- ನಾಗರಾಜು ಎ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಹಲಸಿಗೆ ಡಿಮ್ಯಾಂಡ್ ಹೆಚ್ಚಾಗಿದೆ. ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ತೂಬಗೆರೆಯ ಶಿವರಾತ್ರಿ ಹಲಸು, ಚಂದ್ರ ಹಲಸು, ಕೆಂಪು ರುದ್ರಾಕ್ಷಿ, ಹಳದಿ ರುದ್ರಾಕ್ಷಿ ಹಾಟ್‌ಫೇವರೇಟ್ ಆಗಿದ್ದು, ವರ್ಷದಿಂದ ವರ್ಷಕ್ಕೆ ಹೆಚ್ಚಿನ ಹಲಸು ರಫ್ತು ಮಾಡಲಾಗುತ್ತಿದೆ. ಪ್ರಸ್ತುತ, 80ರಿಂದ 100ಟನ್ ಹಲಸು ರಫ್ತು ಮಾಡಲಾಗುತ್ತಿದ್ದು, ಈ ಪ್ರಮಾಣ ಮತ್ತಷ್ಟು ಏರಿಕೆಯಾಗಲಿದೆ. ಉಡುಪಿ, ಮಂಗಳೂರಿಗರಿಗೆ ಹಾಟ್‌ಫೇವರೆಟ್: ರಾಜ್ಯದ ಕರಾವಳಿ ಭಾಗದಲ್ಲಿ ಹಲಸಿನ ನಾನಾ ಬಗೆಯ ತಿಂಡಿ, ಸಿಹಿ ತಿನಿಸುಗಳನ್ನು ತಯಾರು ಮಾಡುತ್ತಾರೆ. ಈ ಹಿನ್ನೆಲೆ ಅಲ್ಲಿನ ಹಲಸುಮೇಳದಲ್ಲಿ ದೊಡ್ಡಬಳ್ಳಾಪುರದ ತೂಬಗೆರೆಯ ಬಗೆಬಗೆಯ ಹಲಸಿಗೆ ಪ್ರತಿಬಾರಿಯು ಉತ್ತಮ ಬೇಡಿಕೆ ಸೃಷ್ಟಿಯಾಗುತ್ತದೆ. ಮಂಗಳೂರಿನ ಸಿಹಿ ತಯಾರಿಕಾ ಕಂಪನಿಯೊಂದೆ ದೊಡ್ಡಬಳ್ಳಾಪುರದಿಂದ 80ರಿಂದ 100ಟನ್ ಹಲಸನ್ನು ಖರೀದಿ ಮಾಡಿಕೊಳ್ಳುತ್ತದೆ. ಇದನ್ನು ಹೊರತುಪಡಿಸಿ, ಅಲ್ಲಿ ನಡೆವ ಹಲಸುಮೇಳಗಳಲ್ಲಿ ಜನ ತೂಬಗೆರೆಯ ಹಲಸಿಗೆ ಮುಗಿಬಿದ್ದು ಖರೀದಿಸುತ್ತಾರೆ. ಕರಾವಳಿ ಭಾಗದಲ್ಲಿ ಹಲಸಿಂದ ಹಲಸಿನ ಹಣ್ಣಿನ ಮಾಂಬಳ, ಕಾಯಿ ಮತ್ತು ಹಣ್ಣಿನ ಹಪ್ಪಳ, ಪೇಡಾ, ಹಲ್ವಾ, ಕಡುಬು, ಮುಳ್ಕ, ಹಲಸಿನ ಸೊಳೆಯ ಪೋಡಿ, ಹಲಸಿನ ಹಣ್ಣಿನ ಕ್ಷೀರ, ಕೇಕ್, ಹಲಸಿನ ಬೀಜದ ಚಟ್ಟಂಬಡೆ, ಮತ್ತು ಕಾಯಿಯ ಸಿಹಿ/ಖಾರ ಬೋಂಡ, ಹಲಸಿನ ಹಣ್ಣಿನ ಜ್ಯೂಸ್ ಹೀಗೆ ವಿವಿಧ ರೀತಿಯಾದ ತಿನಿಸುಗಳನ್ನು ತಯಾರಿಸುವ ಹಿನ್ನೆಲೆ ಉತ್ತಮ ಡಿಮ್ಯಾಂಡ್ ಸೃಷ್ಟಿಯಾಗಿದೆ ಎನ್ನುತ್ತಿದ್ದಾರೆ ಹಲಸು ಬೆಳೆಗಾರರು. ಯಾವ್ಯಾವ ವಿಧ?ಶಿವರಾತ್ರಿ ಹಲಸು, ಚಂದ್ರ ಹಲಸು, ಕೆಂಪು ರುದ್ರಾಕ್ಷಿ ಹಲಸು, ಹಳದಿ ರುದ್ರಾಕ್ಷಿ ಹಲಸು, ಬಿತ್ತನೆ ಏಕಾದಶಿ ಹಲಸು ಆರೋಗ್ಯಕ್ಕೆ ಹಲಸು ಶ್ರೀರಕ್ಷೆ
- ವಿಟಮಿನ್‌ಸಿ ಒದಗಿಸಿ, ರೋಗನಿರೋಧಕ ಶಕ್ತಿ ಹೆಚ್ಚಳ
- ರಕ್ತದೊತ್ತಡವನ್ನು ಸಮತೋಲನದಲ್ಲಿ ಇಡುತ್ತದೆ
- ಹಲಸಿನ ಬೀಜದಲ್ಲಿನ ಪ್ರೋಟಿನ್, ವಿಟಮಿನ್ ಬಿ ಕ್ಯಾನ್ಸರ್ ತಡೆ
- ಮೂಳೆಗಳ ಆರೋಗ್ಯ ಹೆಚ್ಚಿಸುತ್ತದೆ
- ನರವ್ಯೂಹಕ್ಕೆ ಸಹಕಾರಿ
- ಡಯಾಬಿಟೀಸ್ ಕಾಯಿಲೆಗಳನ್ನು ಮದ್ದು
- ಹೊಟ್ಟೆಯ ಹುಣ್ಣಿನ ಸಮಸ್ಯೆ ಪರಿಹರ
- ಚರ್ಮದ ಕಪ್ಪು ಕಲೆಗಳನ್ನು ಹೊಡೆದೋಡಿಸುತ್ತದೆ
- ಶೀತ ಮತ್ತು ಸೋಂಕು ತಡೆಯಲು ನೆರವು
- ರಕ್ತದ ಸಕ್ಕರೆ ಪ್ರಮಾಣ ನಿಯಂತ್ರಣ
- ಹೃದಯದ ಸಮಸ್ಯೆಯ ರಿಸ್ಕ್‌ಗಳನ್ನು ಕಡಿಮೆ ಮಾಡುತ್ತೆ
- ಕಣ್ಣುಗಳಿಗೆ ಆರೋಗ್ಯಕ್ಕೆ ಉಪಯುಕ್ತ
from India & World News in Kannada | VK Polls https://ift.tt/2wsPStp