ಅಜರ್ ಅಜೇಯ ಶತಕ; ಆಸೀಸ್ ವಿರುದ್ಧ ಐತಿಹಾಸಿಕ ಗೆಲುವಿಗೆ 22ರ ಸಂಭ್ರಮ

ಹೊಸದಿಲ್ಲಿ: ಆಸ್ಟ್ರೇಲಿಯಾ ವಿರುದ್ಧ ಸ್ಮರಣೀಯ ಗೆಲುವುಗಳ ಬಗ್ಗೆ ಯೋಚಿಸಿದಾಗ ಮೊದಲು ನೆನಪಿಗೆ ಬರುವುದು 2001ನೇ ಇಸವಿಯಲ್ಲಿ ಕೋಲ್ಕತಾದ ಮೈದಾನದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ದೊರಕಿದ ಐತಿಹಾಸಿಕ ಗೆಲುವು. ಬಹುಶ: ನಿಮಗೆ ಯಾರಿಗೂ ಇದರ ಬಗ್ಗೆ ಗೊತ್ತಿರಲಾರದು. ಅದಕ್ಕೂ ಮೊದಲೇ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಅದೇ ಈಡನ್ ಗಾರ್ಡನ್ ಮೈದಾನದಲ್ಲಿ ಭಾರತ ತನ್ನ ಕ್ರಿಕೆಟ್ ಇತಿಹಾಸದಲ್ಲೇ ಅತಿ ದೊಡ್ದ ಗೆಲುವನ್ನು ದಾಖಲಿಸಿತ್ತು. ಹೌದು, ನಾವು ಮಾತನಾಡುತ್ತಿರುವುದು 1998ನೇ ಇಸವಿಯಲ್ಲಿ ಅಂದಿನ ಈ ದಿನದಲ್ಲಿ (ಮಾರ್ಚ್ 21) ಆಸ್ಟ್ರೇಲಿಯಾ ವಿರುದ್ಧ ಭಾರತ ಟೆಸ್ಟ್ ಕ್ರಿಕೆಟ್‌ನ ಅತಿ ದೊಡ್ಡ ಗೆಲುವನ್ನು (ರನ್ ಅಂತರದಲ್ಲಿ) ಬಾರಿಸಿತ್ತು. ಅಂದು ನಾಯಕತ್ವದಲ್ಲಿ ಭಾರತ ಇನ್ನಿಂಗ್ಸ್ ಹಾಗೂ 219 ರನ್‌ಗಳ ಅಂತರದ ಬೃಹತ್ ಗೆಲುವು ದಾಖಲಿಸಿತ್ತು. ಇದೀಗ ಭಾರತದ ಸ್ಮರಣೀಯ ಗೆಲುವಿಗೆ 22 ವರ್ಷಗಳ ಸಂಭ್ರಮ. ಅಷ್ಟೇ ಯಾಕೆ ಎರಡನೇ ಮಹಾಯುದ್ಧದ ಬಳಿಕ ಆಸೀಸ್‌ಗೆ ಎದುರಾದ ಅತಿ ಹೀನಾಯ ಸೋಲು ಇದಾಗಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಮಾರ್ಕ್ ಟೇಲರ್ ನೇತೃತ್ವದ ಆಸೀಸ್ ತಂಡವು 233 ರನ್‌ಗಳಿಗೆ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡಿತು. ಭಾರತದ ಪರ ಜಾವಗಲ್ ಶ್ರೀನಾಥ್, ಸೌರವ್ ಗಂಗೂಲಿ ಹಾಗೂ ಅನಿಲ್ ಕುಂಬ್ಳೆ ತಲಾ ಮೂರು ವಿಕೆಟ್‌ಗಳನ್ನು ಹಂಚಿಕೊಂಡರು. ಬಳಿಕ ಉತ್ತರ ನೀಡಿದ ಟೀಮ್ ಇಂಡಿಯಾ ಐದು ವಿಕೆಟ್ ನಷ್ಟಕ್ಕೆ 633 ರನ್‌ಗಳ ಬೃಹತ್ ಮೊತ್ತ ಪೇರಿಸಿ ಡಿಕ್ಲೇರ್ ಘೋಷಿಸಿತು. ಭಾರತದ ಪರ ಮಿಂಚಿದ ಸ್ವತ: ನಾಯಕ ಮೊಹಮ್ಮದ್ ಅಜರುದ್ದೀನ್, 163 ರನ್ ಗಳಿಸಿ ಅಜೇಯರಾಗುಳಿದರು. ಇವರಿಗೆ ತಕ್ಕ ಸಾಥ್ ನೀಡಿದ ವಿವಿಎಸ್ ಲಕ್ಷ್ಮಣ್, ನವಜೋತ್ ಸಿಧು, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್ ಹಾಗೂ ಸೌರವ್ ಗಂಗೂಲಿ ಅರ್ಧಶತಕ ಸಾಧನೆ ಮಾಡಿದರು. ಬಳಿಕ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಅನಿಲ್ ಕುಂಬ್ಳೆ ಐದು ವಿಕೆಟ್‌ಗಳ ಮಾರಕ ದಾಳಿಗೆ ಸಿಲುಕಿದ ಆಸೀಸ್ 181 ರನ್‌ಗಳಿಗೆ ಆಲೌಟ್ ಆಯಿತು. ಪರಿಣಾಮ ಪಂದ್ಯವನ್ನು ಭಾರತ ಇನ್ನಿಂಗ್ಸ್ ಹಾಗೂ 219 ರನ್ ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸಿತು. ಈ ಮೂಲಕ ಸರಣಿಯನ್ನು ವಶಪಡಿಸಿಕೊಂಡಿತು. ಒಟ್ಟಾರೆಯಾಗಿ ಇದು ಟೆಸ್ಟ್‌ ಕ್ರಿಕೆಟ್‌ನಲ್ಲಿ ಆಸೀಸ್‌ಗೆ ಎದುರಾದ ನಾಲ್ಕನೇ ಅತಿ ಹೀನಾಯ ಸೋಲಾಗಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಆಸೀಸ್‌ಗೆ ಎದುರಾದ ಅತಿ ಹೀನಾಯ ಸೋಲುಗಳು (ರನ್ ಅಂತರದಲ್ಲಿ): 1938: ಇನ್ನಿಂಗ್ಸ್ ಹಾಗೂ 579 ರನ್, ಇಂಗ್ಲೆಂಡ್ ವಿರುದ್ಧ 1892: ಇನ್ನಿಂಗ್ಸ್ ಹಾಗೂ 230 ರನ್, ಇಂಗ್ಲೆಂಡ್ ವಿರುದ್ಧ 1912: ಇನ್ನಿಂಗ್ಸ್ ಹಾಗೂ 225 ರನ್, ಇಂಗ್ಲೆಂಡ್ ವಿರುದ್ಧ 1998: ಇನ್ನಿಂಗ್ಸ್ ಹಾಗೂ 219 ರನ್, ಭಾರತ ವಿರುದ್ಧ 1886: ಇನ್ನಿಂಗ್ಸ್ ಹಾಗೂ 217 ರನ್, ಇಂಗ್ಲೆಂಡ್ ವಿರುದ್ಧ


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2xdqAjC

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...