'ರಾಜಾಜಿನಗರ ಕ್ರಿಕೆಟರ್ಸ್‌' ಕೆಎಸ್‌ಸಿಎ ಪ್ರಥಮ ಡಿವಿಷನ್‌ ಚಾಂಪಿಯನ್ಸ್‌!

ಬೆಂಗಳೂರು: ರಾಜ್ಯ ಕ್ರಿಕೆಟ್‌ ಅಸೋಸಿಯೇಷನ್‌(ಕೆಎಸ್‌ಸಿಎ) ಆಶ್ರಯದಲ್ಲಿ ಇತ್ತೀಚೆಗೆ ಮುಕ್ತಾಯವಾಗಿದ್ದ 2021/22ರ ಆವೃತ್ತಿಯ ಸರ್‌ ಮಿರ್ಜಾ ಇಸ್ಮಾಯಿಲ್‌ ಶೀಲ್ಡ್‌ ಪ್ರಥಮ ಡಿವಿಷನ್‌ ಕ್ರಿಕೆಟ್‌ ಟೂರ್ನಿಯಲ್ಲಿ ತಂಡ ಚಾಂಪಿಯನ್ಸ್ ಆಗಿ ಹೊರಹೊಮ್ಮಿದೆ. ಪ್ರಸಕ್ತ ಆವೃತ್ತಿಯಲ್ಲಿ ಆಡಿದ ಒಟ್ಟು 11 ಪಂದ್ಯಗಳಲ್ಲಿ ರಾಜಾಜಿನಗರ ಕ್ರಿಕೆಟರ್ಸ್‌ 10 ಪಂದ್ಯಗಳಲ್ಲಿ ಜಯ ದಾಖಲಿಸಿದ್ದು, ಒಂದೇ ಒಂದು ಪಂದ್ಯದಲ್ಲಿ ಮಾತ್ರ ಸೋಲಿನ ಕಹಿ ಅನುಭವಿಸಿತ್ತು. ಅಂದಹಾಗೆ, 40 ಅಂಕಗಳನ್ನು ಕಲೆ ಹಾಕುವ ಮೂಲಕ ನಾಯಕತ್ವದ ರಾಜಾಜಿನಗರ ಕ್ರಿಕೆಟರ್ಸ್ ತಂಡ ಪ್ರಥಮ ಡಿವಿಷನ್‌ನಲ್ಲಿ ಚಾಂಪಿಯನ್ಸ್ ಪಟ್ಟ ಅಲಂಕರಿಸಿದೆ. ಟೂರ್ನಿಯುದ್ದಕ್ಕೂ ಬ್ಯಾಟಿಂಗ್‌ ಹಾಗೂ ವಿಕೆಟ್‌ ಕೀಪಿಂಗ್‌ನಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದ ನಾಯಕ ನಿಹಾಲ್‌ ಉಲ್ಲಾಳ್‌ ಹಾಗೂ ಬೌಲಿಂಗ್‌ನಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ತೋರಿದ್ದ ಎಸ್‌ಎಚ್‌ ಶರತ್‌ ಅವರು ರಾಜಾಜಿನಗರ ಕ್ರಿಕೆಟರ್ಸ್ ತಂಡದ 202/22ರ ಆವೃತ್ತಿಯ ಯಶಸ್ಸಿಗೆ ಪ್ರಮುಖ ಕಾರಣರಾಗಿದ್ದಾರೆ. ಬ್ಯಾಟಿಂಗ್‌, ವಿಕೆಟ್‌ ಕೀಪಿಂಗ್‌ನಲ್ಲಿ ಮಿಂಚಿದ ನಿಹಾಲ್‌ ಉಲ್ಲಾಳ್‌ ಆಡಿದ್ದ 11 ಪಂದ್ಯಗಳಿಂದ ನಾಯಕ ನಿಹಾಲ್‌ ಉಲ್ಲಾಳ್‌ ಒಂದು ಶತಕ ಹಾಗೂ ಒಂದು ಅರ್ಧಶತಕದ ನೆರವಿನಿಂದ 427 ರನ್‌ ಕಲೆ ಹಾಕಿದ್ದಾರೆ. ಆ ಮೂಲಕ ತಮ್ಮ ತಂಡದ ಪರ ಎರಡನೇ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಅಂದಹಾಗೆ , ನಿತಿನ್‌ ಎಸ್‌(433 ರನ್‌) ರಾಜಾಜಿನಗರ ತಂಡದ ಪರ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಬ್ಯಾಟಿಂಗ್‌ ಹಾಗೂ ನಾಯಕತ್ವದ ಜೊತೆಗೆ ನಿಹಾಲ್‌ ಉಲ್ಲಾಳ್, ವಿಕೆಟ್‌ ಕೀಪಿಂಗ್‌ನಲ್ಲಿಯೂ ಅದ್ಭುತ ಪ್ರದರ್ಶನ ತೋರಿದ್ದರು. ಆಡಿದ 11 ಪಂದ್ಯಗಳಲ್ಲಿ ನಿಹಾಲ್‌, 14 ಕ್ಯಾಚ್‌ಗಳು, ಮೂರು ಮನಮೋಹಕ ಸ್ಟಂಪಿಂಗ್‌ ಮಾಡಿದ್ದರು. ಅದರಲ್ಲೂ ಒಂದೇ ಇನಿಂಗ್ಸ್‌ನಲ್ಲಿ 5 ಕ್ಯಾಚ್‌ ಪಡೆದಿದ್ದು ನಿಹಾಲ್‌ ಪಾಲಿಗೆ ಶ್ರೇಷ್ಠ ಪ್ರದರ್ಶನವಾಗಿತ್ತು. ಬೌಲಿಂಗ್‌ನಲ್ಲಿ ಗಮನ ಸೆಳೆದ ಎಚ್‌ಎಸ್‌ ಶರತ್‌ ರಾಜಾಜಿನಗರ ಕ್ರಿಕೆಟಿರ್ಸ್ ಚಾಂಪಿಯನ್ಸ್ ಆಗಲು ಹಿರಿಯ ವೇಗಿ ಎಸ್‌ಎಚ್‌ ಶರತ್‌ ಕೂಡ ಕಾರಣಕರ್ತರು. ಯುವ ಬೌಲರ್‌ಗಳ ಗುಂಪನ್ನು ಮುನ್ನಡೆಸಿದ್ದ ಶರತ್‌, ಟೂರ್ನಿಯುದ್ದಕ್ಕೂ ಸರಿಯಾದ ದಿಕ್ಕಿನಲ್ಲಿ ಸಾರಥ್ಯವಹಿಸಿದ್ದರು ಎಂಬುದಕ್ಕೆ ತಂಡದ ಸಾಧನೆಯೇ ಕಾರಣವಾಗಿದೆ. ಟೂರ್ನಿಯುದ್ದಕ್ಕೂ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರಿದ್ದ ಶರತ್‌, 20 ವಿಕೆಟ್‌ಗಳನ್ನು ತಮ್ಮ ಖಾತೆಗೆ ಸೇರಿಸಿಕೊಂಡಿದ್ದಾರೆ. ಆ ಮೂಲಕ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಐದನೇ ಬೌಲರ್‌ ಹಾಗೂ ಹೆಚ್ಚು ವಿಕೆಟ್‌ ಪಡೆದ ಎರಡನೇ ವೇಗದ ಬೌಲರ್ ಎಂಬ ಕೀರ್ತಿಗೆ ಅವರು ಭಾಜನರಾಗಿದ್ದಾರೆ. ಅಂದಹಾಗೆ, ತಂಡದ ಪರ ನಿಶ್ಚಿತ್‌ ಎನ್‌ ರಾವ್‌(21 ವಿಕೆಟ್‌) ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ ಎನಿಸಿಕೊಂಡಿದ್ದಾರೆ. ನಿಶ್ಚಿತ್‌ ಲೀಗ್‌ ಟೂರ್ನಿಯಲ್ಲಿ ಎರಡನೇ ಅತಿ ಹೆಚ್ಚು ವಿಕೆಟ್‌ ಬೌಲರ್‌ ಆಗಿದ್ದಾರೆ. ಪ್ರಸಕ್ತ ಆವೃತ್ತಿಯಲ್ಲಿ ರಾಜಾಜಿನಗರ ಕ್ರಿಕೆಟರ್ಸ್‌ ಪರ ಪ್ರಥಮ ಡಿವಿಲಿಷನ್‌ ಕ್ರಿಕೆಟ್‌ ಆಡಿದ ಆಫ್‌ ಸ್ಪಿನ್ನರ್‌ ಭಾರ್ಗವ್‌ ಅವರು ಒಟ್ಟು 17 ವಿಕೆಟ್‌ಗಳನ್ನು ಪಡೆಯುವ ಮೂಲಕ ತಂಡದ ಯಶಸ್ಸಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಇದರ ಜೊತೆಗೆ ಉಪ ನಾಯಕ ಕ್ರಾಂತಿಕುಮಾರ್‌ ಪ್ರಸಕ್ತ ಆವೃತ್ತಿಯಲ್ಲಿ ಅತ್ಯುತ್ತಮ ಆಲ್‌ರೌಂಡರ್ ಆಟ ಪ್ರದರ್ಶಿಸಿದ್ದಾರೆ. ಒಂದು ಶತಕ ಹಾಗೂ ಎರಡು ಅರ್ಧಶಕಗಳ ಜೊತೆಗೆ ಬೌಲಿಂಗ್‌ನಲ್ಲಿಯೂ 9 ವಿಕೆಟ್‌ ಪಡೆದು ಗಮನ ಸೆಳೆದಿದ್ದಾರೆ. ಬಿಯುಸಿಸಿ(1) ರನ್ನರ್‌ ಅಪ್‌ ಇನ್ನು ಪ್ರಸಕ್ತ ಟೂರ್ನಿಯಲ್ಲಿ ಎರಡನೇ ಶ್ರೇಷ್ಠ ಪ್ರದರ್ಶನ ತೋರಿರುವ ಬೆಂಗಳೂರು ಯುನೈಟೆಡ್‌ ಕ್ರಿಕೆಟ್ ಕ್ಲಬ್‌(1) ತಂಡ ರನ್ನರ್‌ ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಆಡಿರುವ 11 ಪಂದ್ಯಗಳಲ್ಲಿ ಬಿಯುಸಿಸಿ 7ರಲ್ಲಿ ಗೆದ್ದು, 3 ರಲ್ಲಿ ಸೋಲು ಅನುಭವಿಸಿದೆ. ಆ ಮೂಲಕ 30 ಅಂಕಗಳನ್ನು ಕಲೆ ಹಾಕಿ ಪಾಯಿಂಟ್ಸ್‌ ಟೇಬಲ್‌ನಲ್ಲಿ ಎರಡನೇ ಸ್ಥಾನ ಪಡೆದಿದೆ. 2021/22ರ ಕೆಎಸ್‌ಸಿಎ ಪ್ರಥಮ ಡಿವಿಷನ್‌ ಚಾಂಪಿಯನ್ಸ್ ರಾಜಾಜಿನಗರ ಕ್ರಿಕೆಟರ್ಸ್‌: ನಿಹಾಲ್‌ ಉಲ್ಲಾಳ್‌(ನಾಯಕ/ ವಿಕೆಟ್‌ ಕೀಪರ್‌), , ಎಂ ಕ್ರಾಂತಿಕುಮಾರ್ (ಉಪ ನಾಯಕ), ರೋಹಿತ್‌ ಕುಮಾರ್‌, ಶಿವರಾಜ್‌, ಸೌರಭ್‌ ಮುತ್ತೂರ್‌, ಫರ್ಹಾನ್‌ ಮಾಗಿ, ನಿತಿನ್‌ ಎಸ್‌, ಪ್ರಜ್ವಲ್‌ ಕೃಷ್ಣ, ಎಂ ಶ್ರೀಹರಿ, ಭಾರ್ಗವ ಎಸ್‌, ಎಮಿ ಶಾನ್‌ಬಾನ್‌ ತಂಡದ ಕಾರ್ಯದರ್ಶಿ: ಆರ್‌ ಕುಮಾರ್‌


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3kJMZdn

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...