ಕಾನೂನು ಬಾಹಿರ ಟಗರು ಕಾಳಗಕ್ಕೆ ಬ್ರೇಕ್‌; ಯಾದಗಿರಿ ಡಿಸಿ ಖಡಕ್‌ ನಿರ್ಧಾರಕ್ಕೆ ಆಯೋಜಕರು ಶಾಕ್‌!

ಯಾದಗಿರಿ: ಹುಣಸಗಿ ತಾಲೂಕಿನ ಕೊಡೇಕಲ್‌ ಗ್ರಾಮದಲ್ಲಿ ಆಯೋಜಿಸಿರುವ ರಾಜ್ಯಮಟ್ಟದ ಹೊನಲು ಬೆಳಕಿನ ಓಪನ್‌ ಟಗರಿನ ಕಾಳಗ ನಡೆಸಲು ಕಾನೂನಿನಲ್ಲಿ ಅವಕಾಶವಿಲ್ಲ. ಇಂತಹವುಗಳನ್ನು ನಿಷೇಧಿಸಲಾಗಿದೆ. ಹೀಗಾಗಿ ಇದೊಂದು ಕಾನೂನು ಬಾಹಿರವಾಗಿದ್ದು ರದ್ದುಗೊಳಿಸುವಂತೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯ ಆರ್‌. ಎಸ್ಪಿ ಸಿ.ಬಿ. ವೇದಮೂರ್ತಿ ಅವರಿಗೆ ಸೂಚನೆ ನೀಡಿದ್ದಾರೆ. ಕಾನೂನಿನಲ್ಲಿ ಅವಕಾಶ ಇಲ್ಲದಿದ್ದರೂ ದಿ.ತಿಮ್ಮಮ್ಮ ಗೌಡಶಾನಿ ಅಭಿಮಾನಿ ಬಳಗ ಹಾಗೂ ಆರ್‌ಟಿಜೆ ಗ್ರೂಫ್ಸ್‌ ವತಿಯಿಂದ ಸೆ.26ರಂದು ಕೊಡೇಕಲ್‌ ಗ್ರಾಮದ ಯುಕೆಪಿ ಕ್ಯಾಂಪ್‌ನ ಆರ್‌ಟಿಜೆ ಕ್ರೀಡಾಂಗಣದಲ್ಲಿ ರಾಜ್ಯದ ಮಟ್ಟದ ಹೊನಲು ಬೆಳಕಿನ ಓಪನ್‌ ಆಯೋಜನೆ ಮಾಡಲಾಗಿತ್ತು. ಇದಲ್ಲದೇ ಕರಪತ್ರಗಳನ್ನು ಹಂಚಿಕೆ ಮಾಡುವ ಮೂಲಕ ಭರ್ಜರಿಯಾಗಿ ಪ್ರಚಾರ ಕೂಡ ಮಾಡಲಾಗಿತ್ತು. ಆದರೆ ಕಾನೂನಿನಲ್ಲಿ ನಿಷೇಧ ಇರುವ ಪರಿಣಾಮ ನಡೆಸಲು ಅವಕಾಶವಿಲ್ಲ. ಆದರೂ ನಡೆಸಲು ತೆರೆಮರೆಯಲ್ಲಿ ಪ್ರಯತ್ನ ನಡೆಸಲಾಗಿತ್ತು. ವಿಕ ವರದಿ ಎಚ್ಚೆತ್ತುಕೊಂಡ ಡಿಸಿ: ಟಗರಿನ ಕಾಳಗ ಆಯೋಜನೆ ಕುರಿತಂತೆ 'ವಿಜಯ ಕರ್ನಾಟಕ ಪತ್ರಿಕೆಯಲ್ಲಿ ನಿಯಮ ಬಾಹಿರವಾಗಿ ರಾಜ್ಯ ಮಟ್ಟದ ಓಪನ್‌ ಟಗರಿನ ಕಾಳಗ ಆಯೋಜನೆ, ವಿವಾದಕ್ಕೆ ತಿರುಗಿದ ಟಗರು ಕಾಳಗ' ಶೀರ್ಷಿಕೆಯಡಿ ಸೆ. 23ರಂದು ಮತ್ತು 'ರಾಜ್ಯ ಮಟ್ಟದ ಟಗರಿನ ಕಾಳಗ ಕೂಡಲೇ ರದ್ದುಗೊಳಿಸಿ ಕ್ರಮವಹಿಸುವಂತೆ ಎಸ್ಪಿಗೆ ಪತ್ರ, ಟಗರು ಕಾಳಗದ ಚಂಡು ಎಸ್ಪಿ ಅಂಗಳಕ್ಕೆ' ಶೀರ್ಷಿಕೆಯಡಿ ಸೆ. 24ರಂದು ವಿಶೇಷ ವರದಿಯನ್ನು ಪ್ರಕಟಿಸಲಾಗಿತ್ತು. ಈ ವಿಶೇಷ ವರದಿಯಿಂದ ಎಚ್ಚೆತ್ತುಕೊಂಡ ಜಿಲ್ಲಾಧಿಕಾರಿ ಡಾ. ರಾಗಪ್ರಿಯ ಆರ್‌. ಅವರು ಖಡಕ್‌ ನಿರ್ಧಾರ ಕೈಗೊಳ್ಳುವ ಮೂಲಕ ಕಾನೂನು ಬಾಹಿರ ಟಗರಿನ ಕಾಳಗ ನಡೆಸುವುದಕ್ಕೆ ಬ್ರೇಕ್‌ ಹಾಕಿದ್ದಾರೆ. ವ್ಯಾಪಕ ಮೆಚ್ಚುಗೆ: ಟಗರು ಕಾಳಗದ ಸುದ್ದಿ ಭಾರಿ ಸದ್ದು ಮಾಡಿತ್ತು. ಇದನ್ನು ಪಶು ಇಲಾಖೆ ವ್ಯಾಪ್ತಿಯ ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿ ನಿರ್ದೇಶಕ ಮತ್ತು ಸದಸ್ಯ ಕಾರ್ಯದರ್ಶಿ ಮಂಜುನಾಥ ಪಾಳೆಗಾರ ಅವರು ಗಂಭೀರವಾಗಿ ಪರಿಗಣಿಸುವ ಮೂಲಕ ಕಾನೂನು ಪ್ರಕಾರವಾಗಿ ರದ್ದುಗೊಳಿಸಲು ಸೂಕ್ತವಾಗಿ ಕ್ರಮ ಕೈಗೊಳ್ಳುವಂತೆ ಕೋರಿ ಎಸ್ಪಿ ಸಿ.ಬಿ. ವೇದಮೂರ್ತಿ ಅವರಿಗೆ ಪತ್ರ ಕೂಡ ಬರೆದಿದ್ದಾರೆ. ಇದಲ್ಲದೇ ಒಂದು ಪ್ರತಿಯನ್ನು ಜಿಲ್ಲಾಧಿಕಾರಿ ಡಾ. ರಾಗಪ್ರಿಯ ಆರ್‌. ಅವರಿಗೂ ಕಳುಹಿಸಿದ್ದರು. ಕೊನೆಗೂ ಇದಕ್ಕೆ ಜಿಲ್ಲಾಧಿಕಾರಿ ಅಂಕುಶ ಹಾಕಿದ್ದಾರೆ. ಕಾನೂನು ನಿಯಮ ಪಾಲನೆಗೆ ಮುಂದಾಗಿರುವುದು ಅವರ ಬಗ್ಗೆ ವ್ಯಾಪಕವಾಗಿ ಮೆಚ್ಚುಗೆ ವ್ಯಕ್ತವಾಗಿದೆ. ಆಯೋಜಕರು ಟಗರು ಕಾಳಗ ನಡೆಸುವ ಕುರಿತಂತೆ ಅನುಮತಿ ನೀಡುವಂತೆ ಪೊಲೀಸ್‌ ಇಲಾಖೆಗೂ ಅರ್ಜಿ ಸಲ್ಲಿಸಿಲ್ಲ. ಆದರೆ ಕಾನೂನಿನಲ್ಲಿಅವಕಾಶ ಇಲ್ಲದ ಪರಿಣಾಮ ಅನುಮತಿ ನೀಡುವುದಿಲ್ಲ ಎಂಬ ಮುಂದಾಲೋಚನೆ ಮಾಡಿಯೇ ಹೀಗೆ ಮಾಡಿದ್ದಾರೆ. ಕೊನೆಗೂ ಈ ನಿಯಮ ಬಾಹಿರ ಚುಟವಟಿಕೆ ರದ್ದುಗೊಳಿಸಲು ಜಿಲ್ಲಾಧಿಕಾರಿ ಎಂಟ್ರಿ ಆಗಿದ್ದಾರೆ. ವರದಿ ಸಲ್ಲಿಸಲು ಪತ್ರ: ಹುಣಸಗಿ ತಹಸೀಲ್ದಾರ್‌ ಅವರು ಕೊಡೇಕಲ್‌ ಆರಕ್ಷಕ ಉಪನಿರೀಕ್ಷಕರಿಗೆ ರಾಜ್ಯ ಮಟ್ಟದ ಟಗರಿನ ಕಾಳಗದ ಕುರಿತಂತೆ ಕಾನೂನಿನ ಪ್ರಕಾರ ನಿಯಮಾನುಸಾರ ಕ್ರಮ ಜರುಗಿಸಿ ಕ್ರಮದ ಕುರಿತು ಕಾರ್ಯಾಲಯಕ್ಕೆ ಪಾಲನಾ ವರದಿ ಸಲ್ಲಿಸುವಂತೆ ಪತ್ರ ಕೂಡ ಬರೆದಿದ್ದಾರೆ. ಇಂತಹ ಕಾನೂನು ಬಾಹಿರ ಚಟುವಟಿಕೆಗಳಿಗೆ ಬ್ರೇಕ್‌ ಹಾಕುವ ಮೂಲಕ ಪ್ರಾಣಿಗಳಿಗೆ ಹಿಂಸೆ ನೀಡುವುದನ್ನು ತಡೆಯುವುದು ಪೊಲೀಸ್‌ ಇಲಾಖೆಯ ಪ್ರಮುಖವಾದ ಜವಾಬ್ದಾರಿಯಾಗಿದೆ. ಒಂದು ವೇಳೆ ನಡೆದರೇ ಇಲಾಖೆಗೆ ಕಪ್ಪುಚುಕ್ಕೆ ಬರಲಿದೆ.


from India & World News in Kannada | VK Polls https://ift.tt/3AGm0Gt

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...