ಜಿಲ್ಲೆಯ ರೈತರೇ ಕಂಪನಿ ಮಾಲೀಕರು; ಚಾಮರಾಜನಗರದಲ್ಲಿ ಎರಡು ರೈತ ಕಂಪನಿಗಳ ಸ್ಥಾಪನೆ!

ಫಾಲಲೋಚನ ಆರಾಧ್ಯ ಚಾಮರಾಜನಗರ: ರೈತರು ಬೆಳೆದ ಬೆಳೆಗಳು, ಉತ್ಪಾದಿತ ಉತ್ಪನ್ನ ಗಳನ್ನು ತಾವೇ ತಮ್ಮ ಕಂಪನಿಗಳ ಮೂಲಕ ಸಂಸ್ಕರಣೆ ಮಾಡುವ, ಮಾರಾಟ ಮಾಡುವ ಕಂಪನಿ (ರೈತ ಉತ್ಪಾದಕರ ಕಂಪನಿ)ಗಳ ಸ್ಥಾಪನೆಗೆ ಉತ್ತೇಜನ ನೀಡುತ್ತಿರುವ ಸರಕಾರ ಈ ವರ್ಷ ಜಿಲ್ಲೆಯಲ್ಲಿ ಇಂಥ ಎರಡು ಕಂಪನಿಗಳ ಸ್ಥಾಪನೆಗಾಗಿ ಕೃಷಿ ಇಲಾಖೆಗೆ ಗುರಿ ನೀಡಿದೆ. ಜಿಲ್ಲೆಯಲ್ಲಿ ಸದ್ಯ ಕೃಷಿ ಇಲಾಖೆ ವ್ಯಾಪ್ತಿಯ 7 ರೈತ ಕಂಪನಿಗಳು ಸ್ಥಾಪನೆಯಾಗಿದ್ದು, ಹೊಸದಾಗಿ ಎರಡು ಕಂಪನಿಗಳ ಸ್ಥಾಪನೆಗೆ ಕೃಷಿ ಇಲಾಖೆ ತಯಾರಿ ನಡೆಸಿದೆ. ರೈತರೇ ಮಾಲೀಕರಾಗುವ ಅವಕಾಶ ಈ ಕಂಪನಿಗಳಿಂದ ದೊರೆಯಲಿದೆ. ಅಲ್ಲದೇ ಸರಕಾರವು ವಾರ್ಷಿಕ ಸಹಾಯಧನವನ್ನೂ ನೀಡುವುದು ಈ (ಎಫ್‌ಪಿಒ) ಯೋಜನೆಯ ವಿಶೇಷ. ಕೃಷಿ ಹಾಗೂ ತೋಟಗಾರಿಕೆ ಎರಡು ಇಲಾಖೆ ವ್ಯಾಪ್ತಿಯಲ್ಲೂ ಈ ರೈತ ಉತ್ಪಾದಕರ ಕಂಪನಿಗಳಿವೆ. ಹೊಸದಾಗಿಯೂ ಸ್ಥಾಪಿಸಲು ತಯಾರಿ ನಡೆದಿದೆ. ಸದ್ಯ ಹನೂರು ತಾಲೂಕು, ಕೊಳ್ಳೇಗಾಲ, ಯಳಂದೂರು ತಾಲೂಕಿನಲ್ಲಿ ರೈತ ಕಂಪನಿಗಳನ್ನು ಸ್ಥಾಪಿಸಲಾಗಿದೆ. ಈ ವರ್ಷ ಗುಂಡ್ಲುಪೇಟೆ ತಾಲೂಕಿನ ಬೇಗೂರು ಗ್ರಾಮದಲ್ಲಿ ರೈತ ಕಂಪನಿಯನ್ನು ಸ್ಥಾಪಿಸಲು ಕೃಷಿ ಇಲಾಖೆ ಉದ್ದೇಶಿಸಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಎಚ್‌.ಟಿ. ಚಂದ್ರಕಲಾ ತಿಳಿಸಿದ್ದಾರೆ. ಇದಲ್ಲದೇ ತೋಟಗಾರಿಕೆ ಇಲಾಖೆ ವತಿಯಿಂದಲೂ ಹೆಬ್ಬಸೂರು, ಸಂತೇಮರಹಳ್ಳಿ ಸೇರಿದಂತೆ 6 ರೈತ ಉತ್ಪಾದಕ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ. ಒಂದಷ್ಟು ರೈತ ಸದಸ್ಯರು ಕಾನೂನಾತ್ಮಕವಾಗಿ ತಮ್ಮದೇ ಸ್ಥಾಪಿಸಿಕೊಳ್ಳಲು ಯೋಜನೆ ಸಹಕಾರಿಯಾಗಿದೆ. ತಾವು ಬೆಳೆಯುವ ಕೃಷಿ ಉತ್ಪನ್ನಗಳನ್ನು ತಮ್ಮ ಕಂಪನಿ ಮೂಲಕ, ಬ್ರ್ಯಾಂಡ್‌ ನೇಮ್‌ ಅಡಿ ಮಾರಾಟ ಮಾಡಬಹುದು. ಸಂಸ್ಕರಣೆ ಘಟಕ ಸ್ಥಾಪಿಸಿಕೊಳ್ಳಬಹುದು. ಗೊಬ್ಬರ, ಕೀಟನಾಶಕ, ಕೃಷಿ ಉಪಕರಣಗಳನ್ನು ಹೋಲ್‌ಸೇಲ್‌ ದರದಲ್ಲಿ ನೇರವಾಗಿ ತಯಾರಕರಿಂದಲೇ ಖರೀದಿಸಬಹುದು. ವಹಿವಾಟಿನ ಜತೆ ಜತೆಗೆ ರೈತ ಕಂಪನಿ ಬೆಳೆಯುತ್ತದೆ. ರೈತ ಸದಸ್ಯರಿಗೂ ಲಾಭವಾಗಲಿದೆ. ಹೀಗಾಗಿ ಜಿಲ್ಲೆಯ ರೈತರು ತಮ್ಮ ಒಂದು ಉತ್ತಮ ತಂಡವನ್ನು ಕಟ್ಟಿಕೊಂಡು ತಮ್ಮದೇ ಕಂಪನಿ ಸ್ಥಾಪಿಸಿಕೊಳ್ಳಲು ಮುಂದಾಗಬೇಕು. ಇದಕ್ಕೆ ಸರಕಾರದಿಂದ 5ರಿಂದ 20 ಲಕ್ಷ ರೂ.ವರೆಗೂ ಸಹಾಯಧನ ಸಿಗಲಿದೆ ಎಂಬುದಾಗಿ ಕೃಷಿ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.


from India & World News in Kannada | VK Polls https://ift.tt/3EoXXNZ

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...