'ಕೆಎಸ್‌ಆರ್‌ಟಿಸಿ'ಗೂ ತಟ್ಟಿದ 'ಕೊರೊನಾ' ಶಾಕ್! ಡೆಟಾಲ್‌ ಹಾಕಿ ಬಸ್‌ ತೊಳೆದ ಸಿಬ್ಬಂದಿ!

ಬೆಂಗಳೂರು: ಕೊರೊನಾ ವೈರಸ್‌ ಭಾತದಲ್ಲೂ ವ್ಯಾಪಕವಾಗಿ ಹರಡುತ್ತಿರುವ ಶಂಕೆ ಮೂಡಿದ್ದು, ಈ ಹಿನ್ನೆಲೆಯಲ್ಲಿ, ರಾಜ್ಯ ಸಾರಿಗೆ ಸಂಸ್ಥೆ ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ಕೆಎಸ್ಆರ್‌ಟಿಸಿ ಸಿಬ್ಬಂದಿ ಬಸ್‌ಗಳನ್ನು ಬುಧವಾರ ಡೆಟಾಲ್ ಬಳಸಿ ಶುದ್ದಿ ಮಾಡಿದ್ದಾರೆ. ಅದರಲ್ಲೂ ಹೈದರಾಬಾದ್‌ ಮತ್ತು ಆಧ್ರಪ್ರದೇಶಕ್ಕೆ ತೆರಳಿದ್ದ ರಾಜ್ಯದ ಬಸ್‌ಗಳನ್ನು ಹೆಚ್ಚು ಮುತುವರ್ಜಿ ವಹಿಸಿ ಶುಚಿ ಮಾಡಲಾಗಿದೆ. ಕೊರೊನಾ ಸೋಂಕಿತ ಹೈದರಾಬಾದ್‌ ಟೆಕ್ಕಿಯೊಬ್ಬ ಬೆಂಗಳೂರಲ್ಲಿ ನೆಲೆಸಿದ್ದ ಎಂಬ ವಿಚಾರ ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿತ್ತು. ಆತ ಕೆಎಸ್‌ಆರ್‌ಟಿಸಿ ಸೇರಿದಂತೆ ಹಲವಾರು ಕಡೆ ಓಡಾಡಿದ್ದ ಎಂಬುದು ಇನ್ನೂ ಆತಂಕಕಾರಿ ವಿಚಾರ. ಈ ಹಿನ್ನೆಲೆಯಲ್ಲಿ ಮಂಗಳವಾರ ಬಿಎಂಟಿಸಿ ತನ್ನ ಸಿಬ್ಬಂದಿಗೆ ಸುತ್ತೋಲೆ ಹೊರಡಿ, ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು. ಇದರ ಪರಿಣಾಮವಾಗಿ ಬುಧವಾರ ಹೈದರಾಬಾದ್‌ ಮತ್ತು ಆಧ್ರಪ್ರದೇಶಗಳಿಗೆ ತೆರಳಿದ್ದ ಬಸ್‌ಗಳನ್ನು ಡೆಟಾಲ್‌ ಹಾಕಿ ಶುದ್ಧಮಾಡಲಾಗುತ್ತಿದೆ. ಸಿಬ್ಬಂದಿಗಿಲ್ಲ ಸೂಕ್ತ ರಕ್ಷಣೆ ಸಾರಿಗೆ ಸಂಸ್ಥೆ ಕೊರೊನಾ ನಿಯಂತ್ರಣಕ್ಕೆ ಮುತುವರ್ಜಿ ವಹಿಸಿರುವುದೇನೋ ಸರಿ. ಆದರೆ, ಬಸ್ಸನ್ನು ಶುಚಿಗೊಳಿಸುತ್ತಿರುವ ಕೆಲ ಸಿಬ್ಬಂದಿ ಯಾವುದೇ ಸಂರಕ್ಷಕ ಸಾಧನಗಳನ್ನು ಬಳಸದೆ ಶುಚಿ ಕಾರ್ಯದಲ್ಲಿ ತೊಡಗಿದ್ದಾರೆ. ಕೆಲ ಸಿಬ್ಬಂದಿ, ಕೈಗೆ ಗ್ಲೌಸ್‌ ಹಾಗೂ ಮುಖಕ್ಕೆ ಮಾಸ್ಕ್‌ ಧರಿಸಿ ಶುಚಿ ಮಾಡುತ್ತಿದ್ದರೆ, ಕೆಲವರು ಈ ಯಾವುದೇ ಸಂರಕ್ಷಕ ಸಾಧನಗಳನ್ನು ಧರಿಸದೆಯೇ ಶುಚಿ ಕಾರ್ಯದಲ್ಲಿ ತೊಡಗಿದ್ದಾರೆ.


from India & World News in Kannada | VK Polls https://ift.tt/2TxbTzg

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...