ಕೊರೊನಾ ಎಫೆಕ್ಟ್..! ಸೋಮವಾರ ಸಂಸತ್‌ ಕಲಾಪ ಮಧ್ಯಾಹ್ನ 2 ಗಂಟೆಗೆ ಆರಂಭ

ಹೊಸ ದಿಲ್ಲಿ: ಅಪರೂಪದ ವಿದ್ಯಮಾನದಲ್ಲಿ ಸಂಸತ್‌ನ ಉಭಯ ಸದನಗಳ ಕಲಾಪಗಳು (ಮಾರ್ಚ್ 23) ಬೆಳಗ್ಗೆ 11ರ ಬದಲಾಗಿ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿವೆ. 'ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಬಹುತೇಕ ವಿಮಾನಗಳ ವೇಳಾಪಟ್ಟಿ ಬದಲಾಗಿದೆ. ಅನೇಕ ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ತಮ್ಮ ಕ್ಷೇತ್ರಗಳಿಂದ ಸಂಸದರು ಸೋಮವಾರ ಬೆಳಗ್ಗೆ 11 ಗಂಟೆಗೆ ದಿಲ್ಲಿ ತಲುಪಲು ಸಾಧ್ಯವಿಲ್ಲ' ಎಂದು ಎರಡೂ ಸದನಗಳಲ್ಲಿ ಸದಸ್ಯರು ಅಸಹಾಯಕತೆ ವ್ಯಕ್ತಪಡಿಸಿದರು. ಸಂಸತ್‌ ಕಲಾಪ ಸಲಹಾ ಸಮಿತಿಯು ಚರ್ಚೆ ನಡೆಸಿ ಸೋಮವಾರ ಮಧ್ಯಾಹ್ನ 2 ಗಂಟೆಗೆ ಕಲಾಪ ಆರಂಭಿಸುವ ನಿರ್ಧಾರಕ್ಕೆ ಬಂದಿತು. ಲೋಕಸಭೆಯಲ್ಲಿ ಈ ವಿಷಯ ಪ್ರಕಟಿಸಿದ ಸ್ಪೀಕರ್‌ ಅಧೀರ್‌ ರಂಜನ್‌ ಚೌಧರಿ ಅವರು, 'ಅಂದು ಪ್ರಶ್ನೋತ್ತರ ಕಲಾಪ ಇರುವುದಿಲ್ಲ. ಈ ನಿರ್ಧಾರ ಮಾರ್ಚ್ 23ರಂದು ಮಾತ್ರ ಅನ್ವಯವೇ ವಿನಾ ಮಾರ್ಚ್ 30ರ ಸೋಮವಾರಕ್ಕೆ ಅನ್ವಯಿಸುವುದಿಲ್ಲ' ಎಂದು ಸ್ಪಷ್ಟಪಡಿಸಿದರು. ರಾಜ್ಯಸಭೆಯಲ್ಲಿ ಸಭಾಪತಿ ಎಂ.ವೆಂಕಯ್ಯ ನಾಯ್ಡು ಈ ಕುರಿತು ಘೋಷಣೆ ಮಾಡಿದರು. ಸಂದರ್ಭದಲ್ಲಿ ಬೆಳಗ್ಗೆ 11 ಗಂಟೆಗೆ ಪ್ರಶ್ನೋತ್ತರದಿಂದ ಕಲಾಪ ಪ್ರಾರಂಭವಾಗುವುದು ವಾಡಿಕೆ.


from India & World News in Kannada | VK Polls https://ift.tt/2UnrB0g

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...