
ಟೀಮ್ ಇಂಡಿಯಾ ಹಿರಿಯ ವೇಗಿ ಇಶಾಂತ್ ಶರ್ಮಾ ಅವರು ಇಂದು(ಗುರುವಾರ) 33ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅಂದಹಾಗೆ ಹಿರಿಯ ವೇಗಿಯ ವೃತ್ತಿ ಜೀವನ ಶ್ರೇಷ್ಠ ಐದು ಪ್ರದರ್ಶನವನ್ನು ನಾವು ಇಲ್ಲಿ ನೋಡೋಣ.

ಹೊಸದಿಲ್ಲಿ:
ಭಾರತ ತಂಡದ ಹಿರಿಯ ವೇಗಿ ಇಶಾಂತ್ ಶರ್ಮಾ ಇಂದು(ಗುರುವಾರ) 33ನೇ ವಂಸತಕ್ಕೆ ಪದಾರ್ಪಣೆ ಮಾಡಿದ್ದಾರೆ. ಟೀಮ್ ಇಂಡಿಯಾ ಸ್ಟಾರ್ ವೇಗಿಯ ಜನುಮ ದಿನಕ್ಕೆ ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ಸೇರಿದಂತೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಶುಭಕೋರಿದ್ದಾರೆ.
1988ರಂದು ಇದೇ ದಿನದಂದು ಇಶಾಂತ್ ಶರ್ಮಾ ದಿಲ್ಲಿಯಲ್ಲಿ ಜನಿಸಿದ್ದರು. ಅಂದಹಾಗೆ 19 ವಯೋಮಿತಿ ಭಾರತ ತಂಡದಲ್ಲಿ ಗಮನಾರ್ಹ ಬೌಲಿಂಗ್ ಪ್ರದರ್ಶನ ತೋರಿದ್ದರ ಫಲವಾಗಿ 2007ರಲ್ಲಿ ಭಾರತ ಹಿರಿಯರ ತಂಡಕ್ಕೆ ಇಶಾಂತ್ ಶರ್ಮಾ ಆಯ್ಕೆಯಾಗಿದ್ದರು. ಇದೇ ವರ್ಷ(2007) ಮೀರ್‌ಪುರ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಬಲಗೈ ವೇಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.
ಭಾರತ ತಂಡದ ಪರ ಇಲ್ಲಿಯವರೆಗೂ 103 ಟೆಸ್ಟ್ ಪಂದ್ಯಗಳಾಡಿರುವ ಇಶಾಂತ್ ಶರ್ಮಾ 311 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಇದರಲ್ಲಿ 10 ಬಾರಿ 4 ವಿಕೆಟ್ ಸಾಧನೆ ಹಾಗೂ 11 ಬಾರಿ 5 ವಿಕೆಟ್ ಸಾಧನೆ ಮಾಡಿದ್ದಾರೆ. ಇನ್ನು 80 ಓಡಿಐ ಪಂದ್ಯಗಳಾಡಿರುವ ಇಶಾಂತ್, 115 ವಿಕೆಟ್‌ಗಳನ್ನು ತಮ್ಮ ಖಾತೆಗೆ ಸೇರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ 14 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಿಂದ 8 ವಿಕೆಟ್ ಪಡೆದಿದ್ದಾರೆ.
ಅಂದಹಾಗೆ, ಇಶಾಂತ್ ಶರ್ಮಾ ಟೀಮ್ ಇಂಡಿಯಾ ಜೊತೆ ಇಂಗ್ಲೆಂಡ್ ಪ್ರವಾಸದಲ್ಲಿದ್ದು, ಟೆಸ್ಟ್ ಸರಣಿಯಲ್ಲಿ ತೊಡಗಿದ್ದಾರೆ. ಆದರೆ, ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ಮುಗಿದಿದ್ದ ಮೂರನೇ ಟೆಸ್ಟ್ ಪಂದ್ಯದಲ್ಲಿ ಬಲಗೈ ವೇಗಿ ಹೇಳಿಕೊಳ್ಳುವಂತಹ ಪ್ರದರ್ಶನ ತೋರಿರಲಿಲ್ಲ.
ಇಂಗ್ಲೆಂಡ್ ವಿರುದ್ಧ ಪ್ರಸ್ತುತ ಟೆಸ್ಟ್ ಸರಣಿಯಲ್ಲಿ ಎರಡು ಪಂದ್ಯಗಳಾಡಿರುವ ಇಶಾಂತ್ ಶರ್ಮಾ 5 ವಿಕೆಟ್ ಮಾತ್ರ ಪಡೆದುಕೊಂಡಿದ್ದಾರೆ. ಇಂಗ್ಲೆಂಡ್‌ನಂತಹ ಸ್ವಿಂಗ್ ಪರಿಸ್ಥಿತಿಗಳಲ್ಲಿ ಉತ್ತಮ ಬೌಲ್ ಮಾಡುವಲ್ಲಿ ಹಿರಿಯ ವೇಗಿ ವಿಫಲವಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದಿನಿಂದ (ಗುರುವಾರ) ಆರಂಭವಾಗಲಿರುವ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಇಶಾಂತ್ ಶರ್ಮಾ ಅವರನ್ನು ಕೈ ಬಿಡುವ ಸಾಧ್ಯತೆ ಇದೆ.
ವೆಸ್ಟ್ ಇಂಡೀಸ್ ವಿರುದ್ಧ 51ಕ್ಕೆ6 (2011)

ಕಳೆದ 2011ರ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಭಾರತ ಕೇವಲ 201 ರನ್‌ಗೆ ಆಲ್‌ಔಟ್ ಆಗಿತ್ತು. ಬಳಿಕ ಪ್ರಥಮ ಇನಿಂಗ್ಸ್ ಮಾಡಿದ್ದ ವೆಸ್ಟ್ ಇಂಡೀಸ್ ತಂಡಕ್ಕೆ ಇಶಾಂತ್ ಶರ್ಮಾ ಆಘಾತ ನೀಡಿದ್ದರು. 51 ರನ್ ನೀಡಿ 6 ವಿಕೆಟ್ ಪಡೆದಿದ್ದ ಇಶಾಂತ್, ವಿಂಡೀಸ್ 190ಕ್ಕೆ ಆಲೌಟ್ ಆಗಲು ಕಾರಣರಾಗಿದ್ದರು. ನಂತರ ದ್ವಿತೀಯ ಇನಿಂಗ್ಸ್‌ನಲ್ಲಿಯೂ ಬಲಗೈ 53ಕ್ಕೆ 4 ವಿಕೆಟ್ ಪಡೆದಿದ್ದರು. ಅಂದಹಾಗೆ ಇಶಾಂತ್ ಶರ್ಮಾ ಅವರ ಪಾಲಿಗೆ ನಾಲ್ಕನೇ ಟೆಸ್ಟ್ ಪಂದ್ಯವಾಗಿತ್ತು. ಅಂತಿಮವಾಗಿ ಈ ಪಂದ್ಯ ಡ್ರಾ ಆಗಿತ್ತು. 10 ವಿಕೆಟ್ ಸಾಧನೆ ಮಾಡಿದ್ದ ಇಶಾಂತ್ ಶರ್ಮಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು.
4ನೇ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ ಸೇರಿಕೊಂಡ ಮತ್ತೊಬ್ಬ ಕನ್ನಡಿಗ!
ಇಂಗ್ಲೆಂಡ್ ವಿರುದ್ಧ 74ಕ್ಕೆ 7 (ಲಾರ್ಡ್ಸ್,2014)

ಇಂಗ್ಲೆಂಡ್ ವಿರುದ್ಧ 2014ರ ಲಾರ್ಡ್ಸ್ ಟೆಸ್ಟ್ ಕೂಡ ಇಶಾಂತ್ ಶರ್ಮಾಗೆ ಪಾಲಿಗೆ ಸ್ಮರಣೀಯ ಪಂದ್ಯವಾಗಿದೆ. ಅಂದಹಾಗೆ ಈ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದ ಇಶಾಂತ್ ಶರ್ಮಾ, ಎರಡನೇ ಇನಿಂಗ್ಸ್‌ನಲ್ಲಿ ಶ್ರೇಷ್ಠ ಬೌಲಿಂಗ್ ಪ್ರದರ್ಶನ ತೋರಿದ್ದರು. ಹಿರಿಯ ವೇಗಿ 7 ವಿಕೆಟ್ ಪಡೆಯುವ ಮೂಲಕ ಅಂತಿಮ ದಿನದಲ್ಲಿ ಭಾರತ ತಂಡದ 95 ರನ್‌ಗಳ ಐತಿಹಾಸಿಕ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ್ದರು. ಆ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಸ್ವೀಕರಿಸಿದ್ದರು. ಇದರೊಂದಿಗೆ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಸೇರಿದ್ದ ಅಪಾರ ಅಭಿಮಾನಿಗಳ ಪ್ರೀತಿಗೆ ಇಶಾಂತ್ ಪಾತ್ರರಾಗಿದ್ದರು.
'ಈ ಸರಣಿ ಯಾರು ಬೇಕಾದರೂ ಗೆಲ್ಲಬಹುದು', ಎಂದ ಕೋಚ್ ರವಿ ಶಾಸ್ತ್ರಿ!
ನ್ಯೂಜಿಲೆಂಡ್ ವಿರುದ್ಧ 51ಕ್ಕೆ 6 (ವೆಲ್ಲಿಂಗ್ಟನ್, 2014)

ನ್ಯೂಜಿಲೆಂಡ್ ವಿರುದ್ಧ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಸೋಲು ಅನುಭವಿಸಿದ್ದ ಭಾರತ ತಂಡ, ಎರಡನೇ ಟೆಸ್ಟ್ ಪಂದ್ಯದಲ್ಲಿ ಕಮ್‌ಬ್ಯಾಕ್ ಮಾಡಿತ್ತು. ಅಂದಹಾಗೆ ಈ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ತೋರಿದ್ದ ಇಶಾಂತ್ ಶರ್ಮಾ 51 ರನ್‌ಗೆ 6 ವಿಕೆಟ್ ಕಬಳಿಸಿದ್ದರು. ಆ ಮೂಲಕ ನ್ಯೂಜಿಲೆಂಡ್ ಕೇವಲ 192 ರನ್‌ಗಳಿಗೆ ಆಲೌಟ್ ಆಗಿತ್ತು. ನಂತರ ದ್ವಿತೀಯ ಇನಿಂಗ್ಸ್‌ನಲ್ಲಿ ಬ್ರೆಂಡನ್ ಮೆಕಲಮ್ ಅವರು ತ್ರಿಶತಕ ಸಿಡಿಸಿದ್ದರು. ಆದರೆ, ವಿರಾಟ್ ಕೊಹ್ಲಿಯ ಶತಕದ ನೆರವಿನಿಂದ ಭಾರತ ತಂಡ ಈ ಪಂದ್ಯದಲ್ಲಿ ಸೋಲಿನಿಂದ ತಪ್ಪಿಸಿಕೊಂಡಿತ್ತು.
ಕ್ರಿಕೆಟ್ ಸುದ್ದಿ ಟೆಸ್ಟ್ ರ‍್ಯಾಂಕಿಂಗ್: ರೂಟ್ ನೂತನ ನಂ.1, ಕೊಹ್ಲಿಗೆ ಸಡ್ಡು ಹೊಡೆದ ರೋಹಿತ್!
ಶ್ರೀಲಂಕಾ ವಿರುದ್ಧ 54ಕ್ಕೆ 5 (ಕೊಲಂಬೊ, 2015)

2015ರ ಶ್ರೀಲಂಕಾ ವಿರುದ್ಧದ ಕೊಲಂಬೊ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ಚೇತೇಶ್ವರ್ ಪೂಜಾರ ಪಂದ್ಯ ಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ್ದರು. ಆದರೆ, ಇಶಾಂತ್ ಶರ್ಮಾ ಅವರ (54ಕ್ಕೆ 7) ಮಾರಕ ಬೌಲಿಂಗ್ ಪ್ರದರ್ಶನದಿಂದ ಭಾರತ ತಂಡದ ಪ್ರಥಮ ಇನಿಂಗ್ಸ್‌ನಲ್ಲಿ 100ಕ್ಕೂ ಹೆಚ್ಚಿನ ರನ್ ಮುನ್ನಡೆ ಪಡೆದಿತ್ತು. ದ್ವಿತೀಯ ಇನಿಂಗ್ಸ್‌ನಲ್ಲಿಯೂ ಇಶಾಂತ್ 32 ರನ್ ನೀಡಿ 3 ವಿಕೆಟ್ ಪಡೆದುಕೊಂಡಿದ್ದರು. ಇವರ ಜೊತೆಗೆ ಆರ್ ಅಶ್ವಿನ್ 69ಕ್ಕೆ4 ವಿಕೆಟ್ ಪಡೆದಿದ್ದರು. ಅಂತಿಮವಾಗಿ ಈ ಪಂದ್ಯದಲ್ಲಿ ಭಾರತ 117 ರನ್ ಗೆಲುವು ಪಡೆದಿತ್ತು. ನಾಲ್ಕು ವರ್ಷಗಳ ಬಳಿಕ ಭಾರತ ತಂಡದ ವಿದೇಶಿ ಟೆಸ್ಟ್ ಸರಣಿ ಜಯ ಇದಾಗಿತ್ತು.
'ನಾನು ಈತನ ದೊಡ್ಡ ಅಭಿಮಾನಿ' ರಹಾನೆ ಸ್ಥಾನಕ್ಕೆ ಈ ಆಟಗಾರನೇ ಪರ್ಫೆಕ್ಟ್ ಎಂದ ಕನೇರಿಯಾ!
ಇಂಗ್ಲೆಂಡ್ ವಿರುದ್ಧ 51ಕ್ಕೆ5 (ಬರ್ಮಿಂಗ್‌ಹ್ಯಾಮ್, 2018)

2014ರ ಲಾರ್ಡ್ಸ್ ಟೆಸ್ಟ್ ಬಳಿಕ ಇಶಾಂತ್ ಶರ್ಮಾ 2018ರಲ್ಲಿ ಅದೇ ರೀತಿಯ ಬೌಲಿಂಗ್ ಪ್ರದರ್ಶನವನ್ನು ತೋರಿದ್ದರು. ಟೆಸ್ಟ್ ಸರಣಿಯ ಆರಂಭಿಕ ಪಂದ್ಯದ ಮೂರನೇ ದಿನ ಇಶಾಂತ್ ಶರ್ಮಾ ಮಾರಕ ಬೌಲಿಂಗ್ ದಾಳಿಗೆ ನಲುಗಿದ ಇಂಗ್ಲೆಂಡ್, ಕೇವಲ 180 ರನ್‌ಗೆ ಆಲೌಟ್ ಆಗಿತ್ತು. 51 ರನ್ ನೀಡಿದ್ದ ಇಶಾಂತ್ ಶರ್ಮಾ, ಪ್ರಮುಖ 5 ವಿಕೆಟ್‌ಗಳನ್ನು ಪಡೆದುಕೊಂಡಿದ್ದರು. ಹಿರಿಯ ವೇಗಿಯ ಐದನೇ 5 ವಿಕೆಟ್ ಸಾಧನೆ ಕೂಡ ಇದಾಗಿತ್ತು. ಇದರ ಹೊರತಾಗಿಯೂ ಟೀಮ್ ಇಂಡಿಯಾ ಅಂದಿನ ಪಂದ್ಯದಲ್ಲಿ 31 ರನ್‌ಗಳಿಂದ ಸೋಲು ಅನುಭವಿಸಿತ್ತು.
ಭಾರತೀಯರನ್ನು ಹೊರಗಿಟ್ಟು ತಮ್ಮ ನೆಚ್ಚಿನ ಟಾಪ್ 10 ವೇಗಿಗಳನ್ನು ಹೆಸರಿಸಿದ ವಾರ್ನ್!
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3kJYO37