ತುಮಕೂರು: ಜೀವನಾಧಾರವಾಗಿದ್ದ ವೃದ್ದೆಯ ಪೆಟ್ಟಿಗೆ ಅಂಗಡಿಗೆ ಬೆಂಕಿ ಹಾಕಿದ ಕಿಡಿಗೇಡಿಗಳು!

ಕೊರಟಗೆರೆ: ವಯೋವೃದ್ದ ದಂಪತಿಯ ಜೀವನದ ಆಸರೆಯಾಗಿದ್ದ ಚಿಲ್ಲರೆ ಪೆಟ್ಟಿಗೆ ಅಂಗಡಿಗೆ ಕಿಡಿಗೇಡಿಗಳು ಶುಕ್ರವಾರ ಮುಂಜಾನೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಕೊರಟಗೆರೆ ತಾಲೂಕು ಕಸಬಾ ಹೋಬಳಿ ತುಂಬಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಕ್ಕಿರಪ್ಪನಪಾಳ್ಯ ಮೇಗಲತಾಂಡದಲ್ಲಿ ಈ ಘಟನೆ ನಡೆದಿದೆ. ಈ ಅಂಗಡಿ ಪಕ್ಕಿರಪ್ಪನಪಾಳ್ಯ ಮೇಗಲತಾಂಡದ ಖಂಡ್ಯನಾಯ್ಕ ಮತ್ತು ತುಳಸಿಬಾಯಿ ದಂಪತಿಗೆ ಸೇರಿದ್ದಾಗಿದ್ದು, ಇದುವೇ ಈ ದಂಪತಿಯ ಜೀವನ ಆಧಾರವಾಗಿತ್ತು. ದ್ವೇಷದಿಂದಲೇ ಅಂಗಡಿಗೆ ಬೆಂಕಿ ಹಾಕಿರುವ ಸಾಧ್ಯತೆ ಇದೆ ಎಂದು ದಂಪತಿ ಆರೋಪಿಸಿದ್ದಾರೆ. ಇನ್ನು ಘಟನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ದಿನಸಿ ಸಾಮಾನುಗಳು ಬೆಂಕಿಗಾಹುತಿಯಾಗಿದೆ. ಪೆಟ್ಟಿಗೆ ಅಂಗಡಿಯಲ್ಲಿ ಶೇಖರಣೆ ಮಾಡಲಾಗಿದ್ದ ಲಕ್ಷಾಂತರ ರೂ ಮೌಲ್ಯದ ದಿನಸಿ ಸಾಮಾನುಗಳು ನಾಶವಾಗಿ ವಯೋವೃದ್ದ ದಂಪತಿಗಳು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಘಟನೆಯಿಂದಾಗಿ ವಯೋವೃದ್ದ ದಂಪತಿಗೆ ಮುಂದಿನ ಜೀವನದ ದಾರಿ ಕಾಣದೆ ಕಣ್ಣಿರಿಡುತ್ತಿದ್ದಾರೆ. ಬೆಂಕಿಗೆ ಅಂಗಡಿ ಬಣ್ಣ ಸಂಪೂರ್ಣ ಕಪ್ಪಾಗಿದ್ದು, ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.


from India & World News in Kannada | VK Polls https://ift.tt/2KLklL7

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...