ಮೈಸೂರಿನಲ್ಲಿ ಅಧಿಕಾರಿಗಳು ಮತ್ತು ರಾಜಕಾರಣಿಗಳ ನಡುವಿನ ಪ್ರತಿಷ್ಠೆ; ಕೌನ್ಸಿಲ್‌ ಅಂಗಳಕ್ಕೆ ಬಟ್ಟೆ ಬ್ಯಾಗ್‌!

ಎಂ.ನಂಜುಂಡಸ್ವಾಮಿ ಮೈಸೂರು ಮೈಸೂರು: ಅಧಿಕಾರಿಗಳು ಮತ್ತು ರಾಜಕಾರಣಿಗಳ ನಡುವಿನ ಪ್ರತಿಷ್ಠೆಯಿಂದಾಗಿ ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ವಿತರಿಸಲು ತಂದಿರುವ ಲಕ್ಷಾಂತರ ಗೋದಾಮಿನಲ್ಲಿ ಧೂಳು ಹಿಡಯುವಂತಾಗಿದೆ. ಈ ಮೂಲಕ ಸಾರ್ವಜನಿಕರ ಹಣ ವ್ಯರ್ಥವಾಗುತ್ತಿದ್ದು, ಶೀಘ್ರ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ. ಈ ಹಿಂದಿನ ಜಿಲ್ಲಾಧಿಕಾರಿ ಜಿಲ್ಲೆಯಲ್ಲಿ ಪ್ಲಾಸ್ಟಿಕ್‌ ಅನ್ನು ಕಟ್ಟುನಿಟ್ಟಾಗಿ ನಿಷೇಧಿಸಲು ಹಾಗೂ ಪ್ಲಾಸ್ಟಿಕ್‌ ಮುಕ್ತ ಮೈಸೂರಿಗಾಗಿ ಆಯಾ ಸ್ಥಳೀಯ ಸಂಸ್ಥೆಗಳ ಮೂಲಕ ಬಟ್ಟೆ ಬ್ಯಾಗ್‌ ವಿತರಿಸುವ ಕಾರ‍್ಯಕ್ರಮ ರೂಪಿಸಿದ್ದರು. ಈ ನಡುವೆ ಕ್ರಿಯಾಯೋಜನೆ ತಯಾರಿಸದೆ ಹಾಗೂ ಪಾಲಿಕೆ ಸದಸ್ಯರ ಗಮನಕ್ಕೂ ತರದೆ ಪಾಲಿಕೆ ಹಣದಲ್ಲಿ ಬ್ಯಾಗ್‌ ವಿತರಿಸುವುದು ಕಾನೂನು ಬಾಹಿರ ಎಂದು ಕೆಲ ಪಾಲಿಕೆ ಸದಸ್ಯರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಈ ಸಂಬಂಧ ಜಿಲ್ಲಾಉಸ್ತುವಾರಿ ಸಚಿವರಿಗೂ ಮನವಿ ಸಲ್ಲಿಸಿದ್ದರು. ಇದರ ನಡುವೆ ಶಾಸಕ ಸಾ.ರಾ.ಮಹೇಶ್‌ ಕೂಡ ಬಟ್ಟೆ ಬ್ಯಾಗ್‌ ಖರೀದಿಯಲ್ಲಿ ಅವ್ಯವಹಾರವಾಗಿದೆ ಎಂದು ರೋಹಿಣಿ ಸಿಂಧೂರಿ ವಿರುದ್ಧ ಆರೋಪ ಮಾಡಿದ್ದಾರೆ. ಈ ಎಲ್ಲ ಬೆಳವಣಿಗೆ ನಡುವೆ ಮಹಾನಗರ ಪಾಲಿಕೆ ತನ್ನ ವ್ಯಾಪ್ತಿಯಲ್ಲಿ ಪ್ರತಿ ಮನೆಗೆ ಎರಡು ಬ್ಯಾಗ್‌ ವಿತರಿಸಲು ಖರೀದಿಸಿರುವ 4.5 ಲಕ್ಷ ಬ್ಯಾಗ್‌ಗಳನ್ನು ಗೋದಮಿನಲ್ಲಿರಿಸಿದೆ. ಆರೋಪ-ಪ್ರತ್ಯಾರೋಪಗಳಿಂದ ಬ್ಯಾಗ್‌ ವಿತರಣೆಗೆ ಗ್ರಹಣ ಹಿಡಿದಿದ್ದು, ಮೇನಲ್ಲಿ ವಿತರಣೆಯಾಗಬೇಕಿದ್ದ ಬ್ಯಾಗ್‌ಗಳು ಬಳಕೆಗೆ ಬಾರದೇ ಧೂಳು ಹಿಡಿಯುತ್ತಿವೆ. ಕೌನಿಲ್ಸ್‌ ಅಂಗಳಕ್ಕೆ ಮುಂದಿನ ಪಾಲಿಕೆ ಕೌನ್ಸಿಲ್‌ ಸಭೆಯಲ್ಲಿ ಬಟ್ಟೆ ಬ್ಯಾಗ್‌ ವಿತರಣೆ ವಿಷಯವನ್ನು ಚರ್ಚೆಗೆ ಇಡಲಾಗಿದೆ. ಇಲ್ಲಿ ನಡೆಯುವ ಚರ್ಚೆ ಹಾಗೂ ಪಾಲಿಕೆ ಸದಸ್ಯರ ಅಭಿಪ್ರಾಯದಂತೆ ಬ್ಯಾಗ್‌ ವಿತರಣೆ ರೂಪುರೇಷೆ ಸಿದ್ಧಪಡಿಸಲು ಪಾಲಿಕೆ ನಿರ್ಧರಿಸಿದೆ. ಜೆಡಿಎಸ್‌ ಸದಸ್ಯರು ಸೇರಿದಂತೆ ಕೆಲವರು ಕೌನ್ಸಿಲ್‌ ಸಭೆಯಲ್ಲಿ ಬಟ್ಟೆ ಬ್ಯಾಗ್‌ ಖರೀದಿ ಸಂಬಂಧ ಹೋರಾಟಕ್ಕೆ ನಿರ್ಧರಿಸಿದ್ದು, ಈ ಸಂಬಂಧ ತಯಾರಿ ನಡೆಸುತ್ತಿದ್ದಾರೆ. ಗುಣಮಟ್ಟ ಇಲ್ಲಈಗಾಗಲೇ ಬ್ಯಾಗ್‌ಗಳು ಗೋದಾಮು ತಲುಪಿವೆ. ಆದರೆ ಗುಣಮಟ್ಟ ಇಲ್ಲ. ಹೀಗಾಗಿ ಹಿಂದೆ ನಿಗದಿ ಪಡಿಸಿರುವ ಬೆಲೆ ಪರಿಷ್ಕೃರಣೆ ಸಂಬಂಧ ಪಾಲಿಕೆ ಕೌನ್ಸಿಲ್‌ನಲ್ಲಿ ಚರ್ಚಿಸಲಾಗುವುದು. ಈ ಬಳಿಕ ಸಂಘ-ಸಂಸ್ಥೆ, ಪೌರಕಾರ್ಮಿಕ ಮತ್ತು ಪಾಲಿಕೆ ಸದಸ್ಯರ ಮೂಲಕ ಮನೆ ಮನೆಗೆ ಬ್ಯಾಗ್‌ ತಲುಪಿಸಲಾಗುವುದು ಎಂದು ಮೇಯರ್‌ ಸುನಾಂದ ಪಾಲನೇತ್ರ ತಿಳಿಸಿದ್ದಾರೆ. ಪಾಲಿಕೆ ವ್ಯಾಪ್ತಿಯಲ್ಲಿ ಮನೆಗೆ ಎರಡು ಬ್ಯಾಗ್‌ನಂತೆ ವಿತರಿಸಲು ಅಗತ್ಯದಷ್ಟು ಬ್ಯಾಗ್‌ಗಳು ಪಾಲಿಕೆ ತಲುಪಿದ್ದು, ಗೋದಾಮಿನಲ್ಲಿವೆ. ಬಟ್ಟೆ ವಿತರಣೆ ವಿಷಯವನ್ನು ಈ ಬಾರಿಯ ಪಾಲಿಕೆ ಕೌನ್ಸಿಲ್‌ ಸಭೆಯಲ್ಲಿ ಚರ್ಚಿಸಿ, ಅಲ್ಲಿ ವ್ಯಕ್ತವಾಗುವ ಅಭಿಪ್ರಾಯ ಆಧರಿಸಿ ಮುಂದಿನ ಕ್ರಮ ತೆಗದುಕೊಳ್ಳಲಾಗುವುದು. ಜಿ.ಲಕ್ಷ್ಮೀಕಾಂತ ರೆಡ್ಡಿ, ಪಾಲಿಕೆ ಆಯುಕ್ತ ಬಟ್ಟೆ ಬ್ಯಾಗ್‌ ಗುಣಮಟ್ಟ ಸರಿಯಿಲ್ಲ. ಸೂಕ್ತ ಬೆಲೆ ನಿಗದಿ ಮಾಡಿದ ಬಳಿಕವೇ ವಿತರಣೆ ಕ್ರಮವಹಿಸಲಾಗುವುದು. ಈ ವಿಚಾರವನ್ನು ಸೆ. 30ರಂದು ನಡೆಯುವ ಕೌನ್ಸಿಲ್‌ ಸಭೆಯಲ್ಲಿ ಚರ್ಚಿಸಲಾಗುವುದು. ಸುನಾಂದ ಪಾಲನೇತ್ರ, ಮೇಯರ್‌ ಸಂವಿಧಾನಾತ್ಮಕವಾಗಿ ಪಾಲಿಕೆ ಸದಸ್ಯರಿಗೆ ದೊರೆತಿರುವ ಹಕ್ಕು ಉಲ್ಲಂಘಿಸಿ, ಕ್ರಿಯಾ ಯೋಜನೆ ಇಲ್ಲದೆ ಬಟ್ಟೆ ಬ್ಯಾಗ್‌ ಖರೀದಿಸಲಾಗಿದೆ. ಇದಕ್ಕೆ ನಮ್ಮ ವಿರೋಧವಿದೆ. ಪಾಲಿಕೆ ಕೌನ್ಸಿಲ್‌ ಸಭೆಯಲ್ಲಿ ಈ ಬಗ್ಗೆ ದನಿ ಎತ್ತಲಾಗುವುದು. ಕೆ.ವಿ.ಶ್ರೀಧರ್‌, ಪಾಲಿಕೆ ಸದಸ್ಯ


from India & World News in Kannada | VK Polls https://ift.tt/2XWEPqF

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...