ಮ್ಯಾಟ್ರಿಮೋನಿಯಲ್‌ನಲ್ಲಿ ವಿಚ್ಛೇದಿತ ಮಹಿಳೆಯರನ್ನು ಟಾರ್ಗೆಟ್‌ ಮಾಡಿ ವಂಚಿಸುತ್ತಿದ್ದವನ ಬಂಧನ

ಬೆಂಗಳೂರು: ಮ್ಯಾಟ್ರಿಮೋನಿಯಲ್‌ ಶಾದಿ ಡಾಟ್‌ಕಾಂ ವೆಬ್‌ಸೈಟ್‌ನಲ್ಲಿ ಅಂದ ಚಂದದ ಫೋಟೊ ಹಾಕಿ ವಿಚ್ಛೇದಿತ ಹಾಗೂ ಮೂವತ್ತು ವರ್ಷ ಮೇಲ್ಪಟ್ಟ ಮಹಿಳೆಯರನ್ನು ಪರಿಚಯಿಸಿಕೊಂಡು ಪ್ರೇಮದ ಬಲೆಗೆ ಬೀಳಿಸಿಕೊಂಡು ನಂಬಿಸಿ ಚಿನ್ನಾಭರಣ, ಹಣ ಪಡೆದು ವಂಚಿಸುತ್ತಿದ್ದವನನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಉಲ್ಲಾಳು ನಿವಾಸಿ ಜಗನ್ನಾಥ್‌ ಸಜ್ಜನರ್‌ (32) ಬಂಧಿತ ಆರೋಪಿಯಾಗಿದ್ದು, ಈತನಿಂದ 1.6 ಲಕ್ಷ ರೂ. ನಗದು, 116 ಗ್ರಾಂ ಚಿನ್ನಾಭರಣ, ಐದು ಮೊಬೈಲ್‌, 20ಕ್ಕೂ ಹೆಚ್ಚು ಸಿಮ್‌ ಕಾರ್ಡ್‌, ಒಂದು ಕಾರು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಜಯಪುರ ಜಿಲ್ಲೆಯವನಾದ ಆರೋಪಿ ಬಿಎ ಪದವೀಧರನಾಗಿದ್ದಾನೆ. ಹಲವು ವರ್ಷಗಳಿಂದ ಕುಟುಂಬದಿಂದ ದೂರವಿರುವ ಆರೋಪಿ, ಉಲ್ಲಾಳುವಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಆರಂಭದಲ್ಲಿ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಅವಿವಾಹಿತನಾಗಿರುವ ಆರೋಪಿ, ಮ್ಯಾಟ್ರಿಮೋನಿಯಲ್‌ ವೆಬ್‌ಸೈಟ್‌ ಬಳಸಿಕೊಂಡು ಹಣ ಸಂಪಾದಿಸುತ್ತಿದ್ದ. 30 ವರ್ಷ ಮೇಲ್ಪಟ್ಟ ಯುವತಿಯರು ಹಾಗೂ ವಿಚ್ಛೇತ ಮಹಿಳೆಯರ ಪ್ರೊಫೈಲ್‌ ಮಾಹಿತಿ ಪಡೆದು ಅವರಿಗೆ ಕರೆ ಮಾಡುತ್ತಿದ್ದ. ತಾನು ಎಂಜಿನಿಯರ್‌ ಆಗಿದ್ದು, ಭೇಟಿಯಾಗುವಂತೆ ಕೇಳುತ್ತಿದ್ದ. ಶ್ರೀಮಂತನಂತೆ ಬಿಂಬಿಸಿಕೊಳ್ಳುತ್ತಿದ್ದ. ನಂತರ ಅನಾರೋಗ್ಯ, ಅಪಘಾತ ಹೀಗೆ ನಾನಾ ಕಾರಣಗಳನ್ನು ನೀಡಿ ಯುವತಿಯರಿಂದ ಹಣ ವಸೂಲಿ ಮಾಡುತ್ತಿದ್ದ. ಸ್ವಲ್ಪ ದಿನಗಳ ಬಳಿಕ ಹಣ ವಾಪಸ್‌ ನೀಡುತ್ತೇನೆ ಎಂದು ಸುಳ್ಳು ಹೇಳಿ ನಂಬಿಸುತ್ತಿದ್ದ. ಕೆಲ ಯುವತಿಯರನ್ನು ನೇರವಾಗಿ ಭೇಟಿಯಾಗಿ ಚಿನ್ನಾಭರಣಗಳನ್ನು ಪಡೆದು ಅಡಮಾನ ಇರಿಸಿ ಹಣ ಪಡೆದುಕೊಂಡಿದ್ದಾನೆ. ಬ್ಯಾಂಡೇಜ್‌ ಹಾಕಿಕೊಂಡು ನಾಟಕ ಮಾಡಿದ್ದಆರೋಪಿಯು ಕೈಗೆ ಬ್ಯಾಂಡೇಜ್‌ ಹಾಕಿಕೊಂಡು ಅಪಘಾತವಾಗಿದೆ ಎಂದು ನಂಬಿಸಿ ಯುವತಿಯೊಬ್ಬರಿಂದ 4.4 ಲಕ್ಷ ರೂ. ಪಡೆದಿದ್ದಾನೆ. ವಂಚನೆ ಸಂಬಂಧ ಯುವತಿ ಹೆಣ್ಣೂರು ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಹೆಣ್ಣೂರು ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪೂರ್ವ ವಿಭಾಗ ಡಿಸಿಪಿ ಎಸ್‌.ಡಿ.ಶರಣಪ್ಪ ಹೇಳಿದರು. 30 ವರ್ಷ ಮೇಲ್ಪಟ್ಟವರು, ವಿಚ್ಛೇದಿತರು ಟಾರ್ಗೆಟ್‌ಆರೋಪಿ 30 ವರ್ಷ ಮೇಲ್ಪಟ್ಟ ಯುವತಿಯರು ಹಾಗೂ ವಿಚ್ಛೇದಿತ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ವಂಚಿಸುತ್ತಿದ್ದ. 30 ವರ್ಷ ವಯಸ್ಸಾದವರು ಗಂಡು ಸಿಕ್ಕಿಲ್ಲ ಎಂಬ ಕಾರಣಕ್ಕೆ ಬೇಗ ಒಪ್ಪಿಕೊಳ್ಳುತ್ತಾರೆ. ಇಲ್ಲವಾದರೆ ವಿಚ್ಛೇದಿತ ಮಹಿಳೆಯರು ಹೊಸ ಜೀವನ ಕಟ್ಟಿಕೊಳ್ಳಲು ಒಪ್ಪಿಕೊಳ್ಳುತ್ತಾರೆ ಎಂಬ ಕಾರಣಕ್ಕೆ ಆರೋಪಿ ಇದೇ ವರ್ಗದವರನ್ನು ಟಾರ್ಗೆಟ್‌ ಮಾಡಿಕೊಳ್ಳುತ್ತಿದ್ದ. ಪ್ರತಿ ಬಾರಿ ಹೊಸ ಮಹಿಳೆಯರನ್ನು ಪರಿಚಯ ಮಾಡಿಕೊಂಡ ಬಳಿಕ ಹೊಸ ನಂಬರ್‌ ಕೊಡುತ್ತಿದ್ದ. ಅವರ ಜತೆ ಆತ್ಮೀಯತೆ ಬೆಳೆಯುತ್ತಿದ್ದಂತೆ ಉಡುಪಿ, ಮಂಗಳೂರು ಸೇರಿ ಕಡಲ ತೀರದ ಪ್ರದೇಶಗಳಿಗೆ ಕರೆದೊಯ್ದು ಮೋಜು ಮಾಡುತ್ತಿದ್ದ. ಈ ಬಗ್ಗೆ ಯಾರೂ ದೂರು ನೀಡಿಲ್ಲ. ಹೊಸ ಯುವತಿಯರನ್ನು ಸಂಪರ್ಕ ಮಾಡಿದಾಗಲೆಲ್ಲ ಹೊಸ ಸಿಮ್‌ ಕಾರ್ಡ್‌ ಬಳಕೆ ಮಾಡುತ್ತಿದ್ದ. ಹಣ ಸುಲಿಗೆ ಮಾಡಿದ ಬಳಿಕ ಸಿಮ್‌ ಕಾರ್ಡ್‌ ಬಳಕೆ ಮಾಡುತ್ತಿರಲಿಲ್ಲ. ಒಟ್ಟು 10ಕ್ಕೂ ಹೆಚ್ಚು ಮಂದಿಗೆ ಆರೋಪಿ ವಂಚನೆ ಮಾಡಿರುವುದು ಗೊತ್ತಾಗಿದೆ. ಆದರೆ, ವಂಚನೆಗೊಳಗಾದವರು ದೂರು ಕೊಡಲು ಮುಂದೆ ಬರುತ್ತಿಲ್ಲ. ದೂರು ನೀಡಿದರೆ ಕ್ರಮಕೈಗೊಳ್ಳಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದರು.


from India & World News in Kannada | VK Polls https://ift.tt/3gX4beh

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...