ಹುಬ್ಬಳ್ಳಿ: ಕಾರು ಹಾಗೂ ಕ್ರೂಸರ್ ನಡುವೆ ಭೀಕರ ಅಪಘಾತ ಸಂಭವಿಸಿ, ನಾಲ್ವರು ಸಾವನಪ್ಪಿರುವ ಘಟನೆ ಗದಗ-ಹುಬ್ಬಳ್ಳಿ ರಸ್ತೆಯ ಕೊಂಡಿಕೊಪ್ಪ ಕ್ರಾಸ್ ಬಳಿ ನಡೆದಿದೆ. ಅಣ್ಣಿಗೇರಿ ಪಟ್ಟಣದ ಬಳಿ ಇರುವ ಕೊಂಡಿಕೊಪ್ಪ ಕ್ರಾಸ್‌ನಲ್ಲಿ ಈ ಭೀಕರ ಅವಘಡ ಸಂಭವಿಸಿದ್ದು ನಾಲ್ವರು ಸ್ಥಳದಲ್ಲೇ ಅಸುನೀಗಿದ್ದಾರೆ. ಇನ್ನು ಕಾರಿನಲ್ಲಿದ್ದ ಜಿಲ್ಲೆಯ ಮಾನ್ವಿಯ ವಿಠ್ಠಲ ನಗರದ ನಿವಾಸಿಗಳಾದ ಸಣ್ಣ ಗಂಗಣ್ಣ , ನಾಗಮ್ಮ , ಹನುಮಂತು, ಈರಣ್ಣಾ ಸ್ಥಳದಲ್ಲೆ ಸಾವನಪ್ಪಿರುವ ಮೃತ ದುರ್ದೈವಿಗಳು. ಅಲ್ಲದೇ ಕಾರಿನಲ್ಲಿದ್ದ ಸಣ್ಣೀರಣ್ಣ ಮತ್ತು ಲಕ್ಷ್ಮೀ ಎಂಬವರಿಗೆ ಗಾಯಗಳಾಗಿದೆ ಎಂದು ತಿಳಿದುಬಂದಿದೆ. ಹಾಗೇ ಕ್ರೂಸರ್‌ನ ಚಾಲಕ ಮಲ್ಲಪ್ಪ ಗಿಡ್ಡನ್ನವರ್‌ಗೆ ತೀವ್ರ ಗಾಯಗೊಂಡಿದ್ದು, ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ರಾಯಚೂರು ಮೂಲದವರು ಕಾರಿನಲ್ಲಿ ಮಾನ್ವಿಯಿಂದ ಕಾರವಾರದ ಹಲಗಾಗೆ ಪಾರ್ಶ್ವವಾಯು ಚಿಕಿತ್ಸೆಗೆ ಹೊರಟಿದ್ದರು, ಈ ವೇಳೆ ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ಅಣ್ಣಿಗೇರಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಇನ್ನು ಅಪಘಾತದ ಪರಿಣಾಮಕ್ಕೆ ಇಂಡಿಕಾ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಕ್ರೂಸರ್‌ನ ಮುಂಭಾಗಕ್ಕೂ ಹಾನಿ ಉಂಟಾಗಿದೆ.
from India & World News in Kannada | VK Polls https://ift.tt/3lbYQzf