ನೇಪಾಳ ರಾಷ್ಟ್ರಪತಿ ಭೇಟಿ ಮಾಡಿದ ಓಲಿ: ರಾಷ್ಟ್ರವನ್ನುದ್ದೇಶಿಸಿ ಭಾಷಣ ಸಾಧ್ಯತೆ!

ಮಹತ್ವದ ಬೆಳವಣಿಗೆಯೊಂದರಲ್ಲಿ ನೇಪಾಳ ಪ್ರಧಾನಿ ಕೆಪಿ ಶರ್ಮಾ ಓಲಿ, ರಾಷ್ಟ್ರಪರಿ ವಿದ್ಯಾದೇವಿ ಭಂಡಾರಿ ಅವರನ್ನು ಭೇಟಿ ಮಾಡಿದ್ದು, ಇಂದು(ಗುರುವಾರ) ನೇಪಾಳವನ್ನು ಉದ್ದೇಶಿಸಿ ಭಾಷಣ ಮಾಡುವ ಸಾಧ್ಯತೆ ಹೆಚ್ಚಿದೆ. ತಮ್ಮ ನಾಯಕತ್ವದ ವಿರುದ್ಧ ಸ್ವಪಕ್ಷೀಯರೇ ಅಪಸ್ವರ ಎತ್ತಿದ್ದು, ಈ ಹಿನ್ನೆಲೆಯಲ್ಲಿ ಓಲಿ ಅಧಿಕಾರ ತ್ಯಜಿಸಲಿದ್ದಾರೆ ಎಂಬ ಮಾತುಗಳು ಕೆಳಿ ಬರುತ್ತಿವೆ. ಪ್ರಮುಖವಾಗಿ ಗಡಿ ನಕ್ಷೆ ಅನುಮೋದನೆ ಹಾಗೂ ಭಾರತದ ವಿರುದ್ಧ ನೇರ ಆರೋಪ ಮಾಡಿದ ಓಲಿ ಕ್ರಮವನ್ನು ಸ್ವಪಕ್ಷೀಯರೇ ಖಂಡಿಸಿದ್ದು, ಇದು ನೇಪಾಳ ಹಾಗೂ ಭಾರತದ ಸಂಬಂಧಕ್ಕೆ ಧಕ್ಕೆ ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಓಲಿ ಅವರ ರಾಜೀನಾಮೆಗೂ ಹಲವು ಮುಖಂಡರು ಆಗ್ರಹಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನೇಪಾಳ ಪ್ರಧಾನಿ ಕೆಪಿ ಶರ್ಮಾ ಓಲಿ ಇಂದು(ಗುರುವಾರ) ರಾಷ್ಟ್ರಪತಿ ವಿದ್ಯಾದೇವಿ ಭಂಡಾರಿ ಅವರನ್ನು ಭೇಟಿ ಮಾಡಿದ್ದು, ರಾಷ್ಟ್ರವನ್ನೂ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ನೇಪಾಳದ ಸದ್ಯದ ಆಂತರಿಕ ರಾಜಕೀಯ ಪರಿಸ್ಥಿತಿ ಹಾಗೂ ಭಾರತವನ್ನು ಎದುರು ಹಾಕಿಕೊಂಡು ಓಲಿ ಪಡುತ್ತಿರುವ ಕಷ್ಟಗಳತ್ತ ಗಮನಹರಿಸಿದರೆ...

ನೇಪಾಳದ ಸದ್ಯದ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚಿಸಲು ನೇಪಾಳ ಪ್ರಧಾನಿ ಕೆಪಿ ಶರ್ಮಾ ಓಲಿ, ಇಂದು(ಗುರುವಾರ) ರಾಷ್ಟ್ರಪತಿ ವಿದ್ಯಾ ದೇವಿ ಭಂಡಾರಿ ಅವರನ್ನು ಭೇಟಿಯಾಗಿದ್ದಾರೆ. ರಾಷ್ಟ್ರಪತಿ ಭವನಕ್ಕೆ ತೆರಳಿ ವಿದ್ಯಾ ದೇವಿ ಅವರನ್ನು ಭೇಟಿಯಾದ ಓಲಿ, ಪ್ರಸಕ್ತ ರಾಜಹಕೀಯ ಬೆಳವಣಿಗೆಗಳ ಕುರಿತು ಸುದೀರ್ಘ ಮಾತುಕತೆ ನಡೆಸಿದರು.

ಭಾರತದ ವಿರುದ್ಧ ಹೇಳಿಕೆ: ಓಲಿ ರಾಜೀನಾಮೆಗೆ ನೇಪಾಳ ಆಡಳಿತಾರೂಢ ಪಕ್ಷದಿಂದಲೇ ಒತ್ತಾಯ!

ಸಭೆಯ ವಿವರ ಬಹಿರಂಗವಾಗಿಲ್ಲವಾದರೂ, ಸದ್ಯದ ತಮ್ಮ ಸರ್ಕಾರದ ಡೋಲಾಯಮಾನ ಸ್ಥಿತಿಯ ಕುರಿತು ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನನ್ನ ಪದಚ್ಯುತಿಗೆ ಭಾರತ ಷಡ್ಯಂತ್ರ ಹೂಡಿದೆ ಎಂಬ ಕೆಪಿ ಶರ್ಮಾ ಓಲಿ ಹೇಳಿಕೆ, ಅವರಿಗೇ ಮುಳುವಾಗಿ ಪರಿಣಮಿಸಿದೆ. ಓಲಿ ಹೇಳಿಕೆಯನ್ನು ಸ್ವಪಕ್ಷೀಯರೇ ತೀವ್ರವಾಗಿ ಖಂಡಿಸಿದ್ದು, ಇದು ಭಾರತ-ನೇಪಾಳ ನಡುವಿನ ಐತಿಹಾಸಿಕ ಸಂಬಂಧಕ್ಕೆ ಧಕ್ಕೆ ತಂದಿದೆ ಎಂದು ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನನ್ನ ಪದಚ್ಯುತಿಗೆ ಭಾರತ ಷಡ್ಯಂತ್ರ ಹೂಡಿದೆ: ನೇಪಾಳ ಪ್ರಧಾನಿ ಗಂಭೀರ ಆರೋಪ!

ಪ್ರಮುಖವಾಗಿ ಪ್ರಚಂಡ ಸೇರಿದಂತೆ ಹಲವು ನಾಯಕರು ಓಲಿ ನಾಯಕತ್ವದ ವಿರುದ್ಧ ಬಂಡೆದಿದ್ದು, ಓಲಿ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ. ಗಡಿ ನಕ್ಷೆ ಅನುಮೋದನೆ ಬಳಿ ಭಾರತದ ವಿರುದ್ಧ ಆಕ್ರಮಣಕಾರಿಯಾಗಿ ವರ್ತಿಸುತ್ತಿರುವ ಓಲಿ ನೇಪಾಳಕ್ಕೆ ಸಂಕಷ್ಟ ತಂದೊಡ್ಡಲಿದ್ದಾರೆ ಎಂಬುದು ಹಲವರ ಆತಂಕಕ್ಕೆ ಕಾರಣವಾಗಿದೆ.

ಇನ್ನು ಪಸ್ತಕ್ತ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ನೇಪಾಳ ಪ್ರಧಾನಿ ಕೆಪಿ ಶರ್ಮಾ ಓಲಿ ಇಂದು(ಗುಇರುವಾರ) ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಎನ್ನಲಾಗಿದೆ. ಈ ಭಾಷಣದ ಬಳಿಕ ಓಲಿ ರಾಜೀನಾಮೆಯನ್ನೂ ಸಲ್ಲಿಸಬಹುದು ಎಂಬ ವದಂತಿ ಹಬ್ಬಿದ್ದು, ಈ ಎಲ್ಲಾ ಪ್ರಶ್ನೆಗಳಿಗೆ ಖುದ್ದು ಓಲಿ ಅವರೇ ಉತ್ತರ ನೀಡಲಿದ್ದಾರೆ.

ನೇಪಾಳ ರಾಷ್ಟ್ರಪತಿ ಭೇಟಿ ಮಾಡಿದ ಓಲಿ: ಎತ್ತ ಸಾಗುತ್ತಿದೆ ನೇಪಾಳ ರಾಜಕೀಯ?

ರಾಷ್ಟ್ರಪತಿ ಭೇಟಿ ಬಳಿಕ ನೇಪಾಳ ರಾಜಕೀಯದಲ್ಲಿ ತೀವ್ರ ಚಟುವಟಿಕೆಗಳು ಕಂಡು ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಓಲಿ ಅವರ ಇಂದಿನ ದೇಶವನ್ನುದ್ದೇಶಿಸಿ ಮಾಡುವ ಭಾಷಣ ತೀವ್ರ ಕುತೂಹಲ ಕೆರಳಿಸಿರುವುದು ಸುಳ್ಳಲ್ಲ.

ಹೌದು, ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣ ಕೆಪಿ ಶರ್ಮಾ ಓಲಿ ನೇತೃತ್ವದ ಸರ್ಕಾರ ಅನುಮೋದನೆ ನೀಡಿದ ನೇಪಾಳದ ಹೊಸ ರಾಜಕೀಯ ನಕ್ಷೆಯೇ ಕಾರಣ. ಬೇಡವಾದ ಸಮಯದಲ್ಲಿ ನಕ್ಷೆ ಬದಲಾವಣೆಗೆ ಕೈ ಹಾಕಿದ ಓಲಿ ಸರ್ಕಾರ, ಭಾರತದ ಭೂಪ್ರದೇಶಗಳನ್ನು ಸೇರಿಸಿ ಹೊಸ ರಾಜಕೀಯ ನಕ್ಷೆ ಬಿಡುಗಡೆ ಮಾಡಿತು.

ಭಾರತದ ಸತತ ಮನವಿಯ ಹೊರತಾಗಿಯೂ ಯಾವುದೇ ಮಾತುಕತೆ ಇಲ್ಲದೇ ಏಕಪಕ್ಷೀಯವಾಗಿ ನೇಪಾಳ ಸಂಸತ್ತು ಈ ನಕ್ಷೆಗೆ ಅನುಮೋದನೆ ನೀಡಿತು.

3 ಭಾರತೀಯ ಭೂಪ್ರದೇಶ ಒಳಗೊಂಡ ವಿವಾದಿತ ನಕ್ಷೆಗೆ ನೇಪಾಳ ಸಂಸತ್ತಿನ ಅನುಮೋದನೆ!

ಇದಾದ ಬಳಿಕ ಭಾರತದ ವಿರುದ್ಧ ಆಕ್ರಮಣಕಾರಿ ಹೇಳಿಕೆ ನೀಡುತ್ತಲೇ ಬಂದ ನೇಪಾಳ ಪ್ರಧಾನಿ ಕೆಪಿ ಶರ್ಮಾ ಓಲಿ, ಕೊನೆಗೆ ಭಾರತ ನನ್ನ ಪದಚ್ಯುತಿಗಾಗಿ ಷಡ್ಯಂತ್ರ ಹೂಡಿದೆ ಎಂದು ಆರೋಪಿಸುವಷ್ಟರ ಮಟ್ಟಿಗೆ ಹೋಗಿದ್ದು ಸಮಸ್ಯೆ ಉದ್ಭವಕ್ಕೆ ಕಾರಣ.



from India & World News in Kannada | VK Polls https://ift.tt/3dNwTK5

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...