ಮೋದಿ ಬಿಟ್ಟು ಹೊರಟರು ಜಾಲತಾಣ: ಚಿಂತೆಗೀಡಾದ ತರೂರ್ ಕೊಟ್ಟರು ಕಾರಣ!

ನವದೆಹಲಿ: ಮುಂಬರುವ ಭಾನುವಾರದಿಂದ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಿಲ್ಲಿಸುವುದಾಗಿ ಘೋಷಿಸಿರುವ ಪ್ರಧಾನಿ ಮೋದಿ, ಈ ಮೂಲಕ ವಿವಿಧ ಜಾಲತಾಣದಗಳಲ್ಲಿರುವ ತಮ್ಮ ಲಕ್ಷಾಂತರ ಫಾಲೋವರ್ಸ್'ಗಳಿಗೆ ನಿರಾಸೆಯನ್ನುಂಟು ಮಾಡಿದ್ದಾರೆ. ಮೋದಿ ನಿರ್ಣಯದಿಂದ ಅವರ ಅಭಿಮಾನಿಗಳು ನಿರಾಸೆಗೊಂಡಿದ್ದರೆ, ಅವರ ವಿರೋಧಿಗಳು ಕುಹುಕವಾಡುತ್ತಿದ್ದಾರೆ. ಹೀಗೆ ಮೋದಿ ನಿರ್ಣಯ ಅವರು ಬಿಟ್ಟು ಹೊರಡಬೇಕೆಂದಿರುವ ಸಾಮಾಜಿಕ ಜಾಲತಾಣದಲ್ಲೇ ಅತ್ಯಂತ ಹೆಚ್ಚು ಚರ್ಚೆಗೆ ಒಳಪಟ್ಟಿದೆ. ಯಾವುದೇ ಕಾರಣಕ್ಕೂ ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣಗಳಿಂದ ದೂರ ಹೋಗಬಾರದು ಎಂದು ಅವರ ಅಭಿಮಾನಿಗಳು ಮನವಿ ಮಾಡಿದ್ದಾರೆ. ಅದರಂತೆ ಮೋದಿ ಬಿಟ್ಟು ಹೊರಟರೆ ಏನು ಪರಿಣಾಮ ಬೀರಲಿದೆ ಎಂದು ವಿರೋಧಿಗಳು ವ್ಯಂಗ್ಯವಾಡಿದ್ದಾರೆ. ಈ ಮಧ್ಯೆ ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣ ಬಿಟ್ಟು ಹೊರನಡೆಯುವ ನಿರ್ಣಯದ ಕುರಿತು ನಾಯಕ ತಮ್ಮದೇ ಆದ ಕಾರಣಗಳನ್ನು ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಶಶಿ ತರೂರ್, ಪ್ರಧಾನಿ ಅವರ ಈ ನಿರ್ಣಯ ದೇಶದಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ನಿರ್ಬಂಧ ವಿಧಿಸುವ ಮುನ್ಸೂಚನೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳಿಂದ ಹೊರ ಬರುವ ನಿರ್ಣಯ ಕೈಗೊಂಡಿರುವ ಮೋದಿ ಈ ಮೂಲಕ ದೇಶಾದ್ಯಂತ ಸಾಮಾಜಿಕ ಜಾಲತಾಣಗಳ ಮೇಲೆ ನಿರ್ಬಂಧ ವಿಧಿಸುವ ಪರೋಕ್ಷ ಸಂದೇಶ ರವಾನಿಸಿದ್ದಾರೆ ಎಂದು ತರೂರ್ ಅಭಿಪ್ರಾಯಪಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ದ್ವೇಷ ಮಾತ್ರವಲ್ಲದೇ ಸ್ನೇಹ, ಸಹಬಾಳ್ವೆಯ ಸಂದೇಶಗಳನ್ನೂ ಕಳುಹಿಸಬಹುದು ಎಂದು ಅರಿತಿರುವ ಮೋದಿ, ತಮ್ಮ ರಾಜಕೀಯ ಅಜೆಂಡಾಗಳಿಗೆ ಅಡ್ಡಿಯನ್ನುಂಟು ಮಾಡುವ ಎಲ್ಲಾ ಪ್ರಯತ್ನಗಳಿಗೆ ತಡೆಯೊಡ್ಡಲು ಬಯಸಿದ್ದಾರೆ ಎಂದು ತರೂರ್ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪುಷ್ಠಿಯಾಗಿ ಕೇಂದ್ರ ಸರ್ಕಾರ ಕೆಲವು ಸಾಮಾಜಿಕ ಜಾಲತಾಣಗಳ ನಡುವಿನ ಕಿತ್ತಾಟದ ಪ್ರಸಂಗಗಳು ಮತ್ತೆ ಮುನ್ನೆಲೆಗೆ ಬಂದಿವೆ. ಸರ್ಕಾರದ ನಿಯಮಗಳನ್ನು ಒಪ್ಪದ ಕೆಲವು ಸಾಮಾಜಿಕ ಜಾಲತಾಣಗಳೊಂದಿಗೆ ಮೋದಿ ಸರ್ಕಾರ ಈ ಹಿಂದೆ ಮುನಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.


from India & World News in Kannada | VK Polls https://ift.tt/2wkOOb8

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...