ಪ್ರಧಾನಿ ಮೋದಿಯವರ ಜನತಾ ಕರ್ಫ್ಯೂ ಕರೆಗೆ, ಕರ್ನಾಟಕ ಜ್ಯುವೆಲರಿ ಅಸೋಶಿಯೇಶನ್ ಬೆಂಬಲ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು COVID-19ವಿರುದ್ದ ಹೋರಾಡಲು ದೇಶದ ಜನತೆಗೆ ಜನತಾ ಕರ್ಫ್ಯೂ ಕರೆಯನ್ನು ನೀಡಿದ್ದು, ಇದನ್ನು ಬೆಂಬಲಿಸಿ, ಮಾರ್ಚ್ 22 ರಂದು ಕರ್ನಾಟಕ ಜ್ಯುವೆಲರಿ ಅಸೋಸಿಯೇಷನ್ ವತಿಯಿಂದ ಎಲ್ಲಾ ಜ್ಯುವೆಲರಿ ಅಂಗಡಿಗಳನ್ನು ಬಂದ್ ಮಾಡುವ ನಿರ್ಣಯವನ್ನು ಕೈಗೊಳ್ಳಲಾಗಿದೆ ಎಂದು ಕರ್ನಾಟಕ ಜ್ಯುವೆಲರಿ ಅಸೋಶಿಯೇಶನ್ ಅಧ್ಯಕ್ಷ ಡಾ. ಟಿ.ಎ. ಶರವಣರವರು ತಿಳಿಸಿದ್ದಾರೆ. ಕೊರೊನಾ ವೈರಸ್ ವಿರುದ್ದ ಹೋರಾಡಲು ಪ್ರಧಾನಿಯವರು ಮಾಡಿದ ಮನವಿಯನ್ನು ಸ್ವಾಗತಿಸುತ್ತೇವೆ. ಹಾಗೂ ಅಭಿನಂದಿಸುತ್ತೇವೆ. ಎಲ್ಲರ ಸಹಕಾರದಿಂದ ಮಾತ್ರ ಜನತಾ ಕರ್ಫ್ಯೂ ಯಶಸ್ವಿಯಾಗಬಲ್ಲದು ಎಂದಿದ್ದಾರೆ. ಎಲ್ಲರಿಗೂ ಆರೋಗ್ಯ ಮುಖ್ಯವಾಗಿರುವುದರಿಂದ ಮುಂಜಾಗೃತಾ ಕ್ರಮವಾಗಿ ನಮ್ಮ ಅಂಗಡಿಗೆ ಬರುವ ಗ್ರಾಹಕರಿಗೆ ಅವರ ಕೈಗಳನ್ನು ಶುದ್ಧಿಗೊಳಿಸುವ ಸ್ಯಾನಿಟೈಸರ್ ನೀಡುತ್ತಿದ್ದೇವೆ ಮತ್ತು ಕೆಲ ಮಾಧ್ಯಮಗಳಲ್ಲಿ 7 ದಿನ ಜ್ಯುವೆಲರಿ ಅಂಗಡಿಗಳು ರಜೆ ಎಂದು ಸುದ್ದಿ ಪ್ರಸಾರವಾಗಿತ್ತು. ಆದರೆ ಅದು ಕೇವಲ ಚಿಕ್ಕಪೇಟೆ, ಸಿಟಿ ಮಾರ್ಕೆಟ್ ನಲ್ಲಿ ಹೆಚ್ಚು ಜನಸಂದಣಿ ಇರುವುದರಿಂದ ಆ ಭಾಗದ ಜ್ಯುವೆಲರಿ ಅಂಗಡಿಗಳಿಗೆ 7 ದಿನಗಳ ಕಾಲ ರಜೆ ಇದೆ. ಭಾನುವಾರ ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಜ್ಯುವೆಲರಿ ಅಂಗಡಿಗಳನ್ನು ಬಂದ್ ಮಾಡಲಾಗುವುದು. ಕರ್ನಾಟಕ ಜ್ಯುವೆಲರಿ ಅಸೋಸಿಯೇಷನ್ ವತಿಯಿಂದ ಜನರ ಆರೋಗ್ಯದ ದೃಷ್ಟಿಯಿಂದ ಇದಕ್ಕೆ ಬೆಂಬಲ ಸೂಚಿಸುತ್ತಿದ್ದೇವೆ. ಸೋಮವಾರದಿಂದ ಎಲ್ಲಾ ಅಂಗಡಿಗಳು ಕಾರ್ಯನಿರ್ವಹಿಸಲಿದೆ ಎಂದು ಕರ್ನಾಟಕ ಜ್ಯುವೆಲರಿ ಅಸೋಶಿಯೇಶನ್ ಅಧ್ಯಕ್ಷ ಡಾ. ಟಿ.ಎ. ಶರವಣರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


from India & World News in Kannada | VK Polls https://ift.tt/2J59I0Z

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...