ಇನ್ನೆರಡು ವರ್ಷದಲ್ಲಿ ತುಮಕೂರು ಸ್ಮಾರ್ಟ್‌: ಮೂರು ವರ್ಷದಲ್ಲಿ 70 ಕಾಮಗಾರಿಗಳು ಪೂರ್ಣ!

ಗಿರೀಶ ಎಸ್‌.ಕಲ್ಗುಡಿ ತುಮಕೂರು: ಯೋಜನೆಯಡಿ ನಗರದಲ್ಲಿ ಕೈಗೊಂಡಿರುವ ಸ್ಮಾರ್ಟ್‌ ಕೆಲಸಗಳನ್ನು ಇನ್ನೆರಡು ವರ್ಷಗಳಲ್ಲಿಪೂರ್ಣಗೊಳಿಸುವ ಗುರಿ ಸ್ಮಾರ್ಟ್‌ಸಿಟಿ ಲಿಮಿಟೆಡ್‌ ಮುಂದಿದ್ದು, ತುಮಕೂರು ನಗರವನ್ನು 2021ನೇ ಸಾಲಿನ ಒಳಗಾಗಿ ಸಂಪೂರ್ಣ ಅಭಿವೃದ್ಧಿಗೊಳಿಸಲು ಕಟಿಬದ್ಧವಾಗಿದೆ. 70 ಕಾಮಗಾರಿಗಳು ಪೂರ್ಣ ಸ್ಮಾರ್ಟ್‌ಸಿಟಿಯ ಐದು ವರ್ಷ ಯೋಜನೆಯಲ್ಲಿ ಈಗಾಗಲೇ ಮೂರು ವರ್ಷ ಮುಗಿದಿದ್ದು, ಉಳಿದ ಎರಡು ವರ್ಷಗಳಲ್ಲಿಎಲ್ಲಾ ಕಾಮಗಾರಿಗಳನ್ನು ಮುಗಿಸಿ ತುಮಕೂರು ನಗರವನ್ನು ಸ್ಮಾರ್ಟ್‌ಸಿಟಿಯನ್ನಾಗಿಸುವ ಕಾಯಕ ಸ್ಮಾರ್ಟ್‌ಸಿಟಿ ಲಿಮಿಟೆಡ್‌ಗಿದೆ. ಯೋಜನೆಯ ಒಟ್ಟು 152 ಕಾಮಗಾರಿಗಳ ಪೈಕಿ 70 ಕಾಮಗಾರಿಗಳು ಮುಕ್ತಾಯಗೊಂಡಿವೆ. ಉಳಿದ ಎಲ್ಲಾ 82 ಕಾಮಗಾರಿಗಳು ಪ್ರಾರಂಭವಾಗಿದ್ದು, ಎರಡು ವರ್ಷದಲ್ಲಿ ಪೂರ್ಣಗೊಳ್ಳಬೇಕಿದೆ. ಈಗ ಆರಂಭವಾಗಿರುವ ಮಹಾತ್ಮಗಾಂಧಿ ಕ್ರೀಡಾಂಗಣ, ಕೆಎಸ್ ಆರ್ ಟಿಸಿ, ರಸ್ತೆ ಅಭಿವೃದ್ಧಿ ಕಾಮಗಾರಿಗಳು ಹೆಚ್ಚಿನ ಅನುದಾನದಲ್ಲಿ ಆರಂಭವಾಗಿರುವ ಕಾಮಗಾರಿಗಳಾಗಿವೆ. ಹಾಗಾಗಿ ಈ ಕಾಮಗಾರಿಗಳು ಶೀಘ್ರ ಮುಗಿಸುವ ಧಾವಂತ ಸ್ಮಾರ್ಟ್‌ಸಿಟಿಗಿದೆ. ಸಂಚಾರ ಸಂಕಷ್ಟ ಸ್ಮಾರ್ಟ್‌ಸಿಟಿ ಸೇರಿದಂತೆ ಬೆಸ್ಕಾಂ, ಗ್ಯಾಸ್‌, ಯುಜಿಡಿ ಹಾಗೂ ಮಹಾನಗರ ಪಾಲಿಕೆಯ ಹಲವು ಯೋಜನೆಗಳ ಅಭಿವೃದ್ಧಿ ಕಾಮಗಾರಿಗಳಿಂದ ನಗರ ಸಂಚಾರ ಸಂಕಷ್ಟವಾಗಿ ಪರಿಣಮಿಸಿದೆ. ವಾಹನ ಸವಾರರು ಮಳೆಬಂದರೆ ಕೆಸರಿನಲ್ಲಿ ಹಾಗೂ ಮಳೆ ಬಾರದಿದ್ದರೆ ಧೂಳಿನ ನಡುವೆ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೊರೊನಾದಿಂದ ಹೆಚ್ಚಿನ ವಾಹನ ದಟ್ಟನೆ ಇಲ್ಲ. ಆದರೆ, ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದ್ದು ವಾಹನ ಸಂಖ್ಯೆ ಹೆಚ್ಚಾಗುತ್ತದೆ. ಆಗ ಸಂಚಾರ ಇನ್ನೂ ನರಕ ಎಂಬಂತಾಗುವ ಆತಂಕ ಎದುರಾಗಿದ್ದು, ಅಷ್ಟರೊಳಗೆ ಕಾಮಗಾರಿಗಳನ್ನು ಮುಗಿಸಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ. ಪರ್ಯಾಯ ವ್ಯವಸ್ಥೆ ಅಗತ್ಯ ಯಾವುದೇ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳುವ ಮೊದಲು ಆ ರಸ್ತೆ ಬ್ಲಾಕ್‌ ಮಾಡುವ ಮುನ್ನ ಪರ್ಯಾಯ ವ್ಯವಸ್ಥೆ ಮಾಡಬೇಕು. ಆದರೆ, ನಗರದ ಎಂಜಿ ರಸ್ತೆ ಸೇರಿದಂತೆ ಇತರೆ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಂದ ಸೂಕ್ತ ಪರ್ಯಾಯ ರಸ್ತೆಯಿಲ್ಲದೆ ಇರುವ ಪರ್ಯಾಯ ರಸ್ತೆಯಲ್ಲಿ ಸಂಚರಿಸಿದರೆ ತೆಂಕಣ ಸುತ್ತಿ ಮೈಲಾರಕ್ಕೆ ಬಂದಂತಾಗುತ್ತದೆ. ಇದರಿಂದ ಬೆಳಗ್ಗೆ ಮತ್ತು ಸಂಜೆ ವೇಳೆ ಟ್ರಾಫಿಕ್‌ ಸಮಸ್ಯೆ ಉಂಟಾಗುತ್ತದೆ. ಸಾಮಾನ್ಯವಾಗಿ ಒಂದು ರಸ್ತೆ ಪೂರ್ಣಗೊಂಡ ಬಳಿಕ ಮತ್ತೊಂದು ರಸ್ತೆ ಕಾಮಗಾರಿ ಆರಂಭಿಸಬೇಕು. ಆದರೆ, ಕೆಲವು ಕಡೆ ಏಕಕಾಲಕ್ಕೆ ಎರೆಡೆರಡು ರಸ್ತೆ ಅಭಿವೃದ್ಧಿಯಿಂದಾಗಿ ಸಂಚಾರ ದುಸ್ತರವಾಗಿ ಪರಿಣಮಿಸಿದೆ. ಇದರಿಂದ ಸಾರ್ವಜನಿಕರು ಬೇಸತ್ತು ಹೋಗಿದ್ದಾರೆ. ವ್ಯಾಪಾರಕ್ಕೆ ತೊಂದರೆ ಕಾಮಗಾರಿಗಳಿಂದ ರಸ್ತೆಗಳನ್ನು ಅಗೆದು ವೈಜ್ಞಾನಿಕವಾಗಿ ಮುಚ್ಚದ ಪರಿಣಾಮ ನಗರ ಧೂಳು ಮಯವಾಗಿದ್ದರೆ, ಇನ್ನೊಂದೆಡೆ ಪಾರ್ಕಿಂಗ್‌ ಸಮಸ್ಯೆಯೂ ತಲೆದೂರಿದೆ. ಇದರಿಂದ ವ್ಯಾಪರವೂ ಕುಂಠಿತವಾಗಿದೆ ಎಂಬುದು ವ್ಯಾಪಾರಸ್ಥರ ಅಳಲು. ಆರ್ಥಿಕ ಅಭಿವೃದ್ಧಿಗೆ ಆದ್ಯತೆ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ಬೆಂಗಳೂರಿನ ಭವಿಷ್ಯದ ಉಪನಗರಿ ಎಂದೇ ಕರೆಯಲ್ಪಡುವ ತುಮಕೂರು ನಗರವನ್ನು ಎಲ್ಲಾ ರೀತಿಯಲ್ಲೂ ಸ್ಮಾರ್ಟ್‌ಸಿಟಿಯನ್ನಾಗಿಸಲು ಸ್ಮಾರ್ಟ್‌ಸಿಟಿ ಬದ್ಧವಾಗಿದೆ. ಹಳೆಯ ನಗರೀಕರಣ ಪರಿಕಲ್ಪನೆಗೆ ಆಧುನಿಕ ತಂತ್ರಜ್ಞಾನದ ಸ್ವರ್ಶ ನೀಡುವುದೇ ಸ್ಮಾರ್ಟ್‌ಸಿಟಿ ಎಂದು ಸರಳವಾಗಿ ಹೇಳಬಹುದು. ಆದರೆ, ಇಲ್ಲಿ ಪ್ರಮುಖವಾಗಿ ಸಮಗ್ರ ಆರ್ಥಿಕ ಅಭಿವೃದ್ಧಿಗೆ ಪೂರಕವಾಗುವಂತಹ ಮೂಲಸೌಕರ್ಯಗಳ ಜತೆಗೆ ಮಾಹಿತಿ, ಸಂವಹನ ಹಾಗೂ ತಂತ್ರಜ್ಞಾನಕ್ಕೆ ಮೊದಲ ಆದ್ಯತೆ ನೀಡಲಾಗಿದೆ. ಪೂರ್ಣಗೊಂಡಿವೆ ಕಾಮಗಾರಿಗಳು ಈಗಾಗಲೇ ಸ್ಮಾರ್ಟ್‌ ಇ ಟಾಯ್ಲೆಟ್‌, ಇಂಟರ್‌ ಮೀಡಿಯೇಟ್‌ ಪ್ಯಾರಾ ಟ್ರ್ಯಾನ್ಸಿಟ್‌ ಆಟೋ ನಿಲ್ದಾಣ, ಸಿದ್ಧಗಂಗಾ ಬಸ್‌ ನಿಲ್ದಾಣದ ಮರು ನಿರ್ಮಾಣ, ವಿಶ್ವವಿದ್ಯಾಲಯದಲ್ಲಿ ಸ್ಮಾರ್ಟ್‌ ಪಾರ್ಕ್, ಕುಡಿಯುವ ನೀರು ಸರಬರಾಜು ಯೋಜನೆಗಳು, ಅಮಾನಿಕೆರೆಯಲ್ಲಿ ನರ್ಸರಿ ಅಭಿವೃದ್ಧಿ ಹಾಗೂ ಸ್ಮಾರ್ಟ್‌ ಲಾಂಚ್‌, ಸೋಲಾರ್‌ ಬೀದಿ ದೀಪ, ಅಮಾನಿಕೆರೆ ಒತ್ತುವರಿ ತೆರವು ಹಾಗೂ ಗಿಡ ಮರ ಬೆಳೆಸುವ ಉಪ್ಪಾರಹಳ್ಳಿ ಫ್ಲೈಓವರ್‌, ಕೆಳಸೇತುವೆ ಅಭಿವೃದ್ಧಿ ಕಾಮಗಾರಿ ಸೇರಿದಂತೆ ಇತರೆ ಕಾಮಗಾರಿಗಳು ಪೂರ್ಣಗೊಂಡಿವೆ. ಸ್ಮಾರ್ಟ್‌ಸಿಟಿ ಯೋಜನೆ ಪ್ರಾರಂಭವಾಗಿ ಮೂರು ವರ್ಷವಾಗಿದೆ. ಇನ್ನೆರಡು ವರ್ಷಗಳಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯನ್ನು ಸಂಪೂರ್ಣವಾಗಿ ಪೂರ್ಣಗೊಳಿಸಲಾಗುವುದು. ಮೊದಲು ಟ್ರಾಫಿಕ್‌ ಸಮಸ್ಯೆ ಉಂಟಾಗಿತ್ತು. ಆದರೆ, ಈಗ ಅಂತಹ ಸಮಸ್ಯೆ ಕಂಡುಬರುತ್ತಿಲ್ಲ. ರಂಗಸ್ವಾಮಿ, ಆಯುಕ್ತರು, ಸ್ಮಾರ್ಟ್‌ಸಿಟಿ ಲಿಮಿಟೆಡ್‌


from India & World News in Kannada | VK Polls https://ift.tt/3nX3djb

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...