ನವದೆಹಲಿ: ಬಿಡುವುದಾಗಿ ಘೋಷಿಸಿರುವ ಪ್ರಧಾನಿ ಮೋದಿ ನಡೆ ದೇಶಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದೆ. ಅದರಂತೆ ಮೋದಿ ನಿರ್ಣಯ ಕಾಂಗ್ರೆಸ್-ಬಿಜೆಪಿ ನಾಯಕರ ನಡುವಿನ ವಾಕ್ಸಮರಕ್ಕೂ ಕಾರಣವಾಗಿದೆ. ಸಾಮಾಜಿಕ ಜಾಲತಾಣದಿಂದ ಹೊರಬರುವುದಾಗಿ ಘೋಷಿಸಿದ್ದ ಪ್ರಧಾನಿ ಮೋದಿ ಅವರ ಕಾಲೆಳೆದಿದ್ದ ಕಾಂಗ್ರೆಸ್ ನಾಯಕ , ನೀವು ಬಿಡಬೇಕಾಗಿರುವುದು ದ್ವೇಷವನ್ನೇ ಹೊರತು ಸಾಮಾಜಿಕ ಜಾಲತಾಣವನ್ನಲ್ಲ ಎಂದು ಟ್ವೀಟ್ ಮಾಡಿದ್ದರು. ರಾಹುಲ್ ಟ್ವೀಟ್'ಗೆ ಸೂಕ್ತ ತಿರುಗೇಟು ನೀಡಿರುವ ಬಿಜೆಪಿ ಸಂಸದ , ಸಹೋದರ ನೀವು ವಿದೇಶದಲ್ಲಿದ್ದಾಗ ಟ್ವೀಟ್ ಮಾಡಲು ಕಷ್ಟವಾದರೆ ಡಾಟಾ ರೋಮಿಂಗ್ ಪ್ಯಾಕ್ ಹಾಕಿಸಿಕೊಳ್ಳಿ ಎಂದು ತಿವಿದಿದ್ದಾರೆ. ನೀವು ಭಾರತದಲ್ಲಿ ಇರುವುದಕ್ಕಿಂತ ಹೆಚ್ಚಾಗಿ ವಿಶ್ರಾಂತಿಗಾಗಿ ಆಗಾಗ ವಿದೇಶಕ್ಕೆ ಹೋಗುತ್ತೀರಿ. ವಿದೇಶದಿಂದ ಟ್ವೀಟ್ ಮಾಡಲು ನೀವು ಹೆಚ್ಚಿನ ಹಣ ವ್ಯಯಿಸಬೇಕಾಗುತ್ತದೆ. ಹೀಗಾಗಿ ಅಲ್ಪ ಕಾಲದ ಡಾಟಾ ರೋಮಿಂಗ್ ಪ್ಯಾಕ್ ಹಾಕಿಸಿಕೊಂಡರೆ ಒಳಿತು ಎಂದು ಸುಪ್ರಿಯೋ ಟ್ವೀಟ್ ಮಾಡಿದ್ದಾರೆ. ಒಟ್ಟಿನಲ್ಲಿ ಸಾಮಾಜಿಕ ಜಾಲತಾಣ ಬಿಡುವ ಪ್ರಧಾನಿ ಮೋದಿ ನಿರ್ಣಯ ದೇಶದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದ್ದು, ಎಲ್ಲರೂ ಈ ಚರ್ಚೆಯಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷ ಭಾಗಿದಾರಿಗಳಾಗುತ್ತಿರುವುದು ವಿಶೇಷ.
from India & World News in Kannada | VK Polls https://ift.tt/2PFp5kq