ಈ ಬಾರಿ 2 ಹಂತದ ಬಜೆಟ್‌ ಅಧಿವೇಶನ: ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ ಶಿಫಾರಸು

ಹೊಸದಿಲ್ಲಿ: ಎರಡು ಹಂತಗಳಲ್ಲಿಈ ಬಾರಿಯ ಕೇಂದ್ರೀಯ ನಡೆಸಲು ಸಂಸದೀಯ ವ್ಯವಹಾರಗಳ ಕುರಿತಾದ ಸಂಪುಟ ಸಮಿತಿ ಸರಕಾರಕ್ಕೆ ಶಿಫಾರಸು ಮಾಡಿದೆ. ಜ.31 ರಿಂದ ಫೆ. 11ರವರೆಗೆ ಮೊದಲ ಹಂತದ ಅಧಿವೇಶನ, ಅದರಲ್ಲಿ ಫೆ. 1ರಂದು ವಿತ್ತ ಸಚಿವರಿಂದ ಬಜೆಟ್‌ ಮಂಡನೆಗೆ ಸಮಿತಿ ಶಿಫಾರಸು ಮಾಡಿದೆ. ಉಳಿದಂತೆ ಎರಡನೇ ಹಂತದ ಅಧಿವೇಶನವನ್ನು ಮಾ. 2 ರಿಂದ ಏ.3ರವರೆಗೆ ನಡೆಸಲು ಸಮಿತಿ ಸಲಹೆ ನೀಡಿದೆ. ಒಟ್ಟಿನಲ್ಲಿಎರಡು ಹಂತಗಳ ನಡುವೆ ಒಂದು ತಿಂಗಳ ಅಂತರ ಕಾಯ್ದುಕೊಳ್ಳಲಾಗುವುದು. ಈ ವೇಳೆ ಸಂಸತ್‌ ಸಮಿತಿಗಳು ಬಜೆಟ್‌ನಲ್ಲಿ ವಿವಿಧ ಸಚಿವಾಲಯಗಳಿಗೆ ಹಂಚಿಕೆಯಾದ ಅನುದಾನಗಳನ್ನು ಪರಿಶೀಲಿಸಿ ಪಟ್ಟಿ ಸಿದ್ಧಪಡಿಸುತ್ತವೆ. ಸಂಪುಟಕ್ಕೆ ಮಾಹಿತಿ: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿರಾಜ್ಯಸಭೆ ಅನುಮೋದಿಸಿದ ಮೋಟಾರು ವಾಹನ ಕಾಯಿದೆ ತಿದ್ದುಪಡಿ ವಿಧೇಯಕದ ಬಗ್ಗೆ ಮಾಹಿತಿ ನೀಡಲಾಯಿತು. ತಿದ್ದುಪಡಿಯಿಂದಾಗಿ ರಾಷ್ಟ್ರೀಯ ಸಾರಿಗೆ ನೀತಿ ರಚನೆ ವೇಳೆ ರಾಜ್ಯ ಸರಕಾರಗಳ ಸಲಹೆ ಸ್ವೀಕರಿಸಲಾಗುವುದು. 6 ಉದ್ದಿಮೆಗಳ ಬಂಡವಾಳ ಹಿಂತೆಗೆತಕ್ಕೆ ಸಮ್ಮತಿ: ಸಾರ್ವಜನಿಕ ವಲಯದ ಆರು ಉದ್ದಿಮೆಗಳಲ್ಲಿ ಈಕ್ವಿಟಿ ಪಾಲುದಾರಿಕೆಯ ಕಾರ್ಯತಂತ್ರ ಬಂಡವಾಳ ಹಿಂತೆಗೆತಕ್ಕೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಹಣಕಾಸು ವ್ಯವಹಾರಗಳ ಕುರಿತ ಸಚಿವ ಸಮತಿ ಇಂದು ಒಪ್ಪಿಗೆ ನೀಡಿದೆ. ಸಚಿವ ಸಂಪುಟ ಸಭೆ ನಂತರ ಕೇಂದ್ರ ಸಚಿವರಾದ ಪ್ರಕಾಶ್‌ ಜಾವಡೇಕರ್‌ ಮತ್ತು ಧರ್ಮೇಂದ್ರ ಪ್ರಧಾನ್‌ ಅವರು ಸುದ್ದಿಗಾರರಿಗೆ ಸಭೆಯ ತೀರ್ಮಾನಗಳನ್ನು ವಿವರಿಸಿದರು. ಖನಿಜ ಮತ್ತು ಲೋಹ ವಹಿವಾಟು ನಿಗಮ (ಎಂಎಂಟಿಸಿ)ದಲ್ಲಿ ಶೇ 49.78, ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (ಎನ್‌ಎಂಡಿಸಿ)ದಲ್ಲಿ ಶೇ 10.10, ಮೆಕಾನ್‌ ನಲ್ಲಿ ಶೇ 0.68, ಭಾರತ್‌ ಹೆವಿ ಎಲೆಕ್ಟ್ರಿಕಲ್ಸ್‌ (ಬಿಎಚ್‌ಇಎಲ್‌) ನಲ್ಲಿ ಶೇ.0.68ರಷ್ಟು ಈಕ್ವಿಟಿ ಪಾಲುದಾರಿಕೆಯ ಕಾರ್ಯತಂತ್ರ ಬಂಡವಾಳ ಹಿಂತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ. ಒಡಿಶಾ ರಾಜ್ಯ ಸರಕಾರ ಇಪಿಕೊಲ್‌ ಮತ್ತು ಒಎಂಸಿ ಸಹ ಈ ಉದ್ದಿಮೆಗಳಲ್ಲಿ ಸೇರಿದ್ದು, ಇವುಗಳಲ್ಲಿ ಕ್ರಮವಾಗಿ ಶೇ.12 ಹಾಗೂ ಶೇ.20.47ರಷ್ಟು ಬಂಡವಾಳ ಹಿಂತೆಗೆದುಕೊಳ್ಳ ಲಾಗುವುದು ಎಂದು ಅವರು ತಿಳಿಸಿದ್ದಾರೆ.


from India & World News in Kannada | VK Polls https://ift.tt/2T4wNaf

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...