ಬೆಂಗಳೂರು: ಶಬರಿಮಲೆ ಯಾತ್ರೆ ಕೈಗೊಳ್ಳುವ ಕೋವಿಡ್ ವರದಿ ಬಂದ 24 ಗಂಟೆಯೊಳಗೆ ಕೇರಳದ ನೀಲಕ್ಕಲ್ ಪ್ರವೇಶ ಮಾಡಬೇಕು. ಇಲ್ಲವಾದರೆ 625 ರೂ. ನೀಡಿ ಮತ್ತೆ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ಅನೇಕ ರಾಜ್ಯಗಳಿಂದ ಭಕ್ತರು ಕೋವಿಡ್ ಪರೀಕ್ಷೆ ಮಾಡಿಸಿದ ನಂತರ ಪೂಜೆಯ ವಿಧಿವಿಧಾನ ಪೂರ್ಣಗೊಳಿಸಿ, ಕೇರಳದ ನಿಗದಿತ ಪ್ರದೇಶಕ್ಕೆ ಹೋಗುಷ್ಟರಲ್ಲಿ 24 ಗಂಟೆಗಳು ಮೀರಿರುತ್ತದೆ. ಹಾಗಾಗಿ ಮತ್ತೊಮ್ಮೆ ಪರೀಕ್ಷೆ ಅನಿವಾರ್ಯವಾಗಿದೆ. ಕೇವಲ 10 ನಿಮಿಷದಲ್ಲಿ ಬರುವ ವರದಿಯೊಂದಿಗೆ ಹೋದರೆ ಮಾತ್ರ ಪೊಲೀಸರು ಅಯ್ಯಪ್ಪನ ಸನ್ನಿಧಿಗೆ ಹೋಗಲು ಅವಕಾಶ ನೀಡುತ್ತಿದ್ದಾರೆ. ವೈದ್ಯರು ಒಪ್ಪಿದರು ಪೊಲೀಸರು ಬಿಡುವುದಿಲ್ಲ!ಕೇರಳ ಬಿಟ್ಟು ಬೇರೆ ರಾಜ್ಯಗಳಲ್ಲಿ ಮಾಡಿಸಿದ ಕೋವಿಡ್ ಟೆಸ್ಟ್ ವರದಿಯನ್ನು ವೈದ್ಯರು ಒಪ್ಪಿದರೂ, ಪೊಲೀಸರು ಮಾತ್ರ ಕೇರಳದಲ್ಲಿ ಮಾಡಿಸಿದ ಕೋವಿಡ್ ಟೆಸ್ಟ್ ವರದಿ ಇದ್ದರೆ ಮಾತ್ರ ಶಬರಿಮಲೆ ಯಾತ್ರೆಗೆ ಅವಕಾಶ ನೀಡುತ್ತಾರೆ. ಇದರಿಂದ ಅಯ್ಯಪ್ಪ ಭಕ್ತರಿಗೆ ಕಿರಿಕಿರಿ ಉಂಟಾಗಿದ್ದು ಕೇರಳ ಸರಕಾರದ ನಿರ್ಧಾರವನ್ನು ಭಕ್ತರು ಖಂಡಿಸಿದ್ದಾರೆ. ಸಹಾಯವಾಣಿಕೇರಳ ರಾಜ್ಯದ ಶಬರಿಮಲೈನಲ್ಲಿ 2020-21ನೇ ಸಾಲಿನ ಮಂಡಲ-ಮಕರವಿಳಕ್ಕು ಕಾರ್ಯಕ್ರಮಕ್ಕೆ ತೆರಳುವ ಕರ್ನಾಟಕ ಭಕ್ತರ ಆರೋಗ್ಯ ರಕ್ಷಣೆಗಾಗಿ ಮಾಹಿತಿ ಒದಗಿಸಲು ಧಾರ್ಮಿಕ ದತ್ತಿ ಇಲಾಖೆಯು ಆಯುಕ್ತರ ಕಚೇರಿಯಲ್ಲಿ ಸಹಾಯವಾಣಿ ತೆರೆದಿದೆ. ಯಾವುದೇ ತುರ್ತು ಸಂದರ್ಭಗಳಲ್ಲಿ ಸಹಾಯವಾಣಿಯ ಟೋಲ್ ಫ್ರೀ ಸಂಖ್ಯೆ : 080- 26709689 ಗೆ ಕರೆ ಮಾಡಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
from India & World News in Kannada | VK Polls https://ift.tt/3l3xdYP