀಕ್‌ ಇ ಇನ್ಸಾಫ್‌ನ ಸದಸ್ಯ ಫಾರೂಕ್‌ ಅಬೀಬ್‌ ಕೂಡ ಷರೀಫ್‌ ವಿರುದ್ಧ ಇದೇ ರೀತಿಯ ಆರೋಪ ಮಾಡಿದ್ದರು. ಮಾಜಿ ಪ್ರಧಾನಿ ಬೆನೆಜಿರ್‌ ಭುಟ್ಟೊ ವಿರುದ್ಧ ಅವಿಶ್ವಾಸ ನಿಲುವಳಿ ಮಂಡಿಸಲು ಲಾಡೆನ್‌ನಿಂದ ಒಂದು ಕೋಟಿ ಡಾಲರ್‌ ಪಡೆದುಕೊಂಡಿದ್ದರು ಎಂದು ಅವರು ದೂರಿದ್ದರು.


from India & World News in Kannada | VK Polls https://ift.tt/2NNN6HT

ಕನ್ನಡ ಅಕ್ಯಾಡೆಮಿಯಿಂದ ಮೈಸೂರು ವಿಶ್ವ ವಿದ್ಯಾನಿಲಯದ ಕನ್ನಡ ಸರ್ಟಿಫಿಕೇಟ್ ಕೋರ್ಸ್ ಗಳ ಪ್ರಾರಂಭೋತ್ಸವ

ಏರ್ಪಡಿಸಿದ್ದ ಮೈಸೂರು ವಿಶ್ವ ವಿದ್ಯಾನಿಲಯದ ಸರ್ಟಿಫಿಕೇಟ್ ಕೋರ್ಸ್ ಗಳ ಪ್ರಾರಂಭೋತ್ಸವವು ಜನವರಿ 30ರಂದು ಯಶಸ್ವಿಯಾಗಿ ನೆರವೇರಿತು. ಅಂತರ್ಜಾಲದಲ್ಲಿ ಬಿತ್ತರವಾದ ಈ ಕಾರ್ಯಕ್ರಮದಲ್ಲಿ ವಿಶ್ವದಾದ್ಯಂತ ಕನ್ನಡ ಶಿಕ್ಷಕರು, ಪೋಷಕರು, ಕನ್ನಡಿಗರು ಭಾಗವಹಿಸಿದ್ದರು. ಕನ್ನಡ ಶಾಲೆಯ ಮಕ್ಕಳು, ಕನ್ನಡ ಅಕ್ಯಾಡೆಮಿಯ ಸಂಕೇತ ಗೀತೆ, "ಹಚ್ಚೇವು ಕನ್ನಡದ ದೀಪ" ಹಾಡುವುದರೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಸಮಾರಂಭದಲ್ಲಿ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ರವರು ಭಾಗವಹಿಸಿ, ಮೈಸೂರು ವಿಶ್ವ ವಿದ್ಯಾನಿಲಯದ ಕನ್ನಡ ಭಾಷಾ ಸರ್ಟಿಫಿಕೇಟ್ ಕೋರ್ಸ್ ಗಳನ್ನು ಉದ್ಘಾಟಿಸಿದರು. ಜಗತ್ತಿನಾದ್ಯಂತ ಕನ್ನಡ ಕಲಿಕೆಗಾಗಿ ಕನ್ನಡ ಅಕ್ಯಾಡೆಮಿ ಮಾಡುತ್ತಿರುವ ಕೆಲಸಗಳನ್ನು ಶ್ಲಾಘಿಸಿದ ಅವರು, ಮೈಸೂರು ವಿಶ್ವವಿದ್ಯಾನಿಲಯ ಮತ್ತು ಕನ್ನಡ ಅಕ್ಯಾಡೆಮಿ ಜೊತೆ ಸೇರಿ ಮಾಡುತ್ತಿರುವ ಈ ಕಾರ್ಯಕ್ಕೆ ಸರ್ಕಾರದ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು. ಇದೇ ರೀತಿ ಇತರೆ ವಿಶ್ವವಿದ್ಯಾಲಯಗಳು ಕೂಡ ಜೊತೆ ಸೇರಿದರೆ ಈ ಕಾರ್ಯ ಮತ್ತಷ್ಟು ವಿಸ್ತಾರ ಹಾಗೂ ವಿಕಸನವಾಗುತ್ತದೆ ಎಂದರು. ಕನ್ನಡ ಅಕ್ಯಾಡೆಮಿಯ ಅಧ್ಯಕ್ಷರಾದ ಶಿವ ಗೌಡೆರ್, ಅಕ್ಯಾಡೆಮಿಯ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸುತ್ತಾ ಜಗತ್ತಿನಾದ್ಯಂತ 2000ಕ್ಕೂ ಹೆಚ್ಚು ಮಕ್ಕಳು ಈ ಕನ್ನಡ ಕಲಿಕೆಯ ಲಾಭ ಪಡೆಯುತ್ತಿದ್ದಾರೆ. 400ಕ್ಕೂ ಹೆಚ್ಚು ಶಿಕ್ಷಕರನ್ನು ತರಬೇತಿಗೊಳಿಸಲಾಗಿದೆ ಎಂದು ತಿಳಿಸಿದರು. ಮೈಸೂರು ವಿಶ್ವವಿದ್ಯಾಲಯದ ಈ ಸರ್ಟಿಫಿಕೇಷನ್ ಕೋರ್ಸ್ ಗಳು, ಹೊರನಾಡಿಗರ ಕನ್ನಡ ಕಲಿಕೆಯಲ್ಲಿ ಮತ್ತೊಂದು ಮೈಲಿಗಲ್ಲು ಎಂದರು. ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಹೇಮಂತ್ ಕುಮಾರ್ ರವರು ಮಾತನಾಡುತ್ತಾ, ಕನ್ನಡ ಭಾಷೆಯ ಅಭಿವೃದ್ಧಿಗೆ ಪ್ರತಿಯೊಂದು ತಲೆಮಾರಿನವರೂ ತಮ್ಮ ಕೊಡುಗೆ ನೀಡಿದ್ದಾರೆ ಮತ್ತು ಜಗತ್ತಿನ ಶ್ರೇಷ್ಟವಾದ 20 ಭಾಷೆಗಳಲ್ಲಿ ಕನ್ನಡವೂ ಒಂದು ಎಂದು ನೆನೆದಾಗ ಅಭಿಮಾನ ಉಕ್ಕಿ ಬರುತ್ತದೆ ಎಂದರು. ಕನ್ನಡದ ಒಲುಮೆ, ಕನ್ನಡದ ನಲ್ಮೆ, ಕನ್ನಡಿಗರ ಜಾಣ್ಮೆ ಹಾಗೂ ಕನ್ನಡಿಗರ ಮೇಲ್ಮೆಯ ಬಗ್ಗೆ ಶತಮಾನದ ಹಿಂದೆ ಕವಿ ಬಿ.ಎಂ.ಶ್ರೀಕಂಠಯ್ಯನವರು ಕಂಡ ಕನಸು ಇನ್ನೂ ನನಸಾಗಬೇಕಿದೆ. ಈ ನಿಟ್ಟಿನಲ್ಲಿ ವಿದೇಶದಲ್ಲಿ ನೆಲೆಸಿರುವ ಕನ್ನಡ ಮಕ್ಕಳಿಗೆ, ಅನ್ಯ ಭಾಷಿಕರಿಗೆ ಮತ್ತು ಕನ್ನಡ ಕಲಿಯುವ ಆಸಕ್ತರಿಗೆ ಈ ಸರ್ಟಿಫಿಕೇಟ್ ಕೋರ್ಸ್ ಗಳು ವರದಾನವಾಗಲಿ ಎಂದು ಹಾರೈಸಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ. ಎಸ್. ನಾಗಾಭರಣರವರು ಮಾತನಾಡುತ್ತಾ, ಈಗಾಗಲೇ ಪ್ರಾಧಿಕಾರದಿಂದ 86ಕ್ಕೂ ಹೆಚ್ಚು ದೇಶಗಳಲ್ಲಿ ಕನ್ನಡ ಶಿಬಿರಗಳನ್ನು ಅಯೋಜಿಸಿರುವುದರ ಬಗ್ಗೆ ತಿಳಿಸಿದರು. ಕನ್ನಡ ಅಕ್ಯಾಡೆಮಿ ಹೊರದೇಶದ ಮಕ್ಕಳ ಕಲಿಕೆಗಾಗಿ ಪಠ್ಯ ಪುಸ್ತಕ ಸಿದ್ಧಪಡಿಸಿದ್ದನ್ನು ಶ್ಲಾಘಿಸುತ್ತಾ, ಭಾಷಾ ತಜ್ಞರ ಜೊತೆಗೂಡಿ ಕೆಲಸ ಮಾಡುತ್ತಿರುವುದನ್ನು ಪ್ರಶಂಸಿಸಿದರು. ಅತ್ಯಂತ ಕಡಿಮೆ ಅವಧಿಯಲ್ಲಿ ಉತ್ತಮ ಸಾಧನೆಯನ್ನು ಮಾಡಿದ ಕನ್ನಡ ಅಕ್ಯಾಡೆಮಿ, ಮುಂದೆ ಪ್ರೊ. ಕೃಷ್ಣೇ ಗೌಡ ಮತ್ತು ಪ್ರೊ.ತಳವಾರ್ ರವರ ಸಲಹೆ ಹಾಗೂ ಮೈಸೂರು ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಇನ್ನೂ ಹೆಚ್ಚಿನ ಎತ್ತರಕ್ಕೆ ಏರಲಿ ಎಂದು ಆಶಿಸಿದರು. ಕನ್ನಡ ಪ್ರಮಾಣಿಕೃತ ಪರೀಕ್ಷೆಗಳ ಬಗ್ಗೆ ಮಾತನಾಡುತ್ತಾ, ಕರ್ನಾಟಕ ಸರಕಾರದ "ಕನ್ನಡ ಕಾಯಕ ವರ್ಷ" ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಮೈಸೂರು ವಿಶ್ವವಿದ್ಯಾಲಯದ ಮುಖ್ಯಾಧಿಕಾರಿಗಳಾದ ಪ್ರೊ. ಎನ್.ಎಂ.ತಳವಾರ್ ರವರು ಸರ್ಟಿಫಿಕೇಟ್ ಕೋರ್ಸ್ ಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು. ಕನ್ನಡ ಅಕಾಡೆಮಿಯ ಪದಾಧಿಕಾರಿ ಮಧುರಂಗಪ್ಪ ಗೌಡರ್ ರವರು ಈಗಾಗಲೇ ಪ್ರಾರಂಭವಾದ ಕೋರ್ಸ್ ಗಳಿಗೆ ನೋಂದಾಯಿಸಿರುವ ಮಕ್ಕಳ ಬಗ್ಗೆ ಮತ್ತು ಪ್ರಾಂಶುಪಾಲರಾದ ಹರೀಶ್ ತರಗತಿಗಳ ಬಗ್ಗೆ ತಿಳಿಸಿದರು. ಕನ್ನಡ ಅಕ್ಯಾಡೆಮಿಯ ಸಲಹೆಗಾರರಾದ ಪ್ರೊ. ಕೃಷ್ಣೇ ಗೌಡ ಅವರು ಕನ್ನಡ ಭಾಷೆಯ ಸಮೃದ್ಧಿ ಈಗಿನ ಮಕ್ಕಳಿಗೂ ತಿಳಿಯುವಂತಾಗಬೇಕು. ಒಂದು ಉತ್ತಮ ಉದ್ದೇಶ ಸಾಕಾರಗೊಳ್ಳಬೇಕಾದರೆ ವೃತ್ತಿಪರತೆ ಮತ್ತು ಸ್ವಯಂ ಸೇವಕತ್ವ ಬಹುಮುಖ್ಯ ಮತ್ತು ಅದನ್ನು ಅಕ್ಯಾಡೆಮಿಯ ಕಾರ್ಯಗಳಲ್ಲಿ ಕಾಣಬಹುದು ಎಂದರು. ಖ್ಯಾತ ಸಾಹಿತಿಗಳಾದ ಶಿವರಾಮ ಕಾರಂತರ ಬಗ್ಗೆ ಹೇಳುತ್ತಾ, ಸಾಹಿತ್ಯದಲ್ಲಿ ಆಗುವ ಪಾತ್ರಗಳ ಸೃಷ್ಟಿ ಮನುಷ್ಯನನ್ನು ಬೇರೊಂದು ಲೋಕಕ್ಕೆ ಕರೆದೊಯ್ಯುವಂತಾಗಬೇಕು ಎಂದು ಆಶಿಸಿದರು. ಕನ್ನಡ ಅಕ್ಯಾಡೆಮಿಯ ಶ ಅರುಣ್ ಸಂಪತ್ ವಂದಿಸಿದರು. ಸೂಷ್ಮಚಾರ್ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಅಕ್ಯಾಡೆಮಿಯ ಬಗ್ಗೆ ಕನ್ನಡ ಅಕ್ಯಾಡೆಮಿ, ಅಮೇರಿಕಾದಲ್ಲಿನ ಒಂದು ಲಾಭ-ರಹಿತ ಸಂಸ್ಥೆಯಾಗಿದ್ದು, ಸುಮಾರು 70 ಸ್ವಯಂಸೇವಕರು ಪ್ರಪಂಚದ ಮೂಲೆ ಮೂಲೆಗಳಲ್ಲಿರುವ ಕನ್ನಡ ಶಾಲೆಗಳನ್ನು ಗುರುತಿಸಿ, ಬೆಂಬಲಿಸಿ, ಹಾಗೂ ಅವುಗಳ ಬೆಳವಣಿಗೆಗೆ ಸತತವಾಗಿ ಶ್ರಮಿಸುತ್ತಿದ್ದಾರೆ. ಕನ್ನಡ ಅಕ್ಯಾಡೆಮಿಯಿಂದ ಇದುವರೆಗೂ 6 ದೇಶಗಳ ಅಮೆರಿಕಾ, ಕೆನಡಾ, ಯುಕೆ, ನಾರ್ವೆ, ಸ್ವೀಡನ್ ಹಾಗೂ ಮಲೇಶಿಯಾದ 60 ಶಾಲೆಗಳಲ್ಲಿ ಸುಮಾರು 2000ಕ್ಕೂ ಹೆಚ್ಚು ವಿದ್ಯಾರ್ಥಿಗಳು, 400ಕ್ಕೂ ಹೆಚ್ಚು ಕನ್ನಡ ಶಿಕ್ಷಕರನ್ನು ಒಳಗೊಂಡಿದೆ. ಯುಎಸ್ಎ, ಯುಕೆ ಮತ್ತು ಸ್ವೀಡನ್ ನಲ್ಲಿ ಈಗಾಗಲೇ 35 ಕ್ಕೂ ಹೆಚ್ಚು ಪ್ರೌಢಶಾಲೆಗಳಲ್ಲಿ ಕನ್ನಡವನ್ನು ಅಧಿಕೃತ ವಿದೇಶಿ ಭಾಷೆಯಾಗಿ ಬೋದಿಸಲು ಅನುಮೋದನೆಯನ್ನು ಪಡೆದಿದೆ ಮತ್ತು ಇನ್ನೂ ಹೆಚ್ಚಿನ ಶಾಲೆ, ಕಾಲೇಜುಗಳಿಗೂ ವಿಸ್ತರಿಸುವ ಪ್ರಯತ್ನದಲ್ಲಿದೆ. ಮೈಸೂರು ವಿಶ್ವವಿದ್ಯಾನಿಲಯದ ಸಹಯೋಗದೊಂದಿಗೆ ಕನ್ನಡದ ಸರ್ಟಿಫಿಕೇಶನ್ ಕೋರ್ಸ್ ಗಳನ್ನು ಪ್ರೌಢಶಾಲೆಯ ಮಕ್ಕಳಿಗೆ ಪ್ರಾರಂಭಿಸಿದ್ದು ಮತ್ತೊಂದು ಮೈಲಿಗಲ್ಲು. ವರದಿ: ಶ್ರೀವಿದ್ಯಾ ಪ್ರಶಾಂತ್ , ನ್ಯೂ ಜೆರ್ಸಿ


from India & World News in Kannada | VK Polls https://ift.tt/2Yz6Ot3

ವಿಶೇಷದಲ್ಲಿ ವಿಶೇಷ: ಮಹಿಳಾ ಕುಸ್ತಿಪಟುಗಳಿಗೆ ಎಮ್ಮೆ ಉಡುಗೊರೆ ನೀಡಿದ ವ್ಯಕ್ತಿ!

ಆಗ್ರಾ: ಐಎಎನ್‌ಎಸ್‌ ಆಗ್ರಾ ಇಲ್ಲಿ ನಡೆದ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌ನ ಅತ್ಯುತ್ತಮ ಮಹಿಳಾ ಕುಸ್ತಿಪಟುಗಳಿಗೆ ಹೆಮ್ಮೆಯ ಜತೆಗೆ 'ಎಮ್ಮೆ'ಯೂ ಸಿಗಲಿದೆ. ಸ್ಥಳೀಯರೊಬ್ಬರು ಅತ್ಯುತ್ತಮ ಕುಸ್ತಿ ಪಟುವಿಗೆ 1.5 ಲಕ್ಷ ರೂಪಾಯಿ ಮೌಲ್ಯದ ಎಮ್ಮೆಯನ್ನು ಉಡುಗೊರೆಯಾಗಿ ನೀಡಲಿದ್ದಾರೆ. ಭಾನುವಾರ ಸ್ಥಳೀಯ ಕುಸ್ತಿ ಅಭಿಮಾನಿ, ಅತ್ಯುತ್ತಮ ಕುಸ್ತಿಪಟುಗೆ ಎಮ್ಮೆ ಉಡುಗೊರೆ ನೀಡುವ ಬಯಕೆ ವ್ಯಕ್ತಪಡಿಸಿದ್ದಾರೆ. ಆ ವಿಷಯವನ್ನು ಭಾರತೀಯ ಕುಸ್ತಿ ಒಕ್ಕೂಟದ ಮುಖ್ಯಸ್ಥ ಬ್ರಿಜ್‌ ಭೂಷಣ್‌ ಸಿಂಗ್‌ ಸ್ಥಳದಲ್ಲೇ ಘೋಷಿಸಿದ್ದಾರೆ. ಕುಸ್ತಿ ಚಾಂಪಿಯನ್‌ಷಿಷ್‌ ಭಾನುವಾರ ಮುಕ್ತಾಯ ಕಂಡಿದ್ದು, ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಕುಸ್ತಿಪಟು ಮಹಾವೀರ್‌ ಪ್ರಸಾದ್‌ ನೇತೃತ್ವದ ಸಮಿತಿ ಉತ್ತಮ ಕುಸ್ತಿಪಟುವನ್ನು ಆಯ್ಕೆ ಮಾಡಲಿದೆ. ಎಮ್ಮೆಯನ್ನು ಮನೆಗೆ ಸಾಗಿಸಲು ಕುಸ್ತಿಪಟುಗಳಿಗೆ ಕಷ್ಟವಾಗಬಹುದು. ಅಂಥವರು 1.5 ಲಕ್ಷ ನಗದು ಪಡೆಯಲಿದ್ದಾರೆ ಎಂದು ಮಹಾವೀರ್‌ ಪ್ರಸಾದ್‌ ತಿಳಿಸಿದರು. ಶನಿವಾರ ನಡೆದ 62 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಹದಿಹರೆಯದ ಕುಸ್ತಿಪಟು ಸೋನಮ್‌ ಮಲಿಕ್‌ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್‌ ಅವರನ್ನು ಮಣಿಸಿ ಚಿನ್ನದ ಪದಕದ ಒಡತಿಯಾದರೆ, ಸಾಕ್ಷಿ ಬೆಳ್ಳಿ ಪದಕಕ್ಕೆ ಸಮಾಧಾನ ಪಟ್ಟುಕೊಂಡರು. ಮಧ್ಯಪ್ರದೇಶದ ಪುಷ್ಪಾ ಹಾಗೂ ಹರಿಯಾಣದ ಮನಿಶಾ ಕಂಚಿನ ಪದಕಗಳಿಗೆ ಕೊರಳೊಡ್ಡಿದರು. ಆಸ್ಪ್ರೇಲಿಯಾ ಪ್ರವಾಸದ ವೇಳೆ ಅದ್ವಿತೀಯ ಸಾಧನೆ ಮಾಡಿದ ಕ್ರಿಕೆಟಿಗರಾದ ಟಿ. ನಟರಾಜನ್‌, ಶಾರ್ದುಲ್‌ ಠಾಕೂರ್‌, ಶುಬ್ಮನ್‌ ಗಿಲ್‌, ವಾಷಿಂಗ್ಟನ್‌ ಸುಂದರ್‌, ನವದೀಪ್‌ ಸೈನಿ ಹಾಗೂ ಮೊಹಮ್ಮದ್‌ ಸಿರಾಜ್‌ಗೆ ಮಹೀಂದ್ರಾ ಕಂಪನಿಯ ಒಡೆಯ ಆನಂದ್‌ ಮಹೀಂದ್ರಾ ಅವರು ಥಾರ್‌ ಎಸ್‌ಯುವಿ ಉಡುಗೊರೆಯಾಗಿ ಕೊಟ್ಟಿರುವುದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದಾಗಿದೆ.


from India & World News in Kannada | VK Polls https://ift.tt/3agxjci

ಬೀದರ್‌: ಅಪ್ರಾಪ್ತೆ ಜೊತೆ ಅನುಚಿತ ವರ್ತನೆ, ಸ್ವಾಮೀಜಿಯನ್ನು ಪೀಠ ತ್ಯಾಗ ಮಾಡಿಸಿದ ಗ್ರಾಮಸ್ಥರು!

ಬಸವಕಲ್ಯಾಣ: ಅಪ್ರಾಪ್ತ ಬಾಲಕಿಯೊಬ್ಬಳ ಜೊತೆ ಅನುಚಿತವಾಗಿ ವರ್ತಿಸಿದ ಆರೋಪದ ಹಿನ್ನೆಲೆಯಲ್ಲಿ ಸ್ವಾಮೀಜಿಯೊಬ್ಬರನ್ನು ಮಠದಿಂದ ಪೀಠ ತ್ಯಾಗ ಮಾಡಿಸಿದ ಪ್ರಸಂಗ ಹುಲಸೂರ ತಾಲೂಕಿನ ಗಡಿಗೌಂಡಗಾಂವ ಗ್ರಾಮದಲ್ಲಿ ಜರುಗಿದೆ. ಎರಡು ದಿನಗಳ ಹಿಂದೆ ದರ್ಶನಕ್ಕೆಂದು ಗ್ರಾಮದ 17 ವರ್ಷದ ಬಾಲಕಿಯೊಬ್ಬಳು ಮಠಕ್ಕೆ ಬಂದಾಗ ತಾಲೂಕಿನ ಗಡಿಗೌಂಡಗಾಂವ ಗ್ರಾಮದ ಶ್ರೀ ಹಾವಗಿಲಿಂಗೇಶ್ವರ ಸಂಸ್ಥಾನ ಹಿರೇಮಠದ ಪೀಠಾಧಿಪತಿಗಳಾದ ಶ್ರೀ ಶಾಂತವೀರ ಶಿವಾಚಾರ್ಯರ ಸ್ವಾಮೀಜಿ ಬಾಲಕಿ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಘಟನೆಯಿಂದ ಮನನೊಂದ ಬಾಲಕಿಯು ನಡೆದ ವಿಷಯವನ್ನು ಪಾಲಕರಿಗೆ ವಿವರಸಿದ್ದಾಳೆ. ಸ್ವಾಮೀಜಿ ನಡೆಸಿದ ಕೃತ್ಯದಿಂದ ಆಕ್ರೋಶಗೊಂಡ ಪಾಲಕರು ಗ್ರಾಮಸ್ಥರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ವಾಮೀಜಿಯನ್ನು ಮಠದಿಂದ ಹೊರ ಕಳಿಸಬೇಕು ಎಂದು ನಿರ್ಧರಿಸಿದ ಗ್ರಾಮಸ್ಥರು, ಭಾನುವಾರ ಮಠದ ಆವರಣದಲ್ಲಿ ಜಮಾಯಿಸಿ ಪೀಠ ತ್ಯಾಗ ಮಾಡಲು ಸ್ವಾಮೀಜಿಗೆ ತಾಕೀತು ಮಾಡಿದ್ದಾರೆ. ಸ್ವಾಮೀಜಿ ಮಠ ಬಿಟ್ಟು ಹೋಗಲೇಬೇಕು ಎಂದು ಪಟ್ಟು ಹಿಡಿದಿದ್ದರಿಂದ ಸ್ವಾಮೀಜಿ ಪೀಠ ತ್ಯಾಗ ಮಾಡಿ ಹೋಗಿದ್ದಾರೆ. ಸುದ್ದಿ ತಿಳಿದ ಹುಲಸೂರ ಠಾಣೆ ಪಿಎಸ್‌ಐ ಗೌತಮ್‌ ಸೇರಿದಂತೆ ಅಧಿಕಾರಿಗಳ ತಂಡ ಮಠಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಮುಂಜಾಗೃತ ಕ್ರಮವಾಗಿ ಮಠಕ್ಕೆ ಪೊಲೀಸ್‌ ಭದ್ರತೆ ಒದಗಿಸಿದ್ದಾರೆ. ಆದರೆ, ಬಾಲಕಿ ಪಾಲಕರು ದೂರು ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.


from India & World News in Kannada | VK Polls https://ift.tt/36utO0P

ಹೊಸಕೋಟೆ ಶಾಸಕ ಶರತ್‌ ಬಚ್ಚೇಗೌಡ ಸೇರಿ 18 ಜನರ ವಿರುದ್ಧ ಎಫ್‌ಐಆರ್‌..!

ಹೊಸಕೋಟೆ: ಶಿಷ್ಟಾಚಾರ ಉಲ್ಲಂಘನೆಯನ್ನು ಪ್ರಶ್ನಿಸುತ್ತಿದ್ದ ವೇಳೆ ಲಾಠಿ ಚಾರ್ಜ್‌ ನಡೆಸಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಶನಿವಾರ ಹೆದ್ದಾರಿ ತಡೆ ನಡೆಸಿದ್ದ ಶಾಸಕ ಶರತ್‌ ಬಚ್ಚೇಗೌಡ ಸೇರಿ 18 ಜನರ ವಿರುದ್ಧ ಹೊಸಕೋಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶರತ್‌ ಬಚ್ಚೇಗೌಡ ನೇತೃತ್ವದಲ್ಲಿ ಸುಮಾರು 500-600 ಜನ ಯಾವುದೇ ಅನುಮತಿ ಪಡೆಯದೆ ಗುಂಪು ಕಟ್ಟಿಕೊಂಡು ರಸ್ತೆ ತಡೆ ಮೂಲಕ ಸಾರ್ವಜನಿಕರಿಗೆ ತೊಂದರೆ ನೀಡಿದ್ದಾರೆ. ಪೊಲೀಸರು ರಸ್ತೆ ತೆರವುಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡುವಂತೆ ಕೋರಿದ್ದಕ್ಕೆ ಕರ್ತವ್ಯಕ್ಕೆ ಅಡ್ಡಿಪಡಿಸಿದರು ಎಂದು ದೂರಿನಲ್ಲಿ ಪೊಲೀಸರು ತಿಳಿಸಿದ್ದಾರೆ. ಅಕ್ರಮವಾಗಿ ಗುಂಪು ಕಟ್ಟಿಕೊಂಡು ಸಂಚಾರ ಹಾಗೂ ಪೊಲೀಸರ ಕರ್ತವ್ಯ ಅಡ್ಡಿ ಮಾಡಿದ ಆರೋಪದಡಿ ಶಾಸಕ ಸೇರಿದಂತೆ 18 ಜನರ ವಿರುದ್ಧ ಸಹಾಯಕ ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌ ದೂರು ದಾಖಲಿಸಿದ್ದಾರೆ. ಇವರ ಬೆಂಬಲಿಗರ ವಿರುದ್ಧವೂ ಕಾನೂನು ಕ್ರಮ ಜರುಗಿಸುವಂತೆ ದೂರಿನಲ್ಲಿ ತಿಳಿಸಲಾಗಿದೆ. ಸೆಕ್ಷನ್‌ 143, 147, 341,283 ಅಡಿ ಪ್ರಕರಣ ದಾಖಲಾಗಿದೆ.


from India & World News in Kannada | VK Polls https://ift.tt/39Cv3gx

ಚುಟುಕು ಸುದ್ದಿಗಳು: ಚಿಕ್ಕಮಗಳೂರಿನಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ; 17 ಜನರ ವಿರುದ್ಧ ಎಫ್‌ಐಆರ್

ಮೈಸೂರಿನ ಖಾದಿ ಪ್ರಿಯರಿಗೆ ಗುಡ್‌ ನ್ಯೂಸ್‌..! ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಉತ್ಪನ್ನಗಳು ಇನ್ನು ಒಂದೇ ಸೂರಿನಡಿ ಸಿಗಲಿವೆ. ಖಾದಿ ಬಟ್ಟೆ, ತಿಂಡಿ ತಿನಿಸುಗಳು ಸೇರಿದಂತೆ 200ಕ್ಕೂ ಹೆಚ್ಚು ಬಗೆಯ ವಸ್ತುಗಳಿಗೆ ಮಾರುಕಟ್ಟೆ ಸೌಲಭ್ಯ ಕಲ್ಪಿಸುವುದರೊಂದಿಗೆ ಒಂದೇ ಸೂರಿನಡಿ ಮಾರಾಟವಾಗುವಂತೆ ವ್ಯವಸ್ಥೆ ಮಾಡಲು ಖಾದಿ ಅರ್ಬನ್‌ ಹಾತ್‌ ಮೈಸೂರು ನಗರದಲ್ಲಿ ಸ್ಥಾಪನೆಯಾಗಲಿದೆ. ಮೈಸೂರಲ್ಲಿ ಚಿಂತಕ ರಾಮಕೃಷ್ಣ ಕಳವಳ ಗಾಂಧಿಯನ್ನು ಸೈದ್ಧಾಂತಿಕವಾಗಿ ಕೊಲ್ಲುವ ಕೆಲಸಗಳು ನಡೆಯುತ್ತಿದ್ದು, ಇನ್ನು 20 ವರ್ಷದ ನಂತರ ಗಾಂಧಿ ಹೆಸರು ಹೇಳಿದರೆ ಶಿಕ್ಷೆಯೂ ಆಗಬಹುದು ಎಂದು ಹಿರಿಯ ಸಂಸ್ಕೃತಿ ಚಿಂತಕ ಡಾ.ಜಿ.ರಾಮಕೃಷ್ಣ ಹೇಳಿದರು. ರಾಮನಗರ ಮಕ್ಕಳ ರಕ್ಷಣಾ ಘಟಕಕ್ಕೇ ಬೇಕು ರಕ್ಷಣೆ ಮಕ್ಕಳ ರಕ್ಷಣೆಯ ಜವಾಬ್ದಾರಿ ಹೊತ್ತಿರುವ ಮಕ್ಕಳ ರಕ್ಷಣಾ ಘಟಕಕ್ಕೀಗ ರಕ್ಷಣೆ ಬೇಕಿದೆ. ಇದರೊಂದಿಗೆ ಸಮಸ್ಯೆಗೆ ಸ್ಪಂದಿಸುವುದಾಗಿ ಭರವಸೆ ನೀಡುವುದಾಗಿ ಹೇಳಿದ್ದ ಅಧಿಕಾರಿಗಳು ಮಾತು ತಪ್ಪಿದ್ದಾರೆ. ಕೊಂಬಾರಿನಲ್ಲಿ ಪತ್ರಕರ್ತರ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಅಭಿವೃದ್ಧಿ ಎಂಬುದು ನಿಂತ ನೀರಲ್ಲ. ಅದು ನಿರಂತರ ಪ್ರಕ್ರಿಯೆಯಾಗಿದೆ. ಗ್ರಾಮದ ಅಭಿವೃದ್ಧಿಗೆ ಸರ್ಕಾರ, ಅಧಿಕಾರಿಗಳ ಜತೆಗೆ ಜನರ ಸಹಭಾಗಿತ್ವವೂ ಬಹಳ ಮುಖ್ಯವಾದುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದ್ದಾರೆ. 4ನೇ ಬಾರಿ ನೂರಕ್ಕೂ ಮಿಕ್ಕಿ ಮೊಟ್ಟೆ ಇರಿಸಿದ ಕಡಲಾಮೆ! ಕೋಡಿ ಲೈಟ್‌ಹೌಸ್‌ ಸಮೀಪ ಕಡಲ ತೀರದಲ್ಲಿ ಕಳೆದ ಎರಡು ವಾರಗಳಲ್ಲಿ ನಾಲ್ಕನೇ ಬಾರಿಗೆ ಅಲಿವ್‌ ರಿಡ್ಲೇ ಜಾತಿಗೆ ಸೇರಿರುವ ಅಪರೂಪದ ಕಡಲಾಮೆ ನೂರಕ್ಕೂ ಮಿಕ್ಕಿ ಮೊಟ್ಟೆ ಇರಿಸಿದೆ. 17 ಜನರ ವಿರುದ್ಧ ಎಫ್‌ಐಆರ್ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಶೃಂಗೇರಿ ಪೊಲೀಸರು 17 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ. ಘಟನೆಗೆ ಸಹಕರಿಸಿದ ಬಾಲಕಿಯ ಚಿಕ್ಕಮ್ಮ ಗೀತಾ ಮೇಲೂ ಪ್ರಕರಣ ದಾಖಲಿಸಲಾಗಿದೆ. ರಾಯಚೂರಿನಲ್ಲಿ ಬೈಕ್ -ಟಾಟಾ ಏಸ್ ನಡುವೆ ಡಿಕ್ಕಿ ಟಾಟಾ ಏಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಹಲವರು ಗಂಭೀರ ಗಾಯಗೊಂಡ ಘಟನೆ ಜ.31ರಂದು ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ನೇಮಕ ನಿರ್ಬಂಧದಿಂದ ಅತಂತ್ರ ಕೋವಿಡ್‌ ಕಾರಣಕ್ಕೆ ಕಳೆದ ವರ್ಷದ ಮಾರ್ಚ್ ನಲ್ಲಿ ಹೊಸ ನೇಮಕಗಳಿಗೆ ವಿಧಿಸಿರುವ ನಿರ್ಬಂಧವನ್ನು ಸರಕಾರ ಇನ್ನೂ ತೆರವು ಮಾಡದೆ ಇರುವುದರಿಂದ ಒಂದು ವರ್ಷದಿಂದ ಉದ್ಯೋಗ ಪತ್ರಕ್ಕಾಗಿ ಕಾಯುತ್ತಿರುವ ಸುಮಾರು ಐದು ಸಾವಿರ ಮಂದಿ ಆತಂಕದಲ್ಲೇ ದಿನ ದೂಡುವಂತಾಗಿದೆ. ಕೇರಳ ಸೇರಿದಂತೆ ಹಲವೆಡೆ ಹೆಚ್ಚುತ್ತಿದೆ ಕೊರೊನಾ! ರಾಜ್ಯದಲ್ಲಿ ಲಸಿಕೆ ಅಭಿಯಾನ ವೇಗ ಪಡೆಯದಿರಲು ಕೊರೊನಾ ಕಡಿಮೆಯಾಗಿದೆ ಎಂಬ ಮನೋಸ್ಥಿತಿಯೂ ಕಾರಣವಾಗಿದೆ. ಆದರೆ, ಸೋಂಕಿನ ಪ್ರಮಾಣ ತಗ್ಗುತ್ತಿದೆ ಎಂಬ ಕಾರಣಕ್ಕಾಗಿ ಉದಾಸೀನ ಬೇಡ ಎಂಬ ಅಭಿಪ್ರಾಯ ತಜ್ಞರದ್ದು. ಭಯ ಬಿಡಿ, ಕೊರೊನಾ ಲಸಿಕೆ ಪಡೆಯಿರಿ ಜನವರಿ 16ರಿಂದ ಆರಂಭಗೊಂಡ ಲಸಿಕೆ ಅಭಿಯಾನದಲ್ಲಿ ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರನ್ನು ಆಯ್ಕೆ ಮಾಡಲಾಗಿದೆ. ಜನವರಿ 30ರವರೆಗೆ ನಿಗದಿಯಾದ ಗುರಿಯಲ್ಲಿ ಶೇಕಡಾ 51 ಮಾತ್ರ ಸಾಧನೆಯಾಗಿದೆ. ಆರೋಗ್ಯ ಕಾರ್ಯಕರ್ತರಿಗೆ ಗೌರವ ಸೂಚಕವಾಗಿ ಮೊದಲ ಮಣೆ ನೀಡಿದ್ದರೂ, ಸಾಕಷ್ಟು ಪೂರ್ವಭಾವಿಯಾಗಿ ಪಟ್ಟಿ ಸಿದ್ಧವಾಗಿದ್ದರೂ ಲಸಿಕೆ ಸ್ವೀಕರಿಸಲು ಮುಂದೆ ಬಾರದೆ ಇರುವುದು ಚರ್ಚೆಗೆ ಕಾರಣವಾಗಿದೆ.


from India & World News in Kannada | VK Polls https://ift.tt/3oxBmGo

ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ವಿಡಿಯೋ ಮಾಡಿದ ಹಂಚಿದ ಅಪ್ರಾಪ್ತರು

ಲಖನೌ: ಮಹಿಳೆಯ ಮೇಲೆ ಅಪ್ರಾಪ್ತರ ಗುಂಪೊಂದು ಎಸಗಿ, ಅದನ್ನು ಚಿತ್ರೀಕರಿಸಿದ ಬೆಚ್ಚಿ ಬೀಳಿಸುವ ಘಟನೆ ಉತ್ತರ ಪ್ರದೇಶದ ಎಂಬಲ್ಲಿ ನಡೆದಿದೆ. ಒಟ್ಟು ಆರು ಮಂದಿ ಮಹಿಳೆಯ ಮೇಲೆ ಸಾಮೂಹಿ ಅತ್ಯಚಾರ ಎಸಗಿ ಅದನ್ನು ಚಿತ್ರೀಕರಿಸಿದ್ದು, ಈ ಪೈಕಿ ಇಬ್ಬರು ಅಪ್ರಾಪ್ತರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೆಲ ತಿಂಗಳುಗಳ ಹಿಂದೆ ಈ ಘಟನೆ ನಡೆದಿದ್ದು, ಕೃತ್ಯ ವಿಡಿಯೋಗಳನ್ನು ಆರೋಪಿಗಳು ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಈ ವೇಳೆ ಘಟನೆ ಬೆಳಕಿಗೆ ಬಂದಿದೆ. ಕೆಲ ತಿಂಗಳ ಹಿಂದೆ ಆರು ಮಂದಿ ಮೂವತ್ತು ವರ್ಷದ ಮಹಿಳೆಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ. ಐವರು ಆಕೆಯ ಮೇಲೆ ಸಾಮೂಹಿಕ ಎಸಗಿದ್ದು, ಒಬ್ಬ ಕೃತ್ಯದ ಚಿತ್ರೀಕರಣ ನಡೆಸಿದ್ದಾನೆ. ಆಕೆಯ ಮೇಲೆ ಬರ್ಬರವಾಗಿ ಎರಗಿದ ದುರುಳರು, ಚಿತ್ರ ಹಿಂಸೆ ನೀಡಿದ್ದಾರೆ. ಅಲ್ಲದೇ ಈ ಬಗ್ಗೆ ಬಾಯಿ ಬಿಟ್ಟರೆ ವಿಡಿಯೋ ರಿಲೀಸ್‌ ಮಾಡುವುದಾಗಿ ಬೆದರಿಸಿದ್ದಾರೆ. ಮಾನಕ್ಕೆ ಅಂಜಿದ ಸಂತ್ರಸ್ತೆ, ಈ ವಿಷಯವನ್ನು ಗೌಪ್ಯವಾಗಿಟ್ಟಿದ್ದರು. ಅಕ್ಟೋಬರ್‌ನಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯರ ಮಧ್ಯೆ ಈ ವಿಡಿಯೋ ಹರಿದಾಡುತ್ತಿತ್ತು. ಈ ದೃಶ್ಯಾವಳಿಗಳನ್ನು ಆರೋಪಿಗಳು 300 ರು.ಗೆ ಮಾರಾಟ ಮಾಡುತ್ತಿರುವಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಮಹಿಳೆ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಎಲ್ಲರನ್ನು ಪೊಲೀಸರು ದಸ್ತಗಿರಿ ಮಾಡಿದ್ದು, ಈ ಪೈಕಿ ಇಬ್ಬರು ಅಪ್ರಾಪ್ತ ವಯಸ್ಸಿನವರು. ವಿಡಿಯೋದಲ್ಲಿ ದುರುಳರ ಹೀನಾಯ ಕೃತ್ಯ ದಾಖಲಾಗಿದೆ. ವಿಡಿಯೋ ನಾಲ್ಕು ತಿಂಗಳ ಹಿಂದಿನದ್ದು ಎಂದು ಪೊಲೀಸರು ಹೇಳಿದ್ದಾರೆ. ವಿಡಿಯೋ ಸಾರ್ವಜನಿಕವಾಗುತ್ತದೆ ಎಂದು ಹೆದರಿದ್ದ ಮಹಿಳೆ, ಮನೆ ಹಾಗೂ ಸಾರ್ವಜನಿಕವಾಗಿ ಮಾನ ಕಳೆದುಕೊಳ್ಳಬೇಕಾದೀತು ಎಂದು ಹೆದರಿ ಸುಮ್ಮನಾಗಿದ್ದಳು. ಮನೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಸಂತ್ರಸ್ತೆಯ ಪತಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.


from India & World News in Kannada | VK Polls https://ift.tt/3r2oYQ4

ಪತ್ರಕರ್ತರ ಗ್ರಾಮ ವಾಸ್ತವ್ಯ ರಾಜ್ಯದೆಲ್ಲೆಡೆ ನಡೆಯಲಿ: ಸಚಿವ ಕೆ.ಎಸ್.ಈಶ್ವರಪ್ಪ ಆಶಯ

ಕಡಬ (ದ.ಕ.ಜಿಲ್ಲೆ): ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ರಾಜ್ಯಕ್ಕೆ ಮಾದರಿಯಾಗಿದ್ದು, ಇಂತಹಾ ಕಾರ್ಯಕ್ರಮ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನಡೆಯುವಂತಾಗಲಿ ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಸಚಿವ ಹೇಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಕಡಬ ತಾಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ಕಡಬ ತಾಲೂಕಿನ ಕೊಂಬಾರಿನಲ್ಲಿ ಭಾನುವಾರ ನಡೆದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪತ್ರಕರ್ತರ ಈ ಕಾರ್ಯಕ್ರಮ ನನ್ನ ಕಣ್ಣು ತೆರೆಸಿದೆ. ಇದರಿಂದ ಗ್ರಾಮಗಳ ಸಮಸ್ಯೆಗಳು ಬಗೆ ಹರಿಯಲಿದೆ. ಇಲಾಖೆ ಅಧಿಕಾರಿಗಳು ಚುರುಕಿನಿಂದ ಕೆಲಸ ಮಾಡಲು ಕಾರಣವಾಗುತ್ತದೆ ಎಂದು ಅವರು ಹೇಳಿದರು. ಗ್ರಾಮದ ನಾಲ್ಕು ರಸ್ತೆಗಳ ಅಭಿವೃದ್ಧಿಗೆ ಬದ್ಧ ಪತ್ರಕರ್ತರ ಗ್ರಾಮ ವಾಸ್ತವ್ಯ ನಡೆದ ಹಿಂದುಳಿದ ಪ್ರದೇಶವಾದ ಕಡಬ ತಾಲೂಕಿನ ಕೊಂಬಾರು ಗ್ರಾಮದ ಜನರ ಬಹು ಬೇಡಿಕೆಯಾದ ನಾಲ್ಕು ಪ್ರಮುಖ ರಸ್ತೆಗಳನ್ನು ಅಭಿವೃದ್ಧಿ ಮಾಡಲು ಬದ್ಧರಾಗಿದ್ದೇವೆ ಎಂದು ಅವರು ಇದೇ ಸಂದರ್ಭ ಆಶ್ವಾಸನೆ ನೀಡಿದರು. ಬಂದರು, ಮೀನುಗಾರಿಕಾ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಮಾತನಾಡಿ, ಸುಳ್ಯ ವಿಧಾನಸಭೆ ಕ್ಷೇತ್ರ ಬಹಳಷ್ಟು ಗ್ರಾಮೀಣ ಭಾಗವನ್ನು ಹೊಂದಿದೆ. ಗ್ರಾಮೀಣ ಭಾಗದಲ್ಲಿ ರಸ್ತೆ ಮತ್ತು ಸೇತುವೆಗಳ ನಿರ್ಮಾಣ ಪ್ರಮುಖ ಬೇಡಿಕೆಯಾಗಿದೆ. ಅನುದಾನದ ಲಭ್ಯತೆ ನೋಡಿಕೊಂಡು ಹಂತ ಹಂತವಾಗಿ ಅಭಿವೃದ್ಧಿ ಕಾರ್ಯ ನಡೆಸಲಾಗುವುದು ಎಂದು ಹೇಳಿದರು. ಗ್ರಾಮೀಣ ಭಾಗದ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ಸ್ಥಳೀಯ ಅನುದಾನಗಳು ಸಾಕಾಗುವುದಿಲ್ಲ. ಅದಕ್ಕಾಗಿ ಗ್ರಾಮೀಣ ರಸ್ತೆಗಳನ್ನು ಲೋಕೋಪಯೋಗಿ ರಸ್ತೆಗಳನ್ನಾಗಿ ಮೇಲ್ದರ್ಜೆಗೆ ಏರಿಸಿ ಹೆಚ್ಚು ಅನುದಾನ ತರಿಸಿ ಸರ್ವಋತು ರಸ್ತೆಗಳನ್ನಾಗಿ ಮಾಡಲು ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು.


from India & World News in Kannada | VK Polls https://ift.tt/3tbM7S1

'ಈ ಬಾರಿ ಐಪಿಎಲ್‌ ಭಾರತದಲ್ಲೇ' ಎಂದು ಸುಳಿವುಕೊಟ್ಟ ಬಿಸಿಸಿಐ ಖಜಾಂಚಿ!

ಹೊಸದಿಲ್ಲಿ: ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ () ಮುಂಬರುವ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯನ್ನು ಬಯೋ ಸೆಕ್ಯೂರ್‌ ವಾತಾವರಣದ ಅಡಿಯಲ್ಲಿ ಭಾರತದಲ್ಲೇ ಆಯೋಜಿಸಲು ಸಕಲ ಸಿದ್ಧತೆ ಕೈಗೊಂಡಿದೆ. ಕಳೆದ ಬಾರಿ ನಡೆದ 13ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಒಟ್ಟು 53 ಪಂದ್ಯಗಳು ನಡೆದಿದ್ದವು. ಟೂರ್ನಿಯಲ್ಲೂ 50ಕ್ಕಿಂತಲೂ ಹೆಚ್ಚು ಪಂದ್ಯಗಳು ಜರುಗಲಿವೆ. ಆದರೆ, ಸತತ ಕೋವಿಡ್‌ ಪರೀಕ್ಷೆ ಮತ್ತು ಆಟಗಾರರ ಸುರಕ್ಷತೆಯೇ ಬಿಸಿಸಿಗೆ ಇರುವ ಬಹುದೊಡ್ಡ ತಲೆನೋವಿನ ಕೆಲಸಸವಾಗಿದೆ. "ಸದ್ಯಕ್ಕೆ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯನ್ನು ಭಾರತದಲ್ಲೇ ಆಯೋಜಿಸಲು ನಿರ್ಧರಿಸಲಾಗಿದೆ. ಭಾರತದಲ್ಲಿ ಕೋವಿಡ್‌-19 ಸೋಂಕಿನ ಸಂಖ್ಯೆ ಕಡಿಮೆಯಾಗುತ್ತಾ ಹೋದರೆ ಖಂಡಿತಾ ಟೂರ್ನಿಯನ್ನು ಇಲ್ಲೇ ಆಯೋಜಿಸುವುದು ಉತ್ತಮ," ಎಂದು ಬಿಸಿಸಿಐ ಖಜಾಂಚಿ ಅರುಣ್ ದುಮಾಲ್ ಹೇಳಿದ್ದಾರೆ. "ಐಪಿಎಲ್‌ ಭಾರತೀಯರ ಸಲುವಾಗಿ ನಡೆಸುತ್ತಿರುವ ಟೂರ್ನಿ. ಹೀಗಾಗಿ ಇಲ್ಲಿಯೇ ಆಯೋಜಿಸುವುದು ನಮ್ಮ ಮೊದ ಗುರಿ. ಪರಿಸ್ಥಿತಿ ಹೀಗೆ ನಿಯಂತ್ರಣದಲ್ಲಿ ಇರಲಿ ಎಂದಷ್ಟೇ ಆಶಿಸುತ್ತೇವೆ. ಟೂರ್ನಿಗೆ ಆತಿಥ್ಯ ವಹಿಸುವ 8 ನಗರಗಳು ಎಷ್ಟು ಸುರಕ್ಷಿತ ಎಂಬುದು ಇಲ್ಲಿ ಮುಖ್ಯ. ಪರಿಸ್ಥಿತಿಗಳಿಗೆ ತಕ್ಕಂತೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು," ಎಂದು ದುಮಾಲ್ ವಿವರಿಸಿದ್ದಾರೆ. "ಸರಕಾರ ಅನುಮತಿ ನೀಡಿದರೆ ಆಟಗಾರರಿಗೆ ವ್ಯಾಕ್ಸಿನ್ ಕೊಡಿಸಲಿದ್ದೇವೆ. ವ್ಯಾಕ್ಸಿನ್‌ ಇಲ್ಲವಾದರೆ ಕಟ್ಟುನಿಟ್ಟಿನ ಸುರಕ್ಷತಾ ಕ್ರಮಗಳೊಂದಿಗೆ ಟೂರ್ನಿಯನ್ನು ನಡೆಸಲಾಗುವುದು. ಇಂಡಿಯನ್ ಪ್ರೀಮಿಯರ್‌ ಲೀಗ್‌ ಭಾರತದಲ್ಲೇ ಆಯೋಜನೆ ಆಗಬೇಕು. ಬೇರೆ ಯಾವು ಮಾರ್ಗವೇ ಇಲ್ಲ ಎಂದಾಗ ಮಾತ್ರ ವಿದೇಶದಲ್ಲಿ ನಡೆಸಬೇಕು," ಎಂದಿದ್ದಾರೆ. 2010-21ರ ಸಾಲಿನ ರಣಜಿ ಟ್ರೋಫಿ ಕ್ಯಾನ್ಸಲ್‌13ನೇ ಮತ್ತು 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಗಳನ್ನು ಬಹಳಾ ಕಡಿಮೆ ಅಂತರದಲ್ಲಿ ಆಯೋಜಿಸಲಾಗುತ್ತಿದೆ. ಇದರ ನಡುವೆ ಇಸುವ ಅಲ್ಪಾವಧಿಯಲ್ಲಿ ರಣಜಿ ಟ್ರೋಫಿ ಆಯೋಜನೆ ಸಾಧ್ಯವಿಲ್ಲ ಎಂದು ಅರುಣ್ ಸ್ಪಷ್ಟ ಪಡಿಸಿದ್ದಾರೆ. "ರಣಜಿ ಟ್ರೋಫಿ ಟೂರ್ನಿ ಆಯೋಜನಗೆ ಕನಿಷ್ಠ 66-70 ದಿನಗಳು ಬೇಕಾಗುತ್ತದೆ. ಇಷ್ಟು ಅವಧಿಕಾಲ ಟೂರ್ನಿಯನ್ನು ಕಾಯ್ದುಕೊಳ್ಳುವುದು ಬಹಳಾ ಕಷ್ಟದ ಕೆಲಸ. ಆಟಗಾರರಯ ಈ ಬಾರಿ ರಣಜಿಯಕ್ಲಿ ಆಡಿದರೆ ಅವರಿಗೆ ಮುಂಬರುವ ಐಪಿಎಲ್‌ನಲ್ಲಿ ಕಾಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3tcDB5q

ಕೋಡಿ ಲೈಟ್‌ಹೌಸ್‌ ಸಮೀಪ 4ನೇ ಬಾರಿ ನೂರಕ್ಕೂ ಮಿಕ್ಕಿ ಮೊಟ್ಟೆ ಇರಿಸಿದ ಕಡಲಾಮೆ!

ಕುಂದಾಪುರ: ಕೋಡಿ ಲೈಟ್‌ಹೌಸ್‌ ಸಮೀಪ ಕಡಲ ತೀರದಲ್ಲಿ ಶನಿವಾರ ಬೆಳಗ್ಗೆ ಕಳೆದ ಎರಡು ವಾರಗಳಲ್ಲಿ ನಾಲ್ಕನೇ ಬಾರಿಗೆ ಅಲಿವ್‌ ರಿಡ್ಲೇ ಜಾತಿಗೆ ಸೇರಿರುವ ಅಪರೂಪದ ನೂರಕ್ಕೂ ಮಿಕ್ಕಿ ಮೊಟ್ಟೆ ಇರಿಸಿದೆ. ಕೋಡಿ ಲೈಟ್‌ಹೌಸ್‌ ಎದುರಿನ ಕಡಲ ತೀರದಲ್ಲೀಗ ಸರತಿ ಸಾಲಿನಲ್ಲಿ ನಾಲ್ಕು ಹ್ಯಾಚರಿ(ಮೊಟ್ಟೆ ರಕ್ಷಣಾ ಕೇಂದ್ರ) ರೂಪುಗೊಂಡಿದ್ದು, ಇದು ಕಡಲಾಮೆ ಪಾಲಿಗೆ ಸುರಕ್ಷತೆಯ ನೆಲೆಯಾಗಿ ಗುರುತಿಸಿಕೊಂಡಿದೆ. ಸ್ವಚ್ಛತೆಗೆ ಸಿಕ್ಕ ಪ್ರತಿಫಲಅಪರೂಪದ ಜೀವಿ ಅಲಿವ್‌ ರಿಡ್ಲೇ ಕಡಲಾಮೆಗಳಿಗೆ ಸುರಕ್ಷಿತ ನೆಲೆ ಎನ್ನುವುದು ಇದ್ದಿರಲಿಲ್ಲ. ಅನೇಕ ಸಂಘ ಸಂಸ್ಥೆಗಳು ಲೈಟ್‌ಹೌಸ್‌ ಕಡಲ ತೀರದಲ್ಲಿ ವರ್ಷದಿಂದ ನಡೆಸುತ್ತಿರುವ ಸ್ವಚ್ಛತೆ ಅಭಿಯಾನಕ್ಕೆ ಸಿಕ್ಕ ಅತ್ಯಮೂಲ್ಯ ಪ್ರತಿಫಲವಿದು. ಕಡಲಾಮೆ ಮೊಟ್ಟೆ ರಕ್ಷಿಸಿ ಮರಿಗಳನ್ನು ಕಡಲಿಗೆ ಬಿಡುವ ತನಕ ಶ್ರದ್ಧೆಯಿಂದ ಕಾವಲು ನಡೆಸಲಾಗುವುದು ಎಂದು ಎಫ್‌ಎಸ್‌ಎಲ್‌ ಇಂಡಿಯಾ ಸಂಯೋಜಕ ದಿನೇಶ್‌ ಸಾರಂಗ ಹೇಳಿದ್ದಾರೆ. ಮೊಟ್ಟೆ ರಕ್ಷಣೆಕೋಡಿ ಲೈಟ್‌ಹೌಸ್‌ ಸಮೀಪದ ಹರಿಭಜನಾ ಮಂದಿರ ಎದುರು ಕಡಲತೀರದಲ್ಲಿ ಕಡಲಾಮೆ ಮೊಟ್ಟೆ ಇರಿಸುತ್ತಿರುವುದನ್ನು ಗುರುತಿಸಿದ ಸ್ಥಳೀಯ ಮೀನುಗಾರರಾದ ಚಂದ್ರ ಖಾರ್ವಿ, ವಾಸುದೇವ ಖಾರ್ವಿ ಅರಣ್ಯ ಇಲಾಖೆ ಮತ್ತು ಕಡಲಾಮೆ ಸಂರಕ್ಷಣೆ ತಂಡಕ್ಕೆ ಮಾಹಿತಿ ರವಾನಿಸಿದ್ದರು. ಕೂಡಲೇ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್‌, ಉಪ ವಲಯ ಅರಣ್ಯಾಧಿಕಾರಿ ಉದಯ್‌, ಫಾರೆಸ್ಟ್‌ ಗಾರ್ಡ್‌ ರಂಜಿತ್‌ ಪೂಜಾರಿ, ಎಫ್‌ಎಸ್‌ಎಲ್‌ ಇಂಡಿಯಾ ಸಂಯೋಜಕರಾದ ದಿನೇಶ್‌ ಸಾರಂಗ, ವೆಂಕಟೇಶ್‌ ಶೇರೆಗಾರ್‌, ಎಫ್‌ಎಸ್‌ಎಲ್‌ ಸಂಪರ್ಕ ಅಧಿಕಾರಿ ಗೋಪಾಲ ಖಾರ್ವಿ, ಮಲ್ಲೇಶ್‌, ಮೀನುಗಾರ ಬಾಬು ಮೊಗವೀರ, ಕ್ಲೀನ್‌ ಕೋಡಿ ಪ್ರಾಜೆಕ್ಟ್ ನ ಭರತ್‌ ಖಾರ್ವಿ, ರಾಘವೇಂದ್ರ, ಸಚಿನ್‌, ಲಕ್ಷ್ಮಣ ಪೂಜಾರಿ, ನಾಗರಾಜ ಮೊಗವೀರ, ಸಂಪತ್‌, ನರಸಿಂಹ ಪೂಜಾರಿ ಮೊಟ್ಟೆಗಳನ್ನು ರಕ್ಷಿಸಿದ್ದಾರೆ. ಸ್ಥಳದಲ್ಲಿ ದೊರಕಿದ 130ಕ್ಕೂ ಮಿಕ್ಕಿ ಮೊಟ್ಟೆಗಳಿಗೆ ರಕ್ಷಣಾ ಕೇಂದ್ರ ರೂಪಿಸಿದ್ದಾರೆ. ಡಿಎಫ್‌ಓ ಆಶೀಶ್‌ ರೆಡ್ಡಿ, ಎಸಿಎಫ್‌ ಲೋಹಿತ್‌, ಕೋಡಿ ಅರಣ್ಯ ರಕ್ಷಕ ಹಸ್ತ ಶೆಟ್ಟಿ ಮಾರ್ಗದರ್ಶನ ನೀಡಿದರು. ನಾಮಫಲಕ ಅಳವಡಿಕೆಎಫ್‌ಎಸ್‌ಎಲ್‌ ಇಂಡಿಯಾ ಅಧ್ಯಕ್ಷ ರಾಕೇಶ್‌ ಸೋನ್ಸ್‌ ಸ್ಥಳಕ್ಕಾಗಮಿಸಿ ಹ್ಯಾಚರಿಗೆ ನಾಮಫಲಕ ಅಳವಡಿಸಿ ಭವಿಷ್ಯತ್ತಿನಲ್ಲಿ ಈ ಪ್ರದೇಶ ಕಡಲಾಮೆಯ ಸುರಕ್ಷತೆಯ ನೆಲೆಯಾಗುವಂತೆ ಸಂಬಂಧಿತ ಇಲಾಖೆ ಕ್ರಮ ವಹಿಸಬೇಕು ಎಂದು ಮನವಿ ಮಾಡಿಕೊಂಡರು. ರಕ್ಷಣಾ ಕ್ರಮಅಳಿವಿನಂಚಿನಲ್ಲಿರುವ ಅಪರೂಪದ ಅಲಿವ್‌ ರಿಡ್ಲೇ ಜಾತಿಗೆ ಸೇರಿದ ಕಡಲಾಮೆ ನಾಲ್ಕನೆ ಬಾರಿ ತೀರಕ್ಕೆ ಆಗಮಿಸಿ ಮೊಟ್ಟೆ ಇರಿಸಿರುವುದು ಅಪರೂಪದ ವಿದ್ಯಮಾನ. ಒಂದೇ ಜಾಗದ ಆಸುಪಾಸಿನಲ್ಲಿಯೇ ಮೊಟ್ಟೆ ಇರಿಸುತ್ತಿರುವುದು ಇನ್ನೂ ವಿಶೇಷ. ಕ್ಲೀನ್‌ ಕುಂದಾಪುರ ಪ್ರಾಜೆಕ್ಟ್, ಎಫ್‌ಎಸ್‌ಎಲ್‌ ಇಂಡಿಯಾ, ರೀಫ್‌ ವಾಚ್‌, ಕ್ಲೀನ್‌ ಕೋಡಿ ಪ್ರಾಜೆಕ್ಟ್ ನಂತಹ ಸೇವಾ ಸಂಸ್ಥೆಗಳು ಇಲ್ಲಿ ನಿರಂತರ ನಡೆಸಿಕೊಂಡು ಬರುತ್ತಿರುವ ಕಡಲಾಮೆ ಜಾಗೃತಿ, ಸ್ವಚ್ಛತೆ ಕಾರ್ಯಕ್ಕೆ ಸಂದ ಗೆಲುವು. ಉದಯ್‌ ಉಪ ವಲಯ ಅರಣ್ಯಾಧಿಕಾರಿ


from India & World News in Kannada | VK Polls https://ift.tt/2NSfcSw

ಶಿಷ್ಯನ ಮನೆಯಿಂದಲೇ ಅರ್ಧ ಕೆ.ಜಿ ಚಿನ್ನ ಕದ್ದ ಚೋರ್‌ ಗುರು

ಬೆಂಗಳೂರು: ಶಿಷ್ಯನ ಮನೆಗೆ ಕಣ್ಣ ಹಾಕಿ ಎರಡು ವರ್ಷಗಳ ಬಳಿಕ ಚೋರ್‌ ಗುರು ಒಬ್ಬ ಪೊಲೀಸರ ಅತಿಥಿಯಾಗಿದ್ದಾನೆ. ತನ್ನ ಶಿಷ್ಯನ ಮನೆಯಿಂದಲೇ ಅರ್ಧ ಕೆ.ಜಿ ಚಿನ್ನ ಕದ್ದು ತರಬೇತುದಾರನೊಬ್ಬ ಕೆ.ಪಿ ಅಗ್ರಹಾರ ಪೊಲೀಸರ ಬಲೆಗೆ ಬಿದ್ದಿದ್ದಾನೆ. ನಗರದ ಮಾಗಡಿ ರಸ್ತೆಯಲ್ಲಿರುವ ಕೆಂಪಾಪುರ ಅಗ್ರಹಾರದ ನಿವಾಸಿ ರೇಣುಕಾ ಪ್ರಸಾದ್‌ ಎಂಬಾತನೇ ಬಂಧಿತ ಆರೋಪಿ. ವೃತ್ತಿಯಲ್ಲಿ ಈಜು ತರಬೇತಿದಾರನಾಗಿರುವ ಈತ ಕಳೆದ ಮೂರು ವರ್ಷದಿಂದ ವಿಜಯನಗರದಲ್ಲಿ ಈಜು ತರಬೇತುದಾರನಾಗಿ ಕೆಲಸ ಮಾಡುತ್ತಿದ್ದ. ಈ ವೇಳೆ ತರಬೇತಿ ಪಡೆಯಲು ಬಂದಿದ್ದ ಸಿರಿಗಂಧ ಎಂಬ ವಿದ್ಯಾರ್ಥಿಯ ಪರಿಚಯವಾಗಿತ್ತು. ಪರಿಚಯ ಸ್ನೇಹಕ್ಕೆ ತಿರುಗಿತ್ತು. ಬಳಿಕ ಸಿರಿಗಂಧನ ಕುಟುಂಬದೊಂದಿಗೆ ರೇಣುಕಾ ಪ್ರಸಾದ್‌ಗೆ ಆತ್ಮೀಯತೆ ಬೆಳೆದಿದೆ. ಕೆ.ಪಿ ಅಗ್ರಹಾರದಲ್ಲಿರುವ ವಿದ್ಯಾರ್ಥಿಯ ಮನೆಗೆ ಆರೋಪಿ ಆಗ್ಗಾಗ್ಗೆ ಹೋಗಿ ಬರುತ್ತಿದ್ದ. ಈ ಮಧ್ಯೆ ಇಪ್ಪತ್ತು ಲಕ್ಷ ಮೌಲ್ಯದ 506 ಗ್ರಾಂ ಚಿನ್ನ ಎಗರಿಸಿದ್ದ. ಚಿನ್ನ ಕಳವಾಗುವ ವೇಳೆ ಕುಟುಂಬಸ್ಥರು ತಮಿಳುನಾಡು ಪ್ರವಾಸದಲ್ಲಿ ಇದ್ದಿದ್ದರಿಂದ, ಪ್ರವಾದ ವೇಳೆಯಲ್ಲಿ ಕಳೆದುಕೊಂಡು ಹೋಗಿರಬೇಕು ಎಂದು ಸುಮ್ಮನಿದ್ದರು. ಹೀಗಾಗಿ ದೂರು ಕೂಡ ದಾಖಲಿಸಿರಲಿಲ್ಲ. ಜನವರಿ 25 ರಂದು ಸಿರಿಗಂಧನ ಮನೆಯಲ್ಲಿ ಮೊಬೈಲ್‌ ಕಳ್ಳತನವಾಗಿತ್ತು. ಅದೇ ದಿನ ರೇಣುಕಾ ಪ್ರಸಾದ್‌ ಅವರ ಮನೆಗೆ ತೆರಳಿದ್ದ. ಆದರೆ ಕಳ್ಳತನವಾದ ದಿನ ರೇಣುಕಾ ಪ್ರಸಾದ್‌ ಹೊರೆತು ಪಡಿಸಿ ಬೇರೆ ಯಾರೂ ಆ ಮನೆಗೆ ತೆರಳಿರಲಿಲ್ಲ. ಹೀಗಾಗಿ ಮನೆಯವರಿಗೆ ಆತನ ಮೇಲೆ ಶಂಕೆ ಮೂಡಿತ್ತು. ಈ ಬಗ್ಗೆ ಪೊಲೀಸ್‌ ದೂರು ದಾಖಲಿಸಿದ ಸಿರಿಗಂಧನ ಕುಟುಂಬದವರು, ರೇಣುಕಾ ಪ್ರಸಾದ್‌ನನ್ನು ಕರೆಸಿ ವಿಚಾರಿಸಿದ್ದಾರೆ. ಈ ವೇಳೆ ಮೊಬೈಲ್‌ ಕಳ್ಳತನದ ಬಗ್ಗೆ ಬಾಯಿ ಬಿಟ್ಟಿದ್ದಾನೆ. ಅಲ್ಲದೇ ಪೊಲೀಸರು ತಮ್ಮದೇ ಶೈಲಿಯಲ್ಲಿ ವಿಚಾರಣೆ ಮುಂದುವರಿಸಿದಾಗ ಎರಡು ವರ್ಷದ ಹಿಂದೆ ಚಿನ್ನ ಕದ್ದ ವಿಚಾರವನ್ನು ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ.


from India & World News in Kannada | VK Polls https://ift.tt/3pArf4S

ರಾಮನಗರ ಮಕ್ಕಳ ರಕ್ಷಣಾ ಘಟಕಕ್ಕೇ ಬೇಕು ರಕ್ಷಣೆ: 2 ತಿಂಗಳಾದರೂ ತಪ್ಪಿತಸ್ಥರಿಗಿಲ್ಲ ಶಿಕ್ಷೆ!

ಆರ್‌.ಶ್ರೀಧರ್‌ ರಾಮನಗರ: ಕಳೆದ 8 ವರ್ಷಗಳಿಂದ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಮಕ್ಕಳ ರಕ್ಷಣಾ ಘಟಕಕ್ಕೆ ಜಿಲ್ಲೆಯಲ್ಲಿ ಮೇಜರ್‌ ಆಪರೇಷನ್‌ ಆಗಬೇಕಿದೆ ಎನ್ನುವುದು ಸಾರ್ವಜನಿಕರ ಆಗ್ರಹ. ಕಳೆದ 2 ತಿಂಗಳ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ , ವಿಜಯ ಕರ್ನಾಟಕ ದಿನಪತ್ರಿಕೆ ನಡೆಸಿದ ಫೋನ್‌ ಇನ್‌ನಲ್ಲಿ ಕೇಳಿಬಂದಿದ್ದ ದೂರುಗಳಿಗೆ ಈವರೆಗೂ ಅಧಿಕಾರಿಗಳು ಸ್ಪಂದಿಸಿಲ್ಲ. ಇನ್ನು ವಿಕ ವರದಿ ಮಾಡಿದ್ದ ವಿಶೇಷ ವರದಿಗಳಿಂದಾಗಿ ರಕ್ಷಣಾ ಘಟಕದ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದ ಅಧಿಕಾರಿಗಳು ಸಹ ಮೌನ ಮುರಿಯಲಿಲ್ಲ. ಏನೇನು ನಡೆಯುತ್ತಿದೆ ಇಲಾಖೆಯಲ್ಲಿ? ಬಾಲ್ಯವಿವಾಹಗಳನ್ನು ತಡೆಗಟ್ಟುವುದು, ಬಾಲ ಕಾರ್ಮಿಕರನ್ನು ರಕ್ಷಿಸುವುದು, ಈ ಬಗ್ಗೆ ಗ್ರಾಪಂನಿಂದ ಹಿಡಿದು ಜಿಲ್ಲೆಯವರೆಗೂ ಜಾಗೃತಿ ಮೂಡಿಸುವುದು. 1098 ಉಚಿತ ಸಹಾಯವಾಣಿ ಮೂಲಕ ದಿನದ 24 ಗಂಟೆಯೂ ಸ್ಪಂದಿಸುವುದು...ಹೀಗೆ ಮಕ್ಕಳಿಗೆ ಸಂಬಂಧಿಸಿದ ಎಲ್ಲ ಕಾರ‍್ಯವನ್ನು ಇಲಾಖೆಯೇ ಮಾಡಬೇಕು. ಆದರೆ, ಇಲಾಖಾ ಮಟ್ಟದ ಅಧಿಕಾರಿಗಳು ಮಾತ್ರ ಯಾರೊಬ್ಬರ ಕೈಗೂ ಸಿಗುತ್ತಿಲ್ಲ. ರಾಮನಗರ ತಾಲೂಕಿನ ಸಿಡಿಪಿಒ ಅವರು ಪ್ರಭಾರ ಹುದ್ದೆಯಲ್ಲಿದ್ದಾರೆ. ಅವರು ಸ್ಥಳೀಯ ಕೇಂದ್ರದಲ್ಲಿಯೇ ಇಲ್ಲ. ಹಾರೋಹಳ್ಳಿ ಭಾಗದಿಂದ ಅಪ್‌ ಅಂಡ್‌ ಡೌನ್‌ ಮಾಡುತ್ತಿದ್ದಾರೆ. ವಾರಕ್ಕೆ ಎರಡು ದಿನ ಬರುತ್ತಾರೆ. ಹೀಗಾಗಿ, ಅವರನ್ನು ಬದಲಿಸಿ, ಸ್ಥಳೀಯ ಮಟ್ಟದ ಅಧಿಕಾರಿಗಳಿಗೆ ಅಧಿಕಾರ ನೀಡಬೇಕು ಎಂಬ ಕೂಗು ಅನೇಕ ತಿಂಗಳುಗಳಿಂದಲೂ ಕೇಳಿಬಂದಿದೆ. ವಿಕ ಫೋನ್‌ಇನ್‌ನಲ್ಲಿಯೂ ಈ ಬಗ್ಗೆ ಸಾರ್ವಜನಿಕರು ಗಮನ ಸೆಳೆದಿದ್ದರು. ಸಂಜೆ 6 ಗಂಟೆಯಾದರೆ, ಸಿಡಿಪಿಒ ಅವರು ಕರೆಗೆ ಸಿಗುವುದಿಲ್ಲ. ಇನ್ನು ಅವರನ್ನು ವರ್ಗಾಯಿಸಲು ಇಲಾಖೆಯ ನಿದೇರ್ಶಕರು ಸಹ ಸೂಚನೆ ನೀಡಿದ್ದರೂ, ಇಲಾಖೆ ಉಪನಿದೇರ್ಶಕರು ಮಾತ್ರ ಮನಸ್ಸು ಮಾಡುತ್ತಿಲ್ಲ ಎಂಬುದು ವಿಪರ್ಯಾಸ. ಹೋಂ ಟೌನ್‌ನಲ್ಲಿರುವವರು ಸಿಡಿಪಿಒ ಆದರಷ್ಟೆ, ತಳಮಟ್ಟದ ಸಿಬ್ಬಂದಿಗಳು ಕೆಲಸ ಮಾಡಲು ಸಾಧ್ಯ ಎಂಬುದೇ ಇಲಾಖೆಗೆ ತಿಳಿದಿಲ್ಲ ಎನ್ನಬಹುದು. ಎಸ್ಕೆಪ್‌ ಆದರೂ ಕ್ರಮವೇ ಇಲ್ಲ ಸಣ್ಣಪುಟ್ಟ ವಿಷಯಕ್ಕೂ ದಿಢೀರ್‌ ನೋಟಿಸ್‌ ನೀಡಿ, ಅಧಿಕಾರಿಗಳತ್ತ ಬೊಟ್ಟು ಮಾಡಿ ತೋರುವ ಇಲಾಖೆಯು, ಬಾಲಮಂದಿರದಲ್ಲಿದ್ದ ಬಾಲಕಿಯರು ಕಾಂಪೌಂಡ್‌ ಹಾರಿ , ಎಸ್ಕೆಪ್‌ ಆಗಿದ್ದರೂ ಇಲಾಖೆ ಅಧಿಕಾರಿಗಳು ಜಾಣಕುರುಡರಂತೆ ವರ್ತಿಸುತ್ತಿದ್ದಾರೆ. ಇದರೊಂದಿಗೆ 2 ತಿಂಗಳ ಹಿಂದೆ ಸರಣಿ ವರದಿ ಮಾಡಿ, ಇಲಾಖೆಯಲ್ಲಿನ ಸಿಬ್ಬಂದಿಯೊಬ್ಬರ ವರ್ತನೆ ಹಾಗೂ ಇಲಾಖೆಯ ಕರ್ಮಕಾಂಡಗಳನ್ನು ಬಯಲಿಗೆಳೆದಿತ್ತು. ಅಂದು ಸಹ ನೋಟಿಸ್‌ ನೀಡುವುದಾಗಿ ಹೇಳಿದ್ದ ಇಲಾಖೆ, ಈವರೆಗೂ ತುಟಿ ಬಿಚ್ಚಿಲ್ಲ. 11 ಗಂಟೆ ಆದರೂ ಸಿಬ್ಬಂದಿ ಇರುವುದಿಲ್ಲ ಸರಕಾರಿ ಕೆಲಸ ದೇವರ ಕೆಲಸ ಎನ್ನಬೇಕಿರುವ ಸರಕಾರಿ ಸಿಬ್ಬಂದಿಯೇ ರಕ್ಷಣಾ ಘಟಕದಲ್ಲಿ ಬೆಳಗ್ಗೆ 11 ಗಂಟೆಯಾದರೂ ಕಚೇರಿಗೆ ಬರುವುದೇ ಇಲ್ಲ. ಲಾಕ್‌ಡೌನ್‌ನಿಂದ ಬಯೋಮೆಟ್ರಿಕ್‌ ಸಹ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇದನ್ನೇ ಲಾಭ ಮಾಡಿಕೊಂಡಿರುವ ಅಧಿಕಾರಿಗಳು ಅತ್ತ ನೆಮ್ಮದಿಯಾಗಿ ಮಧ್ಯಾಹ್ನ ಬಂದು ಸಂಜೆ ಮನೆ ಕಡೆ ಜಾರುತ್ತಿದ್ದಾರೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಹೊರಗುತ್ತಿಗೆ ನೌಕರರ ಮೂಲಕವೇ ಇಡೀ ಕೆಲಸ ಮಾಡಿಸುವ ಅಧಿಕಾರಿಗಳು, ಕೆಲವರನ್ನು ತಲೆ ಮೇಲೆ ಹೊತ್ತು ಮೆರೆಸುತ್ತಿದ್ದರೆ, ಇನ್ನು ಕೆಲವರನ್ನು ತುಚ್ಛವಾಗಿ ಕಾಣುತ್ತಿದ್ದಾರೆ ಎಂಬ ಆರೋಪಗಳು ಇಲಾಖೆ ಮೇಲಿದೆ. ಮಾಹಿತಿಯೂ ಇರುವುದಿಲ್ಲ ವಿಕ ನಡೆಸಿದ್ದ ಫೋನ್‌ಇನ್‌ನಲ್ಲಿ ದತ್ತು ಸ್ವೀಕಾರದ ಬಗ್ಗೆ ಸಾಕಷ್ಟು ಮಂದಿ ಕರೆ ಮಾಡಿ, ಮಾಹಿತಿ ಕೇಳಿದ್ದರು. ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುವುದಾಗಿ ಹೇಳಿದ್ದ ಇಲಾಖೆ, ಅಂದಿನಿಂದ ಈವರೆಗೆ ಕನಿಷ್ಟ ಒಂದೇ ಒಂದು ಕಾರ‍್ಯಕ್ರಮ ಮಾಡಿಲ್ಲ. ಏನೇ ಮಾಹಿತಿ ಕೇಳಿದರೂ, ತಬ್ಬಿಬ್ಬುಗೊಳ್ಳುವ ಅಧಿಕಾರಿಗಳ ವರ್ತನೆಗೆ ಜಿಲ್ಲಾಧಿಕಾರಿ, ಜಿಪಂ ಸಿಇಒ ಅವರೇ ಕ್ರಮ ವಹಿಸಬೇಕು. ಜಿಪಂ ಸಿಇಒ ಅವರೇ ಗಮನಿಸಿ ಮಕ್ಕಳ ರಕ್ಷಣೆಗೆಂದೇ ಇರುವ ರಕ್ಷಣಾ ಘಟಕದ ಸಂಬಂಧ ಜಿಪಂ ಸಿಇಒ ಅವರೇ ಗಮನಿಸಬೇಕು. ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗೆ ಏಕಾಏಕಿ ತಾಲೂಕಿನಿಂದ ಮತ್ತೊಂದು ತಾಲೂಕಿಗೆ ವರ್ಗಾವಣೆ ಮಾಡಿರುವುದು, ಹಿರಿಯ ಅಧಿಕಾರಿಗಳ ಕೃಪಾಶೀರ್ವಾದ ಇರುವವರಿಗೆ ನೋಟಿಸ್‌ ನೀಡದಿರುವುದು, ಹೋಂ ಟೌನ್‌ನಲ್ಲಿರದ ಅಧಿಕಾರಿಗಳ ವರ್ತನೆ, ಮಕ್ಕಳ ರಕ್ಷಣೆಯ ಕಾರ‍್ಯಕ್ರಮಗಳ ಪ್ರಚಾರ...ಹೀಗೆ ಹತ್ತಾರು ಸಮಸ್ಯೆಗಳಿಗೆ ಜಿಪಂ ಸಿಇಒ ಅವರೇ ಮೇಜರ್‌ ಆಪರೇಷನ್‌ ನಡೆಸಬೇಕು. ಇಲ್ಲವೇ ಜಿಲ್ಲಾಧಿಕಾರಿಗಳಾದರೂ, ತಮ್ಮ ಅಧ್ಯಕ್ಷತೆಯಲ್ಲಿ ಮೇಜರ್‌ ಸರ್ಜರಿ ನಡೆಸಬೇಕಿದೆ ಎಂಬುದು ವಿಕದ ಆಶಯವೂ ಹೌದು.


from India & World News in Kannada | VK Polls https://ift.tt/3r8bz9j

ಕೊಂಬಾರಿನಲ್ಲಿ ಪತ್ರಕರ್ತರ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟನೆ

ಕಡಬ: ಅಭಿವೃದ್ಧಿ ಎಂಬುದು ನಿಂತ ನೀರಲ್ಲ. ಅದು ನಿರಂತರ ಪ್ರಕ್ರಿಯೆಯಾಗಿದೆ. ಗ್ರಾಮದ ಅಭಿವೃದ್ಧಿಗೆ ಸರ್ಕಾರ, ಅಧಿಕಾರಿಗಳ ಜತೆಗೆ ಜನರ ಸಹಭಾಗಿತ್ವವೂ ಬಹಳ ಮುಖ್ಯವಾದುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಕಡಬ ತಾಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ಕಡಬ ತಾಲೂಕಿನ ಕೊಂಬಾರಿನಲ್ಲಿ ಭಾನುವಾರ ನಡೆದ ಹಾಗೂ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ತಾಲೂಕು ಮಟ್ಟದ ಹಾಗೂ ಗ್ರಾಮ ಮಟ್ಟದ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು. ಜನರ ಮಧ್ಯೆ ಇಳಿದು ಕೆಲಸ‌ ಮಾಡಬೇಕು. ತಮ್ಮ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಕೆಲಸ ಮಾಡ್ತಾ ಇದ್ದೇವೆಯೇ ಎಂದು ಪ್ರತಿಯೊಬ್ಬರೂ ಅವಲೋಕನ ಮಾಡಿಕೊಳ್ಳಬೇಕು. ಯಾವುದೇ ಸಮಸ್ಯೆಗಳು ಇದ್ದರೆ ಸ್ಥಳೀಯವಾಗಿಯೇ ಇತ್ಯರ್ಥಪಡಿಸಲು ಕ್ರಮ ವಹಿಸಬೇಕು ಎಂದು ಹೇಳಿದರು. ಅಭಿವೃದ್ಧಿಯಲ್ಲಿ ಪತ್ರಕರ್ತರ ಪಾತ್ರ ಬಲು ದೊಡ್ಡದು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಷ್ಟು ಕ್ರಿಯಾಶೀಲವಾಗಿರುವ ಸಂಘವನ್ನು ಬೇರೆಲ್ಲೂ ನೋಡಿಲ್ಲ. ಗ್ರಾಮ ವಾಸ್ತವ್ಯ ಕಲ್ಪನೆ ಕಾರ್ಯಕ್ರಮ ಶ್ಲಾಘನೀಯವಾದುದು ಎಂದು ಹೇಳಿದರು.


from India & World News in Kannada | VK Polls https://ift.tt/2YuFzzV

ಬೀಡುಬಿಟ್ಟಿರುವ ಬಿಡಿಎ ಸಿಬ್ಬಂದಿಗೆ ವರ್ಗಾವಣೆ ಬಿಸಿ: ಕಾಯಿದೆಗೆ ಹೊಸದಾಗಿ ಉಪ ಕಲಂ ಸೇರಿಸಲು ನಿರ್ಧಾರ!

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಲವಾರು ವರ್ಷಗಳಿಂದ ಜಡ್ಡುಗಟ್ಟಿ ಕುಳಿತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಮಾಡುವ ಮಹತ್ವದ ನಿರ್ಧಾರವನ್ನು ಪ್ರಾಧಿಕಾರದ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಶನಿವಾರ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‌.ಆರ್‌. ವಿಶ್ವನಾಥ್‌, ''ನೌಕರರು ಮತ್ತು ಕೆಲವು ಅಧಿಕಾರಿಗಳು ಬಿಡಿಎನಲ್ಲಿ ನೇಮಕಾತಿ ಆಗಿ ಇಲ್ಲಿಯೇ ನಿವೃತ್ತಿ ಹೊಂದುತ್ತಿದ್ದಾರೆ. ಇವರಲ್ಲಿ ಕೆಲವರು ಜಡ್ಡುಗಟ್ಟಿದವರಂತಾಗಿದ್ದು, ಹಲವಾರು ಅಕ್ರಮಗಳನ್ನು ಎಸಗುವ ಮೂಲಕ ಸಂಸ್ಥೆಗೆ ಕಪ್ಪು ಚುಕ್ಕೆ ತರುತ್ತಿದ್ದಾರೆ. ಇದರಿಂದ ಸಂಸ್ಥೆಗೆ ನಷ್ಟವಾಗುತ್ತಿದೆ. ಈ ಅಕ್ರಮಗಳಿಗೆ ಕಡಿವಾಣ ಹಾಕಲು ಕಾಯಿದೆಗೆ ತಿದ್ದುಪಡಿ ತರಲಾಗುತ್ತದೆ'' ಎಂದರು. ''ಇಂತಹ ನೌಕರರು ಮತ್ತು ಅಧಿಕಾರಿಗಳನ್ನು ಬೇರೆ ನಗರಾಭಿವೃದ್ಧಿ ಪ್ರಾಧಿಕಾರಗಳಿಗೆ ವರ್ಗಾವಣೆ ಮಾಡಲು ಬಿಡಿಎ ಕಾಯಿದೆಯಲ್ಲಿ ಈವರೆಗೆ ಅವಕಾಶವಿರಲಿಲ್ಲ. ಆದ್ದರಿಂದ ವರ್ಗಾವಣೆಗೆ ಅನುವು ಆಗುವ ರೀತಿಯಲ್ಲಿ ಬಿಡಿಎ ಕಾಯಿದೆ 1976ರ ಕಲಂ 50ಕ್ಕೆ 3 ಅನ್ನು ಹೊಸದಾಗಿ ಸೇರ್ಪಡೆ ಮಾಡಲು ನಿರ್ಧರಿಸಲಾಗಿದೆ'' ಎಂದು ತಿಳಿಸಿದರು. ಬಜೆಟ್‌ ಅಧಿವೇಶನದಲ್ಲಿ ತಿದ್ದುಪಡಿ ಈ ಕಾಯಿದೆಗೆ ವಿಧಾನಮಂಡಲದ ಅನುಮತಿ ಬೇಕಾಗಿದೆ. ಈ ಹಿನ್ನೆಲೆಯಲ್ಲಿ ಫೆಬ್ರವರಿಯಲ್ಲಿ ನಡೆಯಲಿರುವ ಬಜೆಟ್‌ ಅಧಿವೇಶನದಲ್ಲಿ ಕಾಯಿದೆಗೆ ತಿದ್ದುಪಡಿ ತಂದು ಅಂಗೀಕಾರ ಪಡೆಯುವುದಾಗಿ ವಿಶ್ವನಾಥ್‌ ತಿಳಿಸಿದರು. ಗರಿಷ್ಠ ಮೂರು ವರ್ಷ ಬಿಡಿಎ ಹೊರಕ್ಕೆ ಕಾಯಿದೆಗೆ ತಿದ್ದುಪಡಿ ತಂದ ನಂತರ ಜಡ್ಡುಗಟ್ಟಿದ ಅಧಿಕಾರಿಗಳು ಮತ್ತು ನೌಕರರನ್ನು ಕನಿಷ್ಠ ಒಂದು ವರ್ಷ ಮತ್ತು ಗರಿಷ್ಠ ಮೂರು ವರ್ಷಗಳವರೆಗೆ ರಾಜ್ಯದ ಇತರೆ ನಗರಾಭಿವೃದ್ಧಿ ಪ್ರಾಧಿಕಾರಗಳಿಗೆ ವರ್ಗಾವಣೆ ಮಾಡಲಾಗುತ್ತದೆ. ಮೂರು ವರ್ಷಗಳ ನಂತರ ಮತ್ತೆ ಬಿಡಿಎಗೆ ವರ್ಗಾವಣೆ ಆಗಬೇಕಾದರೆ ಆ ಬಗ್ಗೆ ಪ್ರಾಧಿಕಾರದ ಮಂಡಳಿ ನಿರ್ಧಾರವನ್ನು ತೆಗೆದುಕೊಳ್ಳಲಿದೆ. ಈ ಮಹತ್ವದ ನಿರ್ಧಾರದಿಂದ ಭ್ರಷ್ಟಾಚಾರಕ್ಕೂ ಕಡಿವಾಣ ಬೀಳುತ್ತದೆ. ಕೆಂಪೇಗೌಡ ಬಡಾವಣೆಗೆ 650 ಕೋಟಿ ಉದ್ದೇಶಿತ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ರಸ್ತೆ, ಒಳಚರಂಡಿ, ವಿದ್ಯುತ್‌, ಕುಡಿಯುವ ನೀರು ಸೇರಿದಂತೆ ನಾನಾ ಅಗತ್ಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು 650 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಇದಕ್ಕೆ ಪೂರ್ವಭಾವಿಯಾಗಿ ಬಡಾವಣೆಯಲ್ಲಿ ಈವರೆಗಿನ ಕಾಮಗಾರಿಗಳ ವಿಸ್ತೃತ ವರದಿಯನ್ನು ಒಂದು ತಿಂಗಳೊಳಗೆ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ಬನಶಂಕರಿಗೆ ಕುಡಿಯುವ ನೀರು ''ಹಳೆಯ ಬಡಾವಣೆಗಳಲ್ಲಿ ಒಂದಾಗಿರುವ ಬನಶಂಕರಿ 6ನೇ ಹಂತಕ್ಕೆ ಕಾವೇರಿ ನೀರು ಪೂರೈಸುವುದು ವಿಳಂಬವಾಗಿತ್ತು. ಈ ಭಾಗಕ್ಕೆ ಕುಡಿಯುವ ನೀರು ಪೂರೈಸಲು 168 ಕೋಟಿ ರೂ. ವೆಚ್ಚವಾಗಲಿದ್ದು, ಈ ಪೈಕಿ ಬಿಡಿಎ ಮೂರನೇ ಒಂದು ಭಾಗದಷ್ಟು ಹಣವನ್ನು ಬೆಂಗಳೂರು ಜಲಮಂಡಳಿಗೆ ನೀಡಲಿದ್ದು, ತಕ್ಷಣ ನೀರು ಪೂರೈಕೆ ಕಾಮಗಾರಿಯನ್ನು ಕೈಗೊಳ್ಳುವಂತೆ ಜಲಮಂಡಳಿಗೆ ಸೂಚನೆ ನೀಡಲಾಗಿದೆ'' ಎಂದರು. ಶಿವರಾಮ ಕಾರಂತ ಬಡಾವಣೆ ಡಿಪಿಆರ್‌ಗೆ ನಿರ್ಧಾರ ಡಾ. ಶಿವರಾಮ ಕಾರಂತ ಬಡಾವಣೆ ನಿರ್ಮಾಣದ ಸಾಧಕ-ಭಾದಕಗಳನ್ನು ಪರಿಶೀಲಿಸಿ ವರದಿ ನೀಡಲು ಮೂವರು ನಿವೃತ್ತ ಉನ್ನತಾಧಿಕಾರಿಗಳ ಸಮಿತಿಯನ್ನು ರಚಿಸಿದ್ದು, ಅದರಂತೆ ಸಮಿತಿಯು ಕಾರ್ಯಪ್ರವೃತ್ತವಾಗಿದೆ. ಮತ್ತೊಂದೆಡೆ ಬಿಡಿಎ ಬಡಾವಣೆಯನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಹೆಜ್ಜೆ ಹಾಕಿದೆ. ಇದಕ್ಕೆ ಪೂರಕವಾಗಿ ಸಮಗ್ರ ಯೋಜನಾ ವರದಿಯನ್ನು ಸಿದ್ಧಪಡಿಸಲು ಕನ್ಸಲ್ಟೆನ್ಸಿಯನ್ನು ನೇಮಕ ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ವಿಶ್ವನಾಥ್‌ ತಿಳಿಸಿದರು.


from India & World News in Kannada | VK Polls https://ift.tt/2NS0H12

ವಿದೇಶಿಯರಿಗೂ ಪೌರತ್ವ ನೀಡಲು ಮುಂದಾದ ಯುಎಇ: ಈ ನಿರ್ಧಾರ ತೆಗೆದುಕೊಂಡ ಮೊದಲ ಗಲ್ಫ್‌ ರಾಷ್ಟ್ರ

ಅಬುಧಾಬಿ: ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಂಯುಕ್ತ ಅರಬ್‌ ಸಂಸ್ಥಾನ () ವಿದೇಶಿಯರಿಗೂ ನೀಡಲು ಮುಂದಾಗಿದೆ. ಆ ಮೂಲಕ ಯುಎಇಯಲ್ಲಿ ಕಳೆದ ಹಲವಾರು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಲಕ್ಷಾಂತರ ಭಾರತೀಯರಿಗೆ ಉಪಯೋಗವಾಗಲಿದೆ. ಆಯ್ದ ಕೆಲವು ವಿದೇಶಿ ನಾಗರಿಕರಿಗೆ ಪೌರತ್ವ ನೀಡುವುದಾಗಿ ಯುಎಈ ಘೋ‍ಷಣೆ ಮಾಡಿದೆ. ಆ ಮೂಲಕ ಈ ನಿರ್ಧಾರ ತೆಗೆದುಕೊಂಡು ಮೊದಲ ಗಲ್ಫ್‌ ರಾಷ್ಟ್ರವಾಗಿ ಯುಎಇ ಹೊರಹೊಮ್ಮಿದೆ. ವಿದೇಶಿಯರಿಗೂ ಪೌರತ್ವ ನೀಡುವ ಯೋಜನೆಯನ್ನು ಯುಎಇ ಪ್ರಧಾನಿ ಟ್ವಿಟ್ಟರ್‌ ಮೂಲಕ ಪ್ರಕಟಿಸಿದ್ದು, ಹೂಡಿಕೆದಾರರು, ಪ್ರತಿಭಾವಂತರು, ವಿಜ್ಞಾನಿಗಳು, ವೈದ್ಯರು, ಎಂಜಿನಿಯರ್‌ಗಳು, ಕಲಾವಿದರು ಹಾಗೂ ವೃತ್ತಿ ಪರರಿಗೆ ಪೌರತ್ವ ಕಲ್ಪಿಸಲು ಯುಎಇಯ ಪೌರತ್ವ ಕಾನೂನಿಗೆ ತಿದ್ದುಪಡಿ ತರಲಾಗುತ್ತದೆ ಎಂದು ಹೇಳಿದ್ದಾರೆ. ಅಲ್ಲದೇ ದೇಶದ ಪೌರತ್ವಕ್ಕೆ ಅರ್ಹರಾದ ವ್ಯಕ್ತಿಗಳನ್ನು ಯುಎಇಯ ಸಂಪುಟ ಸದಸ್ಯರು, ಸ್ಥಳೀಯ ಎಮಿರಿ ನ್ಯಾಯಾಲಯಗಳು ಹಾಗೂ ಕಾರ್ಯಕಾರಿ ಮಂಡಳಿ ಸದಸ್ಯರು ನಾಮ ನಿರ್ದೇಶನ ಮಾಡಲಿದ್ದಾರೆ ಎಂದು ಅವರು ಹೇಳಿದ್ದಾರೆ. ಹೊಸದಾಗಿ ಪೌರತ್ವ ಪಡೆದುಕೊಂಡಿವರಿಗೆ ಯುಎಇ ಪಾಸ್‌ಪೋರ್ಟ್‌ ನೀಡಲಾಗುತ್ತದೆ ಎಂದು ಹೇಳಿದ್ದಾರೆ. ಯುಎಇಯಲ್ಲಿ ಸುಮಾರು 90 ಲಕ್ಷ ಜನಸಂಖ್ಯೆ ಇದ್ದು, ಇದರಲ್ಲಿ ಶೇ.80 ರಷ್ಟು ಮಂದಿ ವಿದೇಶಿಯರೇ ಇದ್ದಾರೆ. ದಕ್ಷಿಣ ಏಷ್ಯಾದ, ಅದರಲ್ಲೂ ಪ್ರಮುಖವಾಗಿ ಭಾರತದ ಲಕ್ಷಾಂತರ ಮಂದಿ ವಲಸೆ ಕಾರ್ಮಿಕರು ಅಲ್ಲಿ ಕೆಲಸ ಮಾಡುತ್ತಿದ್ದಾರೆ. ಒಂದು ವೇಳೆ ಈ ಹೊಸ ಕಾನೂನು ಜಾರಿಗೆ ಬಂದರೆ ಭಾರತದ ಹಲವು ಮಂದಿಗೆ ಯುಎಇಯ ಪೌರತ್ವ ಪಡೆದುಕೊಳ್ಳುವ ಅವಕಾಶ ಸಿಗಲಿದೆ.


from India & World News in Kannada | VK Polls https://ift.tt/2YuwQ0D

ಯಲಹಂಕದಲ್ಲಿ ಉಕ್ಕಿನ ಹಕ್ಕಿಗಳ ತಾಲೀಮು: ವಿಮಾನ ಹಾರಾಟ ಕಣ್ತುಂಬಿಕೊಳ್ಳುತ್ತಿರುವ ನಾಗರಿಕರು!

ಬೆಂಗಳೂರು: ವೈಮಾನಿಕ ಪ್ರದರ್ಶನದ ಹಿನ್ನೆಲೆಯಲ್ಲಿ ವಾಯುನೆಲೆಯಲ್ಲಿ ಉಕ್ಕಿನ ಹಕ್ಕಿಗಳ ಕಲರವ ಆರಂಭವಾಗಿದ್ದು, ಭಾರತೀಯ ವಾಯುಸೇನೆಯ ವಿಮಾನಗಳು ಬಿರುಸಿನ ತಾಲೀಮು ಆರಂಭಿಸಿವೆ. ಏರೋಬ್ಯಾಟಿಕ್‌ ಪ್ರದರ್ಶನ ನೀಡುವ ಸೂರ್ಯ-ಕಿರಣ, ಸಾರಂಗ್‌, ರಫೇಲ್‌, ಸುಖೋಯ್‌, ಎಲ್‌ಸಿಎ ತೇಜಸ್‌ ಸೇರಿದಂತೆ ಸೇನೆಯ ವಿಮಾನಗಳು ಹಾಗೂ ಹೆಲಿಕಾಪ್ಟರ್‌ಗಳು ಬೆಂಗಳೂರಿನ ಆಕಾಶದಲ್ಲಿ ಘರ್ಜಿಸುತ್ತಿವೆ. ಯಲಹಂಕ ವಾಯುನೆಲೆ ಸಮೀಪದ ಪ್ರದೇಶಗಳಲ್ಲಿ ವಾಸಿಸುತ್ತಿರುವವರಿಗೆ ವಿಮಾನಗಳ ಹಾರಾಟ ಕಣ್ಣಿಗೆ ಹಬ್ಬ ನೀಡುತ್ತಿದೆ. ನಗರದ ನಾನಾ ಭಾಗಗಳಿಂದ ಯಲಹಂಕ ವಾಯುನೆಲೆ ಬಳಿ ತೆರಳುತ್ತಿರುವ ಸಾವಿರಾರು ಜನರು ರಸ್ತೆ ಬದಿ ನಿಂತು ವಿಮಾನಗಳ ಹಾರಾಟವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಈ ಬಾರಿಯ ವೈಮಾನಿಕ ಪ್ರದರ್ಶನದಲ್ಲಿ ಹಾರಾಟ ವೀಕ್ಷಣೆಗೆ ಕನಿಷ್ಠ ಶುಲ್ಕ 500 ರೂ. ಮತ್ತು 1 ಸಾವಿರ ರೂ. ಇದೆ. ಕೋವಿಡ್‌-19 ನೆಗೆಟಿವ್‌ ವರದಿಯನ್ನು ತೆಗೆದುಕೊಳ್ಳುವುದು ಕಡ್ಡಾಯಗೊಳಿಸಲಾಗಿದೆ. ಜ.31ರ ಬೆಳಗ್ಗೆ 9 ಗಂಟೆ ನಂತರ ಟೆಸ್ಟ್‌ ಮಾಡಿಸಿ ನೆಗೆಟಿವ್‌ ಬಂದಿರುವ ವರದಿಯನ್ನು ಪ್ರವೇಶದ ವೇಳೆ ತೋರಿಸುವುದು ಕಡ್ಡಾಯ. ಜೊತೆಗೆ ಏರೋಇಂಡಿಯಾ ಆ್ಯಪ್‌ನಲ್ಲಿ ಅಪ್‌ಲೋಡ್‌ ಮಾಡಬೇಕು ಎಂದು ರಕ್ಷಣಾ ಇಲಾಖೆ ತಿಳಿಸಿದೆ. ವೈಮಾನಿಕ ಪ್ರದರ್ಶನದಲ್ಲಿ ಭಾಗವಹಿಸಲು ದೇಶದ ನಾನಾ ವಾಯುನೆಲೆಗಳಿಂದ ವಿಮಾನಗಳು ಆಗಮಿಸಿವೆ. ಏರ್‌ಬಸ್‌ನಿಂದ ಹಲವು ಉತ್ಪನ್ನಗಳ ಪ್ರದರ್ಶನ ಜಗತ್ತಿನ ಪ್ರಮುಖ ವಿಮಾನ ತಯಾರಿಕಾ ಕಂಪನಿಯಾಗಿರುವ ಏರ್‌ಬಸ್‌ ಈ ಬಾರಿ ವೈಮಾನಿಕ ಪ್ರದರ್ಶನದಲ್ಲಿ ಹಲವು ಉತ್ಪನ್ನಗಳ ಮಾದರಿಗಳನ್ನು ಡಿಜಿಟಲ್‌ ಡಿಸ್ಪ್ಲೇ ರೂಪದಲ್ಲಿ ಪ್ರದರ್ಶಿಸಲಿದೆ. ಮಧ್ಯಮ ಗಾತ್ರದ ಟ್ರಾನ್ಸ್‌ ಪೋರ್ಟ್ ವಿಮಾನ ಸಿ 295, ಮಲ್ಟಿ ರೋ ಟ್ಯಾಂಕರ್‌ ಎ330 ಡಿಜಿಟಲ್‌ ಡಿ, ಯುದ್ಧ ಹೆಲಿಕಾಪ್ಟರ್‌ ಎಚ್‌225 ಎಂ, ಪ್ಯಾಂಥರ್‌ ಇರಲಿದೆ. ಇದೇ ವೇಳೆ ಎಸ್‌850 ರಡಾರ್‌ ವ್ಯವಸ್ಥೆಯನ್ನು ಡಿಜಿಟಲ್‌ ಡಿಸ್ಪ್ಲೇಯಲ್ಲಿ ತೋರಿಸಲಾಗುತ್ತದೆ. ಡ್ರೋನ್‌ ಹಾರಾಟ ನಿಷೇಧ ಹಿನ್ನೆಲೆಯಲ್ಲಿ ಫೆ.1ರಿಂದ ಫೆ.8ರವರೆಗೆ ನಗರದಲ್ಲಿ ಡ್ರೋನ್‌ ಹಾರಾಟ ನಿಷೇಧಿಸಿ ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌ ಆದೇಶ ಹೊರಡಿಸಿದ್ದಾರೆ. ದೇಶ-ವಿದೇಶಗಳ ಗಣ್ಯರು ಆಗಮಿಸಲಿದ್ದಾರೆ. ಯುದ್ಧ ವಿಮಾನಗಳು ಸೇರಿದಂತೆ ಹಲವು ವಿಮಾನಗಳು ಹಾರಾಟ ನಡೆಸುವ ಕಾರಣ ಸುರಕ್ಷತೆ ದೃಷ್ಟಿಯಿಂದ ಮಾನವರಹಿತ ವಿಮಾನಗಳು, ಪ್ಯಾರಾ ಗ್ಲೈಡರ್‌ಗಳು, ಮೈಕ್ರೋ ಲೈಟ್‌ಗಳು, ಸಣ್ಣ ವಿಮಾನ, ಕ್ವಾಡ್‌ ಕಾಪ್ಟರ್‌, ಬಲೂನ್‌ ಸೇರಿದಂತೆ ಎಲ್ಲ ರೀತಿಯ ಹಾರಾಟ ನೌಕೆಗಳ ಹಾರಾಟವನ್ನು ನಿಷೇಧಿಸಲಾಗಿದೆ ಎಂದು ಪೊಲೀಸ್‌ ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.


from India & World News in Kannada | VK Polls https://ift.tt/3oyQd3a

ರಾಯಚೂರಿನಲ್ಲಿ ಬೈಕ್ -ಟಾಟಾ ಏಸ್ ನಡುವೆ ಡಿಕ್ಕಿ; ಹಲವರಿಗೆ ಗಂಭೀರ ಗಾಯ, ಇಬ್ಬರ ಸ್ಥಿತಿ ಚಿಂತಾಜನಕ!

ರಾಯಚೂರು: ಹಾಗೂ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಹಲವರು ಗಂಭೀರ ಗಾಯಗೊಂಡ ಘಟನೆ ಜ.31ರಂದು ಜಿಲ್ಲೆಯಲ್ಲಿ ನಡೆದಿದೆ. ಟಾಟಾ ಏಸ್ ಹಾಗೂ ಬೈಕ್ ನಡುವಿನ ಅಪಘಾತದಿಂದ ಟಾಟಾ ಏಸ್ ಪಲ್ಟಿಯಾಗಿ ಹಲವರಿಗೆ ಗಂಭೀರ ಗಾಯವಾಗಿದೆ. ಲಿಂಗಸುಗೂರು ತಾಲೂಕಿನ ಹಟ್ಟಿ ಹತ್ತಿರದ ರೋಡಲಬಂಡಾ ಕ್ರಾಸ್ ಬಳಿ ಈ ಘಟನೆ ನಡೆದಿದೆ. ಅಪಘಾತದಲ್ಲಿ ಹೊಲಕ್ಕೆ ಟಾಟಾ ಏಸ್ ಉರುಳಿ ಬಿದ್ದಿದ್ದು, ಇದರಲ್ಲಿ ಸುಮಾರು 15 ಮಂದಿ ಪ್ರಯಾಣಿಸುತ್ತಿದ್ದರು. ಹಲವರಿಗೆ ಗಂಭೀರ ಗಾಯವಾಗಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಹಟ್ಟಿಯಿಂದ ಸಿರವಾರ ತಾಲೂಕಿನ ಹೀರಾ ಗ್ರಾಮದತ್ತ 15 ಜನರನ್ನು ಕರೆದುಕೊಂಡು ಹೊರಟಿದ್ದ ಟಾಟಾ ಏಸ್ ಹಟ್ಟಿ ಮಾರ್ಗದತ್ತ ಬರುತ್ತಿದ್ದ ವೇಳೆ ಬೈಕ್ ಗೆ ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ಪೊಲೀಸ್ ಸಿಬ್ಬಂದಿಗಳು ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ.


from India & World News in Kannada | VK Polls https://ift.tt/3csmabc

ಲಸಿಕಾ ಅಭಿಯಾನ ಜಾಗತಿಕ ಮಟ್ಟದಲ್ಲಿ ದೇಶದ ಗೌರವವನ್ನು ಹೆಚ್ಚಿಸಿದೆ: ಪ್ರಧಾನಿ ಮೋದಿ!

ಹೊಸದಿಲ್ಲಿ: ಮಾರಕ ಕೊರೊನಾ ವೈರಸ್ ವಿರುದ್ಧ ಭಾರತ ಆರಂಭಿಸಿರುವ ಲಸಿಕಾ ಅಭಿಯಾನ, ಜಾಗತಿಕ ಮಟ್ಟದಲ್ಲಿ ದೇಶದ ಗೌರವವನ್ನು ಹೆಚ್ಚಿಸಿದೆ ಎಂದು ಹೇಳಿದ್ದಾರೆ. ಹೊಸ ವರ್ಷ(2021)ದ ಮೊದಲ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ದೇಶದ ಲಿಸಕೆ ಅಭಿಯಾನ ಸಮಸ್ತ ಭಾರತೀಯರ ಒಗ್ಗಟ್ಟಿನ ಫಲಶೃತಿ ಎಂದು ಹೇಳಿದರು. ಪ್ರಧಾನಿ ಮೋದಿ ಭಾಷಣದ ಪ್ರಮುಖ ಅಂಶಗಳು: *'ಭಾರತದ ಕೊರೊನಾ ವೈರಸ್ ವಿರುದ್ಧದ ಹೋರಾಟ ಮಹತ್ವದ ಘಟ್ಟ ತಲುಪಿದೆ.' *ದೇಶದ ಕೊರೊನಾ ಲಸಿಕಾ ಅಭಿಯಾನ ಜಾಗತಿಕ ಗಮನ ಸೆಳೆದಿದೆ ಎಂದ ಪ್ರಧಾನಿ ಮೋದಿ. *'ಕೊರೊನಾ ಲಸಿಕಾ ಅಭಿಯಾನದಿಂದಾಗಿ ಜಾಗತಿಕ ಮಟ್ಟದಲ್ಲಿ ದೇಶದ ಗೌರವ ವೃದ್ಧಿಸಿದೆ'. *ಲಸಿಕಾ ಅಭಿಯಾನ ಯಶಸ್ವಿಗೊಳಿಸುವ ಜವಾಬ್ದಾರಿ ಸಮಸ್ತ ಭಾರತೀಯರ ಮೇಲಿದೆ ಎಂದ ಮೋದಿ. *ದೇಶದ ಸ್ವಾತಂತ್ರ್ಯ ಸೇನಾನಿಗಳ ಕುರಿತು ಯುವ ಪೀಳಿಗೆ ಹೆಚ್ಚಿನ ಅಧ್ಯಯನ ನಡೆಸಬೇಕು ಎಂದು ಮನವಿ ಮಾಡಿದ ಪ್ರಧಾನಿ. *ದೇಶದ ಮಹಿಳಾ ಶಕ್ತಿ ದಿನದಿಂದ ದಿನಕ್ಕೆ ಬೆಳೆಯುತ್ತಿರುವುದು ಸಂತಸದ ಸಂಗರತರಿ ಎಂದ ಪ್ರಧಾನಿ ಮೋದಿ. * ಗಣರಾಜ್ಯೋತ್ಸವ ದಿನಾಚರಣೆ(ಜ.26)ಯಂದು ನಡೆದ ಹಿಂಸಾಚಾರವನ್ನು ಖಂಡಿಸಿದ ಪ್ರಧಾನಿ ಮೋದಿ. *ಪ್ರತಿಭಟನೆ ಹೆಸರಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಅಪಮಾನಗೊಳಿಸಿರುವುದು ಖಂಡನೀಯ ಎಂದ ಪ್ರಧಾನಿ ಮೋದಿ ಹೀಗೆ ವರ್ಷದ ಮೊದಲ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಸೇರಿದಂತೆ ವಿವಿಧ ಕ್ಷೇತ್ರಗಳ ಬೆಳವಣಿಗೆಗಳ ಕುರಿತು ಸುದೀರ್ಘ ಸಂವಾದ ನಡೆಸಿದರು.


from India & World News in Kannada | VK Polls https://ift.tt/3j3BbBB

ನಗರ ಸ್ವಚ್ಛಗೊಳಿಸಲು ನಿರಾಶ್ರಿತರನ್ನು ಟ್ರಕ್‌ನಲ್ಲಿ ತುಂಬಿಸಿ ಕೊಂಡೊಯ್ದ ಇಂದೋರ್‌ ನಗರ ಪಾಲಿಕೆ

ಇಂದೋರ್‌: ದೇಶದ ಸ್ವಚ್ಛ ನಗರಿ ಎನ್ನುವ ಖ್ಯಾತಿಗೆ ಪಾತ್ರವಾಗಿರುವ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಗರ ಸಭೆ, ನಿರಾಶ್ರಿತರನ್ನು ಟ್ರಕ್‌ ತುಂಬಿ ನಗರದ ಹೊರ ವಲಯದಲ್ಲಿ ಬಿಟ್ಟು ಬಂದಿರುವ ಅಮಾನವೀಯ ಕೃತ್ಯ ನಡೆದಿದೆ. ನಿರಾಶ್ರಿತರನ್ನು ಟ್ರಕ್‌ನಲ್ಲಿ ತುಂಬಿಸುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ನಗರದ ಬಸ್‌ ನಿಲ್ದಾಣಗಳಲ್ಲಿ, ಹೆದ್ದಾರಿಗಳ ಬದಿಯಲ್ಲಿ ಇದ್ದ ನಿರಾಶ್ರಿತರನ್ನು ಟ್ರಕ್‌ನಲ್ಲಿ ತುಂಬಿಸಿ ನಗರದ ಹೊರ ವಲಯದ ಕ್ಷಿಪ್ರ ಎಂಬಲ್ಲಿಗೆ ಬಿಟ್ಟು ಬರಲಾಗಿದೆ. ತೀವ್ರ ಚಳಿಯ ಮಧ್ಯೆಯೂ ನಗರಾಡಳಿತ ಈ ಅಮಾನವೀಯ ನಡೆಗೆ ಭಾರೀ ವಿರೋಧ ವ್ಯಕ್ತವಾಗಿದೆ. ನಿರಾಶ್ರಿತರನ್ನು ತಂದು ಬಿಡುವ ಈ ನಡೆಗೆ ಕ್ಷಿಪ್ರ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತ ಪಡಿಸಿದ್ದು, ಮತ್ತೆ ಅವರನ್ನು ಹಿಂದೆ ಕರೆ ತರಲಾಗಿದೆ. ಇದರ ವಿಡಿಯೋವನ್ನು ಸಾರ್ವಜನಿಕರು ಸೆರೆ ಹಿಡಿದಿದದ್ದು, ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಓರ್ವ ವೃದ್ಧೆಯನ್ನು ಬಲವಂತವಾಗಿ ಟ್ರಕ್‌ಗೆ ಹತ್ತಿಸುವ ದೃಶ್ಯ ಸೆರೆಯಾಗಿದ್ದು, ಪಾಲಿಕೆಯ ಈ ಅಮಾನವೀಯ ಕೃತ್ಯಕ್ಕೆ ಜನ ಕಿಡಿ ಕಾರಿದ್ದಾರೆ. ಅಲ್ಲದೇ ಓರ್ವ ವ್ಯಕ್ತಿ ತಮ್ಮನ್ನು ಹೇಗೆ ಕರೆ ತಂದಿದ್ದಾರೆ, ತಮ್ಮ ವಸ್ತುಗಳನ್ನು ಹೇಗೆ ಚೆಲ್ಲಾ ಪಿಲ್ಲಿಯಾಗಿ ರಸ್ತೆ ಬದಿಗೆ ಬಿಸಾಡಿದ್ದಾರೆ ಎನ್ನುವುದನ್ನು ವಿವಿರಿಸುವ ದೃಶ್ಯ ಮನ ಕಲುಕುವಂತಿದೆ. ಭಾರೀ ವಿರೋಧ ವ್ಯಕ್ತವಾಗುವಂತೆ ಈ ಕೃತ್ಯಕ್ಕೆ ಸಮಜಾಯಿಷಿ ನೀಡಿರುವ ಪಾಲಿಕೆಯ ಹೆಚ್ಚುವರಿ ಆಯುಕ್ತ, ನಿರಾಶ್ರಿತರನ್ನು ರಾತ್ರಿಯ ನಿರಾಶ್ರಿತ ಕೇಂದ್ರಕ್ಕೆ ಕರೆದುಕೊಂಡು ಹೋಗಲಾಗುತ್ತಿತ್ತು ಎಂದು ಹೇಳಿದ್ದಾರೆ. ಅಲ್ಲದೇ ನಗರದ ಹೊರಗಡೆ ಅವರನ್ನು ಬಿಟ್ಟು ಬರಲಾಗಿದೆ ಎನ್ನುವ ಆರೋಪವನ್ನು ಅಲ್ಲಗೆಳೆದಿದ್ದಾರೆ. ಪಾಲಿಕೆಯ ಈ ನಡೆಗೆ ವಿಪಕ್ಷ ಕಾಂಗ್ರೆಸ್‌ ಕಿಡಿ ಕಾರಿದ್ದು, ಸ್ವಚ್ಛತೆಯ ಹೆಸರಲ್ಲಿ ಈ ಅಮಾನವೀಯ ಕ್ರೌರ್ಯ ಎಷ್ಟು ಸರಿ ಎಂದು ಪ್ರಶ್ನಿಸಿದೆ. ಅಲ್ಲದೇ ಬಿಜೆಪಿಯ ಅಣತಿಯಂತೆ ಈ ಕೃತ್ಯ ನಡೆದಿದೆ ಎಂದು ಆರೋಪಿಸಿದೆ. ಬಿಜೆಪಿಯಲ್ಲೂ ಅಡ್ವಾಣಿ, ಜೋಶಿ ಅವರಂಥ ಹಿರಿಯ ನಾಯಕರಿದ್ದಾರೆ. ಅವರನ್ನೂ ಇದೇ ರೀತಿ ನಡೆಸಿಕೊಳ್ಳುತ್ತೀರಾ ಎಂದು ಪ್ರಶ್ನಿಸಿದೆ. ಘಟನೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗುತ್ತಲೇ, ಡ್ಯಾಮೆಜ್‌ ಕಂಟ್ರೋಲ್‌ಗೆ ಮುಂದಾಗಿರುವ ಸರ್ಕಾರ ತನಿಖೆಗೆ ಆದೇಶಿಸಿದೆ. ವಿಡಿಯೋದಲ್ಲಿರುವವರ ವಿರುದ್ದ ಕ್ರಮ ಕೈಗೊಳ್ಳಿ ಎಂದು ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ ಆದೇಶಿಸಿದ್ದಾರೆ.


from India & World News in Kannada | VK Polls https://ift.tt/3pAq4m1

ಇಸ್ರೇಲ್ ರಾಯಭಾರ ಕಚೇರಿ ಎದುರು ಸ್ಫೋಟ: ಎನ್‌ಐಎ ಹೆಗಲಿಗೆ ತನಿಖೆಯ ಜವಾಬ್ದಾರಿ!

ಹೊಸದಿಲ್ಲಿ: ಕಳೆದ ಶುಕ್ರವಾರ(ಜ.29) ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿರುವ ಎದುರು ನಡೆದ ಸ್ಫೋಟ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ()ದ ಹೆಗಲಿಗೆ ಹೊರಿಸಲಾಗಿದೆ. ರಾಯಭಾರ ಕಚೇರಿ ಎದುರು ಐಇಡಿ ಸ್ಫೋಟಗೊಂಡಿದ್ದು, ಘಟನೆಯಲ್ಲಿ ಯಾರಿಗೂ ಗಾಯಗಳಾಗಿರಲಿಲ್ಲ. ಆದರೆ ಏಕಾಏಕಿ ನಡೆದ ಈ ದಾಳಿಯಿಂದಾಗಿ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಇಸ್ರೇಲ್ ರಾಯಭಾರ ಕಚೇರಿ ಎದುರು ನಡೆದ ಬಾಂಬ್ ಸ್ಫೋಟದ ಸ್ಥಳದಿಂದ ವಿಜಯ್ ಚೌಕ್ ಕೇವಲ 1.4 ಕಿ.ಮೀ ದೂರದಲ್ಲಿದೆ. ಅಂದು(ಜ.29-ಶುಕ್ರವಾರ) ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ಮೋದಿ ಸೇರಿದಂತೆ ಹಲವು ಗಣ್ಯರು ಸಶಸ್ತ್ರ ಪಡೆಗಳ ಬೀಟಿಂಗ್ ರೀಟ್ರಿಟ್ ಸಮಾರಂಭದಲ್ಲಿ ಭಾಗವಹಿಸಿದ್ದರು. ಇಸ್ರೇಲ್ ರಾಯಭಾರ ಕಚೇರಿ ಎದುರು ನಡೆದ ಸ್ಫೋಟವನ್ನು ತಾನೇ ಮಾಡಿದ್ದಾಗಿ ಜೈಶ್-ಉಲ್-ಹಿಂದ್ ಹೇಳಿದೆ. ಆದರೆ ಬಾಹ್ಯ ಶಕ್ತಿಗಳೂ ಈ ಕೃತ್ಯ ಎಸಗಿರುವ ಕುರಿತೂ ತನಿಖೆ ನಡೆಯಬೇಕಿದೆ. ಅಲ್ಲದೇ ಸಣ್ಣ ಪ್ರಮಾಣದ ಸ್ಫೋಟದ ಹಿಂದೆ ಶೀಘ್ರದಲ್ಲೇ ಮತ್ತೊಂದು ಬೃಹತ್ ಸ್ಫೋಟ ಸಂಭವಿಸಲಿದೆ ಎಂಬ ಸಂದೇಶ ಅಡಗಿದೆ ಎಂಬ ಮಾತುಗಳೂ ಕೇಳಿ ಬರುತ್ತಿದ್ದು, ಪ್ರಮುಖವಾಗಿ ಇರಾನ್-ಇಸ್ರೇಲ್ ಹಗೆತನವೇ ದೆಹಲಿ ಸ್ಫೋಟಕ್ಕೆ ಕಾರಣ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎನ್‌ಐಎ ವಿಸ್ತೃತ ತನಿಖೆಯನ್ನು ಕೈಗೆತ್ತಿಕೊಂಡಿದ್ದು, ಶೀಘ್ರದಲ್ಲೇ ಸತ್ಯಾಂಶ ಹೊರಬರಲಿದೆ ಎಂದು ನಿರೀಕ್ಷಿಸಲಾಗಿದೆ.


from India & World News in Kannada | VK Polls https://ift.tt/3j61uqO

ನೇಮಕ ನಿರ್ಬಂಧದಿಂದ ಅತಂತ್ರ; ಉದ್ಯೋಗ ಆದೇಶಪತ್ರಕ್ಕಾಗಿ ವರ್ಷದಿಂದ ಕಾಯುತ್ತಿದ್ದಾರೆ 5ಸಾವಿರ ಅಭ್ಯರ್ಥಿಗಳು!

ಶ್ರೀಕಾಂತ್‌ ಹುಣಸವಾಡಿ ಬೆಂಗಳೂರು ಬೆಂಗಳೂರು: ಕೊರೊನಾ ಸೋಂಕಿನ ತೀವ್ರತೆ ತಗ್ಗುತ್ತಿರುವಂತೆಯೇ ಆರ್ಥಿಕ ಚಟುವಟಿಕೆಗಳು ಗರಿಗೆದರುತ್ತಿವೆ. ಆದರೆ ಕೋವಿಡ್‌ ಕಾರಣಕ್ಕೆ ಕಳೆದ ವರ್ಷದ ಮಾರ್ಚ್ ನಲ್ಲಿ ಹೊಸ ನೇಮಕಗಳಿಗೆ ವಿಧಿಸಿರುವ ನಿರ್ಬಂಧವನ್ನು ಸರಕಾರ ಇನ್ನೂ ತೆರವು ಮಾಡಿಲ್ಲ. ಹಾಗಾಗಿ ಎಲ್ಲ ಪ್ರಕ್ರಿಯೆ ಪೂರ್ಣಗೊಂಡು ಆಯ್ಕೆಯಾಗಿ ಒಂದು ವರ್ಷದಿಂದ ಉದ್ಯೋಗ ಪತ್ರಕ್ಕಾಗಿ ಕಾಯುತ್ತಿರುವ ಸುಮಾರು ಐದು ಸಾವಿರ ಮಂದಿ ಆತಂಕದಲ್ಲೇ ದಿನ ದೂಡುವಂತಾಗಿದೆ. ಅಭ್ಯರ್ಥಿಗಳು ಯಾವಾಗ ನೇಮಕಪತ್ರ ಕೈ ಸೇರುತ್ತದೆ ಎಂದು ಸರಕಾರ ಮತ್ತು ಆರ್ಥಿಕ ಇಲಾಖೆಯತ್ತ ಮುಖ ಮಾಡಿದ್ದಾರೆ. ಸಿಎಂ ಯಡಿಯೂರಪ್ಪ ಅವರು ಹಿರಿಯ ಅಧಿಕಾರಿಗಳ ಸಭೆ ನಡೆಸಿ, ಅಭಿವೃದ್ಧಿ ಕಾರ‍್ಯ ಚುರುಕುಗೊಳಿಸಬೇಕೆಂದು ಸೂಚಿಸಿದ್ದಾರೆ. ಹಾಗಾಗಿ ಬಹುತೇಕ ಸ್ಥಗಿತಗೊಂಡಿದ್ದ ಎಲ್ಲ ಚಟುವಟಿಕೆಗಳು ಪುನರಾರಂಭವಾಗಿದ್ದರೂ ಆದೇಶ ನೀಡುತ್ತಿಲ್ಲ ಎಂದು ಅಭ್ಯರ್ಥಿಗಳು 'ವಿಜಯ ಕರ್ನಾಟಕ'ದ ಬಳಿ ಅಳಲು ತೋಡಿಕೊಂಡಿದ್ದಾರೆ. ನೇಮಕಗೊಂಡಿರುವ ಇಲಾಖೆಗಳಲ್ಲಿ ನೇಮಕ ಪತ್ರಗಳನ್ನು ಕೇಳಿದರೆ, ಆರ್ಥಿಕ ಇಲಾಖೆ ಹಸಿರು ನಿಶಾನೆ ತೋರದ ಹೊರತು ಆದೇಶ ನೀಡಲಾಗದು ಎನ್ನುತ್ತಿವೆ. ಅತ್ತ ಆರ್ಥಿಕ ಇಲಾಖೆಯಲ್ಲಿ ವಿಚಾರಿಸಿದರೆ ಅವರು ಸರಕಾರದತ್ತ, ಅದರಲ್ಲೂ ಮುಖ್ಯಮಂತ್ರಿಗಳು ಒಪ್ಪಿಗೆ ನೀಡುವವರೆಗೆ ಹಣಕಾಸು ವಿಚಾರದಲ್ಲಿ ಇಲಾಖೆ ಯಾವುದೇ ತೀರ್ಮಾನ ಕೈಗೊಳ್ಳಲಾಗದು ಎಂದು ಕೈ ಚೆಲ್ಲುತ್ತಿದ್ದಾರೆ. ಕೆಪಿಎಸ್‌ಸಿ ಮೂಲಕ ಆಯ್ಕೆಯಾಗಿರುವವರ ಸಿಂಧುತ್ವ ಪ್ರಮಾಣಪತ್ರ, ಪೊಲೀಸ್‌ ಪರಿಶೀಲನೆ ಸೇರಿ ನೇಮಕ ಪ್ರಕ್ರಿಯೆಯ ಎಲ್ಲ ಹಂತಗಳು ಮುಗಿದಿವೆ. ಅಧಿಕೃತ ಆದೇಶ ಸಿಗಬೇಕಷ್ಟೇ. ಕಳೆದೊಂದು ವರ್ಷದಿಂದ ನೇಮಕಪತ್ರ ಸಿಗದೆ ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ. ಕೆಲವರು ವಯೋಮಿತಿ ಮೀರುತ್ತಿದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.


from India & World News in Kannada | VK Polls https://ift.tt/2Md3wcG

ಕೋವಿಡ್ ಲಸಿಕೆ ಸ್ವೀಕಾರಕ್ಕೆ ಉದಾಸೀನ ಬೇಡ: ಕೇರಳ ಸೇರಿದಂತೆ ಹಲವೆಡೆ ಹೆಚ್ಚುತ್ತಿದೆ ಕೊರೊನಾ!

ಬೆಂಗಳೂರು: ರಾಜ್ಯದಲ್ಲಿ ಲಸಿಕೆ ಅಭಿಯಾನ ವೇಗ ಪಡೆಯದಿರಲು ಕೊರೊನಾ ಕಡಿಮೆಯಾಗಿದೆ ಎಂಬ ಮನೋಸ್ಥಿತಿಯೂ ಕಾರಣವಾಗಿದೆ. ಆದರೆ, ಸೋಂಕಿನ ಪ್ರಮಾಣ ತಗ್ಗುತ್ತಿದೆ ಎಂಬ ಕಾರಣಕ್ಕಾಗಿ ಬೇಡ ಎಂಬ ಅಭಿಪ್ರಾಯ ತಜ್ಞರದ್ದು. ದೇಶದಲ್ಲಿ ಕೊರೊನಾ ತಗ್ಗುತ್ತಿರುವುದು ನಿಜವಾದರೂ ಕೇರಳದಂಥ ರಾಜ್ಯಗಳಲ್ಲಿ ಕೇಸುಗಳು ಹೆಚ್ಚುತ್ತಿರುವ ಆತಂಕದ ಪರಿಸ್ಥಿತಿ ಇದೆ. ಯುರೋಪ್‌, ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳಲ್ಲೂ ಕೋವಿಡ್‌-19 ತೀವ್ರತೆ ಹೆಚ್ಚಾಗಿದೆ. ಹಲವು ದೇಶಗಳಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್‌ ಇದೆ. ಅಂತಹ ಪರಿಸ್ಥಿತಿಗೆ ನಾವು ಹೋಗಬಾರದು. ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಬೇಕೆಂದಾದರೆ ಲಸಿಕೆ ಅನಿವಾರ್ಯ. ಎರಡನೇ ಅಲೆ ಆರಂಭವಾದರೆ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ಧೈರ್ಯ ತುಂಬಿದ ವೈದ್ಯರು ಆರೋಗ್ಯ ಇಲಾಖೆ ಸಿಬ್ಬಂದಿ, ವೈದ್ಯರು, ವೈದ್ಯಕೀಯ ಸೇವೆಯಲ್ಲಿ ಇರುವವರು ಲಸಿಕೆ ಪಡೆಯುವಂತೆ ಉತ್ತೇಜಿಸಲು ಮತ್ತು ವಿಶ್ವಾಸ ಮೂಡಿಸಲು ಸ್ವತಃ ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಮತ್ತು ಆಯುಕ್ತ ಪಂಕಜ್‌ ಕುಮಾರ್‌ ಪಾಂಡೆ ಅವರು ಲಸಿಕೆ ಪಡೆದುಕೊಂಡಿದ್ದಾರೆ. ಜಯದೇವ ಆಸ್ಪತ್ರೆ ನಿರ್ದೇಶಕ ಹಾಗೂ ಖ್ಯಾತ ಹೃದ್ರೋಗ ತಜ್ಞ ಡಾ.ಸಿ.ಎನ್‌.ಮಂಜುನಾಥ್‌, ರಾಜ್ಯ ಕೋವಿಡ್‌ ತಾಂತ್ರಿಕ ಸಮಿತಿ ಅಧ್ಯಕ್ಷ ಡಾ.ಎಂ.ಕೆ.ಸುದರ್ಶನ್‌, ಖ್ಯಾತ ಹೃದ್ರೋಗ ತಜ್ಞ ಡಾ.ದೇವಿಶೆಟ್ಟಿ, ಮಣಿಪಾಲ್‌ ಆಸ್ಪತ್ರೆ ಮುಖ್ಯಸ್ಥ ಡಾ.ಸುದರ್ಶನ್‌ ಬಲ್ಲಾಳ್‌ ಸೇರಿದಂತೆ ಅನೇಕ ಹಿರಿಯ ವೈದ್ಯರೂ ಲಸಿಕೆ ಪಡೆದುಕೊಂಡಿದ್ದಾರೆ. ಯಾರಿಗೂ ಅಡ್ಡಪರಿಣಾಮ ಬೀರಿಲ್ಲಆರೋಗ್ಯ ಸೇವೆಯಲ್ಲಿರುವ 18 ವರ್ಷದವರಿಂದ ಹಿಡಿದು 75 ವರ್ಷದವರು ಕೂಡ ಲಸಿಕೆ ಪಡೆದಿದ್ದು, ಎಲ್ಲರೂ ಆರೋಗ್ಯವಾಗಿದ್ದಾರೆ. ಹೀಗಾಗಿ, ಲಸಿಕೆ ಪಡೆಯುವ ವಿಚಾರವಾಗಿ ಯಾರೂ ಆತಂಕ ಪಡುವ ಅಗತ್ಯ ಇಲ್ಲ. ಲಸಿಕೆ ಪಡೆದ ನಾನು ಆರೋಗ್ಯವಾಗಿದ್ದೇನೆ. ನಮ್ಮ ಎಲ್ಲ ಆರೋಗ್ಯ ಕಾರ್ಯಕರ್ತರು ಮುಂದೆ ಬಂದು ಲಸಿಕೆ ಪಡೆಯಬೇಕು. ಪಂಕಜ್ ಕುಮಾರ್ ಪಾಂಡೆಕಮೀಷನರ್ ಆರೋಗ್ಯ ಇಲಾಖೆ


from India & World News in Kannada | VK Polls https://ift.tt/3pMtXVb

ಅಪ್ರಾಪ್ತೆಯ ಪ್ಯಾಂಟ್‌ ಜಿಪ್ ತೆರೆದರೆ ಲೈಂಗಿಕ ದೌರ್ಜನ್ಯ ಅಲ್ಲ ಎಂದಿದ್ದ ನ್ಯಾಯಮೂರ್ತಿಯ ಭಡ್ತಿಗೆ ತಡೆ

ನವದೆಹಲಿ: ಚರ್ಮಕ್ಕೆ ಚರ್ಮ ತಾಗಿದರೆ ಮಾತ್ರ ಲೈಂಗಿಕ ದೌರ್ಜನ್ಯವಾಗಿ ಪರಿಗಣಿಸಬೇಕು, ಅಪ್ರಾಪ್ತ ಬಾಲಕಿಯ ಕೈ ಹಿಡಿದು ಪ್ಯಾಂಟ್‌ ಜಿಪ್‌ ತೆರೆದರೆ ಅದು ಪೋಕ್ಸೋ ಕಾಯ್ದೆಯಡಿ ಲೈಂಗಿಕ ದೌರ್ಜನ್ಯ ಎಂದು ಪರಿಗಣಿಸಲಾಗದು.. ಹೀಗೆ ಸಾಲು ಸಾಲು ವಿವಾದಾತ್ಮಕ ತೀರ್ಪು ನೀಡಿದ್ದ ನ್ಯಾಯಧೀಶರ ಭಡ್ತಿಯನ್ನು ಸುಪ್ರೀಂ ಕೋರ್ಟ್‌ ತಡೆ ಹಿಡಿದಿದೆ. ಬಾಂಬೆ ಹೈ ಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸುತ್ತಿರುವ ನ್ಯಾ. ಪುಷ್ಪಾ ವಿರೇಂದ್ರ ಗನೇಡಿವಾಲ ಅವರನ್ನು ಖಾಯಂ ನ್ಯಾಯಮೂರ್ತಿಯನ್ನಾಗಿ ನೇಮಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮಾಡಿದ್ದ ಶಿಫಾರಸ್ಸನ್ನು ಸುಪ್ರೀಂ ಕೋರ್ಟ್‌ ಕೊಲೀಜಿಯಂ ಹಿಂಪಡೆದಿದೆ. ಪೋಕ್ಸೋ ಹಾಗೂ, ಲೈಂಗಿಕ ದೌರ್ಜನ್ಯದ ಪ್ರಕರಣಗಳಲ್ಲಿ ಭಾರೀ ವಿವಾದಕ್ಕೆ ಕಾರಣವಾದ ತೀರ್ಪು ನೀಡಿದ ಬೆನ್ನಲ್ಲೇ, ಅವರ ಖಾಯಮಾತಿ ಶಿಫಾರಸ್ಸನ್ನು ಹಿಂಪಡೆಯಲಾಗಿದೆ. ಮೂಲಗಳಿಂದ ಮಾಹಿತಿ ಪ್ರಕಾರ ಅವರನ್ನು ಮತ್ತೆ ಜಿಲ್ಲಾ ನ್ಯಾಯಾಲಯಕ್ಕೆ ಹಿಂಬಡ್ತಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. 2019ರ ಫೆಬ್ರವರಿಯಲ್ಲಿ ಅವರು ಹೈ ಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದರು. ನ್ಯಾ. ಪುಷ್ಪಾ ಅವರನ್ನು ಬಾಂಬೆ ಹೈ ಕೋರ್ಟ್‌ನ ಖಾಯಂ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಬೇಕು ಎಂದು ಸುಪ್ರೀಂ ಕೋರ್ಟ್‌ ಸಿಜೆಐ ಎಸ್‌.ಎ ಬೋಬ್ಡೆ ನೇತೃತ್ವದ ಸಮಿತಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಜನವರಿ 19 ರಂದು ನೀಡಿ ತೀರ್ಪೊಂದರಲ್ಲಿ ನ್ಯಾ. ಪುಷ್ಪಾ ಅವರು, 12 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹೊತ್ತ 39 ವರ್ಷದ ವ್ಯಕ್ತಿಯನ್ನು ಪೋಕ್ಸೋ ಕಾಯ್ದೆಯಡಿಯಲ್ಲಿನ ಆರೋಪಗಳಿಂದ ಖುಲಾಸೆಗೊಳಿಸಿದ್ದರು. ಬಟ್ಟೆ ಬಿಚ್ಚದೇ, ಚರ್ಚಕ್ಕೆ ಚರ್ಮ ತಾಗದೇ ಇದ್ದರೆ ಅದನ್ನು ಲೈಂಗಿಕ ಕಿರುಕುಳ ಎಂದು ವ್ಯಾಖ್ಯಾನಿಸಲಾಗದು ಎಂದು ತೀರ್ಪು ನೀಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಅಪ್ರಾಪ್ತ ಬಾಲಕಿಯ ಕೈ ಹಿಡಿಯುವುದು, ಪ್ಯಾಂಟ್‌ ಜಿಪ್‌ ತೆರೆಯುವುದು ಇವೆಲ್ಲಾ ಲೈಂಗಿಕ ದೌರ್ಜನ್ಯದ ವ್ಯಾಖ್ಯಾನದಡಿ ಬರುವುದಿಲ್ಲ ಎಂದು ತೀರ್ಪಿದ್ದರು. ಶುಕ್ರವಾರ ನೀಡಿದ ತೀರ್ಪೊಂದರಲ್ಲಿ, ಪ್ರತಿರೋಧ ಕಂಡು ಬರದೇ ಇದ್ದರೇ ಅದನ್ನು ಅತ್ಯಾಚಾರ ಎನ್ನಲಾಗದು ಎಂದು ನ್ಯಾಯ ನಿರ್ಣಯಿಸಿದ್ದರು. ನ್ಯಾ. ಪುಷ್ಪಾ ಅವರ ಈ ತೀರ್ಪುಗಳು ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ವಾದ ಪ್ರತಿವಾದಕ್ಕೆ ಕಾರಣವಾಗಿತ್ತು. ಅಟಾರ್ನಿ ಜನರಲ್ ಕೆ.ಕೆ ವೇಣುಗೋಪಾಲ್‌ ಕೂಡ ಈ ತೀರ್ಪುಗಳ ಬಗ್ಗೆ ತೀವ್ರ ಕಳವಳ ವ್ಯಕ್ತ ಪಡಿಸಿದ್ದರು. ಇದರ ಬೆನ್ನಲ್ಲೇ ಅವರನ್ನುಖಾಯಮಾತಿ ಮಾಡುವ ಶಿಫಾರಸ್ಸನ್ನು ಹಿಂಪಡೆಯಲಾಗಿದೆ.


from India & World News in Kannada | VK Polls https://ift.tt/2L8nFA2

11 ಗಂಟೆಗೆ ಪ್ರಧಾನಿ ಮೋದಿ ಮನ್ ಕಿ ಬಾತ್: ಕುತೂಹಲ ಕೆರಳಿಸಿದ ಬಜೆಟ್ ಪೂರ್ವ ಸಂವಾದ!

ಹೊಸದಿಲ್ಲಿ: ಕೇಂದ್ರ ಬಜೆಟ್‌ಗೆ ಒಂದು ದಿನ(ಫೆ.01-ಸೋಮವಾರ) ಬಾಕಿ ಇರುವಾಗಲೇ, ಇಂದು(ಜ.31-ಭಾನುವಾರ) ತಮ್ಮ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಮನ್ ಕಿ ಬಾತ್ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಲಿದ್ದು, ದೇಶದ ಜನರೊಂದಿಗೆ ಪ್ರಧಾನಿ ಮೋದಿ ಅವರ ಬಜೆಟ್ ಪೂರ್ವ ಸಂವಾದ ಕುತೂಹಲ ಕೆರಳಿಸಿದೆ. ತ ಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಬಜೆಟ್‌ ಕುರಿತು ಪ್ರಧಾನಿ ಮೋದಿ ಪ್ರಸ್ತಾಪಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದ್ದು, ದೇಶ ಮುಂದಿನ ಒಂದು ವರ್ಷದ ಅವಧಿಯಲ್ಲಿ ಸಾಗಬೇಕಾದ ಮಾರ್ಗದ ಕುರಿತು ಚರ್ಚಿಸಲಿದ್ದಾರೆ ಎನ್ನಲಾಗಿದೆ. ಹೊಸ ವರ್ಷ(2021)ದ ಮೊದಲ ಮನ್ ಕಿ ಬಾತ್ ಕಾರ್ಯಕ್ರಮ ಇದಾಗಿದ್ದು, ಕೊರೊನಾ ವೈರಸ್ ಲಸಿಕೆಯ ಸಾರ್ವತ್ರಿಕ ಬಳಕೆ ಆರಂಭವಾದ ಮೇಲೆ ಪ್ರಧಾನಿ ಮೋದಿ ನಡೆಸುತ್ತಿರುವ ಮೊದಲ ಮನ್ ಕಿ ಬಾತ್ ಕಾರ್ಯಕ್ರಮವೂ ಹೌದು. ಲಸಿಕೆಯ ಸಾರ್ವತ್ರಿಕ ಬಳಕೆ ಹಾಗೂ ಲಸಿಕೆ ವಿತರಣೆಗಾಗಿ ಕೇಂದ್ರ ಸರ್ಕಾರದ ಸಿದ್ಧತೆಯ ಕುರಿತೂ ಪ್ರಧಾನಿ ಮೋದಿ ಇಂದಿನ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಚರ್ಚೆ ನಡೆಸುವ ಸಾಧ್ಯತೆ ಇದೆ.


from India & World News in Kannada | VK Polls https://ift.tt/3akDex6

10 ವರ್ಷ ತಾಯಿಯ ಶವ ಫ್ರೀಜರ್‌ನಲ್ಲಿ ಬಚ್ಚಿಟ್ಟಿದ್ದ ಮಹಿಳೆ: ಕಾರಣ ಕೇಳಿದ್ರೆ ಬೆಚ್ಚಿ ಬೀಳ್ತಿರಾ!

ಟೋಕಿಯೋ: ಮನೆ ಬಿಟ್ಟು ಹೋಗಬೇಕಾಗುತ್ತದೆ ಎಂಬ ಭಯದಿಂದ ಮಹಿಳೆಯೋರ್ವಳು 10 ವರ್ಷದಿಂದ ತನ್ನ ತಾಯಿಯ ಶವವನ್ನು ಫ್ರೀಜರ್‌ನಲ್ಲಿ ಮುಚ್ಚಿಟ್ಟಿದ್ದ ಭಯಾನಕ ಘಟನೆ ಜಪಾನ್‌ನಲ್ಲಿ ನಡೆದಿದೆ. ರಾಜಧಾನಿ ಟೋಕಿಯೋದ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸಿಸುತ್ತಿದ್ದ 48 ವರ್ಷದ , ಮನೆ ಬಿಟ್ಟು ಹೋಗಬೇಕಾಗುತ್ತದೆ ಎಂಬ ಕಾರಣಕ್ಕೆ 10 ವರ್ಷದ ಹಿಂದೆ ಮೃತಪಟ್ಟಿದ್ದ ತನ್ನ ತಾಯಿಯ ಶವವನ್ನು ಫ್ರೀಜರ್‌ನಲ್ಲಿ ಮುಚ್ಚಿಟ್ಟಿದ್ದಳು ಎನ್ನಲಾಗಿದೆ. ಯೋಶಿನೊ ವಾಸವಿದ್ದ ಅಪಾರ್ಟ್‌ಮೆಂಟ್ ಲೀಸ್ ಪೇಪರ್‌ ಮೇಲೆ ಆಕೆಯ ತಾಯಿಯ ಹೆಸರಿತ್ತು. ಆಕೆಯ ನಿಧನದ ನಂತರ ಯೋಶಿನೊ ಈ ಅಪಾರ್ಟ್‌ಮೆಂಟ್‌ನ್ನು ಬಿಟ್ಟು ಹೋಗಬೇಕಿತ್ತು. ಆದರೆ ಆ ಮನೆ ಬಿಡಲು ಮನಸ್ಸಿನಲ್ಲದ ಯೋಶಿನೊ, ಆಕೆಯ ಸಾವನ್ನೇ ಜಗತ್ತಿನಿಂದ ಮುಚ್ಚಿಟ್ಟು 10 ವರ್ಷ ಅದೇ ಮನೆಯಲ್ಲಿ ವಾಸಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಬಾಡಿಗೆ ಕಟ್ಟಲು ಸಾಧ್ಯವಾಗದ ಯೋಶಿನೊಳನ್ನು ಅಪಾರ್ಟ್‌ಮೆಂಟ್ ಮಾಲೀಕ ಒತ್ತಾಯಪೂರ್ವಕವಾಗಿ ಮನೆ ಖಾಲಿ ಮಾಡಿಸಿದ್ದಾನೆ. ಬಳಿಕ ಕೆಲಸಗಾರ ಮನೆ ಸ್ವಚ್ಛ ಮಾಡುತ್ತಿದ್ದ ವೇಳೆ ಫ್ರೀಜರ್‌ನಲ್ಲಿ 10 ವರ್ಷ ಹಳೆಯ ಮೃತದೇಹ ಪತ್ತೆಯಾಗಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ ಅಪಾರ್ಟ್‌ಮೆಂಟ್ ಮಾಲೀಕ, ಇದು ಯೋಶಿನೊ ಅವರ ತಾಯಿಯ ಮೃತದೇಹ ಎಂಬುದನ್ನು ಖಚಿತಪಡಿಸಿದ್ದಾನೆ. ಕೂಡಲೇ ಯೋಶಿನೋಳನ್ನು ವಶಕ್ಕೆ ಪಡೆದ ಪೊಲೀಸರು ಆಕೆಯನ್ನು ವಿಚಾರಣೆಗೆ ಗುರಿಪಡಿಸಿದ್ದಾರೆ. ವಿಚಾರಣೆ ಸಂದರ್ಭದಲ್ಲಿ 10 ವರ್ಷದಿಂದ ತಾಯಿಯ ಮೃತದೇಹ ಫ್ರೀಜರ್‌ನಲ್ಲಿಟ್ಟಿದ್ದಾಗಿ ಸತ್ಯ ಒಪ್ಪಿಕೊಂಡಿರುವ ಯೋಶಿನೊ, ಮನೆ ಬಿಡಲು ಮನಸ್ಸಿಲ್ಲದೇ ಹೀಗೆ ಮಾಡಿದ್ದಾಗಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾಳೆ. ಯೋಶಿನೊ ತಾಯಿ ತಮ್ಮ 60ನೇ ವಯಸ್ಸಿನಲ್ಲಿ ಮೃತಪಟ್ಟಿದ್ದು, ಯೋಶಿನೊ ಕಳೆದ 10 ವರ್ಷಗಳಿಂದ ತನ್ನ ತಾಯಿಯ ಮೃತದೇಹದೊಮದಿಗೆ ಜೀವನ ನಡೆಸುತ್ತಿದ್ದಳು. ಸದ್ಯ ಯೋಶಿನೋಳನ್ನು ವಶಕ್ಕೆ ಪಡೆದಿರುವ ಪೊಲೀಸರು, ವಿಚಾರಣೆ ಮುಂದುವರೆಸಿದ್ದಾರೆ.


from India & World News in Kannada | VK Polls https://ift.tt/3cnMWRW

ಕೊರೊನಾ ನಂತರ ಹುಟ್ಟಲಿರುವ ಹೊಸ ಜಗತ್ತಿನಲ್ಲಿ ಭಾರತಕ್ಕೆ ಮುಖ್ಯ ಪಾತ್ರ: ಪ್ರಧಾನಿ ಮೋದಿ!

ಹೊಸದಿಲ್ಲಿ: ಮಾರಕ ಕೊರೊನಾ ವೈರಸ್‌ ಹಾವಳಿಯ ನಂತರದ ಜಗತ್ತಿನಲ್ಲಿ ಭಾರೀ ಬದಲಾವಣೆಗಳಾಗಲಿದ್ದು, ಈ ಬದಲಾದ ಜಗತ್ತಿನಲ್ಲಿ ಭಾರತಕ್ಕೆ ಅತ್ಯಂತ ಪ್ರಮುಖ ಪಾತ್ರ ದೊರೆಯಲಿದೆ ಎಂದು ಹೇಳಿದ್ದಾರೆ. ನಿನ್ನೆ(ಜ.30-ಶನಿವಾರ) ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(ಎನ್‌ಡಿಎ)ದ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಮುಂದಿನ ಒಂದು ದಶಕ ಭಾರತಕ್ಕೆ ಅವಕಾಶ ಹಾಗೂ ಸವಾಲುಗಳನ್ನು ಹೊತ್ತು ತರಲಿದೆ ಎಂದು ಹೇಳಿದರು. ಕೊರೊನಾ ವೈರಸ್ ಹಾವಳಿಗೆ ಅಂತ್ಯ ಹಾಡುವ ಸಮಯ ಬಂದಿದೆ. ಕೊರೊನಾ ಬಳಿಕ ಹೊಸದೊಂದು ಜಗತ್ತು ಹುಟ್ಟಲಿದ್ದು, ಈ ಹೊಸ ಜಗತ್ತಿನಲ್ಲಿ ಭಾರತದ ಒಪಾತ್ರ ಅತ್ಯಂತ ಮಹತ್ವದ್ದಾಗಿರಲಿದೆ ಎಂದು ಪ್ರಧಾನಿ ಮೋದಿ ನುಡಿದರು. ಈ ಹೊಸ ಜಗತ್ತು ನೀಡುವ ಅವಕಾಶ ಮತ್ತು ಸವಾಲುಗಳನ್ನು ಸ್ವೀಕರಿಸಲು ನಾವು ಸಿದ್ಧತೆ ಆರಂಭಿಸಬೇಕು. ಜಾಗತಿಕ ಜವಾಬ್ದಾರಿ ನಿಭಾಯಿಸುವುದಷ್ಟೇ ಅಲ್ಲದೇ ನಮ್ಮ ಬೆಳವಣಿಗೆಯತ್ತಲೂ ನಾವು ದಾಪುಗಾಲು ಹಾಕಬೇಕು ಎಂದು ಪ್ರಧಾನಿ ಮೋದಿ ಸಲಹೆ ನೀಡಿದರು. ಎರಡನೇ ಮಹಾಯುದ್ಧದ ಬಳಿಕ ಜಗತ್ತು ಬದಲಾಗಿತ್ತು. ಯುದ್ಧೋತ್ತರ ಜಾಗತಿಕ ರಾಜಕೀಯ, ಅರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿಗಳು ಬದಲಾದವು. ಹವು ರಾಷ್ಟ್ರಗಳು ಏಕಾಏಕಿ ಮುನ್ನೆಲೆಗೆ ಬಂದು ಜಗತ್ತನ್ನು ಆಳತೊಡಗಿದವು. ಅದೇ ರೀತಿ ಕೊರೊನಾ ಹಾವಳಿ ಬಳಿಕವೂ ಜಗತ್ತು ಇಂತದ್ದೇ ಬದಲಾವಣೆಗಳನ್ನು ಕಾಣಲಿದೆ ಎಂದು ಪ್ರಧಾನಿ ಹೇಳಿದರು. ಯಾವ ರಾಷ್ಟ್ರ ಸಮಯಕ್ಕೂ ಮೊದಲೇ ಈ ಬದಲಾವಣೆಗಳನ್ನು ಗ್ರಹಿಸಿ ಸಿದ್ಧತೆ ಆರಂಭೀಸುತ್ತದೆಯೋ ಅದು ಜಾಗತಿಕ ಮನ್ನಣೆ ಪಡೆಯುತ್ತದೆ. ಈ ಸಿದ್ಧಥೆಯನ್ನು ಈಗಾಗಲೇ ಆರಂಭಿಸಿದೆ ಎಂದು ಹೇಳುವ ಮೂಲಕ ಭಾರತ ಜಾಗತಿಕ ನಾಯಕತ್ವವಹಿಸಿಕೊಳ್ಳಲು ಸಿದ್ಧ ಎಂಬ ಸಂದೇಶವನ್ನು ಪ್ರಧಾನಿ ಮೋದಿ ರವಾನಿಸಿದರು.


from India & World News in Kannada | VK Polls https://ift.tt/3tcYLjF

ಭಾರತ-ಇಂಗ್ಲೆಂಡ್ ಟೆಸ್ಟ್‌ ಸರಣಿಯಲ್ಲಿ ಗೆಲ್ಲೋ ಕುದುರೆ ಹೆಸರಿಸಿದ ಶಾ!

ಹೊಸದಿಲ್ಲಿ: ಚೊಚ್ಚಲ ಆವೃತ್ತಿಯ ಐಸಿಸಿ ಟೆಸ್ಟ್‌ ಚಾಂಪಿಯನ್‌ಷಿಪ್‌ ಟೂರ್ನಿಯ ಭಾಗವಾಗಿ ಇಂಗ್ಲೆಂಡ್‌ ತಂಡ ಭಾರತ ಪ್ರವಾಸ ಕೈಗೊಂಡಿದ್ದು ಫೆಬ್ರವರಿ 5ರಿಂದ ನಾಲ್ಕು ಪಂದ್ಯಗಳ ಮಹತ್ವದ ಸರಣಿಯಲ್ಲಿ ಪೈಪೋಟಿ ನಡೆಸಲಿದೆ. ಟೆಸ್ಟ್‌ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣ ಆತಿಥ್ಯ ವಹಿಸಲಿದೆ. ಬಯೋ ಸೆಕ್ಯೂರ್‌ ವಾತಾವರಣದ ಅಡಿಯಲ್ಲಿ ಸರಣಿ ಜರುಗಲಿದ್ದು, 3ನೇ ಮತ್ತು ನಾಲ್ಕನೇ ಟೆಸ್ಟ್‌ ಪಂದ್ಯಕ್ಕೆ ಅಹ್ಮದಾಬಾದ್‌ನ ನೂತನ ಸರ್ದಾರ್ ಪಟೇಲ್ ಕ್ರೀಡಾಂಗಣ ಆತಿಥ್ಯ ವಹಿಸಿದೆ. ಇನ್ನು ಟೆಸ್ಟ್‌ ಕ್ರಿಕೆಟ್‌ ಸರಣಿ ಬಳಿಕ ಇತ್ತಂಡಗಳು ಇದೇ ವರ್ಷದ ಅಂತ್ಯದಲ್ಲಿ ನಡೆಯಲಿರುವ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗೆ ಸಜ್ಜಾಗುವ ನಿಟ್ಟಿನಲ್ಲಿ 5 ಪಂದ್ಯಗಳ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ಸರಣಿಯಲ್ಲಿ ಕಾದಾಟ ನಡೆಸಲಿವೆ. ಬಳಿಕ ಪುಣೆಯಲ್ಲಿ 3 ಪಂದ್ಯಗಳ ಒಡಿಐ ಸರಣಿ ಜರುಗಲಿದೆ. ಭಾರತ-ಇಂಗ್ಲೆಂಡ್‌ ನಡುವಣ ಟೆಸ್ಟ್‌ ಸರಣಿ ಆರಂಭಕ್ಕೆ ಕೇವಲ ಬೆರಳೆಣಿಕೆಯ ದಿನಗಳು ಮಾತ್ರವೇ ಬಾಕಿ ಇರುವಂತಹ ಸಂದರ್ಭದಲ್ಲಿ ಹಲವು ಕ್ರಿಕೆಟ್‌ ಪಂಡಿತರು ಮತ್ತು ಮಾಜಿ ಆಟಗಾರರು ತಮ್ಮ ಆಯ್ಕೆಯ ತಂಡಗಳನ್ನು ಕಟ್ಟುತ್ತಿದ್ದಾರೆ. ಅಷ್ಟೇ ಅಲ್ಲದೆ ಸರಣಿಯಲ್ಲಿ ಗೆಲ್ಲುವ ಕುದುರೆ ಯಾವುದು ಎಂಬುದನ್ನೂ ಅಂದಾಜಿಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಇಂಗ್ಲೆಂಡ್‌ ತಂಡದ ಮಾಜಿ ಆಲ್‌ರೌಂಡರ್‌ ಒವೈಸ್‌ ಶಾ, ಇಂಡೊ-ಇಂಗ್ಲೆಂಡ್‌ ಟೆಸ್ಟ್‌ ಸರಣಿಯಲ್ಲಿ ಪ್ರಶಸ್ತಿ ಗೆದ್ದುಕೊಳ್ಳುವ ತಂಡ ಯಾವುದು ಮತ್ತು ಏಕೆ? ಎಂಬುದನ್ನು ವಿವರಿಸಿದ್ದಾರೆ. 42 ವರ್ಷದ ಮಾಜಿ ಕ್ರಿಕೆಟಿಗ ಇಂಗ್ಲೆಂಡ್ ತಂಡದ ಪರ 6 ಟೆಸ್ಟ್‌ ಮತ್ತು 71 ಒಡಿಐ ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದು, ಮುಂಬರುವ ಸರಣಿಯಲ್ಲಿ ವಿರಾಟ್‌ ಕೊಹ್ಲಿ ಸಾರಥ್ಯದ 2-1 ಅಂತರದಲ್ಲಿ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ. "ಟೀಮ್‌ ಇಂಡಿಯಾಗೆ ಅವರ ತವರು ನೆಲದಲ್ಲಿ ಸವಾಲೊಡ್ಡಬಲ್ಲ ಬೌಲರ್‌ಗಳು ಇಂಗ್ಲೆಂಡ್‌ ತಂಡದಲ್ಲಿ ಇಲ್ಲ ಎಂಬುದು ನನ್ನ ಅಭಿಪ್ರಾಯ. ಹೀಗಾಗಿ ಸರಣಿಯಲ್ಲಿ ಭಾರತ ತಂಡ 2-1 ಅಂತರದ ಜಯ ದಾಖಲಿಸುವ ಸಾಧ್ಯತೆ ಹೆಚ್ಚಿದೆ," ಎಂದು ಸ್ಪೋರ್ಟ್ಸ್‌ ಟುಡೇ ಕಾರ್ಯಕ್ರಮದಲ್ಲಿ ಒವೈಸ್‌ ಹೇಳಿದ್ದಾರೆ. ಅಂದಹಾಗೆ ಎರಡೂ ತಂಡಗಳು ಟೆಸ್ಟ್‌ ಕ್ರಿಕೆಟ್‌ನಲ್ಲಿ ಆತ್ಮವಿಶ್ವಾಸದ ಅಲೆಯಲ್ಲಿವೆ. ಭಾರತ ತಂಡ ಇತ್ತೀಚೆಗೆ ಆಸ್ಟ್ರೇಲಿಯಾ ಪ್ರವಾಸದಲ್ಲಿ 4 ಪಂದ್ಯಗಳ ಟೆಸ್ಟ್ ಸರಣಿ ಆಡಿ 2-1 ಅಂತರದ ಐತಿಹಾಸಿಕ ಜಯದೊಂದಿಗೆ ತಾಯ್ನಾಡಿದೆ ಹಿಂದಿರುಗಿದೆ. ಮತ್ತೊಂದೆಡೆ ಶ್ರೀಲಂಕಾ ಪ್ರವಾಸ ಮುಗಿಸಿ ಬಂದಿರುವ ಜೋ ರೂಟ್‌ ಸಾರಥ್ಯದ ಇಂಗ್ಲೆಂಡ್‌ 2-0 ಅಂತರದ ವೈಟ್‌ವಾಶ್‌ ಗೆಲುವಿನೊಂದಿಗೆ ಉಪಖಂಡಗಳ ಪಿಚ್‌ಗೆ ಹೊಂದಿಕೊಂಡಿರುವ ಆತ್ಮವಿಶ್ವಾಸದಲ್ಲಿ ಭಾರತಕ್ಕೆ ಕಾಲಿಟ್ಟಿದೆ. "ಶ್ರೀಲಂಕಾ ವಿರುದ್ಧದ ಸರಣಿ ಗೆಲುವಿನಿಂದ ಇಂಗ್ಲೆಂಡ್‌ ತಂಡದ ಆತ್ಮವಿಶ್ವಾಸ ಹೆಚ್ಚಾಗಿರುವುದು ಖಂಡಿತಾ. 2-0 ಅಂತರದ ಸರಣಿ ಗೆಲುವ ನಿಜಕ್ಕೂ ಮೆಚ್ಚುವಂತಹ ಸಾಧನೆ. ಏಕೆಂದರೆ ಅಲ್ಲಿ ನೀಡಲಾಗಿದ್ದ ಪಿಚ್‌ಗಳು ಮೊದಲ ದಿನವೇ ಸ್ಪಿನ್ನರ್‌ಗಳಿಗೆ ತಿರುವು ನೀಡುತಿತ್ತು. ಟೆಸ್ಟ್‌ ಕ್ರಿಕೆಟ್‌ನಲ್ಲಿ ಇದು ಸಹಜವಲ್ಲ. ಇಷ್ಟು ಸವಾಲಿನ ಸ್ಥಿತಿಯಲ್ಲೂ ಇಂಗ್ಲೆಂಡ್‌ ಗೆದ್ದು ಬಂದಿರುವುದು ಗಮನಾರ್ಹ," ಎಂದು ಶಾ ವಿವರಿಸಿದ್ದಾರೆ. "ಆದರೆ, ತಂಡದಲ್ಲಿರುವ ಸ್ಪಿನ್ ಬೌಲರ್‌ಗಳಾದ ಡಾಮ್‌ ಬೆಸ್ ಮತ್ತು ಜಾಕ್‌ ಲೀಚ್ ತಮ್ಮ ಶ್ರೇಷ್ಠ ಪ್ರದರ್ಶನ ನೀಡದೇ ಇದ್ದರೂ ಇಂಗ್ಲೆಂಡ್‌ ಟೆಸ್ಟ್ ಸರಣಿ ಗೆದ್ದಿದೆ. ಅವರು ಸ್ಪಿನ್‌ ಪಿಚ್‌ಗಳಲ್ಲಿ ಸಾಧಾರಣ ಪ್ರದರ್ಶನವನ್ನೇ ನೀಡಿದರು. ಆದರೆ ನಮ್ಮ ಬ್ಯಾಟ್ಸ್‌ಮನ್‌ಗಳು ಸ್ಪಿನ್ನರ್‌ಗಳ ಎದುರು ಅಮೋಘವಾಗಿ ಆಡಿದ್ದಾರೆ. ಇನ್ನು ಭಾರತ ವಿರುದ್ಧದ ಸರಣಿ ಬಗ್ಗೆ ಹೇಳುವುದಾದರೆ ಟೀಮ್ ಇಂಡಿಯಾದ ಬಲಿಷ್ಠ ಬ್ಯಾಟಿಂಗ್‌ ವಿಭಾಗಕ್ಕೆ ಸವಾಲಾಗಬಲ್ಲ ಸ್ಪಿನ್ನರ್‌ಗಳು ಇಂಗ್ಲೆಂಡ್‌ ತಂಡದಲ್ಲಿ ಇಲ್ಲ," ಎಂದು ಶಾ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಇಂಡೊ-ಇಂಗ್ಲೆಂಡ್‌ ಟೆಸ್ಟ್‌ ಸರಣಿ ವೇಳಾಪಟ್ಟಿ
  • ಮೊದಲ ಟೆಸ್ಟ್‌: ಫೆ.5-9ರವರೆಗೆ (ಚೆನ್ನೈ)
  • ಎರಡನೇ ಟೆಸ್ಟ್‌: ಫೆ.13-17ರವರೆಗೆ (ಚೆನ್ನೈ)
  • ಮೂರನೇ ಟೆಸ್ಟ್‌ (ಡೇ-ನೈಟ್‌): ಫೆ.24-28 (ಅಹಮದಾಬಾದ್)
  • ನಾಲ್ಕನೇ ಟೆಸ್ಟ್‌: ಮಾ.04-08ರವರೆಗೆ (ಅಹಮದಾಬಾದ್)


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3ta9Oub

ಏಷ್ಯನ್ ಕ್ರಿಕೆಟ್‌ ಕೌನ್ಸಿಲ್‌ ಅಧ್ಯಕ್ಷರಾಗಿ ಜೂನಿಯರ್‌ ಶಾ ನೇಮಕ!

ಹೊಸದಿಲ್ಲಿ: ಏಷ್ಯನ್ ಕ್ರಿಕೆಟ್‌ ಕೌನ್ಸಿಲ್‌ (ಎಸಿಸಿ) ವಿಡಿಯೋ ಕಾನ್ಫರೆನ್ಸ್‌ ಮೂಲಕ ನಡೆಸಿದ ತನ್ನ ವಾರ್ಷಿಕ ಮಹಾಸಭೆಯಲ್ಲಿ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ () ಕಾರ್ಯದರ್ಶಿ ಜಯ್‌ ಶಾ ಅವರನ್ನು ತನ್ನ ನೂತನ ಅಧ್ಯಕ್ಷರನ್ನಾಗಿ ಶನಿವಾರ ನೇಮಕ ಮಾಡಿದೆ. ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರ ಪುತ್ರ ಜಯ್‌ ಶಾ ಇದೀಗ ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ ಅಧ್ಯಕ್ಷ ಕೂಡ ಆಗಿರುವ ನಝ್ಮುಲ್ ಹಸನ್‌ ಅವರ ನಂತರ ಎಸಿಸಿ ಅಧ್ಯಕ್ಷ ಸ್ಥಾನ ಅಲಂಕರಿಸಲಿದ್ದಾರೆ. "32 ವರ್ಷದವರಾದ ಜಯ್ ಶಾ, ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ನ ಅತ್ಯಂತ ಯುವ ಆಡಳಿತಾಧಿಕಾರಿಯಾಗಿ ನೇಮಕಗೊಂಡಿದ್ದಾರೆ," ಎಂದು ಬಿಸಿಸಿಐ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಕುತೂಹಲದ ಸಂಗತಿ ಎಂದರೆ ಬಿಸಿಸಿಐ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ನಾಲ್ಕು ಬಾರಿ ಅವರನ್ನು ಎಸಿಸಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದು, 2 ಬಾರಿ ಚುನಾಯಿಸಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದೆ. "ಈ ಗೌರವವನ್ನು ಸ್ವೀಕರಿಸುತ್ತೇನೆ. ಬಿಸಿಸಿಐನಲ್ಲಿನ ನನ್ನ ಸಹೋದ್ಯೋಗಿಗಳು ನನ್ನ ಮೇಲೆ ಭರವಸೆ ಇಟ್ಟು ಈ ಕೆಲಸಕ್ಕೆ ಆಯ್ಕೆ ಮಾಡಿರುವುದಕ್ಕೆ ಧನ್ಯವಾದಗಳು. ಕೆಲ ಸಂಸ್ಥೆಗಳೊಂದಿಗೆ ಕೈ ಜೋಡಿಸಿ ಈ ವಿಭಾಗದಲ್ಲಿ ಕ್ರೀಡೆಯ ಅಭಿವೃದ್ಧಿ ಮತ್ತು ಪ್ರಚಾರದ ಕಡೆಗೆ ಕೆಲಸ ಮಾಡಲಿದ್ದೇನೆ," ಎಂದು ಜಯ್‌ ಶಾ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಎದೆ ನೋವಿನ ಕಾರಣ ಕೋಲ್ಕತಾದ ಖಾಸಗಿ ಆಸ್ಪತ್ರೆಯೊಂದರಲ್ಲಿ ಎರಡನೇ ಬಾರಿ ಶಸ್ತ್ರಚಿಕಿತ್ಸೆಗೆ ಒಳಪಟ್ಟಿರುವ ಬಿಸಿಸಿಐನ ಹಾಲಿ ಅಧ್ಯಕ್ಷ ಸೌರವ್‌ ಗಂಗೂಲಿ ಕೂಡ ಜಯ್‌ ಶಾ ಅವರಿಗೆ ಶುಭಾಶಯ ತಿಳಿಸಿದ್ದಾರೆ. "ನಾವು ಬಹಳಾ ಹತ್ತಿರದಲ್ಲಿ ಕೆಲಸ ಮಾಡಿದ್ದೇವೆ. ಕ್ರಿಕೆಟ್‌ ಆಟದ ಅಭಿವೃದ್ಧಿ ಕಡೆಗೆ ಅವರು ಹೊಂದಿರುವ ಯೋಜನೆ ಬಗ್ಗೆ ನನಗೆ ಸ್ಪಷ್ಟತೆ ಇದೆ. ಚಂಡೀಗಢ, ಉತ್ತರಾಖಂಡ್ ಮತ್ತು ನಾರ್ತ್‌-ಈಸ್ಟ್‌ ರಾಜ್ಯಗಳಲ್ಲಿ ಕ್ರಿಕೆಟ್‌ ಆಟದ ಅಭಿವೃದ್ಧಿ ಕಡೆಗೆ ಜಯ್‌ ಅವರು ಕೈಗೊಂಡ ಯೋಜನೆಗಳು ತಂದುಕೊಟ್ಟ ಯಶಸ್ಸನ್ನು ನಾನು ಕಂಡಿದ್ದೇನೆ. ಅಲ್ಲಿ ಕ್ರಿಕೆಟ್‌ಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಅವರು ಅಭಿವೃದ್ಧಿ ಪಡಿಸಿದ್ದರು. ಈಗ ಮುಂದಿನ ಪಯಣ ನಿಜಕ್ಕೂ ಸವಾಲಿನದ್ದು. ಕೊರೊನಾ ವೈರಸ್‌ ತಂದೊಡ್ಡಿರುವ ಸಂಕಷ್ಟದ ಸಮಯದಲ್ಲೂ ಅವರು ಸವಾಲುಗಳನ್ನು ಮೆಟ್ಟಿನಿಲ್ಲುತ್ತಾರೆಂಬ ವಿಶ್ವಾಸ ನನಗಿದೆ. ಏಷ್ಯಾ ಭಾಗದಲ್ಲಿ ಕ್ರಿಕೆಟ್‌ನ ಅಭಿವೃದ್ಧಿ ಕಡೆಗೆ ಕೆಲಸ ಮಾಡುವ ಮಹತ್ವದ ಕೆಲಸಕ್ಕೆ ಜಯ್‌ ಶಾ ಅವರಿಗೆ ಬಿಸಿಸಿಐ ಸಂಪೂರ್ಣ ಬೆಂಬಲ ನೀಡಲಿದೆ," ಎಂದು ಸೌರವ್‌ ಹೇಳಿದ್ದಾರೆ. ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ ಅಧ್ಯಕ್ಷರಾಗಿ ಆಯ್ಕೆಯಾದ ಭಾರತದ 7ನೇ ಆಡಳಿತಾಧಿಕಾರಿ ಆಗಿರುವ ಜಯ್‌ ಶಾ, ಎಸಿಸಿಐ 28ನೇ ಅಧ್ಯಕ್ಷರಾಗಿ ಕೆಲಸ ಮಾಡಲಿದ್ದಾರೆ. ಇದಕ್ಕೂ ಮುನ್ನ ಎನ್‌ಕೆಪಿ ಸಾಳ್ವೆ (1983-85), ಮಾಧವ್‌ರಾವ್‌ ಸಿಂಧಿಯಾ (1993), ಐಎಸ್‌ ಬಿಂದ್ರಾ (1993-97), ಜಗಮೋಹನ್ ದಾಲ್ಮಿಯಾ (2004-05), ಶರದ್‌ ಪವಾರ್ (2006) ಮತ್ತು ಎನ್‌ ಶ್ರೀನಿವಾಸನ್ (2012-14) ಎಸಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಇನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಒಬ್ಬರು ಎಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಇದೇ ಮೊದಲು. ಸಾಮಾನ್ಯವಾಗಿ ಬಿಸಿಸಿಐನ ಅಧ್ಯಕ್ಷ ಸ್ಥಾನದಲ್ಲಿ ಇರುವವರೇ ಎಸಿಸಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುತ್ತಿದ್ದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/39xFLVg

ಸೋಲು ಎಂದರೆ ಜೀವನದ ಕೊನೆಯಲ್ಲ, ಬದಲಿಗೆ ಮರುಹುಟ್ಟು ಎಂದುಕೊಳ್ಳಬೇಕು...

ಕೆಲವು ಪದಗಳು ಕಿವಿಗೆ ಬೀಳುತ್ತಲೇ ತಲೆಯಲ್ಲಿ ಪದಗಳನ್ನಾಡಿಸುತ್ತದೆ. ಇತ್ತೀಚೆಗೆ ಸ್ನೇಹಿತರೊಬ್ಬರು Resilience Project ಬಗ್ಗೆ ಹೇಳುವಾಗ ಏನೇನೆಲ್ಲಾ ಆಲೋಚನೆಗಳು ಮನಸ್ಸಿಗೆ ಬಂತು. ಕುತೂಹಲದಿಂದ ಇದಕ್ಕೆ ಕನ್ನಡದಲ್ಲಿ ಏನಂತಾರೆ ಅಂತ ಹುಡುಕಿದೆ. Resilience ಎಂದರೆ ಸ್ಥಿತಿಸ್ಥಾಪಕತ್ವ ಅಂತ. ಹೆಚ್ಚು ಕಮ್ಮಿ ಆಂಗ್ಲದಷ್ಟೇ ಕಾಂಪ್ಲಿಕೇಟೆಡ್ ಪದದಂತೆ ಕೇಳಿಸಿದರೂ ಅದನ್ನು ತುಂಡು ಹಾಕಿದ ಮೇಲೆ ಇನ್ನಷ್ಟು ಆಲೋಚನೆಗಳು ಬಂದವು ಎಂದರೆ ಸುಳ್ಳಲ್ಲ. ಮೊದಲಿಗೆ Resilience ಪದದ ಅರ್ಥ ಏನು ಅಂತ ತಿಳಿದುಕೊಳ್ಳೋಣ. ಕುಗ್ಗಿಹೋದ ಸನ್ನಿವೇಶದಿಂದ ಮೇಲೆದ್ದು ಬರುವುದು ಅಂತ. ಸ್ನೇಹಿತರು ಹೇಳಿದ ಪ್ರಾಜೆಕ್ಟ್'ನಲ್ಲಿ ಈ Resilience ಎಂಬುದು ಒಂದು ಐಟಿ ಪ್ರಾಜೆಕ್ಟ್ ಕುರಿತು. ಏನೋ ವ್ಯತ್ಯಾಸವಾಗಿ ಕಾಲೆತ್ತುಕೊಂಡ Server ಅನ್ನು ಮತ್ತೆ ಯಥಾಸ್ಥಿತಿಗೆ ತರುವುದು ಅಂತ. ಕಾಲೆತ್ತುಕೊಂಡ ಮುಂಚಿನ ಉತ್ತಮ ಸ್ಥಿತಿಗೆ ಮರಳಿ ಸ್ಥಾಪನೆಗೈಯುವುದೇ ಈ ಸ್ಥಿತಿಸ್ಥಾಪಕತ್ವ. ಇದೇನೋ ಕಂಪ್ಯೂಟರ್ ಜಗತ್ತಿನ ವಿಷಯವಾಯ್ತು. ಆದರೆ ನಮ್ಮ ದಿನನಿತ್ಯದಲ್ಲಿ ಇಂಥವು ಎಲ್ಲಿ ಕಾಣಬಹುದು ಅಂತ ಆಲೋಚನೆ ಬಂದಲ್ಲಿ, ನಾವು ಕೇಳೋದೇ ಎಲ್ಲಿ ಕಾಣುವುದಿಲ್ಲ ಅಂತ ಹೇಳಿ ಅಂತ; ಅಷ್ಟೇ. ಹಾಗಂತ ಜೀವನದ ಎಲ್ಲೆಡೆ ಸ್ಥಿತಿಗತಿಗಳು ಮುಂಚಿನ ಹಾಗೆ ಆಗೋದಿಲ್ಲ. ಚಿಕ್ಕ ಉದಾಹರಣೆ ತೆಗೆದುಕೊಂಡರೆ ಏಕಲವ್ಯ ಬೆರಳನ್ನು ಕತ್ತರಿಸಿಕೊಟ್ಟ ಮೇಲೆ ಮತ್ತೆ ಅವನ ಬೆರಳು ಮೊದಲಿನಂತೆ ಬೆಳೆದು ನಿಲ್ಲಲಿಲ್ಲ. ಕಣ್ಣಪ್ಪನಿಗೆ ಮತ್ತೆ ಕಣ್ಣುಗಳು ಬಂದವು ಸರಿ. ಭಕ್ತ ಕುಂಬಾರನ ಕಥೆಯಲ್ಲಿ ಅವನಾಗಿಯೇ ಕತ್ತರಿಸಿಕೊಂಡ ಹಸ್ತಗಳೂ ಮರಳಿ ಬಂದವು ಸರಿ. ಇಂಥದ್ದೇ ಉದಾಹರಣೆಗಳು ಜೀವಿಗಳಲ್ಲಿ ಇದೆ. ಉದಾಹರಣೆಗೆ ಮಣ್ಣುಹುಳ ಅಥವಾ ಎರೆಹುಳ. ಒಂದು ಎರೆಹುಳು ಎರಡು ಭಾಗವಾಗಿ ಕತ್ತರಿಸಿತು ಎಂದಾಗ ಅವು ಎರಡು ಜೀವಿಗಳಾಗಿ ತೆವಳಿ ಹೋಗುವುದಿಲ್ಲ. ಎರೆಹುಳುವಿನ ತಲೆ ಇರುವ ಭಾಗ ಬಾಲವನ್ನು ಮತ್ತೆ ಮೂಡಿಸಿಕೊಂಡು ಬೆಳೆಯಬಲ್ಲದು. ಮಿಕ್ಕ ಭಾಗ ಯಾವುದೋ ಹಕ್ಕಿ ಅಥವಾ ಇರುವೆಯ ಪಾಲು ಬಿಡಿ. ಎರೆಹುಳುವಿನಂತೆಯೇ ಒಂದು ಹಲ್ಲಿಯೂ ಸಹ ತನ್ನ ಕತ್ತರಿಸಿಹೋದ ಬಾಲವನ್ನು ಮತ್ತೆ ಬೆಳೆಸಿಕೊಳ್ಳಬಹುದು. ಪುರಾಣ ಪುಣ್ಯಕಥೆಗಳಲ್ಲಿ ಇಂಥಾ ಸ್ಥಿತಿಸ್ಥಾಪಕತ್ವದ ಅಲ್ಲ ಮತ್ತು ಹೌದುಗಳು ಬಹಳಷ್ಟು ಸನ್ನಿವೇಶಗಳಲ್ಲಿ ಕಾಣಬಹುದು. ಪಾರ್ವತೀಸುತನ ತಲೆಯನ್ನು ಈಶ್ವರನು ತಂದಾಗ ಅದು ಮತ್ತೆ ಹುಟ್ಟಿ ಬರಲಿಲ್ಲ. ಆನೆಯ ತಲೆಯೇ ಬೇಕಾಯ್ತು. ಯಕ್ಷಪ್ರಶ್ನೆಯ ಸಮಯದಲ್ಲಿ ಉದ್ದಟತನ ತೋರಿದ ನಾಲ್ಕೂ ಪಾಂಡವರು ಪ್ರಾಣವನ್ನೇ ಕಳೆದುಕೊಂಡರು. ಧರ್ಮರಾಯ ಇದ್ದುದರಿಂದ ಮಿಕ್ಕವರು ಬದುಕಿದ್ದು. ಪಾಂಡವ ಮತ್ತೆ ಪಂಚಪಾಂಡವರು ಅಂತ ಆಗಿದ್ದು ಸ್ಥಿತಿಸ್ಥಾಪಕತ್ವ. ಜರಾಸಂಧನ ವಿಷಯದಲ್ಲೂ ಇಂಥದ್ದೇ ನಡೆದಿತ್ತು. ಭೀಮಸೇನ ಪ್ರತೀಬಾರಿ ಜರಾಸಂಧನನ್ನು ಸೀಳಿ ಎಸೆದಾಗಲೆಲ್ಲಾ ಮತ್ತೆ ಬಂದು ಸೇರಿಕೊಳ್ಳುತ್ತಾ ಯಥಾಸ್ಥಿತಿ ಸ್ಥಾಪನೆಯಾಗುತ್ತಿತ್ತು. ಶ್ರೀಕೃಷ್ಣನ ದೆಸೆಯಿಂದಾಗಿ ಭೀಮಸೇನನು ಆ ನಂತರ ಸೀಳಿ ಉಲ್ಟಾ ಎಸೆದ ಮೇಲೆ ಅವನು ಹುಟ್ಟಿದಾಗಿನ ಸ್ಥಿತಿಸ್ಥಾಪನೆಯಾಗಿ ಜಗತ್ತು ನಿರಾಳವಾಯ್ತು. ಆದರೆ ರಕ್ತಬೀಜಾಸುರನ ಕಥೆ ಕೊಂಚ ಭಿನ್ನ. ದೇಹಕ್ಕೆ ಗಾಯವಾಗಿ ರಕ್ತದ ಹನಿ ಕೆಳಕ್ಕೆ ಬಿದ್ದರೆ ಅಲ್ಲಿ ಇನ್ನೊಬ್ಬ ರಕ್ಕಸ ಹುಟ್ಟಿಕೊಳ್ಳುತ್ತಾನೆ. Resilience ಎಂಬುದು ಇಲ್ಲಿ ಬೇರೆ ರೂಪವನ್ನೇ ತೆಗೆದುಕೊಳ್ಳುತ್ತದೆ. ಅಮೆರಿಕವು ಜಪಾನ್‌ನ ಹಿರೋಷಿಮಾ ಮತ್ತು ನಾಗಸಾಕಿ ಮೇಲೆ ದಾಳಿ ಮಾಡಿದಾಗ ಆ ನಗರಗಳು ಧೂಳೀಪಟವಾದವು. ಹಾಗಂತ ಅವು ಹಾಗೆಯೇ ಉಳಿದು ಹೋಗಲಿಲ್ಲ. ಬದಲಿಗೆ ಫೀನಿಕ್ಸ್ ಪಕ್ಷಿಯಂತೆ ಮರುಹುಟ್ಟು ಪಡೆದು ಎದ್ದು ನಿಂತು ಜಗತ್ತೇ ಅಚ್ಚರಿಯಿಂದ ನೋಡುವಂತೆ ಬೆಳೆದು ನಿಂತಿವೆ. ಇಂಥದ್ದೇ ಉಲ್ಲೇಖ ಸೆಪ್ಟೆಂಬರ್ 11ರ ನ್ಯೂಯಾರ್ಕ್ ದಾಳಿಯಲ್ಲೂ ಕಾಣಬಹುದು. ಆ ಸನ್ನಿವೇಶದಲ್ಲಿ ಇಡೀ ದೇಶದ ಪರಿಸ್ಥಿತಿಯೇ ಅಲ್ಲೋಕಲ್ಲೋಲವಾಯ್ತು ನಿಜ. ಮತ್ತೆ ಮರುಹುಟ್ಟು ಪಡೆದದ್ದು ಸುಳ್ಳಲ್ಲ. ನಮ್ಮಲ್ಲೇ 26/11 ರ ಮುಂಬೈ ದಾಳಿಯೂ ಅಷ್ಟೇ. ದಾಳಿ ಆಯ್ತು ಅಂತ ಮುಂಬೈ ನಗರ ಗರ ಬಡಿದು ನಿಂತು ಹೋಗಲಿಲ್ಲ. ಸಡ್ಡು ಹೊಡೆದು ನಿಂತು ಮುಂದುವರೆದಿದೆ. ಒಂದು ಒಳಿತು ಅಂತ ಇದ್ದ ಕಡೆ ಅದರ ಮೇಲೆ ದಾಳಿ ಇದ್ದೇ ಇರುತ್ತದೆ. ಇದಕ್ಕೆ ನಾವೂ ನೀವೂ ಕೂಡಾ ಹೊರತಲ್ಲ. ಫೀನಿಕ್ಸ್ ಪಕ್ಷಿ ಎಂಬುದು ಒಂದು ಕಲ್ಪನೆ. ಈ ಪಕ್ಷಿ ಬೂದಿಯಾಗಿ ಉರಿದು ಬಿದ್ದು ಮತ್ತೆ ಅದೇ ಬೂದಿಯಿಂದ ಹುಟ್ಟಿ ಎದ್ದುಬರುತ್ತದೆ ಎಂಬುದು ಒಂದು ಕಾಲ್ಪನಿಕ ಕಥೆ. ಪುನರಪಿ ಜನನಂ, ಪುನರಪಿ ಮರಣಂ ಎಂಬುದಕ್ಕೆ ಫೀನಿಕ್ಸ್ ಪಕ್ಷಿ ಒಂದು ಉದಾಹರಣೆ. ಈ ಫೀನಿಕ್ಸ್ ಪಕ್ಷಿಗೂ ಮಾನವರಿಗೂ ಬಹಳ ಸಾಮ್ಯತೆ ಇದೆ. ಹೇಗೆ ಒಂದು ಫೀನಿಕ್ಸ್ ಪಕ್ಷಿ ತಾ ಬಿದ್ದು, ಬೂದಿಯಾಗಿ, ಮೇಲೆದ್ದು ಬರುವುದೋ ಅಂತೆಯೇ ಒಬ್ಬ ಮಾನವ ತಾ ಬಿದ್ದು, ಅದರಿಂದ ಕಲಿತು, ಮತ್ತೆ ಗೆಲುವಿನಿಂದ ಮೇಲೆದ್ದು ಬರುತ್ತಾನೆ. ಇಂಥಾ ಉದಾಹರಣೆಗಳು ನಮ್ಮ ನಮ್ಮಲ್ಲೇ ಇದೆ ಮತ್ತು ಸಾಕಷ್ಟು ಕಂಡು ಕೇಳಿಯೂ ಇದ್ದೇವೆ. ವಿಕ್ಟರ್ ಫ್ರಾಂಕಿ ಎಂಬಾತ ಹೇಳುತ್ತಾನೆ "ಸೋತು ಬಿದ್ದು ಎದ್ದು ಬಂದವನು, ಜೀವನದಲ್ಲಿ ಸೋಲನ್ನೇ ಕಾಣದವನಿಗಿಂತ ಹೆಚ್ಚು ಮಾನಸಿಕವಾಗಿ ಧೃಡವಾಗಿರುತ್ತಾನೆ". ಕೆಲವೊಂದು ಕಂಪನಿಗಳಲ್ಲಿ ಇದೊಂದು ಮಾನದಂಡವೇ ಆಗಿರುತ್ತದೆ. ಸಂದರ್ಶನದಲ್ಲಿ ಕೇಳುವ ಸಾಮಾನ್ಯ ಪ್ರಶ್ನೆಗಳಲ್ಲಿ ಒಂದು "ನಿನ್ನ ಹಿಂದಿನ ಪ್ರಾಜೆಕ್ಟ್‌ಗಳಲ್ಲಿ ಯಾವ ಸೋಲನ್ನು ಅನುಭವಿಸಿದ್ದಿ ಮತ್ತು ಅದರಿಂದ ಹೇಗೆ ಗೆದ್ದು ಬಂದಿದ್ದು?" ಅಂತ. ಅಭ್ಯರ್ಥಿಯು "ನಾನು ಯಾರು ಗೊತ್ತಾ? ಸೋಲನೆಂದು ಕಾಣದಂಥ ವೀರ ಪಾರ್ಥನು" ಅಂತ ನುಡಿದರೆ ಆ ಅಭ್ಯರ್ಥಿಗೆ ಕೆಲಸ ಸಿಗುವ ಸಂಭವನೀಯತೆ ಕಡಿಮೆ. ಸೋತವರಿಗೆ ಗೊತ್ತು ಹೇಗೆ ಗೆದ್ದು ಬರಬೇಕು ಅಂತ. ಸೋಲನ್ನೇ ಕಾಣದವ ಸೋತರೆ ಅವನಿಗೆ ಮುಂದೆ ದಾರಿಯೇ ಕಾಣದಂತಾಗಿ ಹೋಗಬಹುದು. ಸೋಲುವುದು ಅಥವಾ ಬೀಳುವುದು ದೊಡ್ಡ ವಿಷಯವಲ್ಲ. ಆದರೆ ಆ ಸೋಲಿನಿಂದ ಎದ್ದು ಗೆದ್ದು ಬರುವುದು ದೊಡ್ಡದು. ಸೋಲನ್ನು ಜೀವನದ ಕೊನೆ ಎಂದು ಭಾವಿಸದೇ ಅದನ್ನು ಸವಾಲಾಗಿ ಸ್ವೀಕರಿಸಿ ಜೀವನದಲ್ಲಿ ಮುನ್ನೆಡೆಯುವುದನ್ನು ಕಲಿತು ಬಾಳಬೇಕು.


from India & World News in Kannada | VK Polls https://ift.tt/3j1YdIW

ಮುಸ್ಲಿಮರ ಮನೆಯಲ್ಲಿ ಕಾಗಿನೆಲೆ ಶ್ರೀ ಪೂಜೆ, ಉಪಹಾರ ಸ್ವೀಕಾರ

ತುಮಕೂರು: ಕಾಗಿನೆಲೆ ಕನಕಗುರು ಪೀಠದ ಮುಸ್ಲಿಮರ ಮನೆಯಲ್ಲಿ ಪೂಜೆ ಸಲ್ಲಿಸಿ ಉಪಾಹಾರ ಸ್ವೀಕರಿಸಿದರು. ಪರಿಶಿಷ್ಟ ಪಂಗಡದ ಮೀಸಲಾತಿಗೆ ಆಗ್ರಹಿಸಿ ಕುರುಬ ಸಮುದಾಯ ಹಮ್ಮಿಕೊಂಡಿರುವ ಪಾದಯಾತ್ರೆ ತಾಲೂಕಿನ ಕೋರ ಗ್ರಾಮ ತಲುಪಿದೆ. ಶನಿವಾರ ಬೆಳಿಗ್ಗೆ 9 ಗಂಟೆಗೆ ಪಾದಯಾತ್ರೆ ಕೋರ ತಲುಪಿತು. ಈ ಹಿನ್ನೆಲೆಯಲ್ಲಿ ಕಾಗಿನೆಲೆ ಸ್ವಾಮೀಜಿ ಗ್ರಾಮದ ಮುಸ್ಲಿಂ ಮುಖಂಡ ನಜೀರ್ ಅಹಮದ್ ಮನೆಯಲ್ಲಿ ವಿಶ್ರಾಂತಿ ಪಡೆದರು. ನಜೀರ್, ಸ್ವಾಮೀಜಿ ಅವರನ್ನು ಪ್ರೀತಿ, ಗೌರವದಿಂದ ತಮ್ಮ ಮನೆಗೆ ಬರಮಾಡಿಕೊಂಡರು. ಅವರ ಮನೆಯಲ್ಲೇ ವಿಶ್ರಾಂತಿ ಪಡೆದ ಶ್ರೀಗಳು ಸ್ನಾನ,ಪೂಜೆ ಕೈಗೊಂಡು ಉಪಾಹಾರ ಸ್ವೀಕರಿಸಿದರು. ವಿಧಾನ ಪರಿಷತ್ ಸದಸ್ಯ ಹೆಚ್.ಎಂ ರೇವಣ್ಣ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣ, ಮುರಳೀಧರ ಹಾಲಪ್ಪ ಇತರರು ಸ್ವಾಮೀಜಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.


from India & World News in Kannada | VK Polls https://ift.tt/2NJB5Dj

ಸ್ಮಾರ್ಟ್‌ ಸಿಟಿ ರಸ್ತೆಗಳ ಕಾಮಗಾರಿ, ಬಸ್‌ನಲ್ಲಿ‌ ಪ್ರಯಾಣಿಸಿ ಬಿಎಸ್‌ವೈ ಪರಿಶೀಲನೆ

ಬೆಂಗಳೂರು: ಬೆಂಗಳೂರು ಮಹಾನಗರ ಸ್ಮಾರ್ಟ್‌ ಸಿಟಿ ರಸ್ತೆಗಳ ಕಾಮಗಾರಿಯ ಪ್ರಗತಿಯನ್ನು ಸಿಎಂ ಶನಿವಾರ ಪರಿಶೀಲನೆ ನಡೆಸಿದರು. ಬಸ್‌ನಲ್ಲಿ ಪ್ರಯಾಣ ಮಾಡುವ ಮೂಲಕ ನಗರಕ್ಕೆ ಪ್ರದಕ್ಷಿಣೆ ಹಾಕಿದ ಬಿಎಸ್‌ವೈ ರಸ್ತೆಗಳ ಕಾಮಗಾರಿಯಲ್ಲಾದ ಪ್ರಗತಿಯ ಕುರಿತಾಗಿ ಪರಿಶೀಲನೆ ನಡೆಸಿದರು. ವಿಧಾನಸೌಧ ಪಶ್ಚಿಮ ದ್ವಾರದಿಂದ ರೇಸ್‌ ಕೋರ್ಸ್‌ ರಸ್ತೆ, ಬಸವೇಶ್ವರ ಸರ್ಕಲ್ ದೇವರಾಜ ಅರಸು ರಸ್ತೆ, ಎಜೆಎಸ್‌ ಜಂಕ್ಷನ್ ಮೂಲಕ ಸಾಗಿ ರಸ್ತೆ ಕಾಮಗಾರಿಗಳ ಪರಿಶೀಲನೆಯನ್ನು ಮಾಡಿದರು. ಅಷ್ಟೇ ಅಲ್ಲದೆ ಅಂಬೇಡ್ಕರ್‌ ರಸ್ತೆ, ಗೋಪಾಲ್‌ ಗೌಡ ವೃತ್ತ ಮೂಲಕ ಕಬ್ಬನ್ ಪಾರ್ಕ್‌ ಮೂಲಕ ಸಿದ್ದಲಿಂಗಯ್ಯ ವೃತ್ತ- ಐಟಿಸಿ ಜಂಕ್ಷನ್‌ ಮತ್ತು ಪಿಎಫ್‌ ಕಟ್ಟದ ರಾಮ್ ಮೋಹನ್ ರಸ್ತೆಗಳ ಕಾಮಗಾರಿಯನ್ನು ಪರಿಶೀಲನೆ ನಡೆಸಿದರು. ಹೇಯ್ಸ್ ರೋಡ್ ಜಂಕ್ಷನ್ ಸ್ಥಳ ಪರಿಶೀಲನೆ, ವಾರ್‌ ಮೆಮೋರಿಯಲ್‌ ಮೂಲಕ ಹುಡ್‌ ಸ್ಟ್ರೀಟ್‌ ಮತ್ತು ಟಾಟಾ ಲೇನ್ ಸ್ಥಳ ಪರಿಶೀಲನೆ ಹಾಗೂ ರಿಚ್ಮಂಡ್‌ ರಸ್ತೆ ಮೂಲಕ ಎಸ್‌ಬಿಐ ಜಂಕ್ಷನ್‌ ಕೋಷಿಸ್ - ಎಂಜಿ ರಸ್ತೆ ಸಿಟಿಓ ಜಂಕ್ಷನ್ ಕ್ಯಾಪಿಟಲ್‌ ಹೋಟೆಲ್‌ ರಾಜಭವನದ ಜಂಕ್ಷನ್ ಸ್ಥಳ ಪರಿಶೀಲನೆಯನ್ನು ನಡೆಸಿದರು. ಈ ವೇಳೆ ರಸ್ತೆ ಕಾಮಗಾರಿಯಲ್ಲಾದ ಪ್ರಗತಿಯ ಕುರಿತಾಗಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಅಧಿಕಾರಿಗಳು ಮಾಹಿತಿ ನೀಡಿದರು. ಬಾಕಿ ಉಳಿದಿರುವ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಬಿಎಸ್‌ ಯಡಿಯೂರಪ್ಪ ಇದೇ ಸಂದರ್ಭದಲ್ಲಿ ಅಧಿಕಾರಿಗಳಿಗೆ ತಿಳಿಸಿದರು.


from India & World News in Kannada | VK Polls https://ift.tt/2MfalKw

ಶಾಸಕ ಶರತ್ ಅನುಪಸ್ಥಿತಿಯಲ್ಲಿ ಸಚಿವ ಎಂಟಿಬಿ ಭೂಮಿ ಪೂಜೆ: ಹೊಸಕೋಟೆಯಲ್ಲಿ ಬೆಂಬಲಿಗರ ಘರ್ಷಣೆ, ಲಾಠಿ ಚಾರ್ಜ್..!

(): ಸಚಿವ ಅವರು ಕಾಮಗಾರಿಯೊಂದರ ಭೂಮಿ ಪೂಜೆಗೆ ಆಗಮಿಸಿದ್ದ ವೇಳೆ ಹೊಸಕೋಟೆಯಲ್ಲಿ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಹೊಸಕೋಟೆಯಲ್ಲಿ ಶನಿವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ಕಾರ್ಯಕ್ರಮ ನಿಗದಿಯಾಗಿತ್ತು. ನಗರಸಭೆ ವತಿಯಿಂದ ಸಚಿವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಆದ್ರೆ, ಈ ಕಾರ್ಯಕ್ರಮದಲ್ಲಿ ಶಾಸಕ ಶರತ್‌ ಬಚ್ಚೇಗೌಡ ಅವರನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ, ಶರತ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದರು. ಭೂಮಿ ಪೂಜೆ ಸಲ್ಲಿಸುವ ಸ್ಥಳಕ್ಕೆ ಸಚಿವ ಎಂಟಿಬಿ ನಾಗರಾಜ್ ಆಗಮಿಸುತ್ತಿದ್ದಂತೆಯೇ, ಶಾಸಕ ಹಾಗೂ ಸಚಿವ ಎಂಟಿಬಿ ನಾಗರಾಜ್ ಬೆಂಬಲಿಗರ ನಡುವೆ ಪರಸ್ಪರ ವಾಗ್ವಾದ ನಡೆಯಿತು. ಉಭಯ ನಾಯಕರ ಬೆಂಬಲಿಗರು ತಮ್ಮ ತಮ್ಮ ನಾಯಕರ ಪರವಾಗಿ ಘೋಷಣೆ ಕೂಗಿದರು. ಈ ವೇಳೆ, ಸ್ಥಳದಲ್ಲಿ ನೂಕಾಟ, ತಳ್ಳಾಟ ನಡೆಯಿತು. ಪರಿಸ್ಥಿತಿ ಬಿಗಡಾಯಿಸುವ ಹಂತ ತಲುಪಿತು. ಈ ವೇಳೆ, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸ ನಡೆಸಿದರು. ಆದ್ರೆ, ಬೆಂಬಲಿಗರ ಘರ್ಷಣೆ ವಿಕೋಪಕ್ಕೆ ಹೋದ ಹಿನ್ನೆಲೆಯಲ್ಲಿ, ಪೊಲೀಸರು ಲಾಠಿ ಚಾರ್ಚ್ ನಡೆಸಿದರು. ಪೊಲೀಸರು ಲಾಠಿ ಚಾರ್ಜ್ ನಡೆಸಿದ ಬಳಿಕ ಗುಂಪು ಚೆದುರಿತು. ಆದ್ರೆ, ಪೊಲೀಸರು ಲಾಠಿ ಚಾರ್ಜ್ ನಡೆಸಿದ ಕ್ರಮವನ್ನು ಶಾಸಕ ಶರತ್ ಬಚ್ಚೇಗೌಡ ಬೆಂಬಲಿಗರು ವಿರೋಧಿಸಿದರು. ಇದರ ನಡುವೆಯೂ ಸಚಿವ ಎಂಟಿಬಿ ನಾಗರಾಜ್ ಭೂಮಿ ಪೂಜೆ ನೆರವೇರಿಸಿ ವಾಪಸ್ ಹೊರಟರು. ಸಚಿವರು ವಾಪಸ್ಸಾದ ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ಬಂತು. ಶಾಸಕ ಶರತ್ ಬಚ್ಚೇಗೌಡ ಬೆಂಬಲಿಗರು ಶಿಷ್ಟಾಚಾರ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ್ದಾರೆ. ಅಭಿವೃದ್ಧಿ ಕಾಮಗಾರಿ ಭೂಮಿ ಪೂಜೆ ವೇಳೆ ಶಿಷ್ಟಾಚಾರದ ಪ್ರಕಾರ ಶಾಸಕ ಶರತ್ ಬಚ್ಚೇಗೌಡ ಅವರನ್ನು ಕರೆಸಬೇಕಿತ್ತು ಎಂಬುದು ಬೆಂಬಲಿಗರ ಆಗ್ರಹವಾಗಿತ್ತು.


from India & World News in Kannada | VK Polls https://ift.tt/3t48Q2B

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...