ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತದ ಪ್ರವಾಸ ಕೈಗೊಂಡಿದ್ದ 15 ಇಟಲಿ ಪ್ರಜೆಗಳಲ್ಲಿ ಕೊರೊನಾ ವೈರಾಣು ಪತ್ತೆಯಾಗಿದ್ದು, ಈ ತಂಡದೊಂದಿಗಿದ್ದ ಓರ್ವ ಭಾರತೀಯನಿಗೂ ವೈರಾಣು ಅಂಟಿಕೊಂಡಿದೆ ಎನ್ನಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಇಲಾಖೆ, ಕೊರೊನಾ ವೈರಾಣು ಪತ್ತೆಯಾಗಿರುವ 15 ಜನ ಇಟಲಿ ಪ್ರಜೆಗಳನ್ನು ದೆಹಲಿಯ ವೈದ್ಯಕೀಯ ಕ್ಯಾಂಪ್‌ನಲ್ಲಿ ತೀವ್ರ ತಪಾಸಣೆ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದೆ. ಕಳೆದ ತಿಂಗಳು ರಾಜಸ್ಥಾನ ಪ್ರವಾಸ ಕೈಗೊಂಡಿದ್ದ ಈ ತಂಡ, ದೆಹಲಿಗೆ ವಾಪಸ್ಸಾದ ಬಳಿಕ ನಡೆದ ತಪಾಸಣೆಯಲ್ಲಿ ಇರುವುದು ಪತ್ತೆಯಾಗಿದೆ. ಅಲ್ಲದೇ ಈ ತಂಡದೊಂದಿಗೆ ಪ್ರವಾಸ ಮಾಡಿದ್ದ ಓರ್ವ ಭಾರತೀಯ ವ್ಯಕ್ತಿಗೂ ಕೊರೊನಾ ವೈರಸ್ ಅಂಟಿಕೊಂಡಿದೆ. ಈ ಮೂಲಕ ಇದುವರೆಗೂ ಒಟ್ಟು ಆರು ಭಾರತೀಯರಿಗೆ ಕೊರೊನಾ ವೈರಸ್ ತಗುಲಿದಂತಾಗಿದ್ದು, ಇಟಲಿ ಪ್ರಜೆಗಳ ರಾಜಸ್ಥಾನ ಪ್ರವಾಸ ಇದೀಗ ಸರ್ಕಾರಕ್ಕೆ ಭಾರೀ ಆತಂಕವನ್ನು ತಂದೊಡ್ಡಿದೆ. ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಸಚಿವ , ಈ 15 ಸೇರಿದಂತೆ ಭಾರತದಲ್ಲಿ ಇದುವರೆಗೂ ಒಟ್ಟು 21 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ತಂಡವನ್ನು ತೀವ್ರ ತಪಾಸಣೆಗೆ ಗುರಿ ಮಾಡಲಾಗಿದ್ದು, ಇದರ ಜೊತೆಗೆ ದೆಹಲಿಯಿಂದ ಇಟಲಿಗೆ ಹೋಗಿದ್ದ ಭಾರತೀಯನೋರ್ವ ಪ್ರಯಾಣಿಸಿದ್ದ ಏರ್ ಇಂಡಿಯಾ ಸಿಬ್ಬಂದಿ ಹಾಗೂ ಹೈದರಾಬಾದ್ ಟೆಕ್ಕಿ ಬೆಂಗಳೂರಿಗೆ ಪ್ರಯಾಣಿಸಿದ್ದ ಏರ್ ಇಂಡಿಯಾ ಸಿಬ್ಬಂದಿಯನ್ನು 14 ದಿನಗಳ ತಪಾಸಣೆಗೆ ಗುರಿ ಮಾಡಲಾಗಿದೆ. ಇದುವರೆಗೂ ಭಾರತದಲ್ಲಿ ಒಟ್ಟು 28 ಕೊರೊನಾ ವೈರಸ್ ಪ್ರಕರಣ ಪತ್ತೆಯಾದಂತಾಗಿದ್ದು, ದೇಶದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ತೀವ್ರ ಕಟ್ಟೆಚ್ಚರವಹಿಸುವಂತೆ ಹರ್ಷವರ್ಧನ್ ಮನವಿ ಮಾಡಿದ್ದಾರೆ. ಅಲ್ಲದೇ ಎಲ್ಲಾ ಆಸ್ಪತ್ರೆಗಳಿಗೆ ಸೂಕ್ತ ಸಲಕರಣೆಗಳನ್ನು ಶೀಘ್ರದಲ್ಲೇ ವಿತರಿಸುವ ಭರವಸೆಯನ್ನೂ ನೀಡಿದ್ದಾರೆ. ಈ ಮಧ್ಯೆ n95 ಮಾಸ್ಕ್ ದರಗಳನ್ನು ಕೆಲವರು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವ ಕುರಿತು ವರದಿಗಳು ಬಂದಿದ್ದು, ಒಂದು ವೇಳೆ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿದ್ದು ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
from India & World News in Kannada | VK Polls https://ift.tt/3apKJkD