ಪ್ರಸಿಧ್‌ ಕೃಷ್ಣ ವಿರುದ್ಧ ಕ್ರೀಸ್‌ನಲ್ಲಿಯೇ ರೊಚ್ಚಿಗೆದ್ದ ಪೊಲಾರ್ಡ್‌! ವಿಡಿಯೋ

ಅಬು ಧಾಬಿ: ಆಲ್‌ರೌಂಡರ್‌ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಒಂದಲ್ಲ ಒಂದು ವಿಷಯದಲ್ಲಿ ಸದ್ದು ಮಾಡುತ್ತಿರುತ್ತಾರೆ. ತಮ್ಮ ಮುಂದೆ ಯಾರೇ ಅಧಿಕ ಪ್ರಸಂಗ ತೋರಿದರೂ ಸುಮ್ಮನೆ ಬಿಡುವ ಜಾಯಮಾನ ಪೊಲಾರ್ಡ್‌ ಅವರದಲ್ಲ. ಈ ಹಿಂದೆ ಮೈದಾನದಲ್ಲಿ ಹಲವು ನಿದರ್ಶನಗಳನ್ನು ನಾವು ನೋಡಿದ್ದೇವೆ. ಗುರುವಾರ ಇಲ್ಲಿನ ಶೇಖ್‌ ಜಾವೆದ್‌ ಕ್ರೀಡಾಂಗಣದಲ್ಲಿ ನಡೆದಿದ್ದ 2021ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ 34ನೇ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಮುಂಬೈ ಇಂಡಿಯನ್ಸ್ ತನ್ನ ಪಾಲಿನ 20 ಓವರ್‌ಗಳಿಗೆ 6 ವಿಕೆಟ್‌ ಕಳೆದುಕೊಂಡು 155 ರನ್‌ ಗಳಿಸಿತ್ತು. ಬಳಿಕ ಗುರಿ ಹಿಂಬಾಲಿಸಿದ್ದ ಕೆಕೆಆಎರ್‌ 15.1 ಓವರ್‌ಗಳಿಗೆ 3 ವಿಕೆಟ್‌ ನಷ್ಟಕ್ಕೆ 159 ರನ್‌ ಗಳಿಸಿ ಭರ್ಜರಿ ಗೆಲುವು ಪಡೆದಿತ್ತು. ಈ ಪಂದ್ಯದ ಗೆಲುವಿನೊಂದಿಗೆ ತಂಡ 8 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನಕ್ಕೇರಿತು. ಆದರೆ, ಸೋಲು ಅನುಭವಿಸಿದ ಮುಂಬೈ ಇಂಡಿಯನ್ಸ್ ಆರನೇ ಸ್ಥಾನಕ್ಕೆ ಇಳಿಯಿತು. ಇಲ್ಲಿನ ಶೇಖ್‌ ಜಾವೆದ್‌ ಕ್ರೀಡಾಂಗಣದಲ್ಲಿ ಗುರುವಾರ ಕೋಲ್ಕತಾ ನೈಟ್‌ ರೈಡರ್ಸ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿಯೂ ಇಂತದ್ದೇ ಒಂದು ಪ್ರಸಂಗ ನಡೆಯಿತು. ಮುಂಬೈ ಇಂಡಿಯನ್ಸ್ ಇನಿಂಗ್ಸ್‌ನ 15ನೇ ಓವರ್‌ನಲ್ಲಿ ಎಸೆತದಲ್ಲಿ ಪೊಲಾರ್ಡ್ ಬೌಲರ್‌ಗೆ ನೇರವಾಗಿ ಚೆಂಡನ್ನು ಹೊಡೆದರು. ಈ ವೇಳೆ ಕೃಷ್ಣ ಚೆಂಡಿನಿಂದ ಪೊಲಾರ್ಡ್‌ಗೆ ಹೊಡೆಯಲು ಮುಂದಾದರು. ಆದರೆ, ಚೆಂಡು ಕೈಗೆ ಸಿಗದ ಕಾರಣ ಖಾಲಿ ಕೈಗಳನ್ನು ಮೇಲಕ್ಕೆ ಎತ್ತುವ ಮೂಲಕ ಪ್ರಸಿಧ್‌ ಕೃಷ್ಣ, ಕೈರೊನ್‌ ಪೊಲಾರ್ಡ್‌ಗೆ ಚಮಕ್‌ ನೀಡಿದರು. ಇದರಿಂದ ರೊಚ್ಚಿಗೆದ್ದ ಪೊಲಾರ್ಡ್‌ ಕ್ರೀಸ್‌ ಮುಂದೆ ನಡೆದುಕೊಂಡು ಬಂದು ಕೆಕೆಆರ್‌ ವೇಗಿಗೆ ಕೆಲ ಪದಗಳನ್ನು ಪ್ರಯೋಗ ಮಾಡಿದರು. ಆದರೆ, ಕನ್ನಡಿಗ ಪ್ರಸಿಧ್‌ ಕೃಷ್ಣ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡದೆ ಶಾಂತ ರೀತಿಯಲ್ಲಿ ವರ್ತಿಸಿದ್ದರು ಹಾಗೂ ಕ್ಯಾಪ್‌ ತಲೆಗೆ ಸೇರಿಸಿಕೊಂಡು ಹೊರಟು ಹೋದರು. ಇವರಿಬ್ಬರ ನಡುವೆ ಕಾಳಗ ಇಲ್ಲಿಗೆ ಮುಗಿಯಲಿಲ್ಲ. ನಂತರ ಬ್ಯಾಟಿಂಗ್‌ ಮುಂದುವರಿಸಿದ್ದ ಪೊಲಾರ್ಡ್ ಸಿಂಗಲ್‌ ರನ್ ತೆಗೆದುಕೊಂಡು ನಾನ್‌ಸ್ಟ್ರೈಕ್‌ ಎಂಡ್‌ಗೆ ತೆರಳಿದರು. ಈ ವೇಳೆ ಬೌಲಿಂಗ್‌ಗೆ ತೆರಳುತ್ತಿದ್ದ ಪ್ರಸಿಧ್‌ ಕೃಷ್ಣ ಮೇಲೆ ಮತ್ತೊಮ್ಮೆ ತಿರಗೇಟು ನೀಡಲು ಮುಂದಾದರು. ಆದರೆ, ಪ್ರಸಿಧ್‌ ಅಂಪೈರ್‌ ಕಡೆ ಮುಖ ಮಾಡಿ ತಮ್ಮ ತೋಳನ್ನು ಮೇಲೆತ್ತಿ, ಇಲ್ಲಿ ಏನು ನಡೆಯುತ್ತಿದೆ ಎಂದು ಪ್ರಶ್ನೆ ಮಾಡುವ ರೀತಿ ಸನ್ನೆ ಮಾಡಿದ್ದರು. ಅಂದಹಾಗೆ ಪಂದ್ಯದಲ್ಲಿ 4 ಓವರ್‌ಗಳಿಗೆ 43 ರನ್‌ ನೀಡಿದ್ದ ಪ್ರಸಿಧ್‌ ಕೃಷ್ಣ ಮೂರು ವಿಕೆಟ್‌ಗಳನ್ನು ಕಬಳಿಸಿದ್ದರು. ಈ ಪಂದ್ಯದಲ್ಲಿ ಅವರು ಎರಡು ನೋ ಬಾಲ್‌ ಎಸೆತಗಳನ್ನು ಹಾಕಿದ್ದರು ಹಾಗೂ ಒಟ್ಟಾರೆ ಈ ಆವೃತ್ತಿಯಲ್ಲಿ ಕನ್ನಡಿಗ ಎಂಟು ನೋ ಬಾಲ್‌ ಎಸೆದಂತಾಯಿತು. ಆ ಮೂಲಕ 2021ರ ಐಪಿಎಲ್‌ನಲ್ಲಿ ಅತಿ ಹೆಚ್ಚು ನೋ ಬಾಲ್‌ ಎಸೆದ ಬೌಲರ್‌ ಎನಿಸಿಕೊಂಡರು. ಮತ್ತೊಂದೆಡೆ ಕೈರೊನ್‌ ಪೊಲಾರ್ಡ್ ಅವರು ಕೇವಲ 15 ಎಸೆತಗಳಲ್ಲಿ 21 ರನ್‌ ಚೆಚ್ಚಿದ್ದರು. ಇದರಲ್ಲಿ ಅವರು ಒಂದು ಭರ್ಜರಿ ಸಿಕ್ಸರ್‌ ಹಾಗೂ ಎರಡು ಬೌಂಡರಿ ಸಿಡಿಸಿದ್ದರು. ಒಟ್ಟಾರೆ, ಕ್ವಿಂಟನ್‌ ಡಿ ಕಾಕ್‌ ಅರ್ಧಶಶಕದ ನೆರವಿನಿಂದ ಮುಂಬೈ ಇಂಡಿಯನ್ಸ್ ತನ್ನ ಪಾಲಿನ 20 ಓವರ್‌ಗಳಿಗೆ 6 ವಿಕೆಟ್‌ ನಷ್ಟಕ್ಕೆ 155 ರನ್‌ ಕಲೆ ಹಾಕಿತ್ತು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3zyc1RX

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...