ನವದೆಹಲಿ: ಇಟಲಿಯಿಂದ ಆಗಮಿಸಿರುವ 15 ಮಂದಿ ಪ್ರಜೆಗಳಲ್ಲಿ ಕೊರೊನಾ ವೈರಸ್ ಇರುವುದು ಧೃಡಪಟ್ಟಿದೆ. ಇವರೆಲ್ಲರಿಗೂ ದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಮೂಲಕ ಭಾರತದಲ್ಲಿ ಕೊರೊನಾ ಸೋಂಕಿತರ ಸಂಕ್ಯೆ 21ಕ್ಕೆ ಏರಿದಂತಾಗಿದೆ. ಎಲ್ಲ 15 ಇಟಲಿ ಪ್ರವಾಸಿಗರನ್ನು ದೆಹಲಿಯ ಚಾವ್ಲಾ ಪ್ರದೇಶದಲ್ಲಿರುವ ಇಂಡೋ-ಟಿಬೆಟನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಶಿಬಿರದಲ್ಲಿ ದಿಗ್ಬಂಧನದಲ್ಲಿ ಇಡಲಾಗಿದೆ. ಇವರಿಗೆ ಇರುವುದು ಬುಧವಾರ ಖಚಿತವಾಗಿದೆ. ಒಟ್ಟು 21 ಮಂದಿ ಇಟಲಿ ಪ್ರಜೆಗಳು ಪ್ರವಾಸಕ್ಕೆಂದು ಭಾರತಕ್ಕೆ ಆಗಮಿಸಿದ್ದರು. ಇವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ 15 ಮಂದಿಯಲ್ಲಿ ಕೊರೊನಾ ವೈರಸ್ ಸೋಂಕಿರುವದು ಖಾತರಿಯಾಗಿದೆ. ಇವರದನ್ನು ಮಂಗಳವಾರದಿಂದಲೇ ದಿಗ್ಬಂಧನದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದಕ್ಕೂ ಮೊದಲೇ ಭಾರತದಲ್ಲಿ ಒಟ್ಟು 6 ಮಂದಿಗೆ ಕೊರೊನಾ ವೈರಸ್ ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಈ 6 ಮಂದಿ ಪೈಕಿ ರಾಜಸ್ಥಾನದಲ್ಲಿರುವ ಇಟಾಲಿಯನ್ ದಂಪತಿ, ಬೆಂಗಳೂರಿನ ಟೆಕ್ಕಿ ಹಾಗೂ ಇಟಲಿಯಿಂದ ಭಾರತಕ್ಕೆ ಆಗಮಿಸಿದ ಒಬ್ಬರು ಸೇರಿದ್ದಾರೆ. ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ನಿನ್ನೆ ಪರಿಶೀಲನಾ ಸಭೆ ನಡೆಸಿದ ಪ್ರಧಾನಿ ಮೋದಿ ಕೊರೊನಾ ವೈರಸ್ ಕುರಿತು ಯಾರು ಆತಂಕ ಪಡುವ ಅಗತ್ಯವಿಲ್ಲ ಎಂದು ದೇಶದ ಜನತೆಗೆ ಧೈರ್ಯ ತುಂಬಿದ್ದಾರೆ. ಇಟಲಿಯಿಂದ ಬಂದಿದ್ದ ನಿವಾಸಿಯೊಬ್ಬರು ಹೋಟೆಲ್‌ನಲ್ಲಿ ಆಯೋಜಿಸಿದ್ದ ಜನ್ಮದಿನದ ಸಂಭ್ರಮಾಚರಣಗೆ ನೋಯ್ಡಾದ ಎರಡು ಶಾಲೆಯ ಕೆಲ ವಿದ್ಯಾರ್ಥಿಗಳು ತೆರಳಿದ್ದರಿಂದ ಕೊರೊನಾ ವೈರಸ್ ಹರಡಿದೆ ಎಂದು ಹೇಳಲಾಗಿದ್ದು, ಎರಡು ಶಾಲೆಗಳನ್ನೂ ಸದ್ಯ ಶುಚಿಗೊಳಿಸಲಾಗಿದೆ. ಇಟಲಿಯಿಂದ ಬಂದಿದ್ದ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದ ಇಬ್ಬರು ಆಗ್ರಾ ವ್ಯಕ್ತಿಗಳಿಗೂ ಕೊರೊನಾ ವೈರಸ್ ಲಕ್ಷಣಗಳಿದೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ. ಸದ್ಯ ದೇಶದಲ್ಲೂ ಕೊರೊನಾ ವೈರಸ್ ಪ್ರಕರಣ ಪತ್ತೆಯಾದ ಬೆನ್ನಲ್ಲೇ ಎಲ್ಲೆಡೆ ತೀವ್ರ ನಿಗಾವಹಿಸಲಾಗಿದೆ.
from India & World News in Kannada | VK Polls https://ift.tt/2wtIsGk