ಮುಸಲ್ಮಾನ ಮಹಿಳೆ, ಮಗುವನ್ನು ಜೀವಂತ ಸಮಾಧಿ ಮಾಡಿದ ಹಿಂದೂಗಳು?

ಹಕ್ಕು ಪಾಕಿಸ್ತಾನ ಮೂಲದ ಬ್ರಿಟಿಷ್ ಸಂಸತ್ ಸದಸ್ಯ ನಜೀರ್ ಅಹಮದ್‌ ಟ್ವಿಟ್ಟರ್‌ನಲ್ಲಿ ವಿಡಿಯೋವೊಂದನ್ನು ಟ್ವೀಟ್‌ ಮಾಡಿದ್ದಾರೆ. ಅಲ್ಲದೆ, ಭಾರತದ ಫ್ಯಾಸಿಸ್ಟರು ಈ ಮಹಿಳೆ ಹಾಗೂ ಮಗುವನ್ನು ಜೀವಂತವಾಗಿ ಸಮಾಧಿ ಮಾಡಲಾಗಿದೆ ಎಂದು ಟ್ವೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಭಾರತದ ಫ್ಯಾಸಿಸ್ಟರು ಜೀವಂತವಾಗಿ ತಾಯಿ ಮತ್ತು ಮಗುವನ್ನು ಹೂತು ಹಾಕಿರುವ ಭಯಾನಕ ವಿಡಿಯೋ ಇದು. ಆದರೆ, ಅವರನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದೆ. ಧನ್ಯವಾದ ದೇವರೇ ಎಂದು ಪಾಕಿಸ್ತಾನ ಮೂಲದ ಬ್ರಿಟಿಷ್ ಸಂಸತ್ ಸದಸ್ಯ ನಜೀರ್ ಅಹಮದ್‌ ಟ್ವೀಟ್‌ ಮಾಡಿದ್ದಾರೆ. ಈ ಟ್ವೀಟ್‌ ಅನ್ನು ಸದ್ಯ ಡಿಲೀಟ್‌ ಮಾಡಲಾಗಿದೆ. ಆದರೂ ಇದನ್ನು 3,500 ಕ್ಕೂ ಹೆಚ್ಚು ಬಾರಿ ರಿಟ್ವೀಟ್ ಮಾಡಲಾಗಿದ್ದು, ವಿಡಿಯೋವನ್ನು 70,000 ಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಇನ್ನು, ಪಾಕಿಸ್ತಾನ ಸೇನೆಯ ನಿವೃತ್ತ ಮೇಜರ್ ಮಹಮ್ಮದ್ ಆರಿಫ್ ಅವರು "ಮುಸ್ಲಿಮರನ್ನು ಭಾರತದಲ್ಲಿ ಜೀವಂತವಾಗಿ ಸಮಾಧಿ ಮಾಡಲಾಗುತ್ತಿದೆ" ಎಂದು ಇದೇ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‌ ಅನ್ನು 3,100 ಕ್ಕೂ ಹೆಚ್ಚು ಬಾರಿ ರಿಟ್ವೀಟ್ ಮಾಡಲಾಗಿದೆ ಮತ್ತು ವೀಡಿಯೊವನ್ನು ಈಗಾಗಲೇ 84,000 ಬಾರಿ ವೀಕ್ಷಿಸಲಾಗಿದೆ. ಆದರೆ, ಇದು ಭೀಕರ ವಿಡಿಯೋವಾಗಿದ್ದು, ಈ ಹಿನ್ನೆಲೆ ಫ್ಯಾಕ್ಟ್ ಚೆಕ್‌ನಲ್ಲಿ ಇದನ್ನು ಹಂಚಿಕೊಳ್ಳುತ್ತಿಲ್ಲ. ಸತ್ಯ ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರದ ಹಳ್ಳಿಯೊಂದರಲ್ಲಿ ಜನವರಿ 2020ರಂದು ಈ ಘಟನೆ ನಡೆದಿದೆ. ಅಕ್ಬರ್ ಅಲಿ ಎಂಬ ವ್ಯಕ್ತಿ ತನ್ನ ಹೆಂಡತಿ ಮತ್ತು ಮಗುವನ್ನು ಕೊಲೆ ಮಾಡಿ ಶವಗಳನ್ನು ಹೂತುಹಾಕಿದನೆಂದು ಆರೋಪಿಸಲಾಗಿದೆ. ಅಲ್ಲದೆ, ಈ ಸಮಯ್‌ ವರದಿ ಪ್ರಕಾರ ಸ್ಥಳೀಯರು ಅಲಿಯ ಮನೆಯನ್ನು ಧ್ವಂಸ ಮಾಡಿ ಬೆಂಕಿ ಹಚ್ಚಿದರು. ಜತೆಗೆ ಅಲಿ ಗ್ರಾಮದಿಂದ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ. ಈ ಹಿನ್ನೆಲೆ ಈ ಘಟನೆಗೆ ಯಾವುದೇ ಕೋಮು ಬಣ್ಣವಿಲ್ಲ. ಪರಿಶೀಲನೆ ಮತ್ತು ವಿಧಾನ ಈ ವಿಡಿಯೋದಲ್ಲಿ ಜನರು ಬಂಗಾಳಿಯಲ್ಲಿ ಮಾತನಾಡುತ್ತಿರುವುದನ್ನು ಫ್ಯಾಕ್ಟ್ ಚೆಕ್‌ ತಂಡ ಗಮನಿಸಿದೆ. ಬಳಿಕ ನಾವು ಈ ಸಮಯ್ ಡಿಜಿಟಲ್ ಸಂಪಾದಕ ರಜತ್ ಮೊಂಡಾಲ್ ಅವರನ್ನು ಸಂಪರ್ಕಿಸಿ ಈ ವಿಡಿಯೋ ಹಂಚಿಕೊಂಡೆವು. ನಂತರ 'ಯುವಕನು ತನ್ನ ಹೆಂಡತಿ ಮತ್ತು ಮಕ್ಕಳನ್ನು ಕೊಲೆ ಮಾಡಿದನು' ಎಂಬ ಶೀರ್ಷಿಕೆಯ ಸುದ್ದಿ ಜನವರಿ 31, 2020 ರಂದು ಗೂಗಲ್ ಅನುವಾದಕವನ್ನು ಬಳಸಿಕೊಂಡು ಅನುವಾದಿಸಿದಾಗ ನಮಗೆ ಸಿಕ್ಕಿದೆ. ಈ ಬಗ್ಗೆ ರಜತ್ ಮೊಂಡಾಲ್ ನಿರ್ದೇಶನ ನೀಡಿದರು. ವರದಿಯಲ್ಲಿ ಬಳಸಲಾದ ಚಿತ್ರವು ಆ ವಿಡಿಯೋದ ಸ್ಕ್ರೀನ್‌ಶಾಟ್ ಆಗಿದ್ದು, ಇದೀಗ 'ಫ್ಯಾಸಿಸ್ಟರು ಭಾರತದಲ್ಲಿ ಮಹಿಳೆ ಮತ್ತು ಮಗುವನ್ನು ಜೀವಂತವಾಗಿ ಸಮಾಧಿ ಮಾಡಿದ್ದಾರೆ' ಎಂಬ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಈ ವರದಿ ಪ್ರಕಾರ ಅಕ್ಬರ್ ಅಲಿ - ತನ್ನ ಹೆಂಡತಿ ಮತ್ತು ಮಗುವನ್ನು ಕೊಲೆ ಮಾಡಿ, ಶವಗಳನ್ನು ಹೂತಿಡಲಾಗಿದೆ ಎಂದು ಆರೋಪಿಸಲಾಗಿದೆ. ನಂತರ ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಶವಗಳನ್ನು ಹೊರತೆಗೆಯಲಾಯಿತು. ಬಳಿಕ ಉದ್ರಿಕ್ತ ಸ್ಥಳೀಯರು ಅಲಿಯ ಮನೆಯನ್ನು ಧ್ವಂಸ ಮಾಡಿ ಬೆಂಕಿ ಹಚ್ಚಿದ್ದಾರೆ. ಅಲ್ಲದೆ, ಆತ ಗ್ರಾಮದಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ತೀರ್ಮಾನ ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರದ ಘಟನೆಯ ಭೀಕರ ವಿಡಿಯೋವನ್ನು ಟ್ವಿಟ್ಟರ್ ಬಳಕೆದಾರರು, ಹೆಚ್ಚಾಗಿ ಪಾಕಿಸ್ತಾನಿಯರು ಹಂಚಿಕೊಳ್ಳುತ್ತಿದ್ದಾರೆ ಎಂದು ಟೈಮ್ಸ್ ಫ್ಯಾಕ್ಟ್ ಚೆಕ್ ಕಂಡುಹಿಡಿದಿದೆ. 'ಫ್ಯಾಸಿಸ್ಟರು ಭಾರತ ಮತ್ತು ಮಹಿಳೆಯರನ್ನು ಜೀವಂತವಾಗಿ ಸಮಾಧಿ ಮಾಡಿದ್ದಾರೆ' ಮತ್ತು 'ಮುಸ್ಲಿಮರನ್ನು ಭಾರತದಲ್ಲಿ ಜೀವಂತವಾಗಿ ಸಮಾಧಿ ಮಾಡಲಾಗುತ್ತಿದೆ' ಎಂದು ಈ ಘಟನೆಗೆ ಕೋಮು ಬಣ್ಣವನ್ನು ಸೂಚಿಸಲಾಗಿದೆ. ಆದ್ದರಿಂದ ಈ ಹಕ್ಕುಗಳು ಸುಳ್ಳು.


from India & World News in Kannada | VK Polls https://ift.tt/3cnbCYl

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...