ಹೊಸದಿಲ್ಲಿ: ಒಂದು ತಿಂಗಳ ಹಿಂದೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಅವರು ನಿಧನರಾಗಿದ್ದಾರೆ. ಸೋನಿಯಾ ಗಾಂಧಿ ಆಪ್ತ ಎಂದೇ ಬಿಂಬಿತವಾಗಿದ್ದ ಕಾಂಗ್ರೆಸ್‌ನ ನಿಷ್ಠಾವಂತ ನಾಯಕ ಬುಧವಾರ ಮುಂಜಾನೆ 3.30ರ ಸುಮಾರಿಗೆ ನಿಧನರಾಗಿದ್ದಾರೆ. 71 ವರ್ಷ ವಯಸ್ಸಿನ ಅಹ್ಮದ್ ಪಟೇಲ್ ಅವರು ಕೊರೊನಾ ಪಾಸಿಟಿವ್ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರಾದರೂ, ಬಹುಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿದ್ದಾರೆ. ಇದೀಗ ಅವರ ನಿಧನದ ಬೆನ್ನಲ್ಲೇ ಕಾಂಗ್ರೆಸ್‌ನ ಪ್ರಮುಖ ನಾಯಕರು ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ , ಇದು ನೋವಿನ ದಿನ ಎಂದು ಅಹ್ಮದ್ ಪಟೇಲ್ ಜೊತೆಗಿದ್ದ ಸಂಬಂಧವನ್ನು ತೋರಿಸಿಕೊಟ್ಟಿದ್ದಾರೆ. "ಇದು ದುಃಖದ ದಿನ. ಅಹ್ಮದ್ ಪಟೇಲ್ ಅವರು ಕಾಂಗ್ರೆಸ್ ಪಕ್ಷದ ಆಧಾರಸ್ತಂಭವಾಗಿದ್ದರು. ಕಾಂಗ್ರೆಸ್ ಪಕ್ಷ ಅತ್ಯಂತ ಕಷ್ಟದ ಸಮಯದಲ್ಲೂ ಜೊತೆಗೆ ನಿಂತ ಅವರು ಪಕ್ಷಕ್ಕಾಗಿ ಜೀವಿಸಿದರು ಹಾಗೂ ಪಕ್ಷವೇ ಅವರ ಉಸಿರು ಆಗಿತ್ತು ಎಂದು ರಾಹುಲ್ ಗಾಂಧಿ ತಿಳಿಸಿದರು. ಇನ್ನು ಅವರು ಪಕ್ಷದ ಅಪಾರ ಆಸ್ತಿಯಾಗಿದ್ದರು ಎಂದು ರಾಹುಲ್ ಸಂತಾಪ ಸೂಚಿಸಿದ್ದಾರೆ. ಅವರು ಕುಟುಂಬಸ್ಥರಾದ ಫೈಸಲ್, ಮುಮ್ತಾಜ್ ಹಾಗೂ ಸಮಸ್ತ ಕುಟುಂಬಕ್ಕೆ ನನ್ನ ಪ್ರೀತಿ ಮತ್ತು ಸಂತಾಪವಿದೆ ಎಂದು ಹೇಳಿದ್ದಾರೆ. ಇನ್ನು ಕಾಂಗ್ರೆಸ್ ನಾಯಕಿ ಕೂಡ ಅಹ್ಮದ್ ಪಟೇಲ್ ನಿಧನಕ್ಕೆ ಮಿಡಿದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಅಹ್ಮದ್ ಪಟೇಲ್ ಒಬ್ಬ ಬುದ್ಧಿವಂತ ಮತ್ತು ಅನುಭವಿ ಸಹೋದ್ಯೋಗಿ ಮಾತ್ರವಲ್ಲದೇ, ನಾನು ಸಲಹೆ ಮತ್ತು ಸಲಹೆಗಳಿಗಾಗಿ ನಿರಂತರವಾಗಿ ಅವರತ್ತ ಮುಖಮಾಡುತ್ತಿದ್ದ ವ್ಯಕ್ತಿಯಾಗಿದ್ದರು. ಅವರು ಸ್ಥಿರ, ನಿಷ್ಠಾವಂತ ಮತ್ತು ಕೊನೆಯವರೆಗೂ ನಂಬಲರ್ಹ ವ್ಯಕ್ತಿಯಾಗಿದ್ದು ನಮ್ಮೆಲ್ಲರ ಜೊತೆ ನಿರಂತರವಾಗಿ ನಿಲ್ಲುತ್ತಿದ್ದರು. ಅವರ ನಿಧನವು ಅಪಾರ ನೋವು ತಂದಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದಿದ್ದಾರೆ.
from India & World News in Kannada | VK Polls https://ift.tt/362ITXN