ಆಗ್ರಾ: 60 ವರ್ಷದ ಮಹಿಳೆ ಜೊತೆಗೆ ಲವ್‌ನಲ್ಲಿ ಬಿದ್ದಿರುವ 22 ವರ್ಷದ ಯುವಕನ ವಿರುದ್ಧ ದೂರು ದಾಖಲಾದ ವಿಚಿತ್ರ ಘಟನೆ ಆಗ್ರಾದ ತಾಜ್ ಮಹಾಲ್ ಪ್ರದೇಶದಲ್ಲಿ ನಡೆದಿದೆ. ನಗರದ ಎಟ್ಮಾದುದ್ದೌಲ ಪೊಲೀಸ್ ಠಾಣೆಯಲ್ಲಿ ಶಾಂತಿಯನ್ನು ಕದಡಿದ ಆರೋಪದಡಿ ಯುವಕ ವಿರುದ್ಧ ದೂರು ದಾಖಲು ಮಾಡಲಾಗಿದೆ. ಮಗನ ಜೊತೆ ಪೊಲೀಸ್ ಠಾಣೆಗೆ ಆಗಮಿಸಿದ ಮಹಿಳೆಯ ಪತಿ, ಯುವಕನ ವಿರುದ್ಧ ದೂರು ದಾಖಲಿಸಿದ್ದಾರೆ. ಇದೇ ವೇಳೆ ಯುವಕ ಮತ್ತು ಆತನ ಕುಟುಂಬಸ್ಥರು ಠಾಣೆಗೆ ಆಗಮಿಸಿದ್ದು ಪರಸ್ಪರ ವಾಗ್ವಾದ ನಡೆದಿದೆ. ಯುವಕ ಮತ್ತು 60 ವರ್ಷದ ಮಹಿಳೆ ವಿವಾಹವಾಗುವುದಾಗಿ ಘೋಷಿಸಿಕೊಂಡರು ಠಾಣೆಯಲ್ಲಿ ಎರಡು ಕುಟುಂಬದ ನಡುವೆ ಜಗಳ ಮುಂದುವರಿದಿದೆ. ಎರಡೂ ಕುಟುಂಬದ ಸದಸ್ಯರು ಗಲಾಟೆ ನಿಲ್ಲಿಸದಿದ್ದಾಗ ಕೊನೆಗೆ ಬೇಸತ್ತ ಪೊಲೀಸರು ಯುವಕ ವಿರುದ್ಧ ಶಾಂತಿ ಕದಡಿದ ಆರೋಪ ಹೊರಿಸಿ ಪ್ರಕರಣ ದಾಖಲಿಸಿದ್ದಾರೆ. ಮಹಿಳೆಗೆ 7 ಮಕ್ಕಳದಿದ್ದಾರೆ. ಜೊತೆಗೆ ಏಳು ಮೊಮ್ಮಕ್ಕಳನ್ನು ಹೊಂದಿದ್ದು ಪ್ರಕಾಶ್‌ನಗರದಲ್ಲಿ ಜೀವಿಸುತ್ತಿದ್ದಾರೆ.
from India & World News in Kannada | VK Polls https://ift.tt/30U7w4M