ತಾರತಮ್ಯದ ಕ್ರಮಗಳನ್ನು ಭಾರತ ಹಿಂಪಡೆಯುವ ಭರವಸೆ ಇದೆ: ಚೀನಾ ವಾಣಿಜ್ಯ ಇಲಾಖೆ ಅಭಿಮತ!

ಬೀಜಿಂಗ್: 59 ಚೀನಾ ಆ್ಯಪ್‌ಗಳ ಬಳಕೆ ಮೇಲೆ ನಿಷೇಧ ಹೇರಿರುವ ಸರ್ಕಾರದ ಕ್ರಮವನ್ನು ತಾರತಮ್ಯದ ಕ್ರಮ ಎಂದು ಕರೆದಿರುವ ಚೀನಾದ ವಾಣಿಜ್ಯ ಸಚಿವಾಲಯ, ಈ ಆದೇಶವನ್ನು ಹಿಂಪಡೆಯುವ ಭರವಸೆ ಇದೆ ಎಂದು ಹೇಳಿದೆ. ಭಾರತ ಏಕಪಕ್ಷೀಯವಾಗಿ ಚೀನಾ ಆ್ಯಪ್‌ಗಳ ಮೇಲೆ ನಿಷೇಧ ಹೇರಿದ್ದು, ಇದು ಅಂತಾರಾಷ್ಟ್ರೀಯ ಹೂಡಿಕೆದಾರ ಕಾನೂನಿಗೆ ವಿರುದ್ಧವಾಗಿದೆ ಎಂದು ಹೇಳಿಕೆ ನೀಡಿದೆ. ಹೂಡಿಕೆದಾರನ ಹಕ್ಕುಗಳನ್ನು ರಕ್ಷಿಸುವುದು ಯಾವುದೇ ರಾಷ್ಟ್ರದ ಕರ್ತವ್ಯವಾಗಿದ್ದು, ಹೀಗೆ ಏಕಾಏಕಿ ನಿಷೇಧ ಹೇರುವ ಮೂಲಕ ಭಾರತ ಈ ಕಾನೂನನ್ನು ಉಲ್ಲಂಘಿಸಿದೆ ಎಂದು ಚೀನಾದ ವಾಣಿಜ್ಯ ಇಲಾಖೆ ಅಸಮಾಧಾನ ವ್ಯಕ್ತಪಡಿಸಿದೆ. ಅದಾಗ್ಯೂ ಭಾರತ ತನ್ನ ನಿರ್ಧಾರವನ್ನು ಮರು ಪರಿಶೀಲನೆ ಮಾಡಲಿದೆ ಎಂದು ಭರವಸೆ ವ್ಯಕ್ತಪಡಿಸಿರುವ ಚೀನಾ ವಾಣಿಜ್ಯ ಸಚಿವಾಲಯ, ತಾರತಮ್ಯದ ಕ್ರಮವನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಇನ್ನು ಚೀನಾದ ಈ ಹೇಳಿಕೆಗೆ ಭಾರತ ಹೇಗೆ ಪ್ರತಿಕ್ರಿಯೆ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದ್ದು, ಆ್ಯಪ್ ನಿಷೇಧದ ತನ್ನ ದೃಢ ನಿರ್ಧಾರವನ್ನು ಮತ್ತೊಮ್ಮೆ ಪುನರುಚ್ಛಿಸಲಿದೆ.


from India & World News in Kannada | VK Polls https://ift.tt/3dW06Tg

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...