ಹೊಸದಿಲ್ಲಿ: ದೇಶಾದ್ಯಂತ 71ನೇ ಗಣರಾಜ್ಯೋತ್ಸವದ ಸಂಭ್ರಮ ಮುಗಿಲು ಮುಟ್ಟಿದೆ. ಎಲ್ಲೆಲ್ಲೂ ಜನಗಣಮನ ಮುಗಿಲು ಮುಟ್ಟಿದೆ. ಹಿನ್ನೆಲೆ ದೇಶಾದ್ಯಂತ ಸಡಗರದ ಆಚರಣೆ ನಡೆಯುತ್ತಿದ್ದು, ದಿಲ್ಲಿಯ ರಾಜ್‌ಪಥ್‌ನಲ್ಲಿ ನಡೆಯಲಿರುವ ಪರೇಡ್‌ನಲ್ಲಿ ಬ್ರೆಜಿಲ್ ಅಧ್ಯಕ್ಷ ಅತಿಥಿಯಾಗಿ ಭಾಗಿಯಾಗಿದ್ದಾರೆ. 9: 30: ಪ್ರಧಾನಿ ಮೋದಿ ಅಮರ್ ಜವಾನ್ ಜ್ಯೋತಿ ಬದಲು ಇದೇ ಮೊದಲ ಬಾರಿಗೆ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ, ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. 9: 20: ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಧ್ವಜಾರೋಹಣ ನೆರವೇರಿಸಿದ್ದಾರೆ. ಅಲ್ಲದೆ, ಗೌರವ ವಂದನೆಯನ್ನೂ ಸ್ವೀಕಾರ ಮಾಡಿದ್ದಾರೆ. ಗಣರಾಜ್ಯೋತ್ಸವ ಹಿನ್ನೆಲೆ ರಾಜ್ಯದ ಜನತೆಗೆ ಶುಭಾಶಯ ಕೋರಿದ್ದಾರೆ. ಮಹಾತ್ಮ ಗಾಂಧೀಜಿ ಕಂಡಿದ್ದ ಕನಸು ನನಸು ಮಾಡಬೇಕು. ಈ ಹಿನ್ನೆಲೆ ಮಹಿಳೆಯರಿಗೆ ನಿರ್ಭೀತಿಯ ವಾತಾವರಣ ಕಲ್ಪಿಸಬೇಕು. ಬೆಂಗಳೂರಿನಲ್ಲಿ ಸಂಚಾರದಟ್ಟಣೆ ವಹಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಅಲ್ಲದೆ, ಆಡಳಿತದಲ್ಲಿ ದೇಶದಲ್ಲೇ ಕರ್ನಾಟಕ 3ನೇ ಸ್ಥಾನದಲ್ಲಿದೆ ಎಂದೂ ಗಣರಾಜ್ಯೋತ್ಸವ ಭಾಷಣದಲ್ಲಿ ರಾಜ್ಯಪಾಲರು ತಿಳಿಸಿದ್ದಾರೆ. ಪಾಕಿಸ್ತಾನ ಉಗ್ರರ ವಿಧ್ವಂಸಕ ಕೃತ್ಯದ ಸಂಚಿನ ಭೀತಿ ಹಿನ್ನೆಲೆ ಗಣರಾಜ್ಯೋತ್ಸವ ಸಮಾರಂಭಕ್ಕೆ ಕೇಂದ್ರ ಸರಕಾರ ಅಭೂತಪೂರ್ವ ಬಿಗಿಭದ್ರತೆ ಕಲ್ಪಿಸಿದೆ. ಮುಖಚರ್ಯೆ ಗುರುತು ಪತ್ತೆ ವ್ಯವಸ್ಥೆ ಮತ್ತು ಡ್ರೋನ್ ಕ್ಯಾಮೆರಾ ಬಳಕೆ ಮಾಡುತ್ತಿರುವ ದಿಲ್ಲಿ ಪೊಲೀಸರು ಭದ್ರತೆ ವಿಷಯದಲ್ಲಿ ಒಂದು ಸಣ್ಣ ಲೋಪವೂ ಆಗಬಾರದು ಎನ್ನುವ ಎಚ್ಚರಿಕೆ ವಹಿಸಿದ್ದಾರೆ. ಕಣ್ಗಾವಲಿಗೆ ಕಾರ್ಯಕ್ರಮದ ಸುತ್ತ 10,000 ಭದ್ರತಾ ಸಿಬ್ಬಂದಿ ನೇಮಕ ಮಾಡಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಧ್ವಜಾರೋಹಣ ಮಾಡಲಿದ್ದು, ಬಳಿಕ ರಾಷ್ಟ್ರಗೀತೆ ಮೊಳಗಲಿದೆ. 21 ಕುಶಾಲ ತೋಪುಗಳ ಜತೆಗೆ ರಾಷ್ಟ್ರಧ್ವಜಾರೋಹಣ ನಡೆಯಲಿದ್ದು ನಂತರ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಂದ ಗಣರಾಜ್ಯೋತ್ಸವ ಪರೇಡ್‌ಗೆ ಚಾಲನೆ ದೊರೆಯಲಿದೆ.
from India & World News in Kannada | VK Polls https://ift.tt/37EsQxm