ಪ್ಯಾಂಗ್ಯಾಂಗ್: ಇಡೀ ಜಗತ್ತು ಮಾರಕ ಕೊರೊನಾ ವೈರಸ್ ಹಾವಳಿಯಿಂದ ನಲುಗುತ್ತಿದ್ದರೆ, ಮಾತ್ರ ಏನೂ ಆಗಿಯೇ ಇಲ್ಲ ಎಂಬಂತೆ ಅಣ್ವಸ್ಥ್ರಗಳ ಸಂಖ್ಯೆ ಹೆಚ್ಚಿಸುವಲ್ಲಿ ನಿರತವಾಗಿದೆ. ದಕ್ಷಿಣ ಕೊರಿಯಾ ಸೇರಿದಂತೆ ಅಕ್ಕಪಕ್ಕದ ಎಲ್ಲಾ ರಾಷ್ಟ್ರಗಳಲ್ಲಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿದ್ದು, ಉfತರ ಕೊರಿಯಾದಲ್ಲಿ ಮಾತ್ರ ಈ ವೈರಾಣುವಿನ ಸುಳಿವೇ ಇಲ್ಲ ಎಂದು ನಂಬಲು ತುಸು ಕಷ್ಟವೇ ಸರಿ. ಆದರೆ ಉತ್ತರ ಕೊರಿಯಾದಲ್ಲಿ ಒಂದೇ ಒಂದು ಕೊರೊನಾ ವೈರಸ್ ಪ್ರಕರಣ ದಾಖಲಾಗಿಲ್ಲ ಎಂದು ಅಲ್ಲಿನ ಸರ್ಕಾರ ಅಧಿಕೃತವಗಿ ಘೋಷಿಸಿದ್ದು, ಸರ್ವಾಧಿಕಾರಿ ಇದನ್ನು 'ಭಾರೀ ಯಶಸ್ಸು'ಎಂದು ಹೊಗಳಿದ್ದಾನೆ. ಹೌದು, ಉ.ಕೊರಿಯಾ ಕೊರೊನಾ ವೈರಸ್ ಹಾವಳಿಯನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ್ದು, ಇದೊಂದು ಅದ್ಭುತ ಯಶಸ್ಸು ಎಂದು ಕಿಮ್ ಜಾಂಗ್ ಉನ್ ಹೇಳಿದ್ದಾಗಿ ಅಲ್ಲಿನ ಸರ್ಕಾರಿ ಮಾಧ್ಯಮ ವರದಿ ಮಾಡಿದೆ. ಕೊರೊನಾ ವೈರಸ್ ಹಾವಳಿಯ ಆರಂಭಿಕ ಹಂತದಲ್ಲೇ ತನ್ನ ಗಡಿಗಳನ್ನು ಸೀಲ್ ಮಾಡಿದದ ಉತ್ತರ ಕೊರಿಯಾ, ಬಳಿಕ ಅತ್ಯಂತ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವ ಮೂಲಕ ಕೊರೊನಾ ವೈರಸ್‌ನ್ನು ಹಿಮ್ಮೆಟ್ಟಿಸಿದೆ ಎಂದು ಕಿಮ್ ಜಾಂಗ್ ಉನ್ ಸರ್ಕಾರ ಘೋಷಿಸಿದೆ. ಅದಾಗ್ಯೂ ಎರಡನೇ ಹಂತದ ಕೊರೊನಾ ವೈರಸ್ ಹಾವಳಿ ಆರಂಭವಾಗುವ ಮುನ್ಸೂಚನೆ ಇದ್ದು, ಈ ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆಯೂ ಕಿಮ್ ಜಾಂಗ್ ಉನ್ ಆದೇಶಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ. ಆದರೆ ಒಂದೇ ಒಂದು ಕೊರೊನಾ ವೈರಸ್ ಪ್ರಕರಣ ದಾಖಲಾಗಿಲ್ಲ ಎಂಬ ಉತ್ತರ ಕೊರಿಯಾ ಘೋಷಣೆಯನ್ನೇ ಹಲವರು ಅನುಮಾನಿಸಿದ್ದಾರೆ. ಉತ್ತರ ಕೊರಿಯಾ ತನ್ನ ನೈಜ ಸ್ಥಿತಿಯನ್ನು ಜಗತ್ತಿಗೆ ಗೊತ್ತಾಗದಂತೆ ಮುಚ್ಚಿಟ್ಟಿದೆ ಎಂದೇ ಹಲವರು ವಾದಿಸುತ್ತಿದ್ದಾರೆ.
from India & World News in Kannada | VK Polls https://ift.tt/2YYPv61