
ಬೆಂಗಳೂರು: ಬಂಗಾಳ ಕೊಲ್ಲಿ ಭಾಗದಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ಮುಂದಿನ 24 ಗಂಟೆಗಳಲ್ಲಿ ಚಂಡಮಾರುತದ ವಾತಾವರಣ ಬಲಗೊಳ್ಳಲಿದೆ. ಹೀಗಾಗಿ ಆಂಧ್ರಪ್ರದೇಶ ಮತ್ತು ಸೇರಿದಂತೆ ದೇಶದ ವಿವಿಧ ಪ್ರದೇಶಗಳಲ್ಲಿ ಭಾರಿ ಸುರಿಯುವ ಸೂಚನೆ ನೀಡಲಾಗಿದೆ. ಆಂಧ್ರಪ್ರದೇಶ ಮತ್ತು ಒಡಿಶಾ ಕರಾವಳಿಗಳ ಮೇಲೆ ಅಪ್ಪಳಿಸಲಿದ್ದು, ಇದರಿಂದಾಗಿ ಈ ರಾಜ್ಯಗಳಿಂದ ಉಳಿದ ಕಡೆಗೆ ತೆರಳುವ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಮುನ್ನೆಚ್ಚರಿಕೆ ಕ್ರಮವಾಗಿ ಈಗಾಗಲೇ ಕೆಲವು ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಇದರ ಪರಿಣಾಮ ಕರ್ನಾಟಕದ ಮೇಲೆಯೂ ಉಂಟಾಗುತ್ತಿದೆ. ನೈಋತ್ಯ ರೈಲ್ವೆಯು ಕೆಲವು ರೈಲುಗಳ ಸಂಚಾರವನ್ನು ರದ್ದುಗೊಳಿಸಿರುವುದಾಗಿ ಪ್ರಕಟಿಸಿದೆ. ಡಿಸೆಂಬರ್ 3ರಂದು ಹೊರಡುವ 22832 ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ- ಹೌರಾ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್, 02983 ಬೆಂಗಳೂರು ಕಂಟೋನ್ಮೆಂಟ್- ಅಗರ್ತಲಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲುಗಳು ಸಂಚರಿಸುತ್ತಿಲ್ಲ. ಡಿಸೆಂಬರ್ 4ರಂದು ಸಂಚರಿಸುವ 22884 ಯಶವಂತಪುರ- ಪುರಿ ಗರೀವ್ ರಥ್ ಎಕ್ಸ್‌ಪ್ರೆಸ್, ಡಿಸೆಂಬರ್ 5ರ 22818 ಮೈಸೂರು- ಹೌರಾ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, ಡಿಸೆಂಬರ್ 6ರ 12890 ಯಶವಂತಪುರ- ಟಾಟಾನಗರ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಹಾಗೂ ಡಿಸೆಂಬರ್ 7ರ 18638 ಬೆಂಗಳೂರು ಕಂಟೋನ್ಮೆಂಟ್- ಹಾಟಿಯಾ ಎಕ್ಸ್‌ಪ್ರೆಸ್ ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ. ಎಲ್ಲೆಲ್ಲಿ ಮಳೆ? ಜವಾದ್ ಚಂಡಮಾರುತವು () ಒಡಿಶಾ, ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಭಾರಿಯಿಂದ ವಿಪರೀತ ಮಳೆ ಸುರಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ () ಎಚ್ಚರಿಕೆ ನೀಡಿದೆ. ಡಿಸೆಂಬರ್ 4ರ ಬೆಳಗಿನ ವೇಳೆಗೆ ಉತ್ತರ ಆಂಧ್ರಪ್ರದೇಶ ಮತ್ತು ಒಡಿಶಾಗಳಲ್ಲಿ ಚಂಡಮಾರುತ ತನ್ನ ಆರ್ಭಟ ಆರಂಭಿಸುವ ನಿರೀಕ್ಷೆ ಇದೆ. ಗಂಟೆಗೆ 100 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ. ಸಮುದ್ರದಲ್ಲಿ ಭಾರಿ ಅಲೆಗಳು ಏಳುವ ಅಪಾಯವಿದೆ ಎಂದು ಸೂಚನೆ ನೀಡಿದೆ. ಒಡಿಶಾದ ನಾಲ್ಕು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಏಳು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಹಾಗೂ ನಾಲ್ಕು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಡಿಸೆಂಬರ್ 5ರವರೆಗೂ ಮೀನುಗಾರಿಕೆಯನ್ನು ನಿಷೇಧಿಸಲಾಗಿದೆ. ಈ ಚಂಡಮಾರುತ ಒಡಿಶಾಕ್ಕೆ ಅತಿ ಹೆಚ್ಚು ಹಾನಿ ಮಾಡುವ ಭೀತಿ ಎದುರಾಗಿದೆ. ಎನ್‌ಡಿಆರ್‌ಎಫ್, ರಾಜ್ಯ ಅಗ್ನಿಶಾಮಕ ಸೇವೆ ಮತ್ತು ಒಡಿಶಾ ವಿಪತ್ತು ತುರ್ತು ಕ್ರಿಯಾ ದಳ ಸೇರಿದಂತೆ ಈಗಾಗಲೇ ಸುಮಾರು 266 ರಕ್ಷಣಾ ತಂಡಗಳನ್ನು ಕರಾವಳಿ ಜಿಲ್ಲೆಗಳಲ್ಲಿ ನಿಯೋಜನೆ ಮಾಡಲಾಗಿದೆ. ಕರಾವಳಿ ಜಿಲ್ಲೆಗಳಲ್ಲಿನ ಜನರು ಮನೆಗಳ ಒಳಗೇ ಇರುವಂತೆ ಐಎಂಡಿ ಸಲಹೆ ನೀಡಿದೆ. ಬೆಟ್ಟ ಪ್ರದೇಶಗಳಲ್ಲಿ ಭೂ ಕುಸಿತದ ಎಚ್ಚರಿಕೆ ನೀಡಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಡಿ. 3 ರಿಂದ 6ರವರೆಗೆ ಭಾರಿಯಿಂದ ವಿಪರೀತ ಮಳೆ ನಿರೀಕ್ಷೆ ಮಾಡಲಾಗಿದೆ. ಎಂಟು ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲಾಗಿದೆ. ಸೈಕ್ಲೋನ್ ಪರಿಣಾಮ ಜಾರ್ಖಂಡ್‌ನಲ್ಲಿ ಕೂಡ ಮಳೆಯಾಗುವ ಸಾಧ್ಯತೆ ಇದೆ.
from India & World News in Kannada | VK Polls https://ift.tt/2ZPvcLr