ಬೆಂಗಳೂರು: ಇಂದಿನ ದಿನದಲ್ಲಿ ಶ್ರಮಜೀವಿ ಮನುಷ್ಯ ದುಡಿದು ಬದುಕಲು ಸಾಧ್ಯವಿಲ್ಲ, ಹಣ ಇದ್ದವರು ಮಾತ್ರ ಸಮಾಜದಲ್ಲಿ ಬದುಕಲು ಸಾಧ್ಯ. ಹೀಗಂತ ಸದನದಲ್ಲಿ ಬುಧವಾರ ನಡೆದ ಸಂವಿಧಾನದ ಕುರಿತಾದ ಚರ್ಚೆಯಲ್ಲಿ ಸಂಸದೀಯ ವ್ಯವಹಾರ ಹಾಗೂ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಶ್ರೀಮಂತರು ಹಾಗೂ ಬಡವರ ನಡುವಿನ ತಾರತಮ್ಯಗಳ ಕುರಿತಾಗಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಸಂವಿಧಾನದ ಕುರಿತಾದ ಚರ್ಚೆಯಲ್ಲಿ ಮಾತನಾಡಿದ ಅವರು, ಹಣ ಇದ್ದವರು ಮತ್ತಷ್ಟು ಹಣವನ್ನು ಗಳಿಸುತ್ತಾ ಹೋಗುತ್ತಾರೆ, ಬಡವರು ಬಡವರಾಗಿಯೇ ಉಳಿಯುತ್ತಾರೆ. ಹಳ್ಳಿಯ ಜನರು ಇಂದಿಗೂ ಎರಡನೇ ದರ್ಜೆಯಲ್ಲಿ ಬದುಕು ಸಾಗಿಸುತ್ತಿದ್ದಾರೆ ಎಂದರು. ಸಂಪತ್ತಿನ ಸಮಾನ ಹಂಚಿಕೆ ವಿಚಾರವಾಗಿ ಸದನದಲ್ಲಿ ಪ್ರಸ್ತಾಪಿಸಿದ ಅವರು, ಯಾರ ಹತ್ತಿರ ಅಧಿಕ ಸಂಪತ್ತಿದೆ ಅವರಿಂದ ಸ್ವಲ್ಪ ಸಂಪತ್ತನ್ನು ಸರ್ಕಾರ ಪಡೆದುಕೊಂಡು ಇಲ್ಲದವರಿಗೆ ಹಂಚಿಕೆ ಮಾಡುವ ವ್ಯವಸ್ಥೆ ನಮ್ಮಲ್ಲಿ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಮಾಧುಸ್ವಾಮಿಯವರು ಸಮಾಜವಾದಿ ಸಿದ್ಧಾಂತದ ಹಿನ್ನೆಲೆಯಿಂದ ಬಂದವರು. ಆದರೆ ಸಮಾಜವಾದಿ ತತ್ವದಿಂದ ಬಲಪಂಥೀಯ ಸಿದ್ದಾಂತದ ಪಕ್ಷ ಬಿಜೆಪಿಯತ್ತ ಮುಖಮಾಡಿದರೂ ಸಂಪತ್ತಿನ ಹಂಚಿಕೆ ವಿಚಾರವಾಗಿ ಸಮಾಜವಾದಿ ತತ್ವವನ್ನು ಸದನದಲ್ಲಿ ಮಾತನಾಡುವ ಮೂಲಕ ಗಮನಸೆಳೆದರು.
from India & World News in Kannada | VK Polls https://ift.tt/2Ihbcor