ಜ.15ರಿಂದ ಪದವಿ ಹಾಗೂ ಸ್ನಾತಕೋತ್ತರ ತರಗತಿಗಳು ಪೂರ್ಣ ಪ್ರಮಾಣದಲ್ಲಿ ಆರಂಭ

ಬೆಂಗಳೂರು: ರಾಜ್ಯಾದ್ಯಂತ ಶುಕ್ರವಾರದಿಂದ ಎಲ್ಲಾ , , ಪಾಲಿಟೆಕ್ನಿಕ್‌ ಹಾಗೂ ಎಂಜಿನಿಯರಿಂಗ್‌ ಕಾಲೇಜುಗಳು ಪೂರ್ಣ ಪ್ರಮಾಣದಲ್ಲಿ ತೆರೆದುಕೊಳ್ಳಲಿವೆ. 2020ರ ನ.17ರಿಂದಲೇ ಅಂತಿಮ ವರ್ಷದ ಪದವಿ, ಸ್ನಾತಕೋತ್ತರ, ಎಂಜಿನಿಯರಿಂಗ್‌ ಮತ್ತು ಪಾಲಿಟೆಕ್ನಿಕ್‌ ತರಗತಿಗಳು ನಡೆಯುತ್ತಿವೆ. ಇದುವರೆಗೆ ಅಂತಿಮ ಪದವಿಗೆ ಸೀಮಿತವಾಗಿದ್ದ ಭೌತಿಕ ತರಗತಿಗಳು ಶುಕ್ರವಾರದಿಂದ ಉಳಿದ ತರಗತಿಗಳಿಗೂ ವಿಸ್ತರಣೆಯಾಗಲಿದ್ದು. ಆನ್‌ಲೈನ್‌ ತರಗತಿಗಳೂ ಮುಂದುವರಿಯಲಿವೆ. ಈಗ ಪ್ರಥಮ ಸೆಮಿಸ್ಟರ್‌ನಿಂದ ಆರಂಭಗೊಳ್ಳಲಿರುವ ತರಗತಿಗಳಿಗಾಗಿ ನಿಯಮಾವಳಿಯಂತೆ ಕಾಲೇಜಿನ ಕಟ್ಟಡ, ಮುಖ್ಯದ್ವಾರ, ಗ್ರಂಥಾಲಯ, ಶೌಚಾಲಯ, ಕೊಠಡಿ, ಪೀಠೋಪಕರಣ ಹಾಗೂ ಅಧ್ಯಯನ ಪುಸ್ತಕಗಳನ್ನು ಸ್ಯಾನಿಟೈಸ್‌ ಮಾಡಿಸಿ, ವಿದ್ಯಾರ್ಥಿಗಳ ಸ್ವಾಗತಕ್ಕೆ ಶಿಕ್ಷಣ ಸಂಸ್ಥೆಗಳು ಸಜ್ಜಾಗಿವೆ. ಕಡ್ಡಾಯ ನಿಯಮಾವಳಿ
  • ಮಾಸ್ಕ್‌, ಸಾಮಾಜಿಕ ಅಂತರ, ಥರ್ಮಲ್‌ ಸ್ಕ್ಯಾ‌ನಿಂಗ್‌ ಕಡ್ಡಾಯ
  • ಕೊಠಡಿಯ ಪೂರ್ಣ ಸಾಮರ್ಥ್ಯದ ಅರ್ಧದಷ್ಟಕ್ಕೆ ಅನುಮತಿ
  • ಆನ್‌ಲೈನ್‌-ಆಫ್‌ಲೈನ್‌ ಎರಡೂ ಇದೆ. ಒಂದಕ್ಕೆ ಹಾಜರಿ ಕಡ್ಡಾಯ
  • ಯಾರಿಗೂ ಕೋವಿಡ್‌ ಟೆಸ್ಟ್‌ ಕಡ್ಡಾಯವಲ್ಲ. ಲಕ್ಷಣ ಇರುವವರು ಮಾತ್ರ ಕಡ್ಡಾಯ ಪರೀಕ್ಷೆ ಮಾಡಿಸಿಕೊಳ್ಳಬೇಕು.
  • ಪರೀಕ್ಷೆ ಸಂಬಂಧ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಗಳೊಂದಿಗೆ ಕಾಲೇಜುಗಳು ಮ್ಯಾಪಿಂಗ್‌ ಮಾಡಿಕೊಳ್ಳಬೇಕು.
ಟೈಮಿಂಗ್‌
  • ಬೆಳಗ್ಗೆ 9ರಿಂದ ಸಂಜೆ 3 ಇಲ್ಲವೇ 10ರಿಂದ 4ರವರೆಗೆ ತರಗತಿ ನಡೆಯಲಿದೆ.
  • ವಿದ್ಯಾರ್ಥಿಗಳು ಕಡ್ಡಾಯವಾಗಿ ಮನೆಯಿಂದಲೇ ಊಟ ಮತ್ತು ಕುಡಿಯುವ ನೀರು ತರಬೇಕು.
ಕೆಲವು ವಿವಿಗಳು ಫೆಬ್ರವರಿ 2ನೇ ವಾರದಿಂದ ಸೆಮಿಸ್ಟರ್‌ ಪರೀಕ್ಷೆಗೆ ಸಿದ್ಧತೆ ಕೈಗೊಂಡಿವೆ. ಈ ಸಂಬಂಧ ಉನ್ನತ ಶಿಕ್ಷಣ ಪರಿಷತ್‌ ವೇಳಾಪಟ್ಟಿ ತರಿಸಿಕೊಂಡಿದೆ. ಸಮಗ್ರವಾಗಿ ಚರ್ಚಿಸಿ, ಪರೀಕ್ಷೆ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಿದೆ. ಬಹುಶಃ ಮಾರ್ಚ್ ಮತ್ತು ಏಪ್ರಿಲ್‌ ತಿಂಗಳಲ್ಲಿ ಪದವಿ ಪರೀಕ್ಷೆಗಳು ನಡೆಯಬಹುದು. ಪಿ.ಪ್ರದೀಪ್‌ ಆಯುಕ್ತ, ಕಾಲೇಜು ಶಿಕ್ಷಣ ಇಲಾಖೆ


from India & World News in Kannada | VK Polls https://ift.tt/35JDhkB

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...