
ಪ್ರಮೋದ ಹರಿಕಾಂತ ಕಾರವಾರ: ಮಳೆಗಾಲ ಆರಂಭವಾಗಿ ಏಳು ತಿಂಗಳಾದರು ನಿಲ್ಲದ ಮಳೆಯಿಂದ ಜಿಲ್ಲೆಅಕ್ಷರಶಃ ತತ್ತರಿಸಿದೆ. ಮಲೆನಾಡು, ಕರಾವಳಿ,ಬಯಲುಸೀಮೆ ಪ್ರದೇಶದಲ್ಲಿಸಾಲು ಸಾಲು ಹಾನಿಯಿಂದ ಜನರ ಸ್ಥಿತಿ ಕಣ್ಣೀರ ಕತೆಯಾಗಿದೆ. ಮೇ ತಿಂಗಳ ಕೊನೆಯಲ್ಲಿ ಆರಂಭವಾದ ಉತ್ತರ ಕನ್ನಡ ಜಿಲ್ಲೆಯಲ್ಲಿಈಗಲೂ ಆಗಾಗ ಅಬ್ಬರಿಸುತ್ತಲೇ ಇದೆ. ಎರಡು ದಿನಗಳಿಂದ ರಾತ್ರಿ ಹೊತ್ತು ಮತ್ತೆ ಮಳೆ ಜೋರಾಗಿದೆ. ಬುಧವಾರ ರಾತ್ರಿ ಜಿಲ್ಲೆಯಲ್ಲಿ 153.2 ಮಿ.ಮೀ.ಮಳೆಯಾಗಿದೆ. ಕಳೆದ ಏಳು ತಿಂಗಳಿಂದ ಮಳೆಯಿಂದ ಹಾನಿಯೇ ಆಗುತ್ತಿದೆ. ಮಳೆ ಹೀಗೆಯೇ ಮುಂದುವರಿದರೆ ಮಲೆನಾಡಿನ ಅಡಕೆ, ಕಾಳು ಮೆಣಸು ಕೂಡ ಕೈ ಸೇರುವ ಮೊದಲೇ ಮಣ್ಣು ಸೇರುವ ಆತಂಕ ಎದುರಾಗಿದೆ. ಜತೆಗೆ ಕಟಾವು ಮಾಡಿಕೊಂಡ ಭತ್ತದ ರಕ್ಷಣೆಯೂ ಸವಾಲಾಗುತ್ತಿದೆ. ಕಳೆದ ಜುಲೈನಲ್ಲಿ ಜಿಲ್ಲೆ ಭೂ ಕುಸಿತ, ಪ್ರವಾಹದಿಂದ ನಲುಗಿ ಹೋಗಿತ್ತು. ಸುಧಾರಿಸಿಕೊಳ್ಳಬೇಕು ಎನ್ನುವಾಗಲೇ ಅಕಾಲಿಕ ಮಳೆ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ. ಆರು ತಿಂಗಳ ಮಳೆಯಲ್ಲಿಯೇ ಜಿಲ್ಲೆಯಲ್ಲಿ ಬರೋಬ್ಬರಿ 845 ಕೋಟಿ ರೂ. ಹಾನಿಯಾಗಿದೆ ಎಂದು ರಾಜ್ಯ ಸರಕಾರಕ್ಕೆ ಜಂಟಿ ಸಮೀಕ್ಷೆಯ ವರದಿ ಸಲ್ಲಿಸಲಾಗಿದೆ. ಈಗಲೂ ಮಳೆ ಅಬ್ಬರದಿಂದ ಹಾನಿ ಆಗುತ್ತಲೇ ಇದೆ. ಜಿಲ್ಲಾಡಳಿತ ಮಳೆ ನೆಪವೊಡ್ಡಿ ರಸ್ತೆ ದುರಸ್ತಿ ಕೆಲಸಕ್ಕೂ ದಿನದೂಡುತ್ತಿದೆ. ಈಗ ಅಕಾಲಿಕ ಮಳೆಯ ಹೊಡೆತ ಸೇರಿ ಭತ್ತ ಪ್ರದೇಶ 2377 ಹೆಕ್ಟೇರ್ ಮೀರಿದೆ. ಎರಡು ದಿನದ ಮಳೆಯಿಂದ ಮತ್ತಷ್ಟು ಭತ್ತ ಬೆಳೆ ಪ್ರದೇಶ ಹಾನಿಯಾಗಿದ್ದು, ಅದರ ಸಮೀಕ್ಷೆಯೂ ಮುಂದುವರಿದಿದೆ. ಜಿಲ್ಲೆಇಷ್ಟೆಲ್ಲ ಸಂಕಷ್ಟದಲ್ಲಿದ್ದರೂ ಪರಿಹಾರ ಕಾಮಗಾರಿ ಕೈಗೊಳ್ಳಲು ರಾಜ್ಯ ಸರಕಾರದಿಂದ ಸಿಕ್ಕಿದ್ದು ಸುಮಾರು 220 ಕೋಟಿ ರೂ.ಅನುದಾನ ಮಾತ್ರ ಎಂದು ಮೂಲದಿಂದ ಗೊತ್ತಾಗಿದೆ. ಕಲ್ಲಂಗಡಿಗೂ ಆಪತ್ತು ಜಿಲ್ಲೆಯಲ್ಲಿ ಭತ್ತ ಕಟಾವು ಬಳಿಕ ಕಲ್ಲಂಗಡಿ ಹಣ್ಣು ಬೆಳೆಯಲಾಗುತ್ತದೆ. ಶಿವರಾತ್ರಿ ವೇಳೆ ಬೆಳೆ ಕಟಾವಿಗೆ ಬರುವಂತೆ ಡಿಸೆಂಬರ್‌ನಲ್ಲಿ ಕಲ್ಲಂಗಡಿ ಬಿತ್ತನೆ ಆರಂಭವಾಗುತ್ತಿತ್ತು. ಅಂಕೋಲಾ, ಕುಮಟಾ, ಕಾರವಾರ ಮತ್ತು ಬನವಾಸಿ ತಾಲೂಕು ಸೇರಿ ಜಿಲ್ಲೆಯ ಸುಮಾರು 220 ಹೆಕ್ಟೇರ್ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆಯಲಾಗುತ್ತದೆ. ಹೊಲದಲ್ಲಿ ಹೆಚ್ಚಿನ ನೀರಿನ ಅಂಶ ಇದ್ದರೆ ಕಲ್ಲಂಗಡಿಗೆ ರೋಗ ಅಂಟಿಕೊಳ್ಳುತ್ತದೆ. ಹಾಗಾಗಿ ಎಲ್ಲಿಯೂ ಕಲ್ಲಂಗಡಿ ಬಿತ್ತನೆ ಆರಂಭವಾಗಿಲ್ಲ. 38 ರೈತರಿಗಷ್ಟೇ ಪರಿಹಾರ ಮಲೆನಾಡು ಭಾಗದಲ್ಲಿ ಮುಂಗಾರಿನಿಂದ ಈವರೆಗೆ ಅಡಕೆ, ಕಾಳು ಮೆಳಸು ಪ್ರದೇಶ ಸೇರಿ ಅನೇಕ ತೋಟಗಾರಿಕೆ ಬೆಳೆಗಳು ಹಾನಿಯಾಗಿವೆ. ಸುಮಾರು 200 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ ಎಂದು ರಾಜ್ಯ ಸರಕಾರಕ್ಕೆ ವರದಿ ಸಲ್ಲಿಸಲಾಗಿತ್ತು. ಈಗ ಜಂಟಿ ಸಮೀಕ್ಷೆ ಬಳಿಕ ಕೇವಲ 38 ಬೆಳೆಗಾರರು ಮಾತ್ರ ಹಾನಿ ಪರಿಹಾರಕ್ಕೆ ಅರ್ಹರಾಗಿದ್ದಾರೆ ಎಂದು ತೋಟಗಾರಿಕೆ ಇಲಾಖೆ ಹೇಳಿದೆ. ಆಸ್ತಿ ದುರಸ್ತಿಗೂ ಕಂಟಕ ಜುಲೈನಲ್ಲಿ ಬಿದ್ದ ಮಳೆಯಿಂದ ಜಿಲ್ಲೆ ರಾಜ್ಯದಲ್ಲಿಯೇ ಅತಿ ಹೆಚ್ಚು ಹಾನಿ ಅನುಭವಿಸಿತ್ತು. ಗುಡ್ಡ ಕುಸಿತ, ರಸ್ತೆ, ಸೇತುವೆಗಳು ಹಾಳಾಗಿವೆ. ಮಳೆಯಿಂದ ಅವುಗಳನ್ನು ಇನ್ನೂ ದುರಸ್ತಿ ಮಾಡಲು ಆಗಿಲ್ಲ. 200 ಕಿ.ಮೀ. ಗೂ ಹೆಚ್ಚು ರಸ್ತೆ ಹಾನಿಯಾಗಿ ಸಂಚಾರವೇ ದುಸ್ತರವಾಗಿದೆ. ಅಣಶಿ ಘಾಟ್, ಅರಬೈಲ್ ಘಟ್ಟ ಸೇರಿ 15 ಪ್ರದೇಶಗಳಲ್ಲಿಆಗಿರುವ ಗುಡ್ಡ ಕುಸಿತದ ಬಗ್ಗೆ ತಜ್ಞರ ಸಮಿತಿ ಅಧ್ಯಯನ ನಡೆಸಿ ವರದಿಯನ್ನೂ ಕೊಟ್ಟಿದೆ. ಆದರೂ ಸ್ಥಳದಲ್ಲಿಸುರಕ್ಷತಾ ಕ್ರಮ ಆಗಿಲ್ಲ. ಹೆದ್ದಾರಿ ರಸ್ತೆಗಳ ಗುಂಡಿಗಳ ರಾಶಿ ನಿರ್ಮಾಣವಾಗಿವೆ. ಮೀನುಗಾರಿಕೆ ಬಂದರುಗಳಿಗೆ ಸಂಪರ್ಕಿಸುವ ರಸ್ತೆಯೂ ಕಿತ್ತು ಹೋಗಿ ಮೀನು ಸಾಗಾಟಕ್ಕೂ ತೊಂದರೆಯಾಗಿದೆ. ಜಿಲ್ಲೆಯಲ್ಲಿ ಭತ್ತವೇ ಪ್ರಮುಖ ಬೆಳೆ. ಒಟ್ಟು 46 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈಗಾಗಲೇ 2377 ಹೆಕ್ಟೇರ್ ಪ್ರದೇಶ ಭತ್ತ ಹಾಳಾಗಿದೆ. ಕಳೆದ ಎರಡು ದಿನಗಳಲ್ಲಿಯೂ ಭತ್ತ ಹಾನಿಯಾಗಿದ್ದು, ಸಮೀಕ್ಷೆ ನಡೆಯುತ್ತಿದೆ. ಹೊನ್ನಪ್ಪ ಗೌಡ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಸದ್ಯ ಅಡಕೆ, ಕಾಳು ಮೆಣಸಿಗೆ ಅಷ್ಟೊಂದು ಹಾನಿ ಆಗಿಲ್ಲ. ಈ ಹಿಂದೆ ಹಾನಿ ಆಗಿದ್ದರಲ್ಲಿ ಜಂಟಿ ಸಮೀಕ್ಷೆ ಬಳಿಕ 38 ಬೆಳೆಗಾರರು ಮಾತ್ರ ಅರ್ಹರು ಎಂದು ಗುರುತಿಸಲಾಗಿದೆ. ಮಳೆ ಇದೇ ರೀತಿ ಮುಂದುವರಿದು ಮೋಡ ಆವರಿಸಿದರೆ, ಅಡಕೆ, ಕಾಳು ಮೆಣಸಿಗೆ ಹಾನಿ ಆಗಲಿದೆ. ಬಿ.ಪಿ. ಸತೀಶ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ
from India & World News in Kannada | VK Polls https://ift.tt/3GaIZeZ