ಮೈಸೂರು: ವಿಶ್ವ ವಿಖ್ಯಾತ ಮಹೋತ್ಸವ ಸಮೀಪಿಸುತ್ತಿದ್ದು, ಈ ಬೆನ್ನಲ್ಲೆ ಇದೀಗ ಇಂದಿನಿಂದಲೇ ಪ್ರವೇಶ ಟಿಕೆಟ್ ದರವನ್ನ ಏರಿಕೆ ಮಾಡಲಾಗಿದೆ. ಅಗತ್ಯ ವಸ್ತುಗಳ ದರ ಏರಿಕೆ ಬೆನ್ನಲ್ಲೆ ಅರಮನೆ ಪ್ರವೇಶ ಟಿಕೆಟ್ ದರವನ್ನ ಅರಮನೆ ಮಂಡಳಿ ಹೆಚ್ಚಳ ಮಾಡಿದೆ. ಅರಮನೆ 70 ರೂ. ನಿಂದ 100 ರೂ.ಗೆ ಏರಿಕೆಯಾಗಿದೆ. ಪೋಷಕರ ಜೊತೆ ಆಗಮಿಸುವ ಮಕ್ಕಳಿಗೆ ಹಳೆಯ ದರ 30 ರೂ. ಇತ್ತು ಈಗ ಮಕ್ಕಳಿಗೆ ಹೊಸ ದರ 50 ರೂ ಮಾಡಲಾಗಿದೆ. ಶಾಲಾ ಮಕ್ಕಳಿಗೆ ಹಳೆಯ ದರ 20 ರೂ ಹೊಸ ದರ 50ರೂ ಆಗಿದೆ. ಕನ್ನಡದ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಯಾವುದೇ ಏರಿಕೆ ಇಲ್ಲ. ಇಂಗ್ಲಿಷ್ ಧ್ವನಿ ಮತ್ತು ಬೆಳಕು ಕಾರ್ಯಕ್ರಮದ ದರ 120 ರೂಗೆ ನಿಗದಿ ಮಾಡಲಾಗಿದೆ. ಕೊರೊನಾ ಲಾಕ್ ಡೌನ್ ನಿಂದ ಅರಮನೆ ಮಂಡಳಿಯ ಆದಾಯ ಕುಸಿತ ಕಂಡಿತ್ತು.. ಅರಮನೆ ಮಂಡಳಿ ಆದಾಯ ಕುಸಿತ..!? ಕೊರೊನಾ ಹಿನ್ನೆಲೆ ಮೈಸೂರು ಪ್ರವಾಸೋದ್ಯಮ ಸಂಪೂರ್ಣ ನೆಲಕಚ್ಚಿತ್ತು. ಅರಮನೆಗೆ ಭೇಟಿ ನೀಡೋ ಪ್ರವಾಸಿಗರ ಸಂಖ್ಯೆ ಕುಸಿತವಾಗಿತ್ತು. ಕ್ರಮೇಣ ಅರಮನೆ ಮಂಡಳಿಗೆ ಬರೋ ಆದಾಯ ಕೂಡ ಕಡಿಮೆಯಾಗಿದೆ. ಹೀಗಾಗಿಯೇ ಪ್ರವೇಶ ಶುಲ್ಕ ಹೆಚ್ಚಳ ಅಂತ ಹೇಳಲಾಗ್ತಿದೆ. ಪ್ರವಾಸಿಗರಿಗೆ ಶಾಕ್..! ದಸರಾ ಅಂದಾಕ್ಷಣ ಎಲ್ಲೆಲ್ಲೂ ಸಂಭ್ರಮ. ಹೊರರಾಜ್ಯಗಳಿಂದ ಮೈಸೂರಿಗೆ ಪ್ರವಾಸಿಗರ ದಂಡು ಬರುತ್ತದೆ. ಅರಮನೆ, ಮೃಗಾಲಯ , ಚಾಮುಂಡಿಬೆಟ್ಟಕ್ಕೆ ಭೇಟಿ ಕೊಡ್ತಾರೆ. ಈ ಬಾರಿ ಕೊಂಚ ಜಾಸ್ತಿ ಅನ್ನೋ ಹಾಗೆ ಅರಮನೆ ಪ್ರವೇಶ ದರ ಹೆಚ್ಚಾಗಿರೋದು ಪ್ರವಾಸಿಗರಿಗೆ ಹೊರೆಯಾಗಲಿದೆ. ಚೇತರಿಕೆಯತ್ತ ಪ್ರವಾಸೋದ್ಯಮ..! ಕಳೆದ ಒಂದೂವರೆ ವರ್ಷದಲ್ಲಿ ಕೊರೊನಾ ಹೊಡೆತಕ್ಕೆ ಸಿಲುಕಿ ಮೈಸೂರು ಪ್ರವಾಸೋದ್ಯಮ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಈಗ 1.5 ತಿಂಗಳಿಂದ ಕೊಂಚ ಸುಧಾರಣೆ ಕಾಣುತ್ತಿದೆ. ಜನರು ಮೈಸೂರಿನೆಡೆಗೆ ಹೆಚ್ಚಾಗಿ ದೌಡಾಯಿಸಿದ್ದಾರೆ. ಈ ಮಧ್ಯೆಯೇ ಅರಮನೆ ಪ್ರವೇಶ ದರ ಹೆಚ್ಚಾಗಿದೆ. ಇತರೆ ಪ್ರವಾಸಿ ತಾಣಗಳ ರೇಟ್ ಹೆಚ್ಚು..!? ಅರಮನೆ ಪ್ರವೇಶ ದರ ಹೆಚ್ಚಾದ ಬೆನ್ನಲ್ಲೇ ಮೈಸೂರಿನ ಇತರೆ ಪ್ರವಾಸಿ ತಾಣಗಳ ರೇಟ್ ಕೂಡ ಹೆಚ್ಚಾಗೋ ಸಾಧ್ಯತೆ ಇದೆ. ಜಗನ್ಮೋಹನ ಅರಮನೆ, ಕಾರಂಜಿ ಕೆರೆ, ಪ್ರವೇಶ ಶುಲ್ಕ ಜಾಸ್ತಿ ಆಗೋ ನಿರೀಕ್ಷೆ ಇದೆ. ಪ್ರವಾಸಿ ಸ್ಥಳಗಳ ನಿರ್ವಹಣೆ ಹೆಚ್ಚು ವೆಚ್ಚ ತಗುಲುತ್ತಿರೋ ಹಿನ್ನೆಲೆ ಶುಲ್ಕ ಜಾಸ್ತಿ ಅನಿವಾರ್ಯ ಅಂತ ಹೇಳಲಾಗ್ತಿದೆ.
from India & World News in Kannada | VK Polls https://ift.tt/3zGepWQ