
ಬೆಂಗಳೂರು: ಕೋವಿಡ್ ಎರಡನೇ ಅಲೆಯ ನಂತರ ದೇಶದಲ್ಲಿ ಪಡೆಯುವವರ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿದೆ ಎನ್ನುವ ಅಂಶ ಸಮೀಕ್ಷೆಯಿಂದ ತಿಳಿದು ಬಂದಿದೆ. ಹೋಮ್ ಕ್ರೆಡಿಟ್‌ನ 'ಹೌ ಇಂಡಿಯಾ ಬಾರೋಸ್- 2021' ಸಮೀಕ್ಷೆ ಪ್ರಕಾರ, ಸಾಲ ಪಡೆಯುವವರಲ್ಲಿ ಬೆಂಗಳೂರು (ಶೇ 67) ಮತ್ತು ಹೈದರಾಬಾದ್ (ಶೇ 49) ಮೊದಲ ಎರಡು ಸ್ಥಾನಗಳಲ್ಲಿದ್ದು, ದಿಲ್ಲಿ(ಶೇ 42) ಮತ್ತು ಜೈಪುರ (ಶೇ 39) ನಂತರದ ಸ್ಥಾನಗಳಲ್ಲಿವೆ. ಬೆಂಗಳೂರು, ದಿಲ್ಲಿ, ಜೈಪುರ, ಹೈದರಾಬಾದ್, ಭೂಪಾಲ್, ಮುಂಬಯಿ, ಕೋಲ್ಕೊತ್ತಾ, ಪಟ್ನಾ, ರಾಂಚಿ ನಗರಗಳಲ್ಲಿ ಸಮೀಕ್ಷೆ ಕೈಗೊಳ್ಳಲಾಗಿತ್ತು. ಮಾಸಿಕ ಸರಾಸರಿ 30,000 ರೂ.ಗಿಂತ ಕಡಿಮೆ ಆದಾಯ ಹೊಂದಿರುವ 21-45 ವರ್ಷ ವಯೋಮಾನದ ಸುಮಾರು 1,200 ಜನ (ಹೋಮ್ ಕ್ರೆಡಿಟ್ ಗ್ರಾಹಕರು) ಸಮೀಕ್ಷೆಯಲ್ಲಿ ಭಾಗವಹಿಸಿದ್ದರು. ಗ್ರಾಹಕರ ಸಾಲ ಪ್ರವೃತ್ತಿಯು ಅಗತ್ಯ- ಆಧಾರಿತದಿಂದ ಅಥವಾ ಬಯಕೆ- ಆಧಾರಿತ ಸಾಲಕ್ಕೆ ಗಣನೀಯ ಪರಿವರ್ತನೆ ಹೊಂದಿರುವುದನ್ನು ತೋರಿಸಿದೆ. ವ್ಯವಹಾರ ಅಭಿವೃದ್ಧಿಗಾಗಿ ಸಾಲ ಪಡೆಯುವವರ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡು ಬಂದಿದೆ. ನಂತರ ಗೃಹ ಬಳಕೆ ಉತ್ಪನ್ನಗಳ ಖರೀದಿಗೆ ಸಾಲ ಪಡೆಯುವರಿದ್ದಾರೆ. ಮನೆ ನವೀಕರಣ ಮತ್ತು ಹೊಸ ಮನೆ ನಿರ್ಮಾಣ, ತುರ್ತು ವೈದ್ಯಕೀಯ ವೆಚ್ಚ , ವಾಹನ ಸಾಲ, ಮದುವೆ, ಶಿಕ್ಷಣ ಸಾಲ, ಹೂಡಿಕೆಗಾಗಿ ಸಾಲ ಪಡೆಯುವರೂ ಇದ್ದಾರೆ. 2020ಕ್ಕೆ ಹೋಲಿಸಿದರೆ ಸಾಲ ಪಡೆಯುವವರ ಪ್ರಮಾಣವು ಶೇ. 50ರಷ್ಟು ಏರಿಕೆಯಾಗಿರುವುದನ್ನು ತೋರಿಸಿದೆ. ಮನೆ ನಿರ್ವಹಣೆಗಾಗಿ ಸಾಲ ಪಡೆಯುವವರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದ್ದು, 2020ರಲ್ಲಿ ಶೇ. 85ರಷ್ಟಿದ್ದುದು 2021ರಲ್ಲಿ ಶೇ. 60ಕ್ಕೆ ಇಳಿದಿದೆ. ಕೋವಿಡ್ ನಂತರ ಬದುಕು ದುಸ್ತರ! ಕೊರೊನಾ ಸಾಂಕ್ರಾಮಿಕ ಕಾಯಿಲೆ ಕಾಲಿಟ್ಟ ನಂತರ ದೇಶದಲ್ಲಿ ಅನೇಕ ರೀತಿಯ ಬದಲಾವಣೆಗಳಾಗಿವೆ. ಲಾಕ್‌ಡೌನ್ ನಂತರ ಅನೇಕ ಕಂಪನಿಗಳು ಮುಚ್ಚಿವೆ. ಉದ್ಯಮಗಳು, ವ್ಯವಹಾರಗಳು ದಿಕ್ಕನ್ನೇ ಕೊರೊನಾ ಲಾಕ್‌ಡೌನ್ ಬದಲಿಸಿಬಿಟ್ಟಿದೆ. ದೇಶದೆಲ್ಲೆಡೆ ಕೋಟ್ಯಂತರ ಮಂದಿ ಉದ್ಯೋಗ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಸಾಲ ಹೊಂದಿರುವವರು ಉದ್ಯೋಗವಿಲ್ಲದೆ ತಮ್ಮಲ್ಲಿ ಅಲ್ಪಸ್ವಲ್ಪವಿದ್ದ ಆಸ್ತಿಪಾಸ್ತಿಯನ್ನು ಅಡವಿಟ್ಟು, ಮಾರಿ ಸಾಲ ತೀರಿಸುತ್ತಿದ್ದಾರೆ. ಬಹುತೇಕರು ಮತ್ತೆ ಸಾಲದ ಮೊರೆ ಹೋಗಿ ಬದುಕು ಕಟ್ಟಿಕೊಳ್ಳುವ ದಾರಿಯಲ್ಲಿದ್ದಾರೆ. ಇದು ಬೆಂಗಳೂರು ಅಥವಾ ಆಧುನಿಕ ಜಗತ್ತಿಗೆ ತೆರೆದುಕೊಂಡಿರುವ ನಗರಗಳಲ್ಲಿ ಮಾತ್ರ ಕಾಣದೆ ಗ್ರಾಮಾಂತರ ಪ್ರದೇಶಗಳ ಜನರೆಡೆಗೂ ವಿಸ್ತರಿಸಿದೆ.
from India & World News in Kannada | VK Polls https://ift.tt/312zmQs