ಕಾಂಗ್ರೆಸ್ ನಾಯಕನ ಕಚೇರಿ ಧ್ವಂಸ: ಸಿಬ್ಬಂದಿಗೆ ಬಾಯಿಗೆ ಬಂದಂತೆ ಬೈದ ಆಗುಂತಕರು!

ನವದೆಹಲಿ: ಹಿರಿಯ ನಾಯಕ ಹಾಗೂ ಸಂಸದ ಅವರ ಕಚೇರಿಗೆ ನುಗ್ಗಿ ಧಾಂಧಲೆ ನಡೆಸಿರುವ ಆಗುಂತಕರು, ಕಚೇರಿಯನ್ನು ಧ್ವಂಸ ಮಾಡಿರುವ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ. ನಿನ್ನೆ(ಮಾ.03) ಸಾಯಂಕಾಲ ಸುಮಾರು 5:30ಕ್ಕೆ ಏಕಾಏಕಿ ಅಧೀರ್ ರಂಜನ್ ಕಚೇರಿಗೆ ನುಗ್ಗಿದ ನಾಲ್ವರು ಆಗುಂತಕರು, ಸಿಬ್ಬಂದಿಯನ್ನು ಅವಾಚ್ಯವಾಗಿ ನಿಂದಿಸಿ ಧ್ವಂಸ ಮಾಡಿದ್ದಾರೆ. ಘಟನೆ ನಡೆದಾಗ ಅಧೀರ್ ರಂಜನ್ ಕಚೇರಿಯಲ್ಲಿ ಇರಲಿಲ್ಲ ಎನ್ನಲಾಗಿದ್ದು, ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾದ ಆಗುಂತಕರು ಕಚೇರಿಯ ಪೀಠೋಪಕರಣಗಳನ್ನು ಧ್ವಂಸಗೊಳಿಸಿ ಕಾಲ್ಕಿತ್ತಿದ್ದಾರೆ. ಅಧೀರ್ ರಂಜನ್ ಅವರಿಗೆ ಕರೆ ಮಾಡಿ ಕಚೇರಿಗೆ ಬರುವಂತೆ ಹೇಳುವಂತೆ ಸಿಬ್ಬಂದಿಯನ್ನು ಒತ್ತಾಯಿಸಿದ ಆಗುಂತಕರು, ಇದಕ್ಕೆ ಒಪ್ಪದಾದಾಗ ಅವಾಚ್ಯ ಪದಗಳನ್ನು ಬಳಿಸಿ ನಿಂದಿಸಿದ್ದಾರೆ. ಅಲ್ಲದೇ ಹಲ್ಲೆಗೂ ಮುಂದಾಗಿದ್ದಾರೆ ಎನ್ನಲಾಗಿದೆ. ಈ ಕುರಿತು ಪೊಲೀಸರಿಗೆ ದೂರು ನೀಡಿರುವ ಅಧೀರ್ ರಂಜನ್ ಆಪ್ತ ಸಹಾಯಕ ಪ್ರದೀಪ್ತೊ ರಾಜ್‌ಪಂಡಿತ್, ಅಧೀರ್ ರಂಜನ್ ಕಚೇರಿಯಲ್ಲಿ ಇಲ್ಲ ಎಂದು ತಿಳಿದ ಮೇಲೆ ಆಗುಂತಕರು ತಮ್ಮನ್ನು ಅಚಾಚ್ಯಚಾಗಿ ನಿಂದಿಸಿ ಕಚೇರಿ ಧ್ವಂಸಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿರುವ ದೆಹಲಿ ಪೊಲಲೀಸರು, ಪ್ರದೀಪ್ತೊ ನೀಡಿರುವ ದೂರಿನ ಆಧಾರದ ಮೇಲೆ ಕಚೇರಿಯ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಸುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.


from India & World News in Kannada | VK Polls https://ift.tt/3anxgKb

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...