'ಇಬ್ಬರು ಸ್ಟಾರ್‌ ಆಟಗಾರರು ಔಟ್‌' : ವೆಸ್ಟ್‌ ಇಂಡೀಸ್‌ ವಿರುದ್ಧದ ಸರಣಿಗೂ ಮುನ್ನ ನ್ಯೂಜಿಲೆಂಡ್‌ಗೆ ಆಘಾತ!

ಹೊಸದಿಲ್ಲಿ: ಗಾಯದಿಂದಾಗಿ ತಂಡದ ಸ್ಟಾರ್‌ ಆಲ್‌ರೌಂಡರ್‌ ಹಾಗೂ ಸ್ಪಿನ್ನರ್‌ ಅಜಾಝ್‌ ಪಟೇಲ್‌ ವಿರುದ್ಧದ ಟೆಸ್ಟ್‌ ಸರಣಿಯಿಂದ ಹೊರ ಬಿದ್ದಿದ್ದಾರೆ. ಆ ಮೂಲಕ ಸರಣಿ ಆರಂಭಕ್ಕೂ ಮುನ್ನವೇ ಕಿವೀಸ್‌ಗೆ ತೀವ್ರ ಹಿನ್ನಡೆಯಾಗಿದೆ. ಕಾಲಿನ್‌ ಡಿ ಗ್ರಾಂಡ್ಹೋಮ್‌ ಅವರ ಬಲಗಾಲಿಗೆ ಮೂಗೇಟು ತಗುಲಿದ್ದರೆ, ಅಜಾಝ್‌ ಪಟೇಲ್‌ಗೆ ಸ್ನಾಯು ಸೆಳೆತ ಉಂಟಾಗಿದೆ. ಈ ಇಬ್ಬರ ಸ್ಥಾನಕ್ಕೆ ಇದೀಗ ಆಲ್‌ರೌಂಡರ್‌ ಡ್ಯಾರ್ಲಿ ಮಿಚೆಲ್‌ ಹಾಗೂ ಮಿಚೆಲ್‌ ಸ್ಯಾಂಟ್ನರ್‌ ಅವರನ್ನು ಆಯ್ಕೆ ಮಾಡಲಾಗಿದೆ. ಡ್ಯಾರ್ಲಿ ಮಿಚೆಲ್‌ ಇಂಗ್ಲೆಂಡ್‌ ವಿರುದ್ಧ ಕಳೆದ ವರ್ಷ ನವೆಂಬರ್‌ನಲ್ಲಿ ಚೊಚ್ಚಲ ಪಂದ್ಯದಲ್ಲಿ 73 ರನ್‌ಗಳನ್ನು ಗಳಿಸಿದ್ದರು. ಅಲ್ಲದೆ, ಸ್ಯಾಂಟ್ನರ್‌ ಕಿವೀಸ್‌ ಪರ ಸ್ಪಿನ್‌ ಮಾಡುವುದಲ್ಲದೆ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಬ್ಯಾಟಿಂಗ್‌ ಬಲ ತುಂಬಲಿದ್ದಾರೆ. ಮುಂದಿನ ಶುಕ್ರವಾರದಂದು ನ್ಯೂಜಿಲೆಂಡ್‌ ಹಾಗೂ ವೆಸ್ಟ್‌ ಇಂಡೀಸ್ ತಂಡಗಳು ಮೂರು ಪಂದ್ಯಗಳ ಟಿ20 ಸರಣಿಯ ಮೊದಲನೇ ಹಣಾಹಣಿಯಲ್ಲಿ ಮುಖಾಮುಖಿಯಾಗಲಿವೆ. ಚುಟುಕು ಸರಣಿಯ ಕಿವೀಸ್‌ ತಂಡದಲ್ಲಿಯೂ ಮಿಚೆಲ್‌ ಹಾಗೂ ಸ್ಯಾಂಟ್ನರ್‌ ಸ್ಥಾನ ಪಡೆದಿದ್ದಾರೆ. "ಮಿಚೆಲ್‌ ಹಾಗೂ ಡ್ಯಾರ್ಲಿ ಮಿಚೆಲ್‌ ಈ ಇಬ್ಬರೂ ಕೊನೆಯ ಟಿ20 ಪಂದ್ಯಕ್ಕೆ ಲಭ್ಯರಾಗಲಿದ್ದಾರೆ. ನಂತರ, ನ್ಯೂಜಿಲೆಂಡ್ ಟೆಸ್ಟ್ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ. ಈ ಇಬ್ಬರೂ ಮೊದಲನೇ ಟೆಸ್ಟ್‌ಗೆ ಫಿಟ್‌ ಇದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲಾಗುವುದು," ಎಂದು ಕಿವೀಸ್‌ ಹೆಡ್‌ ಕೋಚ್‌ ಗ್ಯಾರಿ ಸ್ಟೀಡ್‌ ತಿಳಿಸಿದ್ದಾರೆ. "ಈ ಇಬ್ಬರೂ ಆಟಗಾರರು ಕಳೆದ ವರ್ಷ ಬೇಸಿಗೆಯಲ್ಲಿ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಹಾಗಾಗಿ, ಅವರು ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡು ತಂಡಕ್ಕೆ ನೆರವಾಗಲಿದ್ದಾರೆಂದು ಭಾವಿಸಲಾಗಿದೆ. ಬೇ ಓವಲ್‌ನಲ್ಲಿ ಮಿಚೆಲ್‌ ಸ್ಯಾಂಟ್ನರ್‌ ಶತಕ ಹಾಗೂ ಮೂರು ವಿಕೆಟ್‌ಗಳನ್ನು ಕಬಳಿಸಿದ್ದರು. ಡ್ಯಾರ್ಲಿ ಮಿಚೆಲ್‌ ಕೂಡ ಸೆಡ್ಡಾನ್‌ನಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿದ್ದರು," ಎಂದು ಹೇಳಿದರು. ನ್ಯೂಜಿಲೆಂಡ್‌ ಟಿ20 ತಂಡ: ಟಿಮ್‌ ಸೌಥ್‌ (ನಾಯಕ) ಹ್ಯಾಮಿಶ್‌ ಬೆನೆಟ್‌, ಡೆವೊನ್‌ ಕಾನ್ವೇ, ಲಾಕಿ ಫರ್ಗೂಸನ್‌, ಮಾರ್ಟಿನ್‌ ಗಪ್ಟಿಲ್‌, ಕೈಲ್‌ ಜಾಮಿಸನ್‌, ಡ್ಯಾರ್ಲಿ ಮಿಚೆಲ್‌, ಜಿಮ್ಮಿ ನೀಶಮ್‌, ಗ್ಲೆನ್‌ ಫಿಲಿಪ್ಸ್‌, ಮಿಚೆಲ್‌ ಸ್ಯಾಂಟ್ನರ್‌, ಇಶ್‌ ಸೋಧಿ, ಟಿಮ್‌ ಸೀಫರ್ಟ್‌ (ವಿ.ಕೀ), ರಾಸ್‌ ಟೇಲರ್‌ ನ್ಯೂಜಿಲೆಂಡ್‌ ಟೆಸ್ಟ್ ತಂಡ: ಕೇನ್‌ ವಿಲಿಯಮ್ಸನ್‌(ನಾಯಕ), ಟಾಮ್‌ ಬ್ಲಂಡೆಲ್‌, ಟ್ರೆಂಟ್‌ ಬೌಲ್ಟ್, ಡ್ಯಾರ್ಲಿ ಮಿಚೆಲ್‌, ಮಿಚೆಲ್‌ ಸ್ಯಾಂಟ್ನರ್‌, ಕೈಲ್‌ ಜಾಮಿಸನ್‌, ಟಾಮ್‌ ಲಥಾಮ್‌, ಹೆನ್ರಿ ನಿಕೋಲ್ಸ್‌, ಟಿಮ್‌ ಸೌಥ್‌, ರಾಸ್‌ ಟೇಲರ್‌, ನೀಲ್‌ ವ್ಯಾಗ್ನರ್‌, ಬಿಜೆ ವ್ಯಾಟ್ಲಿಂಗ್‌(ವಿ.ಕೀ), ವಿಲ್‌ ಯಂಗ್‌


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3fEkvPm

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...