ಬೀಜಿಂಗ್: ಭಾರತವೇ ಗಡಿ ಒಪ್ಪಂದಗಳನ್ನು ಉಲ್ಲಂಘಿಸಿ ಸಂಘರ್ಷಕ್ಕೆ ನಾಂದಿ ಹಾಡಿತು ಎಂದು ಮತ್ತೆ ಕ್ಯಾತೆ ತೆಗೆದ ಚೀನಾಕ್ಕೆ ತಿರುಗೇಟು ನೀಡಿದೆ. " ತೋರಿದ್ದ ಪ್ರಚೋದನಕಾರಿ ಹಾಗೂ ಏಕಪಕ್ಷೀಯ ಅತಿಕ್ರಮಣ ಧೋರಣೆ-ಯಿಂದಲೇ ಗಲ್ವಾನ್ ಬಿಕ್ಕಟ್ಟು ಉದ್ಭವವಾಯಿತು" ಎಂದು ಭಾರತ ಆರೋಪಿಸಿದೆ. ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿರುವ ಚೀನಾ ವಕ್ತಾರ ಝಾವೊ ಲಿಜಿಯಾನ್ ಅವರು, "ವಾಸ್ತವ ಗಡಿ ನಿಯಂತ್ರಣ ರೇಖೆ ()ಯಲ್ಲಿಶಾಂತಿ ಮತ್ತು ಸ್ಥಿರತೆ ಕಾಪಾಡಿಕೊಳ್ಳಲು ಮಾಡಿಕೊಳ್ಳಲಾದ ಎಲ್ಲಒಪ್ಪಂದ, ಸಂಧಾನ ನಿರ್ಣಯಗಳನ್ನು ಭಾರತವು ಅಕ್ರಮ ನುಸುಳುವಿಕೆ ಮೂಲಕ ಗಾಳಿಗೆ ತೂರಿತು. ಹಾಗಾಗಿ ಗಲ್ವಾನ್ ಸಂಘರ್ಷ ಉಂಟಾಯಿತು" ಎಂದು ಆರೋಪಿಸಿದ್ದರು. ಚೀನಾದ ಆರೋಪಕ್ಕೆ ಪ್ರತ್ಯುತ್ತರ ನೀಡಿರುವ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, "ಚೀನಾದ ಆತುರದ ನಡೆಯಿಂದ ದ್ವಿಪಕ್ಷೀಯ ಸಂಬಂಧಕ್ಕೆ ಭಾರಿ ಪೆಟ್ಟು ಬಿದ್ದಿದೆ. ಶಾಂತಿ ಸ್ಥಾಪನೆಗೆ ಚೀನಾ ವಿದೇಶಾಂಗ ಸಚಿವಾಲಯವು ತುರ್ತು ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ" ಎಂದು ಹೇಳಿದ್ದಾರೆ. "ನಾವು ಅಂತಹ ಹೇಳಿಕೆಗಳನ್ನು ತಿರಸ್ಕರಿಸುತ್ತೇವೆ. ಪೂರ್ವ ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆಯಲ್ಲಿ ಕಳೆದ ವರ್ಷ ಉಂಟಾದ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ನಮ್ಮ ನಿಲುವು ಸ್ಪಷ್ಟ ಹಾಗೂ ಸ್ಥಿರವಾಗಿತ್ತು" ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಎಲ್‌ಎಸಿಯಲ್ಲಿ ಶಾಂತಿ ಮತ್ತು ನೆಮ್ಮದಿ ಕಾಪಾಡುವ ಸಹಕಾರಕ್ಕೆ ಚೀನಾ ಮತ್ತು ಭಾರತ ಸರಣಿ ಒಪ್ಪಂದಗಳಿಗೆ ಸಹಿ ಹಾಕಿವೆ. ಈ ಒಪ್ಪಂದಗಳು ಗಡಿ ಪ್ರದೇಶದಲ್ಲಿ ಸ್ಥಿರತೆ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ಲಿಜಿಯಾನ್ ಹೇಳಿದ್ದರು. 2020ರ ಜೂ.15 ರಂದು ಚೀನಾ-ಇಂಡಿಯಾ ಗಡಿಯಲ್ಲಿನ ಪೂರ್ವ ಲಡಾಕ್ ಬಳಿ ಗಲ್ವಾನ್ ಕಣಿವೆ ಪ್ರದೇಶಕ್ಕೆ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‌ಎ) ಸೈನಿಕರು ಏಕಾಏಕಿ ನುಗ್ಗಿದ್ದರು. ಅಲ್ಲದೇ, ಕಬ್ಬಿಣದ ತಂತಿಗಳನ್ನು ಸುತ್ತಿದ ಬಡಿಗೆಗಳಿಂದ ಭಾರತದ ಐಟಿಬಿಪಿ ಯೋಧರ ಮೇಲೆ ಮಾರಣಾಂತಿಕ ಹಲ್ಲೆನಡೆಸಿದ್ದರು. ಒಟ್ಟು 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದರು. ಪ್ರತಿರೋಧ ಒಡ್ಡುವ ಮೂಲಕ ಚೀನಾ ಸೈನಿಕರು ಹಿಮ್ಮೆಟ್ಟಿಸುವಲ್ಲಿಯಶಸ್ವಿಯಾಗಿದ್ದ ಯೋಧರು, 25 ಮಂದಿ ಚೀನಾ ಸೈನಿಕರನ್ನು ಕೂಡ ಹತ್ಯೆಗೈದಿದ್ದರು. ಹಲವು ಸುತ್ತಿನ ಸಂಧಾನ ಸಭೆಗಳು ನಡೆದಿದ್ದರೂ, ಕಳೆದ 16 ತಿಂಗಳಿಂದ ಈ ಗಡಿ ಸಂಘರ್ಷವು ಬೂದಿ ಮುಚ್ಚಿದ ಕೆಂಡದಂತೆಯೇ ಉಳಿದುಕೊಂಡಿದೆ.
from India & World News in Kannada | VK Polls https://ift.tt/3AGa1s9