from India & World News in Kannada | VK Polls https://ift.tt/2XgTc5C
ನವದೆಹಲಿ: ಕೊರೊನಾ ವೈರಸ್ ಜುಲೈ ತಿಂಗಳಲ್ಲಿ ಲಂಗು ಲಗಾಮು ಇಲ್ಲದೆ ಚಲಿಸಿರುವುದು ಕೇಂದ್ರ ಆರೋಗ್ಯ ಇಲಾಖೆಯ ವರದಿಗಳಿಂದ ಸ್ಪಷ್ಟವಾಗಿದೆ. ಹೌದು ಜುಲೈ ತಿಂಗಳ ಕೊನೆ ದಿನವಾದ ಶುಕ್ರವಾರ ಮತ್ತೆ 57,000 ಹೊಸ ಕೇಸ್‌ಗಳು ದಾಖಲಾಗಿದೆ. ಈ ಮೂಲಕ ನಾಲ್ಕನೇ ಬಾರಿಗೆ ಜುಲೈ ತಿಂಗಳಲ್ಲಿ ಕೊರೊನಾ ಐವತ್ತು ಸಾವಿರದ ಗಡಿ ದಾಟಿದಂತಾಗಿದೆ. ಆದರೆ ಇಲ್ಲಿನ ಪ್ರಮುಖ ವಿಚಾರ, ದೇಶದಲ್ಲಿ ಅತೀ ಹೆಚ್ಚು ಕೊರೊನಾ ಸೋಂಕು ಜುಲೈನಲ್ಲಿ ದೃಢಪಟ್ಟಿದೆ ಎನ್ನುವುದು. ಹೌದು, ಜುಲೈನಲ್ಲಿ ಬರೋಬ್ಬರಿ 11.1 ಲಕ್ಷ ಕೊರೊನಾ ಪ್ರಕರಣಗಳು ದಾಖಲಾಗಿದೆ. ಅಲ್ಲದೇ ಈ ತಿಂಗಳಲ್ಲಿ 19,122 ಸಾವುಗಳು ಸಂಭವಿಸಿದೆ ಎಂದು ತಿಳಿದುಬಂದಿದೆ. ಇನ್ನು ಇವುಗಳ ಇನ್ನಷ್ಟು ಅಧ್ಯಯನ ನಡೆಸಿದಾಗ ನಿಜಕ್ಕೂ ಬೆಚ್ಚಿಬೀಳಿಸುವಂತಹ ವಿಚಾರ ಬಹಿರಂಗವಾಗಿದೆ.ಜೂನ್ ತಿಂಗಳಿಗೆ ಹೋಲಿಸಿದರೆ ಜುಲೈನಲ್ಲಿ 2.8 ಪಟ್ಟು ಹೆಚ್ಚಾಗಿ ಕೊರೊನಾ ಸೋಂಕು ಪತ್ತೆಯಾಗಿದೆ. ಅಲ್ಲದೇ ಜುಲೈನಲ್ಲಿ ಸಂಭವಿಸಿದ ಸಾವುಗಳು ಜೂನ್‌ನಲ್ಲಿ ದಾಖಲಾದ ಸಾವುಗಳಿಗಿಂತ ಬರೋಬ್ಬರಿ 1.6 ಪಟ್ಟು ಹೆಚ್ಚಾಗಿದೆ ಎಂದು ಆರೋಗ್ಯ ಇಲಾಖೆಯ ದತ್ತಾಂಶಗಳು ಹೇಳುತ್ತಿವೆ. ಇನ್ನು ಆತಂಕದ ಸಂಗತಿ ಎಂದರೆ ಜುಲೈನ ದ್ವಿತೀಯಾರ್ಧದಲ್ಲಿ ಸುಮಾರು 7.3 ಲಕ್ಷ ಹೊಸ ಸೋಂಕುಗಳು ಪತ್ತೆಯಾಗಿದೆ ಅಂದರೆ ಮೊದಲಾರ್ಧದಲ್ಲಿ ವರದಿಯಾದ ಎರಡು ಪಟ್ಟು ಕೊರೊನಾ ಸೋಂಕು ಇಲ್ಲಿ ಹೆಚ್ಚಾಗಿದೆ. ಅಲ್ಲದೇ ದ್ವಿತೀಯಾರ್ಧದಲ್ಲಿ ಬರೋಬ್ಬರಿ 11,600 ಮಂದಿ ಸಾವನಪ್ಪಿದ್ದಾರೆ. ಇದು ಮುಂದಿನ ದಿನಗಳಲ್ಲಿ ಇನ್ನಷ್ಟು ಪಟ್ಟು ಹೆಚ್ಚಾಗುವುದನ್ನ ಸೂಚಿಸುತ್ತಿದೆ ಎನ್ನುತ್ತಿದ್ದಾರೆ ವೈದ್ಯಕೀಯ ಪರಿಣಿತರು.
ಬಕ್ರೀದ್ ಹಬ್ಬ ಸಹೋದರತ್ವ, ಸಹಾನುಭೂತಿ ಮನೋಭಾವವನ್ನು ಹೆಚ್ಚಿಸಲಿ : ಪ್ರಧಾನಿ ಮೋದಿ ಶುಭಾಶಯ
ಇನ್ನು ದೇಶದಲ್ಲಿ ಒಟ್ಟು ನಾಲ್ಕು ಬಾರಿ ಕೊರೊನಾ ಸೋಂಕಿತರ ಸಂಖ್ಯೆ ಐವತ್ತು ಸಾವಿರದ ಗಡಿ ದಾಟಿರುವುದು ಕೇಂದ್ರ ಆರೋಗ್ಯ ಇಲಾಖೆಯ ಅಂಕಿ ಅಂಶಗಳಲ್ಲಿ ತಿಳಿದುಬಂದಿದೆ. ಶುಕ್ರವಾರ ಮತ್ತೆ 57,151 ಹೊಸ ಕೇಸ್‌ಗಳು ದೃಢಪಟ್ಟಿದ್ದು ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಒಟ್ಟು 16,94,918 ಆಗಿದೆ. ಶುಕ್ರವಾರ 766 ಜನರು ಬಲಿಯಾಗಿದ್ದಾರೆ. ಕಳೆದ ನಾಲ್ಕು ದಿನ ಕೊರೊನಾಗೆ ಬಲಿಯಾಗುತ್ತಿರುವವರ ಸಂಖ್ಯೆ ಸತತ 750ರ ಗಡಿ ದಾಟುತ್ತಿದೆ.
ಸತಾಯಿಸುವ ಖಾಸಗಿ ಆಸ್ಪತ್ರೆಗಳಿಗೆ ಸರಕಾರದ ಪ್ರಹಾರ: ಪರವಾನಗಿ ರದ್ದು, ಹಣ ಮರಳಿಸಲು ಕ್ರಮ
ಇನ್ನು ಈ ರೀತಿ ಕೇಸ್‌ಗಳು ಜಾಸ್ತಿಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸುವ ಅಗತ್ಯವಿಲ್ಲ. ಯಾಕೆಂದರೆ ದೇಶದಲ್ಲಿ ಉತ್ತಮ ಸಂಖ್ಯೆಯ ಕೊರೊನಾ ಪರೀಕ್ಷೆ ನಡೆಯುತ್ತಿರುವುದರಿಂದ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ ಎಂದು ವೈದ್ಯಕೀಯ ಪರಿಣಿತರು ಅಭಿಪ್ರಾಯಪಟ್ಟಿದ್ದಾರೆ. ದಿನಕ್ಕೆ ನಾಲ್ಕು ಲಕ್ಷದಿಂದ ಐದು ಲಕ್ಷ ಸ್ಯಾಂಪಲ್ಸ್‌ಗಳನ್ನ ಕಲೆಕ್ಟ್ ಮಾಡಿ ಪರೀಕ್ಷೆ ನಡೆಸಲಾಗುತ್ತಿದೆ. ಆದರೆ ಕೊರೊನಾ ಸೋಂಕು ಹರಡದಂತೆ ನಿಯಂತ್ರಣ ಮಾಡುವುದು ಮುಖ್ಯ ಇಲ್ಲದಿದ್ದರೆ ಹೆಚ್ಚು ಜನ ಸಂಖ್ಯೆ ಇರುವ ಭಾರತದಲ್ಲಿ ಮುಂದಿನ ದಿನಗಳಲ್ಲಿ ಸಮಸ್ಯೆಯಾಗಬುಹುದು ಎಂದು ಕೂಡ ವೈದ್ಯಕೀಯ ಪರಿಣಿತರು ಅಭಿಪ್ರಾಯ ಪಟ್ಟಿದ್ದಾರೆ. ಇನ್ನೊಂದೆಡೆ ಗುಣಮುಖರ ಸಂಖ್ಯೆ ಭಾರತದಲ್ಲಿ ಹತ್ತು ಲಕ್ಷ ದಾಟಿದೆ.
ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಸರಾಸರಿ ಮಳೆ ಸಾಧ್ಯತೆ: ಹವಾಮಾನ ಇಲಾಖೆ
ಲಡಾಖ್ ಗಡಿಯ ಮುಂಚೂಣಿ ನೆಲೆಗಳಿಂದ ಸೈನ್ಯವನ್ನು ಹಿಂಪಡೆದಿರುವುದಾಗಿ ಹೇಳಿರುವ ಚೀನಾದ ಹೇಳಿಕೆಯನ್ನು ಭಾರತೀಯ ಸೇನೆ ತಿರಸ್ಕರಿಸಿದೆ. ಗಡಿಯಲ್ಲಿ ಇನ್ನೂ ಚೀನಿ ಸೈನಿಕರು ಭಾರೀ ಪ್ರಮಾಣದಲ್ಲಿ ಬೀಡು ಬಿಟ್ಟಿದ್ದಾರೆ ಎಂದು ಭಾರತ ಪ್ರತಿಪಾದಿಸಿದೆ. ಸೈನ್ಯ ಹಿಂಪಡೆಯುವಿಕೆ ವಿಚಾರದಲ್ಲಿ ಚೀನಾ ಪಾರದರ್ಶಕವಾಗಿ ನಡೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿರುವ ಭಾರತ, ಗಡಿಯ ಮುಂಚೂಣಿ ನೆಲೆಗಳಲ್ಲಿ ಇನ್ನೂ ಚೀನಾ ಸೈನಿಕರು ಇರುವುದು ಸ್ಪಷ್ಟ ಎಂದು ಹೇಳಿದೆ. ಇದೇ ಕಾರಣಕ್ಕೆ ಲಡಾಖ್ ಗಡಿಗೆ ಮತ್ತೆ 35,000 ಸೈನಿಕರನ್ನು ರವಾನೆ ಮಾಡಿರುವುದಾಗಿ ಭಾರತೀಯ ಸೇನೆ ಸ್ಪಷ್ಟಪಡಿಸಿದೆ. ಗಡಿಯ ಫಿಂಗರ್ ಪಾಯಿಂಟ್‌ಗಳಿಂದ ಸಂಪೂರ್ಣವಾಗಿ ಸೈನ್ಯವನ್ನು ಹಿಂಪಡೆದಿರುವುದಾಗಿ ನಿನ್ನೆ(ಗುರುವಾರ) ಚೀನಾ ಪ್ರತಿಪಾದಿಸಿತ್ತು. ಆದರೆ ಈ ಹೇಳಿಕೆಯನ್ನು ಭಾರತೀಯ ಸೇನೆ ತಿರಸ್ಕರಿಸಿದೆ. ಹಾಗಾರೆ ಭಾರತೀಯ ವಿದೇಶಾಂಗ ಇಲಾಖೆಯ ವಕ್ತಾರರ ಹೇಳಿಕೆಯತ್ತ ಗಮನ ಹರಿಸುವುದಾದರೆ...ಲಡಾಖ್ ಗಡಿಯ ಬಹುತೇಕ ನೆಲೆಗಳಿಂದ ಸೈನ್ಯವನ್ನು ಹಿಂಪಡೆದಿರುವುದಾಗಿ ಚೀನಾ ಘೋಷಿಸಿದೆ. ಭಾರತೀಯ ಸೇನೆ ಜೊತೆ ನಡೆದ ಮಾತುಕತೆಯಲ್ಲಿ ನಿರ್ಣಯಿಸಿದಂತೆ ಲಡಾಖ್ ಗಡಿಯಲ್ಲಿರುವ ಮುಂಚೂಣಿ ಸೇನಾ ನೆಲೆಗಳಿಂದ ಸೈನಿಕರನ್ನು ಹಿಂಪಡೆಯಲಾಗಿದೆ ಎಂದು ಬೀಜಿಂಗ್ ತನ್ನ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.
ಲಡಾಖ್ ಗಡಿಯಿಂದ ಬಹುತೇಕ ಹಿಂದೆ ಸರಿದಿದ್ದೇವೆ: ಚೀನಾ ಮಾತು ನಂಬೋದಾ?
ಈ ಕುರಿತು ಮಾತನಾಡಿದ್ದಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್‌ಬಿನ್, ಗಡಿಯಲ್ಲಿನ ಉದ್ವಿಗ್ನತೆ ಕಡಿಮೆ ಮಾಡಲು ಉಭಯ ಸೇನೆಗಳು ಪರಸ್ಪರ ಸಹಕರಿಸುತ್ತಿವೆ ಎಂದು ಹೇಳಿದ್ದರು.
ಪೂರ್ವ ಲಡಾಕ್‌ನ ಹೆಚ್ಚಿನ ಸ್ಥಳಗಳಲ್ಲಿ ಸೈನ್ಯವನ್ನು ಹಿಂಪಡೆಯಲಾಗಿದೆ ಎಂಬ ಚೀನಾದ ಹೇಳಿಕೆಯನ್ನು ಭಾರತ ತಿರಸ್ಕರಿಸಿದೆ. ಈ ಪ್ರಕ್ರಿಯೆಯು ಇನ್ನೂ ಪೂರ್ಣಗೊಂಡಿಲ್ಲ ಎಂದು ಭಾರತ ಸ್ಪಷ್ಟಪಡಿಸಿದೆ. ಈ ಕುರಿತು ಮಾತನಾಡಿರುವ ಭಾರತದ ವಿದೇಶಾಂಗ ಇಲಾಖೆ ವಕ್ತಾರ ಅನುರಾಗ್ ಶ್ರೀವಾತ್ಸವ್, ಉದ್ದೇಶ ಸಾಧನೆಯಲ್ಲಿ ಸ್ವಲ್ಪ ಪ್ರಗತಿಯನ್ನು ಮಾತ್ರ ಸಾಧಿಸಲಾಗಿದ್ದು, ಸಂಪೂರ್ಣ ಗುರಿ ಸಾಧನೆ ಇನ್ನೂ ದೂರ ಇದೆ ಎಂದು ಹೇಳಿದ್ದಾರೆ.
ಲಡಾಖ್ ಗಡಿಯಲ್ಲಿ ಇನ್ನೂ 40 ಸಾವಿರ ಚೀನಿ ಸೈನಿಕರು: ಸೈನ್ಯ ಹಿಂಪಡೆಯುವಿಕೆ ಕೇವಲ ನಾಟಕವೇ?
ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಯ ನಿರ್ವಹಣೆ ದ್ವಿಪಕ್ಷೀಯ ಸಂಬಂಧಕ್ಕೆ ಆಧಾರವಾಗಿದೆ ಎಂದು ಅನುರಾಗ್ ಶ್ರೀವಾತ್ಸವ್ ಮಾರ್ಮಿಕವಗಿ ಹೇಳಿದ್ದಾರೆ.
ಲಡಾಖ್ ಗಡಿಗೆ ಸಂಬಂಧಿಸಿದಂತೆ ಚೀನಾದ ಹೇಳಿಕೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿರುವ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾತ್ಸವ್, ಸಂಪೂರ್ಣ ನಿಷ್ಕ್ರಿಯತೆಗೆ ಚೀನಾ ನಮ್ಮೊಂದಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಲಿದೆ ಎಂಬ ಭರವಸೆ ಇರುವುದಾಗಿ ಹೇಳಿದ್ದಾರೆ.
ಚೀನಾಗೆ ತಿರುಗೇಟು ನೀಡಲು ಭಾರತ ಸಜ್ಜು..! ಗಡಿಯಲ್ಲಿ 35 ಸಾವಿರ ಹೆಚ್ಚುವರಿ ಸೈನಿಕರ ನಿಯೋಜನೆಗೆ ಸಿದ್ಧತೆ
ಗಡಿ ತಕರಾರು ಹಾಗೂ ಉದ್ವಿಗ್ನತೆ ಸಂಪೂರ್ಣವಗಿ ಕಡಿಮೆಯಾಗಬೇಕಾದರೆ ಚೀನಾ ಈ ನಿಟ್ಟಿನಲ್ಲಿ ಪಾರ್ದರ್ಶಕವಾಗಿ ವರ್ತಿಸಬೇಕು ಎಂದು ಅನುರಾಗ್ ಶ್ರೀವಾತ್ಸವ್ ಹೇಳಿರುವುದು ಗಮನ ಸೆಳೆದಿದೆ.
ಕಾಲು ಕೆದರಿಕೊಂಡು ಲಡಾಖ್ ಗಡಿಯಲ್ಲಿ ತಂಟೆಗೆ ಬಮದ ಚೀನಾಗೆ, ಭಾರತ ಸೂಕ್ತ ರಾಜತಾಂತ್ರಿಕ, ಸಾಮರಿಕ ಹಾಗೂ ವಾಣಿಜ್ಯ ಹೊಡೆತಗಳನ್ನು ನೀಡಿದೆ. ಇದಿರಂದ ತೀವ್ರ ಮುಖಭಂಗಕ್ಕೀಡಾಗಿರುವ ಚೀನಾ, ಗಡಿಯಿಂದ ಸೈನ್ಯ ಹಿಂಪಡೆಯುವ ನಾಟಕವಾಡುತ್ತಿದೆ.
ರಫೇಲ್ ಪಾಕ್ ಮತ್ತು ಚೀನಾಗಿಂತಲೂ ಭಾರತವನ್ನು ಹೇಗೆ ಪ್ರಬಲವಾಗಿಸುತ್ತದೆ?: ಇಲ್ಲಿದೆ ರೋಚಕ ಮಾಹಿತಿ!
ಆದರೆ ಸಂಪೂರ್ಣವಾಗಿ ಸೈನ್ಯವನ್ನು ಹಿಂಪಡೆದರೆ ಜಾಗತಿಕವಾಗಿ ಮುಜುಗರಕ್ಕೀಡಾಗಬೇಕು ಎಂಬ ಕಾರಣಕ್ಕೆ ಚೀನಾ ಕೇವಲ ಸೈನ್ಯ ಹಿಂಪಡೆಯುವ ನಾಟಕವಾಡುತ್ತಿದೆ. ಗಡಿಯಿಂದ ಕಾಲ್ಕಿತ್ತರೆ ಭಾರತದ ಜಯವನ್ನು ಇಡೀ ವಿಶ್ವ ಸಂಭ್ರಮಿಸುತ್ತದೆ ಎಂಬುದು ಚೀನಾದ ಕಣ್ಣೀರಿಗೆ ಕಾರಣ.
ರಾಜ್ಯ ಬಿಜೆಪಿಯಲ್ಲಿ ನಾಯಕಯತ್ವ ಬದಲಾವಣೆ ಚರ್ಚೆ ತೀವ್ರಗೊಳ್ಳುತ್ತಿದೆ. ಬಿಎಸ್‌ವೈ ಸರ್ಕಾರಕ್ಕೆ ಒಂದು ವರ್ಷ ಆಗುತ್ತಿದ್ದಂತೆ ಸಿಎಂ ಬದಲಾವಣೆಯ ಮಾತು ಮುನ್ನೆಲೆಗೆ ಬಂದಿದೆ. ಪಕ್ಷದಲ್ಲಿ ಆಂತರಿಕವಾಗಿ ಈ ವಿಚಾರ ಭಾರೀ ಸದ್ದು ಮಾಡುತ್ತಿದೆ. ಸಮ್ಮಿಶ್ರ ಸರ್ಕಾರ ಪತನಗೊಂಡು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದು ಒಂದು ವರ್ಷಗಳ ಬಳಿಕ ನಾಯಕತ್ವ ಬದಲಾವಣೆ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿತ್ತು. ಬಿ.ಎಸ್ ಯಡಿಯೂರಪ್ಪ ಅಧಿಕಾರ ಹಸ್ತಾಂತರದ ಮಾತುಕತೆಯೂ ನಡೆದಿತ್ತು ಎನ್ನಲಾಗಿದೆ. ಇದರ ಪರಿಣಾಮವಾಗಿಯೇ ಈ ಚರ್ಚೆಗಳು ಶುರುವಾಗಿದೆ. ಆದರೆ ಬಿಎಸ್‌ವೈ ಬದಲಾವಣೆಗೆ ಪಕ್ಷದಲ್ಲಿ ಒಂದು ಬಣದ ವಿರೋಧವಿದೆ. ಹಾಗಾದರೆ ಬಿಎಸ್‌ವೈ ನಾಯಕತ್ವ ಬದಲಾವಣೆ ಆಗಬೇಕು ಎಂಬ ಚರ್ಚೆ ಮುನ್ನೆಲೆಗೆ ಬರಲು ಕಾರಣವೇನು ಹಾಗೂ ಇದರ ಹಿಂದೆ ಇರುವ ವ್ಯಕ್ತಿ ಶಕ್ತಿಗಳು ಯಾವುದು? ಈ ಕುರಿತಾದ ಒಂದು ವರದಿ ಇಲ್ಲಿದೆ.ಸಿಎಂ ಬಿಎಸ್ ಯಡಿಯೂರಪ್ಪ ಬಿಜೆಪಿ ಪಕ್ಷವನ್ನು ರಾಜ್ಯದಲ್ಲಿ ಕಟ್ಟಿ ಬೆಳೆಸಿದವರು. ಕರ್ನಾಟಕದಲ್ಲಿ ಕಮಲ ಪಕ್ಷಕ್ಕೆ ಪ್ರಬಲ ನಾಯಕತ್ವ ನೀಡಿ ಅಧಿಕಾರಕ್ಕೆ ತಂದರೂ ಇದೀಗ ಅವರ ನಾಯಕತ್ವದ ಬಗ್ಗೆಯೇ ಅಪ ವ್ಯಾಖ್ಯಾನಗಳು ಕೇಳಿಬರುತ್ತಿವೆ. ಬಿಎಸ್‌ವೈ ವಯಸ್ಸು ಹಾಗೂ ಕೋವಿಡ್ ನಿರ್ವಹಣೆಯನ್ನು ಮುಂದಿಟ್ಟುಕೊಂಡು ನಾಯಕತ್ವ ಬದಲಾವಣೆ ಅಗತ್ಯ ಎಂಬ ವಾದಗಳು ಪಕ್ಷದ ಆಂತರಿಕ ವಲಯದಲ್ಲಿವೆ. ಸದ್ಯ ರಾಜ್ಯ ಸರ್ಕಾರದ ವೈಫಲ್ಯತೆ, ಆಪರೇಷನ್ ಕಮಲ, ಕೋವಿಡ್ ನಿರ್ವಹಣೆ ಜನರಲ್ಲಿ ಸರ್ಕಾರದ ಬಗ್ಗೆ ಅಭಿಪ್ರಾಯ ಬದಲಾವಣೆಗೆ ಕಾರಣವಾಗಿದೆ. ಇನ್ನುಳಿದ ಅವಧಿಯಲ್ಲೂ ಸರ್ಕಾರದ ತಪ್ಪುಗಳನ್ನು ಮುಂದಿಟ್ಟುಕೊಂಡು ಜನರಲ್ಲಿ ಅಭಿಪ್ರಾಯ ರೂಪಿಸಲು ವಿರೋಧ ಪಕ್ಷಗಳೂ ಸಜ್ಜಾಗಿವೆ. ಇದರ ಪರಿಣಾಮ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ದುಬಾರಿಯಾಗಿ ಪರಿಣಮಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ನಾಯಕತ್ವ ಬದಲಾವಣೆ ಅಗತ್ಯ ಎಂಬ ಮಾತುಗಳು ಕೇಳಿಬರುತ್ತಿವೆ.
ವಯಸ್ಸು, ಕೋವಿಡ್ ನಿರ್ವಹಣೆ ಕಾರಣ ನೀಡಿ ಬಿಎಸ್‌ವೈಯನ್ನು ಪಟ್ಟದಿಂದ ಇಳಿಸುವುದು ಕೇವಲ ಬಹಿರಂಗವಾಗಿ ವ್ಯಕ್ತವಾಗುತ್ತಿರುವ ಕಾರಣವಷ್ಟೇ. ಆಂತರಿಕವಾಗಿ ಇದರ ಹಿಂದೆ ಬೇರೆ ಉದ್ದೇಶಗಳು ಇವೆ ಎಂಬ ಮಾತು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ. ರಾಜ್ಯದಲ್ಲಿ ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ ನಿಜ. ಆದರೆ ದೆಹಲಿ, ಕೇರಳ ಹೊರತಾಗಿ ಬಹುತೇಕ ರಾಜ್ಯಗಳಲ್ಲಿ ಪರಿಸ್ಥಿತಿ ಹೀಗೆಯೇ ಇದೆ. ದೇಶದಲ್ಲೇ ಕೋವಿಡ್ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗುತ್ತಿದೆ. ಇದು ಕೇವಲ ನೆಪವಷ್ಟೇ ಎಂಬುವುದು ಬಿಎಸ್‌ವೈ ಆಪ್ತರ ವಾದ. ಬದಲಾಗಿ ಬಿಎಸ್‌ವೈ ವಿರುದ್ಧ ಅಸಂತೋಷಗೊಂಡಿರುವ ಬಣ ಈ ಚರ್ಚೆಯನ್ನು ಹುಟ್ಟುಹಾಕಿದೆ ಎಂಬ ಮಾತು ಬಿಎಸ್‌ವೈ ಬಣದಿಂದ ಕೇಳಿಬರುತ್ತಿದೆ. ದೆಹಲಿಯಲ್ಲಿ ಕೂತಿರುವ ಕರ್ನಾಟಕ ಬಿಜೆಪಿಯ ಮತ್ತೊಂದು ಶಕ್ತಿ ಕೇಂದ್ರ ಈ ಎಲ್ಲಾ ಬೆಳವಣಿಗೆಯ ಹಿಂದೆ ಇದೆ ಎಂದು ಹೇಳುತ್ತಿವೆ ಬಿಎಸ್‌ವೈ ಆಪ್ತ ಮೂಲಗಳು.
ಬಿಎಸ್ ಯಡಿಯೂರಪ್ಪ ಓರ್ವ ವರ್ಚಸ್ವಿ ನಾಯಕ. ರಾಜ್ಯದಲ್ಲಿ ಕಮಲ ಪಕ್ಷವನ್ನು ಕಟ್ಟು ಬೆಳೆಸುವುದರಲ್ಲಿ ಇವರ ಪಾತ್ರ ಮಹತ್ವದ್ದಾಗಿದೆ. ಇದೀಗ ಇತರ ಪಕ್ಷಗಳಿಂದ ವಲಸೆ ಬಂದವರು ಬಿಎಸ್‌ವೈ ಜೊತೆಗೆ ಇರುವುದರಿಂದ ಅವರ ಶಕ್ತಿ ಮತ್ತಷ್ಟು ಹೆಚ್ಚಾಗಿದೆ. ಅಲ್ಲದೆ ಅವರ ಹಿಂದೆ ಲಿಂಗಾಯತ ಸಮುದಾಯ ಇರುವುದರಿಂದ ಪಕ್ಷದ ವರಿಷ್ಠರು ಯಾವುದೇ ನಿರ್ಧಾರ ಕೈಗೊಳ್ಳುವಾಗ ಯೋಚನೆ ಮಾಡಲೇ ಬೇಕಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಬಿಎಸ್‌ವೈ ನಾಯಕತ್ವ ಬದಲಾವಣೆ ಮಾಡಿದರೆ ಅದು ಬೇರೆಯದ್ದೇ ಸಂದೇಶವನ್ನು ನೀಡಲಿದೆ. ಇದು ಕಮಲದ ಪಾಲಿಗೆ ದುಬಾರಿಯಾಗಿ ಪರಿಣಮಿಸುವ ಸಾಧ್ಯತೆಯೂ ಇದೆ. ಈ ನಿಟ್ಟಿನಲ್ಲಿ ಬಿಎಸ್‌ವೈ ನಾಯಕತ್ವ ಬದಲಾವಣೆ ಸುಲಭದ ಮಾತಲ್ಲ ಎಂಬ ಅಭಿಪ್ರಾಯಗಳು ಬಲವಾಗಿವೆ.
ಒಂದು ವೇಳೆ ಬಿಎಸ್ ಯಡಿಯೂರಪ್ಪ ನಾಯಕತ್ವ ಬದಲಾದರೆ ಪರ್ಯಾಯ ಯಾರು ಎಂಬ ಪ್ರಶ್ನೆಯೂ ಉದ್ಭವಾಗುತ್ತದೆ. ಲಕ್ಷ್ಮಣ ಸವದಿ ಹೆಸರು ಕೇಳಿಬರುತ್ತಿದ್ದರೂ ಪಕ್ಷದ ಶಾಸಕರಲ್ಲಿ ಅವರಿಗೆ ಹೆಚ್ಚಿನ ಬೆಂಬಲವಿಲ್ಲ. ಅದರಲ್ಲೂ ವಲಸೆ ಬಂದವರಲ್ಲಿ ಕೆಲವರಿಗೆ ಸವದಿ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಆದರೆ ಸವದಿ ಹೈಕಮಾಂಡ್ ಜೊತೆಗೆ ಉತ್ತಮ ಭಾಂಧವ್ಯವನ್ನು ಹೊಂದಿದ್ದಾರೆ. ಅಲ್ಲದೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಜೊತೆಗೂ ಉತ್ತಮ ನಂಟಿದೆ. ಅವರ ಹೊರತಾಗಿ ಪ್ರಹ್ಲಾದ್ ಜೋಶಿ ಹೆಸರೂ ಕೇಳಿಬರುತ್ತಿದೆ. ಪ್ರಹ್ಲಾದ್ ಜೋಶಿ ಇತ್ತೀಚೆಗೆ ರಮೇಶ್ ಜಾರಕಿಹೊಳಿ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿರುವುದು ಹಾಗೂ ಕೆಲವೊಂದು ಶಾಸಕರನ್ನು ಭೇಟಿ ಮಾಡಿರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಅದೇನೇ ಇದ್ದರೂ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಯಾವ ಹಂತಕ್ಕೆ ಬಂದು ತಲುಪುತ್ತದೆ ಎಂಬುವುದು ಸದ್ಯದ ಕುತೂಹಲ.
ರಫೇಲ್ ಯುದ್ಧ ವಿಮಾನಗಳ ಮೊದಲ ಕಂತು ಭಾರತಕ್ಕೆ ಬಂದಾಗಿದೆ. ಫ್ರಾನ್ಸ್‌ನಿಂದ ಹೊರಟ ಐದು ರಫೇಲ್ ಯುದ್ಧ ವಿಮಾನಗಳು ಯಶಸ್ವಿಯಾಗಿ ಅಂಬಾಲಾ ವಾಯುನೆಲೆಯನ್ನು ತಲುಪಿವೆ. ಭಾರತೀಯ ವಾಯುಸೇನೆಯನ್ನು ಮತ್ತಷ್ಟು ಪ್ರಬಲವನ್ನಾಗಿ ನೋಡಬೇಕು ಎಂಬ ದಶಕಗಳ ಭಾರತೀಯರ ಕನಸು ನನಸಾಗಿದೆ. ರಫೇಲ್ ಯುದ್ಧ ವಿಮಾನಗಳಿಂದ ಭಾರತದ ವಾಯುಸೇನೆ ಬಲ ಇಮ್ಮಡಿಗೊಂಡಿದೆ. ರಫೇಲ್ ಆಗಮನದಿಂದ ಹುಮ್ಮಸ್ಸಿನಲ್ಲಿರುವ ವಾಯುಪಡೆ, ಶತ್ರು ಸಂಹಾರಕ್ಕೆ ಕಾದು ಕುಳಿತಿದೆ. ರಫೇಲ್ ಯುದ್ಧ ವಿಮಾನಗಳ ತಾಕತ್ತು ಮತ್ತು ಅವುಗಳ ವಿಶೇಷತೆಗಳೇ ನೆರೆಯ ಶತ್ರು ರಾಷ್ಟ್ರಗಳ ಎದೆ ನಡುಗಿಸಿದೆ. ಭಾರತಕ್ಕೆ ಬಲಭೀಮ ರಫೇಲ್ ಬಂದಿಳಿಯುತ್ತಿದ್ದಂತೇ ಪಾಕಿಸ್ತಾಣ ಹಾಗೂ ಚೀನಾ ಎದೆಯಲ್ಲಿ ನಡುಕ ಶುರುವಾಗಿದೆ. ಅತ್ಯಂತ ಸಮರ್ಥವಾಗಿ ಎಲ್ಲಾ ಅಡೆತಡೆಗಳನ್ನು ನಿವಾರಿಸಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ವಾಯುಸೇನೆ ರಫೇಲ್ ಯುದ್ಧ ವಿಮಾನಗಳನ್ನು ವಾಯುಪಡೆಗೆ ಸೇರ್ಪಡೆಗೊಳಿಸುವಲ್ಲಿ ಯಶಸ್ವಿಯಾಗಿವೆ. ರಫೇಲ್ ಆಗಮನ ಸಹಜವಾಗಿ ಭಾರತದ ಗಡಿ ಸುರಕ್ಷತೆ ಬಗ್ಗೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೊಂದಿರುವ ಕಾಳಜಿಯನ್ನು ತೋರಿಸಿದೆ. ಸದ್ಯ ಮೊದಲ ಹಂತದ ಭಾಗವಾಗಿ ಐದು ರಫೇಲ್ ಯುದ್ಧ ವಿಮಾನಗಳು ಭಾರತಜಕ್ಕೆ ಆಗಮಿಸಿದ್ದು, ಇನ್ನೂ 31 ಯುದ್ಧ ವಿಮಾನಗಳು ಆಗಮನಿಸಬೇಕಿವೆ. ರಫೇಲ್ ಆಗಮನದಿಂದ ಭಾರತದ ವಾಯುಸೇನೆ ಬಲ ನೆರೆಯ ಪಾಕಿಸ್ತಾನ ಹಾಗೂ ಚೀನಾಗಿಂತಲೂ ಅಧಿಕವಾಗಿದೆ. ಹಾಗಾದರೆ ಭಾರತದ ಈ ಸಾಮರಿಕ ಸಂಭ್ರಮಾಚರಣೆಯ ಬೆಳವಣಿಗೆಗಳತ್ತ ಗಮನಹರಿಸುವುದಾರೆ....150 ಕಿ.ಮೀ ದೂರದಿಂದ ಶತ್ರು ಗುರಿಗಳನ್ನು ಹೊಡೆಯುವ ಸಾಮರ್ಥ್ಯ ಮತ್ತು ಶತ್ರು ಭೂಪ್ರದೇಶದೊಳಗೆ 300 ಕಿ.ಮೀ ದೂರದಲ್ಲಿರುವ ಭೂ ಗುರಿಗಳನ್ನು ಸುಲಭವಾಗಿ ಹೊಡೆಯುವ ಸಾಮರ್ಥ್ಯ ರಫೇಲ್ ಯುದ್ಧ ವಿಮಾನಗಳಿಗಿದೆ.
ರಫೇಲ್ ಸದ್ಯ ವಿಶ್ವದಲ್ಲಿ ಹಾರಾಟ ನಡೆಸುತ್ತಿರುವ ಕೆಲವೇ ಕೆಲವು ಮಾರಕ ಯುದ್ಧ ವಿಮಾನಗಳ ಪೈಕಿ ಮೊದಲ ಸ್ಥಾನದಲ್ಲಿದ್ದು, ಭಾರತೀಯ ವಾಯುಸೇನೆಗೆ ಸೇರ್ಪಡೆಗೊಂಡಿದ್ದು ಸಹಜವಾಗಿ ವಾಯುಪಡೆ ಶಕ್ತಿಯನ್ನು ಇಮ್ಮಡಿಗೊಳಿಸಿದೆ.
ಭಾರತದ ನೆಲ ಮುತ್ತಿಕ್ಕಿದ ರ ರಫೇಲ್ ಎಂಬ ಆಗಸದ ಬೇಟೆಗಾರನಿಗೆ ಅದ್ದೂರಿ ಸ್ವಾಗತ!
ರಷ್ಯಾದಿಂದ ಸುಖೋಯ್ ಜೆಟ್‌ಗಳನ್ನು ಆಮದು ಮಾಡಿಕೊಂಡ 23 ವರ್ಷಗಳ ಬಳಿಕ, ವಾಯು-ಶ್ರೇಷ್ಠತೆ ಮತ್ತು ನಿಖರ ದಾಳಿಗೆ ಹೆಸರುವಾಸಿಯಾದ ಫ್ರೆಂಚ್ ನಿರ್ಮಿತ ರಫೇಲಲ್ ಯುದ್ಧ ವಿಮಾನಗಳನ್ನು ಭಾರತ ಆಮದು ಮಾಡಿಕೊಂಡಿರುವುದು ವಿಶೇಷ.
ರಫೇಲ್ ಪ್ರಬಲವಾದ ಶಸ್ತ್ರಾಸ್ತ್ರಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಯುರೋಪಿಯನ್ ಕ್ಷಿಪಣಿ ತಯಾರಕ ಎಂಬಿಡಿಎಯ ಉಲ್ಕೆ ದೃಷ್ಟಿಗೋಚರ ವ್ಯಾಪ್ತಿಯ ಗಾಳಿಯಿಂದ ಗಾಳಿಗೆ ಕ್ಷಿಪಣಿ, ಎಸ್‌ಸಿಎಎಲ್‌ಪಿ ಕ್ರೂಸ್ ಕ್ಷಿಪಣಿಗಳು ಮತ್ತು ಮೈಕಾ ಶಸ್ತ್ರಾಸ್ತ್ರಗಳ ವ್ಯವಸ್ಥೆಯು ರಾಫೆಲ್ ಜೆಟ್‌ಗಳ ಶಸ್ತ್ರಾಸ್ತ್ರಗಳ ಪ್ಯಾಕೇಜ್‌ನ ಮುಖ್ಯ ಆಧಾರವಾಗಿದೆ.
ಬಂದಾಯ್ತು ರಫೇಲ್: ಆಗಸ ಸೀಳಿದ ಭಾರತದ ಸಾಮರಿಕ ಸಂಭ್ರಮಾಚರಣೆ!
ಬಿವಿಆರ್‌ಎಎಮ್ ವಾಯು-ಗಾಳಿಯ ಯುದ್ಧದಲ್ಲಿ ಕ್ರಾಂತಿಯನ್ನುಂಟುಮಾಡಲು ವಿನ್ಯಾಸಗೊಳಿಸಲಾಗಿದೆ. ಯುಕೆ, ಜರ್ಮನಿ, ಇಟಲಿ, ಫ್ರಾನ್ಸ್, ಸ್ಪೇನ್ ಮತ್ತು ಸ್ವೀಡನ್ ರಾಷ್ಟ್ರಗಳು ಎಂಬಿಡಿಎ ತಯಾರಿತ ಈ ಕ್ಷಿಪಣಿಗಳನ್ನು ಬಳಸುತ್ತವೆ. ವಿಶಿಷ್ಟ ರಾಕೆಟ್-ರಾಮ್‌ಜೆಟ್ ಮೋಟರ್‌ನಿಂದ ನಿಯಂತ್ರಿಸಲ್ಪಡುವ ಈ ಕ್ಷಿಪಣಿಗಳು, ಇತರ ಕ್ಷಿಪಣಿಗಳಿಗಿಂತ ಹೆಚ್ಚಿನ ಸಮಯದವರೆಗೆ ಹೆಚ್ಚು ಎಂಜಿನ್ ಶಕ್ತಿಯನ್ನು ನೀಡುತ್ತದೆ ಎಂದು ತಜ್ಞರು ಹೇಳುತ್ತಾರೆ.
150 ಕಿ.ಮೀ ದೂರದಿಂದ ಶತ್ರು ವಿಮಾನಗಳನ್ನು ಗುರಿಯಾಗಿಸಬಲ್ಲದು. ಶತ್ರು ವಿಮಾನಗಳು ಭಾರತೀಯ ವಿಮಾನಕ್ಕೆ ಹತ್ತಿರವಾಗುವ ಮೊದಲು ಅವುಗಳು ನಾಶವಾಗಬಹುದು. 300 ಕಿ.ಮೀ ದೂರದಲ್ಲಿರುವ ಗುರಿಗಳನ್ನು ತಲುಪಬಲ್ಲ ಎಸ್‌ಸಿಎಎಲ್‌ಪಿ ಕ್ರೂಸ್ ಕ್ಷಿಪಣಿಗಳನ್ನು ಸಾಗಿಸಲು ರಫೇಲ್‌ಗಳನ್ನು ಸಜ್ಜುಗೊಳಿಸಲಾಗಿದೆ.
"ಭಾರತದ ಮಿಲಿಟರಿ ಇತಿಹಾಸದಲ್ಲಿ ಹೊಸ ಯುಗದ ಆರಂಭ": ರಾಜನಾಥ್ ಸಿಂಗ್
ಅಂದರೆ ಅಂಬಾಲಾದಿಂದ ಹೊರಡುವ ಭಾರತೀಯ ವಾಯುಪಡೆಯ ರಫೇಲ್, ಈ ಶಸ್ತ್ರಾಸ್ತ್ರಗಳಲ್ಲಿ ಒಂದನ್ನು ಭಾರತದ ವಾಯುಪ್ರದೇಶದೊಳಗಿಂದ ಉಡಾಯಿಸಲು ಸಾಧ್ಯವಾಗುತ್ತದೆ.
ಮೂರನೇ ಹಾಗೂ ಪ್ರಮುಖ ಶಸ್ತ್ರಾಸ್ತ್ರ ವ್ಯವಸ್ಥೆ ಮೈಕಾ ಕ್ಷಿಪಣಿ ವ್ಯವಸ್ಥೆ. ಮೈಕಾ ಬಹಳ ಬಹುಮುಖ ಗಾಳಿಯಿಂದ ಗಾಳಿಗೆ ಕ್ಷಿಪಣಿ. ಇದು ರಾಡಾರ್ ಅನ್ವೇಷಕ ಯಂತ್ರದೊಂದಿಗೆ ಬರುತ್ತದೆ. ಇದು ಈಗಾಗಲೇ ಭಾರತೀಯ ವಾಯುಪಡೆಯ ಮಿರಾಜ್ ಯುದ್ಧ ವಿಮಾನಗಳಲ್ಲಿ ಇದೆ.
ರಫೆಲ್ ಜೊತೆಗೆ ಫ್ರಾನ್ಸ್‌ನಿಂದ ಬರಲಿದೆ 'ಹ್ಯಾಮರ್' ಕ್ಷಿಪಣಿ: ತುರ್ತು ಆರ್ಡರ್ ಉದ್ದೇಶವೇನು?
ಇಷ್ಟೇ ಅಲ್ಲದೇ ಫ್ರೆಂಚ್ ರಕ್ಷಣಾ ಪ್ರಮುಖ ಸಫ್ರಾನ್ ಅಭಿವೃದ್ಧಿಪಡಿಸಿದ ನಿಖರ-ನಿರ್ದೇಶಿತ ಹ್ಯಾಮರ್ ಕ್ಷಿಪಣಿ ಕೂಡಭಾರತೂಯ ವಾಯುಸನೇಯ ರಫೇಲ್ ಯುದ್ಧ ವಿಮಾನಗಳಲ್ಲಿ ಅಳವಡಿಸಲಾಗುವುದು. ಈಗಾಗಲೇ ಹ್ಯಾಮರ್ ಕ್ಷಿಪಣಿಗಳಿಗೆ ಭಾರತ-ಫ್ರಾನ್ಸ್ ನಡುವೆ ಒಪ್ಪಂದ ಏರ್ಪಟ್ಟಿದೆ ಎಂಬುದನ್ನು ಇಲ್ಲಿ ಗಮನಿಸಬೇಕು.
ಹೀಗೆ ಹಲವು ವಿಭಾಗಗಳಲ್ಲಿ ಭಾರತದ ರಫೇಲ್ ಜೆಟ್ ವಿಮಾನಗಳು ನೆರೆಯ ಪಾಕಿಸ್ತಾಣ ಹಾಗೂ ಚೀನಾಗಿಂತ ಅಧಿಕ ಶಕ್ತಿಶಾಲಿಯಾಗಿದ್ದು, ಭಾರತದ ರಫೇಲ್ ಕಂಡು ಸಹಜವಾಗಿ ಪಾಕಿಸ್ತಾನ ಹಾಗೂ ಚೀನಾ ಆತಂಕಗೊಂಡಿವೆ ಎಂದು ಹೇಳಬಹುದು.
Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್ ಸೆಪ್ಟೆಂ...