ಹೊಸ ವರ್ಷಾಚರಣೆಗೆ ಎಣ್ಣೆ ವಹಿವಾಟು ಬಲುಜೋರು; 24 ಗಂಟೆಯೊಳಗೆ 150 ಕೋಟಿ ಆದಾಯ..!

ತಿ.ನಾ ಪದ್ಮನಾಭ ಮಾಗಡಿ : ಕೊರೊನಾ ಕಹಿನೆನಪು ಮರೆಸಲೋ ಎಂಬಂತೆ 2020 ವರ್ಷದ ಕೊನೆಯ ತಾಸುಗಳಲ್ಲಿ ಜಿಲ್ಲೆಯಲ್ಲಿ ಭರ್ಜರಿ ಮದ್ಯ ವಹಿವಾಟು ನಡೆದಿದೆ. ವರ್ಷದ ಕೊನೆ ದಿನವಾದ ಗುರುವಾರ ಒಂದೇ ದಿನ ಬರೋಬ್ಬರಿ 150 ಕೋಟಿ ರೂ. ಮದ್ಯ ಮಾರಾಟವಾಗಿದೆ ಎಂಬ ಮಾಹಿತಿಯನ್ನು ಜಿಲ್ಲೆ ಹಾಗೂ ರಾಜ್ಯದ ಅಬಕಾರಿ ಇಲಾಖೆ ಅಧಿಕಾರಿಗಳೇ ಬಹಿರಂಗ ಗೊಳಿಸಿದ್ದಾರೆ. ಇದು ಕಳೆದ ಎರಡು ವರ್ಷಗಳಲ್ಲೇ ನಡೆದ ದಾಖಲೆ ವಹಿವಾಟು. 2018ರಲ್ಲಿ ವರ್ಷದ ಕೊನೆ ದಿನ 82.02 ಕೋಟಿ ವಹಿವಾಟು ನಡೆದಿದ್ದರೆ, 2019ರಲ್ಲಿ119 ಕೋಟಿ ರೂ. ವಹಿವಾಟು ನಡೆದಿತ್ತು. ಈ ದಾಖಲೆಯನ್ನು ನೋಡಿದರೆ, 2020 ವರ್ಷಪೂರ್ತಿ ಅನುಭವಿಸಿದ್ದ ಕಹಿ ಅನುಭವವನ್ನು ಸಂಪೂರ್ಣವಾಗಿ ಮರೆಯಲು ಮದ್ಯಪ್ರೇಮಿಗಳು ಅಮಲಿನಲ್ಲಿ ತೇಲಿಹೋದಂತಿದೆ. ಬೆಳಿಗ್ಗೆಯಿಂದಲೇ ಖರೀದಿ ಭರಾಟೆ :ರೂಪಾಂತರಿ ಕೊರೋನಾ ಕಾರಣಕ್ಕಾಗಿ ರಾಜ್ಯದಲ್ಲಿ ಹೊಸ ವರ್ಷಾಚರಣೆಗೆ ಸಾಕಷ್ಟು ನಿರ್ಬಂಧಗಳನ್ನು ವಿಧಿಸಲಾಗಿತ್ತು. ಡಿ.31 ರಂದು ಸಂಜೆ 12 ಗಂಟೆಯಿಂದಲೇ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಹೀಗಾಗಿ ರಾತ್ರಿ ಪಾರ್ಟಿಗಳಿಗೆ ಬೆಳಗ್ಗೆಯಿಂದಲೇ ಮದ್ಯ ಖರೀದಿಯಲ್ಲಿ ತೊಡಗಿದ್ದ ಮದ್ಯ ಪ್ರಿಯರು, ಸಂಜೆ 5.15 ರ ವೇಳೆಗೆ ಬರೋಬ್ಬರಿ 150 ಕೋಟಿ ರೂ. ಮದ್ಯ ಖರೀದಿಸಿದ್ದಾರೆ. ಇನ್ನು ಮದ್ಯದ ಮಳಿಗೆ, ಬಾರ್‌ ಮತ್ತು ರೆಸ್ಟೋರೆಂಟ್‌ಗಳು ತಡರಾತ್ರಿವರೆಗೂ ತೆರೆದಿದ್ದು ವಹಿವಾಟು 250 ಕೋಟಿಗೂ ಹೆಚ್ಚಾಗಿರುವ ಸಾಧ್ಯತೆ ಇದೆ ಎಂಬುದು ಅಧಿಕಾರಿಗಳ ಹೇಳಿಕೆ. 3.96 ಲಕ್ಷ ಕೇಸ್‌ ವಹಿವಾಟು:ಸಂಜೆ 5.15ರ ವೇಳೆಗೆ ಅಬಕಾರಿ ಇಲಾಖೆ ಪಟ್ಟಿಯಂತೆ 120.21 ಕೋಟಿ ರು. ಮೌಲ್ಯದ 2.23 ಲಕ್ಷ ಕೇಸ್‌ (ಭಾರತೀಯ ಮದ್ಯ) ಹಾಗೂ 30.73 ಕೋಟಿ ರು. ಮೌಲ್ಯದ 1.73 ಲಕ್ಷ ಕೇಸ್‌ ಬಿಯರ್‌ ವಟಿವಾಟು ನಡೆದಿತ್ತು. ಕಳೆದ ವರ್ಷಕ್ಕೆ ಹೋಲಿಸಿಕೊಂಡರೆ ಕನಿಷ್ಠ 30 ಕೋಟಿ ರು. ವಹಿವಾಟು ಏರಿಕೆಯಾಗಿದೆ. ಗುರುವಾರ ತಡರಾತ್ರಿ ವೇಳೆಗೆ ಇದು ಮತ್ತಷ್ಟು ಹೆಚ್ಚಾಗಿರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ಮೂರು ವರ್ಷಗಳ ಖರೀದಿ ಹೋಲಿಕೆ ಮಾಡಿದರೆ ವರ್ಷದಿಂದ ವರ್ಷಕ್ಕೆ ಮದ್ಯಮಾರಾಟ ಜಿಗಿತ ಕಂಡುಬರುತ್ತಿದೆ.


from India & World News in Kannada | VK Polls https://ift.tt/2KJO8nn

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...