ಭಾರತ-ಪಾಕಿಸ್ತಾನ ಪ್ರತ್ಯೇಕ ರಾಷ್ಟ್ರಗಳ ಸಿದ್ಧಾಂತ ಮೊದಲು ಪ್ರತಿಪಾದಿಸಿದ್ದೇ ಸಾವರ್ಕರ್‌: ಶಶಿ ತರೂರ್‌

ಜೈಪುರ: ಮುಸ್ಲಿಂ ಲೀಗ್‌ ಪಾಕಿಸ್ತಾನ ವಿಧೇಯಕವನ್ನು ಮಂಡಿಸುವುದಕ್ಕಿಂತ ಮೂರು ವರ್ಷ ಮೊದಲೇ ಎರಡು ರಾಷ್ಟ್ರಗಳ ಸಿದ್ಧಾಂತವನ್ನು ಪ್ರತಿಪಾದಿಸಿದ್ದರು ಎಂದು ಕಾಂಗ್ರೆಸ್‌ ನಾಯಕ ಹೇಳಿದ್ದಾರೆ. ಜೈಪುರ ಸಾಹಿತ್ಯ ಕಾರ್ಯಕ್ರಮದ ಚರ್ಚೆಯೊಂದರಲ್ಲಿ ಭಾಗವಹಿಸಿದ್ದ ಶಶಿ ತರೂರ್‌, ''ಭಾರತ-ಪಾಕಿಸ್ತಾನ ಎಂಬ ಎರಡು ರಾಷ್ಟ್ರಗಳ ಸಿದ್ಧಾಂತವನ್ನು ಮೊದಲು ಪ್ರತಿಪಾದಿಸಿದ ವ್ಯಕ್ತಿ ವಿಡಿ ಸಾವರ್ಕರ್‌. ಅವರು ಅಂದು ಹಿಂದು ಮಹಾಸಭಾದ ಮುಖ್ಯಸ್ಥರಾಗಿದ್ದರು. ಭಾರತ ಹಿಂದುಗಳ ರಾಷ್ಟ್ರವೆಂದು ಹಾಗೂ ಪಾಕಿಸ್ತಾನ ಮುಸ್ಲಿಮರ ರಾಷ್ಟ್ರವೆಂದು ಪ್ರತ್ಯೇಕಿಸುವ ವಿಚಾರವನ್ನು ಮುನ್ನೆಲೆ ತಂದಿದ್ದು ವಿಡಿ ಸಾವರ್ಕರ್‌. ಇದಾದ ಮೂರು ವರ್ಷಗಳ ಬಳಿಕ ಮುಸ್ಲಿಂ ಲೀಗ್‌ ಲಾಹೋರ್‌ನಲ್ಲಿ ಪಾಕಿಸ್ತಾನ ರಚನೆಯ ವಿಧೇಯಕವನ್ನು ಮಂಡಿಸಿತು'' ಎಂದರು. ಬಿಜೆಪಿ ಮತ್ತು ಶಿವಸೇನೆ ವಿಡಿ ಸಾವರ್ಕರ್‌ ಅವರಿಗೆ ಭಾರತ ರತ್ನ ನೀಡಬೇಕು ಎಂಬ ವಿಚಾರವನ್ನು ಹರಿಯಬಿಟ್ಟಾಗಿಲಿಂದ ರಾಜಕೀಯ ವಲಯದಲ್ಲಿ ಸಾವರ್ಕರ್‌ ಸಿದ್ಧಾಂತದ ಬಗ್ಗೆ ಒಂದಿಲ್ಲೊಂದು ವಿಚಾರಗಳು ಚರ್ಚೆಯಾಗುತ್ತಲೇ ಬಂದಿವೆ. ಕೆಲವು ಪಕ್ಷಗಳು ವಿಡಿ ಸಾವರ್ಕರ್‌ ಅವರಿಗೆ ಭಾರತ ರತ್ನ ಪುರಸ್ಕಾರ ನೀಡುವುದನ್ನು ವಿರೋಧಿಸುತ್ತಿವೆ. ಕಾಂಗ್ರೆಸ್‌ ಜೊತೆಗೆ ಮೈತ್ರಿ ಮಾಡಿಕೊಂಡು ಮಹಾರಾಷ್ಟ್ರದಲ್ಲಿ ಸರಕಾರ ರಚಿಸಿಕೊಂಡಿರುವ ಶಿವಸೇನೆ ನಾಯಕ ಸಂಜಯ್‌ ರಾವತ್‌ ಜನವರಿ 18ರಂದು, ''ವೀರ ಸಾವರ್ಕರ್‌ ಅವರಿಗೆ ಭಾರತ ರತ್ನ ನೀಡಸು ವಿರೋಧಿಸುತ್ತಿರುವವರನ್ನು ಸಾವರ್ಕರ್‌ ಅವರಿದ್ದ ಜೈಲಿನಲ್ಲೇ ಎರಡು ದಿನ ಕೂಡಿ ಹಾಕಬೇಕು'' ಎಂದು ಬೆದರಿಕೆಯೊಡ್ಡಿದ್ದರು. ''ವೀರ ಸಾವರ್ಕರ್‌ ಅವರಿಗೆ ಗೌರವ ಕೊಡಬೇಕು ಎಂದು ನಾವು ಯಾವಾಗಲು ಒತ್ತಾಯಿಸುತ್ತೇವೆ. ಸಾವರ್ಕರ್‌ ಅವರಿಗೆ ಭಾರತ ರತ್ನ ನೀಡುವುದನ್ನು ವಿರೋಧಿಸುತ್ತಿರುವವರಿಗೆ ಸಾವರ್ಕರ್‌ ಶಿಕ್ಷೆ ಅನುಭವಿಸಿದ ಅಂಡಮಾನ್‌ನ ಜೈಲಿನೊಳಗೆ ಎರಡು ದಿನ ಕೂಡಿ ಹಾಕಬೇಕು. ಹೀಗಾದರೆ ಮಾತ್ರ ಸಾವರ್ಕರ್‌ ರಾಷ್ಟ್ರಕ್ಕಾಗಿ ಮಾಡಿದ ತ್ಯಾಗ ಮತ್ತು ಸೇವೆಯ ಅರಿವಾಗುತ್ತದೆ'' ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ್ದರು.


from India & World News in Kannada | VK Polls https://ift.tt/3aK5zvW

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...