ಬೆಂಗಳೂರು: ಡ್ರಗ್ಸ್ ಮಾಫಿಯಾಗೆ ಸಂಬಂಧಪಟ್ಟಂತೆ ನೈಜೀರಿಯಾ ಡ್ರಗ್ ಪೆಡ್ಲರನ್ನು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಒಸ್ಸಿ ಬಂಧಿತ ಆರೋಪಿ. ಬಂಧಿತ ಒಸ್ಸಿ ಈಗಾಗಲೇ ಬಂಧಿತನಾಗಿರುವ ಸೈಮನ್‌ನ ಸಹಚರ ಎಂದು ತಿಳಿದುಬಂದಿದೆ. ಇನ್ನು ಒಸ್ಸಿಯಿಂದ ಎಂಡಿಎಂಎ ಡ್ರಗ್ಸ್‌ಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧವು ದೂರು ದಾಖಲಾಗಿದ್ದು. ಈತ ಡ್ರಗ್ಸ್ ಪೂರೈಕೆ ಮಾಡುತ್ತಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇನ್ನೊಂದೆಡೆ ಸ್ಯಾಂಡಲ್‌ವುಡ್ ಡ್ರಗ್ಸ್ ಮಾಫಿಯಾ ರಹಸ್ಯ ಬಗೆದಷ್ಟು ಹೊರ ಬರುತ್ತಿದ್ದು ಇದೀಗ ನಿರೂಪಕಿ ಹಾಗೂ ನಟಿ ಅನುಶ್ರೀಗೆ ಸಿಸಿಬಿ ನೋಟಿಸ್ ನೀಡಿದೆ. ಅಲ್ಲದೆ ಹಲವು ಕಿರತೆರೆ ನಟಿಯರಿಗೆ ವಿಚಾರಣೆಗೊಳಪಡಿಸಿದೆ. ಇನ್ನು ನಟ ದಿಂಗತ್ ಅವರನ್ನು ಎರಡು ಬಾರಿ ವಿಚಾರಿಸಿದೆ. ನಟಿ ರಾಗಿಣಿ, ಸಂಜನಾ ಸೇರಿ ಹಲವರು ನ್ಯಾಯಾಂಗ ಬಂಧನದಲ್ಲಿದ್ದಾರೆ.
from India & World News in Kannada | VK Polls https://ift.tt/33XwWQD