ರಾಷ್ಟ್ರಪತಿಗಳಿಗೂ ತಟ್ಟಿದ ಕೊರೊನಾ ಬಿಸಿ, ಕೋವಿಂದ್‌ ಅವರಿಗೆ ವೈದ್ಯಕೀಯ ಟೆಸ್ಟ್‌?

ಹೊಸದಿಲ್ಲಿ: ಆತಂಕ ಈಗ ರಾಮನಾಥ್‌ ಕೋವಿಂದ್‌ ಅವರಿಗೂ ಕಾಡಿದ್ದು, ಕೋವಿಡ್‌-19 ಪರೀಕ್ಷೆಗೆ ಒಳಗಾಗುತ್ತಾರೆ ಎಂದು ರಾಷ್ಟ್ರಪತಿ ಭವನದ ಮೂಲಗಳು ತಿಳಿಸಿದ್ದು, ರಾಷ್ಟ್ರಪತಿಗಳ ಎಲ್ಲ ದೈನಂದಿನ ನಿಗದಿತ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ ಎನ್ನಲಾಗಿದೆ. ಮಾರ್ಚ್‌ 18ರಂದು ಉತ್ತರ ಪ್ರದೇಶ ಹಾಗು ರಾಜಸ್ಥಾನ ಸಂಸದರಿಗೆ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಿದ್ದ ಉಪಹಾರ ಕೂಟದಲ್ಲಿ ರಾಷ್ಟ್ರಪತಿ ಕೂಡ ಭಾಗವಹಿಸಿದ್ದು, ರಾಷ್ಟ್ರಪತಿಗಳಿಗೆ ಕೊರೊನಾ ಆತಂಕ ಕಾಡಲು ಕಾರಣವಾಗಿದೆ. ಈ ಉಪಹಾರ ಕೂಟದಲ್ಲಿ ರಾಜಸ್ಥಾನದ ಬಿಜೆಪಿ ಸಂಸದ ಕೂಡ ಭಾಗಿಯಾಗಿದ್ದರು. ಉಪಹಾರ ಕೂಟದ ಕೆಲವು ದಿನಗಳ ಹಿಂದೆ ಸಂಸದ ದುಶ್ಯಂತ್‌ ಸಿಂಗ್‌ ಕೊರೊನಾ ಸೋಂಕು ದೃಢಪಟ್ಟಿರುವ ಗಾಯಕಿ ಕನಿಕಾ ಕಪೂರ್‌ ಜೊತೆ ಪಾರ್ಟಿಗೆ ಹೋಗಿದ್ದರು. ಅದಾದ ನಂತರ ಮಾರ್ಚ್‌ 18ರಂದು ರಾಷ್ಟ್ರಪತಿ ಭವನದಲ್ಲಿ ನಡೆದ ಉಪಹಾರ ಕೂಟದಲ್ಲಿ ಭಾಗವಹಿಸಿದ್ದ ದುಶ್ಯಂತ್‌ ಸಿಂಗ್‌, ಶುಕ್ರವಾರ ಸ್ವಯಂ ನಿರ್ಬಂಧ ವಿಧಿಸಿಕೊಂಡಿರುವುದಾಗಿ ಘೋಷಿಸಿದ್ದರು. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿಗಳು ಮುನ್ನೆಚ್ಚರಿಕಾ ಕ್ರಮವಾಗಿ ಕೋವಿಡ್‌-19 ಪರೀಕ್ಷೆಗೆ ಒಳಪಡಲಿದ್ದಾರೆ ಎನ್ನಲಾಗಿದೆ. ಇನ್ನು, ಸಂಸದ ದುಶ್ಯಂತ್‌ ಸಿಂಗ್‌ ಜೊತೆ ಅವರ ತಾಯಿ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ಕೂಡ ಕನಿಕಾ ಕಪೂರ್‌ ಜೊತೆ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದರು. ಅವರನ್ನು ಕೂಡ ಹೋಮ್‌ ಐಸೊಲೇಷನ್‌ನಲ್ಲಿ ಇಡಲಾಗಿದೆ. ದುಷ್ಯಂತ್‌ ಸಿಂಗ್‌ ಸ್ವಯಂ ನಿರ್ಬಂಧ ವಿಧಿಸಿಕೊಂಡಿರುವುದು ಗೊತ್ತಾದ ತಕ್ಷಣ ಟಿಎಂಸಿಯ ಡೆರೆಕ್‌ ಒಬ್ರೆಯನ್‌, ಅಪ್ನಾ ದಳದ ಅನುಪ್ರಿಯಾ ಪಟೇಲ್‌ ಸೇರಿ ಹಲವರು ಸ್ವಯಂ ನಿರ್ಬಂಧ ವಿಧಿಸಿಕೊಂಡಿದ್ದಾರೆ. ಇನ್ನು ಕನಿಕಾ ಕಪೂರ್‌ ಪಾರ್ಟಿಯಲ್ಲಿ ಉತ್ತರ ಪ್ರದೇಶದ ಆರೋಗ್ಯ ಸಚಿವ ಜೈ ಸಿಂಗ್‌ ಕೂಡ ಇದ್ದರು ಎಂಬುದು ತಿಳಿದುಬಂದಿದೆ. ಮಾರ್ಚ್‌ 18ರ ಸಂಸದರ ಉಪಹಾರ ಕೂಟಕ್ಕೆ ಎಲ್ಲ ಸಂಸದರನ್ನು ಥರ್ಮಲ್‌ ಚೆಕ್‌ಅಪ್‌ ಮಾಡಿಯೇ ರಾಷ್ಟ್ರಪತಿ ಭವನದ ಒಳಗಡೆ ಬಿಡಲಾಗಿದೆ ಎಂದು ರಾಷ್ಟ್ರಪತಿ ಭವನದ ಮೂಲಗಳು ತಿಳಿಸಿವೆ.


from India & World News in Kannada | VK Polls https://ift.tt/2Uav4R8

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...