ಫಾಸ್ಟ್‌ಟ್ಯಾಗ್‌ ರೀಡ್‌ ಆಗದಿದ್ದರೆ ಟೋಲ್‌ ಫ್ರೀ!

- ಕೇಶವ ಪ್ರಸಾದ್‌ ಬಿ. ಬೆಂಗಳೂರು ಟೋಲ್‌ ಪ್ಲಾಜಾಗಳಲ್ಲಿ ಅಳವಡಿಸಿರುವ ಎಲೆಕ್ಟ್ರಾನಿಕ್‌ ಟೋಲ್‌ ಕಲೆಕ್ಷನ್‌ ವ್ಯವಸ್ಥೆಯಲ್ಲಿನ ತಾಂತ್ರಿಕ ದೋಷಗಳಿಗೆ ಗ್ರಾಹಕರು ಹೊಣೆಗಾರರಲ್ಲ. ಟೋಲ್‌ ಪ್ಲಾಜಾದ ಸಮಸ್ಯೆಯ ಪರಿಣಾಮ ಮೂಲಕ ಶುಲ್ಕ ಪಾವತಿಗೆ ಸಾಧ್ಯವಾಗದಿದ್ದರೆ, ನಗದು ರೂಪದಲ್ಲಿ ಶುಲ್ಕ ಪಾವತಿಸದೆ ಉಚಿತವಾಗಿ ಮುಂದುವರಿಯ ಬಿಡಬಹುದು ಎಂಬ ಅಂಶ ನಿಯಮಾವಳಿಗಳ ಪಟ್ಟಿಯಲ್ಲಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ 2018ರ ಮೇ 7ರಂದು ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಎಲೆಕ್ಟ್ರಾನಿಕ್‌ ಟೋಲ್‌ ಸಂಗ್ರಹ ವ್ಯವಸ್ಥೆಗೆ ಸಂಬಂಧಿಸಿ ಈ ನಿಯಮಾವಳಿ ಇದೆ. ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಗದಿ ಮತ್ತು ಸಂಗ್ರಹ ಕುರಿತ ಉಪ ನಿಯಮದ ಪ್ರಕಾರ, ವಾಹನ ಬಳಕೆದಾರ ಸಮರ್ಪಕವಾಗಿರುವ ಫಾಸ್ಟ್‌ಟ್ಯಾಗ್‌ ಅಳವಡಿಸಿದ್ದರೆ ಹಾಗೂ ಅದಕ್ಕೆ ಸಂಬಂಧಿಸಿದ ಬ್ಯಾಂಕ್‌ ಖಾತೆಯಲ್ಲಿ ಸಾಕಷ್ಟು ಬ್ಯಾಲೆನ್ಸ್‌ ಇದ್ದರೆ ಯೋಚಿಸಬೇಕಿಲ್ಲ. ಟೋಲ್‌ ಪ್ಲಾಜಾದ ಸ್ಕ್ಯಾ‌ನರ್‌ಗಳಲ್ಲಿ ಟ್ಯಾಗ್‌ ರೀಡ್‌ ಆಗದಿದ್ದರೆ ಉಚಿತವಾಗಿ ಸಾಗಲು ಬಿಡಬೇಕು. ಜತೆಗೆ ಜೀರೊ ಟ್ರಾನ್ಸಕ್ಷನ್‌ ರಿಸಿಪ್ಟ್‌ ಅನ್ನೂ ಕೊಡಬೇಕು. ಕಾಗದದಲ್ಲೇ ಉಳಿದ ವಿಸ್ತೃತ ಮಾರ್ಗದರ್ಶಿ!ಆರ್‌ಬಿಐ ಸ್ಥಾಪಿಸಿರುವ ನ್ಯಾಷನಲ್‌ ಪೇಮೆಂಟ್ಸ್‌ ಕಾರ್ಪೊರೇಷನ್‌ (ಎನ್‌ಪಿಸಿಐ) ಟೋಲ್‌ ಪ್ಲಾಜಾಗಳಲ್ಲಿ ಎಲೆಕ್ಟ್ರಾನಿಕ್‌ ಪದ್ಧತಿಯಲ್ಲಿ ಟೋಲ್‌ ಸಂಗ್ರಹಿಸುವ ಬಗ್ಗೆ ವಿವರವಾದ ಮಾರ್ಗದರ್ಶಿಯನ್ನು ಪ್ರಕಟಿಸಿದೆ. ಆದರೆ ಈ ಬಗ್ಗೆ ಗ್ರಾಹಕರಿಗೆ ಹೆಚ್ಚಿನ ಅರಿವಿಲ್ಲ. ಶೇ.50ರಷ್ಟು ವಾಹನ ಮಾಲೀಕರು ಫಾಸ್ಟ್‌ ಟ್ಯಾಗ್‌ ಖರೀದಿಸಿದ್ದರೂ, ಟೋಲ್‌ ಪ್ಲಾಜಾಗಳಲ್ಲಿ ಮೂಲ ಸೌಕರ್ಯದ ಕೊರತೆ ಇದೆ. ಫಾಸ್ಟ್‌ ಟ್ಯಾಗ್‌ಗೆ ಸಂಬಂಧಿಸಿ ಸಮಗ್ರ ಮಾರ್ಗದರ್ಶಿ ಮತ್ತು ನಿಯಮಾವಳಿ ಇದೆ. ಗ್ರಾಹಕ ಸ್ನೇಹಿಯಾದ ಹಲವು ನೀತಿಗಳಿವೆ. ಆದರೆ ಸಮರ್ಪಕವಾಗಿ ಅನುಷ್ಠಾನ ಆಗುತ್ತಿಲ್ಲ. ಇದರ ಪರಿಣಾಮ ವಾಹನ ಬಳಕೆದಾರರು ಸಮಸ್ಯೆ ಎದುರಿಸುವಂತಾಗಿದೆ. ಟೋಲ್‌ ಪ್ಲಾಜಾಗಳ ಅವ್ಯವಸ್ಥೆ, ಬ್ಯಾಂಕ್‌ಗಳ ನೆಟ್‌ವರ್ಕ್ ಸಮಸ್ಯೆಯಿಂದ ಫಾಸ್ಟ್‌ ಟ್ಯಾಗ್‌ ಬಳಕೆ ಗೊಂದಲಮಯವಾಗಿದೆ. -ಕೆ. ರಾಧಾಕೃಷ್ಣ ಹೊಳ್ಳ, ಕರ್ನಾಟಕ ಟ್ರಾವೆಲ್‌ ಆಪರೇಟರ್‌ ಸಂಘ


from India & World News in Kannada | VK Polls https://ift.tt/2QeC2Co

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...