ಅತ್ಯಾಚಾರ ಆರೋಪ: ಕೋರ್ಟ್ ಮಾರ್ಷಲ್ ಕಾಯ್ದೆ ಅಡಿ ವಾಯುಪಡೆ ಅಧಿಕಾರಿ ವಿಚಾರಣೆ

ಕೊಯಮತ್ತೂರು: ತನ್ನ ಸಹೋದ್ಯೋಗಿ ಮೇಲೆ ನಡೆಸಿದ ಆರೋಪ ಎದುರಿಸುತ್ತಿರುವ 29 ವರ್ಷದ ಫ್ಲೈಟ್ ಲೆಫ್ಟಿನೆಂಟ್‌ನನ್ನು ಕಾಯ್ದೆಯಡಿ ವಿಚಾರಣೆಗೆ ಒಳಪಡಿಸಲಾಗುವುದು ಎಂದು ತಮಿಳುನಾಡಿನ ಕೊಯಮತ್ತೂರು ನ್ಯಾಯಾಲಯ ಗುರುವಾರ ಹೇಳಿದೆ. ಈ ಪ್ರಕರಣವನ್ನು ಭಾರತೀಯ ವಾಯುಪಡೆಗೆ () ವರ್ಗಾಯಿಸಲಾಗಿದೆ. ಸೆ. 10ರಂದು ತನ್ನ ಸಹೋದ್ಯೋಗಿಯಿಂದ ಅತ್ಯಾಚಾರಕ್ಕೆ ಒಳಗಾಗಿದ್ದಾಗಿ ಮಹಿಳಾ ಅಧಿಕಾರಿ ಆರೋಪಿಸಿದ್ದರು. ಅಲ್ಲದೆ, ದೂರನ್ನು ಹಿಂದಕ್ಕೆ ಪಡೆಯುವಂತೆ ತನ್ನ ಮೇಲೆ ಒತ್ತಡ, ಬೆದರಿಕೆ ಒಡ್ಡಲಾಗಿತ್ತು. ನಿಷೇಧಿಸಲಾಗಿರುವ ಎರಡು-ಬೆರಳಿನ ಪರೀಕ್ಷೆಗೆ ಒಳಪಡುವಂತೆ ವಾಯುಪಡೆ ವೈದ್ಯರು ಒತ್ತಾಯಿಸಿದ್ದರು. ತನ್ನ ಲೈಂಗಿಕ ಇತಿಹಾಸದ ಬಗ್ಗೆ ಪ್ರಶ್ನಿಸಿದ್ದರು. ಇದೆಲ್ಲವೂ ತನ್ನ ಮೇಲೆ ಲೈಂಗಿಕ ದೌರ್ಜನ್ಯದ ಆಘಾತ ಉಂಟುಮಾಡಿವೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದರು. ಐಎಎಫ್ ಜತೆ ಈ ವಿಚಾರ ಪ್ರಸ್ತಾಪಿಸಿದ್ದ ರಾಷ್ಟ್ರೀಯ ಮಹಿಳಾ ಆಯೋಗ, ಈ ಘಟನೆಯನ್ನು ಐಎಎಫ್ ನಿಭಾಯಿಸಿದ ರೀತಿ ತೀವ್ರ ನಿರಾಶೆ ಮೂಡಿಸಿದೆ ಎಂದಿತ್ತು. ಸಂತ್ರಸ್ತೆಗೆ ನಿಷೇಧಿತ ಎರಡು ಬೆರಳಿನ ಪರೀಕ್ಷೆ ನಡೆಸಿರುವ ಐಎಎಫ್ ವೈದ್ಯರ ನಡವಳಿಕೆಯನ್ನು ಖಂಡಿಸಿತ್ತು. ಈ ಮೂಲಕ ಸಂತ್ರಸ್ತೆಯ ಖಾಸಗಿತನದ ಹಕ್ಕು ಹಾಗೂ ಘನತೆಯನ್ನು ಉಲ್ಲಂಘಿಸಲಾಗಿದೆ ಮತ್ತು ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲಂಘಿಸಲಾಗಿದೆ ಎಂದು ಕಿಡಿಕಾರಿತ್ತು. ಕೊಯಮತ್ತೂರಿನ ರೆಡ್‌ಫೀಲ್ಡ್‌ನಲ್ಲಿರುವ ವಾಯುಪಡೆ ಆಡಳಿತಾತ್ಮಕ ಕಾಲೇಜಿಗೆ ತರಬೇತಿಗೆಂದು ಬಂದಿದ್ದ ಮಹಿಳೆ, ಐಎಎಫ್‌ಗೆ ದೂರು ನೀಡಿದ್ದರೂ ಪ್ರಯೋಜನವಾಗದೆ ಇದ್ದಿದ್ದರಿಂದ ಕೊಯಮತ್ತೂರು ಪೊಲೀಸರಿಗೆ ದೂರು ನೀಡಬೇಕಾಗಿದ್ದಾಗಿ ತಿಳಿಸಿದ್ದರು. ತರಬೇತಿ ವೇಳೆ ನಡೆದ ಆಟದಲ್ಲಿ ಗಾಯಗೊಂಡಿದ್ದೆ. ಹೀಗಾಗಿ ಕೊಠಡಿಗೆ ಹೋಗಿ ಮಲಗುವ ಮುನ್ನ ಔ‍ಷಧಗಳನ್ನು ಪಡೆದುಕೊಂಡಿದ್ದೆ. ನಸುಕಿನಲ್ಲಿ ತನ್ನ ಮೇಲೆ ನಡೆದಿದೆ. ಆಗ ಎಚ್ಚರವಾಗಿದ್ದಾಗಿ ಅವರು ದೂರಿನಲ್ಲಿ ತಿಳಿಸಿದ್ದರು. ತಮ್ಮ ದೂರನ್ನು ಗಂಭೀರವಾಗಿ ಪರಿಗಣಿಸದ ಐಎಎಫ್ ಅಧಿಕಾರಿಗಳು, ದೂರು ವಾಪಸ್ ಪಡೆಯುವಂತೆ ಒತ್ತಡ ಹೇರಿದ್ದರು ಎಂದು ಆಕೆ ಆರೋಪಿಸಿದ್ದರು. ಈ ಬಗ್ಗೆ ಎಫ್‌ಐಆರ್ ದಾಖಲಿಸಿದ್ದ ಕೊಯಮತ್ತೂರು ಮಹಿಳಾ ಠಾಣೆ ಪೊಲೀಸರು, ಕಳೆದ ಭಾನುವಾರ ಆರೋಪಿಯನ್ನು ಬಂಧಿಸಿದ್ದರು. ಇದಕ್ಕೆ ಆರೋಪಿ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದ್ದರು. ವಾಯುಪಡೆ ಅಧಿಕಾರಿಯನ್ನು ಬಂಧಿಸಲು ಸ್ಥಳೀಯ ಪೊಲೀಸರಿಗೆ ಅಧಿಕಾರವಿಲ್ಲ ಎಂದು ವಾದಿಸಿದ್ದರು. ಪೊಲೀಸ್ ತನಿಖೆಗೆ ಸಹಕರಿಸಲಾಗುತ್ತಿದ್ದು, ಆಂತರಿಕ ತನಿಖೆ ನಡೆಸಲಾಗುತ್ತಿದೆ ಎಂದು ಐಎಎಫ್ ಹೇಳಿಕೆ ನೀಡಿತ್ತು. ಈಗ ಐಎಎಫ್ ಕಾಯ್ದೆಯಂತೆ ಅಧಿಕಾರಿಯನ್ನು ಕೋರ್ಟ್ ಮಾರ್ಷಲ್‌ಗೆ ಒಳಪಡಿಸಲು ಕೊಯಮತ್ತೂರು ನ್ಯಾಯಾಲಯ ಆದೇಶಿಸಿದೆ. ವಾಯುಪಡೆ ಅಧಿಕಾರಿಗಳಿಂದ ತಮಗೆ ನ್ಯಾಯ ಸಿಗುವುದಿಲ್ಲ ಎಂದು ಖಾತರಿಯಾದ ಹಿನ್ನೆಲೆಯಲ್ಲಿ ಸೆ. 20ರಂದು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಲು ತೀರ್ಮಾನಿಸಿದ್ದರು. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ಅಮಿತೇಶ್‌ ಹರ್ಮುಖ್‌ನನ್ನು ಬಂಧಿಸಿದ್ದರು. ಇದರ ವಿರುದ್ಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ಐಎಎಫ್, ಅಧಿಕಾರಿಯನ್ನು ಬಂಧಿಸಲು ಸ್ಥಳೀಯ ಪೊಲೀಸರಿಗೆ ಯಾವುದೇ ಅಧಿಕಾರವಿಲ್ಲ. ಇದು ರಕ್ಷಣಾ ನ್ಯಾಯಾಂಗದ ವ್ಯಾಪ್ತಿಗೆ ಮಾತ್ರ ಬರುತ್ತದೆ. ಇಲ್ಲಿ ಕೋರ್ಟ್ ಮಾರ್ಷಲ್ ನಡೆಸಬಹುದು. ಹೀಗಾಗಿ ಆರೋಪಿಯನ್ನು ಐಎಎಫ್‌ಗೆ ಹಸ್ತಾಂತರ ಮಾಡಬೇಕೆಂದು ಒತ್ತಾಯಿಸಿತ್ತು.


from India & World News in Kannada | VK Polls https://ift.tt/3uvwPcc

ಮುಂಗಾರು ನಿರ್ಗಮನ: ಕರ್ನಾಟಕದಲ್ಲಿ ಈ ಬಾರಿ ವಾಡಿಕೆಗಿಂತ ಶೇ 8ರಷ್ಟು ಮಳೆ ಕೊರತೆ

ಬೆಂಗಳೂರು: ಈ ವರ್ಷದ ಕರ್ನಾಟಕದ ಬಹುತೇಕ ಕಡೆ ಉತ್ತಮ ಸುರಿದಿದೆ. ಆಗಸ್ಟ್ ಅಂತ್ಯಕ್ಕೆ ವಾಡಿಕೆ ಮಳೆಯಲ್ಲಿನ ಕಳೆದ ವರ್ಷದ ಶೇ 47ರ ಕೊರತೆಯಿಂದ, ಒಟ್ಟಾರೆ ಕೊರತೆ ಪ್ರಮಾಣ ಶೇ 8ಕ್ಕೆ ತಗ್ಗಿದೆ. ಜೂನ್‌ನಲ್ಲಿ ರಾಜ್ಯಕ್ಕೆ ಕಾಲಿಟ್ಟ , ನಾಲ್ಕು ತಿಂಗಳ ತನ್ನ ಆಟದ ಬಳಿಕ ಗುರುವಾರ ಅಧಿಕೃತವಾಗಿ ಅಂತ್ಯಗೊಂಡಿದೆ. ಈ ಅವಧಿಯಲ್ಲಿ ಅದು ವಾಡಿಕೆಯ 852 ಮಿಲಿ ಮೀಟರ್‌ಗಿಂತ ಕೊಂಚ ಕಡಿಮೆ, ಅಂದರೆ 787 ಮಿಮೀ ಪ್ರಮಾಣದಷ್ಟು ಮಳೆ ಸುರಿಸಿದೆ. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್‌ಡಿಎಂಎ) ಪ್ರಕಾರ, ಜೂನ್ ಮತ್ತು ಜುಲೈನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆ ಸುರಿದ ಬಳಿಕ ಆಗಸ್ಟ್ ತಿಂಗಳಲ್ಲಿ ಮಳೆ ಪ್ರಮಾಣ ಗಣನೀಯವಾಗಿ ತಗ್ಗಿತ್ತು. ಇದು ಆಗಸ್ಟ್ ತಿಂಗಳಲ್ಲಿ ನಾಲ್ಕು ವರ್ಷಗಳಲ್ಲಿಯೇ ಕಂಡ ಅತಿ ದೊಡ್ಡ ಕೊರತೆಯಾಗಿದೆ. ಆದರೆ ಈ ಅಂಕಿ ಅಂಶವನ್ನು ಸಹಜ ಎಂದು ಪರಿಗಣಿಸಲಾಗುತ್ತದೆ. 19ಕ್ಕಿಂತ ಅಧಿಕ ಅಥವಾ ಕಡಿಮೆಯನ್ನು ಸಹಜ ಎಂದೇ ಪರಿಗಣಿಸಲಾಗುವುದು. ಇದು ರಾಷ್ಟ್ರೀಯ ಮಾನದಂಡಗಳಾಗಿವೆ ಎಂದು ಆಯುಕ್ತ ಮನೋಜ್ ರಂಜನ್ ತಿಳಿಸಿದ್ದಾರೆ. ಈ ವರ್ಷ ಪಶ್ಚಿಮ ಘಟ್ಟ ಹಾಗೂ ಕರಾವಳಿ ಭಾಗಗಳಲ್ಲಿ ಅತ್ಯಧಿಕ ಮಳೆ ಕೊರತೆ ಕಂಡುಬಂದಿದೆ. ಸಾಮಾನ್ಯವಾಗಿ ಮುಂಗಾರು ಅವಧಿಯಲ್ಲಿ ಈ ಭಾಗಗಳಲ್ಲಿ ಇನ್ನೂ ಹೆಚ್ಚಿನ ಮಳೆಯಾಗುತ್ತಿತ್ತು. ಮಲೆನಾಡು ಪ್ರದೇಶದಲ್ಲಿ ಈ ಬಾರಿ 1,284 ಮಿ ಮೀ ಮಳೆಯಾಗಿದೆ. ಇಲ್ಲಿ ಸುರಿಯುವ ವಾಡಿಕೆ ಮಳೆ 1,556 ಮಿ ಮೀ. ಅಂದರೆ ವಾಡಿಕೆಗಿಂತ ಶೇ 18ರಷ್ಟು ಕೊರತೆ ಉಂಟಾಗಿದೆ. ಕರಾವಳಿ ಪ್ರದೇಶ ಕೂಡ ವಾಡಿಕೆಯ 3,101 ಮಿ ಮೀಗೆ ಹೋಲಿಸಿದರೆ 2,692 ಮಿ ಮೀ ಮಳೆ ಕಂಡಿದ್ದು, ಶೇ 13ರಷ್ಟು ಕಡಿಮೆ ಮಳೆಯಾಗಿದೆ. ಅಚ್ಚರಿ ಮೂಡಿಸಿದ ಕೋಲಾರದಕ್ಷಿಣ ಮತ್ತು ಉತ್ತರ ಒಳನಾಡುಗಳೆರಡರಲ್ಲಿಯೂ ವಾಡಿಕೆಗಿಂತ ಶೇ 4ರಷ್ಟು ಕಡಿಮೆ ಮಳೆಯಾಗಿದೆ. ಅಚ್ಚರಿಯ ಸಂಗತಿಯೆಂದರೆ, ಶುಷ್ಕ ವಾತಾವರಣದ ಕೋಲಾರ ಜಿಲ್ಲೆಯಲ್ಲಿ ಕಳೆದ 61 ವರ್ಷದಲ್ಲಿಯೇ ಅತ್ಯಧಿಕ ಮಳೆಯಾಗಿದೆ. ಇಲ್ಲಿ 398 ಮಿ ಮೀ ಮಳೆ ಸಹಜವೆಂದು ಗುರುತಿಸಲಾಗಿದೆ. ಆದರೆ ಈ ವರ್ಷ 621 ಮಿಮೀ ಮಳೆಯಾಗಿದ್ದು, ಶೇ 56ರಷ್ಟು ಅಧಿಕವಾಗಿದೆ. ದಕ್ಷಿಣ ಕನ್ನಡ ಜಿಲ್ಲೆ, ಶೇ 27ರ ಕೊರತೆಯೊಂದಿಗೆ 2,479 ಮಿ ಮೀ ಕಂಡಿದ್ದು, ಅತ್ಯಂತ ಕಡಿಮೆ ಮಳೆಯಾಗಿದೆ. ಕೊಡಗು ಮತ್ತು ಮೈಸೂರುಗಳಲ್ಲಿಯೂ ವಾಡಿಕೆಗಿಂತ ಅತಿ ಕಡಿಮೆ ಮಳೆಯಾಗಿದೆ. ಕೋಲಾರ ಹಾಗೂ ಬೆಂಗಳೂರು ಗ್ರಾಮಾಂತರ (ಶೇ 22ರಷ್ಟು) ನಿರೀಕ್ಷೆಗೂ ಮೀರಿ ಮಳೆ ಕಂಡಿವೆ. ಇನ್ನು ಕಲಬುರಗಿ ಶೇ 26ರಷ್ಟು ಹೆಚ್ಚುವರಿ ಮಳೆಯೊಂದಿಗೆ 723 ಮಿಮೀ ಮಳೆ ಕಂಡಿದೆ. ಉಳಿದ ಭಾಗಗಳಲ್ಲಿ ವಾಡಿಕೆಗೆ ತಕ್ಕಂತೆ ಅಲ್ಪ ಏರಿಳಿತದೊಂದಿಗೆ ವರುಣ ಸುರಿದಿದ್ದಾನೆ. ಸೆಪ್ಟೆಂಬರ್‌ ತಿಂಗಳಲ್ಲಿ ಸುಧಾರಣೆ'ಜೂನ್ ಮತ್ತು ಜುಲೈ ತಿಂಗಳಲ್ಲಿ ರಾಜ್ಯದಲ್ಲಿ ಸಹಜ ಪ್ರಮಾಣದಲ್ಲಿ ಮಳೆಯಾಗಿದೆ. ಇದರಿಂದ ರಾಜ್ಯದಲ್ಲಿ ಬೆಳೆ ಬಿತ್ತನೆ ಚೆನ್ನಾಗಿ ಆಗಿದೆ. ಆದರೆ ಆಗಸ್ಟ್ ತಿಂಗಳಲ್ಲಿ ವಾಯುಭಾರ ಕುಸಿತ ಮತ್ತು ಪ್ರಸರಣದಂತಹ ಹವಾಮಾನ ವ್ಯವಸ್ಥೆಯಲ್ಲಿನ ಕೆಲವು ನಿರ್ದಿಷ್ಟ ಬೆಳವಣಿಗೆಗಳಾಗದ ಹಿನ್ನೆಲೆಯಲ್ಲಿ ಮುಂಗಾರು ಕ್ಷೀಣಿಸಿದೆ. ಇದರ ಪರಿಣಾಮ ಮಳೆ ಕೊರತೆಯಾಗಿದೆ. ಮುಖ್ಯವಾಗಿ ಎರಡನೇ ವಾರದಲ್ಲಿ ಗುಲಾಬ್ ಚಂಡಮಾರುತದಿಂದ ಸೆಪ್ಟೆಂಬರ್ ತಿಂಗಳಲ್ಲಿ ಪರಿಸ್ಥಿತಿ ಸುಧಾರಿಸಿತ್ತು' ಎಂದು ರಾಜನ್ ಹೇಳಿದ್ದಾರೆ. ಕೃಷಿ ಚಟುವಟಿಕೆ ಚುರುಕುರಾಜ್ಯದ ಕೆಲವು ಭಾಗಗಳಲ್ಲಿ ಮಳೆ ಅಭಾವ ಎದುರಾಗಿದ್ದರೂ, ಮುಂಗಾರು ಬೆಳೆಗಳ ಬಿತ್ತನೆ ಕಾರ್ಯ ವ್ಯಾಪಕವಾಗಿ ನಡೆದಿದೆ. ಜೂನ್ ಮತ್ತು ಜುಲೈನಲ್ಲಿ ವರುಣ ಕೃಪೆ ತೋರಿದ್ದರಿಂದ ಕಳೆದ ಐದು ವರ್ಷಗಳ ಸರಾಸರಿ 48 ಲಕ್ಷ ಹೆಕ್ಟೇರ್‌ಗೆ ವಿರುದ್ಧವಾಗಿ 59 ಲಕ್ಷ ಹೆಕ್ಟೇರ್‌ ಭೂಮಿಯಲ್ಲಿ ಬಿತ್ತನೆ ಕಾರ್ಯ ನಡೆದಿದೆ. ಸೆಪ್ಟೆಂಬರ್ ವೇಳೆಗೆ ನಿಗದಿತ 77 ಲಕ್ಷ ಹೆಕ್ಟೇರ್ ಗುರಿಯನ್ನು ಮುಟ್ಟಿದೆ. ಈ ವರ್ಷವೂ ಕೃಷಿ ಉತ್ಪಾದನೆ ಉತ್ತಮವಾಗಿರಲಿದೆ ಎಂದು ನಿರೀಕ್ಷಿಸಿರುವುದಾಗಿ ಅವರು ತಿಳಿಸಿದ್ದಾರೆ. 2020-21ನೇ ಅವಧಿಯಲ್ಲಿ ರಾಜ್ಯದ ಆಹಾರ ಉತ್ಪಾದನೆ 154 ಲಕ್ಷ ಟನ್ ಇತ್ತು. ಇದು ಸಾರ್ವಕಾಲಿಕ ದಾಖಲೆಯಾಗಿತ್ತು. 2019-20ರಲ್ಲಿ 141 ಲಕ್ಷ ಟನ್ ಉತ್ಪಾದನೆಯಾಗಿತ್ತು. ರಾಜ್ಯದ ಸರಾಸರಿ ಆಹಾರ ಬೆಲೆ ಉತ್ಪಾದನೆ 115 ಲಕ್ಷ ಟನ್.


from India & World News in Kannada | VK Polls https://ift.tt/2ZHbnW5

IPL 2021: ವೃತ್ತಿ ಬದುಕಿನ ಅಂತ್ಯದಲ್ಲಿ ವಿಶೇಷ ದಾಖಲೆ ಮಾಡಿದ ಧೋನಿ!

ಶಾರ್ಜಾ: ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ ಲೀಗ್‌ ಎಂದೇ ಬಿಂಬಿಸಿಕೊಂಡಿರುವ ಟೂರ್ನಿಯಲ್ಲಿ ಪರ ಇಲ್ಲಿಯವರೆಗೂ ಹಲವು ದಾಖಲೆಗಳನ್ನು ಮಾಡಿರುವ ನಾಯಕ ಮಹೇಂದ್ರ ಸಿಂಗ್‌ ಧೋನಿ, ಇದೀಗ ವಿಕೆಟ್‌ ಕೀಪರ್‌ ಆಗಿ 100 ಕ್ಯಾಚ್‌ಗಳ ದಾಖಲೆಯನ್ನು ಪೂರ್ಣಗೊಳಿಸಿದ್ದಾರೆ. ಗುರುವಾರ ಶಾರ್ಜಾ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ ಮೂರು ಕ್ಯಾಚ್‌ಗಳನ್ನು ಪಡೆಯುವ ಮೂಲಕ ಐಪಿಎಲ್‌ ಟೂರ್ನಿಯಲ್ಲಿ ಈ ಮೈಲುಗಲ್ಲು ಸ್ಥಾಪಿಸಿದ್ದಾರೆ. ತಮ್ಮ ಫ್ರಾಂಚೈಸಿ ಕ್ರಿಕೆಟ್‌ ವೃತ್ತಿ ಬದುಕಿನ ಅಂತಿಮ ಹಂತದಲ್ಲಿರುವ ಎಂಎಸ್‌ಡಿ ಈ ದಾಖಲೆ ಮಾಡಿರುವುದಕ್ಕೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಚೆನ್ನೈ ಸೂಪರ್‌ ಕಿಂಗ್ಸ್ ನಾಯಕ ಎಂಎಸ್‌ ಧೋನಿ ಈ ಮೈಲುಗಲ್ಲು ಸ್ಥಾಪಿಸುತ್ತಿದ್ದಂತೆ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ದಿಗ್ಗಜನಿಗೆ ವಿಶೇಷ ಸಂದೇಶ ರವಾನಿಸಿದೆ. "ವಿಶೇಷ ಕ್ರಿಕೆಟಿಗ, ವಿಶೇಷ ಮೈಲುಗಲ್ಲು. ಚೆನ್ನೈ ಸೂಪರ್‌ ಕಿಂಗ್ಸ್‌ ಪರ ವಿಕೆಟ್‌ ಕೀಪರ್‌ ಆಗಿ ಎಂಎಸ್‌ ಧೋನಿ 100 ಐಪಿಎಲ್‌ ಕ್ಯಾಚ್‌ಗಳನ್ನು ಪೂರ್ಣಗೊಳಿಸಿದ್ದಾರೆ," ಎಂದು ಐಪಿಎಲ್‌ ಟ್ವೀಟ್‌ ಮಾಡಿದೆ. ಇನ್ನು ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಸನ್‌ರೈಸರ್ಸ್ ಹೈದರಾಬಾದ್‌ ತಂಡ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಶಿಸ್ತುಬದ್ಧ ಬೌಲಿಂಗ್‌ ದಾಳಿಯ ಎದುರು ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ ನಷ್ಟಕ್ಕೆ 134 ರನ್‌ ಗಳಿಸಲಷ್ಟೇ ಶಕ್ತವಾಯಿತು. ಬಳಿಕ ಗುರಿ ಹಿಂಬಾಲಿಸಿದ ಚೆನ್ನೈ ಸೂಪರ್‌ ಕಿಂಗ್ಸ್ 19.4 ಓವರ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು 139 ರನ್‌ ಗಳಿಸಿ ಗೆಲುವಿನ ನಗೆ ಬೀರಿತು. ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾದ ಸನ್‌ರೈಸರ್ಸ್ ಹೈದರಾಬಾದ್‌ ತಂಡಕ್ಕೆ ಜಾಶ್‌ ಹೇಝಲ್‌ವುಡ್‌ ನಾಲ್ಕನೇ ಓವರ್‌ನಲ್ಲಿ ಆರಂಭಿಕ ಜೇಸನ್‌ ರಾಯ್‌ ವಿಕೆಟ್‌ ಉರುಳಿಸುವ ಮೂಲಕ ಆರಂಭಿಕ ಆಘಾತ ನೀಡಿದರು. ಆ ಮೂಲಕ 23 ರನ್‌ಗೆ ಮೊದಲ ವಿಕೆಟ್‌ ಕಳೆದುಕೊಂಡ ಎಸ್‌ಆರ್‌ಎಚ್‌ ತಂಡ, ವೃದ್ದಿಮಾನ್‌ ಸಹಾ ಅವರ ಕೌಂಟರ್‌ ಅಟ್ಯಾಕಿಂಗ್‌ ಬ್ಯಾಟಿಂಗ್ ನೆರವಿನಿಂದ ಪವರ್‌ಪ್ಲೇ ಅಂತ್ಯಕ್ಕೆ 41 ರನ್‌ ಕಲೆ ಹಾಕಿತ್ತು. 7ನೇ ಓವರ್‌ನಲ್ಲಿ ಕೇನ್‌ ವಿಲಿಯಮ್ಸನ್‌ ಅವರನ್ನು ಔಟ್‌ ಮಾಡುವ ಮೂಲಕ ಡ್ವೇನ್‌ ಬ್ರಾವೊ ಸ್ಕೋರ್‌ ಬೋರ್ಡ್‌ನಲ್ಲಿ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದ ಸನ್‌ರೈಸರ್ಸ್ ಹೈದರಾಬಾದ್‌ ತಂಡಕ್ಕೆ ಹಿನ್ನಡೆ ತಂದೊಡ್ಡಿದರು. ಇದಾದ ಕೇವಲ 10 ಎಸೆತಗಳ ಅಂತರದಲ್ಲಿ ಪ್ರಿಯಮ್ ಗರ್ಗ್‌ ಹಾಗೂ ವೃದ್ದಿಮಾನ್‌ ಸಹಾ(44) ಅವರ ವಿಕೆಟ್‌ ಉರುಳುವ ಮೂಲಕ ಹೈದರಾಬಾದ್ 74 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡಿತು. ಮಧ್ಯಮ ಕ್ರಮಾಂಕದಲ್ಲಿ ಅಬ್ದುಲ್‌ ಸಮದ್‌ ಹಾಗೂ ಅಭಿಷೇಕ್‌ ಶರ್ಮಾ ತಂಡದ ಮೊತ್ತವನ್ನು ದೊಡ್ಡದು ಮಾಡಲು ಪ್ರಯತ್ನಿಸಿದರು. ಆದರೆ, ಇವರನ್ನು 17ನೇ ಓವರ್‌ನಲ್ಲಿ ಜಾಶ್‌ ಹೇಝಲ್‌ವುಡ್ ಕಡಿವಾಣ ಹಾಕಿಸಿದರು. 109 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡಿದ್ದ ಹೈದರಾಬಾದ್‌ ಕೇವಲ ಎರಡು ಓವರ್‌ ಅಂತರದಲ್ಲಿ 117 ರನ್‌ಗಳಿಗೆ ಪ್ರಮುಖ 7 ವಿಕೆಟ್‌ಗಳನ್ನು ಕಳೆದುಕೊಂಡು ಪರಿತಪಿಸುವಂತಾಯಿತು. ಆ ಮೂಲಕ ತನ್ನ ಪಾಲಿಗೆ ಸಿಕ್ಕ 20 ಓವರ್‌ಗಳಲ್ಲಿ ಹೈದರಾಬಾದ್‌ ಕಲೆ ಹಾಕಿದ್ದು 134 ರನ್‌ ಮಾತ್ರ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3D6p3sh

ಮಾದಕ ವ್ಯಸನಿಗಳ ತವರಾಗುತ್ತಿದೆ ರಾಮನಗರ; ಡಾರ್ಕ್ ವೆಬ್ ಗೂ ಕಾಲಿಟ್ಟಿದೆ ಜಿಲ್ಲೆಯ ಡ್ರಗ್‌!

ಆರ್‌.ಶ್ರೀಧರ್‌ ರಾಮನಗರ: ಜಿಲ್ಲೆಯಲ್ಲಿ ಗಾಂಜಾದ ಘಾಟು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಜಿಲ್ಲೆಯ ಪೊಲೀಸರು ಕನಿಷ್ಠ ವಾರಕ್ಕೆರಡು ಪ್ರಕರಣಗಳನ್ನು ಬೇಧಿಸುತ್ತಿರುವುದೇ ಇದಕ್ಕೆ ನಿರ್ದಶನ. ಪೊಲೀಸರು ಎಷ್ಟೇ ಕಟ್ಟೆಚ್ಚರ ವಹಿಸಿದರೂ ಜಿಲ್ಲೆಯಲ್ಲಿ ಮಾದಕ ವಸ್ತುಗಳನ್ನು ಬೆಳೆಯುವವರು ಹಾಗೂ ಬಳಸುವವರ ಸಂಖ್ಯೆ ಹೆಚ್ಚುತ್ತಿರುವುದು ಆತಂಕಕಾರಿಯಾಗಿದೆ. ಆಧುನಿಕ ಡ್ರಗ್‌ ಜಾಲ ಇದುವರೆಗೆ ರೈತರ ಹೊಲದ ನಡುವೆ ಗಿಡ ಬೆಳೆದ ಅಲ್ಲೊಂದು ಇಲ್ಲೊಂದು ಪ್ರಕರಣಗಳು ಬೆಳಕಿಗೆ ಬರುತ್ತಿದ್ದವು. ಈಗ ಇದು ಸರ್ವೇ ಸಾಧಾರಣ ಎನ್ನುವಂತಾಗಿದೆ. ಕಾಡಂಚಿನ ಹಾಗೂ ಗಡಿಯಂಚಿನ ಗ್ರಾಮಗಳ ಹೊಲಗಳಲ್ಲಿ ರೈತರು ಗೊತ್ತಿದ್ದೋ, ಗೊತ್ತಿಲ್ಲದೆಯೋ ಗಾಂಜಾ ಬೆಳೆಯುವುದು ಸಾಮಾನ್ಯವಾಗಿದೆ. ಇದಕ್ಕಿಂತಲೂ ಆತಂಕಕಾರಿಯಾದ ಅಂಶವೆಂದರೆ, ಅತ್ಯಾಧುನಿಕ ಹಾಗೂ ಹೆಚ್ಚು ತೀವ್ರತೆಯ ಹೈಡ್ರೋಪೋನಿಕ್‌ ಗಾಂಜಾವನ್ನು ಜಿಲ್ಲೆಯಲ್ಲಿ ಬೆಳೆಯಲಾಗುತ್ತಿರುವುದು. ಅದೂ ಕೂಡ ಪೊಲೀಸರ ಮೂಗಿನ ಕೆಳಗೆ ಎಂಬುದು ಇನ್ನೂ ವಿಶೇಷ. ಈಗಲ್ಟನ್‌ ರೆಸಾರ್ಟ್‌ನ ವಿಲ್ಲಾವೊಂದನ್ನು ಬಾಡಿಗೆಗೆ ಹಿಡಿದಿದ್ದ ವ್ಯಕ್ತಿಯೊಬ್ಬ ತನ್ನ ಕೋಣೆ ಹಾಗೂ ಕಟ್ಟಡದ ಟೇರೇಸ್‌ನಲ್ಲಿ ಹೈಡ್ರೋಪೋನಿಕ್‌ ಗಾಂಜಾ ಬೆಳೆದು ರಾಜಧಾನಿ ಬೆಂಗಳೂರಿನ ತನ್ನ ಗಿರಾಕಿಗಳಿಗೆ ಸರಬರಾಜು ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿರುವುದು ಮಾದಕ ವ್ಯಸನದ ಮಹಾಮಾರಿ ಎಷ್ಟು ವ್ಯಾಪಕ ಪ್ರಮಾಣದಲ್ಲಿ ವ್ಯಾಪಿಸುತ್ತಿದೆ ಎಂಬುದಕ್ಕೆ ಸಾಕ್ಷಿ. ಈ ಪ್ರಕರಣ ಸಂಬಂಧ ಸಿಸಿಬಿ ಹಾಗೂ ಬಿಡದಿ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ 9.5 ಕೆ.ಜಿ. ಹೈಡ್ರೋಫೋನಿಕ್‌ ಗಾಂಜಾ ವಶಪಡಿಸಿಕೊಂಡಿದ್ದರು. ಇದರ ಮಾರುಕಟ್ಟೆ ಮೌಲ್ಯ 3 ಕೋಟಿ ರೂ.ಗಿಂತಲೂ ಅಧಿಕ. ಪ್ರಕರಣ ಸಂಬಂಧ ಇರಾನ್‌ ಪ್ರಜೆ ಜಾವಿದ್‌ ರುಸ್ತುಂಪುರ್‌(37) ಎಂಬಾತನನ್ನು ಬಂಧಿಸಲಾಗಿದೆ. ಈತ ಕಳೆದ ಒಂದೂವರೆ ವರ್ಷದಿಂದ ರೆಸಾರ್ಟ್‌ನ ತನ್ನ ವಿಲ್ಲಾದಲ್ಲಿ ಗಾಂಜಾ ಬೆಳೆದು ಮಾರಾಟ ಮಾಡುತ್ತಿದ್ದರೂ ಯಾರಿಗೂ ಗೊತ್ತೇ ಇರಲಿಲ್ಲ ಎಂಬುದು ಆಘಾತಕಾರಿ ವಿಷಯ ಏನಿದು ಹೈಡ್ರೋ ಗಾಂಜಾ ? ಇದು ಸಾಮಾನ್ಯ ಗಾಂಜಾಗದಂತೆ ಅಲ್ಲ. ಇದಕ್ಕೆ ಮಾರುಕಟ್ಟೆಯಲ್ಲಿ ಪ್ರತಿ ಗ್ರಾಂಗೆ 4ರಿಂದ 5 ಸಾವಿರ ರೂ ಬೆಲೆ ಇದ್ದು, ಇದನ್ನು ಬೆಳೆಯುವುದು ಸಹ ಅಷ್ಟೇ ಸೂಕ್ಷ ಪರಿಸರದಲ್ಲಿ. ಬಹುತೇಕ ನೆದೆರಲೆಂಡ್‌ನಂತ ದೇಶದಲ್ಲಿ ಹೈಡ್ರೋ ಗಾಂಜಾ ಬೆಳೆಯಲಾಗುತ್ತದೆ. ಆದರೆ ಬೆಂಗಳೂರಿನಂತ ಪ್ರದೇಶದಲ್ಲಿ ಬೆಳೆಯಲು ಪಾಲಿ ಹೌಸ್‌ ನಿರ್ಮಾಣ, ಹವಾನಿಯಂತ್ರಿತ ವಾತಾವರಣದಲ್ಲಿ ಬೆಳೆಯಬೇಕು. ಇದರ ಜೊತೆಗೆ ಅಲ್ಟ್ರಾ ವೈಲೆಟೆ ಕಿರಣಗಳು ಮತ್ತು ರಾಸಾಯನಿಕ ಬಳಕೆ ಮಾಡಲೇಬೇಕು. ಹೈಡ್ರೋ ಗಾಂಜ ಮಾಮೂಲಿ ಗಾಂಜಾಗಿಂತ 40 ಪಟ್ಟು ಹೆಚ್ಚು ಕಿಕ್‌ ಕೊಡುತ್ತದೆ ಎನ್ನಲಾಗಿದೆ. ಹೆಚ್ಚಿದ ಮಾದಕ ವ್ಯಸನಿಗಳು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ಜಿಲ್ಲೆಯಲ್ಲಿ ಮಾದಕ ವ್ಯಸನಿಗಳ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲೇ, ಕೇಂದ್ರ ಸರಕಾರವು ನಶೆಮುಕ್ತ ಜಿಲ್ಲೆ ಅಭಿಯಾನಕ್ಕೆ ರಾಮನಗರವನ್ನೂ ಆಯ್ದುಕೊಂಡಿದೆ ಎಂಬುದು ತಿಳಿದು ಬಂದಿದೆ. ನಶೆಮುಕ್ತಗೊಳಿಸುವುದು ಕಷ್ಟಬಿಡದಿ, ವಂಡರ್‌ಲಾ ಸಮೀಪ, ಕುಂಬಳಗೋಡು ಪ್ರದೇಶದಲ್ಲಿ ಎಲ್ಲೆಂದರಲ್ಲಿ ಹುಕ್ಕಾ ಬಾರ್‌ಗಳಿವೆ. ಈ ಬಾರ್‌ಗಳಲ್ಲಿ ದಿನದ 24 ಗಂಟೆ ಮಾದಕ ವಸ್ತುಗಳ ದೊರೆಯುತ್ತದೆ. ಈವರೆಗೂ ಇವುಗಳ ಮೇಲೆ ದಾಳಿ ನಡೆದಿಲ್ಲ. ಹೀಗಿರುವ ನಶೆ ಮುಕ್ತ ಜಿಲ್ಲೆಆಗಲು ಹೇಗೆ ಸಾಧ್ಯ ಎನ್ನುತ್ತಾರೆ ರಾಮನಗರ ತಾಪಂ ಮಾಜಿ ಅಧ್ಯಕ್ಷ ಗಾಣಕಲ್‌ ನಟರಾಜ್‌. ಸರ್ವವ್ಯಾಪಿಯಾಗುತ್ತಿದೆ ಜಾಲ ಕಳೆದ ಐದು ವರ್ಷಗಳಲ್ಲಿ (2020ರ ಸೆಪ್ಟೆಂಬರ್‌ ವರೆಗೆ) ಜಿಲ್ಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಕೋಟ್ಯಾಂತರ ರೂ. ಬೆಳೆ ಬಾಳುವ 91 ಕೆ.ಜಿ ಗಾಂಜಾವನ್ನು ವಶ ಪಡಿಸಿಕೊಂಡಿದ್ದಾರೆ. ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ 52 ಪ್ರಕರಣಗಳು ದಾಖಲಾಗಿವೆ. ಕೊರೊನಾದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಗಾರ್ಮೆಂಟ್ಸ್‌, ಹೋಟೆಲ್‌, ಕೈಗಾರಿಕೆ ಕಾರ್ಮಿಕರಿಗೆ ಹಣದಾಸೆ ತೋರಿಸಿ ಗಾಂಜಾ ಮಾರಲಾಗುತ್ತಿದೆ. ಒಂದು ಕಿಲೋ ಗಾಂಜಾ ಮಾರಿದರೆ ಸಾವಿರಾರು ರೂ. ದೊರೆಯುವುದರಿಂದ ಜನರೂ ಇತ್ತ ಆಕರ್ಷಿತರಾಗುತ್ತಿದ್ದಾರೆ ಎನ್ನುತ್ತಾರೆ ಪೊಲೀಸರು. ಹೊಲ ಗದ್ದೆಗಳಲ್ಲೂ ಗಾಂಜಾ ಘಮಲು ಕಾಡಂಚಿನ ಗ್ರಾಮ, ತೋಟಗಳು ಹಾಗೂ ಹೆಚ್ಚು ಜನಸಂಚಾರವಿಲ್ಲದ ಜಾಗಗಳಲ್ಲಿ ಗಾಂಜಾ ಬೆಳೆಯುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಹೊಲ, ತೋಟಗಳಲ್ಲಿ ಗಾಂಜಾ ಬೆಳೆಯಲಾಗುತ್ತಿದೆ. ರೈತರು ಅರಿವಿದ್ದೋ, ಇಲ್ಲದೆಯೋ ಹಣದಾಸೆಗೆ ಸಿಲುಕಿ ಗಾಂಜಾ ಬೆಳೆದು ಜೈಲು ಸೇರುತ್ತಿದ್ದಾರೆ. ಕಾಡಂಚಿನ ಗ್ರಾಮಗಳಲ್ಲಿರುವ ಬಡ ರೈತರನ್ನು ಗುರುತಿಸುವ ಕೆಲ ಬ್ರೋಕರ್‌ಗಳು ಗಾಂಜಾ ಬೀಜವನ್ನು ನೀಡಿ, ಗಾಂಜಾ ಬೆಳೆಯುವಂತೆ ಪ್ರಚೋದಿಸುತ್ತಿದ್ದಾರೆ. ಕೆಲವು ಮುಗ್ಧ ರೈತರು ಹಣದಾಸೆಗೆ ಬಲಿಯಾಗಿ ಗುಡ್ಡ ಪ್ರದೇಶ ಹಾಗೂ ಹೊಲಗಳಲ್ಲಿ ಬೆಳೆಗಳ ನಡುವಿನಲ್ಲಿ ಗುಟ್ಟಾಗಿ ಗಾಂಜಾ ಬೆಳೆಯುತ್ತಿದ್ದಾರೆ. ಕಾನೂನಿನಲ್ಲಿ ನಾರ್ಕೋಟಿಕ್‌ ಡ್ರಗ್ಸ್‌ ಮತ್ತು ಸೈಕೋಟೋಪಿಕ್‌ ಸಬ್ಸಟೆನ್ಸಸ್‌ ಕಾಯ್ದೆ 1985ರ ಪ್ರಕಾರ ಗಾಂಜಾ ಬೆಳೆಯುವುದು, ಅದಕ್ಕೆ ಪ್ರೇರೇಪಿಸುವುದು, ಇರಿಸಿಕೊಳ್ಳುವುದು ಅಪರಾಧ. ಅಡಮಾನಕ್ಕೆ ನೀಡಿದ ಜಮೀನಿನಲ್ಲಿ ಬೇರೆಯವರು ಗಾಂಜಾ ಬೆಳೆದರೂ ಅದಕ್ಕೆ ಮೂಲ ಜಮೀನು ಮಾಲೀಕನೇ ಹೊಣೆಗಾರನಾಗುತ್ತಾನೆ. ಎನ್‌ಡಿಪಿಎಸ್‌ ಕಾಯ್ದೆ ಪ್ರಕಾರ ಆರೋಪಿಗೆ ಗರಿಷ್ಠ 10 ವರ್ಷ ಜೈಲು ಶಿಕ್ಷೆ ಜತೆಗೆ 1 ಲಕ್ಷ ರುಪಾಯಿಗೂ ಹೆಚ್ಚು ದಂಡ ವಿಧಿಸುವ ಅವಕಾಶವಿದೆ. ಎಸ್‌.ಗಿರೀಶ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ರಾಮನಗರ


from India & World News in Kannada | VK Polls https://ift.tt/3miRnkn

ಬಸವರಾಜ ಬೊಮ್ಮಾಯಿಗೆ ಪಂಚಮಸಾಲಿ ಮೀಸಲಾತಿ ತಲೆನೋವು! ಸರ್ಕಾರದ ಅಂತಿಮ ನಿರ್ಧಾರ ಏನು?

ಬೆಂಗಳೂರು: ಬಸವರಾಜ ಬೊಮ್ಮಾಯಿಗೆ ತಲೆನೋವು ಶುರುವಾಗಿದೆ. ಮೀಸಲಾತಿ ಬಗ್ಗೆ ಸ್ಪಷ್ಟತೆ ಕೊಡುವಂತೆ ಹೋರಾಟದ ಮುಂಚೂಣಿಯಲ್ಲಿರುವ ಬಸವ ಜಯಮೃತ್ಯುಂಜಯ ಸ್ವಾಮೀಜಿ ಗಡುವು ನೀಡಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಮುಂದಿನ ನಡೆ ಏನು ಎಂಬುವುದು ಕೂಡಾ ಕುತೂಹಲಕ್ಕೆ ಕಾರಣವಾಗಿದೆ. ಪಂಚಮಸಾಲಿ ಮೀಸಲಾತಿ ವಿಚಾರವಾಗಿ ನಡೆಯುತ್ತಿರುವ ಹೋರಾಟದ ಹಿನ್ನೆಲೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಭೇಟಿ ಮಾಡಿದ ಸಚಿವ ಸಿ ಸಿ ಪಾಟೀಲ್ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಯಾಗಿ ಸಿಎಂ ಜೊತೆ ಚರ್ಚೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಇದೇ ವಿಚಾರವಾಗಿ ಚರ್ಚೆ ನಡೆಸಲು ಸಿಎಂ ಗೃಹಕಚೇರಿ ಕೃಷ್ಣಾಗೆ ವಿಜಯಾನಂದ ಕಾಶಪ್ಪನವರ್ ಆಗಮಿಸಿದ್ದು ಮಾತುಕತೆ ನಡೆಸುತ್ತಿದ್ದಾರೆ. ಇದರ ಜೊತೆಗೆ ಬಸವ ಜಯಮೃತ್ಯುಂಜಯ ಸ್ವಾಮೀಜಿ ಕೂಡಾ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತಿದ್ದಾರೆ. ಪಂಚಮಸಾಲಿ 2 ಎ ಮೀಸಲಾತಿ ಬಗ್ಗೆ ಸ್ವಾಮೀಜಿಗಳು, ಸಮುದಾಯದ ಮುಖಂಡರ ಜತೆ ಸಿಎಂ‌ ಮಹತ್ವದ ಚರ್ಚೆಯನ್ನು ನಡೆಸುತ್ತಿದ್ದಾರೆ. ಮೀಸಲಾತಿ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿದ್ದ ಪಂಚಮಸಾಲಿ ಪೀಠಾಧಿಪತಿ ಜಯಮೃತ್ಯುಂಜಯ‌ಶ್ರೀಗಳು, ಆಗಸ್ಟ್ ೨೬ ರಂದು ಪಂಚಮಸಾಲಿ‌ ಮೀಸಲಾತಿಗಾಗಿ ಅಭಿಯಾನವನ್ನು ಮಲೆಮಹದೇಶ್ವರ ಬೆಟ್ಟದಿಂದ ಪ್ರಾರಂಭಿಸಿದ್ದೆವು. ೨ಎ ಹಾಗೂ ಒಬಿಸಿ ಮೀಸಲಾತಿಗಾಗಿ‌ ಆಗ್ರಹಿಸಿದ್ದೆವು. ಸೆಪ್ಟಂಬರ್ 15 ರಂದು ಸರ್ಕಾರಕ್ಕೆ ಮೀಸಲಾತಿಗಾಗಿ ಗಡುವು ನೀಡಲಾಗಿತ್ತು. ನಮ್ಮ‌ಸಮುದಾಯಕ್ಕೆ ಮೀಸಲಾತಿ ಅಗತ್ಯವಿದೆ. ಶೈಕ್ಷಣಿಕ,ಔದ್ಯೋಗಿಕವಾಗಿ ಮೀಸಲಾತಿ ಬೇಕಿದೆ ಎಂದಿದ್ದರು. ಅಷ್ಟೇ ಅಲ್ಲದೆ, ಸಿಎಂ ಮೀಸಲಾತಿ‌ ವರದಿ ಪಡೆದುಕೊಂಡಿದ್ದಾರೆ ಆದರೆ ಮಾತು ಕೊಟ್ಟಂತೆ ಸರ್ಕಾರ ನಡೆದುಕೊಳ್ಳಲಿಲ್ಲ. ಸೆಪ್ಟಂಬರ್ 15 ರ ಗಡುವನ್ನು ಸರ್ಕಾರ ಮರೆತಿದೆ. ನಾವು ತಾತ್ಕಾಲಿಕವಾಗಿ‌ ಪ್ರತಿಭಟನೆ ಹತ್ತಿಕ್ಕಿದ್ದೆವು. ಸದನದಲ್ಲಿ ಯತ್ನಾಳ್ ಪ್ರಸ್ತಾಪ ಇಟ್ಟಿದ್ದರು. ಸಿಎಂ ಕೂಡ ಉತ್ತರವನ್ನ ಕೊಟ್ಟಿದ್ದಾರೆ. ಉತ್ತರದ ವೇಳೆ ಗದ್ದಲ ಕೂಡ ಆಗಿತ್ತು. ಆದರೆ ಮೀಸಲಾತಿ ಕೊಡ್ತೇವೆ ಎಂಬ ಭರವಸೆಯನ್ನು ಮುಖ್ಯಮಂತ್ರಿಗಳು ಕೊಟ್ಟಿದ್ದಾರೆ. ಹೀಗಾಗಿ ನಮಗೆ ಸಿಎಂ ಮೇಲೆ ವಿಶ್ವಾಸವಿದ್ದು ಅವರು ನಮ್ಮ‌ಹೋರಾಟಕ್ಕೆ ಸ್ಪಂದಿಸಿದ್ದಾರೆ. ಆದರೆ ಅವರಿಂದ ಸ್ಪಷ್ಟ ನಿರ್ದೇಶನ ಹೊರಬರಬೇಕು ಎಂದು ಹೇಳಿದ್ದರು. ಈ ನಿಟ್ಟಿನಲ್ಲಿ ಸಿಎಂ ಜೊತೆಗಿನ ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಭೇಟಿ ಮಹತ್ವ ಪಡೆದುಕೊಂಡಿದೆ.


from India & World News in Kannada | VK Polls https://ift.tt/2ZCX6cY

ಆರ್‌. ಅಶೋಕ್ v/s ವಿ. ಸೋಮಣ್ಣ; ಸಚಿವರ ನಡುವಿನ ಶೀತಲ ಸಮರಕ್ಕೆ ಕಾರಣವೇನು?

ಬೆಂಗಳೂರು: ಸಚಿವರಾದ ಆರ್. ಅಶೋಕ್ ಹಾಗೂ ವಿ. ಸೋಮಣ್ಣ ನಡುವೆ ಶೀತಲ ಸಮರ ನಡೆಯುತ್ತಿದೆ. ಬೆಂಗಳೂರು ನಗರಾಭಿವೃದ್ದಿ ಖಾತೆ ಹಾಗೂ ಉಸ್ತುವಾರಿ ಮೇಲೆ ಕಣ್ಣಿಟ್ಟಿರುವ ಇಬ್ಬರು ಸಚಿವರ ನಡುವೆ ಅಸಮಾಧಾನ ಆಂತರಿಕವಾಗಿ ಭುಗಿಲೇಳುತ್ತಿದೆ. ಬೆಂಗಳೂರಿನ ಸಚಿವರನ್ನು ಆಹ್ವಾನಿಸದೆ ಆರ್‌. ಅಶೋಕ್ ಹಾಗೂ ಪ್ರತ್ಯೇಕ ಸಭೆಗಳನ್ನು ನಡೆಸಿರುವುದು ಇದಕ್ಕೆ ಇಂಬು ನೀಡಿದೆ. ಬೆಂಗಳೂರು ರಸ್ತೆ ಗುಂಡಿ ಸಮಸ್ಯೆ ಪರಿಹಾರ ವಿಚಾರಕ್ಕೆ ಸಂಬಂದಪಟ್ಟಂತೆ ಸಚಿವ ಆರ್‌. ಅಶೋಕ್ ಗುರುವಾರ ಸಭೆ ನಡೆಸಿದ್ದರು. ಬಿಬಿಎಂಪಿ ಅಧಿಕಾರಿಗಳ ಜೊತೆ ನಡೆದ ಈ ಸಭೆಯಲ್ಲಿ ಬೆಂಗಳೂರಿನ ಇತರ ಸಚಿವರು ಇರಲಿಲ್ಲ. ಬೆಂಗಳೂರು ಸಚಿವರಿಗೆ ಆಹ್ವಾನ ನೀಡದೇ ಆರ್ ಅಶೋಕ್ ಸಭೆ ನಡೆಸಿರುವುದು ಚರ್ಚೆಗೆ ಗ್ರಾಸವಾಗಿದೆ. ಮತ್ತೊಂದು ಕಡೆಯಲ್ಲಿ ವಸತಿ ಇಲಾಖೆಗೆ ಸಂಬಂಧಿಸಿದಂತೆ ನಡೆದ ಸಭೆಗೆ ಆರ್ ಅಶೋಕ್ ಆಹ್ವಾನ ನೀಡದೇ ವಸತಿ ಸಚಿವ ವಿ.ಸೋಮಣ್ಣ ಸಭೆ ನಡೆಸಿದ್ದರು. ಬೆಂಗಳೂರು ಸಚಿವರು, ಶಾಸಕರನ್ನು ಕರೆದು ವಿ ಸೋಮಣ್ಣ ಸಭೆಯನ್ನು ನಡೆಸಿದ್ದರು. ಸಹಜವಾಗಿ ಇಬ್ಬರು ಸಚಿವರುಗಳ ನಡುವಿನ ಶೀಲತ ಸಮರ ರಾಜ್ಯ ಬಿಜೆಪಿಯಲ್ಲೂ ಗುಸು ಗುಸು ಚರ್ಚೆಗೆ ಕಾರಣವಾಗಿದೆ. ಸದ್ಯ ಸಿಎಂ ಬಸವರಾಜ ಬೊಮ್ಮಾಯಿ ಬಳಿ ಇರುವ ಬೆಂಗಳೂರು ನಗರಾಭಿವೃದ್ದಿ ಖಾತೆಯ ಉಸ್ತುವಾರಿಯನ್ನು ಸಚಿವ ಆರ್. ಅಶೋಕ್‌ಗೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರು ಅಭಿವೃದ್ಧಿಗೆ ಸಂಬಂಧಿಸಿದಂತೆ ಸಭೆಗಳನ್ನು ಅಶೋಕ್ ನಡೆಸುತ್ತಿದ್ದಾರೆ. ಆದರೆ ಇದು ಕೆಲವರ ಅಸಮಾಧಾನಕ್ಕೆ ಕಾರಣವಾಗಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಇದೆ. ಇಷ್ಟೇ ಅಲ್ಲದೆ ಬಿಎಸ್ ಯಡಿಯೂರಪ್ಪ ರಾಜೀನಾಮೆ ಬಳಿಕ ರಚನೆಯಾದ ಬಸವರಾಜ ಬೊಮ್ಮಾಯಿ ಸರ್ಕಾರದ ಹೊಸ ಸಂಪುಟದಲ್ಲಿ ಬಿಎಸ್‌ವೈ ಸಂಪುಟದಲ್ಲಿ ಇದ್ದವರನ್ನು ಕೈಬಿಡಲಾಗುವುದು ಸಂಪೂರ್ಣವಾಗಿ ಹೊಸ ತಂಡವನ್ನು ರಚನೆ ಮಾಡಲಾಗುವುದು ಎಂಬ ಚರ್ಚೆಗಳು ಇದ್ದವು. ಆದರೆ ಕೆಲವು ಹಿರಿಯರನ್ನು ಉಳಿಸಿಕೊಳ್ಳಲಾಗುವುದು ಎಂಬ ಮಾತುಕತೆಗಳು ನಡೆಯುತ್ತಿದ್ದವು. ಈ ಸಂದರ್ಭದಲ್ಲಿ ಹೊಸ ಸಂಪುಟದಲ್ಲಿ ವಿ. ಸೋಮಣ್ಣ ಅವರ ಸ್ಥಾನಕ್ಕೂ ಕುತ್ತು ಬರಲಿದೆ ಎಂಬ ಚರ್ಚೆಗಳು ಚಾಲ್ತಿಯಲ್ಲಿದ್ದವು. ಸಚಿವ ಸ್ಥಾನವನ್ನು ಉಳಿಸಿಕೊಳ್ಳುವ ವಿಚಾರವಾಗಿಯೂ ವಿ.ಸೋಮಣ್ಣ ಹಾಗೂ ಆರ್‌. ಅಶೋಕ್ ನಡುವೆ ಆಂತರಿಕ ತಿಕ್ಕಾಟಗಳು ನಡೆದಿವೆ ಎಂಬ ಮಾತುಗಳು ಇವೆ. ಸದ್ಯ ಈಗಲೂ ಇಬ್ಬರ ನಡುವಿನ ಆಂತರಿಕ ತಿಕ್ಕಾಟ ಅಥವಾ ಶೀತಲ ಸಮರ ಮುಂದುವರಿದಿದೆ. ಅದು ಸಭೆ ಸಮಾರಂಭಗಳ ಸಂದರ್ಭದಲ್ಲೂ ಬಹಿರಂಗಗೊಳ್ಳುತ್ತಿದೆ. ಆದರೆ ಈ ಬಗ್ಗೆ ಸಚಿವ ಆರ್‌. ಅಶೋಕ್ ಅವರಲ್ಲಿ ಪ್ರಶ್ನೆ ಕೇಳಿದ್ರೆ ಹಾರಿಕೆಯ ಉತ್ತರ ಕೊಡುತ್ತಾರೆ. “ಎಲ್ಲ ನಿಮಗೆ ಗೊತ್ತಾಲ್ವಾ” ಎಂದು ನಗುತ್ತಾರೆ.


from India & World News in Kannada | VK Polls https://ift.tt/3CYkj7Z

ಹತ್ತಿ ಬೆಳೆದ ರೈತರಿಗೆ ಹಣದ ಭಾಗ್ಯ; ಡಿಸಿಎಚ್ ಗೆ 15,500, ಬನ್ನಿಗೆ 9,000ರೂ.!

ಚಿತ್ರದುರ್ಗ: ಬೆಳೆಯುವ ದೇಶದ ಇತರೆ ರಾಜ್ಯಗಳಲ್ಲಿ ಅಧಿಕ ಮಳೆಯಿಂದ ಹಾಳಾಗಿರುವ ಪರಿಣಾಮ ಕೋಟೆನಾಡು ಜಿಲ್ಲೆಯ ಏಕೈಕ ವಾಣಿಜ್ಯ ಬೆಳೆ ಹತ್ತಿಗೆ ಉತ್ತಮ ಬೇಡಿಕೆ ಬಂದಿದ್ದು ಡಿಸಿಎಚ್‌ ಹತ್ತಿಗೆ ಗರಿಷ್ಠ 15500 ಹಾಗೂ ಬನ್ನಿ ಹತ್ತಿಗೆ 9000 ದಾಖಲೆ ದರ ಸಿಕ್ಕಿದೆ. ಗುಜರಾತ್‌, ಮಧ್ಯಪ್ರದೇಶ, ಉತ್ತರಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಮತ್ತಿತರೆ ರಾಜ್ಯಗಳಲ್ಲಿ ಹೆಚ್ಚು ಮಳೆಯಿಂದ ಬೆಳೆ ಹಾಳಾಗಿದೆ. ಆದರೆ ಮಳೆ ಪ್ರಮಾಣ ಕಡಿಮೆಯಾದ ಪರಿಣಾಮ ಉತ್ತಮ ಇಳುವರಿ ಹಾಗೂ ಗುಣಮಟ್ಟದ ಚಿತ್ರದುರ್ಗದ ಹತ್ತಿಗೆ ಸಾರ್ವಕಾಲಿಕ ಗರಿಷ್ಟ ದರ ದಾಖಲಾಗಿದ್ದು ಅಡಕೆ ಬಂಗಾರ, ಹತ್ತಿ ಬೆಳ್ಳಿ ಎಂಬಂತಾಗಿದೆ. ಜಿಲ್ಲೆಯಲ್ಲಿ ಈ ತಿಂಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿರುವ ಕಾರಣ ಹೆಚ್ಚಿನ ಇಳುವರಿ ಹಾಗೂ ಗುಣಮಟ್ಟದ ಹತ್ತಿ ಲಭಿಸಿದ್ದು ಮಾರುಕಟ್ಟೆಯಲ್ಲಿ ಕಳೆದ ಬಾರಿಗೆ ಹೋಲಿಕೆ ಮಾಡಿಕೊಂಡರೆ ದ್ವಿಗುಣವಾಗಿದೆ. ಸಾಮಾನ್ಯವಾಗಿ ಡಿಸಿಎಚ್‌ ಹತ್ತಿ ಬೆಲೆ ಗರಿಷ್ಠ 7 ಸಾವಿರ, ಬನ್ನಿ ಹತ್ತಿಗೆ 5 ಸಾವಿರದವರೆಗೆ ಇರುತ್ತಿತ್ತು. ಆದರೆ ಈ ಬಾರಿ ಡಿಸಿಎಚ್‌ ಹತ್ತಿಗೆ ಗರಿಷ್ಠ 15500 ಹಾಗೂ ಬನ್ನಿ ಹತ್ತಿಗೆ 9000 ದರ ಲಭಿಸಿದ್ದು ಹತ್ತಿ ಬೆಳೆದಿರುವ ರೈತರಲ್ಲಿ ಮಂದಹಾಸ ಮೂಡಿಸಿದೆ. ಬೆಲೆ ಇನ್ನೂ ಹೆಚ್ಚಾಗುವ ನಿರೀಕ್ಷೆಯಿದೆ. ರಾಷ್ಟ್ರಮಟ್ಟದಲ್ಲಿ ಹತ್ತಿ ಉತ್ಪಾದನೆ ಆಧರಿಸಿ ಬೆಲೆ ನಿಗಧಿಯಾಗುತ್ತದೆ. ಉತ್ತರಭಾರತದ ಹತ್ತಿ ಬೆಳೆಯುವ ರಾಜ್ಯಗಳಲ್ಲಿ ಅತಿಯಾದ ಮಳೆಯಿಂದ ಬೆಳೆ ನಷ್ಟವಾಗಿರುವ ಕಾರಣ ಹತ್ತಿಗೆ ಉತ್ತಮ ಬೇಡಿಕೆಯಿದೆ. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ 12629 ಹೆಕ್ಟೇರ್‌ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡಲಾಗಿದೆ. ಕಳೆದ ಬಾರಿಯೂ 12413 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಆದರೆ ಚಿತ್ರದುರ್ಗ ತಾಲೂಕಿನಲ್ಲಿ ಕಳೆದ ಬಾರಿಗೆ ಹೋಲಿಕೆ ಮಾಡಿಕೊಂಡರೆ ಅತೀ ಕಡಿಮೆ ಪ್ರಮಾಣದಲ್ಲಿ ಅಂದರೆ 1069 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಹೊಸದುರ್ಗ ತಾಲೂಕಿನಲ್ಲಿ 750 ಹೆಕ್ಟೇರ್‌ ಗುರಿ ಮೀರಿ 3940 ಹೆಕ್ಟೇರ್‌ ಹಾಗೂ ಮೊಳಕಾಲ್ಮೂರು ತಾಲೂಕಿನಲ್ಲಿ 930 ಹೆಕ್ಟೇರ್‌ ಗುರಿ ಮೀರಿ 2440 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಚಿತ್ರದುರ್ಗ ಎಪಿಎಂಸಿ ಮಾರುಕಟ್ಟೆಗೆ ಕೇವಲ ಚಿತ್ರದುರ್ಗ ಜಿಲ್ಲೆಯ ರೈತರಷ್ಟೇ ಅಲ್ಲದೇ ತುಮಕೂರು, ಆಂಧ್ರ ಗಡಿಭಾಗ ಸೇರಿದಂತೆ ಮತ್ತಿತರ ಭಾಗಗಳ ರೈತರು ಆಗಮಿಸುತ್ತಾರೆ. ಎಪಿಎಂಸಿ ಹತ್ತಿ ಆವಕ
  • 2012-13ರಲ್ಲಿ -4.96 ಲಕ್ಷ ಕ್ವಿಂಟಲ್‌
  • 2013-14ರಲ್ಲಿ-4.80 ಲಕ್ಷ ಕ್ವಿಂಟಲ್‌
  • 2014-15ರಲ್ಲಿ 4.90 ಲಕ್ಷ ಕ್ವಿಂಟಲ್‌
  • 2015-16ರಲ್ಲಿ 3.21 ಲಕ್ಷ ಕ್ವಿಂಟಲ್‌
  • 2016-17ರಲ್ಲಿ 2.80 ಲಕ್ಷ ಕ್ವಿಂಟಲ್‌
  • 2017-18ರಲ್ಲಿ 1.76 ಲಕ್ಷ ಕ್ವಿಂಟಲ್‌
  • 2018-19ರಲ್ಲಿ 2.60 ಲಕ್ಷ ಕ್ವಿಂಟಲ್‌
  • 2019-20ರಲ್ಲಿ 1.88 ಲಕ್ಷ ಕ್ವಿಂಟಲ್‌
  • 2020-21ರಲ್ಲಿ 2.73 ಲಕ್ಷ ಕ್ವಿಂಟಲ್‌


from India & World News in Kannada | VK Polls https://ift.tt/2ZCRxLC

ದಾಖಲೆ ಏರಿಕೆ ಕಂಡ ಪೆಟ್ರೋಲ್ ಮತ್ತು ಡೀಸೆಲ್: ತಿಂಗಳ ಮೊದಲ ದಿನವೇ ಮತ್ತೊಂದು ಬರೆ!

ಹೊಸದಿಲ್ಲಿ: ಅಕ್ಟೋಬರ್ ತಿಂಗಳ ಮೊದಲ ದಿನವೇ ಗ್ರಾಹಕರಿಗೆ ತೈಲ ಯ ಹೊಡೆತ ಮತ್ತೆ ತಟ್ಟಿದೆ. ಸತತ ಎರಡನೇ ದಿನ ಎಲ್ಲ ಮೆಟ್ರೋ ನಗರಗಳಲ್ಲಿ ಇಂಧನ ಬೆಲೆ ತುಟ್ಟಿಯಾಗಿದೆ. ಈ ಎರಡನೇ ಏರಿಕೆಯೊಂದಿಗೆ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಾಖಲೆಯ ಮಟ್ಟಕ್ಕೆ ತಲುಪಿದೆ. ಈ ಹಿಂದೆ ಅತ್ಯಲ್ಪ ಪ್ರಮಾಣದಲ್ಲಿ ತೈಲ ದರ ಕಡಿತಗೊಂಡಿತ್ತು. ಆದರೆ ಅದನ್ನೂ ಮೀರಿ ಈಗ ಏರಿಕೆಯಾಗಿದೆ. ಜಾಗತಿಕ ತೈಲ ದರಗಳಲ್ಲಿ ಮೂರು ವರ್ಷದಲ್ಲಿಯೇ ಅತ್ಯಂತ ಏರಿಕೆ ಕಂಡಿರುವ ಹಿನ್ನೆಲೆಯಲ್ಲಿ, ಅದರ ಬಿಸಿ ದೇಶದ ಗ್ರಾಹಕರನ್ನು ಬಾಧಿಸಿದೆ. ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ 25 ಪೈಸೆ ಹೆಚ್ಚಳವಾಗಿದ್ದರೆ, 30 ಪೈಸೆ ಅಧಿಕವಾಗಿದೆ. ಇಲ್ಲಿ 101.64 ರೂಪಾಯಿ ಇದ್ದ ಪ್ರತಿ ಲೀಟರ್ ಪೆಟ್ರೋಲ್ ದರ, ಶುಕ್ರವಾರ 101.89 ರೂಪಾಯಿಗೆ ತಲುಪಿದೆ. ಹಾಗೆಯೇ 89.87 ರೂ ಇದ್ದ ಪ್ರತಿ ಲೀಟರ್ ಡೀಸೆಲ್ ಬೆಲೆ, 90.17 ರೂಪಾಯಿಗೆ ಮುಟ್ಟಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ತಿಳಿಸಿದೆ. ಮುಂಬಯಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 24 ಪೈಸೆ ಹೆಚ್ಚಳ ಕಂಡಿದ್ದು, ಪ್ರತಿ ಲೀಟರ್ ಪೆಟ್ರೋಲ್ ಬೆಲೆ 107.95 ರೂಪಾಯಿ ಇದೆ. ಹಾಗೆಯೇ ಡೀಸೆಲ್ ದರ 31 ಪೈಸೆ ಹೆಚ್ಚಳದೊಂದಿಗೆ ಪ್ರತಿ ಲೀಟರ್‌ಗೆ 97.84 ರೂಪಾಯಿ ಆಗಿದೆ. ನೆರೆಯ ಚೆನ್ನೈನಲ್ಲಿ ಪೆಟ್ರೋಲ್ ದರ ಲೀಟರ್‌ಗೆ 99.58 ರೂ ಇದೆ. ಡೀಸೆಲ್ ದರ ಲೀಟರ್‌ಗೆ 94.74 ರೂಪಾಯಿ ಆಗಿದೆ. ಕೋಲ್ಕತಾದಲ್ಲಿ ಪೆಟ್ರೋಲ್ 102.47 ರೂ ಇದ್ದು, ಡೀಸೆಲ್ ಬೆಲೆ 93.27 ರೂಪಾಯಿ ಇದೆ. ಬೆಂಗಳೂರಿನಲ್ಲಿ ತೈಲ ದರಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಕೂಡ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಕಂಡಿವೆ. ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 26 ಪೈಸೆ ಹೆಚ್ಚಳವಾಗಿದೆ. 105.18 ರೂಪಾಯಿ ಇದ್ದ ಒಂದು ಲೀಟರ್ ಪೆಟ್ರೋಲ್ ದರ, 105.44 ರೂ ಆಗಿದೆ. ಇನ್ನು ಡೀಸೆಲ್ 32 ಪೈಸೆ ತುಟ್ಟಿಯಾಗಿದೆ. ಪ್ರತಿ ಲೀಟರ್ ಡೀಸೆಲ್ ದರ 95.70 ರೂಪಾಯಿದೆ ತಲುಪಿದೆ. ಕಚ್ಚಾ ಏರಿಕೆಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 78.64 ಡಾಲರ್‌ ಏರಿಕೆ ಕಂಡಿದೆ. ಇದು ಕಳೆದ ಮೂರು ವರ್ಷದಲ್ಲಿಯೇ ಅತ್ಯಧಿಕ ಹೆಚ್ಚಳವಾಗಿದೆ. ಇದರಿಂದ ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಸಂಸ್ಥೆಗಳು ಸೆ. 24ರಿಂದ ಮತ್ತೆ ದೈನಂದಿನ ಬೆಲೆ ಪರಿಷ್ಕರಣೆ ಆರಂಭಿಸಿವೆ. ಸೆ. 5ರಿಂದ ದೈನಂದಿನೆ ಬೆಲೆ ಏರಿಕೆ ನಿಯಂತ್ರಣಕ್ಕೆ ಬಂದಿತ್ತು. ಆದರೆ ಸೆ. 24ರಿಂದ ಐದು ಬಾರಿ ಬೆಲೆ ಹೆಚ್ಚಳವಾಗಿದೆ. ಈ ಅವಧಿಯಲ್ಲಿ ಡೀಸೆಲ್ ಬೆಲೆ ಲೀಟರ್‌ಗೆ 1.25 ರೂಪಾಯಿಯಷ್ಟು ಹೆಚ್ಚಳವಾಗಿದೆ. ಜುಲೈ ಮತ್ತು ಆಗಸ್ಟ್‌ನಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕುಸಿದಾಗ ದಿಲ್ಲಿ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕ್ರಮವಾಗಿ 65 ಪೈಸೆ ಹಾಗೂ 1.25 ರೂಪಾಯಿಯಷ್ಟು ಇಳಿಕೆಯಾಗಿದ್ದವು. ಅದಕ್ಕೂ ಮುನ್ನ ಮೇ 4 ರಿಂದ ಜುಲೈ 17ರ ಅವಧಿಯಲ್ಲಿ ಲೀಟರ್‌ಗೆ 11.44 ರೂಪಾಯಿಯಷ್ಟು ಪೆಟ್ರೋಲ್ ದರ ಏರಿಕೆಯಾಗಿತ್ತು. ಹಾಗೆಯೇ ಡೀಸೆಲ್ ಬೆಲೆ 9.14 ರೂಪಾಯಿ ಹೆಚ್ಚಳ ಕಂಡಿತ್ತು.


from India & World News in Kannada | VK Polls https://ift.tt/2ZGB5Kh

ವಿನಾಯಕ ಬಾಳಿಗ ಕೊಲೆ ಕೇಸ್; ಸರ್ಕಾರ ನೇಮಿಸಿದ್ದ ವಿಶೇಷ ಅಭಿಯೋಜಕರನ್ನು ರದ್ದುಗೊಳಿಸಿದ ಹೈಕೋರ್ಟ್​

ಬೆಂಗಳೂರು: ಮಂಗಳೂರಿನ ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಪಾಂಡುರಂಗ ಬಾಳಿಗಾ ಕೊಲೆ ಪ್ರಕರಣದಲ್ಲಿ ವಕೀಲ ರವೀಂದ್ರನಾಥ ಕಾಮತ್‌ ಅವರನ್ನು ವಿಶೇಷ ಸರಕಾರಿ ಅಭಿಯೋಜಕರನ್ನಾಗಿ(ಎಸ್‌ಪಿಪಿ) ಮಾಡಿದ್ದ ನೇಮಕವನ್ನು ಹೈಕೋರ್ಟ್‌ ರದ್ದುಗೊಳಿಸಿದೆ. ಎಸ್‌ಪಿಪಿ ನೇಮಕ ಸಂಬಂಧ ಸರಕಾರವು 2016ರಲ್ಲಿ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸುವಂತೆ ವಿನಾಯಕ ಪಾಂಡುರಂಗ ಬಾಳಿಗಾ ಕೊಲೆ ಪ್ರಕರಣದ ಪ್ರಮುಖ ಆರೋಪಿ ನರೇಶ್‌ ಶೆಣೈ ಎಂಬಾತ ಅರ್ಜಿ ಸಲ್ಲಿಸಿದ್ದ. ಅರ್ಜಿ ಸಂಬಂಧ ವಿಚಾರಣೆಯನ್ನು ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ್ದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈಗ ತೀರ್ಪು ಪ್ರಕಟಿಸಿದೆ. ‘ಪ್ರಕರಣದಲ್ಲಿ ಹೊಸ ಎಸ್‌ಪಿಪಿ ನೇಮಕ ಮಾಡುವಂತೆ ಸರಕಾರಕ್ಕೆ ಮನವಿ ಸಲ್ಲಿಸಲು 6ನೇ ಪ್ರತಿವಾದಿಯಾಗಿರುವ ಮೃತನ ಸಹೋದರಿ ಮುಕ್ತ ಅವಕಾಶ ಹೊಂದಿದ್ದಾರೆ. ಒಂದು ವೇಳೆ, ಅವರು ಮನವಿ ಸಲ್ಲಿಸಿದರೆ, ಸರಕಾರ ಅದನ್ನು ಕಾನೂನು ರೀತಿಯಲ್ಲಿ ಪರಿಗಣಿಸಬೇಕು’ ಎಂದು ನ್ಯಾಯಪೀಠ ನಿರ್ದೇಶಿಸಿದೆ. 2016ರ ಮಾ. 21ರಂದು ಮಂಗಳೂರಿನ ಕೊಡಿಯಾಲ್‌ಬೈಲ್‌ನಲ್ಲಿ ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಆ ದಿನ ಬೆಳಗಿನ ಜಾವ ನಗರದ ಬೆಸೆಂಟ್ ಕಾಲೇಜಿನ ಸಮೀಪದ ಪಿವಿಎಸ್ ಕಲಾಕುಂಜದ ಪಕ್ಕದ ಓಣಿಯಲ್ಲಿ ವಿನಾಯಕ ಪಾಂಡುರಂಗ ಬಾಳಿಗ ಅವರ ಹತ್ಯೆ ನಡೆದಿತ್ತು. ವಿನಾಯಕ ಪಾಂಡುರಂಗ ಬಾಳಿಗರವರು ಎಂದಿನಂತೆ ಮುಂಜಾನೆ ವೆಂಕಟರಮಣ ದೇವಸ್ಥಾನಕ್ಕೆ ಹೋಗಲು ತನ್ನ ಸ್ಕೂಟರ್ನಲ್ಲಿ ಮನೆಯಿಂದ ಹೊರಟು ಸುಮಾರು 75 ಮೀಟರ್ ದೂರ ಹೋಗುವಷ್ಟರಲ್ಲಿ ಬಾಳಿಗರನ್ನು ತಡೆದು ನಿಲ್ಲಿಸಿದ ಅಪರಿಚಿತ ವ್ಯಕ್ತಿಗಳು ಅವರನ್ನು ತಲವಾರಿನಿಂದ ಕಡಿದು, ಬಂದ ಬೈಕ್ನಲ್ಲಿ ಪರಾರಿಯಾಗಿದ್ದರು. ದಾಳಿಯಿಂದ ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿನಾಯಕ ಪಾಂಡುರಂಗ ಬಾಳಿಗರನ್ನು ಜ್ಯೋತಿಯ ಕೆ.ಎಂ.ಸಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸಾಗಿಸುತ್ತಿದ್ದಾಗ ಅವರು ದಾರಿಯಲ್ಲೇ ಮೃತಪಟ್ಟಿದ್ದರು. ಈ ಕೊಲೆ ಕೃತ್ಯದ ಬಗ್ಗೆ ವಿನಾಯಕ ಪಾಂಡುರಂಗ ಬಾಳಿಗರವರ ತಂಗಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಕೊಲೆ ಪ್ರಕರಣವನ್ನು ಭೇದಿಸಲು ನಗರ ಕೇಂದ್ರ ಉಪ-ವಿಭಾಗದ ಎ.ಸಿ.ಪಿ ತಿಲಕ್ ಚಂದ್ರ ಮತ್ತು ಸಿಸಿಬಿ ಇನ್ಸ್ ಪೆಕ್ಟರ್ ವೆಲೆಂಟೈನ್ ಡಿ’ಸೋಜ, ಶಾಂತರಾಮ, ರಾಜೇಶ್, ರವೀಶ್ ನಾಯಕ್, ಮಾರುತಿ ನಾಯಕ್ ಮತ್ತು ಪಿಎಸ್ಐ ಶ್ಯಾಮಸುಂದರ್ ರವರುಗಳನ್ನೊಳಗೊಂಡ ತಂಡಗಳನ್ನು ರಚಿಸಲಾಗಿತ್ತು. ಕೊಲೆ ಪ್ರಕರಣದಲ್ಲಿ ನೇರವಾಗಿ ಭಾಗಿಯಾದ ವಿನಿತ್ ಪೂಜಾರಿ ಮತ್ತು ನಿಶಿತ್ ದೇವಾಡಿಗ ಎಂಬ ಇಬ್ಬರು ಆರೋಪಿಗಳನ್ನು 27-03-2016 ರಂದು ಬೆಳಿಗ್ಗೆ ಬಿ.ಸಿ.ರೋಡ್ ರೈಲ್ವೆ ನಿಲ್ದಾಣದ ಬಳಿಯಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದರು.


from India & World News in Kannada | VK Polls https://ift.tt/2Y7cePe

ತ್ಯಾಜ್ಯ ಘಟಕಗಳಲ್ಲಿ ಅಕ್ರಮ ಬಾಂಗ್ಲಾ ವಲಸಿಗರು; ಇಲ್ಲಿ ಹೊರ ಪ್ರಪಂಚದ ಸಂಪರ್ಕವೇ ಇಲ್ಲ!

ಮಹಾಬಲೇಶ್ವರ ಕಲ್ಕಣಿ, ಬೆಂಗಳೂರು: ರಾಜಧಾನಿ ಬೆಂಗಳೂರು ಬಾಂಗ್ಲಾವಲಸಿಗರ ಆಶ್ರಯತಾಣವಾಗುತ್ತಿದ್ದು, ಗಡಿ ನುಸುಳಿ ಬಂದವರಿಗೆ ನಗರದ ಹೊರವಲಯದಲ್ಲಿ ಹುಟ್ಟಿಕೊಂಡಿರುವ ಘನ ತ್ಯಾಜ್ಯ ವಿಂಗಡಣೆ ಘಟಕಗಳಲ್ಲಿ ಆಶ್ರಯ ನೀಡಲಾಗುತ್ತಿದೆ. ಇದು ಹೀಗೆಯೇ ಮುಂದುವರಿದರೆ ಬೆಂಗಳೂರು ಅಕ್ರಮ ಬಾಂಗ್ಲಾವಲಸಿಗರ ತಾಣವಾಗಲಿದೆ ಎಂಬ ಆತಂಕವನ್ನು ಸ್ಥಳೀಯ ನಿವಾಸಿಗಳು ವ್ಯಕ್ತಪಡಿಸಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಿಂದ ಆಚೆಗೆ ಖಾಸಗಿ ಜಮೀನಿನಲ್ಲಿ ನೂರಾರು ಘನ ತ್ಯಾಜ್ಯ ವಿಂಗಡಣೆ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಈ ತ್ಯಾಜ್ಯ ಘಟಕಗಳಲ್ಲಿ ಕಡಿಮೆ ಸಂಬಳಕ್ಕೆ ದುಡಿಯಲು ಸಿಗುತ್ತಾರೆ ಎಂಬ ಕಾರಣಕ್ಕೆ ಬಾಂಗ್ಲಾವಲಸಿಗರನ್ನು ಬಳಕೆ ಮಾಡಲಾಗುತ್ತಿದೆ. ತ್ಯಾಜ್ಯ ಘಟಕಗಳ ಸುತ್ತಮುತ್ತ ತಾತ್ಕಾಲಿಕ ಟೆಂಟ್‌ಗಳನ್ನು ಹಾಕಿ ವಲಸಿಗರು ವಾಸಿಸುತ್ತಿದ್ದಾರೆ. ಹತ್ತು ಸಾವಿರ ನಗರದ ಬೆಳ್ಳಂದೂರು, ಮಹದೇವಪುರ ವ್ಯಾಪ್ತಿಯಲ್ಲಿ ಈ ಮೊದಲು ಬಾಂಗ್ಲಾವಲಸಿಗರು ಅಕ್ರಮವಾಗಿ ನೆಲೆಸಿದ್ದರು ಎಂಬ ಮಾಹಿತಿ ಇತ್ತು. ಈಗ ಬನ್ನೇರುಘಟ್ಟ, ಕನಕಪುರ, ಯಲಹಂಕ, ಕೆ.ಆರ್‌.ಪುರ ಸುತ್ತಮುತ್ತಲು ಇರುವ ಘನ ತ್ಯಾಜ್ಯ ಘಟಕಗಳಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದಾರೆ. ಈ ಘಟಕಗಳಿಗೆ ಹೊರಗಿನಿಂದ ಜನಸಂಪರ್ಕವೇ ಇಲ್ಲ. ಈ ಘಟಕಗಳನ್ನು ನಿರ್ವಹಣೆ ಮಾಡುತ್ತಿರುವ ಮಾಲೀಕರು, ಹೊರಗಿನಿಂದ ಯಾರೂ ಈ ಘಟಕದೊಳಗೆ ಸುಲಭವಾಗಿ ಹೋಗದಂತೆ ಎಚ್ಚರಿಕೆ ವಹಿಸಿದ್ದಾರೆ. ತಮ್ಮದೇ ಸಿಬ್ಬಂದಿಯನ್ನು ಕಾವಲು ಹಾಕಿದ್ದಾರೆ. ಹೀಗಾಗಿ ಅಲ್ಲಿಏನೇನು ಚಟುವಟಿಕೆ ನಡೆಯುತ್ತದೆ ಎಂಬುದೇ ಹೊರ ಜಗತ್ತಿಗೆ ಗೊತ್ತಾಗುವುದಿಲ್ಲ. ಆಧಾರ್‌, ರೇಷನ್‌ ಕಾರ್ಡ್‌ ಸೌಲಭ್ಯ ಬನ್ನೇರುಘಟ್ಟ ಸುತ್ತಮುತ್ತ ಇರುವ ಬೇಗೂರು ರಸ್ತೆ, ಬಿಂಗಿಪುರ ಕೆರೆ ದಂಡೆಯ ಮೇಲೆ, ಬೇಗೂರು ನೈಸ್‌ ರಸ್ತೆ ಪಕ್ಕ, ಲಕ್ಷ್ಮೀ ಲೇಔಟ್‌ನಲ್ಲಿ ಇವರ ದೊಡ್ಡ ಸಾಮ್ರಾಜ್ಯವೇ ನಿರ್ಮಾಣವಾಗಿದೆ. ಘನ ತ್ಯಾಜ್ಯ ಘಟಕಗಳಿಗೆ 'ವಿಕ' ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ನೂರಾರು ಕುಟುಂಬಗಳು ಶೆಡ್‌ಗಳಲ್ಲಿ ನೆಲೆಸಿರುವುದು ಕಂಡು ಬಂತು. ಅವರನ್ನು ಪ್ರಶ್ನಿಸಿದಾಗ ನಾವು ಹತ್ತಾರು ವರ್ಷಗಳಿಂದ ಇಲ್ಲಿ ನೆಲೆಸಿದ್ದೇವೆ. ನಮ್ಮ ಬಳಿ ಆಧಾರ್‌ ಕಾರ್ಡ್‌, ರೇಷನ್‌ ಕಾರ್ಡ್‌, ಮತದಾನದ ಗುರುತಿನ ಚೀಟಿ ಇವೆ. ನಮಗೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ನಮ್ಮ ಮಾಲೀಕರೇ ಮಾಡಿಕೊಟ್ಟಿದ್ದಾರೆ ಎಂದು ಹೇಳಿದರು. ತ್ಯಾಜ್ಯ ಸುರಿಯವ ಕೃಷಿ ಭೂಮಿಯಲ್ಲಿ ಪ್ಲಾಸ್ಟಿಕ್‌ ಟೆಂಟ್‌ ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಸ್ಥಳೀಯ ಭಾಷೆ ಬರುವುದಿಲ್ಲ. ಬೆಂಗಾಲಿ ಮಿಶ್ರಿತ ಹಿಂದಿ ಮಾತನಾಡುವ ಸಾವಿರಾರು ಮಂದಿ ಇಲ್ಲಿದ್ದಾರೆ. ''ನಾವು ಕಳೆದ 15-20 ವರ್ಷಗಳಿಂದ ಇಲ್ಲಿ ವಾಸವಾಗಿದ್ದೇವೆ. ಬಿಹಾರ, ಒಡಿಶಾ, ಬಾಂಗ್ಲಾದೇಶದವರು ನಮ್ಮಲ್ಲಿದ್ದಾರೆ. ಹೊಟ್ಟೆಪಾಡಿಗಾಗಿ ಚಿಂದಿ ಬೇರ್ಪಡಿಸುವ ಉದ್ಯೋಗ ಮಾಡುತ್ತಿದ್ದೇವೆ'' ಎನ್ನುತ್ತಾರೆ ಬೀಹಾರ್‌ ಮೂ ಲದ ಮೋಹನ್‌ ಪಂಡಿತ್‌. ತ್ಯಾಜ್ಯದ ಮಧ್ಯೆಯೇ ಜೀವನ ಗಂಡಸರು, ಹೆಂಗಸರು, ಮಕ್ಕಳಿಂದ ಹಿಡಿದು ಎಲ್ಲರೂ ಚಿಂದಿ ಬೇರ್ಪಡಿಸುವ ಕೆಲಸದಲ್ಲಿ ನಿರತರಾಗಿರುತ್ತಾರೆ. ತ್ಯಾಜ್ಯ ಬೇರ್ಪಡಿಸುವ ಸ್ಥಳದಲ್ಲಿಯೇ ಊಟ, ವಸತಿ, ನಿದ್ರೆ. ಇವರ ತಾಣಕ್ಕೆ ಕಾಲಿಟ್ಟರೆ ನಾವು ನಮ್ಮ ರಾಜ್ಯದಲ್ಲಿದ್ದೇವೆಯೇ ಎನ್ನುವ ಅನುಮಾನ ಕಾಡುತ್ತದೆ. ಎಷ್ಟು ಜನ ಇದ್ದಾರೆ? ಕೇಂದ್ರ ಮತ್ತು ರಾಜ್ಯ ಸರಕಾರದ ಸಂಸ್ಥೆಗಳು ಇದುವರೆಗೆ ರಾಜ್ಯದ ಅಕ್ರಮ ಬಾಂಗ್ಲಾವಲಸಿಗರ ಬಗ್ಗೆ ಅಧಿಕೃತವಾಗಿ ಮಾಹಿತಿಯನ್ನು ಕಲೆಹಾಕಿಲ್ಲ ಎಂದು ತಿಳಿದುಬಂದಿದೆ. ಒಮ್ಮೆ ಸರಕಾರಿ ದಾಖಲೆಗಳಲ್ಲಿ ಅಧಿಕೃತವಾಗಿ ಅಕ್ರಮ ವಲಸಿಗ ಎಂಬುದಾಗಿ ಉಲ್ಲೇಖವಾದರೆ ಸದರಿ ವ್ಯಕ್ತಿಯನ್ನು ರಾಜ್ಯದಿಂದ ಗಡೀಪಾರು ಮಾಡಬೇಕಾಗುತ್ತದೆ. ಇದೊಂದು ಸುದೀರ್ಘವಾಗಿ ನಡೆಯುವ ಪ್ರಕ್ರಿಯೆಯಾಗಿರುವುದರಿಂದ ಎಲ್ಲರೂ ಸುಮ್ಮನಿದ್ದಾರೆ. 2016ರ ಬೆಳಗಾವಿ ವಿಧಾನಮಂಡಲ ಅಧಿವೇಶನದಲ್ಲಿ ಅಂದಿನ ಗೃಹ ಸಚಿವರು ರಾಜ್ಯದಲ್ಲಿ ಕೇವಲ 270 ಮಂದಿ ಮಾತ್ರ ಅಕ್ರಮ ವಲಸಿಗರಿದ್ದಾರೆ ಎಂದು ಅಧಿಕೃತ ಹೇಳಿಕೆ ನೀಡಿದ್ದರು. ಆದರೆ ವಾಸ್ತವದಲ್ಲಿ 10 ಸಾವಿರಕ್ಕೂ ಅಧಿಕ ಅಕ್ರಮ ವಲಸಿಗರಿದ್ದಾರೆ ಎನ್ನುವ ಮಾಹಿತಿ ಇದೆ. ಅಪರಾದ ಚಟುವಟಿಕೆ ಅಕ್ರಮ ವಲಸಿಗರಿಂದ ನಗರದಲ್ಲಿ ಗಾಂಜಾ, ಡ್ರಗ್ಸ್‌ ಮಾರಾಟ ಸರಾಗವಾಗಿ ನಡೆಯುತ್ತಿದೆ ಎನ್ನುವ ಆರೋಪ ಕೂಡ ಕೇಳಿ ಬರುತ್ತಿದೆ. ಇನ್ನೊಂದೆಡೆ ರಾಜಧಾನಿಯಲ್ಲಿ ನಡೆಯುವ ವಿಧ್ವಂಸಕ ಕೃತ್ಯಗಳಲ್ಲೂ ಕೆಲವರು ಭಾಗಿಯಾಗಿರುವ ಸಂಶಯವಿದೆ ಎಂದು ಹೇಳಲಾಗುತ್ತಿದೆ. ಅಕ್ರಮ ವಲಸಿಗರನ್ನು ಗಡಿಪಾರು ಮಾಡದಿದ್ದರೆ ರಾಜಧಾನಿಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ ಎನ್ನುವುದು ಸ್ಥಳೀಯರ ಆತಂಕವಾಗಿದೆ. ಇದುವರೆಗೂ ನಡೆಯದ ಪತ್ತೆಕಾರ್ಯ ರಾಜ್ಯದಲ್ಲಿಅಕ್ರಮ ವಲಸಿಗರ ವಿಚಾರದಲ್ಲಿ ಸರಕಾರ ಗಂಭೀರವಾಗಿದ್ದು, ಅವರ ಮೇಲೆ ಕಣ್ಗಾವಲು ಇರಿಸಲಾಗುತ್ತಿದೆ. ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಯರನ್ನು ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳಲು ಪೊಲೀಸರು ಮತ್ತು ಆಂತರಿಕ ಭದ್ರತಾ ವಿಭಾಗಕ್ಕೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಇದಕ್ಕಾಗಿ ವಿಶೇಷ ಕಾರ್ಯಾಚರಣೆ ನಡೆಸಲು ಸೂಚಿಸಲಾಗಿದೆ ಎಂದು ಗೃಹ ಸಚಿವರಾದ ಜ್ಞಾನೇಂದ್ರ ಅವರು ಸೆ.16 ರಂದು ವಿಧಾನ ಪರಿಷತ್‌ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಮುನಿರಾಜು ಗೌಡ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದರು. ಆದರೆ ಬಾಂಗ್ಲಾವಲಸಿಗರನ್ನು ಗುರುತಿಸುವ ಕಾರ್ಯ ಮಾತ್ರ ಇದುವರೆಗೂ ಆಗಿಲ್ಲ. ಪೊಲೀಸರು ಕೂಡ ಈ ಬಾಂಗ್ಲಾವಸಲಿಗರ ತಂಟೆಗೆ ಹೋಗುತ್ತಿಲ್ಲ. ಹೀಗಾಗಿ ನೂರಾರು ಬಾಂಗ್ಲಾವಲಸಿಗರು ಪ್ರತಿ ತಿಂಗಳು ರೈಲು, ಸರಕು ಸಾಗಣೆ ಲಾರಿಗಳ ಮೂಲಕ ಬೆಂಗಳೂರಿಗೆ ಬಂದು ಸೇರುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕದಿದ್ದರೆ ಮುಂದಿನ ದಿನಗಳಲ್ಲಿ ಬೆಂಗಳೂರು ಬಾಂಗ್ಲಾವಲಸಿಗರ ತಾಣ ಆಗಬಹುದು.


from India & World News in Kannada | VK Polls https://ift.tt/3zVBDID

ಅಂದು ಚಿತಾಭಸ್ಮ ವಿಸರ್ಜನೆ, ಈಗ ಪಿಂಡ ಪ್ರದಾನ; ಕೋವಿಡ್​ನಿಂದ ಸತ್ತವರ ಆತ್ಮಕ್ಕೆ ಸದ್ಗತಿ ಕೋರಲು ಮುಂದಾದ ಆರ್ ಅಶೋಕ್

ಬೆಂಗಳೂರು: ಕೋವಿಡ್‌ ಎರಡನೇ ಅಲೆ ಸಂದರ್ಭದಲ್ಲಿ ವಾರಸುದಾರರಿಲ್ಲದ ಮೃತ ಶರೀರಗಳಿಗೆ ಅಂತ್ಯಕ್ರಿಯೆ ಮಾಡಿಸಲು ಮುಂದಾಗಿದ್ದ ಕಂದಾಯ ಸಚಿವ ಆರ್‌.ಅಶೋಕ್‌ ಅವರು ಪುನಃ ಅಂತಹುದೇ ಕಾರ್ಯಕ್ಕೆ ಅಣಿಯಾಗಿದ್ದಾರೆ. ಈ ಬಾರಿ ಅವರು ಪಿತೃ ಪಕ್ಷದ ನಿಮಿತ್ತ ಪಿಂಡ ಪ್ರದಾನ ಕ್ರಿಯೆ ನೆರವೇರಿಸಿ ಕೋವಿಡ್‌ನಿಂದ ಮೃತರಾದವರ ಆತ್ಮಗಳಿಗೆ ಸದ್ಗತಿ ಕೋರಲಿದ್ದಾರೆ. ಹಿಂದೂ ಸಂಪ್ರದಾಯದಲ್ಲಿ ಅಪರ ಕ್ರಿಯಾದಿಗಳಿಗೆ ಮಹತ್ವವಿದೆ. ಅದು ನಂಬಿಕೆ, ಶ್ರದ್ಧೆಗೆ ಸಂಬಂಧಿಸಿದ ವಿಚಾರ. ವ್ಯಕ್ತಿಯ ಮರಣಾನಂತರ ಪಾರ್ಥಿವ ಶರೀರಕ್ಕೆ ಶಾಸ್ತ್ರೋಕ್ತವಾಗಿ ಅಂತ್ಯ ಸಂಸ್ಕಾರ ಮಾಡುವುದು ಒಂದು ಭಾಗ. ಬಳಿಕ ಪಿತೃ ಪಕ್ಷದಲ್ಲಿ ಪಿಂಡ ಪ್ರದಾನ ಮಾಡಲಾಗುತ್ತದೆ. ಮೃತರ ಮಕ್ಕಳು ಈ ಕಾರ್ಯವನ್ನು ಮಾಡುತ್ತಾರೆ. ಆದರೆ, ಕೋವಿಡ್‌ನಿಂದ ಮರಣ ಹೊಂದಿನ ಸಾವಿರಕ್ಕೂ ಹೆಚ್ಚು ಜನರ ದೇಹದ ಅಂತ್ಯಸಂಸ್ಕಾರಕ್ಕೆ ಅವರ ಕಡೆಯವರು ಬಂದಿರಲಿಲ್ಲ. ಅಂತಹ ನತದೃಷ್ಟರ ದೇಹವನ್ನು ಪಂಚಭೂತಗಳಲ್ಲಿ ಲೀನವಾಗಿಸಲು ಸಚಿವ ಅಶೋಕ್‌ ಅವರೇ ಮುತುವರ್ಜಿ ವಹಿಸಿ ವ್ಯವಸ್ಥೆ ಮಾಡಿಸಿದ್ದರು. ಬಳಿಕ ಅವರೇ ಖುದ್ದಾಗಿ ಅಸ್ತಿ ವಿಸರ್ಜನೆ ಕಾರ್ಯ ಮಾಡಿದ್ದರು. ಅಶೋಕ್‌ ಅವರ ಈ ಕಾರ್ಯದಿಂದ ಸಂಪ್ರದಾಯವಾದಿಗಳ ಹೃದಯ ತುಂಬಿ ಬರುವಂತಾಗಿತ್ತು. ಅ.4ಕ್ಕೆ ಪಿಂಡ ಪ್ರದಾನಕಳೆದ ಜೂನ್‌ 2ರಂದು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬೆಲಕವಾಡಿಯಲ್ಲಿ ಸಚಿವ ಅಶೋಕ್‌, 1,300 ಜನರ ಅಸ್ತಿ ವಿಸರ್ಜನೆ ಮಾಡಿದ್ದರು. ವೇದಮೂರ್ತಿ ಭಾನುಪ್ರಕಾಶ್‌ ಶರ್ಮ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯ ಮಾಡಿದ್ದರು. ಬರುವ ಸೋಮವಾರ ಅಕ್ಟೋಬರ್‌ 4ರಂದು ಪಿಂಡ ಪ್ರದಾನ ಮಾಡಲು ಸಿದ್ಧತೆ ಕೈಗೊಳ್ಳಲಾಗುತ್ತದೆ. ಶ್ರೀರಂಗಪಟ್ಟಣದ ಬಳಿ ಕಾವೇರಿ ಘಾಟ್‌ನಲ್ಲಿ ಇದಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಲಾಗಿದೆ. ಸಚಿವ ಅಶೋಕ್‌ ಅವರೊಂದಿಗೆ ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಮಂಜುನಾಥ್‌ ಪ್ರಸಾದ್‌ ಹಾಗೂ ಬೆಂಗಳೂರು ನಗರ, ಮಂಡ್ಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಭಾಗಿಯಾಗಲಿದ್ದಾರೆ. ಭಾನುಪ್ರಕಾಶ್‌ ಶರ್ಮ ಅವರ ನೇತೃತ್ವದಲ್ಲಿ ಈ ವಿಧಿ ವಿಧಾನಗಳು ನಡೆಯಲಿವೆ. ಸಾಮೂಹಿಕ ಅಂತ್ಯ ಸಂಸ್ಕಾರದ ಹಿನ್ನೆಲೆಸಾಮೂಹಿಕ ಅಂತ್ಯ ಸಂಸ್ಕಾರಕ್ಕೆ ಮಹಾಭಾರತದ ಹಿನ್ನೆಲೆಯೂ ಇದೆ. ಮಹಾಭಾರತ ಯುದ್ಧದ ಬಳಿಕ ಪಾಂಡವ ಜ್ಯೇಷ್ಠ ಯುಧಿಷ್ಠಿರ ಈ ಸಮರದಲ್ಲಿ ಮಡಿದವರಿಗೆ ಸಾಮೂಹಿಕ ಅಂತ್ಯ ಸಂಸ್ಕಾರ ಮಾಡಿದ್ದರ ಬಗ್ಗೆ ಉಲ್ಲೇಖವಿದೆ. ಹಾಗೆಯೇ ಸಾಂಕ್ರಾಮಿಕ ರೋಗ, ಯುದ್ಧಗಳಿಂದ ಸಾವು, ನೋವುಗಳಾದಾಗ ಯಾರೋ ಪುಣ್ಯಾತ್ಮರು ಅಪರ ಕ್ರಿಯೆಗಳನ್ನು ಮಾಡಿಸಿದ ನಿದರ್ಶನಗಳಿವೆ. ಜಲಿಯನ್‌ ವಾಲಾಭಾಗ್‌ ಹತ್ಯಾಕಾಂಡದ ಬಳಿಕ ಗಾಂಧೀಜಿಯವರ ಸೂಚನೆಯಂತೆ ಪಂಡಿತ ಸುಧಾಕರ ಚತುರ್ವೇದಿ ಅವರು ಸಾಮೂಹಿಕವಾಗಿ ಅಂತ್ಯ ಸಂಸ್ಕಾರ ಮಾಡಿದ್ದರು. ಹಿಂದೂ ಸಂಪ್ರದಾಯದ ನಂಬಿಕೆ ಅನುಗುಣವಾಗಿ ಇದು ನಡೆದುಕೊಂಡು ಬಂದಿದೆ. ಭಾರತೀಯ ಆಚರಣೆಗಳು ನಿಂತಿರುವುದೇ ನಂಬಿಕೆಯ ಬಂಧದ ಮೇಲೆ. ಈ ನಿಟಿನಲ್ಲಿ ಸಚಿವ ಅಶೋಕ್‌ ಅವರ ಕಾರ್ಯ ಗಮನ ಸೆಳೆದಿದೆ.


from India & World News in Kannada | VK Polls https://ift.tt/3imjRbL

ಪಂಜಾಬ್‌ ಕಿಂಗ್ಸ್‌ಗೆ ಆಘಾತ! ಗೇಲ್‌ ಬಯೋ-ಬಬಲ್‌ ತೊರೆಯಲು ಅಸಲಿ ಕಾರಣ ಇಲ್ಲಿದೆ..

ದುಬೈ: ಪ್ರಸ್ತುತ ಸಾಗುತ್ತಿರುವ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌(ಐಪಿಎಲ್) ಟೂರ್ನಿಯಲ್ಲಿ ಪಂಜಾಬ್‌ ಕಿಂಗ್ಸ್ ತಂಡಕ್ಕೆ ಇನ್ನೂ ಮೂರು ಪಂದ್ಯಗಳು ಬಾಕಿ ಇರುವಾಗಲೇ ಯೂನಿವರ್ಸ್ ಬಾಸ್‌ ಖ್ಯಾತಿಯ ಬಯೋ-ಬಬಲ್‌ ತೊರೆದು ಅಚ್ಚರಿ ಮೂಡಿಸಿದ್ದಾರೆ. 2021ರ ಐಪಿಎಲ್‌ ಟೂರ್ನಿಯಲ್ಲಿ ಪಂಜಾಬ್‌ ಕಿಂಗ್ಸ್ ತಂಡ ಇಲ್ಲಿವರೆಗೂ ಆಡಿರುವ 11 ಪಂದ್ಯಗಳಲ್ಲಿ 4ರಲ್ಲಿ ಗೆಲುವು ಪಡೆದಿದ್ದು, ಇನ್ನುಳಿದ 7ರಲ್ಲಿ ಸೋತು ಆಘಾತ ಅನುಭವಿಸಿದೆ. ಇದರ ಹೊರತಾಗಿಯೂ ಕೆ.ಎಲ್‌ ರಾಹುಲ್‌ ನಾಯಕತ್ವದ ಪಂಜಾಬ್‌ ಕಿಂಗ್ಸ್‌ ತಂಡಕ್ಕೆ ಪ್ಲೇ ಆಫ್ಸ್‌ ತಲುಪಲು ಇನ್ನುಳಿದ ಮೂರೂ ಪಂದ್ಯಗಳಲ್ಲಿ ಉತ್ತಮ ರನ್‌ರೇಟ್‌ನಲ್ಲಿ ಗೆಲ್ಲಬೇಕಾದ ಅಗತ್ಯವಿದೆ. ಅಂದಹಾಗೆ ಸ್ಪೋಟಕ ಆರಂಭಿಕ ಬ್ಯಾಟ್ಸ್‌ಮನ್‌ ಹಠಾತ್‌ ಪಂಜಾಬ್‌ ಕಿಂಗ್ಸ್ ತಂಡವನ್ನು ತೊರೆಯಲು ಕಾರಣವೇನು ಎಂಬಂತೆ ಅಭಿಮಾನಿಗಳಿಗೆ ಪ್ರಶ್ನೆ ಕಾಡುವುದು ಸಹಜ. ಪಂಜಾಬ್‌ ಕಿಂಗ್ಸ್‌ಗೆ ಇನ್ನೂ ನಿರ್ಣಾಯಕ ಮೂರು ಪಂದ್ಯಗಳು ಬಾಕಿ ಇರುವಾಗಲೇ ಟೂರ್ನಿಯಿಂದ ಹೊರ ನಡೆಯಲು ಕಾರಣವೇನೆಂಬುದನ್ನು ಕೂಡ ಗೇಲ್‌ ಇದೇ ವೇಳೆ ವಿವರಿಸಿದ್ದಾರೆ. ಕಳೆದ ಹಲವು ತಿಂಗಳುಗಳಿಂದ ಬಯೋ-ಬಬಲ್‌ ಜೀವನದಲ್ಲಿ ತುಂಬಾ ಆಯಾಸವಾಗಿರುವ ಕಾರಣ ಟೂರ್ನಿಯಿಂದ ಹೊರ ನಡೆಯುತ್ತಿರುವ ಕ್ರಿಸ್‌ ಗೇಲ್‌, ಮುಂಬರುವ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಒಳಗಾಗಿ ಮಾನಸಿಕ ಸದೃಢರಾಗಿ ವೆಸ್ಟ್ ಇಂಡೀಸ್‌ ತಂಡಕ್ಕೆ ಮರಳಲು ಬಯಸುತ್ತಿದ್ದಾರೆ. ಹಾಗಾಗಿ, ಗೇಲ್‌ ಈ ನಿರ್ಧಾರ ತೆಗೆದುಕೊಂಡಿದ್ದಾರೆಂದು ಪಂಜಾಬ್‌ ಕಿಂಗ್ಸ್‌ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಕೋವಿಡ್‌-19 ಲಾಕ್‌ ಡೌನ್‌ ಬಳಿಕ 2020ರ ಇಂಡಿಯನ್ ಪ್ರೀಮಿಯರ್‌ ಲೀಗ್‌, ವೆಸ್ಟ್ ಇಂಡೀಸ್‌ ಪರ ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ಸರಣಿಗಳು, ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ ಸೇರಿದಂತೆ ವಿಶ್ವದಾದ್ಯಂತ ಫ್ರಾಂಚೈಸಿ ಕ್ರಿಕೆಟ್‌ ಟೂರ್ನಿಗಳಲ್ಲಿ ಕ್ರಿಸ್‌ ಗೇಲ್‌ ಭಾಗವಹಿಸಿದ್ದರು. ಹಾಗಾಗಿ, ಕಳೆದ ಒಂದು ವರ್ಷದಿಂದ ನಿರಂತರವಾಗಿ ಕ್ರಿಸ್‌ ಗೇಲ್ ಬಯೋ-ಬಬಲ್‌ನಲ್ಲಿಯೇ ಉಳಿದಿದ್ದರು. ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆರಂಭವಾಗಲು ಇನ್ನು ಎರಡು ವಾರಗಳು ಮಾತ್ರ ಬಾಕಿ ಇವೆ. ಈ ಹಿನ್ನೆಲೆಯಲ್ಲಿ ಕ್ರೀಸ್‌ ಗೇಲ್ ಅಲ್ಪ ವಿರಾಮದಲ್ಲಿ ಮಾನಸಿಕವಾಗಿ ಸದೃಢರಾಗಿ ಮಹತ್ವದ ಟೂರ್ನಿಗೆ ಮರಳುವ ಉದ್ದೇಶದಿಂದ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಕ್ರೀಸ್‌ ಗೇಲ್‌ ನಿರ್ಧಾರಕ್ಕೆ ಪಂಜಾಬ್‌ ತಂಡ ಬೆಂಬಲ ವ್ಯಕ್ತಪಡಿಸಿದೆ. "ಕಳೆದ ಹಲವು ತಿಂಗಳುಗಳಿಂದ ನಾನು ಕ್ರಿಕೆಟ್‌ ವೆಸ್ಟ್ ಇಂಡೀಸ್‌ ಬಯೋ-ಬಬಲ್‌, ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ ಬಯೋ-ಬಬಲ್‌ ಹಾಗೂ ಐಪಿಎಲ್‌ ಬಯೋ-ಬಬಲ್‌ನಲ್ಲಿ ಕಳೆದಿದ್ದೇನೆ. ಹಾಗಾಗಿ, ನಾನು ಮಾನಸಿಕ ಆಯಾಸವನ್ನು ಕಡಿಮೆ ಮಾಡಿಕೊಳ್ಳಲು ಬಯಸಿದ್ದೇನೆ. ಆದ್ದರಿಂದ ದುಬೈನಲ್ಲಿ ಅಲ್ಪ ವಿರಾಮ ಪಡೆದುಕೊಂಡ ಬಳಿಕ ವೆಸ್ಟ್ ಇಂಡೀಸ್‌ ಪರ ಟಿ20 ವಿಶ್ವಕಪ್‌ ಟೂರ್ನಿಯ ಕಡೆ ಹೆಚ್ಚಿನ ಗಮನ ಹರಿಸಲಿದ್ದೇನೆ," ಎಂದು ಕ್ರಿಸ್‌ ಗೇಲ್‌ ಹೇಳಿದ್ದಾರೆ. "ಪಂಜಾಬ್‌ ಕಿಂಗ್ಸ್ ಬಯೋ-ಬಬಲ್‌ ತೊರೆಯುವ ನನ್ನ ನಿರ್ಧಾರಕ್ಕೆ ಬೆಂಬಲ ಸೂಚಿಸಿರುವ ಫ್ರಾಂಚೈಸಿಗೆ ಧನ್ಯವಾದ ಅರ್ಪಿಸಲು ಬಯಸುತ್ತೇನೆ. ನನ್ನ ಹಾರೈಕೆ ಹಾಗೂ ನಿರೀಕ್ಷೆ ಯಾವಾಗಲೂ ಪಂಜಾಬ್‌ ಕಿಂಗ್ಸ್‌ ತಂಡದ ಪರವಾಗಿರುತ್ತದೆ. ಮುಂದಿನ ಪಂದ್ಯಗಳಿಗೆ ಒಳ್ಳೆಯದಾಗಲಿ," ಎಂದು ಕ್ರಿಸ್‌ ಗೇಲ್‌ ತಿಳಿಸಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3kXBiRK

ರಾಜ್ಯಾದ್ಯಂತ ರೈತರ ಬೆಳೆಗೆ ಜಿಕೆವಿಕೆ ಟ್ರ್ಯಾಕಿಂಗ್‌ ಸಿಸ್ಟಮ್‌; ಬಿತ್ತನೆಯಿಂದ ಮಾರುಕಟ್ಟೆವರೆಗೆ ನೆರವು!

ಆದರ್ಶ ಕೋಡಿ ದೊಡ್ಡಬಳ್ಳಾಪುರ ಬೆಂಗಳೂರು: ಕೊರೊನಾದಿಂದಾಗಿ ಹೊಸ ಅವಕಾಶಗಳಿಗೆ ತೆರೆದುಕೊಳ್ಳುತ್ತಿರುವ ರಾಜ್ಯ ಕೃಷಿಕರಿಗೆ, ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರವು() ಟ್ರ್ಯಾಕಿಂಗ್‌ ವ್ಯವಸ್ಥೆ ಪರಿಚಯಿಸುತ್ತಿದೆ. ಬಿತ್ತನೆಯಿಂದ ಮಾರುಕಟ್ಟೆಗೆ ತಲುಪುವವರೆಗೆ ರೈತರಿಗೆ ನೆರವಾಗುವ ವ್ಯವಸ್ಥೆ ಜೀವ ಪಡೆದುಕೊಂಡಿದೆ. ಕಳೆದ ವರ್ಷ ಲಾಕ್‌ಡೌನ್‌ ಹಿನ್ನೆಲೆಯಲ್ಲಿಆರಂಭವಾಗಿದ್ದ ಮನೆ ಬಾಗಿಲಿಗೆ ಬಿತ್ತನೆ ಬೀಜ ತಲುಪಿಸುವ ವ್ಯವಸ್ಥೆಯು ಹೊಸ ರೂಪ ಪಡೆದಿದೆ. ಇದರಿಂದ ಮತ್ತಷ್ಟು ರೈತರಿಗೆ ಅನುಕೂಲವಾಗಲಿದೆ. ರೈತರು ಕನಿಷ್ಠ 50 ಕೆ.ಜಿಯಿಂದ 1ಕ್ವಿಂಟಲ್‌ ಬಿತ್ತನೆ ಬೀಜದ ಬೇಡಿಕೆಯೊಂದಿಗೆ ಈ ವ್ಯವಸ್ಥೆಗೆ ಸೇರ್ಪಡೆಗೊಳ್ಳಬಹುದು. ಆರಂಭಿಕವಾಗಿ ಜಮೀನಿಗೆ ಅಗತ್ಯ ಬಿತ್ತನೆ ಬೀಜ, ಆ ನಂತರದ ಪೋಷಣೆಗೆ ಸಂಬಂಧಿಸಿದಂತೆ ನಿರಂತರ ಸಲಹೆಗಳನ್ನು ಒದಗಿಸಲು ಸಿಬ್ಬಂದಿ ವ್ಯವಸ್ಥೆ ರೂಪಿಸಲಾಗಿದೆ. ಬೆಳೆ ಕೈಗೆ ಬಂದ ಬಳಿಕ ಫಸಲಿಗೆ ಅಗತ್ಯ ಬಗ್ಗೆ ಸಹಕಾರವು ಜಿಕೆವಿಕೆಯಿಂದಲೇ ಲಭಿಸಲಿದೆ. ಕಳೆದ ವರ್ಷದ ಅಗ್ರಿ ವಾರ್‌ರೂಮ್‌ ವೇಳೆ ಮಾಡಿಕೊಂಡಿರುವ ಮಾಹಿತಿಗಳ ಕ್ರೋಡೀಕರಣದಿಂದಾಗಿ ಪ್ರಸ್ತುತ ರಾಜ್ಯದಲ್ಲಿರುವ ಆಯಿಲ್‌ ಮಿಲ್‌ಗಳು, ಆಹಾರ ಉತ್ಪನ್ನಗಳ ಕಂಪನಿಗಳು, ಸ್ಥಳೀಯ ಮಾರುಕಟ್ಟೆಗಳ ಟ್ರೇಡರ್‌ಗಳ ಸಂಪರ್ಕ ಜಿಕೆವಿಕೆಗೆ ಇದೆ. ಈ ಹಿನ್ನೆಲೆಯಲ್ಲಿ ರೈತರ ಫಸಲಿಗನುಸಾರವಾಗಿ ಮಾರುಕಟ್ಟೆಯ ಲಿಂಕ್‌ ಮಾಡಿಕೊಳ್ಳುವ ವ್ಯವಸ್ಥೆ ಸುಲಭವಿದ್ದು, ರೈತರು ಉಪಯೋಗ ಪಡೆದುಕೊಳ್ಳಬಹುದಾಗಿದೆ. ಸಂಸ್ಥೆಗಳಿಂದ ಬೇಡಿಕೆ ಸಣ್ಣ ಹಳ್ಳಿಯೊಂದರ ಗುಂಪೊಂದು ಕರೆ ಮೂಲಕ ಬೇಡಿಕೆ ಪ್ರಮಾಣ ಬುಕ್‌ ಮಾಡಿ, ಆನ್‌ಲೈನ್‌ ಮೂಲಕ ಹಣ ಪಾವತಿಸಿದ ಕೆಲವೇ ದಿನಗಳಲ್ಲಿ ಅವರಿಗೆ ಬಿತ್ತನೆ ಬೀಜ ಲಭಿಸುತ್ತದೆ. ಈ ವ್ಯವಸ್ಥೆ ಕೇವಲ ರೈತರು ಮಾತ್ರವಲ್ಲದೆ ಎಫ್‌ಪಿಒಗಳು, ಹೊರ ರಾಜ್ಯದ ಖಾಸಗಿ ಹೋಲ್‌ಸೇಲ್‌ ಕಂಪನಿಗಳಿಗೂ ಸೌಕರ್ಯ ಕಲ್ಪಿಸಲಾಗುತ್ತಿದೆ. ಹೀಗಾಗಿ, ಕರ್ನಾಟಕ ಸ್ಟೇಟ್‌ ಸೀಡ್‌ ಕಾರ್ಪೊರೇಷನ್‌, ಕರ್ನಾಟಕ ಆಯಿಲ್‌ ಸೀಡ್‌ ಫೆಡರೇಷನ್‌ ಸೇರಿದಂತೆ ಸರಕಾರಿ, ಖಾಸಗಿ ಸಂಸ್ಥೆಗಳಿಂದ 8-10 ಸಾವಿರ ಕ್ವಿಂಟಲ್‌ ಬಿತ್ತನೆ ಬೀಜಕ್ಕೆ ಬೇಡಿಕೆ ಸೃಷ್ಟಿಯಾಗಿದೆ. ಜತೆಗೆ, ಆಂಧ್ರದ ಆದೋನಿ ಸೇರಿದಂತೆ ಮಹಾರಾಷ್ಟ್ರ, ರಾಜಾಸ್ಥಾನ್‌ನಿಂದಲೂ ಕೆಲ ಕಂಪನಿಗಳು ಬೇಡಿಕೆ ಇಡುತ್ತಿವೆ ಎಂದು ಜಿಕೆವಿಕೆ ಅಧಿಕಾರಿಗಳು ತಿಳಿಸಿದ್ದಾರೆ. ಸಹಾಯವಾಣಿ 9449866925 080-23620494 ಬೀಜ ಪೂರೈಕೆ ರಾಜ್ಯದ ಬೆಂಗಳೂರು ಗ್ರಾ, ಗದಗ, ಚಿತ್ರದುರ್ಗ, ಹಾಸನ ಸೇರಿದಂತೆ ಉಳಿದ ಕೆಲ ಜಿಲ್ಲೆಗಳಿಗೆ ರಾಗಿ, ತೊಗರಿ, ಸೂರ್ಯಕಾಂತಿ, ಶೇಂಗಾ, ಭತ್ತ, ಮೆಕ್ಕೇಜೋಳ ಸೇರಿದಂತೆ ಮತ್ತಿತರ ಬಿತ್ತನೆ ಬೀಜಗಳನ್ನು ಪೂರೈಕೆ ಮಾಡಲಾಗುತ್ತಿದ್ದು, ಹೊರ ರಾಜ್ಯಗಳಿಂದಲೂ ಬಂದ ಬೇಡಿಕೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ರಾಜ್ಯ ಮಾತ್ರವಲ್ಲದೆ ಆಂಧ್ರ, ತೆಲಂಗಾಣ, ತಮಿಳುನಾಡು ಸೇರಿದಂತೆ ಉತ್ತರದ ಕೆಲ ರಾಜ್ಯಗಳಿಂದಲೂ ಬೇಡಿಕೆ ಸೃಷ್ಟಿಯಾಗಿದೆ. ಟಿ.ಎಂ ರಮಣಪ್ಪ ರಾಷ್ಟ್ರೀಯ ಬೀಜ ಪ್ರಯೋಜನಾ ವಿಶೇಷಾಧಿಕಾರಿ ಲಾಕ್‌ಡೌನ್‌ ನಡುವೆ ರೈತರ ಉಪಯೋಗಕ್ಕೆಂದು ಮನೆ ಬಾಗಿಲಿಗೆ ಬಿತ್ತನೆ ಬೀಜ ವಿತರಣೆ ಆರಂಭಿಸಲಾಗಿದೆ. ಅಗತ್ಯವಿದ್ದರೆ ಮಾರುಕಟ್ಟೆ ಲಿಂಕಪ್‌ಗೆ ಸೂಕ್ತ ಸಲಹೆಗಳನ್ನು ಒದಗಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಡಾ.ರಾಜೇಂದ್ರ ಪ್ರಸಾದ್‌, ಕುಲಪತಿ, ಜಿಕೆವಿಕೆ.


from India & World News in Kannada | VK Polls https://ift.tt/2YdsUF3

ನನ್ನನ್ನು ತುಳಿಯಲೆಂದೇ ಕೆಲವರು ಇನ್ನಷ್ಟು ಪಂಚಮಸಾಲಿ ಮಠಗಳನ್ನು ಸ್ಥಾಪನೆ ಮಾಡುತ್ತಿದ್ದಾರೆ; ಕೂಡಲಸಂಗಮ ಶ್ರೀ

ದಾವಣಗೆರೆ: ನನ್ನನ್ನು ತುಳಿಯಲಿಕ್ಕೆಂದೇ ಉತ್ತರ ಕರ್ನಾಟಕದಲ್ಲಿ ಇನ್ನಷ್ಟು ಪಂಚಮಸಾಲಿ ಮಠಗಳನ್ನು ಕೆಲವರು ಸ್ಥಾಪನೆ ಮಾಡುತ್ತಿದ್ದಾರೆ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮಿ ಗಂಭೀರ ಆರೋಪ ಮಾಡಿದರು. ನಗರದ ತ್ರಿಶೂಲ್‌ ಕಲಾ ಭವನದಲ್ಲಿ ಗುರುವಾರ ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲು ನೀಡಲು ಆಗ್ರಹಿಸಿ ನಡೆದ ಪ್ರತಿಜ್ಞಾ ಪಂಚಾಯತ್ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. 2 ಎ ಮೀಸಲು ಹೋರಾಟ ಕೈಗೊಂಡ ನಂತರ ಅನೇಕ ಬೆಳವಣಿಗೆ ನಡೆಯುತ್ತಿವೆ, ನನ್ನನ್ನು ತುಳಿಯಲೆಂದೇ ಮಠಗಳನ್ನು ಸ್ಥಾಪಿಸುತ್ತಿದ್ದಾರೆ. ಇದಕ್ಕೆ ಹೆದರುವ ಪ್ರಶ್ನೆಯೇ ಇಲ್ಲ, ಪಂಚಮಸಾಲಿ ಎಂದರೆ ಯಾರನ್ನೂ ದ್ವೇಷಿಸುವುದಿಲ್ಲ ಮತ್ತು ಹೆದರುವುದಿಲ್ಲ. ನಾನು ಕಲ್ಲು ಮಣ್ಣಿನ ಮಠ ಕಟ್ಟುವ ಇಚ್ಚೆಯಿರುವ ಸ್ವಾಮೀಜಿ ಅಲ್ಲ, ಹಣ, ಆಸ್ತಿ ಗಳಿಸಿಲ್ಲ. ಜನರ, ಭಕ್ತರ ಪ್ರೀತಿ ಗಳಿಸಿದ್ದೇನೆ ಎಂದು ಯಾರ ಹೆಸರು ಹೇಳದೆ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮಿ ಹೇಳಿದರು. 2 ಎ ಮೀಸಲಾತಿ ನೀಡಲು ಒತ್ತಾಯಿಸಿ ರಾಜ್ಯಾದ್ಯಂತ ಸಂಚರಿಸುತ್ತಿದ್ದೇನೆ. ನಾನು ಕೂಡಲ ಸಂಗಮದಿಂದ ಪಾದಯಾತ್ರೆ ಆರಂಭಿಸಿದಾಗ ಅನೇಕ ಆಮಿಷಗಳು ಬಂದವು. ಕೇಳಿದಷ್ಟು ಹಣ ಕೊಡುತ್ತೇವೆ, ಕಾರು ಕೊಡುತ್ತೇವೆ ಹೋರಾಟ ನಿಲ್ಲಿಸಿ ಎಂದರು. ನಾನು ಓಡಿ ಹೋಗುವ ಸ್ವಾಮೀಜಿ ಅಲ್ಲ, ಯಾವ ಅಮಿಷಕ್ಕೂ ಬಲಿಯಾಗದೆ ಸಮುದಾಯದ ಮಕ್ಕಳಿಗೆ ಮೀಸಲು ಕೊಡಬೇಕು ಎಂದು ಹೋರಾಟ ಮಾಡುತ್ತಿದ್ದೇವೆ. ಇದೇ ಕಾರಣಕ್ಕೆ ಪಂಚಮಸಾಲಿ ಸಮಾಜದ ನಾಯಕರು ಕೂಡ ನಮ್ಮ ಜತೆಯಲ್ಲಿದ್ದಾರೆ. ಈ ನಂಬಿಕೆಯಿಂದಲೇ ಭಕ್ತರು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದಾರೆ ಎಂದರು. 2016 ರಲ್ಲಿ ಇಲ್ಲಿ ಕೆಲ ಯುವಕರು ಶ್ರೀ ಡಾ. ಮಹಾಂತ ಸ್ವಾಮೀಜಿ ಅವರ ಕಾರ್ಯಕ್ರಮ ಆಯೋಜಿಸಿ ತಮ್ಮನ್ನು ಆಹ್ವಾನಿಸಿದ್ದರು. ಆಗ ಕೆಲವರು ನನ್ನನ್ನು ಅವಮಾನಿಸಿ ರೇಣುಕಾ ಮಂದಿರದಿಂದ ಹೊರ ಹೋಗುವಂತೆ ಮಾಡಿದ್ದರು. ನಾನು ಇಲ್ಲಿದ್ದರೆ ದೊಡ್ಡ ಮಠಕ್ಕೆ ಸ್ವಾಮೀಜಿ ಆಗಬಹುದು, ದೊಡ್ಡ ಸ್ವಾಮೀಜಿ ಅವರೂ ನನ್ನನ್ನು ಹೊರ ಕಳುಹಿಸಿದ್ದರು. ಆಗ ನನ್ನನ್ನು ಬೆಳೆಸಿದ ದಲಿತ, ಹಿಂದುಳಿದ, ಮುಸ್ಲಿಂ ನಾಯಕರು ಆಕ್ರೋಶಗೊಂಡಿದ್ದರು ಎಂದು ನೆನೆದರು. ದಾವಣಗೆರೆಯಲ್ಲಿ ಕಾರ್ಯಕೇಂದ್ರ:ಇಲ್ಲಿಂದ ಹೊರಟಾಗ ಚಿಂದೋಡಿ ಲೀಲಾ ಅಮ್ಮನವರು ಒಂದು ಎಕರೆ ಜಮೀನು ನೀಡಿ ಇಲ್ಲಿಯೇ ಮಠ ಕಟ್ಟಲು ಹೇಳಿದ್ದರು. ಈಗ ಮಾಜಿ ಶಾಸಕ ಶಿವಶಂಕರ್‌ ಹೇಳಿದಂತೆ ಅವರ ಆಶಯದಂತೆ ಇಲ್ಲಿ ಒಂದು ಕಾರ್ಯ ಕೇಂದ್ರ ಆರಂಭಿಸುವುದಾಗಿ ಶ್ರೀಗಳು ಘೋಷಿಸಿದರು. ಭರವಸೆ ಕಾಲ ಬಂದಿದೆ:ಶಾಸಕ ಅರವಿಂದ್‌ ಬೆಲ್ಲದ್‌ ಮಾತನಾಡಿ, 2ಎ ಮೀಸಲಿಗೆ ನಾವು ಹೋರಾಟ ಮಾಡಿದ್ದೆವು, ಈಗ ಅದಕ್ಕೆ ಫಲ ದೊರೆಯಲಿದ್ದು ಭರವಸೆ ಕಾಲ ಬಂದಿದೆ. ಈಗಿರುವ ಶೇ. 50 ಮೀಸಲಾತಿಯಲ್ಲಿ ಯಾರಿಗೂ ತೊಂದರೆ ಆಗದಂತೆ ಪಂಚಮಸಾಲಿಗೆ 2 ಎ ಮೀಸಲು ನೀಡಲು ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಹಿಂದುಳಿದ ವರ್ಗಗಳ ಆಯೋಗದ ಆಧ್ಯಕ್ಷರ ಜತೆ ಚರ್ಚೆ ಮಾಡಿಯಾಗಿದೆ. ಏಕೆ 2ಎ ಮೀಸಲು ನೀಡಬೇಕು ಎನ್ನುವುದಕ್ಕೆ ಕುಲಶಾಸ್ತ್ರ ಅಧ್ಯಯನ ಆಗಬೇಕಿದೆ. ಶೀಘ್ರ ನಮಗೆ ಈ ಮೀಸಲು ಸೌಲಭ್ಯ ಸಿಗಲಿದೆ ಎಂದರು. ನಂದಿಗುಡಿ ನೊಣಬ ಪೀಠದ ಶ್ರೀ ಸಿದ್ಧರಾಮೇಶ್ವರ ಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್‌, ಮಾಜಿ ಶಾಸಕ ಶಿವಶಂಕರ್‌, ಮಾಜಿ ಮೇಯರ್‌ ಅಜಯ್‌ ಕುಮಾರ್‌, ಮಹಿಳಾ ನಾಯಕಿ ವೀಣಾ ಕಾಶಪ್ಪನವರ್‌, ಮುಖಂಡರಾದ ಸುಭಾಶ್‌ಚಂದ್ರ, ಬಕ್ಕೇಶ್‌ ಸೇರಿದಂತೆ ರಾಜ್ಯದ ನಾನಾ ಭಾಗದ ಪಂಚಮಸಾಲಿ ಸಮಾಜದ ನಾಯಕರು ಇದ್ದರು.


from India & World News in Kannada | VK Polls https://ift.tt/2WrdVX4

ರಾಜ್ಯದಲ್ಲಿ ಕೊರೊನಾ ತಗ್ಗಿದ ಬೆನ್ನಲ್ಲೇ ಡೆಂಗ್ಯೂ ಡಂಗುರ; ಮಳೆ ಕಡಿಮೆಯಾದರೆ ಸೋಂಕು ಇಳಿಕೆ!

ಮಹಾಬಲೇಶ್ವರ ಕಲ್ಕಣಿ, ಬೆಂಗಳೂರು ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್‌ ತಗ್ಗಿದ ಬೆನ್ನಲ್ಲೇ ಹಲವು ಜಿಲ್ಲೆಗಳಲ್ಲಿ ಪ್ರಕರಣಗಳ ಸಂಖ್ಯೆ ಅಧಿಕವಾಗಿದೆ. ಕಳೆದ ಒಂದು ವಾರದಲ್ಲಿ 293 ಡೆಂಗೆ ಪ್ರಕರಣಗಳು ದೃಢಪಟ್ಟಿದ್ದು, ಈ ಮೂಲಕ ರಾಜ್ಯದಲ್ಲಿ ಡೆಂಗೆ ಪ್ರಕರಣಗಳ ಸಂಖ್ಯೆ 3,572ಕ್ಕೆ ಏರಿಕೆಯಾಗಿದೆ. ಇದೇ ವೇಳೆ ರಾಜ್ಯದಲ್ಲಿ ಈವರೆಗೆ 1,187 ಚಿಕೂನ್‌ಗುನ್ಯಾ ಪ್ರಕರಣಗಳು ದೃಢಪಟ್ಟಿವೆ. ಮಳೆ ನೀರು ಸಂಗ್ರಹವಾಗುವಲ್ಲಿ, ಸ್ವಚ್ಛತೆ ಇಲ್ಲದ ಕಡೆ ಡೆಂಗೆ ಸೋಂಕು ಅಧಿಕವಾಗಿರುತ್ತದೆ. ಬಿಬಿಎಂಪಿ ಹೊರತು ಪಡಿಸಿದರೆ ಕಲಬುರಗಿ ಜಿಲ್ಲೆಯಲ್ಲಿ ಅಧಿಕ ಸೋಂಕಿತ ಪ್ರಕರಣಗಳು ದಾಖಲಾಗಿವೆ. ಇದುವರೆಗೆ ಕಲಬುರಗಿಯಲ್ಲಿ 321, ಉಡುಪಿಯಲ್ಲಿ 312 ಹಾಗೂ ಶಿವಮೊಗ್ಗದಲ್ಲಿ 260 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ನೆಮ್ಮದಿಯ ಸಂಗತಿ ಎಂದರೆ ಇದುವರೆಗೆ ಡೆಂಗ್ಯೂ ಜ್ವರದಿಂದ ಯಾರೂ ಮೃತಪಟ್ಟಿಲ್ಲ ಎನ್ನುವುದು. ರಾಜ್ಯದಲ್ಲಿ ಕಳೆದ ವರ್ಷ 3,823 ಡೆಂಗ್ಯೂ ಪ್ರಕರಣಗಳು ವರದಿಯಾಗಿದ್ದು, ಐವರು ಮೃತಪಟ್ಟಿದ್ದರು. ''ಸದ್ಯ ಎಲ್ಲಾಕಡೆ ಮಳೆ ಬೀಳುತ್ತಿರುವುದರಿಂದ, ನಿಂತ ಮಳೆ ನೀರಿನಿಂದ ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ಈಡಿಸ್‌ ಸೊಳ್ಳೆ ಕಚ್ಚುವುದರಿಂದ ಡೆಂಗೆ ಉಂಟಾಗುತ್ತದೆ. ಶುದ್ಧ ನೀರಿನಲ್ಲಿ ಇದು ಸಂತಾನೋತ್ಪತ್ತಿ ಮಾಡುತ್ತದೆ. ಮನೆಯ ಅಕ್ಕಪಕ್ಕ ಸೊಳ್ಳೆಗಳ ಸಂತಾನೋತ್ಪತ್ತಿ ಆಗದ ರೀತಿಯಲ್ಲಿ ನೋಡಿಕೊಳ್ಳಬೇಕು. ಬೆಳಗಿನ ಜಾವದಲ್ಲಿ ಇದು ಕಡಿಯುವುದು ಜಾಸ್ತಿ. ಹಾಗಾಗಿ ಬೆಳಗಿನ ಹೊತ್ತಲ್ಲಿ ಸೊಳ್ಳೆ ಕಡಿಯದಂತೆ ಜಾಗ್ರತೆ ವಹಿಸಬೇಕು. ಮಳೆ ಕಡಿಮೆಯಾದರೆ ಡೆಂಗೆ ಸೋಂಕು ಕಡಿಮೆಯಾಗುತ್ತದೆ. ಈ ಒಂದು ತಿಂಗಳು ಡೆಂಗೆ ಬಗ್ಗೆ ಹೆಚ್ಚು ಮುತುವರ್ಜಿ ವಹಿಸಬೇಕು. ಮುಂದಿನ ತಿಂಗಳಿಂದ ಸೋಂಕು ನಿಯಂತ್ರಣಕ್ಕೆ ಬರಲಿದೆ,'' ಎನ್ನುತ್ತಾರೆ ಡಾ. ಮಂಜುನಾಥ್‌ ನಾಯ್ಕ್. ಭಯ ಬೇಡ ಚಿಕಿತ್ಸೆಗೆ ಒಳಗಾಗಿ ಬಹಳಷ್ಟು ಜನರು ಕೋವಿಡ್‌ ಭಯದಿಂದ ಆಸ್ಪತ್ರೆಗೆ ಬರುವುದಕ್ಕೆ ಹಿಂಜರಿಯುತ್ತಿದ್ದಾರೆ. ಕೋವಿಡ್‌ ಲಕ್ಷಣಗಳು ಕಂಡುಬಂದಲ್ಲಿ ಕ್ವಾರಂಟೈನ್‌ ಆಗಬೇಕೆಂಬ ಆತಂಕದಿಂದ ಜ್ವರದ ಲಕ್ಷಣಗಳು ಕಂಡು ಬಂದಾಕ್ಷಣ ಆಸ್ಪತ್ರೆಗೆ ಬರುತ್ತಿಲ್ಲ. ಇದರಿಂದ ರಾಜ್ಯದ ಎಲ್ಲಾ ಆಸ್ಪತ್ರೆಗಳು ವೈರಲ್‌ ಜ್ವರದ ರೋಗಿಗಳಿಂದ ತುಂಬಿ ತುಳುಕುತ್ತಿವೆ. ಜತೆಗೆ ಡೆಂಗ್ಯೂ ಮತ್ತು ಚಿಕೂನ್‌ಗೂನ್ಯ ರೋಗಿಗಳು ಕೂಡ ಇದರಲ್ಲಿ ಸೇರಿಕೊಂಡಿದ್ದಾರೆ. ತಕ್ಷಣ ಚಿಕಿತ್ಸೆ ಪಡೆಯದೇ ಇರುವುದರಿಂದ ಆಸ್ಪತ್ರೆಗಳಲ್ಲಿ ಅನ್ಯ ಕಾಯಿಲೆ ರೋಗಿಗಳು ಅಧಿಕವಾಗಿದ್ದಾರೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯದಿದ್ದರೆ ಕೋವಿಡ್‌ ಸೋಂಕಿಗಿಂತ ಡೆಂಗೆ ಹೆಚ್ಚು ಅಪಾಯಕಾರಿ ಎನ್ನುತ್ತಾರೆ ವೈದ್ಯರು. ಅತಿಹೆಚ್ಚು ಸೋಂಕಿಗೆ ತುತ್ತಾದ ಜಿಲ್ಲೆಗಳು
  • ಕಲಬುರಗಿ - 321
  • ಉಡುಪಿ - 312
  • ಶಿವಮೊಗ್ಗ -260
  • ದಕ್ಷಿಣ ಕನ್ನಡ - 192
  • ಕೊಪ್ಪಳ -175
  • ಬಿಬಿಎಂಪಿ - 540
ಕಳೆದ ನಾಲ್ಕು ದಿನದಲ್ಲಿ ಡೆಂಗ್ಯೂಗೆ ತುತ್ತಾದವರು
  • ಸೆ.27- 3,427
  • ಸೆ.28 - 3,511
  • ಸೆ.29 -3,556
  • ಸೆ.30 - 3,572


from India & World News in Kannada | VK Polls https://ift.tt/39UEUxu

ಕೋವಿಡ್‌ನಿಂದ ದುಡಿಯುವ ವ್ಯಕ್ತಿಯನ್ನು ಕಳೆದುಕೊಂಡ ಬಿಪಿಎಲ್‌ ಕುಟುಂಬದವರಿಗೆ 1.50 ಲಕ್ಷ ರೂ. ಪರಿಹಾರ; ಆರ್ ಅಶೋಕ್

ಬೆಂಗಳೂರು: ಸುಮಾರು 12 ದಿನ ಸತತ ಮಳೆಯಿಂದಾಗಿ ಸೆ.30ರೊಳಗೆ ಎಲ್ಲ ಪ್ರಮುಖ ರಸ್ತೆಗಳಲ್ಲಿನ ರಸ್ತೆ ಗುಂಡಿ ದುರಸ್ತಿ ಕಾರ್ಯಕ್ಕೆ ಹಿನ್ನಡೆಯಾಗಿದೆ. ಇನ್ನು 10 ದಿನದಲ್ಲಿ ಬೆಂಗಳೂರಿನ ಎಲ್ಲ ಪ್ರಮುಖ ರಸ್ತೆಗಳನ್ನು ಗುಂಡಿ ಮುಕ್ತಗೊಳಿಸಲಾಗುವುದು ಎಂದು ಸಚಿವ ಆರ್‌.ಅಶೋಕ್‌ ಹೇಳಿದರು. ವಿಧಾನಸೌಧದಲ್ಲಿ ಗುರುವಾರ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ಗುಪ್ತ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ 1344 ಕಿ.ಮೀ ಉದ್ದದ ಆರ್ಟಿರಿಯಲ್‌, ಸಬ್‌ ಆರ್ಟಿರಿಯಲ್‌ ರಸ್ತೆಯಿದ್ದು, ಇದರಲ್ಲಿ 295 ಕಿ.ಮೀ ಉದ್ದದ ರಸ್ತೆ ಸುಸ್ಥಿತಿಯಲ್ಲಿದೆ. 449 ಕಿ.ಮೀ ಉದ್ದದ ಮಾರ್ಗ ಹಾಳಾಗಿದ್ದು, ಈ ಪೈಕಿ 246 ಕಿ.ಮೀ ಉದ್ದದ ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ. ಮುಂದಿನ 10 ದಿನದೊಳಗೆ ಪ್ರಮುಖ ರಸ್ತೆಗಳ ಎಲ್ಲ ಗುಂಡಿ ದುರಸ್ತಿಗೆ ಕ್ರಮ ವಹಿಸಲಾಗುವುದು. ನಿತ್ಯ 30 ಲೋಡ್‌ನಷ್ಟು ಜಲ್ಲಿ, ಹಾಟ್‌ ಮಿಕ್ಸ್‌ ಪೂರೈಸಿ ದುರಸ್ತಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು. ಇನ್ನೂ ಒಳ ರಸ್ತೆಗಳ ದುರಸ್ತಿಗೆ ಪ್ರತಿ ವಾರ್ಡ್‌ಗೆ 20 ಲಕ್ಷ ರೂ. ಅನುದಾನ ಬಳಸಿಕೊಂಡು ವಾರ್ಡ್‌ನ ಸ್ಥಳೀಯ ಗುತ್ತಿಗೆದಾರರ ಕಡೆಯಿಂದಲೇ ದುರಸ್ತಿಪಡಿಸಲಾಗುವುದು. ಒಳ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯವನ್ನು 25 ದಿನದೊಳಗೆ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದರು. ಬಿಬಿಎಂಪಿಗೆ ಸೇರ್ಪಡೆಯಾದ 110 ಹಳ್ಳಿಗಳಲ್ಲಿ ಕುಡಿಯುವ ನೀರು, ಒಳಚರಂಡಿ ಕೊಳವೆ ಅಳವಡಿಕೆ ಕಾಮಗಾರಿಯಿಂದ ರಸ್ತೆಗಳು ಹಾಳಾಗಿವೆ. ಡಾಂಬರೀಕರಣಕ್ಕೆ ಮುಖ್ಯಮಂತ್ರಿಗಳು 1000 ಕೋಟಿ ರೂ. ನೀಡಿದ್ದು, ಟೆಂಡರ್‌ ಪ್ರಕ್ರಿಯೆ ಮುಗಿಸಿ ಕಾರ್ಯಾದೇಶ ನೀಡಲಾಗುತ್ತಿದೆ. 30 ದಿನದೊಳಗೆ 110 ಹಳ್ಳಿ ಪ್ರದೇಶಗಳಲ್ಲಿ ಡಾಂಬರೀಕರಣ ಕಾರ್ಯ ಆರಂಭವಾಗಲಿದೆ. ಡಾಂಬರೀಕರಣದ ನಂತರ 3 ವರ್ಷದಲ್ಲಿ ರಸ್ತೆ ಗುಂಡಿ ಸೃಷ್ಟಿಯಾದರೆ, ಕಳಪೆ ಗುಣಮಟ್ಟದ ಕಾಮಗಾರಿ ಕಂಡುಬಂದರೆ ಸಂಬಂಧಪಟ್ಟ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. 15 ಸಾವಿರ ಮಂದಿ ಸಾವು:ಬಿಬಿಎಂಪಿ ವ್ಯಾಪ್ತಿಯಲ್ಲಿ 15,000 ಮಂದಿ ಕೋವಿಡ್‌ನಿಂದ ಮೃತಪಟ್ಟಿರುವ ಮಾಹಿತಿಯಿದೆ. ಮೃತರ ವಾರಸುದಾರರು ವಾರ್ಡ್‌ ಕಚೇರಿಗಳಲ್ಲಿ ಅರ್ಜಿ ಪಡೆದು ಸಲ್ಲಿಸುತ್ತಿದ್ದಂತೆ ಪರಿಹಾರ ವಿತರಿಸಲಾಗುವುದು. ಕೋವಿಡ್‌ನಿಂದ ದುಡಿಯುವ ವ್ಯಕ್ತಿಯನ್ನು ಕಳೆದುಕೊಂಡ ಬಿಪಿಎಲ್‌ ಕುಟುಂಬದವರಿಗೆ ರಾಜ್ಯ ಸರಕಾರದ ಒಂದು ಲಕ್ಷ ರೂ. ಹಾಗೂ ಕೇಂದ್ರ ಸರಕಾರದ ಎಸ್‌ಡಿಆರ್‌ಎಫ್‌ ನಿಧಿಯಿಂದ 50,000 ರೂ. ಪರಿಹಾರ ವಿತರಿಸಲಾಗುವುದು. ಬಸವನಗುಡಿಯ ನ್ಯಾಷನಲ್‌ ಕಾಲೇಜಿನಲ್ಲಿ ಕಾರ್ಯಕ್ರಮ ಆಯೋಜಿಸಿ ಪರಿಹಾರ ವಿತರಿಸಲು ಚಿಂತಿಸಲಾಗಿದೆ. ಬೆಂಗಳೂರಿನಲ್ಲಿ 15 ದಿನದೊಳಗೆ ಎಲ್ಲರಿಗೂ ಪರಿಹಾರ ವಿತರಿಸಲು ಪ್ರಯತ್ನಿಸಲಾಗುವುದು ಎಂದು ಸಚಿವ ಆರ್‌.ಅಶೋಕ್‌ ಹೇಳಿದರು. ಕೆಲ ಉಸ್ತುವಾರಿ ವಹಿಸಿದ್ದಾರೆಬೆಂಗಳೂರಿನಲ್ಲಿ ಮಳೆ ಹಾಗೂ ಕೋವಿಡ್‌ ನಿರ್ವಹಣೆ, ನಗರೋತ್ಥಾನ ಯೋಜನೆಗೆ ಸಂಬಂಧಪಟ್ಟಂತೆ ಮುಖ್ಯಮಂತ್ರಿಗಳು ನನಗೆ ಉಸ್ತುವಾರಿ ವಹಿಸಿದ್ದಾರೆ. ಎಲ್ಲ ಸಚಿವರಿಗೂ ಜಿಲ್ಲಾ ಉಸ್ತುವಾರಿಯನ್ನು ಶೀಘ್ರದಲ್ಲೇ ವಹಿಸಲಿದ್ದಾರೆ ಎಂದು ಆರ್‌.ಅಶೋಕ್‌ ತಿಳಿಸಿದರು. ಶಿಥಿಲಾವಸ್ಥೆಯ 175 ಕಟ್ಟಡ ತೆರವಿಗೆ ಕ್ರಮ: ಈ ಹಿಂದೆ 2019ರಲ್ಲಿನಡೆದ ಸಮೀಕ್ಷೆಯಲ್ಲಿ185 ಶಿಥಿಲಾವಸ್ಥೆಯ ಕಟ್ಟಡಗಳನ್ನು ಗುರುತಿಸಲಾಗಿದ್ದು, ಈವರೆಗೆ 10 ಕಟ್ಟಡಗಳನ್ನು ನೆಲಸಮಗೊಳಿಸಲಾಗಿದೆ. ಬಾಕಿ 175 ಕಟ್ಟಡಗಳ ಮಾಲೀಕರಿಗೆ ನೋಟಿಸ್‌ ನೀಡಿ ವಾರದ ಗಡುವು ನೀಡಬೇಕು. ನಂತರ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿ, ಸ್ಥಳೀಯ ಪೊಲೀಸರ ನೆರವಿನೊಂದಿಗೆ ಆ ಕಟ್ಟಡ ತೆರವುಗೊಳಿಸಲು ಸೂಚಿಸಲಾಗಿದೆ ಎಂದು ಹೇಳಿದರು. ಶಿಥಿಲಾವಸ್ಥೆಯ ಕಟ್ಟಡಗಳನ್ನು ಮಾಲೀಕರು ತೆರವುಗೊಳಿಸದಿದ್ದರೆ ಪಾಲಿಕೆ ವತಿಯಿಂದಲೇ ತೆರವುಗೊಳಿಸಲಾಗುವುದು. ಆ ವೆಚ್ಚವನ್ನು ಆಸ್ತಿದಾರರ ಆಸ್ತಿ ತೆರಿಗೆ ಮೊತ್ತಕ್ಕೆ ಸೇರ್ಪಡೆ ಮಾಡಿ ವಸೂಲಿ ಮಾಡುವಂತೆಯೂ ಸೂಚಿಸಲಾಗಿದೆ. 2019ರ ಬಳಿಕ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಪತ್ತೆಗೆ ಹೊಸ ಸರ್ವೆಗೆ ಸೂಚನೆ ನೀಡಲಾಗಿದೆ. ಹೊಸದಾಗಿ ಬಹುಮಹಡಿ ಕಟ್ಟಡ ನಿರ್ಮಾಣ ಸಂದರ್ಭದಲ್ಲಿಸುತ್ತಮುತ್ತಲಿನ ಕಟ್ಟಡಗಳಿಗೆ ಹಾನಿಯಾಗದಂತೆ ಸುರಕ್ಷಿತ ತಡೆಗೋಡೆ ನಿರ್ಮಾಣ ಸೇರಿದಂತೆ ಇತರೆ ಮುನ್ನೆಚ್ಚರಿಕೆ ಕ್ರಮ ವಹಿಸಲು ಮೇಲ್ವಿಚಾರಣೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು,'ಧಿ' ಎಂದು ತಿಳಿಸಿದರು. ಸಾರ್ವಜನಿಕರೇ ಮಾಹಿತಿ ನೀಡಿ:ಬೆಂಗಳೂರಿನಲ್ಲಿ ಶಿಥಿಲಾವಸ್ಥೆಯ ಕಟ್ಟಡಗಳಿದ್ದರೆ ಸಾರ್ವಜನಿಕರು ದೂರು ನೀಡಬಹುದು. ತಮ್ಮ ಅಕ್ಕ- ಪಕ್ಕದ ಮನೆ ಶಿಥಿಲಗೊಂಡಿದ್ದರೆ ಆ ಬಗ್ಗೆ ಮಾಹಿತಿ ನೀಡಬಹುದು. ಪಾಲಿಕೆ ಅಧಿಕಾರಿಗಳು ಸ್ಪಂದಿಸದಿದ್ದರೆ ನನಗೆ ಮಾಹಿತಿ ನೀಡಿದರೆ ಕೂಡಲೇ ಅಂತಹ ಕಟ್ಟಡಗಳ ಪರಿಶೀಲನೆಗೆ ಸೂಚನೆ ನೀಡಲಾಗುವುದು ಎಂದು ಹೇಳಿದರು. ಈ ವೇಳೆ ಬಿಬಿಎಂಪಿ ವಿಶೇಷ ಆಯುಕ್ತ(ಯೋಜನೆ) ಮನೋಜ್‌ ಜೈನ್‌, ಪ್ರಧಾನ ಎಂಜಿನಿಯರ್‌ ಪ್ರಭಾಕರ್‌ ಉಪಸ್ಥಿತರಿದ್ದರು. ವಿಶೇಷ ಪ್ಯಾಕೇಜ್‌ ಘೋಷಣೆ ನಗರವನ್ನು ಇನ್ನಷ್ಟು ಸುಂದರಗೊಳಿಸುವ ಜತೆಗೆ ಸುಧಾರಿತ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 15 ದಿನದೊಳಗೆ ವಿಶೇಷ ಪ್ಯಾಕೇಜ್‌ ಘೋಷಿಸಲಿದ್ದಾರೆ ಎಂದ ಸಚಿವ ಆರ್‌.ಅಶೋಕ್‌, ಬಿಬಿಎಂಪಿ ಚುನಾವಣೆ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿದ್ದು, ಆ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿದರು.


from India & World News in Kannada | VK Polls https://ift.tt/2Yh4pqz

ಮಂಜೂರಾಗದ 'ಶಿಶುಪಾಲನಾ ರಜೆ'; ಶಿಕ್ಷಕಿಯರು, ಉಪನ್ಯಾಸಕಿಯರಿಗೆ ರಜೆ ಸೌಲಭ್ಯ ನಿರಾಕರಣೆ!

ಜಯಂತ್‌ ಗಂಗವಾಡಿ ಬೆಂಗಳೂರುಬೆಂಗಳೂರು: ಮಹಿಳಾ ನೌಕರರಿಗೆ ''ಯನ್ನು ಮಂಜೂರು ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದ್ದರೂ, ಸಾರ್ವಜನಿಕ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಈ ಸೌಲಭ್ಯವನ್ನು ಜಾರಿಗೊಳಿಸದೆ ನಿರ್ಲಕ್ಷ್ಯ ಮಾಡಲಾಗಿದೆ. ರಾಜ್ಯಾದ್ಯಂತ ಬಹುತೇಕ ಜಿಲ್ಲೆಗಳಲ್ಲಿ ಸರಕಾರಿ ಶಾಲಾ ಶಿಕ್ಷಕಿಯರು ಮತ್ತು ಸರಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕಿಯರು 'ಶಿಶುಪಾಲನಾ 'ಗಾಗಿ ಅರ್ಜಿ ಸಲ್ಲಿಸಿದರೆ, ಮೇಲಧಿಕಾರಿಗಳು ರಜೆ ಮಂಜೂರು ಮಾಡುತ್ತಿಲ್ಲ. ಇತ್ತ, ಬೆಂಗಳೂರು ದಕ್ಷಿಣ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು, ''ಶಿಶುಪಾಲನಾ ರಜೆಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಆಯುಕ್ತಾಲಯದಿಂದ ಯಾವುದೇ ನಿರ್ದೇಶನ ಬಂದಿಲ್ಲ. ಹೀಗಾಗಿ, ಸರಕಾರದ ಆದೇಶವನ್ನು 'ರದ್ದು'ಪಡಿಸಲಾಗಿದೆ,'' ಎಂದು ಸುತ್ತೋಲೆ ಹೊರಡಿಸಿದ್ದಾರೆ. ಶಿಕ್ಷಣ ಇಲಾಖೆಯಲ್ಲಿಆದೇಶ ಜಾರಿಯಿಲ್ಲ ಸರಕಾರದ ಶಿಶುಪಾಲನಾ ರಜೆಯ ಆದೇಶವನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆಯನ್ನು ಹೊರತುಪಡಿಸಿ ಬೇರೆ ಎಲ್ಲಾಇಲಾಖೆಗಳಲ್ಲೂ ಜಾರಿಗೊಳಿಸಲಾಗಿದೆ. ಶಿಕ್ಷಕಿಯರು ಮತ್ತು ಉಪನ್ಯಾಸಕಿಯರು ಶಿಶುಪಾಲನಾ ರಜೆ ಕೋರಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಡಿಡಿಪಿಐ ಹಾಗೂ ಡಿಡಿಪಿಯುಗಳಿಗೆ ಅರ್ಜಿ ಸಲ್ಲಿಸಿದರೆ, ರಜೆ ಮಂಜೂರು ಮಾಡದೆ ನಿರಾಕರಿಸಲಾಗುತ್ತಿದೆ. ಅಧಿಕಾರಿಗಳ ಸಬೂಬು ಏಕೆ? ರಾಜ್ಯ ಸರಕಾರಿ ನೌಕರರಲ್ಲಿ ಅತಿಹೆಚ್ಚು ನೌಕರರನ್ನು ಹೊಂದಿರುವುದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ. ಇಲ್ಲಿ ಕಾರ್ಯನಿರ್ವಹಿಸುತ್ತಿರುವವರಲ್ಲಿ ಶಿಕ್ಷಕಿಯರು ಮತ್ತು ಉಪನ್ಯಾಸಕಿಯರ ಸಂಖ್ಯೆ ಹೆಚ್ಚಿದೆ. ಹೀಗಾಗಿ, ಸರಕಾರ ನೀಡಿರುವ ಶಿಶುಪಾಲನಾ ರಜೆಯ ಸೌಲಭ್ಯವನ್ನು ಉಪಯೋಗಿಸಿಕೊಂಡು ಎಲ್ಲ ಶಿಕ್ಷಕಿಯರು ಮತ್ತು ಉಪನ್ಯಾಸಕಿಯರು ಒಮ್ಮೆಗೆ ರಜೆ ಹಾಕಿದರೆ ಕಷ್ಟ. ಶೈಕ್ಷಣಿಕ ಚಟುವಟಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬುದು ಅಧಿಕಾರಿಗಳ ವಾದ. ಈ ಸಂಬಂಧ 'ವಿಕ'ದೊಂದಿಗೆ ಮಾತನಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ಆರ್‌.ವಿಶಾಲ್‌ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಆರ್‌.ಸ್ನೇಹಲ್‌, ''ಶಿಕ್ಷಕಿಯರು ಮತ್ತು ಉಪನ್ಯಾಸಕಿಯರಿಗೆ ಶಿಶುಪಾಲನಾ ರಜೆ ಮಂಜೂರಾತಿ ಕುರಿತು ಸಮಸ್ಯೆಯಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳಲಾಗುವುದು,'' ಎಂದಿದ್ದಾರೆ. ಏನಿದು ರಜೆ ಸಂಗತಿ?ಬುದ್ಧಿಮಾಂದ್ಯ ಮತ್ತು ವಿಶೇಷಚೇತನ ಮಕ್ಕಳನ್ನು ನೋಡಿಕೊಳ್ಳಲು ರಾಜ್ಯ ಸರಕಾರವು ಮಹಿಳಾ ನೌಕರರಿಗೆ ವೈದ್ಯಕೀಯ ಮಂಡಳಿ ಪ್ರಮಾಣ ಪತ್ರದ ಆಧಾರದ ಮೇಲೆ ಒಂದು ವರ್ಷದಲ್ಲಿ ಮೂರು ಕಂತುಗಳಿಗೆ ಮೀರದಂತೆ ಹಾಗೂ 15 ದಿನಗಳಿಗೆ ಕಡಿಮೆಯಿಲ್ಲದಂತೆ ಇಡೀ ಸೇವಾವಲಯಲ್ಲಿ 2 ವರ್ಷಗಳ ಅವಧಿಗೆ(730 ದಿನ) ಶಿಶುಪಾಲನಾ ರಜೆಯನ್ನು 2011ರಲ್ಲಿ ಮಂಜೂರು ಮಾಡಿತ್ತು. ಇದೇ ಮಾದರಿಯಲ್ಲಿ ಉಳಿದ ಎಲ್ಲಾ ಮಹಿಳಾ ನೌಕರರಿಗೆ ಶಿಶುಪಾಲನಾ ರಜೆ ನೀಡುವುದಾಗಿ 2021-22ನೇ ಸಾಲಿನ ಆಯವ್ಯಯದಲ್ಲಿ ಸರಕಾರ ಘೋಷಿಸಿತ್ತು. ರಾಜ್ಯ ಸರಕಾರಿ ಮಹಿಳಾ ನೌಕರರಿಗೆ ಇಡೀ ಸೇವಾವಧಿಯಲ್ಲಿ ಗರಿಷ್ಠ 6 ತಿಂಗಳವರೆಗೆ ಅಂದರೆ, 180 ದಿನಗಳ 'ಶಿಶುಪಾಲನಾ ರಜೆ' ಮಂಜೂರು ಮಾಡಿ ಜೂ.21ರಂದು ಆದೇಶಿಸಿತ್ತು. ಸರಕಾರಿ ಮಹಿಳಾ ನೌಕರರು ಹೊಂದಿರುವ ಮಕ್ಕಳ ಸಂಖ್ಯೆಯನ್ನು ಪರಿಗಣಿಸದೆ, ಅತ್ಯಂತ ಕಿರಿಯ ಮಗುವು 18 ವರ್ಷ ತಲುಪುವವರೆಗಿನ ಅವಧಿಗೆ ಈ ಸೌಲಭ್ಯವನ್ನು ಸರಕಾರ ನೀಡಿದೆ. ಬೇರೆ ಎಲ್ಲ ಇಲಾಖೆಗಳಲ್ಲಿ ಶಿಶುಪಾಲನಾ ರಜೆ ಮಂಜೂರಾತಿ ಆದೇಶ ಜಾರಿಗೊಳಿಸಲಾಗಿದೆ. ಶಿಕ್ಷಣ ಇಲಾಖೆಯಲ್ಲಿ ಸ್ಪಲ್ಪ ಗೊಂದಲ ಉಂಟಾಗಿದೆ. ಶೀಘ್ರ ಈ ಸಮಸ್ಯೆಗೆ ಪರಿಹಾರ ಸಿಗಲಿದೆ. ಸಿ.ಎಸ್‌.ಷಡಾಕ್ಷರಿ, ಅಧ್ಯಕ್ಷ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ


from India & World News in Kannada | VK Polls https://ift.tt/3D28cGV

'ಕಾಂಗ್ರೆಸ್‌ನಲ್ಲಿ ಇರಲ್ಲ, ಬಿಜೆಪಿ ಸೇರಲ್ಲ' - ಅಮರಿಂದರ್‌ ಸಿಂಗ್‌ ಮುಂದಿರುವ ಆಯ್ಕೆಯೇನು?

ಚಂಡೀಗಢ: ಪಂಜಾಬ್‌ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಅವರು, ''ಕಾಂಗ್ರೆಸ್‌ನಲ್ಲಂತೂ ಇರಲ್ಲ, ಬಿಜೆಪಿಯನ್ನೂ ಸೇರಲ್ಲ,'' ಎಂದು ಹೇಳುವ ಮೂಲಕ ತಮ್ಮ ಮುಂದಿನ ರಾಜಕೀಯ ನಡೆ ಕುರಿತು ಕುತೂಹಲ ಕೆರಳಿಸಿದ್ದಾರೆ. ಮೂರು ದಿನಗಳ ಹೊಸದಿಲ್ಲಿ ಪ್ರವಾಸದಲ್ಲಿರುವ ಅಮರಿಂದರ್‌ ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ. ಈ ಇಬ್ಬರ ಜತೆಗಿನ ಭೇಟಿಯಿಂದಾಗಿ ಕ್ಯಾಪ್ಟನ್‌ ಕಮಲ ಪಾಳಯದ ಕೈ ಹಿಡಿಯುವುದು ಖಚಿತ ಎನ್ನಲಾಗಿತ್ತು. ಅವರನ್ನು ಕೇಂದ್ರ ಸಂಪುಟಕ್ಕೆ ಸೇರಿಸಿಕೊಂಡು ಕೃಷಿ ಖಾತೆ ನೀಡಲು ಚಿಂತಿಸಿದೆ ಎಂದೂ ಹೇಳಲಾಗಿತ್ತು. ಆದರೆ ಬಿಜೆಪಿ ಸೇರ್ಪಡೆ ಸಾಧ್ಯತೆಯನ್ನು ಅಮರಿಂದರ್‌ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ''ಸಿಧು ಸೋಲಿಸುವುದೇ ನನ್ನ ಗುರಿ,'' ಎಂದಿದ್ದ ಅಮರಿಂದರ್‌ ಅವರ ಮುಂದಿನ ನಡೆ ಬಿಜೆಪಿಗೆ ಪೂರಕವಾಗಿ ಇರಲಿದೆ ಎಂದು ಹೇಳಲಾಗುತ್ತಿದೆ. ''ನಾನು ಸದ್ಯ ಕಾಂಗ್ರೆಸ್‌ನಲ್ಲಿದ್ದೇನೆ. ಹೆಚ್ಚು ದಿನ ಪಕ್ಷದಲ್ಲಿ ಮುಂದುವರಿಯಲಾರೆ. ಸೂಕ್ತ ಸಮಯದಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡುತ್ತೇನೆ,'' ಎಂದು ಕ್ಯಾ.ಅಮರಿಂದರ್‌ ಸಿಂಗ್‌ ಘೋಷಿಸಿದ್ದಾರೆ. ಬೆನ್ನಲ್ಲಿಯೇ, ತಮ್ಮ ಟ್ವಿಟರ್‌ ಬಯೋದಿಂದ 'ಕಾಂಗ್ರೆಸ್‌' ಪದವನ್ನೂ ತೆಗೆದುಹಾಕಿದ್ದಾರೆ. ''ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ಪಂಜಾಬ್‌ನಲ್ಲಿ ಕಾಂಗ್ರೆಸ್‌ ಹಿರಿಯ ನಾಯಕರನ್ನು ಕಡೆಗಣಿಸುತ್ತಿದೆ. ಇದರಿಂದ ಪಕ್ಷ ಸೋಲುವುದು ಖಚಿತ. ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರಾಗಿರುವ ನವಜೋತ್‌ ಸಿಂಗ್‌ ಸಿಧು ಬಾಲಿಶ ವ್ಯಕ್ತಿತ್ವ ಹೊಂದಿದವರು. ಅಂತಹವರಿಂದ ಪಕ್ಷವನ್ನು ಗೆಲ್ಲಿಸಲು ಸಾಧ್ಯವೇ ಇಲ್ಲ,'' ಎಂದು ಅಮರಿಂದರ್‌ ಹೇಳಿದ್ದಾರೆ. ''ಕಳೆದ 52 ವರ್ಷಗಳಿಂದ ನಾನು ರಾಜಕಾರಣದಲ್ಲಿದ್ದೇನೆ. ಕಾಂಗ್ರೆಸ್‌ ಅಧ್ಯಕ್ಷರು ನನಗೆ ಬೆಳಗ್ಗೆ 10.30ಕ್ಕೆ ಕರೆ ಮಾಡಿ ರಾಜೀನಾಮೆ ನೀಡಲು ಹೇಳಿದರು. ಮರುಮಾತನಾಡದೇ ಈ ಕ್ಷಣವೇ ಹುದ್ದೆಯಿಂದ ಕೆಳಗಿಳಿಯುತ್ತೇನೆ ಎಂದೆ. ಅದರಂತೆ ಸಂಜೆ 4 ಗಂಟೆಗೆ ರಾಜಭವನಕ್ಕೆ ತೆರಳಿ ರಾಜೀನಾಮೆ ನೀಡಿದೆ. 50 ವರ್ಷಕ್ಕಿಂತ ಹೆಚ್ಚು ಕಾಲ ರಾಜಕೀಯದಲ್ಲಿ ಇರುವವರನ್ನು ನಡೆಸಿಕೊಳ್ಳುವ ರೀತಿಯಾ ಇದು? ನನ್ನ ಮೇಲೆ ವಿಶ್ವಾಸವಿಲ್ಲ ಎಂದರೆ ಇಂತಹ ಅವಮಾನ ಸಹಿಸಿಕೊಂಡು ಆ ಪಕ್ಷದಲ್ಲಿ ಮುಂದುವರಿಯುವುದರಲ್ಲಿಯೂ ಅರ್ಥವಿಲ್ಲ,'' ಎಂದು ಕ್ಯಾ.ಸಿಂಗ್‌ ಹೇಳಿದರು. ''ರಾಹುಲ್‌ ಗಾಂಧಿ ಅವರು ಪಕ್ಷದಲ್ಲಿ ಯುವಕರಿಗೆ ಆದ್ಯತೆ ನೀಡಲು ಬಯಸುತ್ತಾರೆ. ಆದರೆ ಹಿರಿಯ ಮುಖಂಡರ ಮಾತು ಕೇಳಿಸಿಕೊಳ್ಳುವ ವ್ಯವಧಾನ ಅವರಿಗೆ ಇಲ್ಲ,'' ಎಂದು ಟೀಕಿಸಿದರು. ''ಕಾಂಗ್ರೆಸ್‌ ತೊರೆದ ಬಳಿಕ ಬಿಜೆಪಿಯನ್ನಂತೂ ಸೇರಲ್ಲ,'' ಎಂದ ಅವರು, ಮುಂದಿನ ನಡೆ ಕುರಿತು ಯಾವುದೇ ಸುಳಿವು ನೀಡಲಿಲ್ಲ. ಕ್ಯಾಪ್ಟನ್‌ ಮುಂದಿನ ಆಯ್ಕೆಗಳೇನು? 1. ಬಿಜೆಪಿ ಸೇರ್ಪಡೆ: ಕಾಂಗ್ರೆಸ್‌ ವಿರುದ್ಧ ಸೇಡು ತೀರಿಸಿಕೊಳ್ಳಲು ಔಪಚಾರಿವಾಗಿ ಬಿಜೆಪಿ ಸೇರ್ಪಡೆಯಾಗಬಹುದು. ಶಿರೋಮಣಿ ಅಕಾಲಿದಳ ಜತೆಗಿನ 20 ವರ್ಷಗಳ ಮೈತ್ರಿ ಮುರಿದುಬಿದ್ದಿರುವುದರಿಂದ ಬಿಜೆಪಿಗೆ ತಾರಾ ವರ್ಚಸ್ಸಿನ ನಾಯಕರ ಅಗತ್ಯವಿದೆ. ಬಿಜೆಪಿಗೆ ರಾಜ್ಯದಲ್ಲಿ ಬಲವಾದ ನೆಲೆ ಇಲ್ಲದ ಕಾರಣ ಬಿಜೆಪಿ ಸೇರ್ಪಡೆಯಿಂದ ಕ್ಯಾ.ಅಮರಿಂದರ್‌ ಸಿಂಗ್‌ ಅವರಿಗೆ ತಕ್ಷಣದಲ್ಲಿ ಲಾಭವಾಗುವ ಸಾಧ್ಯತೆ ಕಡಿಮೆ. ಹೀಗಾಗಿ ಬಿಜೆಪಿ ಸೇರುವ ಸಾಧ್ಯತೆ ಸದ್ಯದ ಸ್ಥಿತಿಯಲ್ಲಿ ಕಡಿಮೆ ಎಂದೇ ಹೇಳಬಹುದು. 2. ಹೊಸ ಪಕ್ಷ ಸ್ಥಾಪನೆ: ಬಿಜೆಪಿ ಸೇರ್ಪಡೆಯಾಗುವ ಬದಲಾಗಿ ಸ್ವಂತ ಪಕ್ಷವನ್ನು ಕ್ಯಾ.ಅಮರಿಂದರ್‌ ಸಿಂಗ್‌ ರಚಿಸಬಹುದು. ಇದರಿಂದ ಬಿಜೆಪಿ, ಅಮರಿಂದರ್‌ ಇಬ್ಬರಿಗೂ ಲಾಭ. ಕಾಂಗ್ರೆಸ್‌ ಅನ್ನು ಕ್ಯಾಪ್ಟನ್‌ ಒಡೆಯಬಹುದು. ಜತೆಗೆ ಶಿರೋಮಣಿ ಅಕಾಲಿದಳದ ಒಂದಷ್ಟು ಮತಗಳನ್ನು ಸೆಳೆಯಬಹುದು. ಆಮ್‌ ಆದ್ಮಿ ಪಾರ್ಟಿಗೂ ಸ್ವಲ್ಪ ಹೊಡೆತ ನೀಡಬಹುದು. ಆದರೆ ವಿಧಾನಸಭೆ ಚುನಾವಣೆ ಅತ್ಯಂತ ಸನಿಹದಲ್ಲಿಯೇ ಎದುರಾಗಲಿರುವುದರಿಂದ ಪಕ್ಷ ಸಂಘಟಿಸುವುದು 79 ವರ್ಷದ ಕ್ಯಾ.ಅಮರಿಂದರ್‌ ಸಿಂಗ್‌ ಅವರಿಗೆ ಕಷ್ಟವಾಗಬಹುದು. 3. ಪಾಕಿಸ್ತಾನ ಪ್ರಸ್ತಾಪ: ತಕ್ಷಣದಲ್ಲಿ ಬಿಜೆಪಿ ಸೇರದೆ, ಹೊಸ ಪಕ್ಷ ಕಟ್ಟದೇ ಚುನಾವಣೆ ವೇಳೆ 'ಪಾಕಿಸ್ತಾನದ ಬೆದರಿಕೆ' ಅಸ್ತ್ರವನ್ನು ಕ್ಯಾ. ಅಮರಿಂದರ್‌ ಸಿಂಗ್‌ ಪ್ರಯೋಗಿಸಬಹುದು. ಇದು ಸಹ ಬಿಜೆಪಿ, ಅಮರಿಂದರ್‌ ಇಬ್ಬರಿಗೂ ಲಾಭದಾಯಕ. ಪಾಕಿಸ್ತಾನದ ಕಟ್ಟಾ ವಿರೋಧಿಯಾಗಿರುವ ಅಮರಿಂದರ್‌ ಸಿಂಗ್‌ 'ಮೃದು ಬಲಪಂಥೀಯ' ಎಂದು ಕಾಂಗ್ರೆಸ್‌ನವರೇ ಹೇಳುತ್ತಾರೆ. ಈ ಕಾರಣದಿಂದಾಗಿಯೇ ಆರ್‌ಎಸ್‌ಎಸ್‌ಗೆ ಕ್ಯಾಪ್ಟನ್‌ ಬಗ್ಗೆ ಗುಪ್ತ ಪ್ರೀತಿ ಇದೆ. ಈಗ ಪಾಕಿಸ್ತಾನ, ತಾಲಿಬಾನ್‌ ಕುರಿತು ಕ್ಯಾ. ಅಮರಿಂದರ್‌ ಸಿಂಗ್‌ ಅವರು ಹೆಚ್ಚು ಮಾತನಾಡಬಹುದು. ಬಿಜೆಪಿ ಅದನ್ನೇ ಚುನಾವಣೆಯಲ್ಲಿ ಮುಖ್ಯ ವಿಷಯವಾಗಿಸಿಕೊಂಡು, ''ರೈತರ ಪ್ರತಿಭಟನೆಗೆ ಪ್ರಚೋದನೆ ನೀಡುವ ಮೂಲಕ ದೇಶದಲ್ಲಿ ಅಸ್ಥಿರತೆ ಸೃಷ್ಟಿಸಲು ಯತ್ನಿಸಲಾಗುತ್ತದೆ,'' ಎಂದು ಸಾರಬಹುದು. ನವಜೋತ್‌ ಸಿಂಗ್‌ ಸಿಧು ಅವರ ಪಾಕಿಸ್ತಾನದ ಜತೆಗಿನ ನಂಟನ್ನು ಬಿಜೆಪಿ ಕೆದಕಬಹುದು. ಆ ಮೂಲಕ ಕೃಷಿ ಕಾಯಿದೆಗಳ ವಿರುದ್ಧ ರೈತರು 10 ತಿಂಗಳಿನಿಂದ ನಡೆಸುತ್ತಿರುವ ಹೋರಾಟದ ಬಿಸಿ ಕಡಿಮೆ ಮಾಡಿ 'ದೇಶಭಕ್ತಿಯ ಕಿಚ್ಚು' ಹೊತ್ತಿಸಬಹುದು. ಕ್ಯಾ. ಅಮರಿಂದರ್‌ ಸಿಂಗ್‌ ಅವರು ಜಾಟ್‌ ಸಿಖ್‌, ದಲಿತ ಸಿಖ್‌ ಮತ್ತು ಹಿಂದೂ ದಲಿತರಲ್ಲಿ ಈಗಲೂ ಜನಪ್ರಿಯ ನಾಯಕ. ಪಾಕಿಸ್ತಾನವನ್ನು ಚುನಾವಣಾ ವಿಷಯವಾಗಿಸಿದರೆ ಹಿಂದೂ ಮತ್ತು ದಲಿತ ಮತಗಳನ್ನು ಪಡೆಯುವ ಮೂಲಕ ಕಾಂಗ್ರೆಸ್‌, ಅಕಾಲಿದಳ ಮತ್ತು ರಾಜ್ಯದಲ್ಲಿ ನಿಧಾನಕ್ಕೆ ನೆಲೆಯೂರುತ್ತಿರುವ ಆಮ್‌ ಆದ್ಮಿ ಪಾರ್ಟಿ ಮೂರೂ ಪಕ್ಷಗಳನ್ನು ಮಣಿಸಬಹುದು ಎಂಬ ಲೆಕ್ಕಾಚಾರವೂ ಬಿಜೆಪಿಯಲ್ಲಿದೆ. ಕಾಂಗ್ರೆಸ್‌ ಸಹ 1984 ಮತ್ತು 1992ರ ಚುನಾವಣೆಗಳಲ್ಲಿ ಪಾಕಿಸ್ತಾನ ವಿಷಯವನ್ನೇ ಪ್ರಮುಖವಾಗಿ ಪ್ರಸ್ತಾಪಿಸಿತ್ತು.


from India & World News in Kannada | VK Polls https://ift.tt/3me09Qz

2023ಕ್ಕೆ ಜೆಡಿಎಸ್‌ ಸರಕಾರ, ನಿಖಿಲ್‌ - ಪ್ರಜ್ವಲ್‌ ರೇವಣ್ಣ ಸಹೋದರರ ಸಂಕಲ್ಪ

ಬಿಡದಿ: ಮುಂದಿನ ಒಂದೂವರೆ ವರ್ಷದಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಯುವಪಡೆಯನ್ನು ಬಲವಾಗಿ ಸಂಘಟಿಸಿ 2023ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ತರುವುದಾಗಿ ಯುವ ಜನತಾದಳದ ರಾಜ್ಯಾಧ್ಯಕ್ಷ ಹಾಗೂ ಸಂಸದ ಘೋಷಿಸಿದರು. ಬಿಡದಿಯ ತೋಟದ ಮನೆ ಆವರಣದಲ್ಲಿ ನಡೆಯುತ್ತಿರುವ ಜನತಾ ಪರ್ವ 1.0 ಹಾಗೂ ಮಿಷನ್‌-123 ನಾಲ್ಕನೇ ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ನಂತರ ಯುವ ಪ್ರತಿನಿಧಿಗಳನ್ನು ಉದ್ದೇಶಿಸಿ ಅವರಿಬ್ಬರೂ ಮಾತನಾಡಿದರು. ಕುಮಾರಣ್ಣ ಸಿಎಂ ಖಚಿತ 2023ರಲ್ಲಿ ಪಕ್ಷ ಅಧಿಕಾರಕ್ಕೆ ಬಂದು ಕುಮಾರಸ್ವಾಮಿ ಅವರು ಮತ್ತೆ ಮುಖ್ಯಮಂತ್ರಿ ಆಗುವುದು ನಿಶ್ಚಿತ. ಅದಕ್ಕಾಗಿ ಯುವ ಜನತಾದಳ ರಾಜ್ಯಾದ್ಯಂತ ಪಣತೊಟ್ಟು ಕೆಲಸ ಮಾಡಲಿದೆ. ವೇಗವಾಗಿ ಸಾಗುತ್ತಿರುವ ಪ್ರಪಂಚದಲ್ಲಿ ಸೋಷಿಯಲ್‌ ಮೀಡಿಯಾ ಬೆರಳ ತುದಿಯಲ್ಲಿದೆ. ನಾವು ಎಲ್ಲಿ ಎಡವಿದ್ದೇವೆ ಅನ್ನೋದನ್ನು ನೋಡಿಕೊಂಡು ಪಕ್ಷದ ಕೆಲಸ ಮಾಡಬೇಕು. ಚುನಾವಣೆಗೆ ಇನ್ನು 18 ತಿಂಗಳು ಮಾತ್ರ ಬಾಕಿಯಿದೆ. ನಾವೆಲ್ಲಾ ಸೇರಿ ಪಕ್ಷ ಕಟ್ಟಬೇಕು. 35 ಪರ್ಸೆಂಟ್‌ ಮಹಿಳೆಯರಿಗೆ ಮೀಸಲಾತಿ ಅಂತ ಕುಮಾರಣ್ಣ ಹೇಳಿದ್ದಾರೆ. ಯುವಕರಿಗೆ ಟಿಕೆಟ್‌ ಹಂಚಿಕೆಯಲ್ಲಿ 25 ಪರ್ಸೆಂಚ್‌ ಅವಕಾಶ ನೀಡಬೇಕೆಂದು ಕೋರುವುದಾಗಿ ತಿಳಿಸಿದರು. ದೇವರು ನೀಡಿದ ವರ ದೊಡ್ಡವರು ನನಗೆ ಯುವ ಜನತಾದಳದ ಜವಾಬ್ದಾರಿ ನೀಡಿದಾಗ ಅಚ್ಚರಿ ಆಯಿತು. ನನಗೆ ಪಕ್ಷ ಕಟ್ಟುವ ಬಗ್ಗೆ ಗೊತ್ತಿರಲಿಲ್ಲ, ನನಗೆ ನನ್ನ ದೇವರು (ದೇವೇಗೌಡರು) ಮಾರ್ಗದರ್ಶನ ಮಾಡಿದರು. ನಾನು ಎಂದೂ ಅವರನ್ನು ಹೆಸರಿಟ್ಟು ಕರೆಯುವುದಿಲ್ಲ. ದೇವರು ಎಂದೇ ನಂಬಿದ್ದೇನೆ ಎಂದು ನಿಖಿಲ್‌ ಅವರು ತಾವು ಯುವ ಜನತಾದಳ ಅಧ್ಯಕ್ಷರಾದ ಸಂದರ್ಭವನ್ನು ಹಂಚಿಕೊಂಡರು. ಕುಮಾರಣ್ಣ ಅವರದ್ದು ತಾಯಿ ಹೃದಯ ಕುಮಾರಸ್ವಾಮಿ ಅವರ ಮಗನಾಗಿ ನಾನಿಲ್ಲಿ ಮಾತನಾಡುತ್ತಿಲ್ಲ. ಅವರಿಂದ ನಾನು ಬಹಳಷ್ಟು ಕಲಿತಿದ್ದೇನೆ. ಅವರ ಸರಳತೆ, ತಾಯಿ ಹೃದಯ ಎಲ್ಲರಿಗೂ ಅಚ್ಚುಮೆಚ್ಚು ಮತ್ತು ಅನುಕರಣೀಯ ಎಂದರು. ದೇವೇಗೌಡರನ್ನು ಮತ್ತೆ ಮತ್ತೆ ದೇವರು ಎಂದು ಕರೆದ ನಿಖಿಲ್‌, ಅವರು ಕಷ್ಟಪಟ್ಟು ಈ ಪಕ್ಷ ಕಟ್ಟಿದ್ದಾರೆ. ನಮ್ಮ ತಂದೆಯವರು 15 ವರ್ಷದಿಂದ ಒಬ್ಬರೇ ಈ ಪಕ್ಷವನ್ನು ಉಳಿಸಿಕೊಂಡು ಬಂದಿದ್ದಾರೆ ಎಂದು ಹೇಳಿದರು. ಚಿತ್ರರಂಗ ಸ್ಮರಿಸಿದ ನಿಖಿಲ್‌ ಕನ್ನಡ ಚಿತ್ರರಂಗದಲ್ಲಿ ನನ್ನ ವ್ಯಕ್ತಿತ್ವ ವಿಕಾಸ ಆಗಿದೆ. ರಾಜ್ಯದ ಜನ ನನ್ನನ್ನು ಒಬ್ಬ ನಟನಾಗಿ ಸ್ವೀಕರಿಸಿದ್ದಾರೆ. ಇದು ನನಗೆ ಸಿಕ್ಕಿರುವ ಅದೃಷ್ಟ ಎಂದ ಅವರು, ಜಾಗ್ವಾರ್‌ ಸಿನಿಮಾ ನಮ್ಮ ತಂದೆ ಕೊಟ್ಟ ಉಡುಗೊರೆ. ಮುಂದಿನ ದಿನಗಳಲ್ಲಿಯೂ ಚಿತ್ರರಂಗದಲ್ಲಿ ನಟನೆಯ ಜತೆಗೆ ಪಕ್ಷದ ಮತ್ತು ಜನರ ಕೆಲಸವನ್ನು ಕೂಡ ಮಾಡುತ್ತೇನೆ ಎಂದು ನಿಖಿಲ್‌ ಹೇಳಿದರು. ಒಂದೇ ವೇದಿಕೆಯಲ್ಲಿ ಸಹೋದರರು ಕಾರ್ಯಗಾರದ ನಾಲ್ಕನೇ ದಿನ ನಿಖಿಲ್‌ ಕುಮಾರಸ್ವಾಮಿ ಹಾಗೂ ಪ್ರಜ್ವಲ್‌ ರೇವಣ್ಣ ಜೋಡಿ ಒಟ್ಟಿಗೆ ಕಾಣಿಸಿಕೊಂಡು ಯುವಕರಲ್ಲಿ ಸಂಚಲನ ಮೂಡಿಸಿದರು.ಕಾರ್ಯಾಗಾರದ ವೇದಿಕೆಯಲ್ಲಿ ಇಬ್ಬರು ಯುವ ನಾಯಕರು ಕಾಣಿಸಿಕೊಂಡಾಗ ಸಭಾಂಗಣದಲ್ಲಿದ್ದ 500ಕ್ಕೂ ಹೆಚ್ಚು ಯುವ ಪ್ರತಿನಿಧಿಗಳಲ್ಲಿ ಹರ್ಷೋದ್ಘಾರ ಮುಗಿಲು ಮುಟ್ಟಿತು. ತಮ್ಮಿಬ್ಬರ ನಡುವಿನ ಭಿನ್ನಮತ ಇಲ್ಲವೆಂಬಂತೆ ಬಿಂಬಿಸಿದ ಯುವ ನಾಯಕರು, ಪರಸ್ಪರ ಹೊಗಳಿಕೊಂಡರು. ಅಷ್ಟೇ ಅಲ್ಲದೇ, ವೇದಿಕೆ ಮೇಲೆಯೇ ಕೆಲವು ವಿಷಯಗಳನ್ನು ಕಿವಿಯಲ್ಲಿ ಚರ್ಚಿಸುವ ಮೂಲಕ ಕುಟುಂಬದಲ್ಲಿ ಹಾಗೂ ಪಕ್ಷದಲ್ಲಿ ನಾವೆಲ್ಲರೂ ಒಂದೇ ಎಂಬ ಸಂದೇಶವನ್ನು ರವಾನಿಸಿದರು. ಚಾಮುಂಡೇಶ್ವರಿ ಸನ್ನಿಧಿಯಿಂದ ಪ್ರವಾಸ ಕಾರ್ಯಗಾರದಲ್ಲಿ ಸೇರಿದ್ದ ಯುವ ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಸಂಸದ ಪ್ರಜ್ವಲ್‌ ರೇವಣ್ಣ, ನಾವು ಯಾವತ್ತಿಗೂ ಅಣ್ಣ ತಮ್ಮಂದಿರೇ. ರಾಜ್ಯದಲ್ಲಿ ಪಕ್ಷ ಕಟ್ಟಲು ನಾವಿಬ್ಬರು ಒಂದಾಗಿರುತ್ತೇವೆ. ಕುಮಾರಣ್ಣ ಅವರನ್ನು ಮತ್ತೆ ಸಿಎಂ ಮಾಡುವುದು ನಮ್ಮ ಸಂಕಲ್ಪ. ಈ ಬಗ್ಗೆ ಯಾರಿಗೂ ಅನುಮಾನ ಬೇಡ ಎಂದರು. ಇಬ್ಬರೂ ಒಟ್ಟಿಗೆ ಧರ್ಮಸ್ಥಳ ಹಾಗೂ ಚಾಮುಂಡಿ ಬೆಟ್ಟಕ್ಕೆ ಹೋಗುತ್ತೇವೆ. ಮೈಸೂರಿನ ಚಾಮುಂಡೇಶ್ವರಿ ಆಶೀರ್ವಾದ ಪಡೆದು, ಅಲ್ಲಿಂದಲೇ ಯುವಜನರನ್ನು ಸಂಘಟಿಸುವ ರಾಜ್ಯ ಪ್ರವಾಸ ಆರಂಭಿಸುತ್ತೇವೆ. ನಮ್ಮಿಬ್ಬರನ್ನು ಒಂದೇ ವೇದಿಕೆಯಲ್ಲಿ ಒಟ್ಟಿಗೆ ನೋಡಿ ಕುಮಾರಣ್ಣಗೆ ಬಹಳ ಸಂತೋಷವಾಗಿದೆ ಎಂದು ಪ್ರಜ್ವಲ್‌ ನುಡಿದರು. ಪ್ರಜ್ವಲ್‌ ನಂತರ ನಿಖಿಲ್‌ ಕುಮಾರಸ್ವಾಮಿ ಅವರು ಮಾತನಾಡಿ, ನನ್ನ ತಮ್ಮ ಪ್ರಜ್ವಲ್‌ ಮತ್ತು ನಾನು ಒಂದೇ ವೇದಿಕೆಯಲ್ಲಿ ಕಾಣಿಸುವುದಿಲ್ಲ, ಅವರಿಬ್ಬರಲ್ಲೂ ಅಸಮಾಧಾನವಿದೆ ಅಂತಿದ್ದರು. ಆದರೆ ಇವತ್ತು ಜತೆಯಲ್ಲಿದ್ದೇವೆ. ಯಾವತ್ತೂ ಇರುತ್ತೇವೆ, ಅನುಮಾನವೇ ಬೇಡ. ಇವತ್ತು ನಾವು ಬೇರೆ ಬೇರೆ ಎಂದು ಬಿಂಬಿಸಿದ್ದವರಿಗೆ ಉತ್ತರ ಸಿಕ್ಕಿದೆ ಎಂದು ಭಾವಿಸಿದ್ದೇನೆ ಎಂದರು.


from India & World News in Kannada | VK Polls https://ift.tt/3CYX5yl

ಮಕ್ಕಳು ಸ್ಕೂಲಿಗೆ ಹೋಗುವ ಹೊತ್ತಾಯ್ತು! ಮುಂದಿನ ಕ್ಲಾಸ್‌ ಹೇಗೆ?

ಬೆಂಗಳೂರು: ''ಎಲ್ಲ ಮಕ್ಕಳಿಗೂ ಆದಷ್ಟು ಬೇಗನೆ ತರಗತಿಗಳನ್ನು ಆರಂಭಿಸಿ,'' ಎಂದು ತಜ್ಞರು, ವೈದ್ಯರು ಸರಕಾರವನ್ನು ಒತ್ತಾಯಿಸುತ್ತಿರುವುದೇಕೆ? ಕಲಿಕೆಯ ನಷ್ಟವೆಷ್ಟು? ತರಗತಿಗಳನ್ನು ಹೇಗೆ ಆರಂಭಿಸಬೇಕು ಎಂಬ ಬಗ್ಗೆ ತಜ್ಞರ ಅಭಿಪ್ರಾಯವೇನು? ಇಲ್ಲಿದೆ ವಿವರವಾದ ನೋಟ. 6ನೇ ತರಗತಿಯಿಂದ ಪೂರ್ಣ ತರಗತಿಗಳು ಪ್ರಸ್ತುತ ರಾಜ್ಯದಲ್ಲಿ6ನೇ ತರಗತಿಯಿಂದ ಎಲ್ಲ ಮಕ್ಕಳಿಗೂ ನೇರ ಕ್ಲಾಸ್‌ಗಳನ್ನು, ಪೂರ್ಣ ಪ್ರಮಾಣದಲ್ಲಿಆರಂಭಿಸಲು ಸರಕಾರ ಅನುಮತಿ ನೀಡಿದೆ. ಸರಕಾರಿ ಶಾಲೆಗಳನ್ನು ಮಕ್ಕಳ ಪೂರ್ಣ ಹಾಜರಾತಿಗಾಗಿ ಸಜ್ಜುಗೊಳಿಸಲಾಗಿದೆ. ಆದರೆ ಒಂದನೇ ತರಗತಿಯಿಂದ 6ನೇ ತರಗತಿಯವರೆಗಿನ ಮಕ್ಕಳ ಪೂರ್ಣ ಪ್ರಮಾಣದ ತರಗತಿಗಳನ್ನು ಆರಂಭಿಸುವ ನಿರ್ಧಾರವನ್ನು ಸರಕಾರ ದಸರಾ ಹಬ್ಬದ ನಂತರದ ದಿನಗಳಿಗೆ ಮುಂದೂಡಿದೆ. ಸರಕಾರಿ ಕಾಲೇಜುಗಳು ಈಗಾಗಲೇ ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿದ್ದು, ಇಲ್ಲೇ ಲಸಿಕೆ ನೀಡುವ ಕಾರ್ಯಕ್ರಮಗಳು ಕೂಡ ನಡೆಯುತ್ತಿವೆ. ಒಂದನೇ ತರಗತಿಯಿಂದ ಕ್ಲಾಸ್‌ ಆರಂಭಿಸಿದರೆ ಮೊದಲು ಪರ್ಯಾಯ ದಿನಗಳಂದು, ಅರ್ಧ ದಿನ ಹಾಗೂ ಅರ್ಧ ಹಾಜರಿಯಲ್ಲಿ ತರಗತಿ ನಡೆಸಲಾಗುತ್ತದೆ. ನಂತರ ಅದನ್ನು ವಿಸ್ತರಿಸಲಾಗುತ್ತದೆ; ಈ ಕುರಿತು ಮಾರ್ಗಸೂಚಿಯನ್ನು ಸರಕಾರ ನೀಡಲಿದೆ. ಮಕ್ಕಳಲ್ಲಿ ಸೋಂಕಿನ ಲಕ್ಷಣ ಈ ನಡುವೆ, ಅಸ್ವಾಸ್ಥ್ಯದಿಂದ ಚಿಕಿತ್ಸೆ ಅಪೇಕ್ಷಿಸಿ ಬರುತ್ತಿರುವ ಮಕ್ಕಳ ಸಂಖ್ಯೆಯಲ್ಲಿ ತುಸು ಹೆಚ್ಚಳವಾಗಿದೆ; ಆದರೆ ಇದು ನಿರ್ದಿಷ್ಟ ಅವಧಿಯಲ್ಲಿ ಮಕ್ಕಳನ್ನು ಕಾಡುವ ಶೀತಜ್ವರ ಎಂದು ಗೊತ್ತಾಗಿದೆ. ಟೆಸ್ಟ್‌ಗೆ ಒಳಗಾದ 34,656 ಮಕ್ಕಳಲ್ಲಿ 27 ಮಂದಿಗೆ ಮಾತ್ರ (1%) ಪಾಸಿಟಿವ್‌ ಕಂಡುಬಂದಿದೆ. ಕೆಲವು ಮಕ್ಕಳಲ್ಲಿಸೋಂಕಿನ ಲಕ್ಷಣಗಳು ಕೂಡ ಇಲ್ಲ, ಮಕ್ಕಳಲ್ಲಿ ಕೋವಿಡ್‌ ಗಂಭೀರವಾಗಿರುವುದು ಅಥವಾ ಮರಣಕ್ಕೆ ಕಾರಣವಾಗಿರುವುದು ಅತ್ಯಲ್ಪ. ಇದು ಶಾಲೆಗಳನ್ನು ಆರಂಭಿಸಿ ಎಂದು ಹೇಳುತ್ತಿರುವ ತಜ್ಞರು ಉಲ್ಲೇಖಿಸುತ್ತಿರುವ ಅಂಶ. ತಜ್ಞರ ಒತ್ತಾಯ ಈ ನಡುವೆ ರಾಜ್ಯದ ತುರ್ತುಪರಿಸ್ಥಿತಿ ಕುರಿತ ರಾಷ್ಟ್ರೀಯ ಒಕ್ಕೂಟ (ಎನ್‌ಸಿಇಇ) ರಾಜ್ಯ ಸರಕಾರಕ್ಕೆ ಒಂದು ಹಕ್ಕೊತ್ತಾಯ ಮಂಡಿಸಿದ್ದು, ಆದಷ್ಟು ಬೇಗನೆ ಪೂರ್ಣ ಪ್ರಮಾಣದಲ್ಲಿ ಸ್ಕೂಲ್‌ಗಳನ್ನು ತೆರೆಯುವಂತೆ ಒತ್ತಾಯಿಸಿದೆ. ಶಾಲೆಗಳ ಮುಚ್ಚುಗಡೆಯಿಂದಾಗಿ ಶೈಕ್ಷಣಿಕ ತುರ್ತುಪರಿಸ್ಥಿತಿಯೊಂದು ಸೃಷ್ಟಿಯಾಗಿದ್ದು, ಇದು ಸಮಾಜದ ಎಲ್ಲರನ್ನೂ ಬಾಧಿಸುತ್ತಿದೆ. ಸಂವಿಧಾನ ನೀಡಿರುವ ಘನತೆಯ ಹಾಗೂ ಸಮಾನತೆಯ ಹಕ್ಕನ್ನು ಕೂಡ ಇದು ಕಿತ್ತುಕೊಂಡಿದೆ. ಎಲ್ಲ ಮಕ್ಕಳಿಗೂ ಕಡ್ಡಾಯ ಶಿಕ್ಷಣದ ಹಕ್ಕು ಹೊರಟುಹೋಗಿ, ಆನ್‌ಲೈನ್‌ ಸೌಲಭ್ಯವುಳ್ಳ ಶ್ರೀಮಂತರು ಮಾತ್ರ ಶಿಕ್ಷಣ ಪಡೆದು ಉಳಿದವರು ಶಿಕ್ಷಣಚಕ್ರದಲ್ಲಿ ಹಿಂದುಳಿಯುವಂತೆ ಆಗಿದೆ. ಮಕ್ಕಳಲ್ಲಿಅಪೌಷ್ಟಿಕತೆ, ಮಕ್ಕಳ ಮೇಲಿನ ದೌರ್ಜನ್ಯ, ಬಾಲ್ಯವಿವಾಹ ಹಾಗೂ ಬಾಲಕಾರ್ಮಿಕತನಗಳು ಹೆಚ್ಚಿವೆ. ಕುಟುಂಬದಲ್ಲಿ ಒಬ್ಬ ಅಥವಾ ಇಬ್ಬರೂ ಹೆತ್ತವರನ್ನು ಕಳೆದುಕೊಂಡ ಮಕ್ಕಳು, ಬದುಕಿಗಾಗಿ ದುಡಿಯುವ ಅಥವಾ ಶಾಲೆಗೆ ಮರಳುವ ಎರಡು ಆಯ್ಕೆಗಳಲ್ಲಿಅನಿವಾರ್ಯವಾದ ದುಡಿಮೆಯ ಯಾತನಾದಾಯಕವಾದ ಆಯ್ಕೆಯನ್ನು ಮಾಡಿಕೊಳ್ಳುವಂತಾಗಿದೆ- ಎಂದು ತಜ್ಞರು ಸರಕಾರಕ್ಕೆ ವಿವರಿಸಿದ್ದಾರೆ. ಖಾಸಗಿ ವರ್ಸಸ್‌ ಸರಕಾರಿ ಕರ್ನಾಟಕದಲ್ಲೂ, ಇತರ ರಾಜ್ಯಗಳಲ್ಲೂ, ನೇರ ತರಗತಿಗಳನ್ನು ಶುರು ಮಾಡಲು ಮುಂದಾದ ಸರಕಾರಗಳಿಗೆ ಎದುರಾಗಿರುವ ಒಂದು ತೊಡಕು ಎಂದರೆ ಸರಕಾರಿ- ಖಾಸಗಿ ಕಂದಕ. ಸರಕಾರಿ ಶಾಲೆಗಳ ಮಕ್ಕಳ ಪೋಷಕರು ತಮ್ಮ ಮಕ್ಕಳನ್ನು ನೇರ ತರಗತಿಗಳಿಗೆ ಕಳಿಸಲು ಯಾವುದೇ ತಕರಾರಿಲ್ಲದೆ ಒಪ್ಪಿದ್ದಾರೆ. ಇವರಲ್ಲಿ ಹೆಚ್ಚಿನವರು ಆನ್‌ಲೈನ್‌ ತರಗತಿಗಳಿಗೆ ಲಭ್ಯತೆ ಇಲ್ಲದವರು, ಕೆಳ- ಕೆಳಮಧ್ಯಮ ವರ್ಗದವರು. ಆದರೆ ಖಾಸಗಿ ಶಾಲೆಗಳ ಹೆಚ್ಚಿನ ಪೋಷಕರು ಮೇಲ್ಮಧ್ಯಮ- ಮಧ್ಯಮ- ಶ್ರೀಮಂತ ವರ್ಗದವರಾಗಿದ್ದು ಇವರ ಮಕ್ಕಳು ಈಗಾಗಲೇ ಆನ್‌ಲೈನ್‌ ತರಗತಿಗಳಲ್ಲಿ ಪಾಠ ಹೇಳಿಸಿಕೊಳ್ಳುತ್ತಿದ್ದಾರೆ. ಖಾಸಗಿ ಶಾಲೆಗಳು ಸಹ, ಕಡಿಮೆ ಶಿಕ್ಷಕರು ಸಾಕು ಹಾಗೂ ಮೂಲಸೌಕರ್ಯಗಳಿಗಾಗಿ ವೆಚ್ಚ ಮಾಡುವ ಪ್ರಮೇಯವಿಲ್ಲದ ಕಾರಣದಿಂದ, ಆನ್‌ಲೈನ್‌ ತರಗತಿಗಳು ನಡೆಯುವಷ್ಟು ಕಾಲ ನಡೆಯಲಿ ಎಂದು ನೇರ ತರಗತಿಗಳಿಗೆ ಒತ್ತಡ ಹಾಕದೆ ಸುಮ್ಮನಿದ್ದಾರೆ. ಆನ್‌ಲೈನ್‌ ತರಗತಿಗಳಲ್ಲಿ ಒಬ್ಬನೇ ಶಿಕ್ಷಕ ನೂರಾರು ಮಕ್ಕಳಿಗೆ ಪಾಠ ಮಾಡಬಹುದಾಗಿದೆ. ಹೀಗಾಗಿ ಖಾಸಗಿ- ಸರಕಾರಿ ಶಾಲೆಗಳ ಸಾಧನೆಗೂ, ಇಲ್ಲಿನ ಮಕ್ಕಳ ಸಾಧನೆಗೂ ನಡುವೆ ಕಂದಕ ದಿನೇ ದಿನೆ ಹೆಚ್ಚಾಗುತ್ತಿದೆ. 6ರ ನಂತರದ ತರಗತಿಗಳಲ್ಲಿ ಕೂಡ, ಸರಕಾರಿ ಶಾಲೆಗಳಲ್ಲಿ ಹಾಜರಾತಿ ಹೆಚ್ಚು ಇದೆ; ಖಾಸಗಿ ಶಾಲೆಗಳಲ್ಲಿ ಅರ್ಧಕ್ಕಿಂತಲೂ ಕಡಿಮೆ ಹಾಜರಾತಿ ಇದ್ದು, ಉಳಿದವರು ಆನ್‌ಲೈನ್‌ ಕ್ಲಾಸುಗಳನ್ನು ನೆಚ್ಚಿಕೊಂಡಿದ್ದಾರೆ. ಈಗ ಆರಂಭಿಸದಿದ್ದರೆ ತಡವಾದೀತು ಈಗ ಕೊರೊನಾ ಸೋಂಕಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಈಗಾಗಲೇ ಮಕ್ಕಳ ಶೈಕ್ಷಣಿಕ ಚಕ್ರದಲ್ಲಿ ಒಂದೂವರೆ ವರ್ಷಗಳಷ್ಟು ನಷ್ಟವಾಗಿದ್ದು, ಈಗಲಾದರೂ ತರಗತಿಗಳನ್ನು ಆರಂಭಿಸದಿದ್ದರೆ ದುಬಾರಿ ಬೆಲೆ ತೆರಬೇಕಾಗಲಿದೆ. ಈ ಕಲಿಕೆ ಹಾಗೂ ಕಾಲದ ಅಂತರ ಮಕ್ಕಳ ಶೈಕ್ಷಣಿಕ, ಮಾನಸಿಕ ಹಾಗೂ ಭಾವನಾತ್ಮಕ ಆರೋಗ್ಯಕ್ಕೆ ಭಾರಿ ಪೆಟ್ಟು ಕೊಟ್ಟಿದೆ- ಎಂದು ಮನೋವೈದ್ಯರು ಹೇಳುತ್ತಾರೆ. ಮಕ್ಕಳನ್ನು ಸ್ಕೂಲಿಗೆ ಕಳಿಸಲು ಅಂಜುತ್ತಿರುವ ಹೆತ್ತವರ ಅಂಜಿಕೆಗೆ ಯಾವುದೇ ಅರ್ಥವಿಲ್ಲ. ಮಕ್ಕಳು ತಮ್ಮ ಹೆತ್ತವರ ಜೊತೆಗೆ ವಿಹಾರಕ್ಕೆ, ಪ್ರವಾಸಕ್ಕೆ, ಮಾಲ್‌ಗಳಿಗೆ ಹೋಗಬಹುದಾದರೆ, ಶಾಲೆಗಳಿಗೆ ಮಾತ್ರ ಬರಬಾರದು? ಇದು ಕಾಳಜಿಯುಳ್ಳ ಶಾಲಾ ಶಿಕ್ಷಕರ ಪ್ರಶ್ನೆ. ವರದಿಗಳೇನು ಹೇಳುತ್ತಿದೆ?
  • ಶಿಕ್ಷಣ ಸ್ಥಿತಿಗತಿ ವಾರ್ಷಿಕ ವರದಿ-2020 ತಿಳಿಸಿರುವ ಪ್ರಕಾರ, ಸರಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ನೋಂದಣಿ ಮಾಡಿಕೊಂಡಿರುವ ಮಕ್ಕಳಲ್ಲಿ 11% ಮಾತ್ರ ಆನ್‌ಲೈನ್‌ ಕ್ಲಾಸುಗಳಿಗೆ ನೇರವಾಗಿ ಹಾಜರಾಗುತ್ತಿದ್ದಾರೆ. 21.5% ಮಕ್ಕಳು ರೆಕಾರ್ಡೆಡ್‌ ವಿಡಿಯೋ/ಆಡಿಯೋ ಕ್ಲಾಸುಗಳನ್ನು ಅವಲಂಬಿಸಿದ್ದಾರೆ.
  • ರಾಷ್ಟ್ರೀಯ ಅಂಕಿಸಂಖ್ಯಾ ಸಂಸ್ಥೆ (ಎನ್‌ಎಸ್‌ಒ) ತಿಳಿಸಿರುವ ಪ್ರಕಾರ, ದೇಶದಲ್ಲಿ ಅತ್ಯಧಿಕ ಡಿಜಿಟಲ್‌ ಲಭ್ಯತೆ ಇರುವುದು ದಿಲ್ಲಿಯಲ್ಲಿ- ಅದೂ 55% ಮಾತ್ರ. ಅಂದರೆ ಉಳಿದೆಲ್ಲೆಡೆ ಹೇಗಿರಬಹುದು ಎಂಬುದನ್ನು ಊಹಿಸಬಹುದು.
  • ಶಾಲಾ ಮಕ್ಕಳ ಆನ್‌ಲೈನ್‌ ಮತ್ತು ಆಫ್‌ಲೈನ್‌ ಕಲಿಕೆ ಸಮೀಕ್ಷೆ ತಿಳಿಸಿರುವಂತೆ, ಕಳೆದ 17 ತಿಂಗಳಲ್ಲಿ 37% ಮಕ್ಕಳು ಯಾವುದೇ ಕಲಿಕೆ ಮಾಡಿಲ್ಲ. ತಮ್ಮ ಮಕ್ಕಳ ಕಲಿಕೆ ಸಾಮರ್ಥ್ಯ ಕುಂಠಿತವಾಗಿದೆ ಎಂದು 75% ಹೆತ್ತವರು ಅಭಿಪ್ರಾಯಪಟ್ಟಿದ್ದಾರೆ. ವಿದ್ಯಾರ್ಥಿಗಳ ಕಲಿಕೆ ಸಾಮರ್ಥ್ಯ ಕುಂದಿದೆ ಎಂದು 72%ದಷ್ಟು ಶಿಕ್ಷಕರೂ ಹೇಳಿದ್ದಾರೆ.
  • 3 ಮತ್ತು 4ನೇ ತರಗತಿಗಳಲ್ಲಿ42% ನಗರಪ್ರದೇಶದ ಮಕ್ಕಳಲ್ಲಿ ಹಾಗೂ 35% ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಕೆಲವು ಪದಗಳಿಂದಾಚೆ ಓದುವ ಸಾಮರ್ಥ್ಯ ಇಲ್ಲ. ಸರಾಗವಾಗಿ ಓದಬಲ್ಲವರು ನಗರದಲ್ಲಿ 31% ಹಾಗೂ ಗ್ರಾಮೀಣಭಾಗದಲ್ಲಿ 26% ಮಕ್ಕಳು ಮಾತ್ರ.
  • ಸುಮಾರು 2.5 ಕೋಟಿ ಮಕ್ಕಳು ನಮ್ಮ ದೇಶದಲ್ಲಿ ಪ್ರತಿವರ್ಷ ಒಂದನೇ ತರಗತಿಗೆ ಸೇರುತ್ತಾರೆ. ಆ ದೃಷ್ಟಿಯಿಂದ ನೋಡಿದಾಗ, ಓದುವಿಕೆಯ ಅಥವಾ ಲೆಕ್ಕ ಮಾಡುವಿಕೆ ಅಸಾಮರ್ಥ್ಯಗಳು 1.8 ಕೋಟಿಯಷ್ಟು ಮಕ್ಕಳಲ್ಲಿ ಕಂಡುಬರುತ್ತವೆ. ಲಾಕ್‌ಡೌನ್‌ ಪರಿಣಾಮ ಈ ಅಂಕಿ ಇನ್ನಷ್ಟು ಹೆಚ್ಚಿರುವ ಸಾಧ್ಯತೆ ಇದೆ.
ಕಲಿಕೆಯ ಮರುಕಳಿಕೆ ಹೇಗೆ?
  • ಕಲಿಕೆಯ ಜೊತೆಗೆ ಸಂಪರ್ಕವನ್ನೇ ಕಳೆದುಕೊಂಡಿರುವ ಮಕ್ಕಳಲ್ಲಿ ಕಲಿಕೆಯ ಬಗ್ಗೆ ಆಸ್ಥೆ ಹುಟ್ಟುವಂತೆ ಮಾಡಲು ಮನೋವೈದ್ಯರು, ಶಿಕ್ಷಣತಜ್ಞರು ಹಲವು ಮಾರ್ಗಗಳನ್ನು ಸೂಚಿಸಿದ್ದಾರೆ.
  • ಮಕ್ಕಳು ಶಾಲೆಗಳಿಗೆ ಬರತೊಡಗಿದ ಬಳಿಕ ಅವರಿಗೆ ಟೈಮ್‌ಟೇಬಲ್‌ ಅಥವಾ ಡೆಡ್‌ಲೈನ್‌ಗಳ ಒತ್ತಡವನ್ನು ಹೇರಬೇಡಿ. ಕಲಿಕೆಗೆ ಮರಳಲು ಅವರ ಸಮಯವನ್ನು ಅವರಿಗೆ ಕೊಡಿ.
  • ಮಗುವನ್ನು ಹೇಗೆ ನಡೆಸಿಕೊಳ್ಳಬೇಕು, ಕಲಿಕೆಯನ್ನು ಹೇಗೆ ಮುಂದುವರಿಸಬೇಕು ಎಂಬುದರ ಬಗ್ಗೆ ಶಿಕ್ಷಕರಿಗೂ ಒಂದು ಓರಿಯೆಂಟೇಶನ್‌ ಕೋರ್ಸ್‌ನ ಅಗತ್ಯವಿದೆ. ಇದರಲ್ಲಿ ಮಕ್ಕಳ ಕಲಿಕೆಯ ಅಗತ್ಯಗಳ ಜೊತೆಗೆ, ಮಾನಸಿಕ, ಭಾವನಾತ್ಮಕ ಅಗತ್ಯಗಳಿಗೆ ಕೂಡ ಗಮನ ಕೊಡುವುದನ್ನು ಕಲಿಸಬೇಕು.
  • ಒಂದೇ ತರಗತಿಯ ಬೇರೆಬೇರೆ ಮಕ್ಕಳ ಕಲಿಕಾ ಸಾಮರ್ಥ್ಯದಲ್ಲಿವಿಪರೀತ ವ್ಯತ್ಯಾಸ ಸೃಷ್ಟಿಯಾಗಿರಬಹುದು. ಇದನ್ನು ಗಮನಿಸಿಕೊಂಡು ಕಲಿಕಾ ವಿಧಾನ ರೂಪಿಸಿಕೊಳ್ಳಬೇಕು.


from India & World News in Kannada | VK Polls https://ift.tt/3imOePk

ಒಂದೇ ಕುಟುಂಬದ ಐವರ ಆತ್ಮಹತ್ಯೆ ಪ್ರಕರಣ: ಕತ್ತು ಹಿಸುಕಿ ಮಗುವನ್ನು ಕೊಂದಿದ್ದ ತಾಯಿ

ಬೆಂಗಳೂರು: ನಗರದ ಬ್ಯಾಡರಹಳ್ಳಿಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ 9 ತಿಂಗಳ ಮಗುವನ್ನು ಹತ್ಯೆ ಮಾಡಿರುವುದು ದೃಢವಾಗಿದೆ. ಸ್ವತಃ ತಾಯಿಯೇ ತನ್ನ ಪುಟ್ಟ ಕಂದಮ್ಮನನ್ನು ಉಸಿರುಗಟ್ಟಿಸಿ ಕೊಂದಿದ್ದಾಳೆ. ಬಳಿಕ ಮಾಡಿಕೊಂಡಿದ್ದಾಳೆ. ಮಗುವನ್ನು ಕೊಲೆ ಮಾಡಿರುವುದು ವೈದ್ಯಕೀಯ ಪರೀಕ್ಷೆಯ ವರದಿಯಲ್ಲಿ ದೃಢಪಟ್ಟಿದೆ . ತಾಯಿ ಸಿಂಧುರಾಣಿಯಿಂದಲೇ 9 ತಿಂಗಳ ಮಗು ಹತ್ಯೆಯಾಗಿದೆ ಎಂದು ವರದಿ ಹೇಳಿದೆ. ಹಸಿರು ಬಣ್ಣದ ಬಟ್ಟೆಯಿಂದ ಮಗುವಿನ ಕತ್ತನ್ನು ಬಿಗಿದು ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದೆ. ಮಗುವನ್ನು ಹತ್ಯೆ ಮಾಡಿದ ಬಳಿಕ ತಾಯಿ ಸಿಂಧೂರಾಣಿ ನೇಣು ಬಿಗಿದುಕೊಂಡಿದ್ದಾಳೆ. ವೈದ್ಯಕೀಯ ಪರೀಕ್ಷೆ ವರದಿ ಬ್ಯಾಡರಹಳ್ಳಿ ಪೊಲೀಸರ ಕೈ ಸೇರಿದೆ. ಈ ಹಿನ್ನೆಲೆಯಲ್ಲಿ ಸಿಂಧೂರಾಣಿ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲು ಮಾಡಿದ್ದಾರೆ. ಅವರ ಪತ್ನಿ, ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಗಂಡು ಮಗ ಸೇರಿ ಒಟ್ಟು ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಒಂಬತ್ತು ತಿಂಗಳ ಹಸುಗೂಸು ಸಹ ಮೃತಪಟ್ಟಿತ್ತು. ಇನ್ನು ಎರಡು ವರ್ಷದ ಹೆಣ್ಣುಮಗು ಜೀವಂತ ದೊರಕಿತ್ತು. ಕುಡಿಯಲು ಹಾಲು ಸಿಗದೆ ಕಂದಮ್ಮ ಹಸಿವಿನಿಂದ ಮೃತಪಟ್ಟಿರಬಹುದು ಎಂದು ಆರಂಭದಲ್ಲಿ ಊಹಿಸಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆ ವರದಿಯು ಬೆಚ್ಚಿಬೀಳಿಸುವ ಅಂಶವನ್ನು ಬಹಿರಂಗಪಡಿಸಿದೆ. ಮಗುವಿನ ಕತ್ತಿನ ಭಾಗದಲ್ಲಿ ಕೊಳೆತು ಹುಳುಗಳು ಕಾಣಿಸಿಕೊಂಡಿದ್ದವು. ಮುಖವನ್ನು ಬಲವಾಗಿ ಒತ್ತಿದ್ದರಿಂದ ಮೂಳೆ ತುಂಡಾಗಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ. ಮಹಿಳೆಯರ ಜತೆ ಶಂಕರ್‌ ಚಾಟಿಂಗ್‌ ಆತ್ಮಹತ್ಯೆ ಮಾಡಿಕೊಂಡಿದ್ದ ಮೂವರೂ ಮಕ್ಕಳು, ಡೆತ್ ನೋಟ್‌ಗಳಲ್ಲಿ ತಮ್ಮ ತಂದೆ ಶಂಕರ್‌ ವಿರುದ್ಧ ದೂರಿದ್ದರು. ಅಪ್ಪನ ವಿರುದ್ಧ ಅನೈತಿಕ ಸಂಬಂಧ, ದೌರ್ಜನ್ಯ ನಡೆಸಿದ ಆರೋಪಗಳನ್ನು ಮಾಡಿದ್ದರು. ಈ ಬಗ್ಗೆ ಅವರು ಡೆತ್‌ನೋಟ್‌ನಲ್ಲಿ ಆರೋಪಿಸಿದ್ದ ಹಿನ್ನೆಲೆಯಲ್ಲಿ ಶಂಕರ್‌ ಅವರಿಗೆ ಸೇರಿದ ಲ್ಯಾಪ್‌ಟಾಪ್‌, ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಶಂಕರ್‌ ಅಳಿಯಂದಿರಿಗೆ ಸೇರಿದ ಮೊಬೈಲ್‌ಗಳನ್ನು ಕೂಡ ವಶಕ್ಕೆ ಪಡೆಯಲಾಗಿದೆ. ಲ್ಯಾಪ್‌ಟಾಪ್‌, ಮೊಬೈಲ್‌ನಲ್ಲಿನ ಚಾಟ್‌ಗಳು, ಚಿತ್ರಗಳು ಹಾಗೂ ಇತರೆ ಮಾಹಿತಿಗಳನ್ನು ಮರಳಿ ಪಡೆದುಕೊಳ್ಳಲು ಪೊಲೀಸರು ಮುಂದಾಗಿದ್ದಾರೆ. ಸಿಐಡಿ ಸೈಬರ್‌ ಸೆಲ್‌ ತಜ್ಞರಿಗೆ ಮೊಬೈಲ್ ಹಾಗೂ ಲ್ಯಾಪ್‌ಟಾಪ್‌ಗಳನ್ನು ರವಾನಿಸಲಾಗಿದೆ. ಅವರು ಅದರಲ್ಲಿನ ವಿವರಗಳನ್ನು ರಿಟ್ರೀವ್‌ ಮಾಡಲು ತಯಾರಿ ನಡೆಸುತ್ತಿದ್ದಾರೆ. ಲ್ಯಾಪ್‌ಟಾಪ್‌ನಲ್ಲಿ ಶಂಕರ್‌ ಚಾಟಿಂಗ್‌ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಮಹಿಳೆಯರ ಜತೆ ಚಾಟಿಂಗ್‌ ಮಾಡಿರುವ ಬಗ್ಗೆ ವಿವರ ಲಭ್ಯವಾಗಿದ್ದು, ಬ್ಯಾಡರಹಳ್ಳಿ ಠಾಣೆ ಪೊಲೀಸರಿಂದ ತನಿಖೆ ಮುಂದುವರಿದೆ. ಬ್ಯಾಡರಹಳ್ಳಿ ಸಮೀಪದ ತಿಗಳರಪಾಳ್ಯದ ಮನೆಯಲ್ಲಿ ಸೆ. 17ರಂದು ಒಂದೇ ಕುಟುಂಬದ ಐದು ಮೃತದೇಹಗಳು ಪತ್ತೆಯಾಗಿತ್ತು. ಮಾಸಪತ್ರಿಕೆಯೊಂದನ್ನು ನಡೆಸುತ್ತಿರುವ ಶಂಕರ್ ಅವರು ಮನೆಯಲ್ಲಿ ಇರದ ಸಂದರ್ಭದಲ್ಲಿ ಅವರ ಕುಟುಂಬದವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆ ನಡೆದು ಐದಾರು ದಿನಗಳ ಬಳಿಕ ಬೆಳಕಿಗೆ ಬಂದಿತ್ತು. ಹೀಗಾಗಿ ಅವರ ಮೃತದೇಹಗಳು ಕೊಳೆಯಲು ಆರಂಭವಾಗಿದ್ದವು. ಕೌಟುಂಬಿಕ ಕಲಹ ಇದಕ್ಕೆ ಕಾರಣ ಎನ್ನಲಾಗಿದ್ದರೂ, ನಿಖರ ಕಾರಣ ಪತ್ತೆಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


from India & World News in Kannada | VK Polls https://ift.tt/3zVpxza

ಡೆಡ್‌ಲೈನ್‌ ಮುಗಿದರೂ, ರಸ್ತೆ ಗುಂಡಿ ಮುಚ್ಚಲಿಲ್ಲ; ಸಿಲಿಕಾನ್ ಸಿಟಿಯಲ್ಲಿ ಸಂಚಾರಕ್ಕೆ ಸಂಚಕಾರ!

: ಬಿಬಿಎಂಪಿ ವ್ಯಾಪ್ತಿಯ ಆರ್ಟೀರಿಯಲ್‌, ಸಬ್‌ ಆರ್ಟೀರಿಯಲ್‌ ರಸ್ತೆಗಳು ಹಾಗೂ ವಾರ್ಡ್‌ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚಲು ಕಂದಾಯ ಸಚಿವರು ನೀಡಿದ್ದ ಗಡುವು ಮುಗಿದರೂ, ಹದಗೆಟ್ಟು ಹೋಗಿರುವ ರಸ್ತೆಗಳು ಮಾತ್ರ ದುರಸ್ತಿಯಾಗಿಲ್ಲ. ಹೀಗಾಗಿ, ನಗರದ ಜನರು ಜೀವ ಭಯದಲ್ಲೇ ವಾಹನ ಓಡಿಸಬೇಕಾದ ಸ್ಥಿತಿ ಇದೆ. ಕಂದಾಯ ಸಚಿವ ಆರ್‌.ಅಶೋಕ್‌ ಅವರು ಸೆ. 6ರಂದು ಪಾಲಿಕೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, 1332 ಕಿ.ಮೀ ಉದ್ದದ ಮುಖ್ಯರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಲು ಸೆ. 20 ಹಾಗೂ 887 ಕಿ.ಮೀ ಉದ್ದದ ವಾರ್ಡ್‌ಗಳ ದುರಸ್ತಿಗೆ ಸೆ. 30ರವರೆಗೆ ಗಡುವು ನೀಡಿದ್ದರು. ಈ ಡೆಡ್‌ಲೈನ್‌ ಮುಗಿದರೂ, ಜನರಿಗೆ ಹೊಂಡ-ಗುಂಡಿಗಳ ಗೋಳು ತಪ್ಪಿಲ್ಲ. ಒಟ್ಟು 2219 ಕಿ.ಮೀ ಉದ್ದದ ರಸ್ತೆಗಳು ಗುಂಡಿ ಬಿದ್ದು ಅಧ್ವಾನವಾಗಿರುವುದನ್ನು ಗುರುತಿಸಲಾಗಿತ್ತು. ಪಾಲಿಕೆಯ 385 ಆರ್ಟೀರಿಯಲ್‌, ಸಬ್‌ ಆರ್ಟೀರಿಯಲ್‌ ರಸ್ತೆಗಳ 1,120 ಕಿ.ಮೀ. ಉದ್ದದ ಮಾರ್ಗದಲ್ಲಿ ಬಿದ್ದಿದ್ದ ಗುಂಡಿಗಳನ್ನು ಮುಚ್ಚಲಾಗಿದೆ. 224 ಕಿ.ಮೀ. ಉದ್ದದ ರಸ್ತೆಗಳಲ್ಲಿ ಗುಂಡಿ ಮುಚ್ಚುವ ಕಾರ್ಯ ಪ್ರಗತಿಯಲ್ಲಿದೆ ಎಂದು ಬಿಬಿಎಂಪಿ ಹೇಳುತ್ತಿದೆ. ಆದರೂ, ದುರ್ಬೀನು ಹಾಕಿ ಹುಡುಕಿದರೂ ಗುಂಡಿ ಮುಕ್ತ ರಸ್ತೆಗಳು ಕಾಣಸಿಗುವುದಿಲ್ಲ. ಕಳೆದ ಒಂದು ತಿಂಗಳಿಂದೀಚೆಗೆ ಗುಂಡಿಗಳಿಗೆ ಮೂವರು ಬಲಿಯಾಗಿದ್ದಾರೆ. ಇಷ್ಟಾದರೂ ಹಲವು ರಸ್ತೆಗಳಲ್ಲಿ ವಾಹನ ಸವಾರರ ಜೀವ ತೆಗೆಯಲು ಗುಂಡಿಗಳು ಬಾಯ್ದೆರೆದು ಕುಳಿತಿವೆ. ಕ್ರಮವೇ ಇಲ್ಲ ರಸ್ತೆ ಗುಂಡಿ ಮುಚ್ಚಲು ವಿಳಂಬ ಮಾಡುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸುವುದಾಗಿ ಸಚಿವರು ಎಚ್ಚರಿಕೆ ನೀಡಿದ್ದರು. ಆದರೆ, ಇಲ್ಲಿಯವರೆಗೆ ಯಾರ ಮೇಲೂ ಕ್ರಮ ಕೈಗೊಂಡಿಲ್ಲ. ಸಾರ್ವಜನಿಕರ ಟೀಕೆಗಳಿಂದ ಪಾರಾಗಲು ತರಾತುರಿಯಲ್ಲಿಅವೈಜ್ಞಾನಿಕವಾಗಿ ರಸ್ತೆ ಗುಂಡಿಗಳನ್ನು ಮುಚ್ಚುತ್ತಿದ್ದು, ಒಂದೆರಡು ದಿನಗಳಲ್ಲೇ ಡಾಂಬರು ಕಿತ್ತು ಬಂದು ಕಳಪೆ ಕಾಮಗಾರಿಯ ಬಣ್ಣ ಬಯಲಾಗುತ್ತಿದೆ. ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳಿಂದ ಪ್ರತಿ ವರ್ಷವೂ ಪ್ರಾಣ ಹಾನಿಗಳಾಗುತ್ತಿವೆ. ಆದಾಗ್ಯೂ, ಪಾಲಿಕೆ ಎಚ್ಚೆತ್ತುಕೊಳ್ಳುತ್ತಿಲ್ಲ. ಮಳೆಗಾಲ ಆರಂಭವಾಗುವುದಕ್ಕೆ ಮೊದಲೇ ಗುಂಡಿಗಳನ್ನು ಮುಚ್ಚುವ ಕೆಲಸ ಆಗುತ್ತಿಲ್ಲ. ಯುದ್ಧ ಕಾಲದಲ್ಲಿ ಶಸ್ತ್ರಭ್ಯಾಸ ಎಂಬಂತೆ, ಮಳೆ ಶುರುವಾದ ಬಳಿಕ ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಇದರಿಂದ ಜನರ ತೆರಿಗೆ ಹಣವು ಪೋಲಾಗುತ್ತಿದೆ. ಸಣ್ಣಪುಟ್ಟ ಗಲ್ಲಿರಸ್ತೆಗಳಲ್ಲಷ್ಟೇ ಅಲ್ಲ; ಮೇಲ್ಸೇತುವೆಗಳಲ್ಲೂ ಗುಂಡಿಗಳದ್ದೇ ಕಾರುಬಾರು. ಮಳೆ ಬಂದಾಗ ಗುಂಡಿ ಯಾವುದು, ರಸ್ತೆ ಯಾವುದು ಗೊತ್ತಾಗದೆ ಸವಾರರು ಬಿದ್ದು ಗಾಯಗೊಳ್ಳುತ್ತಲೇ ಇದ್ದಾರೆ. ಉದ್ಯಾನನಗರಿಯಲ್ಲಿ ಸುಮಾರು 13 ಸಾವಿರ ಕಿ.ಮೀ ಉದ್ದದ ರಸ್ತೆ ಜಾಲವಿದೆ. ಆದರೆ, ಎಲ್ಲಿಯೂ ಗುಂಡಿಗಳಿಲ್ಲದ ರಸ್ತೆಗಳು ಕಾಣ ಸಿಗುವುದೇ ಇಲ್ಲ. ಬಿಸಿ ಡಾಂಬರು ಮಿಶ್ರಣ ಘಟಕ ಕಾರ್ಯಾರಂಭದ ಬಳಿಕ ಗುಂಡಿ ಸಮಸ್ಯೆ ಬಹುತೇಕ ನಿವಾರಣೆಯಾಗಲಿದೆ ಎಂಬ ಪಾಲಿಕೆಯ ಭರವಸೆಯು ಸಂಪೂರ್ಣ ಹುಸಿಯಾಗಿದೆ. ಕಣ್ಣೂರಿನಲ್ಲಿ 7.50 ಕೋಟಿ ರೂ. ವೆಚ್ಚದಲ್ಲಿ ಪಾಲಿಕೆಯು ಸ್ವಂತ ಡಾಂಬರು ಮಿಶ್ರಣ ಘಟಕ ಸ್ಥಾಪಿಸಿದ್ದರೂ, ಗುಂಡಿಗಳು ಹಾಗೆಯೇ ಉಳಿದುಕೊಂಡಿವೆ. ರಸ್ತೆಗಳ ನಿರ್ವಹಣೆ, ದುರಸ್ತಿಗಾಗಿಯೇ ಪ್ರತಿ ವರ್ಷ 46.10 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಆದಾಗ್ಯೂ, ರಸ್ತೆಗಳ ಸ್ಥಿತಿ ಮಾತ್ರ ಬದಲಾಗುತ್ತಿಲ್ಲ. ನಗರದಲ್ಲಿನ 85791 ಕಿ.ಮೀ. ಉದ್ದದ ವಾರ್ಡ್‌ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಲು ವಾರ್ಷಿಕ 39.60 ಕೋಟಿ ರೂ. ವ್ಯಯಿಸಲಾಗುತ್ತಿದೆ. ಗುಂಡಿ ಮುಚ್ಚುವ ಕಾರ್ಯಕ್ಕಾಗಿಯೇ ಬಜೆಟ್‌ನಲ್ಲಿ ಪ್ರತಿ ವಾರ್ಡ್‌ಗೆ 20 ಲಕ್ಷ ರೂ. ಅನುದಾನ ಮೀಸಲಿಡಲಾಗುತ್ತಿದೆ. ಇದಲ್ಲದೇ 1400 ಕಿ.ಮೀ. ಉದ್ದವಿರುವ ಮುಖ್ಯ ರಸ್ತೆಗಳಲ್ಲಿನ ಗುಂಡಿಗಳ ದುರಸ್ತಿಗೆ 6.50 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ.


from India & World News in Kannada | VK Polls https://ift.tt/3CZyqdi

ಸಿಎಂ ರಾಜಕೀಯ ಕಾರ್ಯದರ್ಶಿಗಳ ನೇಮಕ: ಜೀವರಾಜ್, ರೇಣುಕಾಚಾರ್ಯಗೆ ಹುದ್ದೆ

ಬೆಂಗಳೂರು: ಬಿಜೆಪಿ ಶಾಸಕ ಹಾಗೂ ಮಾಜಿ ಶಾಸಕ ಅವರನ್ನು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಲಾಗಿದೆ. ಎಂಪಿ ರೇಣುಕಾಚಾರ್ಯ ಮತ್ತು ಜೀವರಾಜ್ ಅವರು ಅವರು ಮುಖ್ಯಮಂತ್ರಿ ಆಗಿದ್ದಾಗಲೂ ಅವರ ರಾಜಕೀಯ ಕಾರ್ಯದರ್ಶಿಗಳಾಗಿದ್ದರು. ಎಂಪಿ ರೇಣುಕಾಚಾರ್ಯ, ಬಿಎಸ್ ಯಡಿಯೂರಪ್ಪ ಆಪ್ತರಾಗಿದ್ದು, ಸಚಿವ ಆಕಾಂಕ್ಷಿಯಾಗಿದ್ದರು. ಅಷ್ಟೇ ಸಚಿವ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನಗೊಂಡಿದ್ದರು. ಪರೋಕ್ಷವಾಗಿ ಸಚಿವ ಸ್ಥಾನಕ್ಕೆ ಬಹಿರಂಗವಾಗಿ ಬೇಡಿಕೆ ಇಟ್ಟಿದ್ದರು. ಆದರೆ ಸದ್ಯಕ್ಕೆ ಸಂಪುಟ ವಿಸ್ತರಣೆ ಮಾಡಲು ಸಿಎಂ ಹಿಂದೇಟು ಹಾಕುತ್ತಿದ್ದಾರೆ. ಈ ನಡುವೆ ಎಂಪಿ ರೇಣುಕಾಚಾರ್ಯ ಹಾಗೂ ಮಾಜಿ ಶಾಸಕ ಜೀವರಾಜ್ ಅವರಿಗೆ ಸಿಎಂ ಹುದ್ದೆ ನೀಡಿ ಅಧಿಕೃತ ಆದೇಶ ಹೊರಡಿಸಲಾಗಿದೆ. ಇದರಿಂದ ಯಡಿಯೂರಪ್ಪ ಅವರ ಇಬ್ಬರು ಆಪ್ತರಿಗೆ ಪ್ರಮುಖ ಹುದ್ದೆ ದೊರೆತಂತಾಗಿದೆ. ರಾಜಕೀಯ ಕಾರ್ಯದರ್ಶಿ ಹುದ್ದೆಯ ಜತೆಗೆ ಅವರಿಗೆ ಸಂಪುಟ ದರ್ಜೆಯ ಸ್ಥಾನಮಾನ ದೊರಕಿದ್ದು, ಸಂಪುಟ ದರ್ಜೆ ಸಚಿವರಿಗೆ ಸಿಗುವ ಎಲ್ಲ ಸೌಲಭ್ಯಗಳೂ ಸಿಗಲಿವೆ. ಭಾನುವಾರ ನಡೆಯಲಿದೆ ಬಿಜೆಪಿ ಕೋರ್ ಕಮಿಟಿ ಸಭೆ ಮತ್ತೊಂದು ಕಡೆಯಲ್ಲಿ ಹಾನಗಲ್, ಸಿಂದಗಿ ಉಪಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿ ಆಯ್ಕೆ ನಿಟ್ಟಿನಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ಭಾನುವಾರ ನಡೆಯಲಿದೆ. ಭಾನುವಾರ ಸಂಜೆ ಬಿಜೆಪಿ ಕೋರ್ ಕಮಿಟಿ ಸಭೆ ನಿಗದಿಯಾಗಿದ್ದು, ಇಲ್ಲಿ ಚರ್ಚೆ ಆದ ಬಳಿಕ ಅಭ್ಯರ್ಥಿಗಳ ಪಟ್ಟಿಯನ್ನು ದೆಹಲಿಗೆ ಕಳಿಸುವ ಸಾಧ್ಯತೆ ಇದೆ. ಸಭೆಯಲ್ಲಿ ಚುನಾವಣಾ ಉಸ್ತುವಾರಿಗಳ ಆಯ್ಕೆಯೂ ನಡೆಯಲಿದೆ. ಇನ್ನು ಬಿಜೆಪಿ ಕೂಡಾ ಅಭ್ಯರ್ಥಿ ಆಯ್ಕೆ ಸರ್ಕಸ್ ಶುರುಮಾಡಿದೆ. ಬಿಜೆಪಿಯಿಂದ ಸಿಂದಗಿ ಕ್ಷೇತ್ರಕ್ಕೆ ಲಕ್ಷ್ಮಣ ಸವದಿ, ಚಿದಾನಂದ್ ಸವದಿ, ರಮೇಶ್ ಬೋಸನೂರ್ ಹೆಸರು ಚಾಲ್ತಿಯಲ್ಲಿದೆ. ಈ ಪೈಕಿ ಸವದಿ ಪುತ್ರ ಚಿದಾನಂದ ಸವದಿಗೆ ಟಿಕೆಟ್ ನೀಡುವಂತೆ ಒತ್ತಡವೂ ಹೆಚ್ಚಿದೆ. ಹಾನಗಲ್ ಕ್ಷೇತ್ರಕ್ಕೆ ಶಿವಕುಮಾರ್ ಉದಾಸಿ, ರೇವತಿ ಉದಾಸಿ, ಕಲ್ಯಾಣ್ ಶೆಟ್ಟರ್, ಮಹಾಂತೇಶ್ ಸೊಪ್ಪಿನ್ ಹೆಸರುಗಳು ಚಾಲ್ತಿಯಲ್ಲಿದೆ. ಈ ಪೈಕಿ ಕಲ್ಯಾಣ್ ಶೆಟ್ಟರ್ ಆರ್‌ಎಸ್‌ಎಸ್ ಹಿನ್ನೆಲೆ ಹೊಂದಿದ್ದಾರೆ.


from India & World News in Kannada | VK Polls https://ift.tt/3DdzBWH

ಕೊಡಗಿನಲ್ಲಿ ಕಾಡುಹಂದಿಗಳ ಹಾವಳಿ; ಪರಿಹಾರ ಕೋರಿ ಬಂದಿಲ್ಲ ಒಂದೂ ಅರ್ಜಿ, ರೈತರು ಬೇಸರ!

ಸುನಿಲ್‌ ಪೊನ್ನೇಟಿ ಮಡಿಕೇರಿ ಮಡಿಕೇರಿ: ಜಿಲ್ಲೆಯ ಅರಣ್ಯದಂಚಿನ ಪ್ರದೇಶಗಳಲ್ಲಿ ಕಾಡುಹಂದಿಗಳ ಹಾವಳಿ ಮಿತಿಮೀರಿದ್ದು, ರೈತರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಆದರೂ, ಸರಕಾರದಿಂದ ಕೋರಿ ಕಳೆದ ಮೂರು ವರ್ಷಗಳಲ್ಲಿ ಒಂದು ಅರ್ಜಿಯೂ ಬಂದಿಲ್ಲ. ಎಂಎಲ್‌ಸಿ ಸುನಿಲ್‌ ಸುಬ್ರಹ್ಮಣಿ ಅವರ ಪ್ರಶ್ನೆಯೊಂದಕ್ಕೆ ಅರಣ್ಯ ಸಚಿವ ಉಮೇಶ್‌ ಕತ್ತಿ ಅವರೇ ವಿಧಾನ ಪರಿಷತ್‌ನಲ್ಲಿ ಈ ಉತ್ತರ ಕೊಟ್ಟಿದ್ದಾರೆ. ಈ ಬೆಳವಣಿಗೆಗೆ ಕಾರಣ ಏನು ಎನ್ನುವುದು ಈಗ ಚರ್ಚೆಯಾಗಬೇಕಿರುವ ವಿಷಯ. ಕೊಡಗಿನಲ್ಲಿ ಮೂರು ವರ್ಷಗಳಲ್ಲಿ ಕಾಡು ಪ್ರಾಣಿಗಳಿಂದ ಮಾನವ ಪ್ರಾಣ ಹಾನಿ ಸೇರಿದಂತೆ ವಿವಿಧ ರೀತಿಯ ಹಾನಿಗೆ ಸಂಬಂಧಿಸಿದಂತೆ 12,230 ಪ್ರಕರಣಗಳು ಸಂಭವಿಸಿದ್ದು, ಅರಣ್ಯ ಇಲಾಖೆಯಿಂದ ಸಂತ್ರಸ್ತರಿಗೆ ಒಟ್ಟು 8.5 ಕೋಟಿ ರೂ. ಪರಿಹಾರ ವಿತರಿಸಲಾಗಿದೆ. ಆದರೆ, ಇದರಲ್ಲಿ ದಾಳಿಯ ಒಂದು ಪ್ರಕರಣವೂ ಇಲ್ಲ. ಕಚೇರಿ ಅಲೆದಾಟ ಕಚೇರಿಯಿಂದ ಕಚೇರಿಗೆ ಅಲೆದಾಟ, ದಾಖಲೆಗಳ ಸಂಗ್ರಹದ ಸಂಕಷ್ಟ, ಅರಣ್ಯ ಇಲಾಖೆಯಲ್ಲಿ'ರೆಡ್‌ ಟೇಪಿಸಂ', ಲಂಚದ ಹಾವಳಿ... ಹೀಗೆ ಹಲವು ಕಾರಣಗಳಿಂದ ಪರಿಹಾರಕ್ಕಾಗಿ ಅರ್ಜಿ ಹಾಕುವ ಗೋಜಿಗೆ ಹೋಗುವುದಿಲ್ಲ ಎನ್ನುವುದು ಬಹುತೇಕ ರೈತರ ಅಭಿಪ್ರಾಯ. ಇಷ್ಟೆಲ್ಲಾ ಮಾಡಿ ಕೊನೆಗೆ ಪರಿಹಾರ ಕೈ ಸೇರುವ ಸಂದರ್ಭದಲ್ಲಿ ಸರಕಾರ ಕೊಟ್ಟಿರುವ ಪರಿಹಾರ ಮೊತ್ತಕ್ಕಿಂತಲೂ 10 ಪಟ್ಟು ಹಣ ಕೈಯಿಂದ ಖರ್ಚಾಗಿರುತ್ತದೆ ಎನ್ನುವುದು ಅನುಭವಿಸಿದವರ ಮಾತು. 4,10,775 ಹೆಕ್ಟೇರ್‌ ವಿಸ್ತೀರ್ಣ ಇರುವ ಕೊಡಗಿನಲ್ಲಿ ಶೇ.33ರಷ್ಟು ಅಂದರೆ 1,34,615 ಹೆಕ್ಟೇರ್‌ನಷ್ಟು ಅರಣ್ಯ ಪ್ರದೇಶವಿದೆ. ಹಾಗಾಗಿ ಜಿಲ್ಲೆಯ ಐದೂ ತಾಲೂಕುಗಳಲ್ಲೂ ಬಹುತೇಕ ಗ್ರಾಮೀಣ ಪ್ರದೇಶಗಳು ಅರಣ್ಯದಂಚಿನಲ್ಲೇ ಕಂಡು ಬರುತ್ತದೆ. ಜನವಸತಿ ಪ್ರದೇಶ ಮತ್ತು ಕೃಷಿ ಭೂಮಿಗಳಲ್ಲಿ ವನ್ಯ ಪ್ರಾಣಿಗಳ ಹಾವಳಿಯೂ ಇಲ್ಲಿ ಸಾಮಾನ್ಯ. ಕಾಡಾನೆ, ಹುಲಿ ದಾಳಿ ಪ್ರಕರಣಗಳು ಆಗಾಗ್ಗೆ ಸದ್ದು ಮಾಡುತ್ತಿರುತ್ತವೆ. ಭತ್ತದ ಗದ್ದೆಗಳಿಗೆ ಕಾಡುಹಂದಿಗಳ ದಾಳಿಯೂ ವರ್ಷದ ಬಹುತೇಕ ಸಮಯದಲ್ಲಿ ರೈತರನ್ನು ಕಂಗೆಡುವಂತೆ ಮಾಡುತ್ತದೆ. ಅಲ್ಪಕಾಲಿಕ ವಾಣಿಜ್ಯ ಬೆಳೆಗಳಾದ ಮರಗೆಣಸು, ಸುವರ್ಣಗೆಡ್ಡೆ, ಸಿಹಿಗೆಣಸು, ಮುಸುಕಿನ ಜೋಳಕ್ಕೂ ಕಾಡುಹಂದಿಗಳೇ ದೊಡ್ಡ ಶತ್ರುಗಳು. ಫಸಲು ಇನ್ನೇನು ಕೈಸೇರಬೇಕು ಎನ್ನುವ ಹೊತ್ತಿನಲ್ಲೇ ಜಮೀನಿಗೆ ದಾಳಿಯಿಟ್ಟು ಕೃಷಿಕರ ವರ್ಷದ ಶ್ರಮವನ್ನು ತಿಂದು ತೇಗುತ್ತವೆ. ಇಷ್ಟಾದರೂ ರೈತರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸದಿರುವುದಕ್ಕೆ ಕಠಿಣ ನಿಯಮ ಕಾರಣ. ರೈತರಲ್ಲಿ ಜಾಗೃತಿ ಮೂಡಿಸಬೇಕು ಕಾಡು ಹಂದಿ ಮಾತ್ರವಲ್ಲದೆ ಇತರ ವನ್ಯ ಪ್ರಾಣಿಗಳಿಂದ ನಷ್ಟ ಸಂಭವಿಸಿದಾಗಲೂ ಹೆಚ್ಚಿನ ರೈತರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸುವುದಕ್ಕೆ ಮನಸ್ಸು ಮಾಡುವುದಿಲ್ಲ. ಸರಕಾರದ ಕ್ಲಿಷ್ಟಕರ ನಿಯಮಗಳ ಜೊತೆಯಲ್ಲಿ ಮಾನಸಿಕ ಮತ್ತು ದೈಹಿಕ ಶ್ರಮ ಇವರನ್ನು ಹಿಂದಡಿ ಇಡುವಂತೆ ಮಾಡುತ್ತದೆ. ಬೆಳೆ ಕಳೆದುಕೊಂಡಾಗ ಕೆಲವರು ಮಾಧ್ಯಮಗಳಿಗೆ ಮಾಹಿತಿ ನೀಡಿ ಸುಮ್ಮನಾಗುತ್ತಾರೆ. ಮತ್ತೆ ಕೆಲವರು ತಮ್ಮ ಪರಿಚಯದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮೌಖಿಕವಾಗಿ ಗಮನಕ್ಕೆ ತರುವ ಕೆಲಸವನ್ನಷ್ಟೇ ಮಾಡುತ್ತಾರೆ. ಆದರೆ, ಬಹುತೇಕರು ತಮ್ಮ ಹಣೆಬರಹಕ್ಕೆ ಬೈದುಕೊಂಡು ಸುಮ್ಮನಾಗಿ ಬಿಡುತ್ತಾರೆ. ಪರಿಹಾರಕ್ಕಾಗಿನ ನಿಯಮಗಳ ಸರಳೀಕರಣ, ಪರಿಹಾರದ ಮೊತ್ತ ಹೆಚ್ಚಿಸುವುದು ಹಾಗೂ ರೈತರಲ್ಲಿ ಜಾಗೃತಿ ಮೂಡಿಸುವುದರಿಂದ ವನ್ಯ ಪ್ರಾಣಿಗಳಿಂದ ಹಾನಿಗೆ ಒಳಗಾಗುವ ಎಲ್ಲಾ ಕೃಷಿಕರು ಸರಕಾರದಿಂದ ಸಿಗುವ ಪರಿಹಾರ ಪಡೆದುಕೊಳ್ಳುವಂತೆ ಮಾಡಬಹುದು ಎನ್ನುತ್ತಾರೆ ರೈತ ಮುಖಂಡರು. ಕಾಡುಹಂದಿಗಳಿಂದ ಕೃಷಿ ನಷ್ಟವಾದ ಬಗ್ಗೆ ಪರಿಹಾರ ಕೋರಿ ಕೊಡಗು ಜಿಲ್ಲೆಯಲ್ಲಿ ಮೂರು ವರ್ಷಗಳಲ್ಲಿ ಯಾವುದೇ ಅರ್ಜಿಗಳು ಸ್ವೀಕೃತವಾಗಿಲ್ಲ. ಕಾಡುಹಂದಿಗಳ ಉಪಟಳ ಅತಿ ಹೆಚ್ಚಾದಲ್ಲಿ ಅವುಗಳನ್ನು ಕೊಲ್ಲಲು ಆದೇಶ ನೀಡುವ ಅಧಿಕಾರವನ್ನು ಸಂಬಂಧಿಸಿದ ವೃತ್ತ ಅರಣ್ಯ/ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ನೀಡಲಾಗಿದೆ. ಉಮೇಶ್‌ ಕತ್ತಿ, ಅರಣ್ಯ ಸಚಿವ (ವಿಧಾನಪರಿಷತ್‌ನಲ್ಲಿ) ಪರಿಹಾರಕ್ಕಾಗಿ ರೈತರು ಅರ್ಜಿಯನ್ನೇ ಸಲ್ಲಿಸಿಲ್ಲ ಎನ್ನುತ್ತಾರೆ. ಯಾಕೆ ಹೀಗೆ ಎಂದು ಅವರು ಯೋಚಿಸಿದ್ದಾರಾ? ಮೊದಲು ಪರಿಹಾರದ ಮೊತ್ತ ಹೆಚ್ಚಿಸಲಿ. ನಿಯಮಾವಳಿಗಳನ್ನು ಸರಳಗೊಳಿಸಲಿ. ಇದು ಆನೆ ಸೇರಿದಂತೆ ಎಲ್ಲಾ ಬಗೆಯ ವನ್ಯಪ್ರಾಣಿಗಳಿಂದ ಆಗುವ ಹಾನಿಗೂ ಅನ್ವಯಿಸಬೇಕು. ಹೇಮಂತ್‌ ಪಾರೇರ, ಕೃಷಿಕ, ಯಡವನಾಡು


from India & World News in Kannada | VK Polls https://ift.tt/3AWJSFV

2005ರಲ್ಲಿ ಕಣ್ಮರೆಯಾಗಿದ್ದ ಸೈನಿಕನ ಮೃತದೇಹ 16 ವರ್ಷಗಳ ಬಳಿಕ ಹಿಮ ಪರ್ವತದಲ್ಲಿ ಪತ್ತೆ

ಉತ್ತರಕಾಶಿ: ಸುಮಾರು 16 ವರ್ಷಗಳ ಹಿಂದೆ ಕಣ್ಮರೆಯಾಗಿದ್ದ ಯೋಧನ ಮೃತದೇಹದ ಭಾಗಗಳು ಉತ್ತರಕಾಶಿಯ 7,075 ಮೀಟರ್ ಎತ್ತರದ ಪರ್ವತದ ತುದಿಯಲ್ಲಿ ಪತ್ತೆಯಾಗಿವೆ. 2005ರಿಂದ ನಾಪತ್ತೆಯಾಗಿದ್ದ ಅಮರೀಶ್ ತ್ಯಾಗಿ ಅವರ ದೇಹವನ್ನು ಗಾಜಿಯಾಬಾದ್‌ನಲ್ಲಿರುವ ಅವರ ಕುಟುಂಬಕ್ಕೆ ಸೋಮವಾರ ಸಕಲ ಸೇನಾ ಗೌರವಗಳೊಂದಿಗೆ ಕಳುಹಿಸಲಾಗಿದೆ. 2005ರಲ್ಲಿ ಗರ್ವಾಲ್ ಹಿಮಾಲಯ ಪ್ರದೇಶದಲ್ಲಿನ ಅಪಾಯಕಾರಿ ಸತೋಪಂತ್ ಪರ್ವತವನ್ನು ಏರಲು ಹೊರಟಿದ್ದ ಮೂವರು ಸೈನಿಕರು ಕಣ್ಮರೆಯಾಗಿದ್ದರು. ಇಬ್ಬರ ಮೃತದೇಹಗಳು ಬಳಿಕ ಪತ್ತೆಯಾಗಿದ್ದವು. ಉತ್ತರ ಪ್ರದೇಶದ ಯೋಧ ಅವರ ದೇಹ ಸಿಕ್ಕಿರಲಿಲ್ಲ. ಈ ಹದಿನಾರು ವರ್ಷಗಳ ಅವಧಿಯಲ್ಲಿ ಅಮರೀಶ್ ತ್ಯಾಗಿ ಅವರು ತಮ್ಮ ಪುಟ್ಟ ಮಗಳು ಬೆಳೆಯುವುದನ್ನು ನೋಡಿರಲಿಲ್ಲ. ಮಗನನ್ನು ಕೊನೆಯ ಬಾರಿ ನೋಡುವ ಆಸೆ ಈಡೇರದೆ ಅವರ ತಾಯಿ ಕೊನೆಯುಸಿರೆಳೆದಿದ್ದರು. ಪತಿ ಹೇಗೋ ಬದುಕಿರಬಹುದೇನೋ ಎಂಬ ಮನದ ಮೂಲೆಯಲ್ಲಿ ನಿರೀಕ್ಷೆ ಹೊಂದಿದ್ದ ಅವರ ಪತ್ನಿ ದಿನಗಳನ್ನು ದೂಡಿದ್ದರು. ಕಳೆದ ವಾರ ಸತೋಪಂತ್ ಪರ್ವತಾರೋಹಣಕ್ಕೆ ತೆರಳಿದ್ದ ಸೇನಾ ತಂಡಕ್ಕೆ ಮೃತದೇಹವೊಂದು ಸಿಕ್ಕಿತ್ತು. ಅದರ ಜತೆಯಲ್ಲಿ ಪರ್ವತಾರೋಹಣದ ಸಾಧನಗಳು ಕಂಡುಬಂದಿದ್ದವು. ಅದು ತ್ಯಾಗಿ ಅವರದ್ದೇ ದೇಹ ಎಂದು ಸೇನೆ ಖಚಿತಪಡಿಸಿದ್ದು, ಅದನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಿದೆ. 'ನಾಯ್ಕ್ ಅಮರೀಶ್ ತ್ಯಾಗಿ ಅವರು ಕೊರಕಲಿನಲ್ಲಿ ಬಿದ್ದು ಸಾಯುವಾಗ ಅವರಿಗೆ ಕೇವಲ 32 ವರ್ಷವಾಗಿತ್ತು' ಎಂದು 9ನೇ ಬಿಹಾರ ರೆಜಿಮೆಂಟ್ ಕಮಾಂಡಿಂಗ್ ಅಧಿಕಾರಿ ಕರ್ನಲ್ ರಾಜೇಂದ್ರ ಪ್ರಸಾದ್ ತಿಳಿಸಿದ್ದಾರೆ. ಸೇನೆಯ ಸಮವಸ್ತ್ರ ಮತ್ತು ಅವರೊಂದಿಗೆ ದೊರೆತ ಪರ್ವತಾರೋಹಣ ಟೂಲ್‌ಕಿಟ್ ಆಧಾರದಲ್ಲಿ ಅವರ ಗುರುತು ಖಚಿತಪಡಿಸಿಕೊಳ್ಳಲಾಗಿದೆ. ಅವರ ಕುಟುಂಬದ ಸದಸ್ಯರು ಕೂಡ ಗುರುತು ದೃಢಪಡಿಸಿದ್ದಾರೆ. ಆರಂಭದಲ್ಲಿ ಡಿಎನ್‌ಎ ಪರೀಕ್ಷೆ ವರದಿಗಾಗಿ ಕಾಯಲು ನಿರ್ಧರಿಸಲಾಗಿತ್ತು. ಆದರೆ, ಸತೋಪಂತ್‌ನಲ್ಲಿ ನಾಪತ್ತೆಯಾಗಿರುವ ಸೈನಿಕ ಎಂದು ತ್ಯಾಗಿ ಅವರ ಹೆಸರು ಮಾತ್ರವೇ ದಾಖಲೆಗಳಲ್ಲಿ ಇರುವುದರಿಂದ ಹಾಗೂ ಅವರ ದೈಹಿಕ ವಿವರಗಳು ಅದನ್ನು ಹೋಲುವುದರಿಂದ ಕಾಯುವ ಅಗತ್ಯವಿಲ್ಲ ಎಂದು ತೀರ್ಮಾನಿಸಲಾಯಿತು. ಸೇನೆಯು ದೃಢೀಕರಣ ಪತ್ರ ಕಳಿಸಿದ ಬಳಿಕ ನಾವು ದೇಹವನ್ನು ಅವರಿಗೆ ಒಪ್ಪಿಸಿದೆವು ಎಂದು ಹೇಳಿದ್ದಾರೆ. ಹದಿನಾರು ವರ್ಷಗಳ ಹಿಂದೆಯೇ ಮರೆಯಾಗಿದ್ದರೂ, ತ್ಯಾಗಿ ಅವರ ಹುಟ್ಟೂರು, ಮುರಾದನಗರದ ಹನ್ಸಾಲಿ ಅವರನ್ನು ಮರೆತಿರಲಿಲ್ಲ. ಅವರ ಮೃತದೇಹದ ಅವಶೇಷಗಳನ್ನು ಭಾರಿ ಮೆರವಣಿಗೆಯೊಂದಿಗೆ ತವರೂರಿಗೆ ಕರೆತರಲಾಯಿತು. ಜನರು ದೇಶಭಕ್ತಿಯ ಗೀತೆಗಳನ್ನು ಹಾಡಿ, ಘೋಷಣೆಗಳನ್ನು ಕೂಗಿದರು. ಧ್ವಜ ಹಾರಿಸಿ ಯೋಧನಿಗೆ ವಂದನೆ ಸಲ್ಲಿಸಿದರು. ಸೇನಾ ಗೌರವಗಳೊಂದಿಗೆ ಮೃತದೇಹವನ್ನು ಹಸ್ತಾಂತರಿಸಲಾಯಿತು. 'ನಮ್ಮ ತಾಯಿ 2019ರಲ್ಲಿ ಮೃತಪಟ್ಟರು. ಕೊನೆಯ ಉಸಿರಿನವರೆಗೂ ಮಗನನ್ನು ಜೀವಂತ ನೋಡುವ ಆಸೆ ಅವರಲ್ಲಿತ್ತು' ಎಂದು ಅಂತ್ಯಸಂಸ್ಕಾರದ ಬಳಿಕ ಅಮರೀಶ್ ಅವರ ಅಣ್ಣ ವಿನೇಶ್ ತ್ಯಾಗಿ ಕಣ್ಣೀರಿಟ್ಟರು. ನಾಳ್ವರು ಸಹೋದರರಲ್ಲಿ ಕೊನೆಯವರಾದ ಅಮರೀಶ್, 19ನೇ ವಯಸ್ಸಿನಲ್ಲಿ ಸೇನೆ ಸೇರಿಕೊಂಡಿದ್ದರು. ಅವರ ತಂದೆ ಕೂಡ ನಾಯ್ಕ್ ಆಗಿದ್ದರು. 'ನಾನು ಅನಕ್ಷರಸ್ಥ. ಹೀಗಾಗಿ ಸೇನೆಯನ್ನು ಸೇರಲು ಆಗಿರಲಿಲ್ಲ. ನಮ್ಮದು ಕಡು ಬಡತನದ ಕುಟುಂಬವಾಗಿದ್ದರಿಂದ ನಮ್ಮ ಹಿರಿಯಣ್ಣ ಚಿಕ್ಕ ವಯಸ್ಸಿನಲ್ಲಿಯೇ ದುಡಿಯಲು ಆರಂಭಿಸಿದ. ಮತ್ತೊಬ್ಬ ಅಣ್ಣ ಸರ್ಕಾರಿ ಉದ್ಯೋಗಕ್ಕೆ ಸಿದ್ಧಗೊಳ್ಳುತ್ತಿದ್ದ. ಅತಿ ಕಿರಿಯವನಾದ ಅಮರೀಶ್, ಅಪ್ಪನಂತೆಯೇ ದೇಶ ಸೇವೆಗೆ ಬಯಸಿದ್ದ. ಹತ್ತನೇ ತರಗತಿ ಪರೀಕ್ಷೆ ಮುಗಿಯುತ್ತಿದ್ದಂತೆಯೇ ಸೇನೆಯ ತರಬೇತಿಗೆ ಹೋದ. ಅವನಿಗೆ ಓಡುವುದೆಂದರೆ ಬಹಳ ಇಷ್ಟ. ಸಾಕಷ್ಟು ದೂರ ಓಡುತ್ತಿದ್ದ' ಎಂದು ವಿನೇಶ್ ನೆನಪಿಸಿಕೊಂಡರು. 2003ರಲ್ಲಿ ಅಮರೀಶ್ ಅವರು ಬಬಿತಾ ಜತೆ ಮದುವೆತಾಗಿದ್ದರು. ಸತೋಪಂತ್ ಪರ್ವತಾರೋಹಣಕ್ಕೆ ಅಮರೀಶ್ ತೆರಳಿದ್ದಾಗ ಬಬಿತಾ ಐದು ತಿಂಗಳ ಗರ್ಭಿಣಿ. ಈಗ 15 ವರ್ಷ ಪ್ರಾಯದ ತನ್ನ ಮಗುವನ್ನು ನೋಡುವ ಭಾಗ್ಯ ಅಮರೀಶ್‌ಗೆ ಸಿಗಲೇ ಇಲ್ಲ.


from India & World News in Kannada | VK Polls https://ift.tt/3uxnnVG

ಬಲವಿಲ್ಲದೆ ಸೊರಗುತ್ತಿದೆ ಮೇಕೆದಾಟು ಹೋರಾಟ; ವೈಯಕ್ತಿಕ ಹಿತಾಸಕ್ತಿಗಳಿಗೆ ಬಲಿಯಾಯ್ತೇ ಪ್ರತಿಭಟನೆ?!

ಆರ್‌.ಶ್ರೀಧರ್‌ ರಾಮನಗರ: ಬೆಂಗಳೂರು ಮಹಾನಗರ ಸೇರಿದಂತೆ ಬಯಲು ಸೀಮೆ ಜಿಲ್ಲೆಗಳ ನೀರಿನ ಬರ ನೀಗಿಸುವ ಜಾರಿಗೆ ಒತ್ತಾಯಿಸುವ ಸಲುವಾಗಿಯೇ ರಚನೆಗೊಂಡಿದ್ದ 'ಮೇಕೆದಾಟು ಹೋರಾಟ' ಸದ್ಯಕ್ಕೆ ಬಲ ಕಳೆದುಕೊಂಡು ಸೊರಗುತ್ತಿದೆ. ಹೋರಾಟಗಳು ನಡೆಯುತ್ತಿದ್ದರೂ ಅದು ಹೆಸರಿಗಷ್ಟೇ, ಕೆಲವೇ ಕೆಲವು ನಾಯಕರ ಸ್ವಾರ್ಥ ಸಾಧನೆಗಷ್ಟೇ ಸೀಮಿತವಾಗಿದ್ದು, ಸರಕಾರದ ಮೇಲೆ ಒತ್ತಡ ಹೇರುವಷ್ಟು ಪ್ರಬಲವೂ ಆಗಿಲ್ಲ, ಸಂಘಟಿತವೂ ಆಗಿಲ್ಲ ಎನ್ನುವುದು ವಾಸ್ತವ. ನಿರ್ದಶನವಾಯ್ತು ಪಾದಯಾತ್ರೆ ಮೇಕೆದಾಟು ಹೋರಾಟ ಕಾವು ಕಳೆದುಕೊಂಡಿದೆ ಎಂಬುದನ್ನು ಇತ್ತೀಚೆಗೆ ನಡೆದ ಬೆಂಗಳೂರು ಪಾದಯಾತ್ರೆ ಸ್ಪಷ್ಟ ನಿದರ್ಶನವಾಗಿದ್ದು ದುರಂತ. ಎಲ್ಲರೂ ಒಂದಾಗಿ ಸಂಘಟಿತ ಹೋರಾಟ ನಡೆಸುವ ಬದಲು ಜಿಲ್ಲೆಯ ವಿವಿಧೆಡೆ ವಿವಿಧ ಸಂಘಟನೆಗಳು ಪ್ರತ್ಯೇಕ ನಡೆಸಿ, ಹೋರಾಟದ ಮೂಲ ಉದ್ದೇಶವನ್ನೇ ಅಣಕಗೊಳಿಸಿದರು. ಮೊದಲ ದಿನದ ಹೋರಾಟದಲ್ಲಿ ಪಾಲ್ಗೊಂಡಿದ್ದ ಧಾರ್ಮಿಕ ಮುಖಂಡರು ಹಾಗೂ ಮಠಾಧೀಶರು ಎರಡನೇ ದಿನವೇ ನಾಪತ್ತೆಯಾಗಿದ್ದು ಗಮನಾರ್ಹ. ಜನಬಲವೂ ಇಲ್ಲ ಮೊದಲ ದಿನ ಸುಮಾರು 200 ಮಂದಿ ಮೇಕೆದಾಟುವಿನಲ್ಲಿ ಸೇರಿದ್ದರೆ, ಪಾದಯಾತ್ರೆ ಮುಂದುವರೆದಂತೆ ಹೋರಾಟಗಾರರ ಸಂಖ್ಯೆ ಕರಗತೊಡಗಿತು. ಎರಡನೇ ದಿನದ ಅಂತ್ಯದ ಹೊತ್ತಿಗೆ ಬೆರಳೆಣಿಕೆಯಷ್ಟೇ ಮಂದಿ ಉಳಿದಿದ್ದರು. ಇದರಿಂದ ಮೂರನೇ ದಿನಕ್ಕೆ ಹೋರಾಟವನ್ನೇ ಕೈಬಿಡಲಾಯಿತು. ಸಂಘಟನೆಗಳ ನಡುವೆ ಜಂಗೀಕುಸ್ತಿ ಮೇಕೆದಾಟು ಹೋರಾಟಕ್ಕೆ ಆಗ್ರಹಿಸಿ ಮೊದಲು ರಚನೆಗೊಂಡಿದ್ದ ಮೇಕೆದಾಟು ಹೋರಾಟ ಸಮಿತಿ. ಬಳಿಕ ಇದೇ ಸಮಿತಿ ಇಬ್ಬಾಗಗೊಂಡು, ರಾಜ್ಯ ಸಮಿತಿ ಪ್ರತ್ಯೇಕಗೊಂಡಿತು. ಎಲ್ಲ ಸಂಘಟನೆಗಳಲ್ಲಿಯು ಇರುವ ಹಾಗೆಯೇ ಈ ಎರಡು ಸಮಿತಿಗಳ ನಡುವೆ ಜಂಗಿಕುಸ್ತಿ ನಡೆಯುತ್ತಿದೆ. ಅಲ್ಲಿದ್ದವರು ಇಲ್ಲಿನವರ ಮಾತು ಕೇಳಲಾರರು, ಇಲ್ಲಿದ್ದವರು ಅಲ್ಲಿನ ಮಾತು ಕೇಳಲಾರರು ಎಂಬಂತಾಗಿದೆ ಹೋರಾಟ ಸಮಿತಿ ಪರಿಸ್ಥಿತಿ. ಇನ್ನು ರಾಜ್ಯ ರೈತ ಸಂಘಟನೆಯಂತೂ 21 ಭಾಗಗಳಾಗಿ ಒಡೆದು ಹೋಗಿ ತಮ್ಮ ಮೂಲ ಶಕ್ತಿಯನ್ನೇ ಕಳೆದುಕೊಂಡಿದೆ. ಒಡೆದು ಚೂರಾಗಿರುವ ಒಂದೊಂದರದ್ದೂ ಒಂದೊಂದು ದಿಕ್ಕು. ಇವರ ನಡುವಿನ ಮೇಲಾಟದಲ್ಲಿ ಯಾರನ್ನು ಬೆಂಬಲಿಸುವುದು, ಯಾರನ್ನು ಬಿಡುವುದು ಎಂಬ ಸ್ಥಿತಿಯಲ್ಲಿ ಜನರಿದ್ದಾರೆ. ಬಲವಾದ ಹೋರಾಟ ಮಾಡಿ ಏನಾದರೂ ಸಾಧಿಸಬೇಕು ಎಂಬ ಪ್ರಾಮಾಣಿಕ ಉದ್ದೇಶ ಇದ್ದವರಿಗೆ ದಿಕ್ಕು ಕಾಣದ ಸ್ಥಿತಿ ಇದೆ. ಮನೆಯೊಂದು ಮೂರು ಬಾಗಿಲು ಮೇಕೆದಾಟು ಯೋಜನೆಗೆ ಜಾರಿಗೆ ಆಗ್ರಹಿಸಿ ವಾರದ ಹಿಂದೆ ನಡೆದ ಪಾದಯಾತ್ರೆ ಒಡೆದ ಮನೆಯಾಗಿತ್ತು. ಮೇಕೆದಾಟುವಿನಲ್ಲಿ ಒಂದಷ್ಟು ಹೋರಾಟಗಾರರು ಒಗ್ಗೂಡಿದರೆ, ರಾಮನಗರದಲ್ಲಿ ಒಂದಷ್ಟು ಹೋರಾಟಗಾರರು ಸೇರಿದ್ದರು. ಪಾದಯಾತ್ರೆ ಎರಡನೇ ದಿನಕ್ಕೆ ಸುಸ್ತು ಹೊಡೆದು ಸ್ಥಗಿತಗೊಂಡಿತು. ಇಂತಹ ಸತ್ವವಿಲ್ಲದ ಹೋರಾಟಗಳಿಂದ ಏನನ್ನೂ ಸಾಧಿಸಲಾಗದು. ಒಗ್ಗಟ್ಟಿನ ಹೋರಾಟ ಅನಿವಾರ‍್ಯ ನೀರಿನ ಬವಣೆ ನೀಗಬೇಕು ಎಂಬ ಪ್ರಾಮಾಣಿಕತೆ ಇರುವುದೇ ಹೌದಾದರೆ ಎಲ್ಲ ಸಂಘಟನೆಗಳು, ಸ್ವಾಮೀಜಿಗಳು, ಸಮಾಜದ ಗಣ್ಯರು, ಜನಪ್ರತಿನಿಧಿಗಳು ತಮ್ಮೊಳಗಿನ ಭಿನ್ನಮತ ಮರೆತು ಒಟ್ಟಾಗಿ ಹೋರಾಟ ನಡೆಸಬೇಕು. ಆಗ ಮಾತ್ರ ಸರಕಾರ ಹೋರಾಟದ ಬಿಸಿಗೆ ಮಣಿದು ಯೋಜನೆ ಜಾರಿಗೆ ಮುಂದಾಗಬಹುದು. ಅದಿಲ್ಲದ್ದರೆ ಎಲ್ಲವೂ ವ್ಯರ್ಥ ಎನ್ನುತ್ತಾರೆ ಹೋರಾಟ ಸಮಿತಿಯ ಗೋ.ರಾ.ಶ್ರೀನಿವಾಸ್‌. ಸಾಮೂಹಿಕ ನಾಯಕತ್ವದ ಮೂಲಕ ಹೋರಾಡಿದರೆ ಎಲ್ಲವೂ ಸಾಧ್ಯ. ಒಗ್ಗಟ್ಟಿನ ಹೋರಾಟದ ಬದಲು ವೈಯಕ್ತಿಕ ಪ್ರತಿಷ್ಠೆಯೇ ಹೆಚ್ಚಾದರೆ ಏನನ್ನೂ ಸಾಧಿಸಲಾಗದು ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ನಾಯಕರ ನಡುವಿನ ಪ್ರತಿಷ್ಠೆ, ಸ್ವಾರ್ಥ, ಭಿನ್ನಮತದಿಂದ ಮೇಕೆದಾಟು ಹೋರಾಟ ದಿನಗಳೆದಂತೆ ದುರ್ಬಲಗೊಳ್ಳುತ್ತಾ ಸಾಗಿದೆ. ಇದರಿಂದ ಏನನ್ನೂ ಸಾಧಿಸಲಾಗದು. ಗೋ.ರಾ.ಶ್ರೀನಿವಾಸ್‌, ಜಿಲ್ಲಾಸಂಚಾಲಕ ಮೇಕೆದಾಟು ಹೋರಾಟ ಸಮಿತಿವೈಯಕ್ತಿಕವಾಗಿ ಹೋರಾಟಗಳು ಶುರುವಾಗಿರುವುದರಿಂದ ಮೇಕೆದಾಟು ಮಾತ್ರವಲ್ಲ ಎಲ್ಲ ಹೋರಾಟಗಳು ನೆಲೆ ಕಳೆದುಕೊಳ್ಳುತ್ತಿವೆ. ಮೇಕೆದಾಟು ಯೋಜನೆ ಕೇವಲ ಕನಕಪುರದವರಿಗೆ ಮಾತ್ರ ಸೀಮಿತವಲ್ಲ. ಇದು ರಾಜ್ಯದ ಯೋಜನೆ. ಹೀಗಾಗಿ ಎಲ್ಲರೂ ತಮ್ಮ ಹಿತಾಸಕ್ತಿಗಳನ್ನು ಬದಿಗಿಟ್ಟು ಒಗ್ಗಟ್ಟಿನ ಹೋರಾಟ ಮಾಡಬೇಕು. ಆ ಮೂಲಕ ಗುರಿ ಸಾಧಿಸಬೇಕು. ಮಲ್ಲಿಕಾರ್ಜುನ್‌, ಹೋರಾಟಗಾರ


from India & World News in Kannada | VK Polls https://ift.tt/3olnhzq

IPL 2021: ಪ್ಲೇ-ಆಫ್ಸ್‌ ತಲುಪಲು ಆರ್‌ಸಿಬಿ ಇನ್ನೂ ಎಷ್ಟು ಪಂದ್ಯ ಗೆಲ್ಲಬೇಕು?

ದುಬೈ: ಹದಿನಾಲ್ಕನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯು ಕುತೂಹಲ ಘಟ್ಟದಲ್ಲಿದೆ. ಟೂರ್ನಿಯ ಪ್ಲೇ-ಆಫ್‌ ಟಿಕೆಟ್‌ ಗಿಟ್ಟಿಸಿಕೊಳ್ಳುವ ಸಲುವಾಗಿ ತಂಡಗಳ ನಡುವೆ ಭಾರಿ ಪೈಪೋಟಿ ನಡೆಯುತ್ತಿದೆ. ಇದರ ನಡುವೆ ನಾಯಕತ್ವದ ತಂಡ ಪ್ಲೇ-ಆಫ್‌ಗೆ ಅರ್ಹತೆ ಪಡೆಯಲು ಇನ್ನೂ ಎಷ್ಟು ಪಂದ್ಯಗಳು ಗೆಲ್ಲಬೇಕೆಂಬ ಪ್ರಶ್ನೆ ಆರ್‌ಸಿಬಿ ಅಭಿಮಾನಿಗಳಿಗೆ ಕಾಡುತ್ತಿರುವುದರಲ್ಲಿ ಅನುಮಾನವೇ ಇಲ್ಲ. ಅಂದಹಾಗೆ ಬುಧವಾರ ರಾತ್ರಿ ರಾಜಸ್ಥಾನ್‌ ರಾಯಲ್ಸ್ ವಿರುದ್ಧ ನಡೆದಿದ್ದ 2021ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 7 ವಿಕೆಟ್‌ಗಳ ಭರ್ಜರಿ ಗೆಲುವು ಪಡದಿದೆ. ಆ ಮೂಲಕ ಆರ್‌ಸಿಬಿ ಆಡಿರುವ ಒಟ್ಟು 11 ಪಂದ್ಯಗಳಲ್ಲಿ 7ರಲ್ಲಿ ಗೆದ್ದು, ಇನ್ನುಳಿದ 4 ಹಣಾಹಣಿಗಳಲ್ಲಿ ಸೋಲು ಅನುಭವಿಸಿದೆ. ಬುಧವಾರ ಪಂದ್ಯದ ಅಂತ್ಯಕ್ಕೆ 14 ಅಂಕಗಳನ್ನು ಸಂಪಾದಿಸಿರುವ ಬೆಂಗಳೂರು ತಂಡ ಪಾಯಿಂಟ್ಸ್‌ ಟೇಬಲ್‌ನಲ್ಲಿ ಮೂರನೇ ಸ್ಥಾನದಲ್ಲಿದೆ ಹಾಗೂ ಕೊಹ್ಲಿ ಬಾಯ್ಸ್‌ಗೆ ಇನ್ನೂ ಮೂರು ಲೀಗ್‌ ಪಂದ್ಯಗಳು ಬಾಕಿ ಇವೆ. ಅ.3 ರಂದು ಪಂಜಾಬ್‌ ಕಿಂಗ್ಸ್‌, ಅ.6 ರಂದು ಸನ್‌ರೈಸರ್ಸ್ ಹೈದರಾಬಾದ್‌ ಹಾಗೂ ಅ.8 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್‌ಸಿಬಿ ಸೆಣಸಲಿದೆ. ಆರ್‌ಸಿಬಿಗೆ ಒಂದು ಗೆಲುವು ಅಗತ್ಯ: ಅಂದಹಾಗೆ ಆರ್‌ಸಿಬಿ ಪ್ಲೇಆಫ್‌ಗೆ ಅರ್ಹತೆ ಪಡೆಯಲು ಇನ್ನುಳಿದ ಮೂರು ಪಂದ್ಯಗಳಲ್ಲಿ ಒಂದರಲ್ಲಿ ಗೆಲುವು ಅಗತ್ಯವಿದೆ. ಆದರೆ, 10 ಅಂಕಗಳನ್ನು ಕಲೆ ಹಾಕಿರುವ ಕೋಲ್ಕತಾ ನೈಟ್‌ ರೈಡರ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳಿಗೆ ಇನ್ನೂ ಮೂರು ಪಂದ್ಯಗಳು ಬಾಕಿ ಇವೆ. ಹಾಗಾಗಿ, ಈ ಮೂರು ಹಣಾಹಣಿಗಳಲ್ಲಿ ತಲಾ ಒಂದೊಂದು ಪಂದ್ಯದಲ್ಲಿ ಇವರೆಡೂ ಸೋಲು ಅನುಭವಿಸಬೇಕಾಗುತ್ತದೆ. ಆಗ ಆರ್‌ಸಿಬಿ ಇನ್ನುಳಿದ ಮೂರರಲ್ಲಿ ಒಂದು ಪಂದ್ಯ ಗೆದ್ದರೂ ಪ್ಲೇಆಫ್‌ಗೆ ಸುಲಭವಾಗಿ ಅರ್ಹತೆ ಪಡೆದುಕೊಳ್ಳಲಿದೆ. ಮೂರರಲ್ಲಿ ಎರಡು ಗೆದ್ದರೆ ಆರ್‌ಸಿಬಿ ಸೇಫ್‌: ಒಂದು ವೇಳೆ ಬೆಂಗಳೂರು ಮೂರರಲ್ಲಿ ಒಂದು ಪಂದ್ಯ ಗೆದ್ದು, ಕೋಲ್ಕತಾ ಹಾಗೂ ಮುಂಬೈ ಇಂಡಿಯನ್ಸ್ ಇನ್ನುಳಿದ ಮೂರೂ ಪಂದ್ಯಗಳಲ್ಲಿ ಗೆಲುವು ಪಡೆದರೆ, ಆಗ ಈ ಮೂರು ತಂಡಗಳ ಅಂಕ ಸಮಬಲವಾಗುತ್ತದೆ. ಈ ವೇಳೆ ನೆಟ್‌ ರನ್‌ರೇಟ್‌ ಆಧಾರದ ಮೇಲೆ ಈ ಮೂರು ತಂಡಗಳಲ್ಲಿ ಒಂದು ತಂಡಕ್ಕೆ ಪ್ಲೇಆಫ್‌ ಬಾಗಿಲು ಬಂದ್‌ ಆಗಬಹುದು. ಈ ಹಿನ್ನೆಲೆಯಲ್ಲಿ ಆರ್‌ಸಿಬಿ ಇನ್ನುಳಿದ ಮೂರರಲ್ಲಿ ಎರಡು ಪಂದ್ಯಗಳಲ್ಲಿ ಗೆಲುವು ಪಡೆದರೆ, ಯಾವುದೇ ಅಡ್ಡಿಯಿಲ್ಲದೆ ನಾಕೌಟ್‌ ಹಂತಕ್ಕೆ ಪ್ರವೇಶ ಮಾಡಲಿದೆ. ಆದರೆ, ಸತತ ಮೂರು ಪಂದ್ಯಗಳಲ್ಲಿ ಗೆಲುವು ಪಡೆಯುವುದು ಕೋಲ್ಕತಾ ಹಾಗೂ ಮುಬೈ ಪಾಲಿಗೆ ಕಷ್ಟ. ಚೆನ್ನೈ,ಡೆಲ್ಲಿಗೆ ಒಂದು ಗೆಲುವು ಸಾಕು: ಇನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ಆಡಿರುವ 10 ಪಂದ್ಯಗಳಲ್ಲಿ 8 ರಲ್ಲಿ ಗೆದ್ದು 16 ಅಂಕಗಳೊಂದಿಗೆ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನದಲ್ಲಿದೆ. ಇನ್ನುಳಿದಿವರು ನಾಲ್ಕು ಪಂದ್ಯಗಳಲ್ಲಿ ಸಿಎಸ್‌ಕೆ ಒಂದರಲ್ಲಿ ಗೆದ್ದರೆ, ಅಧಿಕೃತವಾಗಿ ಪ್ಲೇಆಫ್‌ಗೆ ಅರ್ಹತೆ ಪಡೆದುಕೊಳ್ಳಲಿದೆ. ಇನ್ನು ಅಷ್ಟೇ ಅಂಕಗಳನ್ನು ಕಲೆ ಹಾಕಿರುವ ಡೆಲ್ಲಿ ಕ್ಯಾಪಿಟಲ್ಸ್‌ ಇನ್ನುಳಿದ ಮೂರು ಪಂದ್ಯಗಳಲ್ಲಿ ಒಂದು ಪಂದ್ಯದಲ್ಲಿ ಗೆದ್ದರೆ ಪ್ಲೇಆಫ್‌ಗೆ ಅಧಿಕೃತವಾಗಿ ಪ್ರವೇಶ ಮಾಡಲಿದೆ. ಆದರೆ, ಪಂಜಾಬ್ ಕಿಂಗ್ಸ್ ಹಾಗೂ ರಾಜಸ್ಥಾನ್‌ ರಾಯಲ್ಸ್ ತಂಡಗಳು ಇನ್ನುಳಿದ ಮೂರೂ ಪಂದ್ಯಗಳಲ್ಲಿ ಗೆದ್ದರೂ ಕೂಡ ಪ್ಲೇಆಫ್‌ ಹಾದಿ ಕಠಿಣವಾಗಿರಲಿದೆ. ಮುಂಬೈ ಇಂಡಿಯನ್ಸ್ ಹಾಗೂ ಕೋಲ್ಕತಾ ನೈಟ್‌ ರೈಡರ್ಸ್ ತಂಡಗಳು ಇನ್ನುಳಿದ ನಾಲ್ಕರಲ್ಲಿ ಎರಡಕ್ಕಿಂತ ಹೆಚ್ಚಿನ ಪಂದ್ಯಗಳಲ್ಲಿ ಸೋಲು ಅನುಭವಿಸಿದರೆ, ಮಾತ್ರ ಪಂಜಾಬ್‌ ಹಾಗೂ ರಾಜಸ್ಥಾನ್‌ ತಂಡಗಳಿಗೆ ಪ್ಲೇಆಫ್‌ ಚಾನ್ಸ್‌ ಸಿಗಬಹುದು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2ZJeYDb

ಸಿಧು ಷರತ್ತಿನಿಂದ ಸಿಎಂ ಚರಣ್​ಜಿತ್​ಗೆ ಇಕ್ಕಟ್ಟು; ಇನ್ನಾದ್ರೂ ಮುಗಿಯುವುದೇ ಪಂಜಾಬ್​ ಕಾಂಗ್ರೆಸ್​ ಬಿಕ್ಕಟ್ಟು

ಅಮೃತಸರ: ಪಂಜಾಬ್‌ ರಾಜಕಾರಣದಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಮಾಡಿದ ಮುಖ್ಯಮಂತ್ರಿ ಬದಲಾವಣೆ ಪಕ್ಷಕ್ಕೆ ಭಾರಿ ಪೆಟ್ಟು ನೀಡಿದೆ. ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಅವರನ್ನು ಸಿಎಂ ಸ್ಥಾನದಿಂದ ಒತ್ತಾಯ ಪೂರ್ವಕವಾಗಿ ಇಳಿಸಿ, ದಲಿತ ಸಿಎಂ ಎಂದು ಚರಣ್‌ಜಿತ್‌ ಸಿಂಗ್‌ ಚನ್ನಿ ಅವರಿಗೆ ಪಟ್ಟ ಕಟ್ಟಿರುವುದು ಕೋಲಾಹಲ ಸೃಷ್ಟಿಸಿದೆ. ಅಮರಿಂದರ್‌ ವಿರೋಧಿಯಾದ ನವಜೋತ್‌ ಸಿಂಗ್‌ ಸಿಧುಗೆ ಪಕ್ಷದ ಸಂಘಟನೆ ಉಸ್ತುವಾರಿ ನೀಡಿದ್ದು, ಬಳಿಕ ಸಚಿವ ಸಂಪುಟ ಪುನಾರಚನೆ ನೆಪದಲ್ಲಿ ಕೆಲವು ಕಳಂಕಿತರಿಗೆ ಮಣೆ ಹಾಕಿದ್ದು ರಾಜ್ಯ ಕಾಂಗ್ರೆಸ್‌ ಪಾಳಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಪಂಜಾಬ್‌ ಪ್ರದೇಶ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಿಧು ಅವರು ಬುಧವಾರ ವಿಡಿಯೊವೊಂದನ್ನು ಟ್ವಿಟರ್‌ ಖಾತೆಯಲ್ಲಿ ಹರಿಬಿಟ್ಟು, ಸಚಿವ ಸಂಪುಟದಲ್ಲಿನ ಕಳಂಕಿತರ ವಿರುದ್ಧದ ಹೋರಾಟದ ಎಚ್ಚರಿಕೆ ಕೊಟ್ಟಿದ್ದಾರೆ. ''ಕಳಂಕಿತರಿಗೆ ಸಚಿವ ಸ್ಥಾನ, ಭ್ರಷ್ಟ ಅಧಿಕಾರಿಗಳಿಗೆ ಬಡ್ತಿ ನೀಡುವ ಮೂಲಕ ಪ್ರಮಾದ ಎಸಗಲಾಗಿದೆ. ಇವರನ್ನೆಲ್ಲ ದೂರ ಸರಿಸದಿದ್ದರೆ ದೊಡ್ಡ ಹೋರಾಟ ನಡೆಸುತ್ತೇನೆ, ಯಾವುದೇ ತ್ಯಾಗಕ್ಕೂ ಸಿದ್ಧ'' ಎಂದಿದ್ದಾರೆ. ಮುಖ್ಯವಾಗಿ ರಾಣಾ ಗುರ್ಜಿತ್‌ ಸಿಂಗ್‌ರನ್ನು ಸಂಪುಟದಿಂದ ಕೈಬಿಡುವುದು. ಡಿಜಿಪಿ ಮತ್ತು ಎಸ್‌ಐಟಿ ಮುಖ್ಯಸ್ಥ ಸಾಹೊತಾ ಅವರನ್ನು ವರ್ಗಾವಣೆ ಮಾಡುವುದು ಮತ್ತು ಅಡ್ವೊಕೇಟ್‌ ಜನರಲ್‌ ಎಪಿಎಸ್‌ ಡಿಯೊಲ್‌ ಅವರನ್ನು ಹುದ್ದೆಯಿಂದ ಕಿತ್ತೊಗೆಯುವ ಷರತ್ತುಗಳನ್ನು ಸಿಎಂ ಚನ್ನಿ ಎದುರು ಇರಿಸಿದ್ದಾರೆ. ಇದಕ್ಕೆ ಒಪ್ಪಿದರೆ ಮಾತ್ರವೇ ರಾಜ್ಯ ಕಾಂಗ್ರೆಸ್‌ಗೆ ತಮ್ಮ ಬೆಂಬಲಿಗರೊಂದಿಗೆ ಸಾಥ್‌ ನೀಡುವ ಸಂದೇಶ ರವಾನಿಸಿದ್ದಾರೆ. ಸಂಧಾನಕ್ಕೆ ಆಹ್ವಾನ: ಇದಕ್ಕೆ, ಪ್ರತಿಕ್ರಿಯಿಸಿರುವ ಸಿಎಂ ಚನ್ನಿ, ಪಕ್ಷಕ್ಕಿಂತ ಯಾವುದೇ ನಾಯಕ ದೊಡ್ಡವನಲ್ಲ. ಸಿಧು ಅವರಿಗೆ ಭಿನ್ನಾಭಿಪ್ರಾಯ ಇರಬಹುದು. ಅವರೊಂದಿಗೆ ಚರ್ಚೆಗೆ ಸಿದ್ಧನಿದ್ದೇನೆ ಎಂದು ಕಣ್ಣೊರೆಸುವ ಹೇಳಿಕೆ ನೀಡಿದ್ದಾರೆ. ಬುಧವಾರದಂದು ತಮ್ಮ ಸಚಿವ ಸಂಪುಟ ಸಭೆ ನಡೆಸಿರುವ ಸಿಎಂ ಚನ್ನಿ, ಸಿಧು ರಾಜೀನಾಮೆ ಹಾಗೂ ಅವರು ಹೈಕಮಾಂಡ್‌ ಮೇಲೆ ಹೇರುತ್ತಿರುವ ಒತ್ತಡಗಳ ಬಗ್ಗೆ ಆಪ್ತರೊಂದಿಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಇವೆಲ್ಲದರ ನಡುವೆ ರಾಹುಲ್‌ ಗಾಂಧಿ ನೇತೃತ್ವದ ಕಾಂಗ್ರೆಸ್‌ ಹೈಕಮಾಂಡ್‌ ಮಾತ್ರ ಮೂಕ ಪ್ರೇಕ್ಷಕನಂತೆ ಉಳಿದುಕೊಂಡಿದ್ದು, ರಾಜ್ಯದಲ್ಲಿ ಪಕ್ಷದ ಬಿಕ್ಕಟ್ಟಿಗೆ ತೇಪೆ ಹಾಕುವ ಹೊಣೆಯನ್ನು ಸಿಎಂ ಚನ್ನಿ ಹೆಗಲಿಗೇರಿಸಿದೆ. ಪಕ್ಷಕ್ಕಿಂತ ದೊಡ್ಡವರಿಲ್ಲ: ಬುಧವಾರದಂದು ಸಿಧು ಅವರ ಜತೆಗೆ ಮಾತನಾಡಿ, ತಮ್ಮ ಭಿನ್ನಾಭಿಪ್ರಾಯ ಹಾಗೂ ಅಸಮಾಧಾನಗಳನ್ನು ನೇರವಾಗಿ ಪಕ್ಷದ ಹಿರಿಯರೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳಿರಿ ಎಂದು ಸಲಹೆ ನೀಡಿದ್ದೆ. ಏನೇ ಆಗಲೀ, ಕಾಂಗ್ರೆಸ್‌ನಲ್ಲಿ ಪಕ್ಷವೇ ಸಾರ್ವಭೌಮ. ಪಕ್ಷಕ್ಕಿಂತ ಪ್ರಭಾವಿಗಳು ಯಾರೂ ಇಲ್ಲ ಎಂದು ಸಿಎಂ ಚನ್ನಿ ಅವರು ಪರೋಕ್ಷವಾಗಿ ಸಿಧು ನಡೆಗೆ ಟಾಂಗ್‌ ಕೊಟ್ಟಿದ್ದಾರೆ. ಸಿಧು ವಿರುದ್ಧ ಅಸಮಾಧಾನ: ಪಂಜಾಬ್‌ನಲ್ಲಿ ಕಾಂಗ್ರೆಸ್‌ ಪಕ್ಷವನ್ನು ಕಟ್ಟಿ ಬೆಳೆಸುವುದರಲ್ಲಿ ಸುನಿಲ್‌ ಜಾಖಡ್‌ ಅವರು ಬಹಳ ಶ್ರಮವಹಿಸಿದ್ದಾರೆ. ಆದರೂ, ಅವರನ್ನು ಬದಿಗೊತ್ತಿ ಸಿಧು ಅವರಿಗೆ ಹೈಕಮಾಂಡ್‌ ಮಣೆ ಹಾಕಿತು. ಆದರೆ ಸಿಧು ಅವರು ಹೈಕಮಾಂಡ್‌ನ ವಿಶ್ವಾಸಕ್ಕೆ ದ್ರೋಹ ಬಗೆದು ಮೋಸ ಮಾಡಿದ್ದಾರೆ ಎಂದು ಪಂಜಾಬಿನ ಹಿರಿಯ ಕಾಂಗ್ರೆಸ್ಸಿಗ ಸುಖ್‌ವಿಂದರ್‌ ಸಿಂಗ್‌ ಕಾಕಾ ಕಂಬೋಜ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಬ್ಬ ವ್ಯಕ್ತಿ ಕಾಂಗ್ರೆಸ್‌ ತೊರೆದರೆ ಪಕ್ಷವು ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಲ್ಲ. ಮತ್ತೊಮ್ಮೆ ಕಾಂಗ್ರೆಸ್‌ ಸರಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಅವರು ಪರೋಕ್ಷವಾಗಿ ಕ್ಯಾ. ಅಮರಿಂದರ್‌ ಸಿಂಗ್‌ ಮತ್ತು ಸಿಧು ಇಬ್ಬರಿಗೂ ಟಾಂಗ್‌ ಕೊಟ್ಟಿದ್ದಾರೆ.


from India & World News in Kannada | VK Polls https://ift.tt/2WondDd

ಮನೆ ಮನೆಗೆ ಉದ್ಯೋಗ ಖಾತ್ರಿ; 2022-23ನೇ ಕಾರ್ಮಿಕ ಆಯವ್ಯಯ ಉದ್ದೇಶಕ್ಕಾಗಿ ಅಭಿಯಾನ!

ಎಂ. ಪ್ರಶಾಂತ್‌ ಸೂಲಿಬೆಲೆ ಬೆಂಗಳೂರು ಗ್ರಾಮಾಂತರ: 2022-23ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸುವ ಉದ್ದೇಶದಿಂದ ಪ್ರತಿ ಮನೆಗೂ ನರೇಗಾ ಯೋಜನೆಯನ್ನು ತಲುಪಿಸುವ ಗುರಿಯೊಂದಿಗೆ ಮನೆ ಮನೆಗೆ ಉದ್ಯೋಗ ಖಾತರಿ ಯೋಜನೆ ಅಭಿಯಾನ ಶುರುವಾಗಲಿದೆ. ಅ. 1ರಿಂದ ಒಂದು ತಿಂಗಳ ಕಾಲ ಗ್ರಾಮದ ಪ್ರತಿ ಮನೆಗೂ ಮಾಹಿತಿ ತಲುಪಲಿದೆ. ಜಿಲ್ಲೆಯಾದ್ಯಂತ ನರೇಗಾ ಯೋಜನೆಯ ಮಹತ್ವ ಹಾಗೂ ಯೋಜನೆಯ ಅವಕಾಶವನ್ನು ಪ್ರತಿಯೊಬ್ಬರಿಗೂ ತಲುಪಿಸುವ ಗುರಿಯನ್ನಿಟ್ಟುಕೊಂಡು ಗ್ರಾಮೀಣ ಭಾಗದ ಪ್ರತಿ ಮನೆಗೂ ನರೇಗಾ ಯೋಜನೆಯ ಮಾಹಿತಿ ಭಿತ್ತಿಪತ್ರಗಳನ್ನು ತಲುಪಿಸುವ ಕಾರ್ಯವನ್ನು ಒಂದು ತಿಂಗಳ ಅಭಿಯಾನದಲ್ಲಿ ಕೈಗೊಳ್ಳುತ್ತಿದ್ದು, ಈಗಾಗಲೇ ಜಿಲ್ಲೆಯಾದ್ಯಂತ ಗ್ರಾಪಂಗಳ ಮೂಲಕ ಇದರ ಸಾಕಾರಕ್ಕೆ ಯೋಜನೆ ರೂಪಿಸಲಾಗುತ್ತಿದೆ. ಅಭಿಯಾನದಲ್ಲಿ ಯೋಜನೆಯಡಿ ದೊರೆಯುವ ಕೂಲಿ ಮೊತ್ತ, ಗಂಡು ಹೆಣ್ಣಿಗೆ ಸಮಾನ ಕೂಲಿ, ಕೆಲಸದ ಪ್ರಮಾಣ ಪತ್ರ, ಕೆಲಸದ ಅವಧಿ, ಯೋಜನೆಯಡಿ ದೊರೆಯುವ ವೈಯುಕ್ತಿಕ ಸೌಲಭ್ಯಗಳು, ಅರ್ಹತೆಗಳು, ಕಾಮಗಾರಿ ಪ್ರಮಾಣದಲ್ಲಿ ಹಿರಿಯ ನಾಗರಿಕರಿಗೆ ಮತ್ತು ವಿಶೇಷ ಚೇತನರಿಗೆ ಶೇ.50 ರಷ್ಟು ರಿಯಾಯಿತಿ, ಕಾಮಗಾರಿ ಸ್ಥಳದಲ್ಲಿ ಒದಗಿಸುವ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ಒದಗಿಸಬೇಕು. ಮನೆ ಬಾಗಿಲಿಗೆ ಸ್ಟೀಕರ್‌ಯೋಜನೆಯ ಮಾಹಿತಿಯ ಭಿತ್ತಿ ಪತ್ರವನ್ನು ಪ್ರತಿ ಮನೆಗೆ ವಿತರಿಸಿದ ಮೇಲೆ ನರೇಗಾ ಯೋಜನೆ ಬಗ್ಗೆ ಇಲಾಖೆ ಯೂಟ್ಯೂಬ್‌ ಮೂಲಕ ಆಪ್‌ ಲೋಡ್‌ ಮಾಡುವ ವಿಡಿಯೋ ವೀಕ್ಷಣೆಗೆ ಅಗತ್ಯವಾಗಿರುವ ಕ್ಯೂಆರ್‌ ಕೋಡ್‌ ಸ್ಟೀಕರ್‌ ಅನ್ನು ಪ್ರತಿಮನೆ ಬಾಗಿಲಿಗೆ ಅಂಟಿಸಲಿದ್ದಾರೆ. ಅಭಿಯಾನದಲ್ಲಿ ಗ್ರಾಪಂ ಅಧ್ಯಕ್ಷರು, ಸದಸ್ಯರು ಭಾಗಿಯಾಬೇಕು, ಜಾಗೃತಿ ವಾಹನದ ಮೂಲಕ ರೈತರಿಗೆ ಯೋಜನೆಯಡಿ ಸಿಗುವ ಸೌಲಭ್ಯ ತಿಳಿಸಬೇಕು ಕಾಮಗಾರಿ ಬೇಡಿಕೆ ಪೆಟ್ಟಿಗೆ ಕಡ್ಡಾಯಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡುವ ಜಾಗೃತಿ ಕಾರ್ಯಕ್ರಮದಲ್ಲಿ ನರೇಗಾ ಯೋಜನೆಯ ಬಗ್ಗೆ ಕಾಮಗಾರಿಗಳ ಬೇಡಿಕೆ ಪೆಟ್ಟಿಗೆಯನ್ನಿಟ್ಟು ಒಂದು ತಿಂಗಳ ಕಾಲ ಸ್ವೀಕರಿಸಬೇಕು. ಶೇ.65 ರಷ್ಟು ನೈಸರ್ಗಿಕ ಸಂಪನ್ಮೂಲ ನಿರ್ವಹಣೆಗೆ ಕಾಮಗಾರಿಗಳನ್ನು ಮೀಸಲಿಡಬೇಕು. ಕ್ರಿಯಾ ಯೋಜನೆಗಳು ಕಡ್ಡಾಯವಾಗಿ ಗ್ರಾಪಂ ಕ್ರಿಯಾ ಯೋಜನೆಯ ಭಾಗವಾಗಿರಬೇಕು. ಇತರೆ ಸಂದರ್ಭಗಳಲ್ಲಿ ಪ್ರತ್ಯೇಕವಾಗಿ ಕ್ರಿಯಾ ಯೋಜನೆಗಳಿಗೆ ಅನುಮೋದನೆ ನೀಡುವಂತಿಲ್ಲ ಎಂದು ಸ್ಪಷ್ಟ ಆದೇಶವನ್ನು ನೀಡಲಾಗಿದೆ. ಜಿಲ್ಲೆಯಲ್ಲಿ ನರೇಗಾ ಪ್ರಗತಿ2019-20ರಲ್ಲಿ ದೇವನಹಳ್ಳಿ ತಾ.ನಲ್ಲಿ 1191 ಕಾಮಗಾರಿಗಳನ್ನು ಪ್ರಾರಂಭಿಸಿ 1107 ಕಾಮಗಾರಿಗಳನ್ನು ಮುಗಿಸಲಾಗಿದೆ. 84 ಅಪೂರ್ಣಗೊಂಡು ಶೇ.92.95 ರಷ್ಟು ಪ್ರಗತಿ ಗುರಿ ಸಾಧಿಸಿದೆ. ದೊಡ್ಡಬಳ್ಳಾಪುರ ತಾ.ನಲ್ಲಿ 1175 ಕಾಮಗಾರಿಗಳನ್ನು ಪ್ರಾರಂಭಿಸಿ 1109 ಕಾಮಗಾರಿಗಳನ್ನು ಮುಗಿಸಿದ್ದು, 66 ಕಾಮಗಾರಿಗಳ ಅಪೂರ್ಣದೊಂದಿಗೆ ಶೇ.94.38 ರಷ್ಟು ಪ್ರಗತಿಯಾಗಿದೆ. ಹೊಸಕೋಟೆ ನೆಲಮಂಗಲ ಫಸ್ಟ್‌ಹೊಸಕೋಟೆ ತಾಲೂಕಿನಲ್ಲಿ 1709 ಕಾಮಗಾರಿಗಳನ್ನು ಪ್ರಾರಂಭಿಸಿ ಅಷ್ಟು ಕಾಮಗಾರಿಗಳನ್ನು ಪೂರ್ಣಗೊಳಿಸಿ ಶೇ.100ರಷ್ಟು ಗುರಿ ಸಾಧಿಸಿದೆ. ಇನ್ನೂ ನೆಲಮಂಗಲ ತಾ.ನಲ್ಲೂ 1590 ಕಾಮಗಾರಿಗಳನ್ನು ಪ್ರಾರಂಭಿಸಿ ಅಷ್ಟು ಪೂರ್ಣಗೊಳಿಸಿ ಶೇ.100ರಷ್ಟು ಗುರಿ ಪೂರ್ಣಗೊಳಿಸಿದೆ. ಪ್ರಗತಿ ಕುಂಠಿತ2020-21ನೇ ಸಾಲಿನಲ್ಲಿ ದೇವನಹಳ್ಳಿ ತಾ.ನಲ್ಲಿ 1828 ಕಾಮಗಾರಿಗಳನ್ನು ಕೈಗೆತ್ತಿಕೊಂಡು 1225 ಕಾಮಗಾರಿಗಳನ್ನು ಪೂರ್ಣಗೊಳಿಸಿ 603 ಕಾಮಗಾರಿಗಳ ಅಪೂರ್ಣದೊಂದಿಗೆ ಶೇ.67.01 ಪ್ರಗತಿಯಾಗಿದೆ. ದೊಡ್ಡಬಳ್ಳಾಪುರ ತಾ.ನಲ್ಲಿ 3290 ಕಾಮಗಾರಿಗಳನ್ನು ಶುರು ಮಾಡಿ 1922 ಕಾಮಗಾರಿ ಪೂರ್ಣಗೊಳಿಸಿ ಶೇ.58.42 ಪ್ರಗತಿ ಸಾಧಿಸಿದೆ. ಇನ್ನೂ ಹೊಸಕೋಟೆ 3286 ಕಾಮಗಾರಿಗಳಿಗೆ 2028 ಕಾಮಗಾರಿಗಳನ್ನು ಕಂಪ್ಲೀಟ್‌ ಮಾಡಿದೆ. ಶೇ.61.72 ಪ್ರಗತಿಯಾದರೆ, ನೆಲಮಂಗಲ ತಾ.3246 ಕಾಮಗಾರಿಗಳ ಪೈಕಿ 2308 ಪೂರ್ಣಗೊಳಿಸಿ ಶೇ.71.10ರಷ್ಟು ಪ್ರಗತಿ ಸಾಧಿಸಿದೆ. ಯೋಜನೆಗಳ ಬಗ್ಗೆ ಪಾರದರ್ಶಕವಾಗಿ ಜನರಿಗೆ ತಿಳಿಸುವಂತ ಕಾರ್ಯವಾಗಬೇಕು. ಸರಕಾರದ ಆದೇಶಕ್ಕೆಂದು ಕಾಟಾಚಾರಕ್ಕೆ ಜಾಗೃತಿ ಸಭೆಗಳು, ಕಾರ್ಯಕ್ರಮಗಳನ್ನು ಮಾಡದೆ ಜನರಿಗೆ ಮುಟ್ಟುವಂತೆ ಯೋಜನೆಗಳ ಬಗ್ಗೆ ತಿಳಿಸುವಂತ ಕಾರ್ಯವಾದಾಗ ಮಾತ್ರ ಯೋಜನೆ ಸಫಲಗೊಂಡು ಅರ್ಹ ಎಲ್ಲರಿಗೂ ಸೌಲಭ್ಯ ಸಿಗಲು ಸಾಧ್ಯ. ಈ ದಿಕ್ಕಿನಲ್ಲಿ ಅಧಿಕಾರಿಗಳು ಇಚ್ಚಾಶಕ್ತಿ ತೋರಲಿ. ಶಂಕರ್‌, ನರೇಗಾ ಯೋಜನೆ ಆಕಾಂಕ್ಷಿ


from India & World News in Kannada | VK Polls https://ift.tt/3m4qeRS

ಬೆಂಗಳೂರಿನಲ್ಲಿ ಶಿಥಿಲ ಕಟ್ಟಡಗಳ ಮರು ಸಮೀಕ್ಷೆ; 15 ದಿನದಲ್ಲಿ ವರದಿ ನೀಡುವಂತೆ ಬಿಬಿಎಂಪಿ ಆದೇಶ!

ಬೆಂಗಳೂರು: ಬೆಂಗಳೂರಿನಲ್ಲಿ ಬೆನ್ನು ಬೆನ್ನಿಗೇ ಎರಡು ಹಳೆ ಕಟ್ಟಡಗಳು ಕುಸಿದು ಬಿದ್ದ ಹಿನ್ನೆಲೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಮರು ಸಮೀಕ್ಷೆಗೆ ಮುಂದಾಗಿದೆ. ಈ ಬಾರಿ ಎರಡೂ ಕಟ್ಟಡಗಳ ಕುಸಿತದಿಂದ ಯಾವುದೇ ಜೀವ ಹಾನಿ ಆಗಿಲ್ಲವಾದರೂ ಎಲ್ಲ ಸಂದರ್ಭದಲ್ಲೂ ಹೀಗೇ ಆಗುತ್ತದೆ ಎಂದು ಹೇಳಲಾಗದು. ಹೀಗಾಗಿ ಶಿಥಿಲ ಕಟ್ಟಡಗಳ ಮೇಲೆ ನಿಗಾ ಇಡಬೇಕೆಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. 2019ರಲ್ಲಿ ಒಂದು ಹಂತದ ನಡೆಸಿ ಕೆಲವು ಕಟ್ಟಡಗಳನ್ನು ಗುರುತಿಸಲಾಗಿತ್ತು. ಹಾಗಾಗಿ, ಈಗ ಮತ್ತೆ ಸಮೀಕ್ಷೆಗೆ ಸೂಚಿಸಲಾಗಿದೆ. ಬಿಬಿಎಂಪಿಯ ಯೋಜನಾ ವಿಭಾಗದ ವಿಶೇಷ ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚಿಸಿಕೊಂಡು, ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಮರು ಸಮೀಕ್ಷೆ ನಡೆಸಿ 15 ದಿನಗಳೊಳಗೆ ವರದಿ ನೀಡಬೇಕು ಎಂದು ಮುಖ್ಯ ಆಯುಕ್ತ ಗೌರವ್‌ ಗುಪ್ತ ಅವರು ಎಲ್ಲ ವಲಯಗಳ ಜಂಟಿ ಆಯುಕ್ತರು ಹಾಗೂ ಮುಖ್ಯ ಎಂಜಿನಿಯರ್‌ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಶಿಥಿಲ ಕಟ್ಟಡಗಳ ಮರು ಸಮೀಕ್ಷೆ ಸಂಬಂಧ ಬುಧವಾರ ವರ್ಚುವಲ್‌ ಸಭೆ ನಡೆಸಿದ ಅವರು, ''2019ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ 185 ಕಟ್ಟಡಗಳನ್ನು ಗುರುತಿಸಿ, ಇದರಲ್ಲಿ 10 ಕಟ್ಟಡಗಳನ್ನು ನೆಲಸಮ ಮಾಡಲಾಗಿದೆ. ಬಾಕಿ ಉಳಿದಿರುವ 175 ಕಟ್ಟಡ ಮಾಲೀಕರಿಗೆ ಕೂಡಲೇ ನೋಟಿಸ್‌ ಜಾರಿ ಮಾಡಬೇಕು. ಆ ಕಟ್ಟಡಗಳನ್ನು ನೆಲಸಮ ಮಾಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು,'' ಎಂದು ತಾಕೀತು ಮಾಡಿದರು. ''ಆಯಾ ವಲಯಗಳಲ್ಲಿನ ಸಂಬಂಧಪಟ್ಟ ಎಂಜಿನಿಯರ್‌ಗಳು ಶಿಥಿಲ ಕಟ್ಟಡಗಳಿರುವ ಪ್ರದೇಶಕ್ಕೆ ಭೇಟಿ ನೀಡಿ, ಮರು ಪರಿಶೀಲನೆ ಮೂಲಕ ನಿಖರ ಮಾಹಿತಿ ಒದಗಿಸಬೇಕು. ಮರು ಸಮೀಕ್ಷೆಯಲ್ಲಿ ಗುರುತಿಸಿದ ಕಟ್ಟಡಗಳನ್ನು 15 ದಿನಗಳೊಳಗೆ ತೆರವುಗೊಳಿಸಲು ವಲಯವಾರು ಗುತ್ತಿಗೆದಾರರನ್ನು ನೇಮಕ ಮಾಡಬೇಕು,'' ಎಂದು ಸೂಚಿಸಿದರು. ಶಿಥಿಲ ಕಟ್ಟಡಗಳು-2019ರಲ್ಲಿ ವಲಯ -ಕಟ್ಟಡ -ನೆಲಸಮ
  • ದಕ್ಷಿಣ- 33- 08
  • ಪೂರ್ವ- 46- 00
  • ಪಶ್ಚಿಮ- 34- 00
  • ಮಹದೇವಪುರ -03- 00
  • ಯಲಹಂಕ- 60 -00
  • ದಾಸರಹಳ್ಳಿ- 8 -01
  • ಆರ್‌.ಆರ್‌.ನಗರ -01 -01
  • ಬೊಮ್ಮನಹಳ್ಳಿ 00- 00
  • ಒಟ್ಟು= 183- 10


from India & World News in Kannada | VK Polls https://ift.tt/2WpVMZT

‘ರಾಜಕಾರಣದಲ್ಲಿ ಸ್ವಲ್ಪ ತಲೆ ಕೆಟ್ಟಿದ್ದರೆ ಪರವಾಗಿಲ್ಲ, ಪೂರ್ತಿ ತಲೆ ಕೆಟ್ಟಿರಬಾರದು’; ಡಿ.ವಿ ಸದಾನಂದ ಗೌಡ

ಚಿಕ್ಕಬಳ್ಳಾಪುರ: ವಿಪಕ್ಷ ನಾಯಕ ಸಿದ್ದರಾಮಯ್ಯನವರ ವಿರುದ್ಧ ಮಾಜಿ ಕೇಂದ್ರ ಸಚಿವ, ಸಂಸದ ಹರಿಹಾಯ್ದಿದ್ದಾರೆ. ಸಿದ್ದರಾಮಯ್ಯನವರಿಗೆ ಸಂಪೂರ್ಣ ತಲೆ ಕೆಟ್ಟು ಹೋಗಿದೆ. ರಾಜಕಾರಣದಲ್ಲಿ ಸ್ವಲ್ಪ ತಲೆ ಕೆಟ್ಟಿದ್ದರೆ ಪರವಾಗಿಲ್ಲ. ಪೂರ್ತಿ ತಲೆ ಕೆಟ್ಟಿರಬಾರದು. ತಾಲಿಬಾನ್‌ ಸಂಸ್ಕೃತಿ ಇದ್ದಿದ್ದರೆ ಪ್ರತಿಪಕ್ಷ ನಾಯಕನಾಗಿ ಕಾರಿನಲ್ಲಿ ಓಡಾಡುತ್ತಿದ್ದರಾ? ಇವರ ಕಾಲಿಗೆ ಹಗ್ಗ ಕಟ್ಟಿ ಎಳೆದುಕೊಂಡು ಹೋಗುತ್ತಿದ್ದರು. ಅರ್ಥ ಮಾಡಿಕೊಳ್ಳಬೇಕು. ಬಾಯಿಗೆ ಬಂದಂತೆ ಎಲ್ಲವನ್ನು ಮಾತನಾಡಬಾರದು. ಇದು ಬಿಜೆಪಿಯನ್ನು ತಾಲಿಬಾನ್‌ಗೆ ಹೋಲಿಸಿ ಹೇಳಿಕೆ ನೀಡಿದ್ದ ವಿಪಕ್ಷ ನಾಯಕ ವಿರುದ್ಧ ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದ ಗೌಡ ತಿರುಗೇಟು ನೀಡಿದ ಪರಿ. ಚಿಕ್ಕಬಳ್ಳಾಪುರ ತಾಲೂಕಿನ ಗೊಲ್ಲಹಳ್ಳಿ ಗೇಟ್‌ ಬಳಿ ಸಿರಿ ಅಕ್ವಾ ಕಲ್ಚರ್‌ ಫಾರಂನಲ್ಲಿ ಸಿಗಡಿ ಮೀನು ಮರಿ ಹಿಡಿಯುವ ಉದ್ಘಾಟನಾ ಕಾರ್ಯ ಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಿವಿ ಸದಾನಂದ ಗೌಡ, ಸಿದ್ದರಾಮಯ್ಯನವರು ವಿವೇಚನೆಯಿಂದ ವರ್ತಿಸಬೇಕು. ಬಾಯಿಗೆ ಬಂದಂತೆ ಮಾತನಾಡಬಾರದು. ಯಾರ ತಲೆ ಕೆಟ್ಟಿದೆಯೋ ಗೊತ್ತಿಲ್ಲ. ಆದರೆ ಸಿದ್ದರಾಮಯ್ಯನವರ ತಲೆ ಮಾತ್ರ ಕೆಟ್ಟಿದೆ ಎಂದರು. ಇತ್ತೀಚೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಆರೆಸ್ಸೆಸ್ ಮತ್ತು ಸಂಘಪರಿವಾರವನ್ನು ತಾಲಿಬಾನ್ಗೆ ಹೋಲಿಸಿದ್ದರು. ಕರಾವಳಿ ಭಾಗದಲ್ಲಿ ಹಿಂದೂಪರ ಸಂಘಟನೆಗಳಿಂದ ಆಗಾಗ ನಡೆಯುತ್ತಿರುವ ಅನೈತಿಕ ಗೂಂಡಾಗಿರಿಯನ್ನು ಪ್ರಶ್ನಿಸಿ ನಿಮ್ಮದೇ ಪರಿವಾರದ ಕಾರ್ಯಕರ್ತರು ಮಾಡುತ್ತಿರುವುದು ತಾಲಿಬಾನ್ಗಿರಿ ಅಲ್ಲವೇ ಎಂದು ಪ್ರಶ್ನಿಸಿದ್ದರು. ಕಳೆದ ವಾರ ಮಂಗಳೂರಿನ ಸುರತ್ಕಲ್ನಲ್ಲಿ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಜತೆಯಾಗಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿ ಗೂಂಡಾಗಿರಿ ನಡೆಸಿದ್ದರು. ಆಗ ಸಿದ್ದರಾಮಯ್ಯ ಅವರು ಮಂಗಳೂರಿನಲ್ಲಿರುವುದು ಬಿಜೆಪಿ ಸರ್ಕಾರವೋ? ಸರ್ಕಾರವೋ ಎಂದು ಪ್ರಶ್ನಿಸಿದ್ದರು. ತಲೆಕೆಡಿಕೊಳ್ಳುವುದಿಲ್ಲ: ಇದೇ ವೇಳೆ ಮಾತನಾಡಿದ ಮೀನುಗಾರಿಕೆ ಸಚಿವ ಅಂಗಾರ, ಸಿದ್ದರಾಮಯ್ಯನವರ ತಲೆ ಕೆಟ್ಟಿರುವ ಕಾರಣ ಅವರಿಗೆ ಕೆಟ್ಟ ಸಂಸ್ಕೃತಿ ಬಂದಿದೆ. ಅವರ ತಲೆ ಕೆಟ್ಟು ಹೋಗಿರುವುದಕ್ಕೆ ಏನು ಮಾಡಲಾಗದು. ಸಿದ್ದರಾಮಯ್ಯನವರು ಹೇಳಿದ ಪ್ರಕಾರವೇ ಅವರೇ ಕೆಟ್ಟು ಹೋಗಿದ್ದಾರೆ. ಅವರು ಏನು ಹೇಳಿದರೂ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಇದರ ವಿರುದ್ಧ ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಸರಕಾರ ತೆಗೆದುಕೊಳ್ಳಲಿದೆ ಎಂದರು. ಸಿಗಡಿ ಬೆಳೆ ಕೊಯ್ಲು ಉದ್ಘಾಟನೆ: ಸಿರಿ ಆಕ್ವಾ ಕಲ್ಚರ್‌ ಫಾರಂನ ದೊಡ್ಡ ಬಸವರಾಜು, ತಮ್ಮೇಗೌಡ ಹಾಗೂ ಅವರ ತಂಡದವರು ಪ್ರಧಾನ ಮಂತ್ರಿ ಮತ್ಸ್ಯಸಂಪದ ಯೋಜನೆಯಡಿ ಬಯಲು ಸೀಮೆ ಪ್ರದೇಶದಲ್ಲಿ ಪ್ರಥಮವಾಗಿ ಸೀಗಡಿ ಕೃಷಿ ಮಾಡಿದ್ದು, ಬೆಳೆಯ ಕೊಯ್ಲು ಮತ್ತು ಮಾರಾಟ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಇದೇ ವೇಳೆ ಮೀನುಗಾರಿಕಾ ಇಲಾಖೆಯ ಕೈಪಿಡಿ ಯನ್ನು ಬಿಡುಗಡೆ ಗೊಳಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೇಶವರೆಡ್ಡಿ, ರಾಜ್ಯ ಮಾವು ಮತ್ತು ಮಾರುಕಟ್ಟೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ವಿ.ನಾಗರಾಜ್‌, ಮೀನುಗಾರಿಕೆ ಇಲಾಖೆ ನಿರ್ದೇಶಕರಾದ ರಾಮಾ ಚಾರ್ಯ, ಮುಖಂಡರಾದ ಎಂಎಫ್‌ಸಿ ನಾರಾಯಣಸ್ವಾಮಿ, ಸಿರಿ ಆಕ್ವಾ ಕಲ್ಚರ್‌ ಫಾರಂನ ದೊಡ್ಡ ಬಸವರಾಜು, ತಮ್ಮೇಗೌಡ ಸೇರಿದಂತೆ ಹಲವರು ಹಾಜರಿದ್ದರು.


from India & World News in Kannada | VK Polls https://ift.tt/39QAasA

ಗುಡ್ ನ್ಯೂಸ್: ಕೊರೊನಾ 3ನೇ ಅಲೆ ಆತಂಕವಿಲ್ಲ; ಅಕ್ಟೋಬರ್‌ನಿಂದಲೇ ಮತ್ತೆ ಆಘಾತ ಎಂಬ ಭಯ ದೂರ!

ಬೆಂಗಳೂರು: ವಿಶ್ವವನ್ನೇ ತಲ್ಲಣಗೊಳಿಸಿದ ಮಹಾಮಾರಿ ಕೊರೊನಾ ವೈರಸ್‌ನ ಪ್ರಭಾವ ಈಗ ತಗ್ಗಿದೆ. ಅಪಾಯಕಾರಿ ಡೆಲ್ಟಾ ವೈರಸ್‌ ರೂಪಾಂತರಗೊಂಡಿರುವ ಲಕ್ಷಣಗಳು ಕಾಣಿಸುತ್ತಿಲ್ಲ. ಹೀಗಾಗಿ ಸದ್ಯಕ್ಕೆ ಮೂರನೇ ಅಲೆ ಬರುವ ಸಾಧ್ಯತೆಗಳು ಇಲ್ಲ. ತಡವಾಗಿ ಬಂದರೂ 2ನೇ ಅಲೆಯಷ್ಟು ಅಪಾಯಕಾರಿಯಾಗಿ ಇರುವುದಿಲ್ಲ ಎಂದು ವೈರಾಣು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಹಾಗಂತ, ಕೊರೊನಾ ಮಾರ್ಗಸೂಚಿಗಳನ್ನು ಪಾಲನೆಯಲ್ಲಿ ನಿರ್ಲಕ್ಷ್ಯ ವಹಿಸುವಂತಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ರಾಜ್ಯದಲ್ಲಿ ಅಕ್ಟೋಬರ್‌ನಲ್ಲಿ ಮೂರನೇ ಅಲೆ ಬರಬಹುದು ಎಂದು ಕೋವಿಡ್‌ ತಜ್ಞರು ಈ ಮೊದಲು ನಿರೀಕ್ಷಿಸಿದ್ದರು. ಸದ್ಯಕ್ಕೆ ಅಂಥ ವಾತಾವರಣ ಕಂಡು ಬರುತ್ತಿಲ್ಲ. ಹೊಸ ಪ್ರಕರಣಗಳ ಸಂಖ್ಯೆ ಇಳಿಯುತ್ತಿದೆ. ಇರುವ ಸೋಂಕು ಕೂಡಾ ಮಾರಣಾಂತಿಕವಾಗಿಲ್ಲ. 2ನೇ ಅಲೆಯ ಪ್ರಭಾವ ಜೋರಾಗಿದ್ದರಿಂದ ಹಾಗೂ ಬಹುತೇಕರು ಮೊದಲ ಹಾಗೂ 2ನೇ ಡೋಸ್‌ ಲಸಿಕೆ ಹಾಕಿಸಿಕೊಂಡಿರುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗಿದೆ. ಜತೆಗೆ ವೈರಾಣು ರೂಪಾಂತರ ಹೊಂದಿಲ್ಲದೆ ಇರುವುದರಿಂದ ಸೋಂಕಿನ ಪ್ರಭಾವ ತಗ್ಗಿದೆ ಎಂದು ವೈದ್ಯರು ಹೇಳುತ್ತಾರೆ. ಕೊರೊನಾ 2ನೇ ಅಲೆ ವೇಳೆ ವೈದ್ಯರು ಹಾಗೂ ಇತರೆ ವೈದ್ಯ ಸಿಬ್ಬಂದಿ ಸೋಂಕಿಗೆ ತುತ್ತಾಗಲಿಲ್ಲ. ಇದಕ್ಕೆ ಕಾರಣ 2ನೇ ಅಲೆ ಬರುವ ವೇಳೆಗೆ ವೈದ್ಯರು ಸೇರಿದಂತೆ ಆರೋಗ್ಯ ಕಾರ್ಯಕರ್ತರು ಲಸಿಕೆ ಹಾಕಿಸಿಕೊಂಡಿದ್ದರು. ಅವರಲ್ಲಿ ರೋಗ ನಿರೋಧಕ್ಕೆ ಶಕ್ತಿ ಹೆಚ್ಚಿತ್ತು. ಸೋಂಕು ತಗುಲಿದರೂ ಹೆಚ್ಚಿನ ಸಾವು ಸಂಭವಿಸಲಿಲ್ಲ. ಈಗ ಎಲ್ಲರೂ ಲಸಿಕೆ ಪಡೆಯುವ ಪ್ರಕ್ರಿಯೆಯಲ್ಲಿರುವುದರಿಂದ ಕೊರೊನಾ ಮೂರನೇ ಅಲೆಯ ವೇಳೆ ಅಷ್ಟೊಂದು ಪರಿಣಾಮ ಬೀರುವುದಿಲ್ಲ ಎಂದು ವೈದ್ಯರು ವಿಶ್ಲೇಷಿಸಿದ್ದಾರೆ. ಡಿಸೆಂಬರ್‌ ವೇಳೆಗೆ ಎಲ್ಲರಿಗೂ ಲಸಿಕೆ ರಾಜ್ಯದಲ್ಲಿ 1.68 ಕೋಟಿ ಮಂದಿ ಎರಡೂ ಡೋಸ್‌ ಪಡೆದಿದ್ದಾರೆ. 5.59 ಕೋಟಿ ಮಂದಿ ಮೊದಲ ಡೋಸ್‌ ಪಡೆದಿದ್ದಾರೆ. 18 ವರ್ಷ ಮೀರಿದ ಎಲ್ಲರಿಗೂ ಡಿಸೆಂಬರ್‌ ಒಳಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಲಸಿಕೆ ಅವಧಿ ಒಂದು ವರ್ಷವಾಗಿದ್ದು, ನಂತರ ಒಂದೋ ಬೂಸ್ಟರ್‌ ಡೋಸ್‌ ಇಲ್ಲವೇ ಮತ್ತೆ ಹೊಸದಾಗಿ ಲಸಿಕೆ ಕೊಡುವ ಅವಕಾಶಗಳಿವೆ. ಅಮೆರಿಕ ಮತ್ತಿತರ ದೇಶಗಳಲ್ಲಿ ಬೂಸ್ಟರ್‌ ಡೋಸ್‌ ನೀಡಲಾಗುತ್ತಿದೆ. 2ನೇ ಅಲೆ ವೇಳೆ ಬಹುತೇಕರಿಗೆ ಸೋಂಕು ತಗುಲಿದ್ದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಯಾಗಿದೆ ಬಹುತೇಕರು ಮೊದಲ ಹಾಗೂ 2ನೇ ಡೋಸ್‌ ಲಸಿಕೆ ಪಡೆದಿದ್ದರಿಂದ ಅಷ್ಟೊಂದು ಹಾನಿ ಮಾಡದು. ಮಕ್ಕಳು ಲಸಿಕೆ ಪಡೆಯದಿದ್ದರೂ ಪೋಷಕರ ಸಂಪರ್ಕದಿಂದ ರೋಗ ನಿರೋಧಕ ಶಕ್ತಿ ಹೆಚ್ಚಿದೆ. ಜನವರಿ ನಂತರ 3ನೇ ಅಲೆವೈರಸ್‌ ಯಾವ ಸಂದರ್ಭದಲ್ಲಾದರೂ ರೂಪಾಂತರಗೊಳ್ಳಬಹುದು. ಹಾಗಾಗಿ 3ನೇ ಅಲೆ ಕಾಲವನ್ನು ನಿರ್ಧರಿಸಲಾಗದು. 2ನೇ ಅಲೆಯೂ ಫೆಬ್ರವರಿಯಲ್ಲಿ ಆರಂಭಗೊಂಡು ಮಾರ್ಚ್, ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ಹೆಚ್ಚು ಪರಿಣಾಮ ಬೀರಿತು. ಮೂರನೇ ಅಲೆಯೂ 2022ರ ಜನವರಿ ನಂತರ ಬರಬಹುದು ಎನ್ನುತ್ತಾರೆ ವೈದ್ಯರು. ಮೊದಲ ನಮ್ಮ ಗುರಿ ಎಲ್ಲರಿಗೂ ಎರಡು ಡೋಸ್‌ ಲಸಿಕೆ ಹಾಕುವುದು. ಬಳಿಕ ಬೂಸ್ಟರ್‌ ಡೋಸ್‌ ಬಗ್ಗೆ ಚಿಂತಿಸೋಣ. ನಮಗೆ ಐಸಿಎಂಆರ್‌ನಿಂದಾಗಲಿ, ಕೇಂದ್ರ ಸರಕಾರದಿಂದಾಗಲಿ ಸೂಚನೆ ಬಂದಿಲ್ಲ. ಡಾ.ಕೆ.ಸುಧಾಕರ್‌, ಆರೋಗ್ಯ ಸಚಿವರು ಮೂರನೆ ಅಲೆ ಬಂದೇ ಬರುತ್ತದೆ. ಯಾವುದೇ ಅನುಮಾನವಿಲ್ಲ. ಆದರೆ ವೈರಸ್‌ ಯಾವಾಗ ರೂಪಾಂತರಗೊಳ್ಳುತ್ತದೆ ಎಂದು ಅಂದಾಜು ಮಾಡುವುದು ಕಷ್ಟ. ವೈರಸ್‌ ಬೆಳವಣಿಗೆಯ ಮೇಲೆ ನಿಗಾ ಇಟ್ಟಿರಬೇಕಾಗುತ್ತದೆ. ಅದಕ್ಕೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಡಾ.ವಿ.ರವಿ, ಮುಖ್ಯಸ್ಥರು, ನ್ಯೂರೋವೈರಾಲಜಿ ವಿಭಾಗ, ನಿಮ್ಹಾನ್ಸ್ ಮೂರನೇ ಅಲೆ ಹೆಚ್ಚು ಅಪಾಯಕಾರಿಯಾಗಿರುವುದಿಲ್ಲ. ಎಲ್ಲರೂ ಲಸಿಕೆ ಹಾಕಿಸಿಕೊಂಡರೆ ರೋಗ ನಿರೋಧಕ ಶಕ್ತಿ ವೃದ್ಧಿಯಾಗಿರುತ್ತದೆ. ಮಕ್ಕಳಲ್ಲಿಯೂ ಇದು ಹೆಚ್ಚು ಬಾಧಿಸದು. ಪೋಷಕರ ಸಂಪರ್ಕದಲ್ಲಿ ಇರುವುದರಿಂದ ಮಕ್ಕಳಲ್ಲಿಯೂ ರೋಗ ನಿರೋಧಕ ಶಕ್ತಿ ಬೆಳವಣಿಗೆಯಾಗಿದೆ. ಡಾ.ಸುದರ್ಶನ್‌ ಬಲ್ಲಾಳ್‌, ಮುಖ್ಯಸ್ಥರು, ಮಣಿಪಾಲ್‌ ಆಸ್ಪತ್ರೆಸಮೂಹ 3ನೇ ಅಲೆ ಅಪಾಯಕಾರಿ ಅಲ್ಲ ಹೇಗೆ? 2ನೇ ಅಲೆ ವೇಳೆ ಬಹುತೇಕರಿಗೆ ಸೋಂಕು ತಗುಲಿದ್ದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಯಾಗಿದೆ ಬಹುತೇಕರು ಮೊದಲ ಹಾಗೂ 2ನೇ ಡೋಸ್‌ ಲಸಿಕೆ ಪಡೆದಿದ್ದರಿಂದ ಅಷ್ಟೊಂದು ಹಾನಿ ಮಾಡದು. ಮಕ್ಕಳು ಲಸಿಕೆ ಪಡೆಯದಿದ್ದರೂ ಪೋಷಕರ ಸಂಪರ್ಕದಿಂದ ರೋಗ ನಿರೋಧಕ ಶಕ್ತಿ ಹೆಚ್ಚಿದೆ.


from India & World News in Kannada | VK Polls https://ift.tt/3oln0MS

ಮ್ಯಾಚ್‌ ವಿನ್ನಿಂಗ್‌ ಪ್ರದರ್ಶನದ ಬಳಿಕ ಆರ್‌ಸಿಬಿ ಬಗ್ಗೆ ಮ್ಯಾಕ್ಸ್‌ವೆಲ್‌ ಅಚ್ಚರಿ ಹೇಳಿಕೆ!

ದುಬೈ: ರಾಜಸ್ಥಾನ್‌ ರಾಯಲ್ಸ್ ವಿರುದ್ಧದ ಪಂದ್ಯದ ಗೆಲುವಿನ ಬಳಿಕ ಸಂತಸ ವ್ಯಕ್ತಪಡಿಸಿದ ಬ್ಯಾಟ್ಸ್‌ಮನ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌, ಬೆಂಗಳೂರು ಫ್ರಾಂಚೈಸಿಗೆ ಬಂದಾಗಿನಿಂದಲೂ ನನ್ನಲ್ಲಿ ಒಳ್ಳೆಯ ಅನುಭವವಾಗುತ್ತಿದೆ ಎಂದು ಹೇಳಿದ್ದಾರೆ. ಬುಧವಾರ ಇಲ್ಲಿನ ದುಬೈ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ರಾಜಸ್ಥಾನ್‌ ರಾಯಲ್ಸ್ ತಂಡ 11 ಓವರ್‌ಗಳಿಗೆ 100 ರನ್‌ ಗಳಿಸಿತ್ತು. ನಂತರ ಆರ್‌ಸಿಬಿ ತಂಡದ ಶಿಸ್ತುಬದ್ದ ಬೌಲಿಂಗ್ ದಾಳಿಗೆ ನಲುಗಿದ ರಾಜಸ್ಥಾನ್‌ ನಿಗದಿತ 20 ಓವರ್‌ಗಳಿಗೆ 149 ರನ್‌ಗಳಿಗೆ ಸೀಮಿತವಾಯಿತು. ಬಳಿಕ 150 ರನ್‌ ಗುರಿ ಹಿಂಬಾಲಿಸಿದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು 17.1 ಓವರ್‌ಗಳಿಗೆ 3 ವಿಕೆಟ್‌ ಕಳೆದುಕೊಂಡು ಸುಲಭವಾಗಿ ಗುರಿ ಮುಟ್ಟಿತು. ದೇವದತ್‌ ಪಡಿಕ್ಕಲ್‌(22) ಹಾಗೂ ವಿರಾಟ್‌ ಕೊಹ್ಲಿ(25) ವಿಕೆಟ್‌ ಒಪ್ಪಿಸಿದ ಬಳಿಕ ಅತ್ಯುತ್ತಮ ಬ್ಯಾಟ್‌ ಮಾಡಿದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಹಾಗೂ ಶ್ರೀಕರ್‌ ಭರತ್‌ ಮೂರನೇ ವಿಕೆಟ್‌ಗೆ 69 ರನ್‌ ಕಲೆ ಹಾಕಿದರು. ಶ್ರೀಕರ್‌ ಭರತ್‌ 35 ಎಸೆತಗಳಲ್ಲಿ 44 ರನ್‌ ಗಳಿಸಿ ಅರ್ಧಶತಕದಂಚಿನಲ್ಲಿ ವಿಕೆಟ್‌ ಒಪ್ಪಿಸಿದರು. ಆದರೆ, ಮತ್ತೊಂದು ತುದಿಯಲ್ಲಿ ಭರ್ಜರಿ ಬ್ಯಾಟ್‌ ಬೀಸಿದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಕೇವಲ 30 ಎಸೆತಗಳಲ್ಲಿ ಒಂದು ಭರ್ಜರಿ ಸಿಕ್ಸರ್‌ ಹಾಗೂ 6 ಬೌಂಡರಿಗಳೊಂದಿಗೆ ಅಜೇಯ 50 ರನ್‌ ಗಳಿಸಿ ಆರ್‌ಸಿಬಿಯ 7 ವಿಕೆಟ್‌ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಕಳೆದ ಆವೃತ್ತಿಯಲ್ಲಿ ಪಂಜಾಬ್‌ ಕಿಂಗ್ಸ್‌ ಪರ ಆಡಿದ್ದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಅತ್ಯಂತ ಕಳಪೆ ಬ್ಯಾಟಿಂಗ್‌ ಪ್ರದರ್ಶನ ತೋರಿ ಕೇವಲ 108 ರನ್‌ ಗಳಿಸಿದ್ದರು. ಆದರೆ, ಅವರನ್ನು ಮಿನಿ ಹರಾಜಿನಲ್ಲಿ ಆರ್‌ಸಿಬಿ 14.25 ಕೋಟಿ ರೂ.ಗಳಿಗೆ ಖರೀದಿಸಿತ್ತು. ಇದೀಗ ಆರ್‌ಸಿಬಿ ತಂಡದಲ್ಲಿ ಮ್ಯಾಕ್ಸ್‌ವೆಲ್‌ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಕೊಹ್ಲಿ ಹಾಗೂ ಎಬಿಡಿ ಮೇಲಿನ ಭಾರವನ್ನು ಸ್ವಲ್ಪ ಕಡಿಮೆ ಮಾಡಿದ್ದಾರೆ. ಪಂದ್ಯದ ಬಳಿಕ ಮಾತನಾಡಿದ ಗ್ಲೆನ್‌ ಮ್ಯಾಕ್ಸ್‌ವೆಲ್‌, "ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಗಮಿಸಿದಾಗಿನಿಂದಲೂ ನನಗೆ ಒಳ್ಳೆಯ ಅನುಭವವಾಗುತ್ತಿದೆ. ಇಲ್ಲಿನ ತರಬೇತಿ ದಿನಚರಿ ಹಾಗೂ ತರಬೇತಿ ಹೊರಗಡೆಯ ದಿನಚರಿ ಎಲ್ಲವೂ ಅತ್ಯುತ್ತಮವಾಗಿದೆ. ಇದೆಲ್ಲವೂ ನನಗೆ ನೆರವಾಗುತ್ತಿದೆ. ಸನ್ನಿವೇಶಕ್ಕೆ ತಕ್ಕಂತೆ ಹೊಂದಿಕೊಂಡು ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವುದಕ್ಕೆ ಖುಷಿಯಾಗಿದೆ," ಎಂದು ಹೇಳಿದ್ದಾರೆ. "ಇತರೆ ಫ್ರಾಂಚೈಸಿಗಳಿಂತ ಬೆಂಗಳೂರು ಫ್ರಾಂಚೈಸಿ ತುಂಬಾ ವಿಭಿನ್ನವಾಗಿದೆ ಎಂದು ನಾನು ಭಾವಿಸುವುದಿಲ್ಲ. ಆದರೆ, ನಾವು ಗುಂಪನ್ನು ಹೇಗೆ ರಚಿಸಿಕೊಂಡಿದ್ದೇವೆ ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿದೆ. ಒಬ್ಬರ ಮೇಲೆಯೇ ಅವಲಂಬಿತವಾಗದೆ, ವಿಭಿನ್ನ ಸಂಗತಿಗಳನ್ನು ನಿರ್ವಹಿಸುವ ಹುಡುಗರ ಗುಂಪನ್ನು ಹೊಂದಿರುವುದು ಅತ್ಯುತ್ತಮವಾಗಿದೆ. ಇದು ನಿಜಕ್ಕೂ ಆನಂದದಾಯಕ ಗುಂಪಾಗಿದೆ," ಎಂದು ಮ್ಯಾಕ್ಸ್‌ವೆಲ್‌ ಸಂತಸ ವ್ಯಕ್ತಪಡಿಸಿದ್ದಾರೆ. ಪ್ರಸಕ್ತ ಆವೃತ್ತಿಯಲ್ಲಿ ನಾಲ್ಕನೇ ಬ್ಯಾಟಿಂಗ್‌ ಕ್ರಮಾಂಕಕ್ಕೆ ಬಡ್ತಿ ಪಡೆದಿರುವ ಗ್ಲೆನ್‌ ಮ್ಯಾಕ್ಸ್‌ವೆಲ್‌ ಇದುವರೆಗೂ ಆಡಿರುವ ಪಂದ್ಯಗಳಲ್ಲಿ 142 ಸ್ಟ್ರೈಕ್‌ ರೇಟ್‌ ಹಾಗೂ 39ರ ಸರಾಸರಿಯಲ್ಲಿ 350 ರನ್‌ ಗಳಿಸಿದ್ದಾರೆ ಹಾಗೂ ಆರ್‌ಸಿಬಿ ಪರ ಅತಿ ಹೆಚ್ಚು ವೈಯಕ್ತಿಕ ರನ್‌ ಗಳಿಸಿದ ಬ್ಯಾಟ್ಸ್‌ಮನ್‌ ಆಗಿದ್ದಾರೆ. ಕೆ.ಎಸ್‌ ಭರತ್‌ಗೆ ಬಡ್ತಿ ನೀಡಿರುವುದು ಪ್ರಯೋಗವಲ್ಲ: ಮ್ಯಾಕ್ಸ್‌ವೆಲ್‌ ತಂಡದ ಪ್ರದರ್ಶನ ಹಾಗೂ ಕೆ.ಎಸ್‌ ಭರತ್‌ಗೆ ಮೂರನೇ ಬ್ಯಾಟಿಂಗ್‌ ಕ್ರಮಾಂಕಕ್ಕೆ ಬಡ್ತಿ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಗ್ಲೆನ್‌ ಮ್ಯಾಕ್ಸ್‌ವೆಲ್‌, "ನಾವು ಅತ್ಯುತ್ತಮವಾಗಿ ಆಡಿದ್ದೇವೆಂದು ಭಾವಿಸುತ್ತೇನೆ. ಅಂದಹಾಗೆ ರಾಜಸ್ಥಾನ್‌ ರಾಯಲ್ಸ್‌ ಭರ್ಜರಿ ಆರಂಭ ಪಡೆದುಕೊಂಡಿತ್ತು ಆದರೆ, ಕೊನೆಯ 10 ಓವರ್‌ಗಳಲ್ಲಿ ನಾವು ಕಮ್‌ಬ್ಯಾಕ್‌ ಮಾಡಿದ ರೀತಿ ನಿಜಕ್ಕೂ ಅಸಾಧಾರಣವಾಗಿತ್ತು. ಈ ವೇಳೆ ಎದುರಾಗಿದ್ದ ಸಂಗತಿಗಳನ್ನು ನಾವು ಉತ್ತಮವಾಗಿ ನಿರ್ವಹಿಸಿದ್ದೇವೆ," ಎಂದು ಹೇಳಿದರು. "ಕೆ.ಎಸ್‌ ಭರತ್‌ ಅವರನ್ನು ಮೂರನೇ ಬ್ಯಾಟಿಂಗ್‌ ಕ್ರಮಾಂಕಕ್ಕೆ ಬಡ್ತಿ ನೀಡಿರುವುದು ಪ್ರಯೋಗ ಎಂದು ನಾನು ಕರೆಯುವುದಿಲ್ಲ. ಅವರು ಅದ್ಭುತ ಟಾಪ್‌ ಕ್ಲಾಸ್‌ ಬ್ಯಾಟ್ಸ್‌ಮನ್‌ ಹಾಗೂ ಇನಿಂಗ್ಸ್‌ನಲ್ಲಿ ಅವರು ಆಡಿದ ಹಾದಿ ನಿಜಕ್ಕೂ ಅಸಾಧಾರಣವಾಗಿತ್ತು," ಎಂದು ಸಹ ಆಟಗಾರನನ್ನು ಮ್ಯಾಕ್ಸ್‌ವೆಲ್‌ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3kWbW6N

ಕನ್ನಡ ಸಾಹಿತ್ಯ ಪರಿಷತ್‌ ಚುನಾವಣೆಯಲ್ಲೂ ಕಾಣಿಕೆ ಸಂಸ್ಕೃತಿ! ಮತದಾರರಿಗೆ ಬೆಳ್ಳಿಯುಂಗರ, ಸೂಟ್​ಕೇಸ್​ ನೀಡಿ ಆಮಿಷ!

ಬೆಂಗಳೂರು: ರಾಜಕಾರಣಿಗಳು ಹಣದ ಹೊಳೆ ಹರಿಸಿ ನಡೆಸುವ ಚುನಾವಣೆಯಲ್ಲಿ ಸದ್ದು ಮಾಡುತ್ತಿದ್ದ ಸೂಟ್‌ಕೇಸ್‌ ಸಂಸ್ಕೃತಿ ಈ ಬಾರಿ ಕನ್ನಡ ಸಾಹಿತ್ಯ ಪರಿಷತ್‌ನ ಚುನಾವಣೆಗೂ ಕಾಲಿಟ್ಟಿದೆ! ಈ ಬಾರಿಯ ಚುನಾವಣೆಯಲ್ಲಿ ಉನ್ನತ ಹುದ್ದೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಪೈಕಿ ಕೆಲವರು ಮತದಾರರಿಗೆ ಆಕರ್ಷಕ ಸೂಟ್‌ಕೇಸ್‌ಗಳನ್ನು ಕೊಟ್ಟರೆ, ಮತ್ತೆ ಕೆಲವರು ಬೆಳ್ಳಿಯ ಕುಂಕುಮ ಭರಣಿ ಹಾಗೂ ನಾನಾ ವಿನ್ಯಾಸದ ಬೆಳ್ಳಿಯ ಉಂಗುರಗಳನ್ನು ನೀಡುತ್ತಿರುವುದು ಬೆಳಕಿಗೆ ಬಂದಿದೆ. ಕಲಬುರಗಿ, ಹಾವೇರಿ ಮತ್ತಿತರ ಜಿಲ್ಲೆಗಳಲ್ಲಿ ಸೂಟ್‌ಕೇಸ್‌ಗಳನ್ನು ಉಡುಗೊರೆಯಾಗಿ ನೀಡಿ ಮತ ಸೆಳೆಯಲಾಗುತ್ತಿದೆ ಎನ್ನಲಾಗಿದೆ. ಇನ್ನು ಕೆಲವು ಜಿಲ್ಲೆಗಳಲ್ಲಿ ಮತದಾರರಿಗೆ ಉಡುಗೊರೆ ಹಂಚಲು ತಯಾರಿ ನಡೆದಿದೆ ಎಂದು ಸಾಹಿತ್ಯ ವಲಯದಲ್ಲಿ ಬಹು ಚರ್ಚೆ ನಡೆದಿದೆ. ಮೇ 9ರಂದು ಚುನಾವಣೆ ದಿನಾಂಕ ಘೊಷಣೆಯಾಗಿತ್ತು. ಆದರೆ ಕೋವಿಡ್‌ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡಲಾಗಿತ್ತು. ಐದು ತಿಂಗಳ ಬಳಿಕ ಚುನಾವಣೆ ನಡೆಸುವಂತೆ ನ್ಯಾಯಾಲಯ ಆದೇಶಿಸಿದೆ. ಕನ್ನಡ ಸಾಹಿತ್ಯ ಪರಿಷತ್ತಿಗೆ ಎರಡು ತಿಂಗಳಲ್ಲಿ ಚುನಾವಣೆ ನಡೆಸಬೇಕು ಎಂದು ಧಾರವಾಡ ಹೈಕೋರ್ಟ್‌ ಪೀಠ ನೀಡಿದ ಆದೇಶದ ಹಿನ್ನೆಲೆಯಲ್ಲಿ ನವೆಂಬರ್‌ ಮೂರನೇ ವಾರದಲ್ಲಿ ಕನ್ನಡ ಸಾಹಿತ್ಯ ಪರಿಷತ್ಗೆ ಚುನಾವಣೆ ನಡೆಸುವ ಸಾಧ್ಯತೆಯಿದೆ. ಹೀಗಾಗಿ ಕಣದಲ್ಲಿರುವ ಅಭ್ಯರ್ಥಿಗಳು ಪ್ರಚಾರ ಕಾರ್ಯವನ್ನು ಚುರುಕುಗೊಳಿಸಿದ್ದಾರೆ. ಪ್ರಚಾರ ಜೋರು: ಈ ಬಾರಿ 3.10 ಲಕ್ಷ ಮಂದಿ ಮತದಾರರಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಈ 3.10 ಲಕ್ಷ ಮಂದಿ ಮತದಾರರಿಗೂ ಈ ಹಿಂದೆ ಅಂಚೆ ಪತ್ರದ ಮೂಲಕ ಮನವಿ, ಜಿಲ್ಲಾದ್ಯಂತ ಪ್ರಚಾರ ಕಾರ್ಯ ಸೇರಿದಂತೆ ನಾನಾ ಕೆಲಸಗಳಿಗೆ ಕೋಟಿಗಟ್ಟಲೆ ಹಣ ಖರ್ಚು ಮಾಡಿದ್ದಾರೆ. ಈಗ ಖರ್ಚು ಮಾಡಲು ಕೈಯಲ್ಲಿ ಕಾಸಿಲ್ಲ. ಹಾಗಂತ ಪ್ರಚಾರ ಮಾಡದಿದ್ದರೆ ಮತದಾರರಿಗೆ ನೆನಪಿರುವುದಿಲ್ಲ ಎಂಬ ನೆಲೆಯಲ್ಲಿ ಓಡಾಡುತ್ತಿದ್ದಾರೆ. ಇದರ ಜತೆಗೆ ದೂರವಾಣಿ ಕರೆ, ಫೇಸ್‌ಬುಕ್‌, ಟ್ವಿಟರ್‌, ವ್ಯಾಟ್ಸಾಪ್‌ ಮೂಲಕ ಸಂದೇಶಗಳನ್ನು ಕಳುಹಿಸಿ ಮತದಾರರನ್ನು ಸೆಳೆಯುವ ಕಾರ್ಯದಲ್ಲಿ ತೊಡಗಿದ್ದಾರೆ. ಕೆಲವರಿಗೆ ಇರಿಸು ಮುರಿಸು ಚುನಾವಣೆಗೆ ಸ್ಪರ್ಧಿಸುವ ಬಹುತೇಕ ಅಭ್ಯರ್ಥಿಗಳು ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಕೆಲವರು ಮಾತಿನಲ್ಲಿ ಮತ ಕೇಳಿದರೆ ಇನ್ನು ಕೆಲವರು ಉಡುಗೊರೆಗಳನ್ನು ಕೊಟ್ಟು ಮತ ಕೇಳುತ್ತಿದ್ದಾರೆ. ಉಡುಗೊರೆಗಳನ್ನು ಪಡೆಯುವುದು ಕೆಲವರಿಗೆ ಇರಿಸು ಮುರಿಸು ತಂದಿದೆ. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಖುಷಿಯಿಂದಲೇ ಉಡುಗೊರೆಗಳನ್ನು ಪಡೆಯುತ್ತಿದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ಪರಿಷತ್ ಮೂಲಕ ಚುನಾವಣೆಗೆ ಸ್ಪರ್ಧಿಸಿ ಕನ್ನಡದ ಸೇವೆ ಮಾಡಬೇಕಾದ ಅಭ್ಯರ್ಥಿಗಳು, ಚುನಾವಣೆಗೆ ಮೊದಲೇ ಅಭ್ಯರ್ಥಿಗಳಿಗೆ ವಿವಿಧ ರೀತಿಯ ಆಮಿಷವೊಡ್ಡಿ ಮತದಾರರನ್ನು ಸೆಳೆಯುವುದು ನೋಡಿದ್ರೆ, ಚುನಾವಣೆಯಲ್ಲಿ ಗೆದ್ದ ಬಳಿಕ ಅದ್ಯಾವ ರೀತಿಯ ಕನ್ನಡದ ಸೇವೆ ಮಾಡ್ತಾರೋ ದೇವರೇ ಬಲ್ಲ..


from India & World News in Kannada | VK Polls https://ift.tt/3AYf0Vi

ಕೋವಿಡ್‌ ಲಸಿಕೆ ನೀಡಿಕೆಯಲ್ಲಿ ದಕ್ಷಿಣ ಕನ್ನಡಕ್ಕೆ ಐದನೇ ಸ್ಥಾನ, ಉಡುಪಿಗೆ ಮೂರನೇ ಸ್ಥಾನ!

ಸ್ಟೀವನ್‌ ರೇಗೊ ಮಂಗಳೂರು ಮಂಗಳೂರು: ಕೋವಿಡ್‌ ನಿರೋಧಕ ಲಸಿಕೆ ನೀಡುವಲ್ಲಿ ಉಡುಪಿಗೆ ಮೂರನೇ ಸ್ಥಾನ ದಕ್ಕಿದರೆ ದಕ್ಷಿಣ ಕನ್ನಡಕ್ಕೆ ಐದನೇ ಸ್ಥಾನ ಪ್ರಾಪ್ತಿಯಾಗಿದೆ. ದಕದಲ್ಲಿ ಈವರೆಗೆ ಶೇ.86ರಷ್ಟು ಪ್ರಗತಿ ದಾಖಲಿಸಲಾಗಿದೆ. ಲಸಿಕೆ ಪಡೆದುಕೊಳ್ಳದವರಿಗೆ ವಿಶೇಷ ಮಾಹಿತಿ ನೀಡುವ ಮೂಲಕ ಅವರನ್ನು ಲಸಿಕೆ ಪಡೆದುಕೊಳ್ಳುವಂತೆ ಪ್ರೇರಣೆ ನೀಡುವ ಕೆಲಸಕ್ಕೂ ಆರೋಗ್ಯ ಇಲಾಖೆ ಮುಂದಾಗಿದೆ. ರಾಜ್ಯದಲ್ಲಿ ಕೋವಿಡ್‌ ನಿರೋಧಕ ಲಸಿಕೆ ನೀಡುವ ಕಾರ‍್ಯಕ್ರಮ ವೇಗವಾಗಿ ಸಾಗುತ್ತಿದೆ. ಬೆಂಗಳೂರು ಬಿಬಿಎಂಪಿ ಮೊದಲ ಸ್ಥಾನದಲ್ಲಿ(ಶೇ.100)ದ್ದರೆ, ಕೊಡಗಿನಲ್ಲಿಶೇ.92ರಷ್ಟು ಲಸಿಕೆ ನೀಡುವ ಕಾರ‍್ಯ ಪೂರ್ಣಗೊಂಡಿದೆ. ಉಡುಪಿ(3ನೇ ಸ್ಥಾನ)ಯಲ್ಲಿ ಶೇ.90ರಷ್ಟು ಪ್ರಗತಿಯಾಗಿದೆ. ನಾಲ್ಕನೇ ಹಾಗೂ ಐದನೇ ಸ್ಥಾನದಲ್ಲಿ ಉತ್ತರ ಕನ್ನಡ( ಶೇ.86.50) ಮತ್ತು ದಕ್ಷಿಣ ಕನ್ನಡದಲ್ಲಿ ಶೇ.86ರಷ್ಟು ಪ್ರಗತಿ ದಾಖಲಾಗಿದೆ. ಮೊದಲ ಡೋಸ್‌ ಪೂಧರ್ಣ ಜಿಲ್ಲೆಯಲ್ಲಿ60 ವರ್ಷ ಮೇಲ್ಪಟ್ಟವರಲ್ಲಿ ಮೊದಲ ಡೋಸ್‌ ಶೇ.99.99ರಷ್ಟು ಲಸಿಕೆ ನೀಡುವ ಕೆಲಸವಾಗಿದೆ. ಎರಡನೇ ಡೋಸ್‌ನಲ್ಲಿ ಶೇ.65.19ರಷ್ಟು ಮಂದಿ ಲಸಿಕೆ ತೆಗೆದುಕೊಂಡಿದ್ದಾರೆ. 45ರಿಂದ 59 ವರ್ಷದೊಳಗಿನವರಲ್ಲಿ ಮೊದಲ ಡೋಸ್‌ನಲ್ಲಿ ಶೇ.96.85 ಮಂದಿ ಹಾಗೂ ಎರಡನೇ ಡೋಸ್‌ನಲ್ಲಿ ಶೇ.55.07 ಮಂದಿ ಲಸಿಕೆ ತೆಗೆದುಕೊಂಡಿದ್ದಾರೆ. 18ರಿಂದ 44 ವಯೋಮಾನದವರಲ್ಲಿ ಮೊದಲ ಡೋಸ್‌ ಪಡೆದುಕೊಂಡವರು ಶೇ.69.8ರಷ್ಟು, ಎರಡನೇ ಡೋಸ್‌ನಲ್ಲಿ ಶೇ.28.88ರಷ್ಟು ಪಡೆದುಕೊಂಡಿದ್ದಾರೆ. ದಕ್ಷಿಣ ಕನ್ನಡದಲ್ಲಿ 2011ರ ಜನಗಣತಿ ಪ್ರಕಾರ 17,32,500ರಷ್ಟು ಮಂದಿಯ ಟಾರ್ಗೆಟ್‌ ಆರೋಗ್ಯ ಇಲಾಖೆ ನಿರ್ಧಾರ ಮಾಡಿತ್ತು. ಆದರೆ ಇದಕ್ಕೆ ಸೇರ್ಪಡೆಯಾಗುತ್ತಾ ಸಾಗಿದ್ದರ ಪರಿಣಾಮ 18 ಲಕ್ಷದಷ್ಟು ಲಸಿಕೆಗೆ ಇಲಾಖೆ ಗುರಿ ನಿಗದಿ ಮಾಡಿತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹಳಷ್ಟು ಮಂದಿ ಲಸಿಕೆ ಪಡೆದುಕೊಳ್ಳುತ್ತಿದ್ದಾರೆ. ಆದರೆ ಪಡೆದುಕೊಳ್ಳದವರಿಗೆ ಈಗ ಜಿಲ್ಲೆಯಲ್ಲಿ ವಿಶೇಷ ಅಭಿಯಾನ ಮಾಡಲಾಗುತ್ತಿದೆ. ಆಶಾ ಕಾರ‍್ಯಕರ್ತೆಯರು ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ ಲಸಿಕೆ ತೆಗೆದುಕೊಳ್ಳದವರ ಮಾಹಿತಿ ಪಡೆದು ಲಸಿಕೆ ಪಡೆದುಕೊಳ್ಳುವಂತೆ ಪ್ರೇರಣೆ ನೀಡುವ ಕಾರ‍್ಯವನ್ನು ಕೈಗೆತ್ತಿಕೊಂಡಿದ್ದಾರೆ. ಇದರಿಂದಾಗಿ ಈ ಲಸಿಕೆ ಪಡೆಯುವ ಮಂದಿ ಮತ್ತಷ್ಟು ಹೆಚ್ಚಾಗುತ್ತಿದೆ ಎನ್ನುತ್ತಾರೆ ಆರೋಗ್ಯ ಇಲಾಖೆಯ ಅಧಿಕಾರಿಗಳು. ಲಸಿಕೆ ಪಡೆದುಕೊಳ್ಳದ ಮೂರು ವರ್ಗವಿದೆ. ಮೊದಲ ವರ್ಗ ಲಸಿಕೆ ಪಡೆಯುವುದೇ ಇಲ್ಲ ಎನ್ನುವವರು. ಇನ್ನೊಂದು ವರ್ಗ ಪಡೆದುಕೊಳ್ಳಬಹುದು ಎನ್ನುವ ನಿರ್ಧಾರ ಮಾಡಿದವರು. ಮೂರನೇ ವರ್ಗದವರು ತುಂಬಾ ಸೋಮಾರಿಗಳು. ಆದರೆ ಕೊನೆಯ ವರ್ಗವನ್ನು ಬದಲಾಯಿಸುವ ಕೆಲಸ ಮಾಡಬಹುದು. ಆದರೆ ಉಳಿದ ಎರಡು ವರ್ಗದವರನ್ನು ಮನವೊಲಿಸುವುದು ಕೊಂಚ ಕಷ್ಟ. ಆದರೆ ನಮ್ಮ ಪ್ರಯತ್ನ ಸಾಗುತ್ತಿದೆ. ಡಾ. ಕಿಶೋರ್‌ ಕುಮಾರ್‌ ಎಂ., ಆರೋಗ್ಯಾಧಿಕಾರಿ, ದ.ಕ. ಜಿಲ್ಲೆ


from India & World News in Kannada | VK Polls https://ift.tt/3F4XWzt

ಸರ್ಕಾರಿ ಕೆಲಸ ಕೊಡಿಸೋದಾಗಿ ನಂಬಿಸಿ ಪತ್ರಕರ್ತನಿಗೆ ₹1.61 ಕೋಟಿ ವಂಚಿಸಿದ ವಿಧಾನಸೌಧ ನೌಕರರು!

ಬೆಂಗಳೂರು: ಸರಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ ಪತ್ರಕರ್ತರೊಬ್ಬರಿಂದ 1.61 ಕೋಟಿ ರೂ. ಪಡೆದು ನಕಲಿ ಆದೇಶ ಪತ್ರ ಕೊಟ್ಟು ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಸಂಬಂಧ ದ್ವಿತೀಯ ದರ್ಜೆ ಸಹಾಯಕಿ ಸೇರಿ ಇಬ್ಬರು ಸರಕಾರಿ ನೌಕರರನ್ನು ಪೊಲೀಸರು ಬಂಧಿಸಿದ್ದಾರೆ. ವಿಧಾನಸೌಧ ಅಬಿಯೋಜನಾ ಇಲಾಖೆಯ ದ್ವಿತೀಯ ದರ್ಜೆ ಸಹಾಯಕಿಯಾಗಿರುವ ಮತ್ತೀಕೆರೆಯ ಶ್ರೀಲೇಖಾ(35) ಮತ್ತು ವಿಕಾಸಸೌಧದ ಗುತ್ತಿಗೆ ನೌಕರ ಸಂಪತ್‌ ಕುಮಾರ್‌(26) ಬಂಧಿತ ಆರೋಪಿಗಳಾಗಿದ್ದು, ಇದೇ ಪ್ರಕರಣದ ಮತ್ತೊಬ್ಬ ಆರೋಪಿ ಕೆಪಿಸಿಸಿ ಕಾರ್ಮಿಕ ವಿಭಾಗದ ಉಪಾಧ್ಯಕ್ಷೆ ರಾಧಾ ಉಮೇಶ್‌ ಎಂಬಾಕೆ ತಲೆ ಮರೆಸಿಕೊಂಡಿದ್ದಾಳೆ. ಆರೋಪಿಗಳು 1.61 ಕೋಟಿ ರೂ. ಪಡೆದು ವಂಚಿಸಿದ್ದಾರೆ ಎಂದು ಕುಮಾರಸ್ವಾಮಿ ಲೇಔಟ್‌ ನಿವಾಸಿಯಾಗಿರುವ ಪತ್ರಕರ್ತ ಮಂಜುನಾಥ್‌ ಅವರು ವಿಧಾನಸೌಧ ಠಾಣೆಯಲ್ಲಿ ದೂರು ನೀಡಿದ್ದರು. ಕೆಪಿಸಿಸಿ ಕಾರ್ಮಿಕ ವಿಭಾಗದ ಉಪಾಧ್ಯಕ್ಷೆ ಎಂದು 2019ರಲ್ಲಿ ಗುರುತಿಸಿಕೊಂಡಿದ್ದ ರಾಧಾ ಉಮೇಶ್‌ ಅವರು ಮಂಜುನಾಥ್‌ರನ್ನು ವಂಚಿಸಿದ್ದಾರೆ. 'ನನಗೆ ವಿಧಾನಸೌಧದಲ್ಲಿ ಹಿರಿಯ ಅಧಿಕಾರಿಗಳ ಪರಿಚಯವಿದೆ. ಕಾರ್ಮಿಕರಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡಿಸಿಕೊಡುತ್ತೇನೆ' ಎನ್ನುವ ರಾಧಾ ರಮೇಶ್‌ರ ಮಾತನ್ನು ಮಂಜುನಾಥ್‌ ನಂಬಿಕೊಂಡಿದ್ದರು. ತಮ್ಮ ಸಹೋದರನಿಗೆ ಸಚಿವಾಲಯದಲ್ಲಿ ದಿನಗೂಲಿ ನೌಕರರ ಏಜೆನ್ಸಿ ಕೊಡಿಸುವಂತೆ ಕೋರಿದ್ದರು. ಅದಕ್ಕಾಗಿ ರಾಧಾ ಉಮೇಶ್‌ ನಾಲ್ಕು ಕಂತುಗಳಲ್ಲಿ 15 ಲಕ್ಷ ರೂ. ಪಡೆದುಕೊಂಡಿದ್ದರು. ಮತ್ತೊಂದು ಕಡೆ, ಸಚಿವಾಲಯದ ಒಳಾಡಳಿತ ಇಲಾಖೆಯಲ್ಲಿ ನೇರ ನೇಮಕಾತಿ ಮೂಲಕ ಕಿರಿಯ ಸಹಾಯಕರು, ಹಿರಿಯ ಸಹಾಯಕರು ಮತ್ತು ಅಧೀಕ್ಷಕರ ಹುದ್ದೆಗಳ ನೇಮಕಾತಿಗಳನ್ನು ಮಾಡಿಸಿಕೊಡುತ್ತೇನೆ ಎಂದು ಭರವಸೆ ನೀಡಿದ್ದ ದ್ವಿತೀಯ ದರ್ಜೆ ಸಹಾಯಕಿ ಶ್ರೀಲೇಖಾ ಅವರು 1 ಕೋಟಿಗೂ ಹೆಚ್ಚು ಹಣವನ್ನು ಮಂಜುನಾಥ್‌ರಿಂದ ಪಡೆದಿದ್ದರು ಎನ್ನಲಾಗಿದೆ. ಎಟಿಎಂಗೆ ಹಣ ತುಂಬುವ ಸಿಬ್ಬಂದಿಯಿಂದ 3 ಕೋಟಿ ವಂಚನೆ ಕೋಲಾರ: ಜಿಲ್ಲೆಯ ನಾನಾ ಬ್ಯಾಂಕುಗಳಿಂದ ಹಣ ಪಡೆದು ಜಿಲ್ಲೆಯ ವಿವಿಧೆಡೆ ಎಟಿಎಂಗಳಿಗೆ ಹಣ ತುಂಬುವ ಹೊಣೆ ಹೊತ್ತಿದ್ದ ನೌಕರರು 3.15 ಕೋಟಿ ರೂ.ಗೂ ಹೆಚ್ಚು ಹಣ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಮೂವರು ಆರೋಪಿ ಗಳನ್ನು ಪೊಲೀಸರು ಬಂಧಿಸಿದ್ದಾರೆ. ಸೆಕ್ಯೂರ್‌ ವ್ಯಾಲ್ಯೂ ಇಂಡಿಯಾ ಲಿಮಿಟೆಡ್‌ನ ಎಜಿಎಂ ನೀಡಿರುವ ದೂರಿನ ಅನ್ವಯ ಆರೋಪಿಗಳಾದ ಕೋಲಾರ ಮೂಲದ ಗಂಗಾಧರ್‌, ಪವನ್‌ಕುಮಾರ್‌, ಮುರಳಿ ಎಂಬುವ ವರನ್ನು ಎಸ್‌ಪಿ ಡೆಕ್ಕಾ ಕಿಶೋರ್‌ಬಾಬು ಮಾರ್ಗದರ್ಶನದಲ್ಲಿ ಕೋಲಾರದ ಸಿಇಎನ್‌ ಅಪರಾಧ ವಿಭಾಗದ ಇನ್ಸ್‌ ಪೆಕ್ಟರ್‌ ಜಗದೀಶ್‌ ನೇತೃತ್ವದಲ್ಲಿ ಬಂಧಿಸಲಾಗಿದ್ದು, ಒಬ್ಬ ಪ್ರಮುಖ ಆರೋಪಿ ಯಾದ ಸುನೀಲ್‌ ಕುಮಾರ್‌ನ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ. ಈ ಆರೋಪಿಗಳು ಸೆಕ್ಯೂರ್‌ ವ್ಯಾಲ್ಯೂ ಎಂಬ ಖಾಸಗಿ ಕಂಪನಿಯಲ್ಲಿ ಗುತ್ತಿಗೆ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದ ವಂಚಕರು ನಡೆಸಿ ರುವ ಕೃತ್ಯ ಕಂಪನಿಯ ಆಡಿಟ್‌ ಮಾಡುವ ವೇಳೆ ಬೆಳಕಿಗೆ ಬಂದಿದೆ. ಎಟಿಎಂಗಳ ಎಕ್ಸಿಕ್ಯೂಟಿವ್‌ ಹಾಗೂ ಸಹಾಯಕರಾಗಿ ನೇಮಕ ಗೊಂಡು ಕೆಲಸ ಮಾಡುತ್ತಿದ್ದ ಆರೋಪಿಗಳು, ಆಕ್ಸೀಸ್‌ ಬ್ಯಾಂಕ್‌, ಎಸ್‌ಬಿಐ, ಇಂಡಿಯನ್‌ ಬ್ಯಾಂಕ್‌, ಎಸ್‌ಬಿಐ, ಎಚ್‌ಡಿ ಎಫ್‌ಸಿ, ಐಸಿ ಐಸಿಐ, ಯುಬಿಐ, ಐಡಿಬಿಐ, ಎಲ್‌ವಿಬಿ ಬ್ಯಾಂಕುಗಳಿಂದ ಹಣ ಪಡೆದು ಸೆಕ್ಯೂರ್‌ ವ್ಯಾಲ್ಯೂ ಕಂಪನಿ ಬೆಂಗಾವಲು ವಾಹನದಲ್ಲಿ ಹೋಗಿ ಎಟಿಎಂಗಳಿಗೆ ಹಣ ತುಂಬುತ್ತಿದ್ದರು. ಜಿಲ್ಲೆಯ ಕೋಲಾರ, ತೊಟ್ಲಿಗಾನಹಳ್ಳಿ, ಚಿಟ್ನಹಳ್ಳಿ, ರೋಜಾರಪಲ್ಲಿ ಎಟಿಎಂಗಳು, ಬಂಗಾರಪೇಟೆ, ಬೂದಿಕೋಟೆ, ಭಟ್ರ ಹಳ್ಳಿ, ಕೆಜಿಹಳ್ಳಿ, ಮಾಲೂರು, ತೊರಲಕ್ಕಿ, ಕೆಜಿಎಫ್‌, ಚಿಕ್ಕತಿರುಪತಿ, ಕೋಪಡಹಳ್ಲಿ, ನರಸಾಪುರ, ವೇಮಗಲ್‌ ಮತ್ತಿತರ ಎಟಿಎಂಗಳಿಗೆ ಹಣ ತುಂಬಲು ಬ್ಯಾಂಕುಗಳಿಂದ ಪಡೆದ 3,15,96,500 ರೂ. ಪಡೆದಿದ್ದ ಆರೋಪಿಗಳು ಎಟಿಎಂ ಗಳಿಗೆ ಹಣ ತುಂಬದೇ ಅಕ್ರಮವಾಗಿ ತೆಗೆದುಕೊಂಡು ಸ್ವಂತಕ್ಕೆ ಬಳಸಿಕೊಂಡು ನಂಬಿಕೆ ದ್ರೋಹವೆಸಗಿದ್ದಾರೆ ಎಂದು ಕಂಪನಿ ಎಜಿಎಂ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.


from India & World News in Kannada | VK Polls https://ift.tt/3D1dGBB

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...