ಕೊರೊನಾ ವೈರಸ್ ಕಾಟ.. ವರ್ಕ್‌ ಫ್ರಂ ಹೋಂ ಆಟ..! ಕಾಮಿಡಿ ಮೀಮ್ಸ್‌ಗಳ ಚೆಲ್ಲಾಟ..!

ಕೊರೊನಾ ವೈರಸ್ ವಿಶ್ವಾದ್ಯಂತ ಅಬ್ಬರಿಸುತ್ತಿದೆ. ಬೆಂಗಳೂರು ಸೇರಿದಂತೆ ಹಲವೆಡೆ ವರ್ಕ್ ಫ್ರಂ ಹೋಂ ಜಾರಿಯಾಗಿದೆ. ಆದ್ರೆ ಅನ್ನೋದು ಅಷ್ಟು ಸುಲಭವೇ..? ಇಂಟರ್‌ನೆಟ್, ವಿದ್ಯುತ್‌ ಕೊರತೆ ನಡುವೆ, ಹೇಳಿಕೊಳ್ಳಲಾಗದ ನೂರೆಂಟು ಸಮಸ್ಯೆಗಳಿವೆ..! ಆ ಸಮಸ್ಯೆಗಳಿಗೆ ತಮಾಷೆಯ ರೂಪ ಕೊಟ್ಟ ಮೀಮ್ಸ್‌ಗಳು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿವೆ. ಕೊರೊನಾ ವೈರಸ್‌ ಭೀತಿಯ ನಡುವೆಯೂ ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿರುವ ಈ ಮೀಮ್ಸ್‌ಗಳು, ಜನರ ಜೀವನೋತ್ಸಾಹಕ್ಕೆ ಸಾಕ್ಷಿಯಾಗಿವೆ. ಈ ತಂದೆಯ ಪಾಡು ನೋಡಿ..! ವರ್ಕ್‌ ಫ್ರಂ ಹೋಂ ಎಷ್ಟು ಕಷ್ಟ ಅನ್ನೋಕೆ ಈತನೇ ಸಾಕ್ಷಿ..! ಡೆಡ್‌ಲೈನ್, ಟಾರ್ಗೆಟ್ ಮಾತ್ರವಲ್ಲ, ಮಕ್ಕಳೂ ತಲೆ ಮೇಲೇರಿ ಕೂರುತ್ತಾರೆ. ಮಕ್ಕಳಿಗೆ ಆಟ.. ತಂದೆಗೆ ಪ್ರಾಣ ಸಂಕಟ..! ಮನೆಯಲ್ಲಿ ಕುಳಿತು ಗ್ರಾಹಕರೊಂದಿಗೆ ವ್ಯವಹರಿಸಲು ಸಾಧ್ಯವೇ..? ವಿಡಿಯೋ ಕಾಲ್ ಮಾಡಲು ಸಾಧ್ಯವೇ..? ಮನೆಯಲ್ಲಿ ಮಗ ಏನು ಮಾಡ್ತಿದ್ಧಾನೆ? ಯಾರ ಜೊತೆ ಮಾತನಾಡ್ತಿದ್ದಾನೆ ಎಂದು ತಿಳಿಯುವ ಕುತೂಹಲ ತಾಯಿಗೆ ಇರೋದಿಲ್ವಾ..? ಹೆಂಡ್ತಿಗಾದ್ರೂ ಇರೋದಿಲ್ವಾ..? ಅದ್ರಲ್ಲೂ ಚೆಂದದ ಯುವತಿ ಜೊತೆ ವಿಡಿಯೋ ಕಾನ್ಫರೆನ್ಸ್‌ ಮಾಡುವಾಗ..! ವರ್ಕ್‌ ಫ್ರಂ ಹೋಂ ಎಂಬ ಗೃಹ ಬಂಧನದಿಂದ ಮುಕ್ತಿ ಯಾವಾಗ ಸಿಗುತ್ತೋ ಗೊತ್ತಿಲ್ಲ.. ಹೊರ ಪ್ರಪಂಚದ ಸಂಪರ್ಕವಿರಲಿ, ನಮ್ಮೊಂದಿಗೆ ಕೆಲಸ ಮಾಡುತ್ತಿರುವ ಸಹೋದ್ಯೋಗಿಗಳ ಸಂಪರ್ಕವೇ ಇಲ್ಲದಂತಾಗಿದೆ. ಎದುರು ಕುಳಿತು ಕೆಲಸ ಮಾಡ್ತಿದ್ದವರು ಈಗ ವಾಟ್ಸಪ್‌ಗೆ, ಕಾಲ್‌ಗೆ ಸೀಮಿತ. ಹಲವು ದಿನಗಳ ವರ್ಕ್‌ ಫ್ರಂ ಹೋಂ ಮುಗಿದ ಮೇಲೆ ಸಹೋದ್ಯೋಗಿಗಳನ್ನು ಎದುರಾದಾಗ ಕಭಿ ಖುಷಿ ಕಭಿ ಗಮ್ ಸಿನೆಮಾದಲ್ಲಿ ಶಾರೂಖ್ ಹಾಗೂ ಜಯಾ ಬಚ್ಚನ್ ಪರಸ್ಪರ ಸಾಂತ್ವನ ಹೇಳುವ ರೀತಿ ಆಗಿಬಿಡುತ್ತೋನೋ..! ಕೆಲವರಿಗಂತೂ ವರ್ಕ್‌ ಫ್ರಂ ಹೋಂ ಅನ್ನೋದು ವರ್ಕ್‌ ಫ್ರಂ ಬಾರ್‌ ಎನ್ನುವಂತೆ ಆಗಿಬಿಟ್ಟಿದೆ..! ಒಂದು ವೇಳೆ ನಮ್ಮ ಸೀರಿಯಲ್‌ ತಂಡದವರು ತಮ್ಮ ಸೀರಿಯಲ್‌ಗಳಲ್ಲಿ ವರ್ಕ್ ಫ್ರಂ ಹೋಂ ದೃಶ್ಯವನ್ನು ಚಿತ್ರೀಕರಣ ಮಾಡುವಂತಿದ್ದರೆ ಪಾತ್ರಧಾರಿಗಳಿಗೆ ಯಾವ ರೀತಿ ಕಾಸ್ಟ್ಯೂಮ್ ಹಾಕಿಸಬಹುದು? ಅದಕ್ಕೂ ಉತ್ತರ ಇಲ್ಲಿದೆ ನೋಡಿ..! ಇನ್ನು ವರ್ಕ್ ಫ್ರಂ ಹೋಂ ಮಾಡುವಾಗ ಬಾಸ್‌ಗಳಿಗೆ ಯಾಮಾರಿಸೋದು ಹೇಗೆ..? ಸತತ 9 ಗಂಟೆ ಕಾಲ ಸ್ಕೈಪ್‌ನಲ್ಲಿ ಆನ್‌ಲೈನ್ ಇರಬೇಕು ಅಂದಾಗ ಉದ್ಯೋಗಿಗಳು ಯಾವ ರೀತಿ ಅಡ್ಡದಾರಿ ಹಿಡಿಬಹುದು ಅನ್ನೋದಕ್ಕೆ ಇಲ್ಲೊಂದು ಸೂಪರ್, ಸುಪ್ರೀಂ ಐಡಿಯಾ ಇದೆ..! ವರ್ಕ್‌ ಫ್ರಂ ಹೋಂ ಮಾಡುವಾಗ ಪತ್ನಿ ಸಂಪೂರ್ಣವಾಗಿ ನಿಮ್ಮ ಕಾಳಜಿ ವಹಿಸುತ್ತಾರೆ. ಊಟ, ತಿಂಡಿ, ಸಮಯಕ್ಕೆ ಸರಿಯಾಗಿ ಕಾಫಿ, ಟೀ ಮಾತ್ರವಲ್ಲ, ನಿಮ್ಮ ಲ್ಯಾಪ್‌ಟಾಪನ್ನೂ ನೀಟಾಗಿ ತೊಳೆದು ಒಣಗಿ ಹಾಕ್ತಾರೆ..! ವರ್ಕ್‌ ಫ್ರಂ ಹೋಂ ಅಂದ್ರೆ ಹುಡುಗಾಟವೇ..! ತುಂಬಾ ಕೆಲಸ ಇರುತ್ತೆ.. ನಿದ್ರೆಯೂ ಜಾಸ್ತಿ.. ವಿಡಿಯೋ ಕಾಲ್‌ ಆರಂಭವಾಗುವ 2 ಸೆಕೆಂಡ್ ಮುನ್ನ ಎಚ್ಚರವಾದ್ರೆ ಹೇಗಿರಬಹುದು..? ಇನ್ನು ಆಕ್ಷನ್‌ ಸಿನೆಮಾಗಳ ಡೈರೆಕ್ಟರ್‌ ರೋಹಿತ್ ಶೆಟ್ಟಿ ವರ್ಕ್‌ ಫ್ರಂ ಹೋಂ ಮಾಡಿದರೆ ಹೇಗಿರುತ್ತೆ ಸನ್ನಿವೇಶ..?


from India & World News in Kannada | VK Polls https://ift.tt/33B3u2l

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...