ನವದೆಹಲಿ: ತಮ್ಮ ತಮ್ಮ ಕ್ಷೇತ್ರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮತ್ತು ಕಾಪಾಡುವ ಜವಾಬ್ದಾರಿ ಆಯಾ ಕ್ಷೇತ್ರಗಳ ಸಂಸದರದ್ದು ಎಂದು ಪ್ರಧಾನಿ ಮೋದಿ ಸಂಸದರಿಗೆ ಖಡಕ್ ಸೂಚನೆ ನೀಡಿದ್ದಾರೆ. ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಶಾಂತಿ-ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಆಯಾ ಕ್ಷೇತ್ರಗಳ ಸಂಸದರ ಮೇಲಿದೆ ಎಂಬುದನ್ನು ಮರೆಯಬೇಡಿ ಎಂದು ಸೂಚ್ಯವಾಗಿ ಹೇಳಿದರು. ದೇಶದ ಅಭಿವೃದ್ಧಿಗೆ ಶಾಂತಿ ಸುವ್ಯವಸ್ಥೆ ಕಾಪಾಡುವುದು ಅತ್ಯಂತ ಅವಶ್ಯವಾಗಿದ್ದು, ಶಾಂತಿ ಕಾಪಾಡುವ ಜವಾಬ್ದಾರಿ ಹೊತ್ತುಕೊಳ್ಳುವಂತೆ ಬಿಜೆಪಿ ಸಂಸದರಿಗೆ ಪ್ರಧಾನಿ ಮೋದಿ ಸಲಹೆ ನೀಡಿದರು. ಅಭಿವೃದ್ಧಿಯೊಂದೇ ನಮ್ಮ ಸರ್ಕಾರದ ಮಂತ್ರವಾಗಿದ್ದು, ಸಬ್ ಕಾ ಸಾತ್, ಸಬ್ ಕಾ ವಿಕಾಸ್ ಹಾಗೂ ಸಬ್ ಕಾ ವಿಶ್ವಾಸ್ ಅಡಿಯಲ್ಲಿ ಮುನ್ನಡೆಯೋಣ ಎಂದು ಪ್ರಧಾನಿ ಮೋದಿ ಮನವಿ ಮಾಡಿದರು. ಕೆಲವರು ತಮ್ಮ ಪಕ್ಷಕ್ಕಾಗಿ ಬದುಕುತ್ತಾರೆ, ಆದರೆ ನಾವು(ಬಿಜೆಪಿ) ದೇಶಕ್ಕಾಗಿ ಬದುಕುತ್ತೇವೆ ಎಂದು ಹೇಳಿದ ಪ್ರಧಾನಿ, ದೇಶದ ಅಭಿವೃದ್ಧಿಗೆ ಮಾರಕವಾಗಿರುವ ಹಿಂಸಾಚಾರವನ್ನು ಹತ್ತಿಕ್ಕಿ ಶಾಂತಿ ಕಾಪಾಡುವ ಜವಾಬ್ದಾರಿ ಪ್ರತಿಯೊಬ್ಬ ಸಂಸದರ ಮೇಲಿದೆ ಎಂದು ಹೇಳಿದರು. ದೆಹಲಿ ದಂಗೆ ಸಮಯದಲ್ಲೇ ಪ್ರಧಾನಿ ಮೋದಿ ತಮ್ಮ ಸಂಸದರಿಗೆ ಶಾಂತಿಯ ಪಾಠ ಮಾಡಿದ್ದು, ದೇಶಕ್ಕಾಗಿ ಪಕ್ಷ ಸಮರ್ಪಿತವಾಗಿದೆ ಎಂಬ ಸಂದೇಶವನ್ನೂ ವಿರೋಧಿಗಳಿಗೆ ರವಾನಿಸಿದ್ದಾರೆ.
from India & World News in Kannada | VK Polls https://ift.tt/2Id1Xpx