ಬಜೆಟ್‌ 2020: ಪರಿಸರ ಸಂರಕ್ಷಣೆಗೆ 4,400, ಆರೋಗ್ಯ ಕ್ಷೇತ್ರಕ್ಕೆ 69,000 ಕೋಟಿ ಘೋಷಣೆ

ಹೊಸದಿಲ್ಲಿ: ಕೇಂದ್ರ ಯಲ್ಲಿ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಲಾಗಿದ್ದು 4,400 ಕೋಟಿ ಅನುದಾನವನ್ನು ವಿತ್ತ ಸಚಿವೆ ಘೋಷಣೆ ಮಾಡಿದ್ದಾರೆ. ಪರಿಸರ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಹೆಚ್ಚಿನ ಒತ್ತು ನೀಡುತ್ತದೆ ಎಂದರು. ಅಲ್ಲದೆ ಹೆಚ್ಚಿನ ಪ್ರಮಾಣದ ಪರಿಸರ ಮಾಲಿನ್ಯ ಉಂಟುಮಾಡುವ ವಿಷಕಾರಿ ಅನಿಲ ಹೊರಸೂಸುವ ವಿದ್ಯುತ್ ಘಟಕಗಳನ್ನು ಮುಚ್ಚಲಾಗುವುದು ಎಂದು ಬಜೆಟ್‌ನಲ್ಲಿ ಘೋಷಣೆ ಮಾಡಿದರು. ಯಾವ ಯಾವ ಕ್ಷೇತ್ರಕ್ಕೆ ಎಷ್ಟೆಷ್ಟು ? ಪರಿಸರ ಸಂರಕ್ಷಣೆ : 4,400 ಕೋಟಿ ಆರೋಗ್ಯ ಕ್ಷೇತ್ರ: 69,000 ಕೋಟಿ ಶಿಕ್ಷಣ ಕ್ಷೇತ್ರ: 99,300 ಕೋಟಿ ಮಹಿಳಾ ಕಲ್ಯಾಣ - 28,600 ಕೋಟಿ ಮಕ್ಕಳ ಪೌಷ್ಠಿಕತೆ - 35,600 ಕೋಟಿ ಹಿಂದುಳಿದ ವರ್ಗಗಳ ಅಭಿವೃದ್ದಿ: 85,000 ಕೋಟಿ


from India & World News in Kannada | VK Polls https://ift.tt/2S5T8lT

ರೈತರು ಅನ್ನದಾತರಷ್ಟೇ ಅಲ್ಲ, ವಿದ್ಯುತ್‌ ದಾತರೂ ಹೌದು: ನಿರ್ಮಲಾ ಸೀತಾರಾಮನ್‌

ಹೊಸದಿಲ್ಲಿ: ಬರಡು ಭೂಮಿಯಲ್ಲೂ ರೈತರಿಗೆ ಆದಾಯ ಬರುವಂತೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಪ್ರಮುಖ ನಿರ್ಧಾರ ಕೈಗೊಂಡಿದೆ. ಬರಡು ಭೂಮಿಯಲ್ಲಿ ಸಾವಯವ ಕೃಷಿ ಮಾಡಲು ರೈತರಿಗೆ ಹಣಕಾಸು ನೆರವು ನೀಡುವುದಾಗಿ ಘೋಷಿಸಿದ ವಿತ್ತ ಸಚಿವೆ ಪಂಪ್‌ಸೆಟ್‌ಗಳಿಗೆ ಅಳವಡಿಸಲು ಸೋಲಾರ್‌ ಗ್ರಿಡ್‌ಗಳನ್ನು ನೀಡುವುದಾಗಿ ತಿಳಿಸಿದರು. ಸಂಸತ್ತಿನಲ್ಲಿ ಶನಿವಾರ ಕೇಂದ್ರ ಬಜೆಟ್‌ ಮಂಡನೆ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ರೈತರಿಗೆ ಸುಮಾರು 15 ಲಕ್ಷ ಸೋಲಾರ್‌ ಪಂಪ್‌ಸೆಟ್‌ಗಳನ್ನು ವಿತರಿಸುವುದಾಗಿ ತಿಳಿಸಿದರು. ರೈತರು ಅನ್ನದಾತರು ಮಾತ್ರವಲ್ಲ, ವಿದ್ಯುತ್‌ದಾತರೂ ಹೌದು ಎಂದು ಉಲ್ಲೇಖಿಸಿ, ರೈತರು ಹೆಚ್ಚುವರಿಯಾಗಿ ಉತ್ಪಾದಿಸಿದ ವಿದ್ಯುತ್‌ಅನ್ನು ಗ್ರಿಡ್‌ ಮೂಲಕ ಕೇಂದ್ರ ಸರಕಾರವೇ ಖರೀದಿಸಲಿದೆ. ಈ ಮೂಲಕ ಬರಡು ಭೂಮಿಯಲ್ಲೂ ರೈತರು ಆದಾಯ ಗಳಿಸಬಹುದು ಎಂದರು. ಬರಡು ಭೂಮಿಯಲ್ಲಿ ಸಾವಯವ ಕೃಷಿಗೆ ಧನ ಸಹಾಯ ಮಾಡುವುದರಿಂದ ಕೃಷಿಕರು ಹೆಚ್ಚಾಗಿ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡರೆ ಬರಡು ಭೂಮಿಯ ಫಲವತ್ತತೆ ಅಭಿವೃದ್ಧಿಯಾಗಲಿದೆ. ಸೋಲಾರ್‌ ಗ್ರಿಡ್‌ ಪಂಪ್‌ಸೆಟ್‌ ವಿತರಣೆ ಮತ್ತು ಪಂಪ್‌ಸೆಟ್‌ಗಳಿಗೆ ಸೋಲಾರ್‌ ಗ್ರಿಡ್‌ ಅಳವಡಿಕೆಗೆ ಸಹಾಯ ಮಾಡುವುದರಿಂದ ರೈತರು ಹೆಚ್ಚಿನ ವಿದ್ಯುತ್‌ ಉತ್ಪಾದಿಸಬಹುದು. ಹೆಚ್ಚುವರಿಯಾಗಿ ಉತ್ಪಾದನೆಯಾದ ವಿದ್ಯುತ್‌ಅನ್ನು ಕೇಂದ್ರ ಸರಕಾರವೇ ಖರೀದಿಸುವುದಾಗಿ ಘೋಷಣೆ ಮಾಡಿದ್ದು ಬರಡು ಭೂಮಿಯಲ್ಲೂ ಹೆಚ್ಚಿನ ಆದಾಯ ಗಳಿಸಿದಂತೆ ಆಗುತ್ತದೆ.


from India & World News in Kannada | VK Polls https://ift.tt/2RPhJMW

ಬಜೆಟ್‌ 2020:‘ತೆರಿಗೆದಾರರಿಗೆ ಕಿರುಕುಳ ನೀಡಲ್ಲ’ ವಿತ್ತ ಸಚಿವರ ಭರವಸೆ

ಹೊಸದಿಲ್ಲಿ: ದೇಶದ ತೆರಿಗೆದಾರರಿಗೆ ಯಾವುದೇ ರೀತಿಯ ಕಿರುಕುಳ ನೀಡುವುದಿಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನಲ್ಲಿ ಭರವಸೆ ಕೊಟ್ಟಿದ್ದಾರೆ. ದೇಶದಲ್ಲಿ ತೆರಿಗೆದಾರರಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ಉದ್ಯಮ ವಲಯದ ಆರೋಪದ ಬೆನ್ನಲ್ಲೇ ವಿತ್ತ ಸಚಿವೆ ಈ ಹೇಳಿಕೆ ನೀಡಿರುವುದು ಮಹತ್ವ ಪಡೆದುಕೊಂಡಿದೆ. ದೇಶದ ತೆರಿಗೆದಾರರು ಕಿರುಕುಳದಿಂದ ಮುಕ್ತರಾಗಿದ್ದಾರೆ ಎಂದ ಅವರು ತೆರಿಗೆದಾರರ ಮೇಲೆ ಯಾವುದೇ ಅರೀತಿಯ ಕಿರುಕುಳ ಇಲ್ಲ ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ದೇಶದಲ್ಲಿ ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಪರಿಸರ ಮಾಲಿನ್ಯ ತಡೆಗೆ ಒತ್ತು ನೀಡುವ ನಿಟ್ಟಿನಲ್ಲಿ 4,400 ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದಿದ್ದಾರೆ. ಅಲ್ಲದೆ ಹೆಚ್ಚಿನ ಪ್ರಮಾಣದ ಪರಿಸರ ಮಾಲಿನ್ಯ ಉಂಟುಮಾಡುವ ವಿಷಕಾರಿ ಅನಿಲ ಹೊರಸೂಸುವ ವಿದ್ಯುತ್ ಘಟಕಗಳನ್ನು ಮುಚ್ಚಲಾಗುವುದು ಎಂದು ಇದೇ ವೇಳೆ ಘೋಷಣೆ ಮಾಡಿದರು.


from India & World News in Kannada | VK Polls https://ift.tt/36OURRE

ಬಜೆಟ್‌ 2020: ಬೆಂಗಳೂರು ಸಬ್ ಅರ್ಬನ್ ರೈಲ್ವೇ ಯೋಜನೆಗೆ ಕೇಂದ್ರದಿಂದ ಶೇ. 60ರಷ್ಟು ಅನುದಾನ

ಹೊಸದಿಲ್ಲಿ: ಬೆಂಗಳೂರು ಸಬ್‌ ಅರ್ಬನ್ ರೈಲ್ವೇ ಯೋಜನೆಗೆ ಕೇಂದ್ರದಿಂದ ಶೇ. 60 ರಷ್ಟು ಅನುದಾನ ನೀಡಲಾಗುವುದು ಎಂದು ವಿತ್ತ ಸಚಿವೆ ಬಜೆಟ್‌ನಲ್ಲಿ ಮಹತ್ವದ ಘೋಷಣೆ ಮಾಡಿದ್ದಾರೆ. ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆ ಒಟ್ಟು 18,600 ಕೋಟಿ ವೆಚ್ಚದ ಯೋಜನೆಯಾಗಿದೆ. ಈ ಪೈಕಿ 10,800 ಕೋಟಿ ಅನುದಾನ ಕೇಂದ್ರದಿಂದ ದೊರೆಯಲಿದೆ. ಅಲ್ಲದೆ ಚೆನೈ-ಬೆಂಗಳೂರು ಎಕ್ಸ್‌ಪ್ರೆಸ್‌ ವೇ ಸಂಚಾರ ಮುಕ್ತವಾಗಲಿದೆ. 2023 ರೊಳಗೆ ದೆಹಲಿ-ಮುಂಬೈ ಎಕ್ಸ್‌ಪ್ರೆಸ್ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಬಜೆಟ್‌ನಲ್ಲಿ ವಿತ್ತ ಸಚಿವರು ಘೋಷಣೆ ಮಾಡಿದ್ದಾರೆ.


from India & World News in Kannada | VK Polls https://ift.tt/2RKbFVL

ಕೃಷಿಕರ ಏಳ್ಗೆಗೆ ಕೃಷಿ ಉಡಾನ್‌, ಕೃಷಿ ರೈಲು!

ಹೊಸದಿಲ್ಲಿ: ನಿರೀಕ್ಷೆಯಂತೆ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಈ ಬಾರಿಯ ಬಜೆಟ್‌ನಲ್ಲಿ ಹೆಚ್ಚು ಒತ್ತು ನೀಡಲಾಗಿದ್ದು, ಕೃಷಿ ಉತ್ಪನ್ನಗಳ ಸಾಗಣೆಗೆ ಅನುಕೂಲವಾಗಿಸುವ ನಿಟ್ಟಿನಲ್ಲಿ ಕೃಷಿ ಉಡಾನ್‌ ಮತ್ತು ಕೃಷಿ ರೈಲು ಎಂಬ ವಿಭಿನ್ನ ಯೋಜನೆಗಳನ್ನು ವಿತ್ತ ಸಚಿವೆ ಘೋಷಣೆ ಮಾಡಿದರು. 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸಲು 16 ಅಂಶಗಳ ಯೋಜನೆಯನ್ನು ಮುಂಗಡ ಪತ್ರದಲ್ಲಿ ಮಂಡಿಸಿದರು. ಹೆಚ್ಚು ನೀರನ್ನು ಆಶ್ರಯಿಸುವ ಬೆಳೆಗಳ ಬದಲಿಗೆ ವೈವಿಧ್ಯಮಯ ಆಹಾರ ಧಾನ್ಯಗಳ ಉತ್ಪಾದನೆಗೆ ಹೆಚ್ಚು ಉತ್ತೇಜನ ನೀಡಲಾಗಿದ್ದು, ಬರಡು ಭೂಮಿಯಲ್ಲಿ ಸಾವಯವ ಕೃಷಿಗೆ ಹಣಕಾಸು ನೆರವು ನೀಡುವುದಾಗಿ ಘೋಷಿಸಿದರು. ಪ್ರಧಾನ ಮಂತ್ರಿ ಕೃಷಿ ಸಮ್ಮಾನ್‌ ಯೋಜನೆ ಸೇರಿದಂತೆ ಹಲವು ಕೃಷಿ ಪರ ಯೋಜನೆಗಳು ರೈತರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಣೆ ಮಾಡಿವೆ. ಪಂಪ್‌ಸೆಟ್‌ಗಳಿಗೆ ಸೋಲಾರ್‌ ಶಕ್ತಿ ಒದಗಿಸುವ ಯೋಜನೆ ಘೋಷಣೆ ಮಾಡಿದ ಸೀತಾರಾಮನ್‌ ರೈತರು ಅನ್ನದಾತರು ಮಾತ್ರವಲ್ಲ, ವಿದ್ಯುತ್‌ದಾತರೂ ಹೌದು. ರೈತರು ಉತ್ಪಾದಿಸುವ ಹೆಚ್ಚುವರಿ ವಿದ್ಯುತ್‌ ಅನ್ನು ಗ್ರಿಡ್‌ ಮೂಲಕ ಸರಕಾರವೇ ಖರೀದಿಸಲಿದೆ. ಈ ಮೂಲಕ ಬರಡು ಭೂಮಿಯಲ್ಲೂ ರೈತರು ಆದಾಯ ಗಳಿಸುವ ಅವಕಾಶ ಸಿಗಲಿದೆ ಎಂದರು.


from India & World News in Kannada | VK Polls https://ift.tt/37NSkZw

ಬಜೆಟ್‌ 2020: ಅರುಣ್ ಜೇಟ್ಲಿ ನೆನಪಿಸಿಕೊಂಡ ನಿರ್ಮಲಾ ಸೀತಾರಾಮನ್

ಹೊಸದಿಲ್ಲಿ: ಬಹುನಿರೀಕ್ಷಿತ ಮಂಡನೆ ಸಂದರ್ಭದಲ್ಲಿ ಹಣಕಾಸು ಸಚಿವರಾಗಿದ್ದ ದಿವಂಗತ ಅರುಣ್ ಜೇಟ್ಲಿಯವರನ್ನು ಕೇಂದ್ರ ವಿತ್ತ ಸಚಿವೆ ನೆನಪಿಸಿಕೊಂಡರು. ಎರಡನೇ ಬಾರಿ ಬಜೆಟ್‌ ಮಂಡನೆ ಮಾಡುತ್ತಿರುವ ನಿರ್ಮಲಾ ಸೀತಾರಾಮನ್‌ ಇಂದಿನ ಹಣಕಾಸು ಸ್ಥಿತಿ ಉತ್ತಮವಾಗಿರಲು ಕಾರಣ ಅರುಣ್ ಜೇಟ್ಲಿ ಎಂದರು. ಈ ಸಂದರ್ಭದಲ್ಲಿ ಆಡಳಿತ ಪಕ್ಷದ ಸದಸ್ಯರು ಇದಕ್ಕೆ ಮೇಜು ತಟ್ಟಿ ಸಮ್ಮತಿಸಿದರು. ಇದೇ ವೇಳೆ ಜಿಎಸ್‌ಟಿ ಜಾರಿಯಿಂದ ಭಾರತವನ್ನು ಏಕತೆಯತ್ತ ಕೊಂಡೊಯ್ಯಲು ಸಾಧ್ಯವಾಗುತ್ತಿದೆ. ಈ ಹಣಕಾಸು ವರ್ಷದಲ್ಲಿ 40 ಕೋಟಿ ಜನರು ಜಿಎಸ್‌ಟಿ ಪಾವತಿಸಿದ್ದಾರೆ. ಜಿಎಸ್‌ಟಿಯಿಂದ ರಿಟರ್ನ್ಸ್ ಸಲ್ಲಿಕೆ ಮಾಡಲು ಸುಲಭವಾಗಿದೆ. ಸಾರಿಗೆ ವಲಯದಲ್ಲಿ ಭಾರೀ ಅಭಿವೃದ್ದಿಗೆ ಜಿಎಸ್‌ಟಿ ಕಾರಣವಾಗಿದೆ ಎಂದರು. ಶಾಲಿಮಾರ್ ತೋಟದಲ್ಲಿ ಅರಳುವ ಹೂವಿನಂತೆ ನಮ್ಮ ದೇಶ ಬಜೆಟ್‌ ಮಂಡನೆ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶಾಯರಿಯೊಂದನ್ನು ಹೇಳುವ ಮೂಲಕ ಗಮನ ಸೆಳೆದರು. ನಮ್ಮ ದೇಶ ಶಾಲಿಮಾರ್ ಹೂವಿನಂತೆ ಅರಳುವ ದೇಶವಾಗಿದೆ. ತಮ್ಮ ದೇಶ ವಿಶ್ವದಲ್ಲೇ ಎಲ್ಲರಿಗೂ ಇಷ್ಟವಾಗುವ ದೇಶ. ಯುವಕರ ಬಿಸಿ ರಕ್ತ ಇದ್ದಂತೆ ನಮ್ಮ ದೇಶ ಎನ್ನುವ ಶಾಯರಿಯನ್ನು ನುಡಿದು ಗಮನ ಸೆಳೆದರು.


from India & World News in Kannada | VK Polls https://ift.tt/37Z5aUA

ನಿರ್ಭಯಾ ಹಂತಕರಿಗೆ ಇನ್ನೂ ಇದೆ ಕಾನೂನು ಹೋರಾಟದ ಅವಕಾಶ: 'ನ್ಯಾಯ' ಸದ್ಯಕ್ಕೆ ನಾಟ್ ರೀಚಬಲ್..!

ಹೊಸ ದಿಲ್ಲಿ: 2012ರ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ನಾಲ್ವರು ಅಪರಾಧಿಗಳ ಗಲ್ಲು ಶಿಕ್ಷೆಗೆ ದಿಲ್ಲಿ ಕೋರ್ಟ್ ತಡೆ ನೀಡಿದೆ. ಫೆಬ್ರವರಿ 1ರಂದು ಎಲ್ಲಾ ನಾಲ್ಕು ಅಪರಾಧಿಗಳಿಗೂ ಗಲ್ಲು ಶಿಕ್ಷೆ ನಿಗದಿಯಾಗಿದ್ದ, ಸಂಬಂಧ ಹೊರಡಿಸಲಾಗಿದ್ದ ಡೆತ್‌ ವಾರೆಂಟ್‌ ಕೂಡಾ ರದ್ದುಗೊಂಡಿದೆ. ಜನವರಿ 7 ಹಾಗೂ 17ರಂದು ಎರಡೆರಡು ಬಾರಿ ಅಪರಾಧಿಗಳ ಗಲ್ಲು ಶಿಕ್ಷೆಗೆ ಡೆತ್‌ ವಾರೆಂಟ್ ಜಾರಿಯಾಗಿತ್ತು. ಇದೀಗ ಅನಿರ್ದಿಷ್ಟಾವಧಿಗೆ ಗಲ್ಲು ಶಿಕ್ಷೆ ರದ್ದಾಗಿದೆ. ಹಾಗಾದ್ರೆ ಮುಂದೇನು..? ಜೈಲು ನಿಯಮಾವಳಿಗಳ ಪ್ರಕಾರ, ಒಬ್ಬನಿಗಿಂತಾ ಹೆಚ್ಚು ಕೈದಿಗೆ ಏಕಕಾಲಕ್ಕೆ ಗಲ್ಲು ಶಿಕ್ಷೆ ವಿಧಿಸಬೇಕಿದ್ದರೆ, ಎಲ್ಲಾ ಕೈದಿಗಳ ಕಾನೂನು ಹೋರಾಟದ ಆಯ್ಕೆಗಳೆಲ್ಲಾ ಮುಗಿದಿರಬೇಕು. 2017ರಲ್ಲಿ ಸುಪ್ರೀಂ ಕೋರ್ಟ್‌ ಗಲ್ಲು ತೀರ್ಪು ನೀಡಿದ ಬಳಿಕ, ನಾಲ್ವರೂ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಎಲ್ಲರ ಮರುಪರಿಶೀಲನಾ ಅರ್ಜಿಗಳೂ ತಿರಸ್ಕೃತಗೊಂಡವು. ಬಳಿಕ ಮುಕೇಶ್ ಸಿಂಗ್, ವಿನಯ್ ಶರ್ಮಾ ಹಾಗೂ ಅಕ್ಷಯ್ ಠಾಕೂರ್ ಕ್ಯುರೇಟಿವ್ ಅರ್ಜಿ ಸಲ್ಲಿಸಿದ್ದರು. ಎಲ್ಲಾ ಕ್ಯುರೇಟಿವ್ ಅರ್ಜಿಗಳು ತಿರಸ್ಕೃತಗೊಂಡವು. ಇದೀಗ ಪವನ್ ಗುಪ್ತಾ ಕ್ಯುರೇಟಿವ್ ಅರ್ಜಿ ಸಲ್ಲಿಕೆ ಬಾಕಿ ಉಳಿದಿದೆ. ಇದಾದ ಬಳಿಕ ರಾಷ್ಟ್ರಪತಿ ಬಳಿ ಕ್ಷಮಾದಾನ ಅರ್ಜಿ ಸಲ್ಲಿಸಿ, ರಾಷ್ಟ್ರಪತಿಗಳು ಕ್ಷಮಾದಾನವನ್ನು ತಿರಸ್ಕರಿಸಿದರೆ ಬಳಿಕ ಮತ್ತೆ ಇದೇ ವಿಚಾರವನ್ನು ಸುಪ್ರೀಂ ಕೋರ್ಟ್‌ಗೆ ಕೊಂಡೊಯ್ಯೋದು ಅಪರಾಧಿಗಳ ಪ್ಲಾನ್. ಈ ಪೈಕಿ ಮುಕೇಶ್ ಎಂಬಾತ ರಾಷ್ಟ್ರಪತಿಗಳು ಕ್ಷಮಾದಾನ ಅರ್ಜಿ ತಿರಸ್ಕರಿಸಿದ ವಿಚಾರವನ್ನೂ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿ ತನ್ನೆಲ್ಲಾ ಕಾನೂನು ಆಯ್ಕೆಗಳನ್ನೂ ಖಾಲಿ ಮಾಡಿಕೊಂಡಿದ್ಧಾನೆ. ಇದೀಗ ಡೆತ್ ವಾರೆಂಟ್ ದಿನಾಂಕವನ್ನೇ ಅನಿರ್ದಿಷ್ಟಾವಧಿಗೆ ಮುಂದೂಡಿರುವುದು ಅಪರಾಧಿಗಳಿಗೆ ವರವಾಗಿ ಪರಿಣಮಿಸಿದೆ. ಏಕೆಂದರೆ, ದಿಲ್ಲಿ ಕೋರ್ಟ್‌ ಮತ್ತೆ ಡೆತ್ ವಾರೆಂಟ್ ಜಾರಿಗೊಳಿಸುವವರೆಗೂ ಅಪರಾಧಿಗಳು ಯಾವುದೇ ಕಾನೂನು ಹೋರಾಟಕ್ಕೆ ಇಳಿಯದೇ ತಣ್ಣಗಿರುತ್ತಾರೆ. ಏಕೆಂದರೆ, ಸದ್ಯ ಅವರಿಗೆ ಡೆಡ್‌ಲೈನ್‌ನ ಭಯವಿಲ್ಲ. ಮತ್ತೊಮ್ಮೆ ಡೆತ್ ವಾರೆಂಟ್ ಜಾರಿಯಾದ ಕೂಡಲೇ ಬಾಕಿ ಉಳಿದಿರುವ ಇನ್ನಿಬ್ಬರು ಅಪರಾಧಿಗಳು ತಮ್ಮ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿಗೆ ಸಲ್ಲಿಸುತ್ತಾರೆ. ಆ ನಂತರ, ಈಗ ನಡೆದಿರುವಂತೆಯೇ ಡ್ರಾಮಾ ಪುನರಾವರ್ತನೆಯಾಗುತ್ತೆ. ಹೀಗಾಗಿ, ಗಲ್ಲು ಶಿಕ್ಷೆ ಜಾರಿ ಸಾಕಷ್ಟು ದಿನ ತಡ ಆಗೋದು ಶತಃಸಿದ್ಧ. ಒಂದು ಹಂತದಲ್ಲಿ ಅಪರಾಧಿಗಳಿಗೆ ತಮ್ಮೆಲ್ಲಾ ಕಾನೂನು ಹೋರಾಟದ ದಾರಿ ಅಂತ್ಯವಾದ ಬಳಿಕ 14 ದಿನಗಳ ಕಾಲ ಗಲ್ಲು ಶಿಕ್ಷೆ ಜಾರಿಗೆ ಅವಕಾಶ ಕೊಡಲೇ ಬೇಕು. ಹೀಗಾಗಿ, ನಿರ್ಭಯಾಗೆ ನ್ಯಾಯ ಸದ್ಯಕ್ಕಿಲ್ಲವೇ ಎಂಬ ಪ್ರಶ್ನೆ ಎದ್ದಿದೆ.


from India & World News in Kannada | VK Polls https://ift.tt/37MUXKR

ನಿರ್ಭಯಾ ಅತ್ಯಾಚಾರ ಪ್ರಕರಣ: ವಿನಯ್‌ ಶರ್ಮಾ ಕ್ಷಮಾದಾನ ಅರ್ಜಿ ತಿರಸ್ಕರಿಸಿದ ರಾಷ್ಟ್ರಪತಿ; ಗಲ್ಲು ಶಿಕ್ಷೆ ಫಿಕ್ಸ್

ಹೊಸದಿಲ್ಲಿ: ಹಂತಕರಿಗೆ ಗಲ್ಲು ಶಿಕ್ಷೆ ಪಕ್ಕಾ ಆಗಿದ್ದು, ಅಪರಾಧಿ ವಿನಯ್‌ ಶರ್ಮಾರ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿಗಳು ರಾಮನಾಥ್‌ ಕೋವಿಂದ್‌ ತಿರಸ್ಕರಿಸಿದ್ದಾರೆ. ಇಂದು ನಡೆಯಬೇಕಿದ್ದ ಅತ್ಯಾಚಾರಿಗಳ ಗಲ್ಲು ಶಿಕ್ಷೆ ಮುಂದೂಡಲಾಗಿದೆಯಾಗಿದೆಯಾದರೂ ಗಲ್ಲು ಶಿಕ್ಷೆ ಜಾರಿಯಾಗುವುದು ಪಕ್ಕಾ ಆಗಿದೆ. 2012ರ ನಿರ್ಭಯಾ ಅತ್ಯಾಚಾರ ಪ್ರಕರಣದ ಪೈಕಿ ಅಪರಾಧಿಗಳಲ್ಲಿ ಒಬ್ಬರಾದ ವಿನಯ್‌ ಶರ್ಮಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಮನಾಥ್‌ ಕೋವಿಂದ್‌ ತಿರಸ್ಕರಿಸಿದ್ದಾರೆ. ವಿನಯ್‌ ಶರ್ಮಾ ಬುಧವಾರ ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿ ಸಲ್ಲಿಸಿದ್ದರು. ಈಗಾಗಲೇ ವಿನಯ್‌ ಶರ್ಮಾರ ಕ್ಯುರೇಟಿವ್‌ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ವಿನಯ್ ಶರ್ಮಾ ಕ್ಷಮಾದಾನ ಅರ್ಜಿ ಬಾಕಿ ಇದ್ದ ಕಾರಣ ಓರ್ವ ಅಪರಾಧಿಯ ಅರ್ಜಿ ರಾಷ್ಟ್ರಪತಿ ಬಳಿ ಇದ್ದರೆ ಉಳಿದ ಯಾವ ಅಪರಾಧಿಯನ್ನು ಗಲ್ಲಿಗೇರಿಸಲು ಸಾಧ್ಯವಿಲ್ಲ ಎಂದು ಅಪರಾಧಿಗಳ ಪರ ವಕೀಲ ಹೇಳಿದ್ದರು. ಸುಪ್ರೀಂಕೋರ್ಟ್ ನಿಯಮಗಳು ಇದೇ ರೀತಿ ಇದ್ದ ಕಾರಣ ದೆಹಲಿ ಕೋರ್ಟ್ ನಿರ್ಭಯಾ ಹಂತಕರ ಗಲ್ಲು ಶಿಕ್ಷೆಯನ್ನು ಮುಂದೂಡಿದೆ. ಈ ಸುದ್ದಿ ಓದಿ: ಇದನ್ನೂ ಓದಿ:


from India & World News in Kannada | VK Polls https://ift.tt/37J1xSK

ಬಜೆಟ್‌ 2020 : ಅಮ್ಮ ಬಜೆಟ್‌ ಮಂಡಿಸೋದನ್ನು ನೋಡಲು ಬಂದ ಪುತ್ರಿ !

ಹೊಸದೆಹಲಿ: ಬಹುನಿರೀಕ್ಷಿತ ಕೇಂದ್ರ ಮಂಡನೆ ಹಿನ್ನೆಲೆಯಲ್ಲಿ ಎಲ್ಲರ ಚಿತ್ತ ವಿತ್ತ ಸಚಿವೆ ಅವರತ್ತ ಇದೆ. ಬಜೆಟ್ ದಾಖಲೆಯೊಂದಿಗೆ ಸಂಪತ್‌ಗೆ ನಿರ್ಮಲಾ ಸೀತಾರಾಮನ್ ಆಗಮಿಸಿದ್ದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಭಾಗಿಯಾದರು. ಈ ನಡುವೆ ಅಮ್ಮ ಬಜೆಟ್‌ ಮಂಡನೆ ಮಾಡುವುದನ್ನು ನೋಡಲು ನಿರ್ಮಲಾ ಸೀತಾರಾಮನ್ ಪುತ್ರಿ ಪರಕಲಾ ವಂಗಮಯಿ ಕೂಡಾ ಸಂಸತ್‌ಗೆ ಆಗಮಿಸಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇದೀಗ ಎರಡನೇ ಬಾರಿ ಬಜೆಟ್‌ ಮಂಡನೆ ಮಾಡುವವರಿದ್ದಾರೆ. 11 ಗಂಟೆಗೆ ಬಜೆಟ್‌ ಮಂಡನೆ ನಡೆಯಲಿದ್ದು ಈ ಬಾರಿಯ ಬಜೆಟ್‌ನಲ್ಲಿ ಭಾರೀ ನಿರೀಕ್ಷೆಗಳು ಇವೆ. ದೇಶ ಆರ್ಥಿಕ ಹಿನ್ನಡೆಯಿಂದ ದೇಶ ತತ್ತರಿಸಿದ್ದು ಬಜೆಟ್‌ 2020ಯಲ್ಲಿ ಹೊಸ ಘೋಷಣೆಗಳು ಇರುವ ನಿರೀಕ್ಷೆಗಳಿವೆ. ಉದ್ಯೋಗ ಸೃಷ್ಟಿ , ಆರ್ಥಿಕ ಉತ್ತೇಜನಕ್ಕಾಗಿ ಕ್ರಮಗಳನ್ನು ಬಜೆಟ್‌ನಲ್ಲಿ ಪ್ರಕಟಿಸಬಹುದು ಎಂಬ ನಿರೀಕ್ಷೆ ಇವೆ.


from India & World News in Kannada | VK Polls https://ift.tt/2OhEuH3

ಅಂತಾರಾಷ್ಟ್ರೀಯ ಮಟ್ಟದ ಸಿಎಫ್‌ಎ ಪರೀಕ್ಷೆಯಲ್ಲಿ ಶಿರಸಿಯ ರಾಧಿಕಾ ಹೆಗಡೆ ತೇರ್ಗಡೆ

(ಉತ್ತರ ಕನ್ನಡ): ಭಾರತ, ಅಮೆರಿಕ, ಆಸ್ಪ್ರೇಲಿಯಾ, ಚೀನಾ, ಯುನೈಟೆಡ್‌ ಕಿಂಗಡಮ್‌ ಸೇರಿದಂತೆ ಪ್ರಪಂಚದ 178 ನಗರಗಳಲ್ಲಿ ನಡೆಯುವ ಅಂತಾರಾಷ್ಟ್ರೀಯ ಗುಣಮಟ್ಟದ ಸಿಎಫ್‌ಎ (ಚಾರ್ಟರ್ಡ್‌ ಫೈನಾನ್ಸಿಯಲ್‌ ಅನಾಲಿಸ್ಟ್‌) ಪರೀಕ್ಷೆಯಲ್ಲಿ ತಾಲೂಕಿನ ಹುಳಗೋಳದ ರಾಧಿಕಾ ಹೆಗಡೆ ತೇರ್ಗಡೆಯಾಗಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಮುಂಬಯಿ ಸೇರಿದಂತೆ ಏಕಕಾಲಕ್ಕೆ ಪ್ರಪಂಚದ ವಿವಿಧಡೆ ಈ ಪರೀಕ್ಷೆ ನಡೆದಿದ್ದು, ಕೇವಲ ಶೇ.42ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಳೆದ ಏಳು ವರ್ಷದಲ್ಲಿ ಇದೇ ಪ್ರಥಮ ಬಾರಿಗೆ ಇಷ್ಟು ಕಡಿಮೆ ಫಲಿತಾಂಶ ಬಂದಿದೆ. ಪ್ರತೀ ವರ್ಷ ಬದಲಾಗುವ ಪರೀಕ್ಷಾ ಮಾದರಿ ಇದಾಗಿದ್ದು, ಇದನ್ನು ಎದುರಿಸಲು ವಿದ್ಯಾರ್ಥಿ ಕನಿಷ್ಠ 300 ತಾಸು ಓದಲೇ ಬೇಕಾಗುತ್ತದೆ. ಕೇವಲ ಇಂಗ್ಲಿಷ್‌ ಭಾಷೆಯಲ್ಲಿ ಬರೆಯಲು ಅವಕಾಶವಿರುವ ಪರೀಕ್ಷೆ ಇದಾಗಿದ್ದು ವಾಣಿಜ್ಯ, ಆರ್ಥಿಕ ವಿಷಯಕ್ಕೆ ಸಂಬಂಧಿಸಿದ್ದಾಗಿದೆ. ಪರೀಕ್ಷೆ ಬರೆಯಬೇಕಾದರೆ ಒಬ್ಬ ವಿದ್ಯಾರ್ಥಿ 1150 ಡಾಲರ್‌ ಮೊತ್ತ ತುಂಬಬೇಕಾಗುತ್ತದೆ. ಈ ಪರೀಕ್ಷೆ ತೇರ್ಗಡೆ ಆದವರಿಗೆ ಪ್ರಪಂಚದ ಯಾವುದೇ ದೇಶದಲ್ಲಿ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಕೆಲಸ ಮಾಡಲು ಅವಕಾಶ ಸಿಗಲಿದೆ. ಕೃಷಿ ತಜ್ಞ ಡಾ. ಸತೀಶ ಹೆಗಡೆ ಮತ್ತು ಆರತಿ ಹೆಗಡೆ ದಂಪತಿ ಪುತ್ರಿ.


from India & World News in Kannada | VK Polls https://ift.tt/2GF2bVD

ತಂದೆ ಅಗಲಿಕೆ ನಡುವೆಯೂ ಬಜೆಟ್‌ ಪ್ರತಿಗಳ ಮುದ್ರಣ ಕಾರ್ಯ ಮುಗಿಸಿಕೊಟ್ಟ ಕುಲದೀಪ್‌

ಹೊಸದಿಲ್ಲಿ: ಬಜೆಟ್‌ಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಮುದ್ರಿಸುವ ಕಾರ್ಯ ನಿರ್ವಹಿಸುತ್ತಿದ್ದ ಅವರು ತಂದೆಯ ಅಗಲಿಕೆ ವಿತ್ತ ಸಚಿವಾಲಯ ವಿಷಾಧ ವ್ಯಕ್ತ ಪಡಿಸಿದೆ. ಬಜೆಟ್‌ ಕೆಲಸಗಳು ನಡೆಯುತ್ತಿದ್ದ ಸಂದರ್ಭ ಜನವರಿ 26 ರಂದು ಕುಲದೀಪ್‌ ಕುಮಾರ್‌ ಶರ್ಮಾ ಅವರ ತಂದೆ ಸಾವನ್ನಪ್ಪಿದರು. ವಿಚಾರ ತಿಳಿದ ಕುಲದೀಪ್‌ ದುಃಖತಪ್ತನಾದರೂ ರಾಷ್ಟ್ರದ ಕೆಲಸ ಮೊದಲು ಪೂರ್ಣಗೊಳಿಸಬೇಕು ಎಂದು ನಿರ್ಧರಿಸಿ ಕೆಲಸವನ್ನು ಮುಂದುವರಿಸಿದ್ದರು. ಮುದ್ರಣ ಕೇಂದ್ರದಲ್ಲಿ ಒಂದು ನಿಮಿಷವನ್ನು ವ್ಯಯಿಸದೆ ಬಜೆಟ್‌ ಪ್ರತಿಗಳನ್ನು ಮುದ್ರಿಸುವ ಕೆಲಸ ಮುಂದುವರಿಸಿದರು. ಬಜೆಟ್‌ ದಾಖಲೆ ಪತ್ರಗಳನ್ನು ಮುದ್ರಿಸುವ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದ ಶರ್ಮಾ ಅವರು ಬಜೆಟ್‌ ಪ್ರತಿಗಳ ಮುದ್ರಣ ಕೆಲಸದಲ್ಲಿ 31 ವರ್ಷಗಳ ಅನುಭವ ಹೊಂದಿದ್ದಾರೆ. ರಾಷ್ಟ್ರದ ಕೆಲಸದ ಬಗ್ಗೆ ಅಪಾರ ಶ್ರದ್ಧೆ ಹೊಂದಿರುವ ಶರ್ಮಾ ಅವರು ತಂದೆಯ ಅಗಲಿಕೆ ನಡುವೆ ಬಜೆಟ್‌ ಕೆಲಸವನ್ನು ಮುಗಿಸಿದ ನಂತರ ಮನೆಗೆ ತೆರಳಿದ ನಡೆ ಬಗ್ಗೆ ಸಾಮಾಜಿಕ ತಾಣಗಳಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. ಟ್ವೀಟ್‌ ಮೂಲಕ ವಿಷಾಧ ವ್ಯಕ್ತ ಪಡಿಸಿರುವ ವಿತ್ತ ಸಚಿವಾಲಯ ಕೆಲಸದ ಮೇಲಿನ ವಿಪರೀತ ಶ್ರದ್ಧೆಯ ಬಗ್ಗೆ ಕೊಂಡಾಡಿದೆ.


from India & World News in Kannada | VK Polls https://ift.tt/36HJv1P

ಸತತ 11 ಗಂಟೆಗಳ ಕಾರ್ಯಾಚರಣೆ, 23 ಮಕ್ಕಳನ್ನು ಒತ್ತೆಯಾಳಾಗಿರಿಸಿಕೊಂಡವನ ಹತ್ಯೆ

ಲಖನೌ: ಸತತ 11 ಗಂಟೆಗಳ ಕಾರ್ಯಾಚರಣೆಯಲ್ಲಿ ಕೈದಿಯೊಬ್ಬ ತನ್ನ ಮನೆಯಲ್ಲಿ ಇರಿಸಿಕೊಂಡಿದ್ದ 23 ಮಕ್ಕಳನ್ನು ಸುರಕ್ಷಿತವಾಗಿ ಕಾಪಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಜಾಮೀನು ಮೇಲೆ ಬಿಡುಗಡೆಯಾಗಿದ್ದ ಕೈದಿ ಸುಭಾಷ್‌ ಬಾಥಮ್‌ (40)ನನ್ನು ಪೊಲೀಸರು ಹತ್ಯೆಗೈದಿದ್ದು, ಸ್ಥಳೀಯರ ಏಟಿನಿಂದ ಗಾಯಗೊಂಡಿದ್ದ ಆತನ ಪತ್ನಿ ಸಹ ಮೃತಪಟ್ಟಿದ್ದಾಳೆ. ಉತ್ತರಪ್ರದೇಶದ ಫರೂಖಾಬಾದ್‌ನ ಕಸಾರಿಯಾ ಗ್ರಾಮದ ಸುಭಾಷ್‌ ಎಂಬಾತ ಮಗಳ ಜನ್ಮದಿನಾಚರಣೆ ಎಂದು ಹೇಳಿ ಸ್ಥಳೀಯ 23 ಮಕ್ಕಳನ್ನು ಗುರುವಾರ ಸಂಜೆ ಮನೆಗೆ ಕರೆಸಿದ್ದ. ಆದರೆ ಬಾಗಿಲಿಗೆ ಬೀಗ ಹಾಕಿ ಮಕ್ಕಳನ್ನು ಹಾಗೂ ತನ್ನ ಪತ್ನಿಯನ್ನು ಬಂಧಿಯಾಗಿರಿಸಿದ್ದ. ಮಕ್ಕಳು ಮನೆಗೆ ಹಿಂದಿರುಗದೆ ಇದ್ದಾಗ ಗ್ರಾಮಸ್ಥರಿಗೆ ಸುಭಾಷ್‌ನ ತಂತ್ರ ತಿಳಿದು ಕೂಡಲೇ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಸುಭಾಷ್‌ ಮನೆಗೆ ಬಂದಾಗ ಆತ ಏಕಾಏಕಿ ಪೊಲೀಸರ ಮೇಲೆ ಮನೆಯ ಮೇಲೆ ನಿಂತು ಗುಂಡು ಹಾರಿಸಿದ. ಪೊಲೀಸರು ತಿಳಿಹೇಳಲು ಯತ್ನಿಸಿದರೂ ಕೇಳಿಸಿಕೊಳ್ಳಲಿಲ್ಲ. ಅನಿವಾರ್ಯವಾಗಿ ಪೊಲೀಸರು ಎನ್‌ಕೌಂಟರ್‌ ನಡೆಸಿದ್ದಾರೆ ಎಂದು ಡಿಜಿಪಿ ಒ.ಪಿ. ಸಿಂಗ್‌ ತಿಳಿಸಿದ್ದಾರೆ. ಹತ್ಯೆ ಪ್ರಕರಣವೊಂದರ ಅಪರಾಧಿಯಾಗಿದ್ದ ಸುಭಾಷ್‌ ಇತ್ತೀಚೆಗೆ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದ


from India & World News in Kannada | VK Polls https://ift.tt/2vFxsW9

ನಿರ್ಭಯಾ ಹಂತಕರ ಗಲ್ಲು ಮುಂದೂಡಲು ಮತ್ತೆ ಪ್ರಯತ್ನ! ಫೆ.1ರಂದು ಗಲ್ಲು ಆಗುತ್ತಾ?

ಹೊಸದಿಲ್ಲಿ: ಕಾನೂನು ಹೋರಾಟದ ಅನಿಶ್ಚಿ­ತತೆ ನಡುವೆಯೇ ಅತ್ಯಾಚಾರಿ­ಗಳನ್ನು ಗಲ್ಲಿಗೆ ಏರಿಸುವ ಅಣಕು ಪರೀಕ್ಷೆ ಹೊಸದಿ­ಲ್ಲಿಯ ತಿಹಾರ್‌ ಜೈಲಿನಲ್ಲಿ ಶುಕ್ರವಾರ ಬಿರುಸಿನಿಂದ ಸಾಗಿದ್ದರೆ, ಫೆಬ್ರವರಿ 1 ರಂದು ಅತ್ಯಾಚಾರಿ­ಗಳನ್ನು ಗಲ್ಲಿಗೇರಿಸುವುದು ಅನುಮಾನವಿದೆ. ಗಲ್ಲುಶಿಕ್ಷೆ ಜಾರಿ ಮುಂದೂಡಲು ಅಪರಾಧಿಗಳು ಕಸರತ್ತು ಮುಂದು­ವರಿಸಿರು­ವುದರ ನಡುವೆಯೇ, ಫೆ.1ರಂದು ಬೆಳಗ್ಗೆ 6 ಗಂಟೆಗೆ ಜೈಲಿಗೆ ಏರಿಸಲು ಮುಹೂರ್ತ ನಿಗದಿಯಾಗಿತ್ತು. ಆದರೆ ಈಗ ನಾಳೆ ಅಪರಾಧಿಗಳು ಗಲ್ಲಿಗೇರುವುದು ಅನುಮಾನವಾಗಿದೆ. ಪ್ರಕರಣದ ಅಪರಾಧಿ ಎರಡನೇ ಬಾರಿ ಕ್ಷಮಾದಾನ ಕೋರಿ ರಾಷ್ಟ್ರಪತಿಯವರಿಗೆ ಬುಧವಾರ ಮನವಿ ಸಲ್ಲಿಸಿದ್ದು, ರಾಷ್ಟ್ರಪತಿಯವರ ತೀರ್ಮಾನ ಇನ್ನಷ್ಟೇ ಹೊರಬರಬೇಕಿದೆ. ಮತ್ತೊಂದೆಡೆ ಅಪರಾಧಿ ಪವನ್‌ ಗುಪ್ತಾ, ಘಟನೆ ನಡೆದಾಗ ನಾನು ಅಪ್ರಾಪ್ತನಾಗಿದ್ದೆ ಆದ ಕಾರಣ ನನ್ನನ್ನು ಮರಣದಂಡನೆಗೆ ಒಳಪಡಿಸಬಾರದು ಎಂದು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾನೆ. ಈ ಹಿಂದೆ ಅಪರಾಧಿ ಪವನ್ ಗುಪ್ತಾ ಸಲ್ಲಿಸಿದ್ದ ಅರ್ಜಿಯನ್ನು ತ್ರಿಸದಸ್ಯ ಪೀಠ ವಜಾ ಮಾಡಿತ್ತು. ಈಗ ಸಾಂವಿಧಾನಿಕ ಪೀಠಕ್ಕೆ ಮೇಲ್ಮನವಿ ಸಲ್ಲಿಸುವ ಮೂಲಕ ಮರಣದಂಡನೆಯಿಂದ ಪಾರಾಗಲು ಪ್ರಯತ್ನಿಸುತ್ತಿದ್ದಾನೆ. ಬುಧವಾರವಷ್ಟೇ ಮುಖೇಶ್ ಕುಮಾರ್ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ಮುಕೇಶ್‌ ಸಿಂಗ್‌ ಕ್ಯುರೇಟಿವ್‌ ಅರ್ಜಿ, ಕ್ಷಮಾದಾನ ಅರ್ಜಿ, ಕ್ಷಮಾದಾನ ತಿರಸ್ಕರಿಸಿ ರಾಷ್ಟ್ರಪತಿಗಳ ತೀರ್ಮಾನದ ವಿರುದ್ಧದ ಮೇಲ್ಮನವಿ ಸೇರಿದಂತೆ ಎಲ್ಲ ಕಾನೂನು ಅವಕಾಶಗಳನ್ನೂ ಬಳಸಿ­ಕೊಳ್ಳುವ ಪ್ರಯತ್ನ ಮಾಡಿ ಸೋತಿ­ದ್ದಾನೆ. ತಾವೂ ಅದೇ­ ರೀತಿಯ ಫಲಿ­ತಾಂಶ ಎದುರಿಸಬೇಕಾ­ಗುತ್ತದೆ ಎನ್ನುವ ಅರಿವಿ­ದ್ದರೂ ಉಳಿದ ಮೂವರೂ ಸಹ ಒಬ್ಬೊಬ್ಬ­ರಾಗಿ ಅರ್ಜಿ ಸಲ್ಲಿಸುವ ಮೂಲಕ ವಿಳಂಬ ತಂತ್ರ ಅನುಸರಿಸುತ್ತಿದ್ದಾರೆ. ಸದ್ಯ ದೆಹಲಿ ನ್ಯಾಯಾಲಯದಲ್ಲಿ ನಿರ್ಭಯಾ ಅಪರಾಧಿಗಳಿಗೆ ಫೆಬ್ರವರಿ 1 ರಂದು ನಿಗದಿಯಾಗಿರುವ ಮರಣದಂಡನೆಯನ್ನು ಮುಂದೂಡಬೇಕೆಂಬ ಮನವಿಯ ವಿಚಾರಣೆ ನಡೆಯುತ್ತಿದ್ದು, ತಿಹಾರ್ ಜೈಲು ಪರವಾಗಿ ಇರ್ಫಾನ್ ಅಹ್ಮದ್ ಕೋರ್ಟ್ ಗೆ ಹಾಜರಾಗಿ ತಮ್ಮ ವಾದ ಮಂಡನೆ ಮಾಡಿದ್ದಾರೆ. ಪ್ರಸ್ತುತ ವಿನಯ್ ಶರ್ಮಾ ಕ್ಷಮಾದಾನ ಅರ್ಜಿ ಬಾಕಿ ಇರುವುದರಿಂದ ಬಯಸಿದಲ್ಲಿ ವಿನಯ್ ಶರ್ಮಾನನ್ನು ಬಿಟ್ಟು ಫೆಬ್ರವರಿ 1 ರಂದು ಮೂವರು ಅಪರಾಧಿಗಳನ್ನು ಗಲ್ಲಿಗೇರಿಸಬಹುದು. ಮಿಕ್ಕವರ ಯಾವುದೇ ಅರ್ಜಿಗಳು ಬಾಕಿ ಇಲ್ಲ. ಇದರಲ್ಲಿ ಕಾನೂನುಬಾಹಿರ ಏನೂ ಇಲ್ಲ ಎಂದು ಇರ್ಫಾನ್ ಅಹ್ಮದ್ ಕೋರ್ಟ್ ಗೆ ತಿಳಿಸಿದ್ದಾರೆ. ಇರ್ಫಾನ್ ವಾದಕ್ಕೆ ಪ್ರತ್ಯುತ್ತರ ನೀಡಿ ವಿರೋಧಿಸಿರುವ ವಿನಯ್ ಶರ್ಮಾ ಪರ ವಕೀಲ ಓರ್ವ ಅಪರಾಧಿಯ ಅರ್ಜಿ ರಾಷ್ಟ್ರಪತಿ ಬಳಿ ಇದ್ದರೆ ಉಳಿದ ಯಾವ ಅಪರಾಧಿಯನ್ನು ಗಲ್ಲಿಗೇರಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಪ್ರಕರಣದ ವಿಚಾರಣೆ ವೇಳೆ ವಕೀಲರ ಮಧ್ಯೆ ಚರ್ಚೆ ನಡೆದಿದ್ದು, ಇದು ಕೋರ್ಟ್ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ವರದಿ ತಿಳಿಸಿದೆ.


from India & World News in Kannada | VK Polls https://ift.tt/37JPogr

ಕಾಫಿ ಫಸಲನ್ನು ತಿನ್ನಲು ಆರಂಭಿಸಿವೆ ಕಾಡಾನೆಗಳು!

- ಐತಿಚಂಡ ರಮೇಶ್‌ ಉತ್ತಪ್ಪ, ಮೈಸೂರು ಮಾನವ ತಾನು ದೀರ್ಘ ಕಾಲ ವಾಸ ಇರುವ ಪ್ರದೇಶದ ಆಹಾರ ಕ್ರಮಕ್ಕೆ ನಿಧಾನಕ್ಕೆ ಒಗ್ಗಿಕೊಳ್ಳುವ ವಿಕಾಸವಾದದಂತೆ ನಾಡಿಗೆ ನಿರಂತರವಾಗಿ ದಾಳಿಯಿಡುತ್ತಿದ್ದ ಕಾಡಾನೆಗಳ ಆಹಾರ ಕ್ರಮ ಬದಲಾಗಿದ್ದು, ಇದೀಗ ಕಾಫಿ ಫಸಲನ್ನು ತಿನ್ನಲಾರಂಭಿಸಿವೆ. ಇಲ್ಲಿವರೆಗೆ ಕಾಫಿ ತೋಟಗಳಿಗೆ ನುಗ್ಗಿ ಅಡಕೆ, ತೆಂಗು, ಬಾಳೆ ನಾಶ ಮಾಡುತ್ತಿದ್ದ ಆನೆಗಳು ಕಾಫಿಯನ್ನೂ ಭಾರೀ ಪ್ರಮಾಣದಲ್ಲಿ ತಿನ್ನುತ್ತಿರುವುದು ಈ ಬಾರಿಯ ಕಾಫಿ ಉತ್ಪಾದನೆಯ ಮೇಲೆ ವ್ಯತಿರಕ್ತ ಪರಿಣಾಮ ಬೀರಿದೆಯಲ್ಲದೆ ಬೆಳೆಗಾರರು ಕಂಗಾಲಾಗುವಂತೆ ಮಾಡಿದೆ. ಇದರಿಂದ ಕಾಫಿಗೆ ಹೊಸ ಸವಾಲು ಉಂಟಾಗಿದೆ. ಇಷ್ಟು ವರ್ಷ ಕಾಡಾನೆಗಳು ಕಾಫಿ ತೋಟದಲ್ಲಿ ತಿರುಗಾಡುತ್ತ ಮಾಲೀಕರು ಹಾಗೂ ಕಾರ್ಮಿಕರಲ್ಲಿ ಭಯ ಮೂಡಿಸುತ್ತಿದ್ದವು. ಆದರೆ, ಇತ್ತೀಚೆಗೆ ನೇರವಾಗಿ ಕಾಫಿ ಫಸಲಿಗೆ ಸೊಂಡಿಲು ಚಾಚಿವೆ. ಇದರಿಂದ , ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಜಿಲ್ಲೆಯಲ್ಲಿ ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ. ಅಧ್ಯಯನದಲ್ಲಿ ಅಚ್ಚರಿ ನಾಲ್ಕು ವರ್ಷಗಳ ಕಾಲ ಕೊಡಗು ಸೇರಿದಂತೆ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ತಜ್ಞರು ನಡೆಸಿದ ಅಧ್ಯಯನದಲ್ಲಿ ಕಾಡಾನೆಗಳು ಮೊದಲ ಬಾರಿಗೆ ಕಾಫಿ ತಿನ್ನುತ್ತಿರುವುದು ಅಚ್ಚರಿ ಮೂಡಿಸಿತು. ಅವುಗಳ ಲದ್ದಿಯಲ್ಲಿ ಅಪರೂಪಕ್ಕೆ ಎಂಬಂತೆ ಸಣ್ಣ ಪ್ರಮಾಣದಲ್ಲಿ ಕಾಫಿ ಬೀಜಗಳು ಕಂಡು ಬಂದವು. ಇದೀಗ ಕಾಫಿಯೇ ಹಲವು ಕಾಡಾನೆಗಳಿಗೆ ಮುಖ್ಯ ಆಹಾರವಾಗಿವೆ. ಆನೆ ಲದ್ದಿಯಲ್ಲಿ ಎರಡು ಕೆ.ಜಿಯಷ್ಟು ಕಾಫಿ ಬೀಜ ಸಿಗುತ್ತಿದೆ. ಇದರಿಂದ ಮಾನವ ಆನೆ ಸಂಘರ್ಷಕ್ಕೆ ಇದು ಹೊಸ ಸೇರ್ಪಡೆಯಾಗಿದೆ. ಕಾಫಿ ತೋಟ ಹಾಗೂ ಮನೆಗಳ ಸುತ್ತಮುತ್ತ ಬೆಳೆಸುತ್ತಿದ್ದ ಬಾಳೆ ಆನೆಗಳಿಂದಾಗಿ ಬಹುತೇಕ ಖಾಲಿಯಾಗಿವೆ. ಆನೆಗಳ ಭಯದಿಂದ ಹೊಸದಾಗಿ ಬಾಳೆ ಬೆಳೆಸಲು ಯಾರೂ ಮುಂದಾಗುತ್ತಿಲ್ಲ. ಪರಿಣಾಮ, ಬಾಳೆ, ಅಡಕೆ ಮುಂತಾದ ಬೆಳೆಗಳು ಮಾಯವಾಗುತ್ತಿವೆ. ಇದರಿಂದ ಆನೆಗಳಿಗೆ ನಾಡಿನಲ್ಲಿಯೂ ಆಹಾರದ ಕೊರತೆ ಕಂಡು ಬರುತ್ತಿದ್ದು, ಅನಿವಾರ್ಯವಾಗಿ ಹಣ್ಣಾದ ಕಾಫಿಯನ್ನು ತಿನ್ನುತ್ತಿವೆ. ಸಿದ್ದಾಪುರದ ಬೆಳೆಗಾರ ಸುಬ್ಬಯ್ಯ ಅವರ ಪ್ರಕಾರ ಆನೆಗಳು ಕೇವಲ ತೋಟದಲ್ಲಿ ಮಾತ್ರ ಕಾಫಿ ತಿನ್ನುತ್ತಿಲ್ಲ. ತೋಟದಿಂದ ಕುಯ್ದು ತಂದು ಅಂಗಳದಲ್ಲಿ ಗುಡ್ಡೆ ಹಾಕಿದ ಕಾಫಿಯನ್ನು ರಾತ್ರಿ ವೇಳೆ ಬಂದು ತಿನ್ನುತ್ತಿವೆಯಂತೆ. ಹಣ್ಣಾದ ಕಾಫಿ ಗುಡ್ಡೆ ಗುಡ್ಡೆಯಾಗಿ ಅಂಗಳದಲ್ಲಿ ದೊರೆಯುತ್ತಿರುವುದು ಅದಕ್ಕೆ ತಿನ್ನಲು ಸುಲಭ. ಈ ಕಾರಣದಿಂದಾಗಿ ಕಾಫಿಯನ್ನು ಗುಡ್ಡೆಯಾಗಿ ಹಾಕದೆ ಅಂಗಳದಲ್ಲಿ ಹರಡುತ್ತಿದ್ದೇವೆ. ಹೀಗೆ ಮಾಡಿದರೆ ಅದಕ್ಕೆ ಸೊಂಡಿಲಿನಲ್ಲಿ ಆಯ್ದು ತಿನ್ನುವುದು ಕಷ್ಟ ಎಂದು ಹೇಳುತ್ತಾರೆ. ಆನೆಗಳ ಲದ್ದಿ ಕಾಫಿಗೆ ಬೇಡಿಕೆ ಇಲ್ಲ ಬ್ರೆಜಿಲ್‌ ಸೇರಿದಂತೆ ಅನೇಕ ಕಡೆ ಆನೆ ಲದ್ದಿಯಲ್ಲಿನ ಬೀಜದಿಂದ ತಯಾರಿಸುವ ಕಾಫಿಗೆ ಬೇಡಿಕೆ ಇದೆ. ಆದರೆ, ಭಾರತದಲ್ಲಿ ಇನ್ನೂ ಇದಕ್ಕೆ ಮಾರುಕಟ್ಟೆ ಇಲ್ಲ. ಸ್ಥಳೀಯವಾಗಿ ಜನರು ಇಂತಹ ಕಾಫಿಯನ್ನು ಸೇವಿಸಲು ಇಷ್ಟಪಡುವುದಿಲ್ಲ. ಪರಿಣಾಮ, ವಿದೇಶಕ್ಕೆ ರಫ್ತು ಮಾಡಬೇಕಿದೆ. ಅಲ್ಲಿ ದುಬಾರಿ ಬೆಲೆಯೂ ದೊರೆಯುತ್ತಿದ್ದು, ಕಾಡು ಬೆಕ್ಕಿನ ಹಿಕ್ಕೆಯಲ್ಲಿನ ಬೆಳೆಯ ಕಾಫಿಯಂತೆ ಇದನ್ನು ಕೂಡ ಲಾಭದಾಯಕ ಮಾಡಿಕೊಳ್ಳಬೇಕಿದೆ ಎನ್ನುವ ಒತ್ತಾಯ ಕೇಳಿ ಬರುತ್ತಿದೆ. ಆನೆಗಳು ಈ ಹಿಂದೆ ಕಾಫಿಯನ್ನು ಮುಟ್ಟುತ್ತಿರಲಿಲ್ಲ. ಈಗ ಅವು ಕಾಫಿಯನ್ನು ಇಷ್ಟ ಪಡುತ್ತಿವೆ. ಒಂದೊಂದು ಲದ್ದಿಯಲ್ಲಿ ಕನಿಷ್ಠವೆಂದರೂ ಎರಡು ಕೆ.ಜಿಯಷ್ಟು ಕಾಫಿ ಬೀಜ ಇರುತ್ತದೆ. - ನಂದ ಸುಬ್ಬಯ್ಯ, ಸಣ್ಣ ಬೆಳೆಗಾರರ ಸಂಘದ ಅಧ್ಯಕ್ಷ


from India & World News in Kannada | VK Polls https://ift.tt/318cJ99

ನಾಯಕಿ ಹರ್ಮನ್‌ಪ್ರೀತ್ ಕೌರ್ ಸಿಕ್ಸರ್; ಇಂಗ್ಲೆಂಡ್ ವಿರುದ್ಧ ಭಾರತೀಯ ವನಿತೆಯರಿಗೆ ಗೆಲುವು

ಕ್ಯಾನ್ಬೆರಾ: ಬಹುನಿರೀಕ್ಷಿತ 2020 ಮಹಿಳಾ ಟ್ವೆಂಟಿ-20 ವಿಶ್ವಕಪ್ ಪೂರ್ವಭಾವಿಯಾಗಿ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ತ್ರಿಕೋನ ಟಿ20 ಸರಣಿಯಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಶುಭಾರಂಭ ಮಾಡಿಕೊಂಡಿದೆ. ಕ್ಯಾನ್ಬೆರಾದಲ್ಲಿ ಜನವರಿ 31 ಶುಕ್ರವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತೀಯ ವನಿತೆಯರ ಬಳಗ ಐದು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ನಾಯಕಿ ಅಂತಿಮ ಓವರ್‌ನಲ್ಲಿ ಸಿಕ್ಸರ್ ಬಾರಿಸುವ ಮೂಲಕ ಭಾರತಕ್ಕೆ ರೋಚಕ ಗೆಲುವು ಒದಗಿಸಿಕೊಟ್ಟರು. ಟಾಸ್ ಗೆದ್ದ ಭಾರತೀಯ ನಾಯಕಿ ಹರ್ಮನ್‌ಪ್ರೀತ್ ಕೌರ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ನಾಯಕಿನ ನಿರ್ಧಾರ ಸರಿ ಎಂಬಂತೆ ಇಂಗ್ಲೆಂಡ್ ಮಹಿಳಾ ತಂಡವು 38 ರನ್ನಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂದರ್ಭದಲ್ಲಿ ಏಕಾಂಗಿ ಹೋರಾಟ ನೀಡಿದ ನಾಯಕಿ ಹೀಥರ್ ನೈಟ್ ಭಾರತೀಯ ಪಾಳೇಯದಲ್ಲಿ ನಡುವ ಸೃಷ್ಟಿಸಿದರು. ಇವರಿಗೆ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ವುಮೆನ್ ಟ್ಯಾಮಿ ಬ್ಯೂಮಂಟ್ (37) ಅವರಿಂದಲೂ ಉತ್ತಮ ಬೆಂಬಲ ದೊರಕಿತು. ಆಕರ್ಷಕ ಇನ್ನಿಂಗ್ಸ್ ಕಟ್ಟಿದ ನಾಯಕಿ ನೈಟ್ 44 ಎಸೆತಗಳಲ್ಲಿ ಎಂಟು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳಿಂದ 67 ರನ್ ಗಳಿಸಿದರು. ಈ ಮೂಲಕ ಏಳು ವಿಕೆಟ್ ನಷ್ಟಕ್ಕೆ 147 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಭಾರತದ ಪರ ರಾಜೇಶ್ವರಿ ಗಾಯಕ್‌ವಾಡ್, ಶಿಖಾ ಪಾಂಡೆ ಹಾಗೂ ದೀಪ್ತಿ ಶರ್ಮಾ ತಲಾ ಎರಡು ವಿಕೆಟುಗಳನ್ನು ಹಂಚಿಕೊಂಡರು. ಬಳಿಕ ಗುರಿ ಬೆನ್ನಟ್ಟಿದ ಭಾರತ 19.3 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಆರಂಭಿಕ ಆಟಗಾರ್ತಿಯರಾದ ಶಫಾಲಿ ವರ್ಮಾ (30), ಸ್ಮೃತಿ ಮಂಧಾನಾ (15) ಹಾಗೂ ಜೆಮಿಮಾ ರೊಡ್ರಿಗಸ್ (26) ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು. ಆದರೆ ಪಂದ್ಯದ ಮಧ್ಯಂತರ ಅವಧಿಯಲ್ಲಿ ನಿರಂತರ ಅಂತರಾಳದಲ್ಲಿ ವಿಕೆಟುಗಳನ್ನು ಕಳೆದುಕೊಂಡಿರುವುದು ಭಾರತಕ್ಕೆ ಹಿನ್ನೆಡೆಯಾಗಿ ಪರಿಣಮಿಸಿತು. ಈ ಸಂದರ್ಭದಲ್ಲಿ ಭಾರತೀಯ ಪಾಳೇಯದಲ್ಲಿ ನಡುಕ ಸೃಷ್ಟಿಯಾಯಿತು. ಇನ್ನೊಂದೆಡೆ ನಾಯಕಿಯ ಆಟ ಪ್ರದರ್ಶಿಸಿದ ಹರ್ಮನ್‌ಪ್ರೀತ್ ಕೌರ್ ಭಾರತವನ್ನು ಗೆಲುವಿನ ದಡ ಸೇರಿಸಿದರು. ಪಂದ್ಯದ ಅಂತಿಮ ಓವರ್‌ನಲ್ಲಿ ಸಿಕ್ಸರ್ ಬಾರಿಸಿದ ಹರ್ಮನ್‌ಪ್ರೀತ್ ರೋಚಕ ಗೆಲುವು ಒದಗಿಸಿಕೊಡುವಲ್ಲಿ ನೆರವಾದರು. ಅಲ್ಲದೆ 34 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 42 ರ್ ಗಳಿಸಿ ಅಜೇಯರಾಗುಳಿದರು. ಇನ್ನುಳಿದಂತೆ ವೇದಾ ಕೃಷ್ಣಮೂರ್ತಿ (7), ವಿಕೆಟ್ ಕೀಪರ್ ಬ್ಯಾಟ್ಸ್‌ವುಮೆನ್ ತನಿಯಾ ಭಾಟಿಯಾ (11) ಹಾಗೂ ದೀಪ್ತಿ ಶರ್ಮಾ ಅಜೇಯ 12 ರನ್ ಗಳಿಸಿದರು. ಇಂಗ್ಲೆಂಡ್ ಪರ ಕ್ಯಾತರಿನ್ ಬ್ರಂಟ್ ಎರಡು ವಿಕೆಟ್ ಕಬಳಿಸಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/319fabo

ಮಹದೇವಪುರದಲ್ಲಿ ಬೈಕ್‌ ಸವಾರನ ಮೇಲೆ ಹಲ್ಲೆ ನಡೆಸಿದ ಬಿಎಂಟಿಸಿ ಚಾಲಕ ಅಮಾನತು

ಬೆಂಗಳೂರು: ಓವರ್‌ಟೇಕ್‌ ವಿಚಾರವಾಗಿ ಬೈಕ್‌ ಸವಾರನಿಗೆ ಹಲ್ಲೆ ನಡೆಸಿದ್ದ ಬಸ್‌ ಚಾಲಕ ಸಂತೋಷ್‌ ಬಡಿಗೇರ್‌ನನ್ನು ಅಮಾನತುಗೊಳಿಸಲಾಗಿದೆ. ಬಸ್‌ ಚಾಲಕ ಬೈಕ್‌ ಸವಾರನಿಗೆ ಥಳಿಸುತ್ತಿರುವ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಮಹದೇವಪುರದಲ್ಲಿ ಗುರುವಾರ ಬೆಳಗ್ಗೆ ವೋಲ್ವೊ ಬಸ್‌ವೊಂದನ್ನು ಬೈಕ್‌ ಸವಾರ ಓವರ್‌ಟೇಕ್‌ ಮಾಡುವಾಗ ಅಡ್ಡ ಬಂದಿದ್ದ ಎನ್ನಲಾಗಿದೆ. ಇದರಿಂದ ಕುಪಿತಗೊಂಡ ಚಾಲಕ ಬಸ್‌ಅನ್ನು ರಸ್ತೆಯಲ್ಲೇ ನಿಲ್ಲಿಸಿ ಬೈಕ್‌ ಸವಾರನ ಬಳಿ ತೆರಳಿ ಹಲ್ಲೆ ಮಾಡಿದ್ದಾನೆ. ಬಸ್‌ನಲ್ಲೇ ಇದ್ದ ಪ್ರಯಾಣಿಕರೊಬ್ಬರು ಇದನ್ನು ರೆಕಾರ್ಡ್‌ ಮಾಡಿಕೊಂಡು ಟ್ವಿಟರ್‌ನಲ್ಲಿ ಶೇರ್‌ ಮಾಡಿದ್ದರು. ''ನೀವು ಬೈಕ್‌ ಸವಾರನ ಮೇಲೆ ಹಲ್ಲೆ ಮಾಡಬಾರದು. ಹಲ್ಲೆ ಮಾಡುವ ಅಧಿಕಾರ ಇಲ್ಲ'' ಎಂದು ಹೇಳಿದಾಗ ''ಅದನ್ನು ಕೇಳಲು ನೀನ್ಯಾವನೋ ಲೇ'' ಎಂದು ಚಾಲಕ ನಿಂದಿಸಿದ್ದಾನೆ. ''ಸಾರ್ವಜನಿಕನಿಗೆ ಈ ರೀತಿ ಹಲ್ಲೆ ಮಾಡುವುದು ಎಷ್ಟು ಸರಿ?'' ಎಂದು ಹಮೀದ್‌ ಎಂಬುವರು ವಿಡಿಯೋ ಹಾಕಿ ಪ್ರಶ್ನೆ ಮಾಡಿದ್ದರು. ಘಟನೆ ಕುರಿತು ಟ್ವಿಟರ್‌ನಲ್ಲೇ ಬಿಎಂಟಿಸಿ ವಿಷಾದ ವ್ಯಕ್ತಪಡಿಸಿದ್ದು, ಚಾಲಕನ ವಿರುದ್ಧ ಕ್ರಮ ಜರುಗಿಸಲಾಗುತ್ತದೆ ಎಂದು ಭರವಸೆ ನೀಡಿದ್ದರು. ಸಾರ್ವಜನಿಕ ವ್ಯಕ್ತಿಗೆ ಥಳಿಸಿದ ಬಸ್‌ ಚಾಲಕನನ್ನು ತಕ್ಷಣ ಅಮಾನತುಗೊಳಿಸಲಾಗಿದ್ದು, ಪ್ರಕರಣದ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಬಿಎಂಟಿಸಿ ಟ್ವೀಟ್‌ ಮೂಲಕ ಸ್ಪಷ್ಟಪಡಿಸಿದೆ. ವೋಲ್ವೊದಂತಹ ಅತ್ಯಂತ ಪವರ್‌ಫುಲ್‌ ಬಸ್‌ಗಳನ್ನು ಕೊಂಡೊಯ್ಯುತ್ತಿರುವ ಇಂತಹ ಮುಂಗೋಪಿಗಳನ್ನು ಹೇಗೆ ನಂಬುತ್ತೀರಿ? ಕೋಪ ಬಂದಿದ್ದಕ್ಕೆ ಸಾರ್ವಜನಿಕನಿಗೆ ಹೀಗೆ ಥಳಿಸುತ್ತಾರೆ ಎಂದಾದರೆ ನಾಳೆ ಜನರ ಮೇಲೆ ಬಸ್‌ ಚಲಾಯಿಸಬಹುದು ಎಂದು ಕೆಲವು ಟ್ವಿಟರ್‌ ಬಳಕೆದಾರರು ಕಳವಳ ವ್ಯಕ್ತಪಡಿಸಿದ್ದರು.


from India & World News in Kannada | VK Polls https://ift.tt/2GIHvvC

IND vs NZ 4ನೇ ಟಿ20 ಲೈವ್‌ ಸ್ಕೋರ್‌: ಟಾಸ್‌ ಸೋತ ಟೀಮ್‌ ಇಂಡಿಯಾ ಮೊದಲು ಬ್ಯಾಟಿಂಗ್‌

ವೆಲ್ಲಿಂಗ್ಟನ್‌: ಸರಣಿ ಗೆದ್ದಾಗಿದೆ ಇನ್ನೇನಿದ್ದರೂ 5-0 ಅಂತರದಲ್ಲಿ ವೈಟ್‌ವಾಷ್‌ ಮಾಡುವುದಷ್ಟೇ ಬಾಕಿ ಎಂದು ದಿಟ್ಟ ಸಂದೇಶ ಸಾರಿರುವ ಟೀಮ್‌ ಇಂಡಿಯಾ ನಾಯಕ , ವೆಲ್ಲಿಂಗ್ಟನ್‌ ಅಂಗಣದಲ್ಲಿ ಆತಿಥೇಯ ನ್ಯೂಜಿಲೆಂಡ್‌ ಎದುರು ನಾಲ್ಕನೇ ಪಂದ್ಯವನ್ನು ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಇಲ್ಲಿನ ವೆಸ್ಟ್‌ಪ್ಯಾಕ್‌ ಕ್ರೀಡಾಂಗಣದಲ್ಲಿ ಶುಕ್ರವಾರ ಟಾಸ್‌ ಗೆದ್ದ ನ್ಯೂಜಿಲೆಂಡ್‌ ತಂಡ ಕ್ಷೇತ್ರರಕ್ಷಣೆ ಆಯ್ಕೆ ಮಾಡಿಕೊಂಡಿತು. ಭಾರತ ತಂಡದ ಕಪ್ತಾನ ವಿರಾಟ್‌ ಕೊಹ್ಲಿ ಸತತ 3ನೇ ಬಾರಿ ಟಾಸ್‌ ಗೆಲ್ಲುವಲ್ಲಿ ವಿಫಲರಾದರು. ನಿರೀಕ್ಷೆಯಂತೇ ಇತ್ತಂಡಗಳು ಹಲವು ಬದಲಾವಣೆಗಳೊಂದಿಗೆ ನಾಲ್ಕನೇ ಪಂದ್ಯಕ್ಕೆ ಮುಂದಾದದವು. ಅಚ್ಚರಿಯ ಬೆಳವಣಿಗೆ ಎಂಬಂತೆ ಕಿವೀಸ್‌ ಕ್ಯಾಪ್ಟನ್‌ ಭುಜದ ಗಾಯದ ಸಮಸ್ಯೆಗೆ ತುತ್ತಾಗಿರುವ ಕಾರಣ ಪಂದ್ಯದಿಂದ ಹೊರಗುಳಿದರಿಂದ ನಾಯಕನ ಜವಾಬ್ದಾರಿಯನ್ನು ಅನುಭವಿ ವೇಗಿ ಟಿಮ್‌ ಸೌಥೀ ವಹಿಸಿಕೊಂಡರು. ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ ಟಾಮ್‌ ಬ್ರೂಸ್‌ ಕೂಡ ಆಡುವ ಹನ್ನೊಂದರ ಬಳಗಕ್ಕೆ ಸೇರ್ಪಡೆಯಾಗಿದ್ದಾರೆ. ಪಂತ್‌ಗೆ ಇಲ್ಲ ಅವಕಾಶಭಾರತ ತಂಡ ಕೂಡ ಮೂರು ಬದಲಾವಣೆಗಳೊಂದಿಗೆ ಕಣಕ್ಕಿಳಿಯಿತು. , ರವೀಂದ್ರ ಜಡೇಜಾ ಮತ್ತು ಶಾರ್ದೂಲ್‌ ಠಾಕೂರ್‌ ಅವರಿಗೆ ವಿಶ್ರಾಂತಿ ನೀಡಿ ಸಂಜು ಸ್ಯಾಮ್ಸನ್‌ (ಓಪನರ್‌), ವಾಷಿಂಗ್ಟನ್‌ ಸುಂದರ್‌ (ಆಲ್‌ರೌಂಡರ್‌) ಮತ್ತು ನವದೀಪ್‌ ಸೈನಿಗೆ (ವೇಗಿ) ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಲಾಯಿತು. ಆದರೆ, ರಿಷಭ್‌ ಪಂತ್‌ಗೆ ಇಲ್ಲಿಯೂ ಮಣೆ ಹಾಕಲಾಗಿಲ್ಲ. ತಂಡಗಳ ವಿವರ ನ್ಯೂಜಿಲೆಂಡ್ (ಪ್ಲೇಯಿಂಗ್ ಇಲೆವೆನ್): ಮಾರ್ಟಿನ್ ಗಪ್ಟಿಲ್, ಕಾಲಿನ್ ಮನ್ರೋ, ಟಾಮ್ ಬ್ರೂಸ್, ರಾಸ್ ಟೇಲರ್, ಟಿಮ್ ಸೀಫರ್ಟ್ (ಕೀಪರ್‌), ಮಿಚೆಲ್ ಸ್ಯಾಂಟ್ನರ್, ಸ್ಕಾಟ್ ಕುಗ್ಲೇಜಿನ್‌, ಟಿಮ್ ಸೌಥೀ (ನಾಯಕ), ಇಶ್ ಸೋಧಿ, ಹ್ಯಾಮಿಶ್ ಬೆನೆಟ್, ಡ್ಯಾರಿಲ್ ಮಿಚೆಲ್. ಭಾರತ (ಪ್ಲೇಯಿಂಗ್‌ ಇಲೆವೆನ್‌): ಸಂಜು ಸ್ಯಾಮ್ಸನ್, ಲೋಕೇಶ್ ರಾಹುಲ್ (ಕೀಪರ್‌), ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಶಿವಂ ದುಬೇ, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಹಲ್, ಜಸ್‌ಪ್ರೀತ್ ಬುಮ್ರಾ, ನವದೀಪ್ ಸೈನಿ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2Ofx2fx

ಸರಣಿ ಸೋಲಿನ ಮೇಲೆ ಬರೆ; ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಔಟ್!

ವೆಲ್ಲಿಂಗ್ಟನ್: ಪ್ರವಾಸಿ ಭಾರತ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯಲ್ಲಿ ಆಗಲೇ ಸರಣಿ ಸೋಲಿನ ಮುಖಭಂಗಕ್ಕೊಳಗಾಗಿರುವ ಆತಿಥೇಯ ನ್ಯೂಜಿಲೆಂಡ್‌ಗೆ ಮಗದೊಂದು ಆಘಾತ ಎದುರಾಗಿದೆ. ಭುಜ ನೋವಿಗೆ ಒಳಗಾಗಿರುವ ನಾಯಕ , ವೆಲ್ಲಿಂಗ್ಟನ್‌ನಲ್ಲಿ ನಡೆಯುತ್ತಿರುವ ನಾಲ್ಕನೇ ಟಿ20 ಪಂದ್ಯಕ್ಕೆ ಅಲಭ್ಯವಾಗಿದ್ದಾರೆ. ಇದರೊಂದಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಎಡ ಭುಜದ ನೋವಿಗೊಳಗಾಗಿರುವ ಕೇನ್ ವಿಲಿಯಮ್ಸನ್ ನಾಲ್ಕನೇ ಟಿ20 ಪಂದ್ಯಕ್ಕೆ ಅಲಭ್ಯವಾಗಿದ್ದಾರೆ. ಅದೇ ಹೊತ್ತಿಗೆ ಬೇ ಓವಲ್‌ನಲ್ಲಿ ನಡೆಯಲಿರುವ ಅಂತಿಮ ಪಂದ್ಯಕ್ಕೆ ಲಭ್ಯವಾಗುವ ನಿರೀಕ್ಷೆ ವ್ಯಕ್ತಪಡಿಸಲಾಗಿದೆ. ಹ್ಯಾಮಿಲ್ಟನ್‌ನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಫೀಲ್ಡಿಂಗ್ ಮಾಡುತ್ತಿರುವ ಡೈವ್ ಹೊಡೆದಾಗ ವಿಲಿಯಮ್ಸನ್ ಎಡ ಭುಜಕ್ಕೆ ಗಾಯಮಾಡಿಕೊಂಡಿದ್ದರು ಎಂಬುದನ್ನು ಬ್ಲ್ಯಾಕ್ ಕ್ಯಾಪ್ಸ್ ತಿಳಿಸಿದೆ. ಇದೀಗ ಗಾಯ ಮತ್ತಷ್ಟು ಉಲ್ಬಣಗೊಂಡಿರುವ ಹಿನ್ನೆಲೆಯಲ್ಲಿ ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದಾರೆ. ಕೇನ್ ಅಲಭ್ಯತೆಯಲ್ಲಿ ನಾಲ್ಕನೇ ಟಿ20 ಪಂದ್ಯದಲ್ಲಿ ಟಿಮ್ ಸೌಥಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಟೈನಲ್ಲಿ ಅಂತ್ಯಗೊಂಡ ತೃತೀಯ ಟಿ20 ಪಂದ್ಯದಲ್ಲಿ ಸೂಪರ್ ಓವರ್‌ನಲ್ಲಿ ನ್ಯೂಜಿಲೆಂಡ್ ರೋಚಕ ಸೋಲಿಗೆ ಶರಣಾಗಿತ್ತು. ಏಕಾಂಗಿ ಹೋರಾಟ ನೀಡಿದ್ದ ನಾಯಕ ಕೇನ್ ವಿಲಿಯಮ್ಸನ್ 95 ರನ್‌ಗಳ ದಿಟ್ಟ ಹೋರಾಟ ನೀಡಿದ್ದರು. 48 ಎಸೆತಗಳ ವಿರೋಚಿತ ಆಟದಲ್ಲಿ ಎಂಟು ಬೌಂಡರಿ ಹಾಗೂ ಆರು ಸಿಕ್ಸರ್‌ಗಳು ಸೇರಿದ್ದವು. ಈ ಪೈಕಿ 26 ಎಸೆತಗಳಲ್ಲೇ ಫಿಪ್ಟಿ ಸಾಧನೆ ಮಾಡಿದ್ದರು. ಇನ್ನೇನು ಪಂದ್ಯ ಗೆದ್ದಿತು ಎನ್ನುವಷ್ಟರಲ್ಲಿ ಅಂತಿಮ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದ ವಿಲಿಯಮ್ಸನ್ ನಿರಾಸೆ ಅನುಭವಿಸಿದರು. ಬಳಿಕ ಸೂಪರ್ ಓವರ್‌ನಲ್ಲೂ ಬೌಂಡರಿ ಹಾಗೂ ಸಿಕ್ಸರ್ ಬಾರಿಸಿ ಕಿವೀಸ್ 18 ರನ್‌ಗಳ ಬೃಹತ್ ಗುರಿ ಒಡ್ಡುವಲ್ಲಿ ನೆರವಾಗಿದ್ದರು. ಆದರೆ ಭಾರತೀಯ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಬೆನ್ನು ಬೆನ್ನಿಗೆ ಎರಡು ಸಿಕ್ಸರ್‌ಗಳನ್ನು ಬಾರಿಸಿ ಕಿವೀಸ್ ನೆಲದಲ್ಲಿ ಚೊಚ್ಚಲ ಹಾಗೂ ಐತಿಹಾಸಿಕ ಟಿ20 ಸರಣಿ ಗೆಲುವು ಒದಗಿಸಿಕೊಡುವಲ್ಲಿ ನೆರವಾದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2u5jpZt

ಅನುದಾನದ ಕೊರತೆ: 2 ತಿಂಗಳಿಂದ ಸಂಬಳವಿಲ್ಲದೆ ಶಿಕ್ಷಕರ ಪರದಾಟ, 860 ಕೋ. ರೂ. ಅನುದಾನಕ್ಕೆ ಶಿಕ್ಷಣ ಇಲಾಖೆ ಮನವಿ

‘ಸಿಎಎ ಜಾರಿಯಿಂದ ಗಾಂಧಿ ಕನಸು ನನಸಾಗಿದೆ’ ಸಂಸತ್‌ ಜಂಟಿ ಅಧಿವೇಶನದಲ್ಲಿ ರಾಷ್ಟ್ರಪತಿ

ಹೊಸದೆಹಲಿ: 2019 ಜಾರಿಗೆ ತರುವ ಮೂಲಕ ಮಹಾತ್ಮ ಗಾಂಧಿ ಕನಸನ್ನು ಈಡೇರಿಸಿದ್ದೇವೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂಗ್ ಹೇಳಿದರು. ಸಂಸತ್ ಜಂಟಿ ಅಧಿವೇಶನವನ್ನು ಉದ್ಧೇಶಿಸಿ ಮಾತನಾಡಿದ ಅವರು ವಿವಾದಾತ್ಮಕ ಪೌರತ್ವ ಕಾಯ್ದೆಯನ್ನು ಸಮರ್ಥಿಸಿಕೊಂಡರು. ದೇಶ ವಿಭಜನೆ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿ ಉಳಿದಿರುವ ಅಲ್ಪಸಂಖ್ಯಾತರು ಧಾರ್ಮಿಕ ದೌರ್ಜನ್ಯಕ್ಕೆ ಒಳಗಾಗಿ ಭಾರತದಲ್ಲಿ ಆಶ್ರಯ ಕೋರಿ ಬಂದರೆ ಅವರಿಗೆ ಗೌರವಯುತವಾದ ಆಶ್ರಯವನ್ನು ನೀಡಬೇಕು ಎಂದು ಗಾಂಧಿ ಹೇಳಿದ್ದರು. ಇದೀಗ ಕೇಂದ್ರ ಸರಕಾರ ಸಿಎಎ ಜಾರಿಗೊಳಿಸುವ ಮೂಲಕ ಗಾಂಧಿಯ ಕನಸನ್ನು ಈಡೇರಿಸಿದೆ ಎಂದರು. ರಾಷ್ಟ್ರಪತಿ ಹೇಳಿಕೆಯನ್ನು ಆಡಳಿತ ಪಕ್ಷದ ಸದಸ್ಯರು ಮೇಜು ತಟ್ಟಿ ಸ್ವಾಗತಿಸಿದರೆ ಪ್ರತಿಪಕ್ಷಗಳ ಸದಸ್ಯರು ವಿರೋಧಿಸಿದರು. ಈ ವೇಳೆ ಕೆಲಕಾಲ ಸಂಸತ್ತಿನ ಕೋಲಾಹಲ ನಡೆಯಿತು. ಆರ್ಟಿಕಲ್ 370 ರದ್ದು ಐತಿಹಾಸಿಕ ನಿರ್ಧಾರ : ರಾಷ್ಟ್ರಪತಿ ಜಂಟಿ ಅಧಿವೇಶನದಲ್ಲಿ ಭಾಷಣ ಮಾಡಿದ ರಾಷ್ಟ್ರಪತಿ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಆರ್ಟಿಕಲ್ 370 ರದ್ದು ಮಾಡಿರುವ ನಿರ್ಧಾರವನ್ನು ಐತಿಹಾಸಿಕ ಎಂದು ಬಣ್ಣಿಸಿದರು. ಆರ್ಟಿಕಲ್ 370 ರದ್ದು ಕೇಂದ್ರ ಸರಕಾರ ಮಹತ್ವದ ನಿರ್ಧಾರವಾಗಿದೆ. ಈ ಮೂಲಕ ಜಮ್ಮು ಕಾಶ್ಮೀರ ಹಾಗೂ ಲಡಾಕ್‌ ಅಭಿವೃದ್ಧಿಗೆ ಕಾರಣವಾಗಿದೆ. ಜಮ್ಮು- ಕಾಶ್ಮೀರದಲ್ಲಿ ಅಭಿವೃದ್ದಿ ಕಾರ್ಯಗಳಿಗೆ ಕೇಂದ್ರ ಸರಕಾರ ಶ್ರಮಿಸುತ್ತಿದ್ದು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು. ನಮ್ಮ ದೇಶ ಅಭಿವೃದ್ದಿ ಪಥದತ್ತ ಸಾಗುತ್ತಿದೆ. ಪೌರತ್ವಕಾಯ್ದೆ, ಮುಸ್ಲಿಂ ಮಹಿಳೆಯರ ಪರವಾದ ತ್ರಿ ತಲಾಕ್ ನಿಷೇಧ ಕಾಯ್ದೆ ಸೇರಿದಂತೆ ಹಲವು ಐತಿಹಾಸಿಕ ಕಾಯ್ದೆ ಜಾರಿಗೊಳಿಸಿದೆ. ನವಭಾರತ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಬೇಕಾಗಿದೆ ಎಂದು ಮನವಿ ಮಾಡಿದ ರಾಷ್ಟ್ರಪತಿ, ರಾಮಜನ್ಮ ಭೂಮಿ ಕುರಿತಾದ ಸುಪ್ರೀಂಕೋರ್ಟ್ ತೀರ್ಪು ಐತಿಹಾಸಿಕ ಎಂದು ಬಣ್ಣಿಸಿದರು.


from India & World News in Kannada | VK Polls https://ift.tt/2uS6dqI

ಹಳಿ ತಪ್ಪಿದ ಬುಮ್ರಾಗೆ ಟಿಪ್ಸ್ ಕೊಟ್ಟ ಸಂಜಯ್ ಮಂಜ್ರೇಕರ್‌ಗೆ ನೆಟ್ಟಿಗರಿಂದ ಪಾಠ!

ವೆಲ್ಲಿಂಗ್ಟನ್: ಅಪರೂಪವೆಂಬಂತೆ ಭಾರತೀಯ ಕ್ರಿಕೆಟ್ ತಂಡದ ಬಲಗೈ ವೇಗದ ಬೌಲರ್ ವೈಫಲ್ಯವನ್ನು ಅನುಭವಿಸಿದ್ದರು. ನ್ಯೂಜಿಲೆಂಡ್ ವಿರುದ್ಧ ಟೈನಲ್ಲಿ ಅಂತ್ಯಗೊಂಡ ಮೂರನೇ ಟಿ20 ಪಂದ್ಯದಲ್ಲಿ ಸೂಪರ್ ಓವರ್‌ನಲ್ಲಿ ರೋಚಕ ಗೆಲುವು ಬಾರಿಸಿರುವ ಟೀಮ್ ಇಂಡಿಯಾ, ಕಿವೀಸ್ ನೆಲದಲ್ಲಿ ಚೊಚ್ಚಲ ಹಾಗೂ ಐತಿಹಾಸಿಕ ಟಿ20 ಸರಣಿ ಗೆಲುವನ್ನು ದಾಖಲಿಸಿದೆ. ಆದರೆ ವೈಯಕ್ತಿಕವಾಗಿ ಬುಮ್ರಾ ಕೆಟ್ಟ ಪ್ರದರ್ಶನವನ್ನು ನೀಡಿದ್ದರು. ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ 45 ರನ್‌ಗಳನ್ನು ಬಿಟ್ಟುಕೊಡುವ ಮೂಲಕ ಸಾಕಷ್ಟು ದುಬಾರಿಯೆನಿಸಿದ್ದರು. ಬುಮ್ರಾ ಒಂದೇ ಒಂದು ವಿಕೆಟ್ ಪಡೆಯಲು ಸಹ ಯಶಸ್ವಿಯಾಗಿರಲಿಲ್ಲ. ಸೂಪರ್ ಓವರ್‌ನಲ್ಲಿ ಪರಿಸ್ಥಿತಿ ಇನ್ನು ಬಿಗಡಾಯಿಸಿತು. ನಿರ್ಣಾಯಕ ಸೂಪರ್ ಓವರ್‌ನಲ್ಲಿ 17 ರನ್ ಬಿಟ್ಟುಕೊಟ್ಟಿದ್ದ ಬುಮ್ರಾ ಮುಖಭಂಗಕ್ಕೊಳಗಾದರು. ಭಾರತೀಯ ವೇಗಿಯನ್ನು ಪ್ರಮುಖವಾಗಿಯೂ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್, ಮನಬಂದಂತೆ ದಂಡಿಸಿದರು. ಪರಿಣಾಮ ಬುಮ್ರಾ ಬಳಿ ಉತ್ತರವೇ ಇರಲಿಲ್ಲ. ಆದರೆ ಮೊದಲೆರಡು ಪಂದ್ಯಗಳಲ್ಲಿ ಪರಿಸ್ಥಿತಿ ಭಿನ್ನವಾಗಿತ್ತು. ಬುಮ್ರಾ ತಮ್ಮ ನಿಖರ ಯಾರ್ಕರ್ ಹಾಗೂ ನಿಧಾನಗತಿಯ ಬೌಲಿಂಗ್ ಮೂಲಕ ಎದುರಾಳಿಗಳನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದರು. ಈ ಸಂದರ್ಭದಲ್ಲಿ ಬುಮ್ರಾ ವೈಫಲ್ಯ ಅನುಭವಿಸುವಂತೆ ಕಿವೀಸ್ ಆಟಗಾರರು ಕೋರಿದ್ದರು. ಸ್ಟ್ರೆಸ್ ಫ್ರಾಕ್ಚರ್ ಗಾಯದ ಸಮಸ್ಯೆಗೊಳಾಗಗಿರುವ ಜಸ್ಪ್ರೀತ್ ಬುಮ್ರಾ ಕಳೆದ ಆಸ್ಟ್ರೇಲಿಯಾ ಸರಣಿಯ ವೇಳೆಗೆ ಟೀಮ್ ಇಂಡಿಯಾವನ್ನು ಸೇರಿದ್ದರು. ತದಾ ಬಳಿಕ ಇದು ಬುಮ್ರಾ ಭಾಗವಹಿಸುತ್ತಿರುವ ಎರಡನೇ ಸರಣಿಯಾಗಿದೆ. ಈ ಮಧ್ಯೆ ಅಪರೂಪದ ವೈಫಲ್ಯ ಅನುಭವಿಸಿರುವ ಜಸ್ಪ್ರೀತ್ ಬುಮ್ರಾ ಮಾಜಿ ಆಟಗಾರ ಟಿಪ್ಸ್ ನೀಡಿರುವುದು ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ. ಕೆಲವು ಸಮಯಗಳ ಹಿಂದೆಯಷ್ಟೇ ರವೀಂದ್ರ ಜಡೇಜಾ ವಿರುದ್ಧವೂ ಕಾಮೆಂಟ್ ಮಾಡಿ ಕೆಂಗಣ್ಣಿಗೆ ಗುರಿಯಾಗಿರುವ ಸಂಜಯ್ ಮಂಜ್ರೇಕರ್ ವಿರುದ್ಧ ಮಗದೊಮ್ಮೆ ಅಭಿಮಾನಿಗಳು ಟ್ರೋಲ್ ಅಭಿಷೇಕ ಮಾಡಿದ್ದಾರೆ. ಮಂಜ್ರೇಕರ್ ತಮ್ಮ ಹೇಳಿಕೆಯಲ್ಲಿ, 'ಬುಮ್ರಾ ಸೂಪರ್ ಓವರ್ ವೀಕ್ಷಿಸಿದ್ದೇನೆ. ಅವರು ಅಸಾಧಾರಣ ಬೌಲರ್ ಆದರೆ ವಿಭಿನ್ನ ದಾಳಿಯ ಕೋನಗಳನ್ನು ರಚಿಸಲು ಕ್ರೀಸ್ ಅನ್ನು ಇನ್ನು ಸ್ವಲ್ಪ ಹೆಚ್ಚು ಬಳಸಬಹುದು' ಎಂದು ಸಲಹೆ ಮಾಡಿದ್ದರು. ಬುಮ್ರಾ ಅವರಂತಹ ಸಮಕಾಲೀನ ಶ್ರೇಷ್ಠ ಬೌಲರ್‌ ಅಪರೂಪದ ವೈಫಲ್ಯ ಅನುಭವಿಸಿದಾಗ ಓರ್ವ ಸರಾಸರಿ ಮಾಜಿ ಆಟಗಾರ ಸಲಹೆ ಮಾಡಿರುವುದು ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ. ಮಂಜ್ರೇಕರ್ ಚಳಿ ಬಿಡಿಸಿದ ನೆಟ್ಟಿಗರು ಮಂಜ್ರೇಕರ್‌ಗೆ ಬುಮ್ರಾ ರಿಯಾಕ್ಷನ್ ಏನಾಗಿರಬಹುದು? ಮಂಜ್ರೇಕರ್‌ಗೂ ಟಿಪ್ಸ್ ಕೊಟ್ಟ ಫ್ಯಾನ್ಸ್ ಬಾಯಿ ಮುಚ್ಚು; ಕನ್ನಡಿಗನ ಪ್ರತಿಕ್ರಿಯೆ ಬುಮ್ರಾಗೆ ನಿಮ್ಮಿಂದ ಟಿಪ್ಸ್? ಮುಂದಿನ ಪಂದ್ಯದಲ್ಲಿ ಮಂಜ್ರೇಕರ್‌ಗೆ ಕೊಹ್ಲಿ ಪ್ರತಿಕ್ರಿಯೆ ಏನಾಗಿರಬಹುದು?


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2UdIDjc

ಸಂಸತ್ತು ಜಂಟಿ ಅಧಿವೇಶನ ಆರಂಭ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣ

ಹೊಸದೆಹಲಿ: ಸಂಸತ್ತಿನ ಶುಕ್ರವಾರದಿಂದ ಆರಂಭವಾಗಿದೆ. ಜಂಟಿ ಸದನಗಳನ್ನು ಉದ್ಧೇಶಿಸಿ ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ರಾಷ್ಟ್ರಪತಿ ಭಾಷಣ ಮಾಡುತ್ತಿದ್ದಾರೆ. ಶನಿವಾರ ಭಾರೀ ನಿರೀಕ್ಷಿತ ಕೇಂದ್ರ ಬಜೆಟ್‌ ಮಂಡನೆಯಾಗಲಿದ್ದು ಒಂದು ದಿನ ಮೊದಲೇ ಹಣಕಾಸು ಇಲಾಖೆಯ ರಾಷ್ಟ್ರೀಯ ಆರ್ಥಿಕ ಸಮೀಕ್ಷೆ ಬಿಡುಗಡೆಯಾಗಲಿದೆ. ಪ್ರಸ್ತುತ ದೇಶ ಎದುರಿಸುತ್ತಿರುವ ಆರ್ಥಿಕ ಬಿಟ್ಟಕ್ಕು, ಉದ್ಯೋಗ ಕೊರತೆ ಹಿನ್ನೆಲೆಯಲ್ಲಿ ಈ ಬಾರಿಯ ಕೇಂದ್ರ ಆಯವ್ಯಯ ಭಾರೀ ಕುತೂಹಲವನ್ನು ಸೃಷ್ಟಿಸಿದೆ. ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಬಜೆಟ್‌ನಲ್ಲಿ ಮಹತ್ವದ ಘೋಷಣೆಗಳ ನಿರೀಕ್ಷೆ ಇದೆ. ಅಧಿವೇಶನದಲ್ಲಿ ಭಾಗಿಯಾಗಲು ಪ್ರಧಾನಿ ನರೇಂದ್ರ ಮೋದಿ ಸಂಸತ್ತಿಗೆ ಆಗಮಿಸಿದ್ದು ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿ, ಈ ಅಧಿವೇಶದಲ್ಲಿ ಈ ದಶಕಕ್ಕೆ ನಾವು ಬಲವಾದ ಅಡಿಪಾಯ ಹಾಕುತ್ತಿದ್ದೇವೆ. ಈ ನಿಟ್ಟಿನಲ್ಲಿ ಅಧಿವೇಶನದಲ್ಲಿ ನಡೆಯಬೇಕಾದ ಚರ್ಚೆಯನ್ನು ಆರ್ಥಿಕ ವಿಷಯಗಳ ಕುರಿತಾಗಿ ಕೇಂದ್ರೀಕರಿಸಲಾಗುವುದು. ಈ ನಿಟ್ಟಿನಲ್ಲಿ ಹೆಚ್ಚಿನ ಚರ್ಚೆ ನಡೆಯಲಿ ಎಂದು ಬಯಸುತ್ತೇನೆ ಎಂದಿದ್ದಾರೆ. ಆರ್ಟಿಕಲ್ 370 ರದ್ದು ಐತಿಹಾಸಿಕ ನಿರ್ಧಾರ - ಜಂಟಿ ಅಧಿವೇಶನದಲ್ಲಿ ರಾಷ್ಟ್ರಪತಿ ಜಂಟಿ ಅಧಿವೇಶವನ್ನು ಉದ್ಧೇಶಿಸಿ ಮಾತನಾಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್, ನಮ್ಮ ದೇಶ ಅಭಿವೃದ್ದಿ ಪಥದತ್ತ ಸಾಗುತ್ತಿದೆ. ಪೌರತ್ವಕಾಯ್ದೆ, ಮುಸ್ಲಿಂ ಮಹಿಳೆಯರ ಪರವಾದ ತ್ರಿ ತಲಾಕ್ ನಿಷೇಧ ಕಾಯ್ದೆ ಸೇರಿದಂತೆ ಹಲವು ಐತಿಹಾಸಿಕ ಕಾಯ್ದೆ ಜಾರಿಗೊಳಿಸಿದೆ ಎಂದರು. ಆರ್ಟಿಕಲ್ 370 ರದ್ದು ಕೂಡಾ ಕೇಂದ್ರ ಸರಕಾರ ಮಹತ್ವದ ನಿರ್ಧಾರವಾಗಿದೆ. ಈ ಮೂಲಕ ಜಮ್ಮು ಕಾಶ್ಮೀರ ಹಾಗೂ ಲಡಾಕ್‌ ಅಭಿವೃದ್ಧಿಗೆ ಕಾರಣವಾಗಿದೆ. ಜಮ್ಮು ಕಾಶ್ಮೀರದಲ್ಲಿ ಅಭಿವೃದ್ದಿ ಕಾರ್ಯಗಳಿಗೆ ಕೇಂದ್ರ ಸರಕಾರ ಶ್ರಮಿಸುತ್ತಿದ್ದು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಭಾಷಣದಲ್ಲಿ ರಾಮಜನ್ಮ ಭೂಮಿ ಕುರಿತಾದ ಸುಪ್ರೀಂಕೋರ್ಟ್ ತೀರ್ಪು ಐತಿಹಾಸಿಕ ಎಂದು ಅವರು ನವಭಾರತ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಬೇಕಾಗಿದೆ ಎಂದು ಮನವಿ ಮಾಡಿದರು.


from India & World News in Kannada | VK Polls https://ift.tt/2S6xiyu

ಲಂಡನ್‌ನಲ್ಲಿ ಕೊಡಗಿನ ಪಂದಿಕರಿ, ಕಡುಂಬುಟ್ಟು, ಅಕ್ಕಿರೊಟ್ಟಿ, ಬೈಂಬಳೆ ಸಾರು!

ಮಡಿಕೇರಿ: ಕೊಡಗಿನ ಪ್ರಸಿದ್ಧ ತಿನಿಸುಗಳಾದ , ಕಡುಂಬುಟ್ಟು, ಅಕ್ಕಿರೊಟ್ಟಿ, ಬೈಂಬಳೆ ಕರಿ (ಕಣಿಲೆ ಸಾರು) ಸದ್ಯದಲ್ಲೇ ನ್ಯೂಯಾರ್ಕ್‌, ಲಂಡನ್‌ನ ಪ್ರಸಿದಟಛಿ ಹೊಟೇಲ್‌ಗಳ ಮೆನುವಿನಲ್ಲಿ ಕಾಣಿಸಿ ಕೊಂಡರೂ ಅಚ್ಚರಿಯಿಲ್ಲ. ಜಗತ್‌ ಪ್ರಸಿದ್ಧ ಬಾಣಸಿಗ, ರೆಸ್ಟೋರೆಂಟ್‌ಗಳ ಮಾಲೀಕ ಹಾಗೂ ಕಿರುತೆರೆಯ ನಿರ್ವಾಹಕ ಗಾರ್ಡನ್‌ ರಾಮ್‌ಸೇ ಜಿಲ್ಲೆಗೆ ಆಗಮಿಸಿದ್ದಾರೆ. ಕೊಡಗಿನ ದೇಸಿ ತಿನಿಸುಗಳ ಬಗ್ಗೆ ಅಧ್ಯಯನ ನಡೆಸಿದ ಸಾಕ್ಷ್ಯ ಚಿತ್ರ ತೆಗೆಯುತ್ತಿದ್ದಾರೆ. ಗುಣಮಟ್ಟಕ್ಕಾಗಿ ನೀಡುವ ಮಿಷೆಲಿನ್‌ ಸ್ಟಾರ್‌ಗಳನ್ನು 16 ಬಾರಿ ಸಂಪಾದಿಸಿರುವ ಹೆಗ್ಗಳಿಕೆ ಗಾರ್ಡನ್‌ ರಾಮ್‌ಸೇ ಅವರ ರೆಸ್ಟೋರೆಂಟ್‌ಗಳಿಗಿದೆ. ಕೊಡಗಿನ ವಿಶೇಷ ಮತ್ತು ಪ್ರಸಿದ್ಧ ತಿನಿಸುಗಳ ಬಗ್ಗೆ ತಿಳಿದುಕೊಂಡಿರುವ ರಾಮ್‌ಸೇ ತಮ್ಮ ದೊಡ್ಡ ತಂಡದೊಂದಿಗೆ ಬಂದಿದ್ದು ಜಿಲ್ಲೆಯ ವಿವಿಧೆಡೆ ಸಾಕ್ಷ್ಯ ಚಿತ್ರದ ಚಿತ್ರೀಕರಣ ನಡೆಸಿದ್ದಾರೆ. ಇಲ್ಲಿಗೆ ಬರುವುದಕ್ಕೆ ಮುಂಚೆ ಅವರು ಕಣ್ಣೂರಿನ ಮಲಪ್ಪಿಲಂಗಾಡ್‌ ಬೀಚ್‌ನಲ್ಲಿ ಮಲಬಾರ್‌ ತಿನಿಸುಗಳ ಬಗ್ಗೆ ಸಾಕ್ಷ್ಯಚಿತ್ರದ ಚಿತ್ರೀಕರಣ ನಡೆಸಿದ್ದರು. ಅರಿಪತಿರಿ, ಕಲ್ಲುಮಖ್ಯಾ ಫ್ರೈ, ತಲಶ್ಯೇರಿ ಬಿರಿಯಾನಿ ಕುರಿತು ಚಿತ್ರ ತಯಾರಿಸಿದ್ದಾರೆ.


from India & World News in Kannada | VK Polls https://ift.tt/31arXKz

ಪುಟ್ಟ ಮಗುವಿನಂತೆ ಹಾರಿ ರೋಹಿತ್ ಶರ್ಮಾರನ್ನು ಬಿಗಿದಪ್ಪಿದ ವಿರಾಟ್ ಕೊಹ್ಲಿ; ವಿಡಿಯೋ ವೈರಲ್!

ಹ್ಯಾಮಿಲ್ಟನ್: 2019 ಏಕದಿನ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್‌ನಲ್ಲಿ ಎದುರಾದ ಸೋಲಿನ ಬಳಿಕ ಟೀಮ್ ಇಂಡಿಯಾ ನಾಯಕ ಹಾಗೂ ಉಪನಾಯಕ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಬಗ್ಗೆ ವದಂತಿಗಳು ಹರಡಿದ್ದವು. ತಂಡದಲ್ಲಿ ಎರಡು ಬಣ ರೂಪುಗೊಂಡಿದ್ದು, ಟೀಮ್ ಇಂಡಿಯಾ ಗೇಮ್ ಪ್ಲ್ಯಾನ್ ಬಗ್ಗೆ ವೈಮನಸ್ಸು ಉಂಟಾಗಿದೆ ಎಂದೆಲ್ಲ ವರದಿಗಳು ಹಬ್ಬಿದ್ದವು. ಈ ನಡುವೆ ಇವೆಲ್ಲವೂ ಗಾಳಿ ಸುದ್ದಿಯಾಗಿದ್ದು, ತಮ್ಮೊಳಗೆ ಯಾವುದೇ ತೊಂದರೆಯಿಲ್ಲ. ಭಾರತೀಯ ಕ್ರಿಕೆಟ್‌ಗಾಗಿ ತಮ್ಮ ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಿದ್ದೇವೆ ಎಂದು ಆಟಗಾರರು ಸ್ಪಷ್ಟನೆ ನೀಡಿದ್ದರು. ತದಾ ಬಳಿಕ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಉತ್ತಮ ಒಡನಾಟವನ್ನು ಕಾಪಾಡಿಕೊಂಡಿದ್ದಾರೆ. ಪ್ರತಿ ಬಾರಿಯೂ ರೋಹಿತ್ ಶರ್ಮಾ ಉತ್ತಮ ಪ್ರದರ್ಶನ ನೀಡಿದಾಗ ಶ್ಲಾಘಿಸಲು ವಿರಾಟ್ ಕೊಹ್ಲಿ ಮರೆಯುವುದಿಲ್ಲ. ಅಷ್ಟೇ ಯಾಕೆ ಟೆಸ್ಟ್ ಕ್ರಿಕೆಟ್‌ನಲ್ಲೂ ಆರಂಭಿಕ ಸ್ಥಾನ ನೀಡುವ ಮೂಲಕ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲೂ ರೋಹಿತ್ ಟೀಮ್ ಇಂಡಿಯಾದ ಅವಿಭಾಜ್ಯ ಅಂಗವಾಗಲು ನೆರವಾಗಿದ್ದಾರೆ. ಈ ಮಧ್ಯೆ ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಭಾರತ ತಂಡವು ಚೊಚ್ಚಲ ಹಾಗೂ ಐತಿಹಾಸಿಕ ಟಿ20 ಸರಣಿ ಗೆಲುವು ದಾಖಲಿಸಿದೆ. ಹ್ಯಾಮಿಲ್ಟನಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಸೂಪರ್ ಓವರ್‌ನಲ್ಲಿ ಕೊನೆಯ ಎರಡು ಎಸೆತಗಳನ್ನು ಸಿಕ್ಸರ್‌ಗಟ್ಟಿದ ರೋಹಿತ್ ಶರ್ಮಾ ರೋಚಕ ಗೆಲುವು ಒದಗಿಸಿಕೊಡುವಲ್ಲಿ ನೆರವಾಗಿದ್ದರು. ಈ ಸಂದರ್ಭದಲ್ಲಿ ಓಡೋಡಿ ಬಂದ ನಾಯಕ ವಿರಾಟ್ ಕೊಹ್ಲಿ ಪುಟ ಮಗುವಿನಂತೆ ಹಾರಿ ರೋಹಿತ್ ಶರ್ಮಾರನ್ನು ಬಿಗಿದಪ್ಪಿಕೊಂಡಿರುವ ವಿಡಿಯೋ ವೈರಲ್ ಆಗಿ ಹರಡಿದೆ. ಭಾರತೀಯ ಆಟಗಾರರೆಲ್ಲ ಈ ಸಂದರ್ಭದಲ್ಲಿ ವಿಜಯೋತ್ಸವದಲ್ಲಿ ಭಾಗಿಯಾದರು. ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಟೀಮ್ ಇಂಡಿಯಾದ ಆಧಾರ ಸ್ತಂಭವಾಗಿದ್ದಾರೆ. ಸಮಕಾಲೀನ ಕ್ರಿಕೆಟ್‌ನಲ್ಲಿ ಭಾರತದ ಯಶಸ್ಸಿನಲ್ಲಿ ಇವರಿಬ್ಬರ ಪಾಲು ಮಹತ್ತರವಾಗಿದೆ. ಅಂದ ಹಾಗೆ ಭಾರತೀಯ ತಂಡವೀಗ ವೆಲ್ಲಿಂಗ್ಟನ್‌ನಲ್ಲಿ ನಾಲ್ಕನೇ ಟಿ20 ಪಂದ್ಯದಲ್ಲಿ ಭಾಗವಹಿಸುತ್ತಿದ್ದು, ಸರಣಿ ಕ್ಲೀನ್ ಸ್ವೀಪ್ ಮಾಡುವ ಗುರಿಯನ್ನಿರಿಸಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2u9aV3B

ಸಂಪುಟ ಸರ್ಕಸ್‌: ಶಾ ಭೇಟಿಗೆ ಕಾಯುತ್ತಿದ್ದಾರೆ ಬಿಎಸ್‌ವೈ

ಹೊಸದೆಹಲಿ: ಕುರಿತಾಗಿ ವರಿಷ್ಠರ ಜೊತೆಗೆ ಮಾತುಕತೆ ನಡೆಸಲು ಸಿಎಂ ಬಿ.ಎಸ್‌ ಯಡಿಯೂರಪ್ಪ ದೆಹಲಿಯಲ್ಲಿ ಬೀಡುಬಿಟ್ಟಿದ್ದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಗಾಗಿ ಕಾಯುತ್ತಿದ್ದಾರೆ. ಗುರುವಾರ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಜೊತೆಗೆ ಮಾತುಕತೆ ನಡೆಸಿದ್ದರು. ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜೊತೆಗೆ ಭೇಟಿ ಕೇವಲ ಹೂಗುಚ್ಚ ನೀಡುವುದಕ್ಕಾಗಿ ಮಾತ್ರವೇ ಸೀಮಿತವಾಗಿತ್ತು. ಶುಕ್ರವಾರ ಅಮಿತ್ ಶಾ ಜೊತೆಗೆ ಭೇಟಿ ನಿಗದಿಯಾದರೂ ಪದೇ ಪದೇ ಮುಂದೂಡಲಾಗುತ್ತಿದೆ. ಶುಕ್ರವಾರ ಬೆಳಗ್ಗೆ 10 ಗಂಟೆಗೆ ಶಾ ಜೊತೆಗೆ ಮಾತುಕತೆ ನಡೆಸುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಅದು ಮುಂದೂಡಲ್ಪಟ್ಟಿದೆ. 11 ಗಂಟೆಗೆ ಸಂಸತ್ ಜಂಟಿ ಅಧಿವೇಶನದಲ್ಲಿ ಅಮಿತ್ ಶಾ ಭಾಗಿಯಾಗಲಿದ್ದಾರೆ. ಇದಾದ ಬಳಿಕ ಶನಿವಾರ ಕೇಂದ್ರ ಬಜೆಟ್‌ ಮಂಡನೆ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕಾರಣಿ ಸಮಿತಿ ಸಭೆ ನಡೆಯಲಿದ್ದು ಶಾ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಸಂಜೆ 4 ಗಂಟೆಗೆ ದೆಹಲಿ ಚುನಾವಣಾ ಸಮಾವೇಶಕ್ಕೂ ಶಾ ತೆರಳಬೇಕಿದೆ. ಅಮಿತ್ ಶಾ ಕಾರ್ಯಕ್ರಮಗಳು ಬಹುತೇಕ ನಿಗದಿಯಾಗಿದ್ದು ಈ ನಡುವೆ ಬಿಎಸ್‌ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಸಂಪುಟ ವಿಸ್ತರಣೆ ಕುರಿತಾಗಿ ಮಾತುಕತೆ ನಡೆಸುವುದು ಯಾವಾಗ ಎಂಬುವುದು ಕುತೂಹಲ ಕೆರಳಿಸಿದೆ. ವರಿಷ್ಠರ ಭೇಟಿಗಾಗಿ ಸಿಎಂ ಬಿಎಸ್‌ ಯಡಿಯೂರಪ್ಪ ದೆಹಲಿ ಕನ್ನಡ ಭವನದಲ್ಲಿ ಕಾಯುತ್ತಿದ್ದಾರೆ. ಕೆಲವು ಸಚಿವಾಕಾಂಕ್ಷಿಗಳೂ ದೆಹಲಿಯಲ್ಲೇ ಬೀಡುಬಿಟ್ಟಿದ್ದಾರೆ. ವರಿಷ್ಠರ ಜೊತೆಗಿನ ಮಾತುಕತೆಯ ಬಳಿಕ ಶುಕ್ರವಾರ ಬೆಳಗ್ಗೆ ಸಿಎಂ ರಾಜ್ಯಕ್ಕೆ ಹಿಂತಿರುಗುವವರಿದ್ದರು. ಆದರೆ ಸದ್ಯದ ಬೆಳವಣಿಗೆಯಲ್ಲಿ ಇದು ಸಾಧ್ಯವಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಒಂದು ವೇಳೆ ಅಮಿತ್ ಶಾ ಹಾಗೂ ಜೆಪಿ ನಡ್ಡ ಜೊತೆಗೆ ಸುದೀರ್ಘ ಮಾತುಕತೆ ನಡೆಯದೆ ಇದ್ದಲ್ಲಿ ಸಂಪುಟ ವಿಸ್ತರಣೆ ಸಂಕಟ ಮತ್ತಷ್ಟು ದಿನಗಳ ಕಾಲ ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ.


from India & World News in Kannada | VK Polls https://ift.tt/37KhE2j

ಇಂದಿನಿಂದ ಎರಡು ದಿನ ಬ್ಯಾಂಕ್ ಮುಷ್ಕರ, ಎಟಿಎಂ ಸ್ಥಗಿತ!

ಹೊಸದಿಲ್ಲಿ: ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳ ವಿಲೀನ ವಿರೋಧಿಸಿ ಅಖಿಲ ಭಾರತ ಅಧಿಕಾರಿಗಳ ಫೆಡರೇಶನ್‌ ಹಾಗು ಇತರ ಸಂಘಸಂಸ್ಥೆಗಳ ಒಕ್ಕೂಟ ಜನವರಿ 31 ಮತ್ತು ಫೆ.1ರಂದು ಎರಡು ದಿನಗಳ ಬ್ಯಾಂಕುಗಳ ಮುಷ್ಕರಕ್ಕೆ ಕರೆನೀಡಿದೆ. ಬೇಡಿಕೆ ಈಡೇರದಿದ್ದರೆ ಏಪ್ರಿಲ್‌ 1ರಿಂದ ಅನಿರ್ಧಿಷ್ಟ ಕಾಲ ಮುಷ್ಕರವನ್ನೂ ಸಹ ಹಮ್ಮಿಕೊಂಡಿರುವುದಾಗಿ ಬ್ಯಾಂಕ್‌ ಅಧಿಕಾರಿಗಳ ಒಕ್ಕೂಟ ತಿಳಿಸಿದೆ. ಮಾತ್ರವಲ್ಲ ಪುನಃ ಫೆ.11, 12, 13ರಂದು ಉಗ್ರ ಹೋರಾಟ ನಡೆಲಾಗುವುದು. ರಾಷ್ಟ್ರವ್ಯಾಪಿ ಮುಷ್ಕರದ ಕರೆಯಿಂದ ಬ್ಯಾಂಕುಗಳ ವಹಿವಾಟಿಗೆ ಧಕ್ಕೆಯಾಗಬಹುದು. ಖಾಸಗೀಕರಣಗೊಳಿಸುವ ಉದ್ದೇಶದಿಂದ ಸರಕಾರವು ರಾಷ್ಟ್ರೀಕೃತ ಬ್ಯಾಂಕುಗಳ ವಿಲೀನ ಪ್ರಕ್ರಿಯೆಗೆ ಮುಂದಾಗಿದೆ ಎಂದು ಕೆನರಾ ಬ್ಯಾಂಕ್‌ ಅಧಿಕಾರಿಗಳ ಅಸೋಸಿಯೆಶನ್‌ ಛೇರಮನ್‌ ಜೆ. ಎಸ್‌. ಜಗದೀಶ ತಿಳಿಸಿದ್ದಾರೆ. ವೇತನ ಪರಿಷ್ಕರಣೆ, ಸಿಬ್ಬಂದಿ ಕಲ್ಯಾಣ ನಿಧಿಯ ಹಂಚಿಕೆ, ವಿಶೇಷ ವೇತನವನ್ನು ಮೂಲ ವೇತನದೊಡನೆ ವಿಲೀನಗೊಳಿಸುವುದು, ಬ್ಯಾಂಕುಗಳ ವಹಿವಾಟು ವಾರದಲ್ಲಿಐದು ದಿನಗಳಿಗೆ ಮಿತಿಗೊಳಿಸುವುದು, ಮತ್ತು ನಿವೃತ್ತ ಬ್ಯಾಂಕ್‌ ಅಧಿಕಾರಿಗಳ ಪಿಂಚಣಿಗೆ ಸಂಭಂದಿಸಿದ ಹಲವಾರು ಸಮಸ್ಯೆಗಳನ್ನು ತಕ್ಷಣವೆ ಕೇಂದ್ರ ಸರ್ಕಾರ ಈಡೇರಿಸಬೇಕು ಎಂದು ಫೆಡರೇಷನ್‌ ಒತ್ತಾಯಿಸಿದೆ. ಈ ಹಿಂದೆಯೂ ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ 2 ದಿನಗಳ ಬ್ಯಾಂಕ್ ಮುಷ್ಕರ ನಡೆಸಿತ್ತು. ಆಗ ಕೇಂದ್ರ ಹಣಕಾಸು ಇಲಾಖೆ ಬೇಡಿಕೆ ಪೂರೈಸುವುದಾಗಿ ಭರವಸೆ ನೀಡಿತ್ತು. ಆದರೆ ಇಲ್ಲಿವರೆಗೆ ಕೇಂದ್ರ ಸರಕಾರ ಕೊಟ್ಟಿರುವ ಭರವಸೆ ಈಡೇರಿಲ್ಲ. ಹೀಗಾಗಿ ಮತ್ತೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಇನ್ನು ಮುಷ್ಕರ ಹಿನ್ನೆಲೆಯಲ್ಲಿ ಎಟಿಎಂ ನಲ್ಲಿ ಕೂಡ ಹಣ ಇರುವ ಸಾಧ್ಯತೆ ತೀರಾ ಕಡಿಮೆ ಇದ್ದು, ಗ್ರಾಹಕರು ಪರದಾಡುವ ಸ್ಥಿತಿ ನಿರ್ಮಾಣವಾಗಬಹುದು.


from India & World News in Kannada | VK Polls https://ift.tt/2vu6jVV

ಸರಕಾರ ರೈತರಿಗಾಗಿ ಘೋಷಿಸುವ ಬೆಂಬಲ ಬೆಲೆ ಸಲೀಸಾಗಿ ವರ್ತಕರ ಜೇಬು ಸೇರುತ್ತಿದೆ!

- ರಾಘವೇಂದ್ರ ಭಟ್‌, ಬೆಂಗಳೂರು ಘೋಷಣೆಗೂ ಮುನ್ನವೇ ಶೇ.40ರಿಂದ 50ರಷ್ಟು ಬೆಳೆಗಳನ್ನು ವರ್ತಕರು ಖರೀದಿಸಿ ದಾಸ್ತಾನು ಮಾಡಿಟ್ಟು ಕೊಂಡಿದ್ದಾರೆ. ಪುಡಿಕಾಸು ನೀಡಿ ರೈತರ ಪಹಣಿ ಪಡೆದು ಸರಕಾರಕ್ಕೆ ಹೆಚ್ಚಿನ ದರಕ್ಕೆ ಧಾನ್ಯಗಳನ್ನು ಮಾರಾಟ ಮಾಡಲು ವೇದಿಕೆ ಸಿದ್ಧವಾಗಿದೆ. ಕಳೆದ ಎರಡು ವರ್ಷದಿಂದ ಬೆಂಬಲ ಬೆಲೆಯ 'ಧನ' ಮಧ್ಯವರ್ತಿಗಳ ಜೇಬು ಸೇರುತ್ತಿರುವ ಬಗ್ಗೆ ವ್ಯಾಪಕ ದೂರು ಕೇಳಿ ಬಂದಿದ್ದರೂ ರಾಜ್ಯ ಸರಕಾರ ಎಚ್ಚೆತ್ತುಕೊಂಡಿಲ್ಲ. ಬೆಳೆಗಳು ವರ್ತಕರ ಗೋದಾಮಿನಲ್ಲಿ ಭದ್ರವಾದ ನಂತರ ಬೆಂಬಲ ಬೆಲೆ ಘೋಷಣೆಯಾಗಿದೆ. ಸರಕಾರದ ಈ ನೀತಿಯ ಬಗ್ಗೆ ರೈತ ಸಮುದಾಯದಿಂದ ಆಕ್ರೋಶ ವ್ಯಕ್ತವಾಗಿದೆ. ಹೇಗೆ ಅಕ್ರಮ?ಕೃಷಿ ವೆಚ್ಚ ಸೇರಿದಂತೆ ತಮ್ಮ ದೈನಂದಿನ ಖರ್ಚಿಗಾಗಿ ಬೆಳೆ ಬಂದ ತಕ್ಷಣವೇ ರೈತರು ಧಾನ್ಯಗಳನ್ನು ಮಾರಾಟ ಮಾಡುತ್ತಾರೆ. ದಾಸ್ತಾನು ಸಮಸ್ಯೆ, ದರ ಬಿದ್ದು ಹೋಗುವ ಭೀತಿ ಹಿನ್ನೆಲೆಯಲ್ಲಿ ರೈತರು ಆದಷ್ಟು ಬೇಗ ಉತ್ಪನ್ನಗಳ ಮಾರಾಟಕ್ಕೆ ಮುಂದಾಗುತ್ತಾರೆ. ಆದರೆ ಪ್ರತಿ ವರ್ಷವೂ ಆಯ್ದ ಬೆಳೆಗಳಿಗೆ ಸರಕಾರ ಕನಿಷ್ಠ ಬೆಂಬಲ ಬೆಲೆ ಘೋಷಿಸುವ ಮಾಹಿತಿ ಹೊಂದಿರುವ ವರ್ತಕರು ರೈತರಿಂದ ಖರೀದಿಸಿ ದಾಸ್ತಾನು ಮಾಡಿಟ್ಟಿರುತ್ತಾರೆ. ಸರಕಾರ ಒಮ್ಮೆ ದರ ಘೋಷಿಸುತ್ತಿದ್ದಂತೆ ರೈತರ ಪಹಣಿ ಪಡೆದು ಖರೀದಿ ಕೇಂದ್ರದ ಅಧಿಕಾರಿಗಳ ಜತೆಗಿನ 'ಅಪವಿತ್ರ ಮೈತ್ರಿ' ಮೂಲಕ ಹೆಚ್ಚಿನ ದರಕ್ಕೆ ಮಾರುತ್ತಾರೆ. ಉದಾಹರಣೆಗೆ ಪ್ರೋತ್ಸಾಹ ಬೆಲೆ 300 ರೂ. ಸೇರಿ ತೊಗರಿಗೆ ರಾಜ್ಯ ಸರಕಾರ 6100 ರೂ. ದರ ನಿಗದಿ ಮಾಡಿದೆ. ಆದರೆ ಕೃಷಿ ಇಲಾಖೆ ಮೂಲಗಳ ಪ್ರಕಾರ ಶೇ.50ರಷ್ಟು ತೊಗರಿಯನ್ನು ರೈತರಿಂದ ವರ್ತಕರು 4 ಸಾವಿರ ರೂ. ಪ್ರತಿ ಕ್ವಿಂಟಾಲ್‌ ದರದಲ್ಲಿ ಈಗಾಗಲೇ ಖರೀದಿ ಮಾಡಿದ್ದಾರೆ. 2 ತಿಂಗಳು ದಾಸ್ತಾನು ಮಾಡಿದ ವರ್ತಕರು ಪ್ರತಿ ಕ್ವಿಂಟಾಲ್‌ ತೊಗರಿಗೆ ಸರಾಸರಿ 2 ಸಾವಿರ ರೂ. ಹೆಚ್ಚುವರಿ ಲಾಭ ಪಡೆಯುತ್ತಿದ್ದಾರೆ. ಖರೀದಿ ಕೇಂದ್ರದಲ್ಲಿ ಸರದಿ ಸಾಲಿನಲ್ಲಿ ನಿಂತು ವರ್ತಕರ ಪರವಾಗಿ ತಮ್ಮ ಪಹಣಿ ಕೊಟ್ಟು ಉತ್ಪನ್ನಗಳನ್ನು ಮಾರಾಟ ಮಾಡುವ ರೈತರಿಗೆ ದಿನಕ್ಕೆ 1 ಸಾವಿರ ರೂ.ಯಷ್ಟು ನೀಡಿ ತೃಪ್ತಿಪಡಿಸಲಾಗುತ್ತಿದೆ. ಸರಕಾರ ಏನು ಮಾಡಬೇಕು?ಪ್ರತಿ ವರ್ಷವೂ ಸರಕಾರ ವಿಳಂಬ ನೀತಿ ಅನುಸರಿಸುತ್ತಿರುವುದರಿಂದ ಲಾಭ ಮಧ್ಯವರ್ತಿಗಳಿಗೆ ಮಾತ್ರ ಸಿಗುತ್ತಿದೆ. ಹೀಗಾಗಿ ರಾಜ್ಯದ 14 ಮುಂಗಾರು ಬೆಳೆಗಳಿಗೆ ಸೆಪ್ಟೆಂಬರ್‌ನಲ್ಲೇ ಬೆಂಬಲ ಬೆಲೆ ಘೋಷಿಸಬೇಕೆಂಬ ವಾದ ಕೃಷಿ ತಜ್ಞರದು. ತೊಗರಿ, ಹೆಸರು, ಉದ್ದು, ಶೇಂಗಾ, ಕಡಲೆ, ಭತ್ತ, ಜೋಳ, ರಾಗಿ, ಗೋಧಿ, ಸೂರ್ಯಕಾಂತಿ, ಹತ್ತಿ, ಕುಸುಬೆ, ಸೋಯಾಬೀನ್‌, ಮುಸುಕಿನ ಜೋಳ ಸೆಪ್ಟೆಂಬರ್‌ ಹೊತ್ತಿಗೆ ಮಾರುಕಟ್ಟೆ ಪ್ರವೇಶಿಸುತ್ತವೆ. ಹೀಗಾಗಿ ಬಿತ್ತನೆಗೆ ಮುನ್ನ ಸಾಧ್ಯವಾಗದಿದ್ದರೆ ಸೆಪ್ಟೆಂಬರ್‌ ತಿಂಗಳಲ್ಲಾದರೂ ಬೆಂಬಲ ಬೆಲೆ ಘೋಷಣೆ ಮಾಡಬೇಕೆಂಬ ಕೂಗು ಕೇಳಿ ಬಂದಿದೆ. ಇದೆಲ್ಲದಕ್ಕಿಂತ ಮುಖ್ಯವಾಗಿ ಕೃಷಿ ಇಲಾಖೆ, ಎಪಿಎಂಸಿ ಹಾಗೂ ಪತ್ತಿನ ಸಹಕಾರ ಸಂಘಗಳಲ್ಲಿ ಮುಂದಿನ ಮೂರು ತಿಂಗಳಲ್ಲಿ ಬೆಲೆ ಪದ್ಧತಿ ಬಗ್ಗೆ ಮುನ್ಸೂಚನೆ ನೀಡಬೇಕು. ಪ್ರತಿ ಕೇಂದ್ರಗಳಲ್ಲಿ ಸಂಭಾವ್ಯ ಬೆಲೆಗಳ ವಿವರವನ್ನು ಡ್ಯಾಶ್‌ಬೋರ್ಡ್‌ನಲ್ಲಿ ನಮೂದಿಸಬೇಕು ಎಂಬ ಸಲಹೆ ಕೇಳಿ ಬಂದಿದೆ. ಮುಂಗಾರು ಬೆಳೆಗಳಿಗೆ ಡಿಸೆಂಬರ್‌ನಲ್ಲೇ ಬೆಂಬಲ ಬೆಲೆ ಘೋಷಿಸಬೇಕು. ಜನವರಿ ಅಂತ್ಯದಲ್ಲಿ ಈ ಬಗ್ಗೆ ಆಲೋಚಿಸುವುದರಿಂದ ರೈತರಿಗೆ ಯಾವುದೇ ಲಾಭವಿಲ್ಲ. - ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ ಬಿತ್ತನೆಗೆ ಮುನ್ನವೇ ಬೆಂಬಲ ಬೆಲೆ ಘೋಷಿಸಬೇಕೆಂದು ಎಂಎಸ್‌ಪಿ ನೀತಿಯಲ್ಲಿ ಸ್ಪಷ್ಟವಾಗಿದೆ. ರಾಜ್ಯ ಹಾಗೂ ಕೇಂದ್ರ ಸರಕಾರಗಳು ಕಟಾವು ಆದ ಮೇಲೆ ಬೆಲೆ ನಿಗದಿ ಮಾಡುತ್ತಿರುವುದು ಸರಿಯಲ್ಲ. ಬೆಂಬಲ ಬೆಲೆ ಘೋಷಣೆಗೆ ಮುನ್ನ ಶೇ.50ರಷ್ಟು ಬೆಳೆಗಳು ಮಧ್ಯವರ್ತಿಗಳು ಹಾಗೂ ವರ್ತಕರ ಬಳಿ ಶೇಖರಣೆಯಾಗುತ್ತವೆ. ಇದರ ಲಾಭ ರೈತರಿಗೆ ಆಗುತ್ತಿಲ್ಲ. ಈ ಬಗ್ಗೆ ಸರಕಾರ ಎಚ್ಚರ ವಹಿಸಬೇಕು. - ಪ್ರಕಾಶ್‌ ಕಮ್ಮರಡಿ, ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ


from India & World News in Kannada | VK Polls https://ift.tt/37DMSs1

4 ಕಿಮೀ ಕಾಲ್ನಡಿಗೆಯಲ್ಲೇ ಸಾಗಿ ವಧುವಿನ ಮನೆ ತಲುಪಿದ ಮದುಮಗ!

ಸಚಿನ್, ದ್ರಾವಿಡ್, ಗಂಗೂಲಿ, ಧೋನಿ, ಕೊಹ್ಲಿ ಎಲೈಟ್ ಸಾಲಿಗೆ ಸೇರಲಿರುವ ಹಿಟ್‌ಮ್ಯಾನ್

ವೆಲ್ಲಿಂಗ್ಟನ್: ಹಿಟ್‌ಮ್ಯಾನ್ ಖ್ಯಾತಿಯ ಭಾರತ ಕ್ರಿಕೆಟ್ ತಂಡದ ಬಲಗೈ ಆರಂಭಿಕ ಬ್ಯಾಟ್ಸ್‌ಮನ್ , ಮಗದೊಂದು ಸ್ಮರಣೀಯ ಮೈಲಗಲ್ಲಿನ ಸನಿಹದಲ್ಲಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 14000 ರನ್‌ಗಳ ಮೈಲುಗಲ್ಲು ತಲುಪಲು ರೋಹಿತ್‌ಗಿನ್ನು ಕೇವಲ 31 ರನ್‌ಗಳ ಅವಶ್ಯಕತೆಯಿದೆ. 31 ರನ್ ಪೇರಿಸಿದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 14000 ರನ್‌ಗಳ ಮೈಲುಗಲ್ಲು ತಲುಪಿದ ಭಾರತದ ಎಂಟನೇ ಬ್ಯಾಟ್ಸ್‌ಮನ್ ಎಂಬ ಹಿರಿಮೆಗೆ ಪಾತ್ರವಾಗಲಿದ್ದಾರೆ. ಈ ಮೂಲಕ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ಮೊಹಮ್ಮದ್ ಅಜರುದ್ದೀನ್, ವೀರೇಂದ್ರ ಸೆಹ್ವಾಗ್, ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿ ಎಲೈಟ್ ಪಟ್ಟಿಗೆ ಸಾಲಿಗೆ ಸೇರ್ಪಡೆಯಾಗಲಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ಹ್ಯಾಮಿಲ್ಟನ್‌ನಲ್ಲಿ ನಡೆದ 'ಟೈ' ಪಂದ್ಯದಲ್ಲಿ ಭಾರತ ಸೂಪರ್ ಓವರ್ ಗೆಲುವು ದಾಖಲಿಸುವಲ್ಲಿ ರೋಹಿತ್ ಶರ್ಮಾ ನಿರ್ಣಾಯಕ ಪಾತ್ರ ವಹಿಸಿದ್ದರು. ಮೊದಲು ಕೇವಲ 23 ಎಸೆತಗಳಲ್ಲೇ ಅರ್ಧಶತಕ ಸಾಧನೆ ಮಾಡಿರುವ ರೋಹಿತ್ ಬಳಿಕ ಸೂಪರ್ ಓವರ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಬಾರಿಸಿ ಭಾರತಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದರು. ಈ ಮೂಲಕ ಕಿವೀಸ್ ನೆಲದಲ್ಲಿ ಚೊಚ್ಚಲ ಹಾಗೂ ಐತಿಹಾಸಿಕ ಟಿ20 ಸರಣಿ ಗೆಲುವು ದಾಖಲಿಸಿತ್ತು. ಇದೇ ಪಂದ್ಯದಲ್ಲಿ ಟಿ20ನಲ್ಲಿ 20ನೇ ಅರ್ಧಶತಕ ಬಾರಿಸಿರುವ ರೋಹಿತ್, ಆರಂಭಿಕನಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10000 ರನ್‌ಗಳ ಸಾಧನೆ ಮೆರೆದಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳು: ಸಚಿನ್ ತೆಂಡೂಲ್ಕರ್ (34,357) ರಾಹುಲ್ ದ್ರಾವಿಡ್ (24,208) ವಿರಾಟ್ ಕೊಹ್ಲಿ (21,777 *), ಸೌರವ್ ಗಂಗೂಲಿ (18,575), ಮಹೇಂದ್ರ ಸಿಂಗ್ ಧೋನಿ (17,266 *), ವೀರೇಂದ್ರ ಸೆಹ್ವಾಗ್ (17,253), ಮೊಹಮ್ಮದ್ ಅಜರುದ್ದೀನ್ (15,593), ರೋಹಿತ್ ಶರ್ಮಾ (13,969*) ಇನ್ನು ವಿಶ್ವ ಕ್ರಿಕೆಟ್‌ನಲ್ಲಿ ಒಟ್ಟಾರೆ ದಾಖಲೆಯನ್ನು ಪರಿಗಣಿಸಿದಾಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಮಾಜಿ ಐಕಾನ್ ಸಚಿನ್ ತೆಂಡೂಲ್ಕರ್ ಹೊಂದಿದ್ದಾರೆ. ಇವರನ್ನು ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕರ, ಆಸ್ಟ್ರೇಲಿಯಾದ ಮಾಜಿ ಕಪ್ತನ ರಿಕಿ ಪಾಂಟಿಂಗ್, ಶ್ರೀಲಂಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆ ಮತ್ತು ದಕ್ಷಿಣ ಆಫ್ರಿಕಾದ ಮಾಜಿ ಆಲ್‌ರೌಂಡರ್ ಜ್ಯಾಕ್ ಕ್ಯಾಲಿಸ್ ಹಿಂಬಾಲಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್ 5 ಬ್ಯಾಟ್ಸ್‌ಮನ್‌ಗಳು: ಸಚಿನ್ ತೆಂಡೂಲ್ಕರ್ (34,357) ಕುಮಾರ ಸಂಗಕ್ಕರ (28,016), ರಿಕಿ ಪಾಂಟಿಂಗ್ (27,483), ಮಹೇಲಾ ಜಯವರ್ಧನೆ (25,957) ಜ್ಯಾಕ್ ಕ್ಯಾಲಿಸ್ (25,534)


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/36GAxC9

ದಿಲ್ಲಿ ಚುನಾವಣೆ: ರಾಜಕೀಯ ಪಕ್ಷಗಳು ಮಹಿಳೆಯರನ್ನು ಟಾರ್ಗೆಟ್ ಮಾಡಿರುವುದೇಕೆ?

ಶಿವಾನಂದ ಹಿರೇಮಠ, ಹೊಸದಿಲ್ಲಿ: ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಆಪ್, ಮತ್ತು ಬಿಜೆಪಿ ಪಕ್ಷಗಳು ಈ ಬಾರಿ ಮಹಿಳಾ ಶಕ್ತಿಗೆ ಹೆಚ್ಚು ಒತ್ತು ಕೊಡುತ್ತಿವೆ. ಕಳೆದೆರೆಡು ಚುನಾವಣೆಯಲ್ಲಿ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿರುವ ಹಿನ್ನೆಲೆ ಈ ಮೊದಲಿಗಿಂತಲೂ ಮಹಿಳಾ ಸಂಘಟನೆಗಳನ್ನು ಪ್ರಚಾರದ ಪ್ರಕ್ರಿಯೆಯಲ್ಲಿ ರಾಜಕೀಯ ಪಕ್ಷಗಳು ತೋಡಗಿಸಿವೆ. ಮಹಿಳಾ ಘಟಕಗಳಿಗೆ ಹೆಚ್ಚಿನ ಜವಾಬ್ದಾರಿ ನೀಡಿದ್ದು, ಈ ಬಾರಿ ಹೆಚ್ಚಿನ ಕ್ಷೇತ್ರಗಳಲ್ಲಿ‌ ಮಹಿಳಾ ಸ್ಪರ್ಧಿಗಳು ಕಣದಲ್ಲಿ ಇರುವ ಮುನ್ಸೂಚನೆ ದೊರೆತಿದೆ. ಬಿಜೆಪಿ: ಮಹಿಳೆಯರಿಂದ ಸಂವಾದ ಕಾರ್ಯಕ್ರಮ, ಮಹಿಳೆಯರಿಗೆ ಪ್ರಾತಿನಿಧ್ಯ ನೀಡಲು ಬಿಜೆಪಿಯು ಶೇ. 33 ರಷ್ಟು ಮೀಸಲಾತಿ ಜಾರಿ ಮಾಡಿದೆ. ದಿಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ಪೂನಂ ಜಾ ಅವರು ಮಹಿಳಾ ತಂಡಗಳನ್ನು ರೂಪಿಸುವ ಮೂಲಕ ಮನೆ ಮನೆ ಪ್ರಚಾರ ಆರಂಭಿಸಿದ್ದಾರೆ. ಕೇಂದ್ರ ಸರಕಾರ ಯೋಜನೆಗಳನ್ನು ಮಹಿಳೆಯರಿಗೆ ತಿಳಿಸಿಕೊಡುವ ಪ್ರಯತ್ನ ಮಾಡುತ್ತಿದ್ದಾರೆ. ಕುಟುಂಬ ವ್ಯವಸ್ಥೆಯಲ್ಲಿ ಮಹಿಳೆಯರು ಮುಖ್ಯ ಭೂಮಿಕೆ ವಹಿಸುವುದರಿಂದ ಬೂತ್ ಮಟ್ಟದ ಮಹಿಳಾ ಸಂವಾದ ಕಾರ್ಯಕ್ರಮ ಹಮ್ಮಿಕೊಂಡು ಮಹಿಳೆಯರ ಜತೆ ಹೆಚ್ವಿನ ಸಂಪರ್ಕ ಸಾಧಿಸಲು ಮಹಿಳಾ ಘಟಕ ಕಾರ್ಯ ಪ್ರವೃತ್ತವಾಗಿದೆ. ಮಹಿಳಾ ಮತದಾರರನ್ನು ಸಂಪರ್ಕಿಸುವ ಸಲುವಾಗಿ ಬೆಳಗ್ಗೆ ಬೆಳಗ್ಗೆ 11 ರಿಂದ ಸಂಜೆ 5 ಗಂಟೆಯೊಳಗಾಗಿ ಮನೆ ಮನೆ ಪ್ರಚಾರ ನಡೆಸುತ್ತಿದೆ. ಮಹಿಳೆ ಉದ್ಯೋಗದಲ್ಲಿದ್ದರೆ ಸಂಜೆ 8 ರಿಂದ 9 ಗಂಟೆಯೊಳಗೆ ಅಂತಹ ಮಹಿಳೆಯರನ್ನು ಸಂಪರ್ಕಿ ಕೇಂದ್ರ ಸರಕಾರ ಯೋಜನೆಗಳನ್ನು ತಿಳಿಸಿ ಪ್ರಚಾರ ಮಾಡಲಾಗುತ್ತಿದೆ. ತನ್ನ ಮೊದಲ ಪಟ್ಟಿಯಲ್ಲಿ 4 ಮಹಿಳೆಯರಿಗೆ ಟಿಕೆಟ್ ನೀಡಿದ್ದ ಬಿಜೆಪಿಯು ಎರಡನೇ ಪಟ್ಟಿಯಲ್ಲಿ ಇನ್ನೇರೆಡು ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಟಿಕೆಟ್ ನೀಡಿ ಒಟ್ಟಾರೆ ಆರು ಕ್ಷೇತ್ರಗಳಲ್ಲಿ ಮಹಿಳೆಯರನ್ನು ಕಣಕ್ಕಿಳಿಸಿದೆ 2015 ರಲ್ಲಿ 9 ಕ್ಷೇತ್ರದಲ್ಲಿ ಮಹಿಳಾ ಅಭ್ಯರ್ಥಿಗಳನ್ನು ಬಿಜೆಪಿ ಕಣಕ್ಕಿಳಿಸಿತ್ತು. ಎಎಪಿ: ಬಜನೆ, ಕೀರ್ತನೆ ಮಂಡಳಿಗಳ ಸಂಪರ್ಕ, ಮಹಿಳಾ ಮತದಾರರ ಸೆಳೆಯಲು ಆಪ್ ತನ್ನದೇ ವಿಶಿಷ್ಟ ರೀತಿಯ ಮತ ಬೇಟೆ ಆರಂಭಿಸಿದೆ. ದಿಲ್ಲಿಯ ಬಡಾವಣೆಗಳಲ್ಲಿ ಚಿಕ್ಕ ಚಿಕ್ಕ ಸಭೆಗಳನ್ನು ನಡೆಸಲು ಉದ್ದೇಶಿಸಿರುವ ಆಪ್ ಪಕ್ಷವು ಮಹಿಳಾ ಭಜನಾ, ಕೀರ್ತನಾ ಮಂಡಳಿ ಹಾಗೂ ಮಹಿಳಾ ಸಂಘಟನೆಗಳ ನಿರಂತರ ಸಂಪರ್ಕ ಸಾಧಿಸುತ್ತಿದೆ. ಆಪ್ ಪಕ್ಷವು ಈಗಾಗಲೇ 3 ಸಾವಿರಕ್ಕೂ ಹೆಚ್ಚು ಮಹಿಳಾ ಸಭೆಗಳನ್ನು ನಡೆಸಿದ್ದಾರೆ. ರಾಜಕಾರಣದಲ್ಲಿ ಮಹಿಳಾ ಪ್ರಾಬಲ್ಯ ಕುರಿತು ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಿದೆ. ಕಳೆದ ಬಾರಿ 6 ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿತ್ತು. ಈ ಬಾರಿ 8 ಕ್ಷೇತ್ರದಲ್ಲಿ ಆಪ್ ಮಹಿಳಾ ಅಭ್ಯರ್ಥಿಗಳಿದ್ದಾರೆ. ಆಪ್‌ ಪಕ್ಷವು ದಿಲ್ಲಿಯಲ್ಲಿ ಮಹಿಳೆಯರ ಸಂಚಾರಕ್ಕೆ ಸರಕಾರಿ ಬಸ್ ಸಾರಿಗೆಯನ್ನು ಉಚಿತಗೊಳಿಸಿದೆ. ದಿಲ್ಲಿಯಾದ್ಯಂತ 10 ಲಕ್ಷಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದೆ. ಅಪಾಯಕಾರಿ ಸ್ಥಳಗಳನ್ನು ಗುರುತಿಸಿರುವ ದಿಲ್ಲಿ ಸರಕಾರ ಹೆಚ್ಚೆಚ್ಚು ಬೀದಿ ದೀಪಗಳನ್ನು ಅಳವಡಿಸಿದೆ. ಮಹಿಳೆಯರಿಗಾಗಿ ಸರಕಾರ ಜಾರಿ ತಂದ ಯೋಜನೆಗಳ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆಪ್‌ ಮಹಿಳಾ ಘಟಕ ಕೆಲಸ‌ ಮಾಡುತ್ತಿದೆ. ಕಾಂಗ್ರೆಸ್: ಮಹಿಳಾ ಸ್ಕ್ರೀನಿಂಗ್ ಕಮಿಟಿ, ಕಾಂಗ್ರೆಸ್ ಪಕ್ಷ ತನ್ನದೇ ಮಹಿಳಾ ಸ್ಕ್ರೀನಿಂಗ್ ಕಮಿಟಿ ಹೊಂದಿದೆ. ವಿಧಾನಸಭೆ ಅಭ್ಯರ್ಥಿಗಳ ಆಯ್ಕೆ, ದಿಲ್ಲಿ ಮಹಿಳಾ ಘಟಕಗಳ ಉಸ್ತುವಾರಿಗಳ ನೇಮಕ ಕುರಿತು ಇದೇ ಕಮಿಟಿ ವೀಕ್ಷಣೆ ನಡೆಸಿ ಹೈಕಮಾಂಡ್ ಗೆ ವರದಿ ನೀಡುತ್ತದೆ. ಕಾಂಗ್ರೆಸ್ ಪಕ್ಷದಲ್ಲಿ ‌ಜನಪ್ರಿಯ ಮಹಿಳಾ ಅಭ್ಯರ್ಥಿಗಳಿದ್ದಾರೆ. ಮಾಜಿ ಮುಖ್ಯಮಂತ್ರಿ ಕಿರಣ್ ವಾಲಿಯಾ, ಮಾಜಿ ಕೇಂದ್ರ ಸಚಿವೆ ಕೃಷ್ಣ ತೀರ್ಥ, ಅಲಕಾ ಲಂಬಾ ಸೇರಿದಂತೆ ಹಲವರು ಮಹಿಳಾ ಮತಗಳನ್ನು ಸೆಳೆಯಬಲ್ಲರು. ಕಾಂಗ್ರೆಸ್ ಪ್ರಣಾಳಿಕೆ ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ಕಿರಣ ವಾಲಿಯಾ ಪ್ರಮುಖ ಪಾತ್ರ ವಹಿಸಿದ್ದಾರೆ. ಬೆಲೆ ಏರಿಕೆ ಕುರಿತು ಮಹಿಳಾ ಮತದಾರರು ಅಸಮಾಧಾನ ಗೊಂಡಿದ್ದು, ಕಾಂಗ್ರೆಸ್ ನತ್ತ ವಾಲುವ ಭರವಸೆಯನ್ನು ಕಾಂಗ್ರೆಸ್ ಪಕ್ಷ ಹೊಂದಿದೆ. 10 ಮಹಿಳಾ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಕಳೆದ ಬಾರಿ 5 ಮಹಿಳಾ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಟಿಕೆಟ್ ನೀಡಿತ್ತು. ವಿಧಾನಸಭೆ ಚುನಾವಣೆಗೆ ಮಹಿಳಾ ಅಭ್ಯರ್ಥಿಗಳ ಆಯ್ಕೆ ಕುರಿತ ವರದಿಯನ್ನು ಮಹಿಳಾ ಘಟಕವು ಕಾಂಗ್ರೆಸ್ ಹೈಕಮಾಂಡ್ ಗೆ ಸಲ್ಲಿಸಿದ ಹಿನ್ನೆಲೆ ಕಾಂಗ್ರೆಸ್ಸಿನಿಂದ ಹೆಚ್ಚಿನ ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮಹಿಳೆಯ ದಾಖಲೆಯ ಮತದಾನ: ಕಳೆದೆರೆಡು ಚುನಾವಣೆಯಲ್ಲಿ ಮಹಿಳೆಯರು ದಾಖಲೆಯ ಮತದಾನ ಮಾಡಿದ್ದಾರೆ. 2013 ರಲ್ಲಿ ಶೇ. 65.1% ಹಾಗೂ 2015 ರಲ್ಲಿ 66.5 % ಮತದಾನ ಮಾಡಿದ್ದಾರೆ. 2013 ರಲ್ಲಿ ಶೇ.70 ಕ್ಕಿಂತ ಹೆಚ್ಚು 3 ಕ್ಷೇತ್ರಗಳಲ್ಲಿ, 2015 ರಲ್ಲಿ 7 ಕ್ಷೇತ್ರಗಳಲ್ಲಿ ಶೇ.70 ಕ್ಕಿಂತ ಹೆಚ್ಚು ಮಹಿಳೆಯರು ಮತದಾನ ಮಾಡಿದ್ದಾರೆ.


from India & World News in Kannada | VK Polls https://ift.tt/31bLAlq

ಭಾರತವನ್ನು ಇಸ್ಲಾಮಿಕ್‌ ದೇಶ ಮಾಡಲು ಪಣತೊಟ್ಟಿದ್ದ ಜೆಎನ್‌ಯು ಮಾಜಿ ವಿದ್ಯಾರ್ಥಿ ಶಾರ್ಜಿಲ್‌

ಸಂಪುಟ ವಿಸ್ತರಣೆ: ಇಂದು ಬೆಳಗ್ಗೆ 9.30ಕ್ಕೆ ಕ್ಲೈಮ್ಯಾಕ್ಸ್‌, ತುದಿಗಾಲ ಮೇಲೆ ನಿಂತ ಅರ್ಹರು!

ಬೆಂಗಳೂರು: ಶುಕ್ರವಾರ ಬೆಳಗ್ಗೆ 9.30ರ ಹೊತ್ತಿಗೆ ಪುನಃ ಅಮಿತ್‌ ಶಾ ಅವರನ್ನು ಭೇಟಿ ಮಾಡುತ್ತೇನೆ. ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಮುಂದಿನ ಪ್ರಕ್ರಿಯೆ ನಡೆಯಲಿದೆ ಎಂದು ಸಿಎಂ ತಿಳಿಸಿದ್ದರು. ಬಳಿಕ ಕೆಲವೇ ಹೊತ್ತಿನಲ್ಲಿ ಬಿಎಸ್‌ವೈ ಅವರಿಗೆ ಕರೆ ಮಾಡಿದ ಅಮಿತ್‌ ಶಾ ಶುಕ್ರವಾರ ಸಂಸತ್‌ ಜಂಟಿ ಅಧಿವೇಶನ ಬಳಿಕ ಚರ್ಚೆ ಮಾಡುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಸಂಸತ್‌ನಲ್ಲಿ ಜಂಟಿ ಅಧಿವೇಶನ ಬೆಳಗ್ಗೆ 11ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ನಡೆಯಲಿದೆ. ಸಂಜೆ 4 ಗಂಟೆಗೆ ಅಮಿತ್‌ ಶಾ ದಿಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 2 ಗಂಟೆಯಿಂದ 3 ಗಂಟೆ ನಡುವೆ ಬಿಎಸ್‌ವೈಗೆ ಕುರಿತಾಗಿ ಚರ್ಚಿಸಲು ಅವಕಾಶ ಸಿಕ್ಕಿದರೆ ಅದೇ ಹೆಚ್ಚು ಎನ್ನಲಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಜೆಪಿ ನಡ್ಡಾ ಅವರನ್ನು ಭೇಟಿಯಾದ ಬಳಿಕ ದಿಲ್ಲಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಯಡಿಯೂರಪ್ಪ, ಶುಕ್ರವಾರ ಬೆಳಗ್ಗೆ ಅಮಿತ್‌ ಶಾ ಅವರನ್ನು ಪುನಃ ಭೇಟಿ ಮಾಡಿ ಸಂಪುಟ ವಿಸ್ತರಣೆಗೆ ಸಂಬಂಧಿಸಿದ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಹೇಳಿದರು. ಮಂತ್ರಿಗಳಾಗಲು ತುದಿಗಾಲ ಮೇಲೆ ನಿಂತಿರುವ ಅರ್ಹರಿಗೆ ಕಾಯಿಸುವ ತಂತ್ರದ ಮೂಲಕ ಬಿಜೆಪಿ ಹೈಕಮಾಂಡ್‌ ಸಸ್ಪೆನ್ಸ್‌ ಮುಂದುವರಿಸಿದೆ. ಯಡಿಯೂರಪ್ಪ ಅವರು ದಿಲ್ಲಿಗೆ ತೆರಳುವ ಮುನ್ನ ಸಚಿವ ಸ್ಥಾನದ ಹಲವು ಆಕಾಂಕ್ಷಿಗಳು ಅವರನ್ನು ಭೇಟಿಯಾದರು. ಈ ಮಧ್ಯೆ ಕೆ.ಜೆ. ಬೋಪಯ್ಯ ಹಾಗೂ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್‌ ದಿಲ್ಲಿಯಲ್ಲಿ ಸಿಎಂ ಜೊತೆಗಿದ್ದಾರೆ. ಸರ್‌, ಪ್ಲೀಸ್‌ ಮಂತ್ರಿ ಮಾಡಿ: ಗೋಗರೆದ ನಿರಾಣಿ ಯಡಿಯೂರಪ್ಪ ಅವರು ದಿಲ್ಲಿಗೆ ತೆರಳುವ ಮುನ್ನ ಅವರ ನಿವಾಸಕ್ಕೆ ಭೇಟಿ ನೀಡಿದ್ದ ಮುರುಗೇಶ್‌ ನಿರಾಣಿ ಸಚಿವ ಸ್ಥಾನಕ್ಕೆ ಮತ್ತೆ ಒತ್ತಡ ತಂದು ಕೋಪಕ್ಕೆ ಗುರಿಯಾದರು. ಹರಿಹರದ ಜಾತ್ರೆ ಪ್ರಕರಣದ ಬಳಿಕ ನಿರಾಣಿ ಹೆಸರು ಕೇಳಿದರೆ ಸಿಎಂ ಕಿಡಿಕಿಡಿಯಾಗುತ್ತಿದ್ದಾರೆ. ಇದರ ನಡುವೆ ಸಿಎಂ ಮನೆಗೆ ತೆರಳಿದ್ದ ನಿರಾಣಿ, "ಸರ್‌, ದಯವಿಟ್ಟು ಹಳೆಯದನ್ನು ಮರೆತುಬಿಡಿ. ನಾನು ನಿಮ್ಮ ಶಿಷ್ಯ. ಪಕ್ಷಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದೇನೆ. ಮಂತ್ರಿ ಸ್ಥಾನಕ್ಕೆ ಪರಿಗಣಿಸಿ", ಎಂದು ಕೋರಿಕೊಂಡರು. ಚುನಾವಣೆಯಲ್ಲಿ ಸೋತಿರುವ ವಿಶ್ವನಾಥ್‌, ಎಂಟಿಬಿಗೂ ಸಚಿವ ಸ್ಥಾನ ಸಿಗಲಿದೆ. ತಾಂತ್ರಿಕ ತೊಂದರೆಯಿಂದ ವಿಳಂಬವಾಗಬಹುದಷ್ಟೇ. - ಬಿ.ಸಿ ಪಾಟೀಲ್‌, ಶಾಸಕ


from India & World News in Kannada | VK Polls https://ift.tt/318guLP

ಕಿವೀಸ್ ವಿರುದ್ಧ 4ನೇ ಕದನ; ಸರಣಿ ಗೆದ್ದಾಯಿತು ಈಗ ಕ್ಲೀನ್‌ ಸ್ವೀಪ್‌ ಗುರಿ

ವೆಲ್ಲಿಂಗ್ಟನ್‌: ನ್ಯೂಜಿಲೆಂಡ್‌ ನೆಲದಲ್ಲಿ ಚೊಚ್ಚಲ ಟಿ20 ಸರಣಿ ಗೆದ್ದು ಭರಪೂರ ಆತ್ಮವಿಶ್ವಾಸದಲ್ಲಿರುವ ಭಾರತ ತಂಡ ವೆಲ್ಲಿಂಗ್ಟನ್‌ನ ಸ್ಕೈ ಸ್ಟೇಡಿಯಮ್‌ನಲ್ಲಿಶುಕ್ರವಾರ ನಡೆಯಲಿರುವ ಟಿ20 ಸರಣಿಯ 4ನೇ ಪಂದ್ಯಧಿಧಿದಲ್ಲೂಗೆದ್ದು ಆತಿಥೇಯ ನ್ಯೂಜಿಲೆಂಡ್‌ ತಂಡವನ್ನು ವೈಟ್‌ವಾಷ್‌ ಮಾಡುವ ಯೋಜನೆ ಹಾಕಿಕೊಂಡಿದೆ. ಇದರ ನಡುವೆಯೂ ಮುಖ್ಯ ಕೋಚ್‌ ರವಿ ಶಾಸ್ತ್ರಿ ಮತ್ತು ನಾಯಕ ವಿರಾಟ್‌ ಕೊಹ್ಲಿ ತಂಡದ ಸಂಯೋಜನೆಯಲ್ಲಿಕೆಲವು ಪ್ರಯೋಗಗಳಿಗೆ ಕೈಹಾಕುವ ನಿರೀಕ್ಷೆಗಳಿವೆ. ಟಿ20 ವಿಶ್ವ ಕಪ್‌ಗೆ ಮೊದಲು ಸಮರ್ಥ ತಂಡವೊಂದನ್ನು ಕಟ್ಟುವ ಟಾರ್ಗೆಟ್‌ ಟೀಮ್‌ ಮ್ಯಾನೇಜ್ಮೆಂಟ್‌ ಮುಂದಿದೆ. ಹೀಗಾಗಿ ಕಳೆದ 3 ಪಂದ್ಯಗಳಲ್ಲಿ ಮೈದಾನಕ್ಕಿಳಿಯದ ಕೆಲವು ಆಟಗಾರರನ್ನು ಶುಕ್ರವಾರ 11ರ ಬಳಗಕ್ಕೆ ಸೇರಿಸಿಧಿಕೊಂಡು ಪರೀಕ್ಷೆಗೊಡ್ಡುವ ಸಾಧ್ಯತೆಗಳಿವೆ. ಸಂಜು ಸ್ಯಾಮ್ಸನ್ vs ರಿಷಬ್ ಪಂತ್ ವಿಕೆಟ್‌ ಕೀಪಿಂಗ್‌ ಜವಾಬ್ದಾರಿ ಕೆ.ಎಲ್‌.ರಾಹುಲ್‌ ಹೆಗಲೇರಿದ ಹೊರತಾಗಿಯೂ, ಮೀಸಲು ವಿಕೆಟ್‌ಕೀಪರ್‌ಗಳಾದ ಸಂಜು ಸ್ಯಾಮ್ಸನ್‌ ಹಾಗೂ ರಿಷಭ್‌ ಪಂತ್‌ ತಮ್ಮ ಪಾಲಿಗೆ ಅವಕಾಶದ ಬಾಗಿಲು ತೆರೆಯಬಹುದೇ ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಇವರಿಬ್ಬರು ಪ್ರಸ್ತುತ 15ರ ಬಳಗದಲ್ಲಿದ್ದಾರೆ. ಬೌಲಿಂಗ್‌ನಲ್ಲಿ ಬದಲಾವಣೆ: ಕಳೆದ 3 ಪಂದ್ಯಗಳಿಂದ ಬೆಂಚು ಕಾಯಿಸುತ್ತಿರುವ ನವದೀಪ್‌ ಸೈನಿ, ಯಜ್ವೇಂದ್ರ ಚಹಲ್‌ ಹಾಗೂ ವಾಷಿಂಗ್ಟನ್‌ ಸುಂದರ್‌ ಅವರ ಸಾಮರ್ಥ್ಯ ಪರೀಕ್ಷೆಗೂ 4ನೇ ಪಂದ್ಯ ವೇದಿಕೆಯಾಗಬಹುದು. ಆದರೆ, ಸ್ಪಿನ್ನರ್‌ ಹಾಗೂ ವೇಗಿಗಳ ನಡುವಿನ ಸಮತೋಲನ ಕಾಪಾಡಿಕೊಳ್ಳುವುದು ಅವರ ಮುಂದಿರುವ ಸವಾಲು. ವಾಷಿಂಗ್ಟನ್‌ ಸುಂದರ್‌ ತಂಡ ಸೇರುವ ನಿರೀಕ್ಷೆಯಿದ್ದು, ಶಾರ್ದುಲ್‌ ಬದಲಿಗೆ ಸೈನಿ ಎಂಟ್ರಿ ಪಡೆಯಬಲ್ಲರು. ಗ್ರ್ಯಾಂಡ್‌ಹೋಮ್‌ಗೆ ಬೆಂಚು? ನ್ಯೂಜಿಲೆಂಡ್‌ ತಂಡದಲ್ಲಿಸತತವಾಗಿ ವೈಫಲ್ಯ ಕಾಣುತ್ತಿರುವ ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌ ಬದಲಿಗೆ ಟಾಮ್‌ ಬ್ರೂಸ್‌ ಸ್ಥಾನ ಪಡೆಯಬಹುದು. ಮುಖಾಮುಖಿ: ಒಟ್ಟು 14 ಭಾರತಕ್ಕೆ ಗೆಲುವು: 06 ನ್ಯೂಜಿಲೆಂಡ್ ಜಯ: 08


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2thjcC8

ಜಾಮಿಯಾ ಗುಂಡಿನ ದಾಳಿಗೂ ಮುನ್ನ ಫೇಸ್‌ಬುಕ್‌ ಲೈವ್‌ ನಲ್ಲಿ ವಿವರಣೆ ಕೊಟ್ಟಿದ್ದ ಆರೋಪಿ!

ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ವಿರೋಧಿಸಿ ನಗರದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಜನರ ಗುಂಪಿನ ಮೇಲೆ ಗುಂಡು ಹಾರಿಸಿದ ಅಲಿಯಾಸ್‌ ರಾಮ್‌ಭಕ್ತ ಗೋಪಾಲ್‌, ಕೃತ್ಯ ಎಸಗುವ ಮುನ್ನ ಫೇಸ್‌ಬುಕ್‌ನಲ್ಲಿ ಲೈವ್‌ ನೀಡಿದ್ದ ಸಂಗತಿ ಈಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಪೂರ್ವ ಸಿದ್ಧತೆ ಮಾಡಿಕೊಂಡೇ ಗೋಪಾಲ್‌ ಘಟನಾ ಸ್ಥಳಕ್ಕೆ ಬಂದಿದ್ದ. ತಾನು ನಡೆಸುವ ದಾಳಿ ಪ್ರಚಾರ ಆಗಲಿ ಎನ್ನುವ ಉದ್ದೇಶದಿಂದ ಆತ ಫೇಸ್‌ಬುಕ್‌ ಲೈವ್‌ ಮಾಡಿದ್ದ. ಹೈಡ್ರಾಮ ಸೃಷ್ಟಿಯಾಗು­ತ್ತಿದ್ದಂತೆಯೇ ತನ್ನ ಬಳಿ ಕ್ಯಾಮೆರಾ ಹಿಡಿದು ಧಾವಿಸಿದ ಮಾಧ್ಯಮ ಪ್ರತಿನಿಧಿಗಳನ್ನೂ ಆತ ವಿರೋಧಿಸಲಿಲ್ಲ. ಆತನ ಪ್ರತಿ ನಡೆಯೂ ಚಿತ್ರೀಕರಣಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಂಧಿ ಪುಣ್ಯತಿಥಿ ಅಂಗವಾಗಿ ರಾಜ್‌ಘಾಟ್‌ಗೆ ಮೆರವಣಿಗೆ ತೆರಳಲು ಪ್ರತಿಭಟನಕಾರರ ಗುಂಪು ನಿರ್ಧರಿಸಿತ್ತು. ಅದಕ್ಕೆ ಪೊಲೀಸರು ಅನುಮತಿ ನೀಡಿರಲಿಲ್ಲವಾದರೂ ಮೆರವಣಿಗೆಗೆ ಯತ್ನಿಸಲಾ­ಗಿತ್ತು. ಇದನ್ನು ತಡೆಯಲು ಜಾಮಿಯಾ ಮಿಲಿಯಾ ವಿವಿ ಸುತ್ತ ಮುತ್ತಲಿನ ರಸ್ತೆಗಳನ್ನು ಬ್ಯಾರಿಕೇಡ್‌ ಹಾಕಿ ಬಂದ್‌ ಮಾಡಲಾಗಿತ್ತು. ರಸ್ತೆಗಳೆಲ್ಲ ಖಾಲಿಯಾಗಿ­ದ್ದವು. ಪ್ರತಿಭಟನೆ ನಡೆಸುತ್ತಿದ್ದ ರಸ್ತೆಯ ಒಂದು ತುದಿ ಮಾತ್ರ ಜನರಿಂದ ಭರ್ತಿಯಾಗಿತ್ತು. ಖಾಲಿ ರಸ್ತೆಯಲ್ಲಿ ಜನರಿದ್ದ ಕಡೆಗೆ ಗನ್‌ ಹಿಡಿದು ಧಾವಿಸಿದ ಗೋಪಾಲ್‌ ಮೊದಲು ಸಿಎಎ ಪರ ಘೋಷಣೆಗಳನ್ನು ಕೂಗಿದ. 'ಯಾರಿಗೆ ಬೇಕು ಸ್ವಾತಂತ್ರ್ಯ? ಕೊಡ್ತೀನಿ ತೆಗೆದುಕೊಳ್ಳಿ' ಎಂದು ಪ್ರತಿಭಟನಕಾರರಿಗೆ ಎಚ್ಚರಿಕೆ ನೀಡಿದ. 'ಜೈ ಶ್ರೀರಾಮ್‌' ಘೋಷಣೆ ಕೂಗುತ್ತಲೇ ಹೆಜ್ಜೆ ಹಾಕಿದ. 'ಭಾರತದಲ್ಲಿಉಳಿಯಬೇಕಾದರೆ ವಂದೇ ಮಾತರಂ ಘೋಷಣೆ ಕೂಗಿ' ಎಂದು ಬೆದರಿಕೆ ಹಾಕಿದ. ನಂತರ ಸಮಾಧಾನ ಪಡಿಸಲು ಕೆಲವರು ತನ್ನತ್ತ ಬರುತ್ತಿರುವುದನ್ನು ಗಮನಿಸಿ ಎಚ್ಚರಿಕೆ ನೀಡುತ್ತಲೇ ಹಿಮ್ಮುಖವಾಗಿ ಸಾಗಿದ. ಹಿಂದೆ ಪೊಲೀಸರ ಸರ್ಪಗಾವಲು ಇತ್ತು. ಈ ಒತ್ತಡದ ಘಳಿಗೆ ತೀರ ಹತ್ತಿರಕ್ಕೆ ಬಂದು ಸಮಾಧಾನಕ್ಕೆ ಯತ್ನಿಸಿದ ವಿದ್ಯಾರ್ಥಿಯತ್ತ ಗುಂಡು ಹಾರಿಸಿದ. ಗುಂಡು ವಿದ್ಯಾರ್ಥಿಯ ಕೈ ಸವರಿಕೊಂಡು ಹೊಯಿತು. ಖೇಲ್‌ ಖತಂ: ಬಿಳಿ ಬಣ್ಣದ ಪ್ಯಾಂಟ್‌, ಕಪ್ಪು ಬಣ್ಣದ ಜಾಕೆಟ್‌ ಧರಿಸಿದ್ದ ಗೋಪಾಲ್‌ ಪ್ರತಿಭಟನಾ ಸ್ಥಳಕ್ಕೆ ಬಂದು ಗುಂಡು ಹಾರಿಸುವ ಮೊದಲೇ ಫೇಸ್‌ಬುಕ್‌ನಲ್ಲಿ ಹಲವು ಸಂದೇಶಗಳನ್ನು ಪೋಸ್ಟ್‌ ಮಾಡಿದ್ದ. 'ಶಹೀನ್‌ಬಾಗ್‌ ಖೇಲ್‌ ಖತಂ' (ಇನ್ನು ಶಹೀನ್‌ಬಾಗ್‌ ಆಟ ಮುಗಿಯಿತು) ಎಂದಿದ್ದ. 'ನನ್ನ ಶವವನ್ನು ಜೈ ಶ್ರೀರಾಮ್‌ ಘೋಷಣೆ ಇರುವ ಕೇಸರಿ ಬಣ್ಣದ ವಸ್ತ್ರದಲ್ಲಿ ಹೊದಿಸಿ, ಕೊನೆಯ ಯಾತ್ರೆಗೆ ಅನುವು ಮಾಡಿಕೊಡಿ' ಎನ್ನುವ ಮತ್ತೊಂದು ಸಂದೇಶವನ್ನೂ ಆತ ಫೇಸ್‌ಬುಕ್‌ನಲ್ಲಿ ಹಾಕಿದ್ದ. ಫೇಸ್‌ಬುಕ್‌ ಸಂದೇಶದ ಸ್ಕ್ರೀನ್‌ಶಾಟ್‌ಗಳು ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದಂತೆಯೇ ಎಲ್ಲಪೋಸ್ಟ್‌ಗಳನ್ನು ಡಿಲೀಟ್‌ ಮಾಡಿದ್ದ. ಕ್ಷಣಾರ್ಧದಲ್ಲಿ ಗಲಿಬಿಲಿ: ''ಹೋಲಿ ಫ್ಯಾಮಿಲಿ ಆಸ್ಪತ್ರೆ ಕಡೆ ಶಾಂತಿಯುವಾಗಿ ನಾವು ಮೆರವಣಿಗೆ ಹೊರಟಿದ್ದಾಗ ಪೊಲೀಸರು ತಡೆ ಹಾಕಿದರು. ಈ ವೇಳೆ ಹಠಾತ್‌ ರಸ್ತೆಗೆ ನುಗ್ಗಿದ ಯುವಕನೊಬ್ಬ ಬೆದರಿಕೆ ಹಾಕುತ್ತಲೇ ಗುಂಡು ಹಾರಿಸಿದ. ಒಂದು ಗುಂಡು ನನ್ನ ಸ್ನೇಹಿತನ ಕೈ ಸೀಳಿಕೊಂಡು ಹೋಯಿತು,'' ಎಂದು ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಜಾಮಿಯಾ ವಿವಿಯ ವಿದ್ಯಾರ್ಥಿನಿ ಆಮ್ನಾ ಆಸಿಫ್‌ ಹೇಳಿದರು. ಮಾಸ್‌ ಕಮ್ಯುನಿಕೇಷನ್‌ ವಿದ್ಯಾರ್ಥಿ­ಯಾಗಿರುವ ಶಾದಬ್‌ ಫಾರೂಕ್‌ ಧೈರ್ಯದಿಂದ ದಾಳಿಕೋರನನ್ನು ಸಮಾಧಾನಪಡಿಸಲು ಆತನ ಬಳಿ ಹೋದ. ಆಗ ಗುಂಡು ಹಾರಿದ್ದರಿಂದ ಶಾದಬ್‌ ಎಡಗೈಗೆ ಗಾಯವಾಯಿತು ಎಂದು ಆಮ್ನಾ ವಿವರಿಸಿದರು. ಕಾಶ್ಮೀರ ನಿವಾಸಿಯಾದ ಶಾದಬ್‌ನನ್ನು ಚಿಕಿತ್ಸೆಗಾಗಿ ಏಮ್ಸ್‌ ಆಸ್ಪತ್ರೆಗೆ ಸೇರಿಸಲಾಗಿದೆ. ಠಾಕೂರ್‌ ಹೇಳಿಕೆ ಪ್ರಚೋದನೆ: ಜಾಮಿಯಾ­ನಗರ ಗುಂಡಿನ ದಾಳಿ ಘಟನೆ ಹಿನ್ನೆಲೆಯಲ್ಲಿಇತ್ತೀಚೆಗೆ ದಿಲ್ಲಿಚುನಾವಣಾ ರ‍್ಯಾಲಿಯಲ್ಲಿಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ನೀಡಿದ್ದ ಪ್ರಚೋದ­ನಾಕಾರಿ ಹೇಳಿಕೆ ಚರ್ಚೆಯ ಮುನ್ನೆಲೆಗೆ ಬಂದಿದೆ. 'ದೇಶದ್ರೋಹಿಗಳಿಗೆ ಗುಂಡಿಕ್ಕಿ' ಎನ್ನುವ ಪ್ರಚೋ­ದನಾಕಾರಿ ಘೋಷಣೆ­ಯನ್ನು ಠಾಕೂರ್‌ ಬಹಿರಂಗ ಸಭೆಯಲ್ಲಿಮೊಳಗಿಸಿದ್ದರು. ಇದಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಶಹೀನ್‌ಬಾಗ್‌ ಗನ್‌ ಪ್ರಕರಣ: ದಿಲ್ಲಿಯ ಶಹೀನ್‌ಬಾಗ್‌ನಲ್ಲಿಸಿಎಎ ವಿರೋಧಿಸಿ ಮಹಿಳೆಯರು ಮತ್ತು ಮಕ್ಕಳು ನಡೆಸುತ್ತಿರುವ ಪ್ರತಿಭಟನಾ ಧರಣಿ ಸ್ಥಳಕ್ಕೂ ದುಷ್ಕರ್ಮಿಯೊಬ್ಬ ನುಗ್ಗಿ ಗನ್‌ ಝಳಪಿಸಿ ಬೆದರಿಕೆ ಹಾಕಿದ್ದ. ಪ್ರತಿಭಟನೆ ಕೊನೆಗೊಳಿಸದಿದ್ದರೆ ಸುಟ್ಟು ಹಾಕುವುದಾಗಿ ಧಮಕಿ ಹಾಕಿದ್ದ. ಆತನನ್ನು ಪ್ರತಿಭಟನ­ಕಾರರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು.


from India & World News in Kannada | VK Polls https://ift.tt/2SaggQi

ಸಂಪುಟ ವಿಸ್ತರಣೆ: ಶಾ, ನಡ್ಡಾರಿಗೆ ಹೂಗುಚ್ಛ ನೀಡುವುದಕ್ಕಷ್ಟೇ ಸೀಮಿತವಾಯ್ತು ಸಿಎಂ ಭೇಟಿ!

ಬೆಂಗಳೂರು: ಬಹು ನಿರೀಕ್ಷಿತ ಸಂಪುಟ ವಿಸ್ತರಣೆಗೆ ಗುರವಾರವೇ ಗ್ರೀನ್‌ ಸಿಗ್ನಲ್‌ ಸಿಗಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ. ಈ ಸಂಬಂಧ ಶುಕ್ರವಾರ ಪುನಃ ಮಾತುಕತೆ ನಡೆಯಲಿದೆ. ಇದರೊಂದಿಗೆ ಪ್ರಕ್ರಿಯೆ ಜಟಿಲತೆ ಹಾದಿ ಹಿಡಿದಂತಾಗಿದೆ. ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲು ಸಿಎಂ ಗುರವಾರ ಮಧ್ಯಾಹ್ನವೇ ದಿಲ್ಲಿ ತಲುಪಿದ್ದರು. ಆದರೆ, ರಾತ್ರಿ 9 ಗಂಟೆಗೆ ಭೇಟಿಯಾಗುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸಮಯ ಕೊಟ್ಟಿದ್ದರು. ಅದರಂತೆ ನಡ್ಡಾ ಮನೆಗೆ ಸಿಎಂ ಹೋದರು. ಆದರೆ, ಕೇವಲ ಹತ್ತು ನಿಮಿಷದಲ್ಲಿ ಉಭಯರ ನಡುವಿನ ಮಾತುಕತೆ ಅಂತ್ಯಗೊಂಡಿತು. ಪಕ್ಷದ ಹೊಸ ಅಧ್ಯಕ್ಷರಾದ ನಡ್ಡಾ ಅವರನ್ನು ಅಭಿನಂದಿಸಿ ಹೂಗುಚ್ಛ ನೀಡಿ ಮೈಸೂರು ಪೇಟ ತೊಡಿಸುವುದಕ್ಕೆ ಈ ಭೇಟಿ ಸೀಮಿತವಾಯಿತು. ನಂತರ ಸಿಎಂ ಅವರು ಶಾ ನಿವಾಸಕ್ಕೆ ದೌಡಾಯಿಸಿದರು. ಆದರೆ, ದಿಲ್ಲಿ ಚುನಾವಣೆ ಪ್ರಚಾರದಿಂದ ಆಗಷ್ಟೇ ವಾಪಾಸಾಗಿದ್ದ ಅಮಿತ್‌ ಮಾತುಕತೆ ನಡೆಸುವ ಮನಸ್ಸು ಮಾಡಲಿಲ್ಲ. ಹಾಗಾಗಿ ಸಿಎಂ ಅವರು ಕೇಂದ್ರ ಗೃಹ ಸಚಿವರಿಗೂ ಹೂಗುಚ್ಛ ನೀಡಿ ಅಲ್ಲಿಂದ ನಿರ್ಗಮಿಸಿದರು. ಬಿಎಸ್‌ವೈ ಹಾಗೂ ಅಮಿತ್‌ ಶಾ ನಡುವಿನ ಭೇಟಿಯಂತೂ ಕಣ್ಣು ಮುಚ್ಚಿ ತೆರೆಯುವುದರೊಳಗೆ ಅಂತ್ಯವಾಯಿತು. ''ಶುಕ್ರವಾರ ಬೆಳಗ್ಗೆ ಬನ್ನಿ. ಚರ್ಚಿಸೋಣ,'' ವೆಂದು ಅಮಿತ್‌ ಶಾ ಹೇಳಿದ್ದಷ್ಟೇ ಭರವಸೆಯಾಗಿದೆ. ವರಿಷ್ಠರ ವರಸೆಯೇ ಬೇರೆದಿಲ್ಲಿಗೆ ತೆರಳುವಾಗ ಸಿಎಂ ಅವರು ಸಂಪುಟ ವಿಸ್ತರಣೆಗೆ ತಕ್ಷಣವೇ ಸಮ್ಮತಿ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದರು. ಆಕಾಂಕ್ಷಿಗಳೂ ಬಹಳ ಕುತೂಹಲದಿಂದ ಇದ್ದರು. ಆದರೆ, ಬಿಜೆಪಿ ವರಿಷ್ಠರ ವರಸೆಯಿಂದ ಸಿಎಂ ಅವರಿಗೆ ಬೇಸರವಾಗಿರುವುದು ಅವರ ಮುಖಭಾವದಲ್ಲೆ ಗೊತ್ತಾಗುವಂತಿತ್ತು. ಅಲ್ಲದೆ ಸಂಪುಟ ವಿಸ್ತರಣೆ ಕುರಿತ ಕೂಲಂಕಷ ಚರ್ಚೆ ನಡೆಸಲು ವರಿಷ್ಠರು ಅಪೇಕ್ಷಿಸಿದ್ದಾರೆ. ಹಾಗಾಗಿ ಅವರ ಯೋಚನೆಯೇ ಬೇರೆಯೇ ಇರಬಹುದು ಎಂಬ ಮಾತುಗಳೂ ಕೇಳಿ ಬರುತ್ತಿವೆ. ಸಿಎಂ ಅವರು ಶುಕ್ರವಾರ ಬೆಳಗಿನ ವಿಮಾನದಲ್ಲಿ ಬೆಂಗಳೂರಿಗೆ ಹೊರಡುವುದು ನಿಗದಿಯಾಗಿತ್ತು. ದಿನದ ಕಾರ್ಯ ಕಲಾಪವನ್ನೂ ಅವರು ಕಾಯ್ದಿರಿಸಿಕೊಂಡಿದ್ದರು. ವರಿಷ್ಠರೊಂದಿಗೆ ಮಾತುಕತೆ ಪೂರ್ಣಗೊಳ್ಳದ ಹಿನ್ನೆಲೆ ಅವರು ಗುರುವಾರ ರಾತ್ರಿ ದಿಲ್ಲಿಯಲ್ಲೇ ತಂಗಿದ್ದಾರೆ.


from India & World News in Kannada | VK Polls https://ift.tt/2GE6G2C

ಬಜೆಟ್‌ ಅಧಿವೇಶನದಲ್ಲಿ ಎಲ್ಲ ವಿಷಯಗಳ ಮೇಲೆ ಮುಕ್ತ ಚರ್ಚೆಗೆ ನಾವು ರೆಡಿ: ನರೇಂದ್ರ ಮೋದಿ

ಹೊಸದಿಲ್ಲಿ: ಮುಂಬರುವ ಬಜೆಟ್‌ ಅಧಿವೇಶನದಲ್ಲಿ ಎಲ್ಲ ವಿಷಯಗಳ ಬಗ್ಗೆ ಚರ್ಚೆ ನಡೆಸಲು ನಾವು ಸಿದ್ಧ ಎಂದು ಪ್ರಧಾನಮಂತ್ರಿ ಪ್ರತಿಪಕ್ಷಗಳಿಗೆ ಭರವಸೆ ನೀಡಿದ್ದಾರೆ. ಶುಕ್ರವಾರದಿಂದ ಬಜೆಟ್‌ ಅಧಿವೇಶನ ನಡೆಯುವ ಹಿನ್ನೆಲೆಯಲ್ಲಿ ಸರ್ವ ಪಕ್ಷಗಳ ನಾಯಕರ ಸಭೆಯನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ಭಾಷಣ ಮಾಡಿದರು. ಯಾವುದೇ ವಿಷಯವಾದರೂ ಸರಿ ಮುಕ್ತವಾಗಿ ಚರ್ಚೆ ನಡೆಸಲು ನಾವು ಸಿದ್ಧರಾಗಿದ್ದೇವೆ. ಇದರಲ್ಲಿ ಯಾವುದನ್ನು ಮುಚ್ಚಿಡ್ಡುವ ಅಗತ್ಯ ನಮಗಿಲ್ಲ. ಈ ವಿಷಯದಲ್ಲಿ ನಮ್ಮ ಸರಕಾರ ಹಿಂದೆ ಹೆಜ್ಜೆ ಇಡುವುದಿಲ್ಲ ಎಂದು ನರೇಂದ್ರ ಮೋದಿ ಸ್ಪಷ್ಟಪಡಿಸಿದರು. ಜಾಗತಿಕ ಆರ್ಥಿಕ ಸ್ಥಿತಿಯಿಂದಾಗಿ ಭಾರತದ ಮೇಲೆ ಆಗಿರುವ ಪರಿಣಾಮ ಹಾಗೂ ಭಾರತದ ಆರ್ಥಿಕತೆ ಕ್ಷಿಪ್ರಗತಿಯಲ್ಲಿ ಮೇಲ್ಮುಖಕ್ಕೆ ಸಾಗುವ ಕುರಿತು ಮೋದಿ ಅವರು ಸಭೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿದರು. ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ್ ಜೋಶಿ, ಸರ್ವ ಪಕ್ಷ ನಾಯಕರ ಸಭೆಯಲ್ಲಿ ಎನ್‌ಆರ್‌ಸಿ, ಸಿಎಎ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಈ ಎಲ್ಲ ವಿಷಯಗಳ ಬಗ್ಗೆ ಕಲಾಪದಲ್ಲಿ ವಿಸ್ತೃತ ಚರ್ಚೆ ನಡೆಸೋಣ. ಯಾವುದನ್ನು ಬಿಡುವುದು ಬೇಡ ಎಂದು ಮೋದಿ ಸ್ಪಷ್ಟಪಡಿಸಿದರು. ಇದಕ್ಕೆ ಪ್ರತಿಪಕ್ಷ ನಾಯಕರು ಕೂಡ ಒಪ್ಪಿಗೆ ಸೂಚಿಸಿದರು ಎಂದು ಮಾಹಿತಿ ನೀಡಿದರು. ಸಭೆಯಲ್ಲಿ ಪೌರತ್ವ ತಿದ್ದುಪಡಿ ಹಾಗೂ ರಾಷ್ಟ್ರೀಯ ನಾಗರಿಕ ನೋಂದಣಿ ಕುರಿತು ಎಲ್ಲ ಪಕ್ಷಗಳು ಚರ್ಚೆ ನಡೆಸಿದವು. ಆದರೆ ಎಐಎಡಿಎಂಕೆ ಸದಸ್ಯರು ಮಾತ್ರ ಈ ವಿಷಯದ ಬಗ್ಗೆ ಮೌನ ವಹಿಸಿದ್ದರು.


from India & World News in Kannada | VK Polls https://ift.tt/317oJrf

ಐಪಿಎಲ್‌ 2020: ಈ ಬಾರಿ ಚೆನ್ನೈನ ಚಿದಂಬರಂ ಕ್ರೀಡಾಂಗಣದ 'ಹೌಸ್‌ಫುಲ್‌' ಆಗೋದು ಗ್ಯಾರಂಟಿ!

ಚೆನ್ನೈ: ದೇಶದ ಅತ್ಯಂತ ಜನಪ್ರಿಯ ಕ್ರೀಡಾಂಗಣಗಳಲ್ಲಿ ಚೆಪಾಕ್‌ನ ಕೂಡ ಒಂದು. ಆದರೆ ಕಳೆದ ಕೆಲ ವರ್ಷಗಳಿಂದ ಈ ಕ್ರೀಡಾಂಗಣ ಸಾಕಷ್ಟು ವಿವಾದಗಳಿಗೆ ಕಾರಣವಾಗಿದೆ. ಹಲವು ಅಂತಾರಾಷ್ಟ್ರೀಯ ಮತ್ತು ಐಪಿಎಲ್‌ ಪಂದ್ಯಗಳಿಗೆ ಆತಿಥ್ಯ ವಹಿಸಿರುವ ಎಂಎ ಚಿದಂಬರಂ ಕ್ರೀಡಾಂಗಣ ಕೆಲ ಕಾನೂನು ಗೊಂದಲ ಕಾರಣ ತನ್ನ ಐ, ಜೆ ಮತ್ತು ಕೆ ಸ್ಟ್ಯಾಂಡ್ಸ್‌ಗಳ ಅಧಿಕಾರವನ್ನು ಕಳೆದುಕೊಂಡಿತ್ತು. ಕ್ರೀಡಾಂಗಣದ ಆ ಮೂರು ಸ್ಟ್ಯಾಂಡ್ಸ್‌ಗಳು ಇರುವ ಸ್ಥಳದಲ್ಲಿ ಕ್ರೀಡಾಂಗಣಕ್ಕೆ ಸೇರಿದ ಕೆಲ ಪಾರಂಪರಿಕ ಕಟ್ಟಡಗಳಿದ್ದು, ನವೀಕರಣದ ವೇಳೆ ಇದಕ್ಕೆ ಹಾನಿಯಾಗಲಿದೆ ಎಂಬ ಕಾರಣಕ್ಕೆ ಮೂರು ಸ್ಟ್ಯಾಂಡ್ಸ್‌ಗಳ ಬಳಕೆ ಮಾಡದೇ ಇರುವಂತೆ ನಿಷೇಧ ಹೇರಲಾಗಿತ್ತು. ಆದರೀಗ ವಿವಾದ ಬಗೆಹರಿಯಲಿದ್ದು, ಶೀಘ್ರದಲ್ಲೇ ಮೂರು ಸ್ಟ್ಯಾಂಡ್ಸ್‌ಗಳ ಬಳಕೆ ಸಾಧ್ಯವಾಗಲಿದೆ ಎಂದು ಮದರಾಸ್ ಕ್ರಿಕೆಟ್‌ ಸಂಸ್ಥೆ (ಎಂಸಿಎ) ತಿಳಿಸಿದೆ. ವಿವಾದ ಕಾರಣ 2019ರ ಐಪಿಎಲ್‌ ಪಂದ್ಯಗಳು ಮತ್ತು 2016ರ ಟಿ20 ವಿಶ್ವಕಪ್‌ ಪಂದ್ಯಗಳನ್ನು ಆಯೋಜಿಸುವುದರಿಂದ ವಂಚಿತವಾಗಿದ್ದ ಎಂಎ ಚಿದಂಬರಂ ಕ್ರೀಡಾಂಗಣ ಟೂರ್ನಿಯಲ್ಲಿ ಮರಳಿ ಹೌಸ್‌ಫುಲ್‌ ಆಗುವ ಸೌಭಾಗ್ಯ ಪಡೆಯಲಿದೆ. ಅಂದಹಾಗೆ ಕಳೆದ ವರ್ಷ ಡಿಸೆಂಬರ್‌ನಲ್ಲಿ ನಡೆದ ಭಾರತ ಮತ್ತು ವೆಸ್ಟ್‌ ಇಂಡೀಸ್‌ ನಡುವಣ ಸರಣಿ ವೇಳೆ ಈ ವಿವಾದ ಬಗೆಹರಿತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಸಾಧ್ಯವಾಗಿರಲಿಲ್ಲ. ಕ್ರೀಡಾಂಗಣದಲ್ಲಿರುವ ಜಿಮ್‌ ಪಾರಂಪರಿಕ ಕಟ್ಟಡವಾಗದೇ ಇರುವ ಕಾರಣ ಅದನ್ನು ಉರುಳಿಸಿ ನವೀಕರಣಗೊಳಿಸಲು ಚೆನ್ನೈ ಮೆಟ್ರೊಪಾಲಿಟನ್‌ ಡೆವೆಲೋಪ್ಮೆಂಟ್‌ ಅಥಾರಿಟಿ(ಸಿಎಮ್‌ಡಿಎ)ಗೆ ಅರ್ಜಿ ಸಲ್ಲಿಸುವುದಾಗಿ ಹೇಳಿರುವ ಎಂಸಿಎ ಅಧ್ಯಕ್ಷ, ಅಗತ್ಯದ ನವೀಕರಣದ ಬಳಿಕ ಕ್ರೀಡಾಂಗಣದ ಮೂರು ಸ್ಟ್ಯಾಂಡ್ಸ್‌ಗಳನ್ನು ಮರಳಿ ತೆರೆಯಲು ಸಾಧ್ಯವಾಗುತ್ತದೆ ಎಂದಿದ್ದಾರೆ. "ನವೀಕರಣ ಕೆಲಸಕ್ಕಾಗಿ ಮರಳಿ ಸಿಎಂಡಿಎಗೆ ಅರ್ಜಿ ಸಲ್ಲಿಸಲಿದ್ದೇವೆ. ಕ್ರೀಡಾಂಗಣದ ಜಿಮ್‌ ಪಾರಂಪರಿಕ ಕಟ್ಟವಾಗದೇ ಇರುವ ಕಾರಣ ಅನುಮತಿ ಲಭ್ಯವಾಗುವ ಎಂಬ ವಿಶ್ವಾಸವಿದೆ. ಹಳೆಯ ಸ್ಕ್ವಾಶ್‌ ಕೋರ್ಟ್‌ಗಳು ಮತ್ತು ಬಿಲಿಯರ್ಡ್ಸ್‌ ಕೊಠಡಿಗಳು, ಕ್ಲಬ್‌ನ ಕಚೇರಿ, ಎಮ್‌ಸಿಸಿ ಕಾಂಪ್ಲೆಕ್ಸ್‌ನಲ್ಲಿರುವ 3 ಕಟ್ಟಡಗಳು ಮಾತ್ರವೇ ಪಾರಂಪರಿಕ ಕಟ್ಟಡಗಳು," ಎಂದು ಆರ್‌ ರಮೇಶ್‌ ಹೇಳಿದ್ದಾರೆ. "ಫೆಬ್ರವರಿ ಹೊತ್ತಿಗೆ ಜಿಮ್‌ ನೆಲಸಮಗೊಳಿಸಿ ಐಪಿಎಲ್‌ ಶುರುವಾಗುವ ಮೊದಲು ಮೂರು ಸ್ಟ್ಯಾಂಡ್ಸ್‌ಗಳನ್ನು ಮರಳಿ ತೆರೆಯಲಾಗುವುದು. ಇನ್ನಮುಂದೆ 3 ಸ್ಟ್ಯಾಂಡ್ಸ್‌ಗಳ ಕಾರಣಕ್ಕೆ ಅಂತಾರಾಷ್ಟ್ರೀಯ ಮತ್ತು ಐಪಿಎಲ್‌ ಪಂದ್ಯಗಳು ಚೆನ್ನೈನ ಕೈತಪ್ಪಬಾರದು. ರಾಜ್ಯದ ಕ್ರಿಕೆಟ್‌ ಅಭಿಮಾನಿಗಳೇ ಇಲ್ಲಿ ವಿಜೇತರು. ಚೆಪಾಕ್‌ನಲ್ಲಿ ನಡೆಯಲಿರುವ ದೊಡ್ಡ ಪಂದ್ಯಗಳಿಗೆ ಮುಂದಿನ ದಿನಗಳಲ್ಲಿ ಪ್ರೇಕ್ಷಕರು ಹೌಸ್‌ಫುಲ್‌ ಆಗಲಿದ್ದಾರೆ," ಎಂದಿದ್ದಾರೆ. ಈ ಮಧ್ಯೆ ಭಾರತ ತಂಡದ ಮಾಜಿ ನಾಯಕ , ಟೀಮ್‌ ಇಂಡಿಯಾ ಪರ ಕಾಣಿಸಿಕೊಂಡು 6 ತಿಂಗಳೇ ಕಳೆದಿದ್ದು ಮುಂಬರುವ ಐಪಿಎಲ್‌ನಲ್ಲಿ ಅವರು ಆಟಕ್ಕೆ ಮರಳಲಿದ್ದಾರೆ ಎನ್ನಲಾಗಿದೆ. ಹೀಗಿರುವಾಗ ಚೆನ್ನೈನಲ್ಲಿ ತಲೈವಾ ಎಂದೇ ಖ್ಯಾತಿ ಪಡೆದಿರುವ ಧೋನಿಯ ಕಮ್‌ಬ್ಯಾಕ್‌ ಆಟ ವೀಕ್ಷಿಸಲು ಅಭಿಮಾನಿಗಳು ಮುಗಿಬಿದ್ದು ಕ್ರೀಡಾಂಗಣಕ್ಕೆ ಆಗಮಿಸುವುದು ಖಂಡಿತ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/38OrZdR

ಆರು ಬಾರಿಯ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ರೋಜರ್ ಫೆಡರರ್‌ಗೆ ಗೇಟ್‌ಪಾಸ್!

ಮೆಲ್ಬೋರ್ನ್: ದಾಖಲೆಯ 20 ಬಾರಿಯ ಗ್ರ್ಯಾನ್ ಸ್ಲಾಮ್ ಚಾಂಪಿಯನ್ ಸ್ವಿಜರ್ಲೆಂಡ್‌ನ , ಪ್ರತಿಷ್ಠಿತ ಗ್ರ್ಯಾನ್ ಸ್ಲಾಮ್ ಟೂರ್ನಿಯ ಪುರುಷ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪಂದ್ಯದಲ್ಲಿ ಸೆರ್ಬಿಯಾದ ವಿರುದ್ದ ಸೋಲನುಭವಿಸಿದ ಕೂಟದಿಂದಲೇ ನಿರ್ಗಮನದ ಹಾದಿ ಹಿಡಿದಿದ್ದಾರೆ. ಇದರೊಂದಿಗೆ ಏಳನೇ ಆಸ್ಟ್ರೇಲಿಯನ್ ಓಪನ್ ಕನಸು ಭಗ್ನಗೊಂಡಿದೆ. ಗುರುವಾರ ನಡೆದ ಪುರುಷ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಮುಖಾಮುಖಿಯಲ್ಲಿ ಮೂರನೇ ಶ್ರೇಯಾಂಕಿತವಾಗಿರುವ ರೋಜರ್ ಫೆಡರರ್, ಹಾಲಿ ಚಾಂಪಿಯನ್ ಹಾಗೂ ಎರಡನೇ ಶ್ರೇಯಾಂಕಿತ ಆಟಗಾರ ಸೆರ್ಬಿಯಾದ ನೊವಾಕ್ ಜೊಕೊವಿಚ್ ವಿರುದ್ಧ 6-7 (1-7), 4-6, 3-6ರ ಅಂತರದ ನೇರ ಸೆಟ್‌ನಲ್ಲಿ ಮುಗ್ಗರಿಸಿದರು. ಇನ್ನೊಂದೆಡೆ ಎಂಟನೇ ಬಾರಿಗೆ ಆಸ್ಟ್ರೇಲಿಯನ್ ಓಪನ್ ಕಿರೀಟ ಎದುರು ನೋಡುತ್ತಿರುವ 32ರ ಹರೆಯದ ಸೆರ್ಬಿಯಾ ಸ್ಟಾರ್ ನೊವಾಕ್ ಜೊಕೊವಿಚ್ ಒಟ್ಟಾರೆಯಾಗಿ 17ನೇ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. ಮೆಲ್ಬೋರ್ನ್ ಪಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ 38ರ ಹರೆಯದ ಫೆಡರರ್ ಉತ್ತಮ ಆರಂಭವನ್ನು ಪಡೆದಿದ್ದರು. ಆರಂಭದಲ್ಲೇ ಎದುರಾಳಿಯ ಸೆಟ್ ಅನ್ನು ಎರಡೆರಡು ಬಾರಿ ಬ್ರೇಕ್ ಮಾಡಿ 5-2ರ ಅಂತರದ ಮಹತ್ವದ ಮುನ್ನಡೆ ದಾಖಲಿಸಿದ್ದರು. ಈ ಹಂತದಲ್ಲಿ ತಿರುಗಿ ಬಿದ್ದ ನೊವಾಕ್ ಜೊಕೊವಿಚ್, ಬಳಿಕ ಎದುರಾಳಿಗೆ ಯಾವುದೇ ಅವಕಾಶವನ್ನು ನೀಡಲಿಲ್ಲ. ಮೊದಲ ಸೆಟ್ ಅನ್ನು ಟೈ ಬ್ರೇಕರ್‌ನಲ್ಲಿ 7-6ರ ಅಂತರದಲ್ಲಿ ವಶಪಡಿಸಿಕೊಂಡ ಜೊಕೊವಿಚ್, ಬಳಿಕ ಹಿಂತಿರುಗಿ ನೋಡಿಲ್ಲ. ತಮ್ಮ ನೈಜ ಫಾರ್ಮ್ ಪ್ರದರ್ಶಿಸಿದ ಜೊಕೊವಿಚ್ ಒಂದರ ಬಳಿಕ ಒಂದರಂತೆ ಪ್ರಬಲ ಸ್ಮ್ಯಾಶ್ ಮೂಲಕ ಎದುರಾಳಿ ಮೇಲೆ ಸವಾಲಿ ಮಾಡಿದರು. ಇನ್ನೊಂದೆಡೆ ತಮ್ಮದೇ ತಪ್ಪಿನಿಂದಾಗಿ ಫೆಡರರ್‌ಗೆ ಪಂದ್ಯದಲ್ಲಿ ಚೇತರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಎದುರಾಳಿಗೆ ಸುಲಭ ತುತ್ತಾದರು. ಗಾಯದ ಆತಂಕ ಕಾಡಿರುವುದು ಫೆಡರರ್‌ಗೆ ಹಿನ್ನೆಡೆಗೆ ಪರಿಣಮಿಸಿತು. ನೊವಾಕ್ ಜೊಕೊವಿಚ್ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಸಾಧನೆಗಳು: ಆಸ್ಟ್ರೇಲಿಯನ್ ಓಪನ್: (2008, 2011, 2012, 2013, 2015, 2016, 2019) ಫ್ರೆಂಚ್ ಓಪನ್: (2016) ವಿಂಬಲ್ಡನ್: (2011, 2014, 2015, 2018, 2019) ಅಮೆರಿಕನ್ ಓಪನ್: (2011, 2015, 2018) ರೋಜರ್ ಫೆಡರರ್ ಗ್ರ್ಯಾನ್ ಸ್ಲಾಮ್ ಪ್ರಶಸ್ತಿ ಸಾಧನೆಗಳು: ಆಸ್ಟ್ರೇಲಿಯನ್ ಓಪನ್: (2004, 2006, 2007, 2010, 2017, 2018) ಫ್ರೆಂಚ್ ಓಪನ್: (2009) ವಿಂಬಲ್ಡನ್: (2003, 2004, 2005, 2006, 2007, 2009, 2012, 2017) ಅಮೆರಿಕನ್ ಓಪನ್: (2004, 2005, 2006, 2007, 2008)


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2GxbvL9

ಜಾಮೀಯಾ ವಿದ್ಯಾರ್ಥಿಗಳ ಮೇಲೆ ಫೈರಿಂಗ್ ; ಸುಮ್ಮನಿದ್ದ ಪೊಲೀಸರ ವರ್ತನೆಗೆ ನೆಟ್ಟಿಗರ ಆಕ್ರೋಶ

ಹೊಸ ದೆಹಲಿ: ದೆಹಲಿಯ ವಿವಿ ವಿದ್ಯಾರ್ಥಿಗಳ ಪ್ರತಿಭಟನಾ ಮೆರವಣಿಗೆಯ ಸಂದರ್ಭದಲ್ಲಿ ದುಷ್ಕರ್ಮಿ ಯೊಬ್ಬ ವಿದ್ಯಾರ್ಥಿಗಳ ಮೇಲೆ ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದು ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ತಕ್ಷಣ ಯಾವುದೇ ಕ್ರಮ ಕೈಗೊಳ್ಳದೇ ಇದ್ದಿದ್ದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ದೆಹಲಿ ಪೊಲೀಸರ ನಡೆಗೆ ಸಾಮಾಜಿಕ ಕಾರ್ಯಕರ್ತರು, ಹೋರಾಟಗಾರರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮಹಾತ್ಮ ಗಾಂಧಿ ಹುತಾತ್ಮ ದಿನವಾದ ಗುರುವಾರದಂದು ದೆಹಲಿಯ ರಾಜ್ ಘಾಟ್‌ನಲ್ಲಿ ಜಾಮೀಯಾ ವಿವಿ ವಿದ್ಯಾರ್ಥಿಗಳು ಮೆರವಣಿಗೆ ನಡೆಸುತ್ತಿದ್ದರು. ಪೌರತ್ವ ಕಾಯ್ದೆ ತಿದ್ದುಪಡಿ ಹಾಗೂ ಎನ್‌ಆರ್‌ಸಿ ವಿರೋಧಿಸಿ ಈ ಪ್ರತಿಭಟನೆ ನಡೆಯುತ್ತಿತ್ತು. ಈ ವೇಳೆ ಮೆರವಣಿಗೆಯ ಮುಂಭಾಗಕ್ಕೆ ಬಂದ ವ್ಯಕ್ತಿಯೊಬ್ಬ ತನ್ನಲ್ಲಿದ್ದ ಪಿಸ್ತೂಲನ್ನು ತೋರಿಸಿ ಬೆದರಿಕೆ ಒಡ್ಡಿದ. ಬಳಿಕ ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಿದ್ದಾನೆ. ಘಟನೆಯಲ್ಲಿ ಓರ್ವ ವಿದ್ಯಾರ್ಥಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ದುಷ್ಕರ್ಮಿ ಗುಂಡು ಹಾಕಿಸುತ್ತಿದ್ದ ಸಂದರ್ಭದಲ್ಲಿ ಘಟನಾ ಸ್ಥಳದಲ್ಲಿ ಪೊಲೀಸರ ಇದ್ದರೂ ತಕ್ಷಣ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಕೆಲ ಹೊತ್ತಿನ ಬಳಿಕ ಆತನನ್ನು ವಶಕ್ಕೆ ಪಡೆದುಕೊಂಡರು ಎಂಬುವುದು ಪ್ರತಿಭಟನಾಕಾರರ ಆರೋಪವಾಗಿದೆ. ಈ ವಿಚಾರ ಟ್ವಿಟ್ಟರ್‌ ಹಾಗೂ ಫೇಸ್‌ಬುಕ್‌ನಲ್ಲಿ ವ್ಯಾಪಕವಾಗಿ ಚರ್ಚೆಗೆ ಗ್ರಾಸವಾಗಿದೆ. ಪಿಸ್ತೂಲ್‌ ಹಿಡಿದುಕೊಂಡು ದುಷ್ಕರ್ಮಿಯೊಬ್ಬ ರಾಜಾರೋಷವಾಗಿ ವಿದ್ಯಾರ್ಥಿಗಳನ್ನು ಬೆದರಿಸಿದ್ದಲ್ಲದೆ ಗುಂಡು ಹಾರಿಸಿದರೂ ಪೊಲೀಸರು ತಕ್ಷಣ ಆತನನ್ನು ವಶಕ್ಕೆ ಪಡೆದುಕೊಳ್ಳದೇ ಇರುವುದನ್ನು ನೆಟ್ಟಿಗರು ಪ್ರಶ್ನಿಸಿದ್ದಾರೆ. ಕರ್ನಾಟಕ ಕಾಂಗ್ರೆಸ್ ಕೂಡಾ ಘಟನೆಯನ್ನು ಖಂಡಿಸಿದ್ದು ಪೊಲೀಸರ ವರ್ತನೆಯನ್ನು ಪ್ರಶ್ನಿಸಿದೆ.


from India & World News in Kannada | VK Polls https://ift.tt/37HLK6S

ಟೀಮ್‌ ಇಂಡಿಯಾಗೆ ಕಮ್‌ಬ್ಯಾಕ್‌ ಮಾಡೊ ತುಡಿತದಲ್ಲಿ ವಿದರ್ಭ ಎಕ್ಸ್‌ಪ್ರೆಸ್‌

ಹೊಸದಿಲ್ಲಿ: ಭಾರತ ಟೆಸ್ಟ್‌ ತಂಡದ ವೇಗದ ಬೌಲರ್‌ ಸೀಮಿತ ಓವರ್‌ಗಳಲ್ಲಿ ಪರ ಮರಳಿ ಆಡುವ ಕಡೆಗೆ ಶ್ರಮಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಭಾರತದ ಪರ 75 ಏಕದಿನ ಮತ್ತು 45 ಟೆಸ್ಟ್‌ ಪಂದ್ಯಗಳನ್ನು ಆಡಿರುವ 32 ವರ್ಷದ ಬಲಗೈ ವೇಗಿ ಅಂತಾರಾಷ್ಟ್ರೀಯ ಟಿ20ಯಲ್ಲಿ ಕೇವಲ 7 ಪಂದ್ಯಗಳಲ್ಲಿ ಮಾತ್ರವೇ ಕಾಣಿಸಿಕೊಂಡಿದ್ದಾರೆ. 12 ತಿಂಗಳ ಹಿಂದೆ ಆಸ್ಟ್ರೇಲಿಯಾ ವಿರುದ್ಧ ತಮ್ಮ ಕೊನೆಯ ಟಿ20-ಐ ಪಂದ್ಯವನ್ನಾಡಿರುವ ಉಮೇಶ್‌, ಇದೀಗ ಶತಯಾ ಗತಾಯ ಸೀಮಿತ ಓವರ್‌ಗಳ ತಂಡದಲ್ಲಿ ಸ್ಥಾನ ಪಡೆಯಲೇ ಬೇಕೆಂದು ಹೇಳಿಕೊಂಡಿದ್ದಾರೆ. 2018ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ತಮ್ಮ ಕೊನೆಯ ಏಕದಿನ ಪಂದ್ಯವನ್ನಾಡಿರುವ ವಿದರ್ಭ ಎಕ್ಸ್‌ಪ್ರೆಸ್‌ ಬಳಿಕ ಟೆಸ್ಟ್‌ ತಂಡದಲ್ಲಿ ಮಾತ್ರವೇ ಸೀಮಿತ ಅವಕಾಶಗಳನ್ನು ಪಡೆದಿದ್ದಾರೆ. ಕೆಲವೊಮ್ಮೆ ತಂಡದಲ್ಲಿದ್ದರೂ ಆಡುವ 11ರ ಬಳಗದಲ್ಲಿ ಕಾಣಿಸಿಕೊಳ್ಳುವ ಸದವಕಾಶ ಒಲಿದಿಲ್ಲ. "ತಂಡದಿಂದ ಹೊರಗುಳಿಯಲು ಯಾರು ತಾನೆ ಬಯಸುತ್ತಾರೆ. ನಾನೂ ಕೂಡ ಮನುಷ್ಯನೆ. ತಂಡಕ್ಕೆ ಮರಳಲು ಕಠಿಣ ಪರಿಶ್ರಮ ವಹಿಸುತ್ತಿದ್ದೇನೆ. ಮತ್ತೆ ವೈಟ್‌ ಬಾಲ್‌ ಕ್ರಿಕೆಟ್‌ನಲ್ಲಿ ಟೀಮ್‌ ಇಂಡಿಯಾ ಪ್ರತಿನಿಧಿಸುವುದನ್ನು ಎದುರು ನೋಡುತ್ತಿದ್ದೇನೆ," ಎಂದು ಟೈಮ್ಸ್‌ ಆಫ್‌ ಇಂಡಿಯಾಗೆ ನೀಡಿರುವ ಸಂದರ್ಶನದಲ್ಲಿ ಉಮೇಶ್‌ ಹೇಳಿಕೊಂಡಿದ್ದಾರೆ. 2015ರ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡದ ಪರ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ ಆಗಿದ್ದ ಉಮೇಶ್‌ಗೆ ಟೀಮ್‌ ಇಂಡಿಯಾದಲ್ಲಿ ಸ್ಥಾನ ಮಾತ್ರ ಭದ್ರವಾಗಲಿಲ್ಲ. ಜಸ್‌ಪ್ರೀತ್‌ ಬುಮ್ರಾ, ಭುವನೇಶ್ವರ್‌ ಕುಮಾರ್‌ ಮತ್ತು ನವದೀಪ್‌ ಸೈನಿ ಅವರಂಹ ಬೌಲರ್‌ಗಳ ಆಗಮನದ ಬಳಿಕ ಉಮೇಶ್‌ ಅವಕಾಶಗಳ ಕೊರತೆಗೆ ಒಳಗಾಗಿದ್ದಾರೆ. "ಭಾರತ ತಂಡದ ಪರ ಆಡುವ ಅವಕಾಶ ನೀಡಿದ ಆಯ್ಕೆದಾರರಿಗೆ ನಾನು ಚಿರರುಣಿ. ಸೀಮಿತ ಓವರ್‌ಗಳಲ್ಲಿ ಮರಳಿ ಭಾರತದ ಪರ ಆಡಲು ಪ್ರಯತ್ನಿಸುತ್ತಿದ್ದೇನೆ. ಇದಕ್ಕಾಗಿ ಏನು ಬೇಕಾದರೂ ಮಾಡಲು ರೆಡಿ. 2015ರ ವಿಶ್ವಕಪ್‌ನಲ್ಲಿ ಆಡುವ ಅವಕಾಶ ಸಿಕ್ಕಿತ್ತು. ಈವರೆಗೆ ದೇಶದ ಪರ ಉತ್ತಮ ಪ್ರದರ್ಶನವನ್ನೇ ನೀಡಿದ್ದೇನೆ. ಆದರೂ 2019ರ ವಿಶ್ವಕಪ್‌ ತಂಡದಿಂದ ಕೈಬಿಟ್ಟಿದ್ದು ಬೇಸರ ತಂದಿತ್ತು," ಎಂದು ತಮ್ಮೊಳಗಿನ ಅಸಮಾಧಾನವನ್ನು ಹೊರಹಾಕಿದ್ದಾರೆ. ಪ್ರಸಕ್ತ ಪ್ರವಾಸದಲ್ಲೂ ಉಮೇಶ್‌ಗೆ ಏಕದಿನ ತಂಡದಲ್ಲಿ ಸ್ಥಾನ ನೀಡಲಾಗಿಲ್ಲ. ಆದರೆ ತಂಡದಲ್ಲಿ ಪ್ರಮುಖ ಆಟಗಾರನಾಗಿರುವ ಬಲಗೈ ವೇಗಿ ಸಿಗಲಿರುವ ಅವಕಾಶವನ್ನು ಬಳಸಿಕೊಳ್ಳುವ ಕಡೆಗೆ ಎದುರು ನೋಡುತ್ತಿದ್ದಾರೆ. "ನ್ಯೂಜಿಲೆಂಡ್‌ನಲ್ಲಿ ಟೆಸ್ಟ್‌ ಆಡುವುದನ್ನು ಎದುರು ನೋಡುತ್ತಿದ್ದೇನೆ. ಇತ್ತೀಚಿನ ದಿನಗಳಲ್ಲಿ ನನ್ನ ಪ್ರದರ್ಶನ ಉತ್ತಮವಾಗಿದ್ದು, ಲಯದಲ್ಲಿದ್ದೇನೆ ಕೂಡ. ಹೀಗಾಗಿ ನ್ಯೂಜಿಲೆಂಡ್‌ ಪ್ರವಾಸದ ಟೆಸ್ಟ್‌ ತಂಡದಲ್ಲಿ ಸ್ಥಾನ ಪಡೆಯುವ ವಿಶ್ವಾಸವಿದೆ. ಆಯ್ಕೆಯಾದರೆ ಶೇ. 100ರಷ್ಟು ಪ್ರದರ್ಶನ ನೀಡಲಿದ್ದೇನೆ. ನನ್ನ ಲೈನ್‌ ಮತ್ತು ಲೆನ್ತ್‌ ಕಡೆಗೆ ಹೆಚ್ಚು ಕೆಲಸ ಮಾಡಿ ಶ್ರೇಷ್ಠ ಫಲಿತಾಂಶವನ್ನು ಎದುರು ನೋಡುತ್ತಿದ್ದೇನೆ," ಎಂದಿದ್ದಾರೆ. ನ್ಯೂಜಿಲೆಂಡ್‌ನಲ್ಲಿ ಭಾರತ ತಂಡ ಅಂಗವಾಗಿ 2 ಪಂದ್ಯಗಳ ಸರಣಿಯನ್ನಾಡಲಿದ್ದು, ಪ್ರಥಮ ಟೆಸ್ಟ್‌ ಪಂದ್ಯ ಫೆ.21ರಂದು ವೆಲ್ಲಿಂಗ್ಟನ್‌ನಲ್ಲಿ ಪ್ರಾರಂಭವಾಗಲಿದೆ. ದ್ವಿತೀಯ ಟೆಸ್ಟ್‌ ಫೆ.29ರಂದು ಕ್ರೈಸ್ಟ್‌ಚರ್ಚ್‌ನಲ್ಲಿ ಶುರುವಾಗಲಿದೆ. ಇದಕ್ಕೂ ಮುನ್ನ ಫೆ.5ರಿಂದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ-ನ್ಯೂಜಿಲೆಂಡ್‌ ತಂಡಗಳು ಮುಖಾಮುಖಿಯಾಗಲಿವೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/38RAwN0

ಅಲಿಘಡ್‌ ವಿವಿಯಲ್ಲಿ ಪ್ರಚೋದನಕಾರಿ ಭಾಷಣ ಆರೋಪ ಡಾ. ಕಫೀಲ್‌ ಖಾನ್‌ ಬಂಧನ

ಮುಂಬಯಿ: ಉತ್ತರ ಪ್ರದೇಶದ ವೈದ್ಯ ಡಾ. ಕಫೀಲ್‌ ಖಾನ್‌ರನ್ನು ಮತ್ತೆ ಬಂಧಿಸಲಾಗಿದೆ. ಗೋರಖ್‌ಪುರ ಆಸ್ಪತ್ರೆಯ ಮಾಜಿ ಮುಖ್ಯ ವೈದ್ಯಾಧಿಕಾರಿ ಕಫೀಲ್‌ ಖಾನ್‌ರನ್ನು ಬುಧವಾರ ರಾತ್ರಿ ಮುಂಬಯಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಕಳೆದ ತಿಂಗಳು ಅಲಿಘಡ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ನಡೆದ ಸಿಎಎ ವಿರೋಧಿ ಕಾರ್ಯಕ್ರಮವೊಂದರಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಅವರ ಮೇಲಿದೆ. ಈ ಸಂಬಂಧ ಡಿಸೆಂಬರ್‌ 13ರಂದು ಎಫ್‌ಐಆರ್‌ ದಾಖಲಿಸಲಾಗಿತ್ತು. ಇದೀಗ ಅವರನ್ನು ಬಂಧಿಸಲಾಗಿದೆ. 2017ರಲ್ಲಿ ಗೋರಖ್‌ಪುರ ಆಸ್ಪತ್ರೆಯಲ್ಲಿ 60 ಮಕ್ಕಳು ಸಾವಿಗೀಡಾದ ಬಳಿಕ ಕಫೀಲ್‌ ಖಾನ್‌ರನ್ನು ಮೊದಲ ಬಾರಿಗೆ ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಅವರಿಗೆ ಕ್ಲೀನ್‌ ಚಿಟ್‌ ಸಿಕ್ಕಿದೆ. ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ವಿರೋಧಿ ಹೋರಾಟದಲ್ಲಿ ಭಾಗವಹಿಸಲು ಮುಂಬಯಿ ವಿಮಾನ ನಿಲ್ದಾಣದಲ್ಲಿ ಬಂದಿಳಿದ ವೇಳೆ ಮುಂಬಯಿ ಪೊಲೀಸರ ಸಹಕಾರದೊಂದಿಗೆ ಅವರನ್ನು ಬಂಧಿಸಲಾಗಿದೆ. ಗೋರಖ್‌ಪುರ ಮಕ್ಕಳ ಪ್ರಕರಣದಲ್ಲಿ ನನಗೆ ಕ್ಲೀನ್‌ ಚಿಟ್‌ ನೀಡಲಾಗಿದೆ. ಈಗ ನನ್ನನ್ನು ಮತ್ತೊಮ್ಮೆ ಸಿಲುಕಿಸಲು ಅವರು ಯತ್ನಿಸುತ್ತಿದ್ದಾರೆ. ನನ್ನನ್ನು ಮಹಾರಾಷ್ಟ್ರದಲ್ಲೇ ಉಳಿಸಿಕೊಳ್ಳುವಂತೆ ನಾನು ಮಹಾರಾಷ್ಟ್ರ ಸರಕಾರಕ್ಕೆ ಮನವಿ ಮಾಡುತ್ತಿದ್ದೇನೆ. ನನಗೆ ಉತ್ತರ ಪ್ರದೇಶ ಪೊಲೀಸರ ಮೇಲೆ ನಂಬಿಕೆ ಇಲ್ಲ ಎಂದು ಕಫೀಲ್‌ ಖಾನ್‌ ಬಂಧನದ ನಂತರ ಹೇಳಿದ್ದಾರೆ. ಆದರೆ ಮಧ್ಯಾಹ್ನದ ವೇಳೆ ಮುಂಬಯಿಯ ಬಾಂದ್ರಾ ನ್ಯಾಯಾಲಯ ಕಫೀಲ್‌ ಖಾನ್‌ ಹಸ್ತಾಂತರದ ಟ್ರಾನ್ಸಿಟ್‌ ರಿಮಾಂಡ್‌ ಮಂಜೂರು ಮಾಡಿದೆ.


from India & World News in Kannada | VK Polls https://ift.tt/3aXdmGT

ಭಾರತಕ್ಕೆ ಕಾಲಿಟ್ಟ ಮಹಾಮಾರಿ ಕೊರೊನಾ ವೈರಸ್‌: ಚೀನಾದಿಂದ ಕೇರಳಕ್ಕೆ ಬಂದ ವ್ಯಕ್ತಿಯಲ್ಲಿ ಪತ್ತೆ!

ಹೊಸದಿಲ್ಲಿ: ಜಗತ್ತನ್ನೇ ಬೆಚ್ಚಿಬೀಳಿಸಿರುವ ಭಾರತಕ್ಕೂ ಕಾಲಿಟ್ಟಿದೆ. ಚೀನಾದಿಂದ ಕೇರಳಕ್ಕೆ ಬಂದ ವಿದ್ಯಾರ್ಥಿಯೊಬ್ಬರಲ್ಲಿ ವೈರಸ್‌ ಪತ್ತೆಯಾಗಿದ್ದು, ಸದ್ಯ ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಚೀನಾ ದೇಶ ಈಗಾಗಲೇ ಕೊರೊನಾ ವೈರಸ್‌ನಿಂದ ತತ್ತರಿಸಿದ್ದು, ಈಗಾಗಲೇ 170 ಮಂದಿ ಮೃತಪಟ್ಟಿದ್ದಾರೆ. ಇಂತಹ ಮಹಾಮಾರಿ ಈಗ ಭಾರತಕ್ಕೂ ಕಾಲಿಟ್ಟಿದೆ. ಈ ಸಂಬಂಧ ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಸಹ ಅಧಿಕೃತ ಮಾಹಿತಿ ನೀಡಿದೆ. ಚೀನಾದ ವುಹಾನ್‌ ವಿವಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬರು ಕೇರಳಕ್ಕೆ ಆಗಮಿಸಿದ್ದು, ಅವರಿಗೆ ನಾವೆಲ್‌ ಕೊರೊನಾ ವೈರಸ್‌ ಪರೀಕ್ಷೆ ಮಾಡಲಾಗಿದೆ. ಈ ಪರೀಕ್ಷೆಯಲ್ಲಿ ಅವರಿಗೆ ಕೊರೊನಾ ವೈರಸ್‌ ಇರುವುದು ಧೃಡಪಟ್ಟಿದೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಅಧಿಕೃತ ಮಾಹಿತಿ ನೀಡಿದೆ. ಸದ್ಯ, ರೋಗಿಯ ಆರೋಗ್ಯ ಸ್ಥಿರವಾಗಿದ್ದು ಮತ್ತು ನಿಕಟವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಅವರನ್ನು ಪ್ರತ್ಯೇಕವಾಗಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಹ ಕೇಂದ್ರ ಸರಕಾರ ಮಾಹಿತಿ ನೀಡಿದೆ. ಈ ಸುದ್ದಿ ಓದಿ: ಅಲ್ಲದೆ, ಕೊರೊನಾ ವೈರಸ್ ಪೀಡಿತ ಪ್ರದೇಶಗಳಿಂದ ಬಂದಿರುವ 800 ಕ್ಕೂ ಹೆಚ್ಚು ಜನರನ್ನು ಕೇರಳದಲ್ಲಿ ಪರೀಕ್ಷೆಗೊಳಪಡಿಸಲಾಗಿದೆ. ಜತೆಗೆ, ಕೇರಳದ ವಿವಿಧ ಆಸ್ಪತ್ರೆಗಳ ಪ್ರತ್ಯೇಕ ವಾರ್ಡ್‌ಗಳಲ್ಲಿ ಪ್ರಸ್ತುತ ಹತ್ತು ಜನರು ಇದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಕೇರಳದ ಕೋಳಿಕ್ಕೋಡ್‌ನಲ್ಲಿ ಈ ಮಹಾಮಾರಿ ಕೊರೊನಾ ವೈರಸ್‌ ಪತ್ತೆಯಾಗಿದೆ ಎನ್ನಲಾಗಿದ್ದು, ದೇಶದಲ್ಲಿ ಮೊದಲ ಬಾರಿಗೆ ವ್ಯಕ್ತಿಯೊಬ್ಬರಲ್ಲಿ ಕೊರೊನಾ ಪತ್ತೆಯಾಗಿರುವ ಬಗ್ಗೆ ಆರೋಗ್ಯ ಸಚಿವೆ ಕೆಕೆ ಶೈಲಜಾ ತುರ್ತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.


from India & World News in Kannada | VK Polls https://ift.tt/3171aPj

ಸುಪ್ರೀಂನಿಂದ ಮತ್ತೋರ್ವ ನಿರ್ಭಯಾ ಅತ್ಯಾಚಾರಿಯ ಕ್ಯುರೇಟಿವ್‌ ಅರ್ಜಿ ವಜಾ

ಹೊಸದಿಲ್ಲಿ: ಮತ್ತೋರ್ವ ನಿರ್ಭಯಾ ಅತ್ಯಾಚಾರಿ ಅಕ್ಷಯ್‌ ಕುಮಾರ್‌ ಸಿಂಗ್‌ ಸಲ್ಲಿಸಿದ್ದ ಕ್ಯುರೇಟಿವ್‌ ಅರ್ಜಿಯನ್ನು ವಜಾಗೊಳಿಸಿದೆ. ಇದರಿಂದ ಕ್ಷಮಾದಾನ ಬಿಟ್ಟು ಅಪರಾಧಿಯ ಮುಂದೆ ಬೇರೆ ಯಾವುದೇ ದಾರಿಗಳು ಈಗ ಬಾಕಿ ಉಳಿದಿಲ್ಲ. ನಿರ್ಭಯಾ ಹಂತಕರ ಪೈಕಿ ಮುಕೇಶ್‌ ಕುಮಾರ್‌ ಸಿಂಗ್‌ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಈ ಹಿಂದೆಯೇ ತಿರಸ್ಕರಿಸಿತ್ತು. ಬಳಿಕ ಆತ ಕ್ಷಮಾದಾನ ಅರ್ಜಿ ಸಲ್ಲಿಸಿ ಅದೂ ಕೂಡ ತಿರಸ್ಕಾರಗೊಂಡಿತ್ತು. ರಾಷ್ಟ್ರಪತಿಗಳು ಕ್ಷಮಾದಾನ ಅರ್ಜಿ ತಿರಸ್ಕರಿಸಿದ್ದನ್ನೂ ಪ್ರಶ್ನಿಸಿ ಆತ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದ. ಆದರೆ ಅಲ್ಲೂ ಹಿನ್ನಡೆಯಾಗಿದ್ದರಿಂದ ಈತನಿಗೆ ಬೇರಾವುದೇ ಅವಕಾಶಗಳು ಬಾಕಿ ಉಳಿದಿಲ್ಲ. ಆದರೆ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಇತರ ಅಪರಾಧಿಗಳು ವಿಳಂಬ ತಂತ್ರವನ್ನು ಅನುಸರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಕ್ಷಯ್‌ ಕುಮಾರ್‌ ಸಿಂಗ್‌ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ. ಇದೀಗ ತಿರಸ್ಕೃತವಾಗಿದ್ದು, ಇನ್ನು ಕ್ಷಮಾದಾನ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಬುಧವಾರವಷ್ಟೇ ನಿರ್ಭಯಾ ಹಂತಕ ವಿನಯ್‌ ಶರ್ಮ ಕ್ಷಮಾದಾನ ಅರ್ಜಿ ಸಲ್ಲಿಸಿದ್ದಾನೆ. ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸಲಾಗಿದೆ ಎಂದು ವಕೀಲ ಎಪಿ ಸಿಂಗ್‌ ಮಾಹಿತಿ ನೀಡಿದ್ದಾರೆ.

ವಿನಯ್‌ ಕುಮಾರ್‌ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಹಾಗೂ ಅಕ್ಷಯ್‌ ಕುಮಾರ್‌ ಸಿಂಗ್‌ ಕ್ಷಮದಾನ ಅರ್ಜಿ ಇನ್ನೂ ಸಲ್ಲಿಸಬೇಕಿರುವುದರಿಂದ ಗಲ್ಲು ಶಿಕ್ಷೆ ವಿಳಂಬವಾಗುವ ಸಾಧ್ಯತೆ ಇದೆ. ನಿರ್ಭಯಾ ಹಂತಕರಾದ ವಿನಯ್‌ ಶರ್ಮಾ, ಮುಕೇಶ್‌ ಸಿಂಗ್‌, ಅಕ್ಷಯ್‌ ಕುಮಾರ್‌ ಸಿಂಗ್‌ ಮತ್ತು ಪವನ್‌ ಗುಪ್ತಾರನ್ನು ಫೆ. 1ರಂದು ರಂದು ಬೆಳಗ್ಗೆ 6 ಗಂಟೆಗೆ ತಿಹಾರ್‌ ಜೈಲಿನಲ್ಲಿ ನೇಣುಗಂಬಕ್ಕೇರಿಸಲು ಸಮಯ ನಿಗದಿಯಾಗಿದೆ. ಆದರೆ ಅಪರಾಧಿಗಳು ಕಾನೂನಿನಲ್ಲಿರುವ ಅವಕಾಶವನ್ನು ಪದೇ ಪದೇ ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಿರುವುದರಿಂದ ಇದು ಮುಂದೂಡಿಕೆಯಾಗುವ ಸಾಧ್ಯತೆ ಇದೆ.


from India & World News in Kannada | VK Polls https://ift.tt/2tSJkUj

ಪೌರತ್ವ ವಿರೋಧಿ ಪ್ರತಿಭಟನೆ ವೇಳೆ ಜಾಮಿಯಾ ವಿದ್ಯಾರ್ಥಿಗಳ ವಿರುದ್ಧ ಪೈರಿಂಗ್ , ಓರ್ವನಿಗೆ ಗಾಯ

ದೆಹಲಿ:ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೆಹಲಿಯ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಪ್ರತಿಭಟನೆ ಸಂದರ್ಭದಲ್ಲಿ ಪೈರಿಂಗ್ ನಡೆದಿದೆ. ಪ್ರತಿಭಟನಾಕಾರರ ವಿರುದ್ಧ ವ್ಯಕ್ತಿಯೋರ್ವ ಪೈರಿಂಗ್ ನಡೆಸಿದ್ದು, ಈ ವೇಳೆ ಓರ್ವ ವಿದ್ಯಾರ್ಥಿ ಗಾಯಗೊಂಡಿರುವ ಘಟನೆ ನಡೆದಿದೆ. ಗಾಯಾಳು ವಿದ್ಯಾರ್ಥಿ ಶಬಾದ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಪೈರಿಂಗ್ ಮಾಡಿದ ಆರೋಪಿಯನ್ನು ಪೊಲೀಸ್ ವಶಕ್ಕೆ ಪಡೆದಿದ್ದಾರೆ. ಘಟನೆಗೆ ಸಂಬಂಧಿಸಿ ವಿಡಿಯೋ ವೈರಲ್ ಆಗಿದ್ದು, ವಿಡಿಯೋದಲ್ಲಿ ದುಷ್ಕರ್ಮಿಯು ಆಜಾದಿಯನ್ನು ತೆಗೆದುಕೊಳ್ಳಿ ಹಿಂದೂಸ್ಥಾನ್ ಜಿಂದಾಬಾದ್ , ದಿಲ್ಲಿ ಪೊಲೀಸ್ ಜಿಂದಾಬಾದ್ ಎಂದು ಕೂಗಿದ್ದಾನೆ. ಪೌರತ್ವ ವಿರೋಧಿ ಪ್ರತಿಭಟನೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಇತರ ಜನ ರಾಜ್ ಘಾಟ್ ಕಡೆಗೆ ಮೆರವಣಿಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಈ ಹಿಂದೆ ಡಿಸೆಂಬರ್ 15 ರಂದು ಇಲ್ಲಿ ನಡೆದಿದ್ದ ಹಿಂಸಾಚಾರ ಪ್ರಕರಣಗಳಿಗೆ ಸಂಭಂಧಿಸಿದಂತೆ 70 ಜನ ಶಂಕಿತರ ಫೊಟೋಗಳನ್ನು ದೆಹಲಿ ಪೊಲೀಸರು ಗುರುವಾರ ಬಿಡುಗಡೆ ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸೆಂಬರ್ 17ರಂದು 10 ಜನರನ್ನು ಬಂಧಿಸಲಾಗಿತ್ತು. ಮತ್ತು ಇವರಲ್ಲಿ ಯಾರೊಬ್ಬರೂ ಜಾಮಿಯಾ ಮಿಲಿಯಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳೇ ಅಲ್ಲ ಎಂದು ಹೇಳಲಾಗಿತ್ತು.


from India & World News in Kannada | VK Polls https://ift.tt/3aOu4Zb

ಬಂದಿದೆ, ಆಸ್ತಮಾ ರೋಗಿಗಳಿಗೆ ತೊಂದರೆ ನೀಡದ ಹೊಗೆಯೇ ಇಲ್ಲದ ಅಗರಬತ್ತಿ!

ಬೆಂಗಳೂರು: ಕಂಪನಿಗಳು ಆರ್ಥಿಕ ಮಂದಗತಿಯ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಹೊಸ ಬಗೆಯ ಪರಿಮಳ, ವೈವಿಧ್ಯತೆಯನ್ನು ಒಳಗೊಂಡ ಅಗರಬತ್ತಿ ಮಾದರಿಗಳನ್ನು ಬಿಡುಗಡೆ ಮಾಡುತ್ತಿವೆ. ಉದಾಹರಣೆಗೆ ಆ್ಯಪಲ್‌ ಮತ್ತು ಪೈನಾಪಲ್‌ ಪರಿಮಳ ಸೂಸುವ ಅಗರಬತ್ತಿಗಳು, ಬೇವು ಆಧಾರಿತ, ಸೊಳ್ಳೆಗಳನ್ನು ಓಡಿಸಲೂ ಬಳಸಬಹುದಾದ ಅಗರಬತ್ತಿ, ಅಸ್ತಮಾ ರೋಗಿಗಳಿಗೂ ತೊಂದರೆಯಾಗದ, ಹೊಗೆ ಸೂಸದ ನೋ-ಸ್ಮೇಕ್‌ ಅಗರಬತ್ತಿ, ಏರ್‌ ಪ್ಯೂರಿಫೈಯರ್‌ ಆಗಿಯೂ ಬಳಸಬಹುದಾದ ಅಗರಬತ್ತಿಗಳು ಈಗ ಮಾರುಕಟ್ಟೆಯಲ್ಲಿ ಲಭ್ಯ! ಎಫ್‌ಎಂಸಿಜಿ ವಲಯದ ದಿಗ್ಗಜ ಐಟಿಸಿ ಕಂಪನಿಯು ಪ್ರಖ್ಯಾತ ದೇವಾಲಯಗಳಲ್ಲಿ ಗೋ ಗ್ರೀನ್‌ ಹೆಸದರಿನಲ್ಲಿ ಸ್ವಚ್ಛತಾ ಅಭಿಯಾನಗಳನ್ನು ನಡೆಸುತ್ತಿದೆ. ಅಗರಬತ್ತಿ ಮಾರಾಟಕ್ಕೆ ಹೊಸ ದಾರಿಗಳನ್ನು ಹುಡುಕುತ್ತಿದೆ. ಅಗರಬತ್ತಿ ಮಾರುಕಟ್ಟೆಯ ಮೌಲ್ಯ ಕಳೆದ ವರ್ಷ 7,278 ಕೋಟಿ ರೂ.ಗಳಷ್ಟಿತ್ತು. ಹೀಗಿದ್ದರೂ 2018ಕ್ಕೆ ಹೋಲಿಸಿದರೆ ಕೇವಲ ಶೇ.4ರ ಬೆಳವಣಿಗೆ ದಾಖಲಿಸಿದೆ. ಐಟಿಸಿ, ಸೈಕಲ್‌ ಪ್ಗೂರ್‌ ಅಗರಬತ್ತಿ ಕಂಪನಿಗಳು ನವನವೀನ ಉತ್ಪನ್ನಗಳನ್ನು ಬಿಡುಗಡೆಗೊಳಿಸಿವೆ. ನಾವು ಅತ್ಯುತ್ತಮ ಪರಿಮಳ, ಅನುಭವ ನೀಡುವ ಅಗರಬತ್ತಿಗಳನ್ನು ಬಿಡುಗಡೆಗೊಳಿಸಿದ್ದೇವೆ ಎನ್ನುತ್ತಾರೆ ಐಟಿಸಿಯ ಹಿರಿಯ ಅಧಿಕಾರಿ ರವಿ ರಾಯವರಮ್‌.


from India & World News in Kannada | VK Polls https://ift.tt/2GwGy9U

ಮಯಾಂಕ್ ಶೂನ್ಯಕ್ಕೆ ಔಟ್; ಗಿಲ್, ವಿಹಾರಿ ಫಿಫ್ಟಿ; ಭಾರತ ಎ 216ಕ್ಕೆ ಆಲೌಟ್

ಕ್ರಿಸ್ಟ್‌ಚರ್ಚ್: ಕಳೆದ ದಿನವಷ್ಟೇ ನ್ಯೂಜಿಲೆಂಡ್ ವಿರುದ್ಧ ಭಾರತೀಯ ಕ್ರಿಕೆಟ್ ತಂಡವು ಚೊಚ್ಚಲ ಹಾಗೂ ಐತಿಹಾಸಿಕ ಟಿ20 ಸರಣಿ ಗೆಲುವು ದಾಖಲಿಸಿತ್ತು. ಹ್ಯಾಮಿಲ್ಟನ್‌ನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಸೂಪರ್ ಓವರ್‌ನಲ್ಲಿ ರೋಹಿತ್ ಶರ್ಮಾ ಬ್ಯಾಕ್ ಟು ಬ್ಯಾಕ್ ಸಿಕ್ಸರ್‌ಗಳ ನೆರವಿನಿಂದ ಭಾರತ ರೋಚಕ ಗೆಲುವು ಬಾರಿಸಿತ್ತು. ಇನ್ನೊಂದೆಡೆ ಭಾರತ 'ಎ' ತಂಡವು ನ್ಯೂಜಿಲೆಂಡ್ ಪ್ರವಾಸದಲ್ಲಿದೆ. ಈಗಾಗಲೇ ಮೂರು ಪಂದ್ಯಗಳ ಅನಧಿಕೃತ ಏಕದಿನ ಸರಣಿಯಲ್ಲಿ 1-2ರ ಅಂತರದ ಸೋಲಿಗೆ ಶರಣಾಗಿರುವ ತಂಡವು ಎರಡು ಪಂದ್ಯಗಳ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ತಿರುಗಿ ಬೀಳುವ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ. ಆದರೆ ಪ್ರಥಮ ಅನಧಿಕೃತ ಟೆಸ್ಟ್ ಪಂದ್ಯದ ಮೊದಲ ದಿನದಲ್ಲೇ ಭಾರತದ ಯೋಜನೆಗಳು ತಲೆಕೆಳಗಾಗಿವೆ. ನ್ಯೂಜಿಲೆಂಡ್ ನಿಖರ ದಾಳಿಗೆ ಸಿಲುಕಿರುವ ಭಾರತ ಎ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 54.1 ಓವರ್‌ಗಳಲ್ಲೇ 216 ರನ್‌ಗಳಿಗೆ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡಿದೆ. ಬಳಿಕ ಬ್ಯಾಟಿಂಗ್ ನಡೆಸಿರುವ ನ್ಯೂಜಿಲೆಂಡ್ ಎ ತಂಡವು ಮೊದಲ ದಿನದಂತ್ಯಕ್ಕೆ 33 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 105 ರನ್ ಗಳಿಸಿದೆ. ಅಲ್ಲದೆ ಇನ್ನಿಂಗ್ಸ್ ಮುನ್ನಡೆಗಿನ್ನು 111 ರನ್ ಗಳಿಸಬೇಕಿದೆ. ನಾಯಕ ಹ್ಯಾಮಿಶ್ ರುಥರ್‌ಫಾರ್ಡ್ (28) ಹಾಗೂ ರಚಿನ್ ರವೀಂದ್ರ (47) ವಿಕೆಟ್‌ಗಳು ನಷ್ಟವಾಗಿದ್ದು, ವಿಲ್ ಯಂಗ್ (26*) ಹಾಗೂ ಅಜಾಜ್ ಪಟೇಲ್ (1*) ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಆಗಿರುವ ಶೂನ್ಯಕ್ಕೆ ಔಟಾಗಿ ನಿರಾಸೆ ಅನುಭವಿಸಿದರು. ಒಂಬತ್ತು ಎಸೆತಗಳನ್ನು ಎದುರಿಸಿದ ಮಯಾಂಕ್ ಖಾತೆ ತೆರೆಯುವಲ್ಲಿ ವಿಫಲವಾದರು. ಮಯಾಂಕ್ ಪಾಲಿಗೆ, ಮುಂಬರುವ ಸರಣಿ ನಿಟ್ಟಿನಲ್ಲಿ ಪೂರ್ವ ಸಿದ್ಧತೆಯ ಸರಣಿಯಾಗಿ ಪರಿಗಣಿಸಲ್ಪಟ್ಟಿದೆ. ಅಭಿಮನ್ಯು ಈಶ್ವರನ್ (8) ಹಾಗೂ ಪ್ರಿಯಾಂಕ್ ಪಾಂಚಲ್ (18) ಸಹ ವೈಫಲ್ಯ ಅನುಭವಿಸಿದರು. ಈ ಮಧ್ಯೆ ಜತೆಗೂಡಿದ ಉದಯೋನ್ಮುಖ ಹಾಗೂ ನಾಯಕ ಆಕರ್ಷಕ ಅರ್ಧಶತಕಗಳನ್ನು ಬಾರಿಸಿ ತಂಡವನ್ನು ಮೇಲೆತ್ತುವ ಪ್ರಯತ್ನ ಮಾಡಿದರು. ಇವರಿಬ್ಬರು ನಾಲ್ಕನೇ ವಿಕೆಟ್‌ಗೆ 119 ರನ್‌ಗಳ ಮಹತ್ವ ಜತೆಯಾಟ ನೀಡಿದರು. 83 ಎಸತೆಗಳ್ನನು ಎದುರಿಸಿದ ಗಿಲ್ ಒಂಬತ್ತು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳಿಂದ 83 ರನ್ ಗಳಿಸಿದರು. ಈ ಮೂಲಕ ಶತಕ ಮಿಸ್ ಮಾಡಿಕೊಂಡರು. ಇನ್ನೊಂದೆಡೆ ವಿಹಾರಿ 79 ಎಸೆತಗಳಲ್ಲಿ ಎಂಟು ಬೌಂಡರಿಗಳಿಂದ 51 ರನ್ ಗಳಿಸಿದರು. ಒಮ್ಮೆ ಈ ಜೋಡಿ ಬೇರ್ಪಟ್ಟ ಬಳಿಕ ಭಾರತ ದಿಢೀರ್ ಪತನ ಕಂಡಿತ್ತು. ಪರಿಣಾಮ 214 ರನ್‌ಗಳಿಗೆ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡಿತು. ಕಿವೀಸ್ ಪರ ಮೈಕಲ್ ರೇ 54 ರನ್ನಿಗೆ ನಾಲ್ಕು ವಿಕೆಟ್ ಕಿತ್ತು ಮಿಂಚಿದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2U5bNRn

ಭಾರತ ವಿರುದ್ಧದ ಏಕದಿನ ಸರಣಿಗೆ 15 ಸದಸ್ಯರ ತಂಡ ಪ್ರಕಟಿಸಿದ ನ್ಯೂಜಿಲೆಂಡ್‌

ಹ್ಯಾಮಿಲ್ಟನ್‌: ಟೀಮ್‌ ಇಂಡಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಯಲ್ಲಿ ಸತತ ಮೂರು ಸೋಲಿನೊಂದಿಗೆ ಕಂಗಾಲಾಗಿರುವ ಆತಿಥೇಯ ತಂಡ ಇದೀಗ ಅಂತಿಮ ಎರಡು ಪಂದ್ಯಗಳನ್ನು ಗೆದ್ದು, ಮುಂಬರುವ ಏಕದಿನ ಸರಣಿಗೆ ಆತ್ಮವಿಶ್ವಾಸ ಕಂಡುಕೊಳ್ಳಲು ಎದುರು ನೋಡುತ್ತಿದೆ. ನ್ಯೂಜಿಲೆಂಡ್‌ ಕ್ರಿಕೆಟ್‌ ಮಂಡಳಿ ಮುಂಬರುವ 3 ಪಂದ್ಯಗಳ ಸರಣಿಗೆ 15 ಸದಸ್ಯರ ತಂಡವನ್ನು ಶುಕ್ರವಾರ ಪ್ರಕಟ ಮಾಡಿದೆ. ಕೆಲ ಸ್ಟಾರ್‌ ಆಟಗಾರರು ಗಾಯದ ಸಮಸ್ಯೆಯಿಂದ ಬಳಲಿದ್ದು ಏಕದಿನ ಕ್ರಿಕೆಟ್‌ ತಂಡದಲ್ಲಿ ಸ್ಥಾನ ಪಡೆದಿಲ್ಲ. ಆದರೆ, ನ್ಯೂಜಿಲೆಂಡ್‌ 'ಎ' ತಂಡದ ಪರ ಗಮನಾರ್ಹ ಪ್ರದರ್ಶನ ನೀಡಿರುವ ಯುವ ವೇಗದ ಬೌಲರ್‌ ಅವರಿಗೆ ಕಿವೀಸ್‌ ತಂಡಕ್ಕೆ ಮೊತ್ತ ಮೊದಲ ಬಾರಿ ಬುಲಾವ್‌ ಸಿಕ್ಕಿದೆ. ಜೇಮಿಸನ್‌, ಇತ್ತೀಚೆಗಷ್ಟೇ ಭಾರತ 'ಎ' ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಗೆದ್ದ ನ್ಯೂಜಿಲೆಂಡ್‌ 'ಎ' ತಂಡದ ಸದಸ್ಯರಾಗಿದ್ದರು. ಕಿವೀಸ್‌ನ ಪ್ರಮುಖ ವೇಗದ ಬೌಲರ್‌ಗಳಾಗಿರುವ ಟ್ರೆಂಟ್‌ ಬೌಲ್ಟ್‌ ಮತ್ತು ಲಾಕಿ ಫರ್ಗ್ಯೂಸನ್‌ ಗಾಯಗೊಂಡಿರುವ ಕಾರಣ ಅನುಭವಿ ವೇಗಿ ಟಿಮ್‌ ಸೌಥೀ ಮೇಲೆ ಹೆಚ್ಚು ಜವಾಬ್ದಾರಿ ಇದೆ. ಆದರೆ, ಟಿ20 ಸರಣಿಯಲ್ಲಿ ಸೌಥೀ ವೈಫಲ್ಯ ತಂಡಕ್ಕೆ ಕಾಡುತ್ತಿದೆ. ಆದರೂ ಸೌಥೀಗೆ ಅನಾನುಭವಿಗಳಾದ ಸ್ಕಾಟ್‌ ಕುಗ್ಲೇಜಿನ್‌ ಮತ್ತು ಹ್ಯಾಮಿಶ್‌ ಬೆನೆಟ್‌ ಸಾಥ್‌ ನೀಡಲಿದ್ದು, ಯು ವೇಗಿ ಕೈಲ್‌ ಜೇಮಿಸನ್‌ ಸೇವೆಯೂ ಲಭ್ಯವಾಗಲಿದೆ. ಸ್ಪಿನ್‌ ಬೌಲಿಂಗ್‌ ವಿಭಾಗದಲ್ಲಿ ಅನುಭವಿ ಲೆಗ್‌ ಸ್ಪಿನ್ನರ್‌ ಇಶ್‌ ಸೋಧಿ ಮೊದಲ ಏಕದಿನ ಪಂದ್ಯದಲ್ಲಿ ಮಾತ್ರವೇ ಆಡಲಿದ್ದು, ಬಳಿಕ ಟೆಸ್ಟ್ ಸರಣಿಗೆ ಅಭ್ಯಾಸ ಸಲುವಾಗಿ ಭಾರತ 'ಎ' ವಿರುದ್ಧದ ಪಂದ್ಯವನ್ನಾಡಲು ತೆರಳಲಿದ್ದಾರೆ. ಸ್ಪಿನ್ನರ್‌ ಮಿಚೆಲ್‌ ಸ್ಯಾಂಟ್ನರ್‌ ತಂಡದಲ್ಲಿ ಮುಂದುವರಿಯಲಿದ್ದು, ಎಂದಿನ ಕೀಪರ್‌ ಟಾಮ್‌ ಲೇಥಮ್‌ ಗಾಯದಿಂದ ಚೇತರಿಸಿ ತಂಡ ಸೇರಿಕೊಂಡಿದ್ದಾರೆ. ಮೂರು ಪಂದ್ಯಗಳ ಏಕದಿನ ಸರಣಿ ಫೆಬ್ರವರಿ 5ರಂದು ಶುರುವಾಗಲಿದ್ದು, ಮೊದಲ ಪಂದ್ಯ ಹ್ಯಾಮಿಲ್ಟನ್‌ನಲ್ಲಿ ನಡೆಯಲಿದೆ. 2ನೇ ಪಂದ್ಯ ಫೆ.8ರಂದು ಆಕ್ಲೆಂಡ್‌ನಲ್ಲಿ ಮತ್ತು 3ನೇ ಹಾಗೂ ಅಂತಿಮ ಪಂದ್ಯ ಫೆ.11 ರಂದು ಮೌಂಟ್‌ ಮೌಗಾನುಯ್‌ನಲ್ಲಿ ಜರುಗಲಿದೆ. ಭಾರತ ವಿರುದ್ಧದ ಏಕದಿನ ಸರಣಿಗೆ ನ್ಯೂಜಿಲೆಂಡ್‌ ತಂಡ ಕೇನ್‌ ವಿಲಿಯಮ್ಸನ್‌ (ನಾಯಕ), ಹ್ಯಾಮಿಶ್‌ ಬೆನೆಟ್‌, ಟಾಮ್ ಬ್ಲಂಡಲ್‌, ಕಾಲಿನ್‌ ಡಿ'ಗ್ರ್ಯಾಂಡ್‌ಹೋಮ್‌, ಮಾರ್ಟಿನ್‌ ಗಪ್ಟಿಲ್‌, ಕೈಲ್‌ ಜೇಮಿಸನ್‌ (ಹೊಸ ಸೇರ್ಪಡೆ), ಸ್ಕಾಟ್‌ ಕುಗ್ಲೇಜಿನ್‌, ಟಾಮ್‌ ಲೇಥಮ್‌, ಜಿಮ್ಮಿ ನೀಶಮ್, ಹೆನ್ರಿ ನಿಕೋಲ್ಸ್‌, ಮಿಚೆಲ್‌ ಸ್ಯಾಂಟ್ನರ್‌, ಇಶ್‌ ಸೋಧಿ (1ನೇ ಏಕದಿನಕ್ಕೆ ಮಾತ್ರ), ಟಿಮ್‌ ಸೌಥೀ, ರಾಸ್‌ ಟೇಲರ್‌.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2GCa1z4

ಗೋಡ್ಸೆ ಮತ್ತು ಮೋದಿ ಸಿದ್ಧಾಂತ ಒಂದೇ: ಕೇರಳದಲ್ಲಿ ರಾಹುಲ್‌ ಕಿಡಿ

ವಯನಾಡ್‌: ಪ್ರಧಾನಿ ಮತ್ತು ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹಂತಕ ಒಂದೇ ಸಿದ್ಧಾಂತವನ್ನು ನಂಬಿದವರು. ವ್ಯತ್ಯಾಸವೆಂದರೆ ತಾನು ಗೋಡ್ಸೆಯನ್ನು ನಂಬುತ್ತೇನೆ ಎಂದು ಹೇಳಲು ನರೇಂದ್ರ ಮೋದಿಗೆ ಧೈರ್ಯವಿಲ್ಲ ಎಂದು ಕಾಂಗ್ರೆಸ್‌ ನಾಯಕ ಕಿಡಿಕಾರಿದರು. ಹುತಾತ್ಮರ ದಿನದಂದು ತಮ್ಮ ಲೋಕಸಭಾ ಕ್ಷೇತ್ರ ವಯನಾಡಿನ ಕಲ್ಪೆಟ್ಟದಲ್ಲಿ 'ಸಂವಿಧಾನ ಉಳಿಸಿ' ಜಾಥಾದಲ್ಲಿ ಪಾಲ್ಗೊಂಡ ನಂತರ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್‌ ಗಾಂಧಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. "ನಾಥುರಾಮ್‌ ಗೋಡ್ಸೆ ಯಾರನ್ನೂ ಇಷ್ಟಪಡುತ್ತಿರಲಿಲ್ಲ, ಆತನಿಗೆ ಯಾರ ಬಗ್ಗೆಯೂ ಕಾಳಜಿ ಇರಲಿಲ್ಲ, ತನ್ನನ್ನೇ ತಾನು ನಂಬುತ್ತಿರಲಿಲ್ಲ. ಈ ಕಾರಣಕ್ಕೆ ಆತ ಮಹಾತ್ಮ ಗಾಂಧಿಯನ್ನು ಕೊಂದ. ಇದೇ ರೀತಿ ನಮ್ಮ ಪ್ರಧಾನಿ ಕೂಡ; ಅವರನ್ನು ಮಾತ್ರ ಪ್ರೀತಿಸುತ್ತಾರೆ, ಅವರನ್ನು ಮಾತ್ರ ನಂಬುತ್ತಾರೆ,” ಎಂದು ದೂರಿದರು. “ನೀವು ಗಮನಿಸಿ, ನರೇಂದ್ರ ಮೋದಿಗೆ ನಿರುದ್ಯೋಗ ಮತ್ತು ಉದ್ಯೋಗದ ಬಗ್ಗೆ ಏನೇ ಪ್ರಶ್ನೆಗಳನ್ನು ಕೇಳಿ ಅವರು ತಕ್ಷಣ ನಿಮ್ಮ ಗಮನವನ್ನು ಬೇರೆಡೆ ಸೆಳೆಯುತ್ತಾರೆ. ಎನ್‌ಆರ್‌ಸಿ ಮತ್ತು ಸಿಎಎಯಿಂದ ಉದ್ಯೋಗ ಸಿಗುವುದಿಲ್ಲ. ಕಾಶ್ಮೀರದ ಪರಿಸ್ಥಿತಿ ಮತ್ತು ಹೊತ್ತಿ ಉರಿಯುತ್ತಿರುವ ಅಸ್ಸಾಂನಿಂದ ನಮ್ಮ ಯುವ ಜನರಿಗೆ ಉದ್ಯೋಗ ಸಿಗಲಾರದು,” ಎಂದು ಅವರು ವಿವಿರಿಸಿದರು. “‘ಭಾರತೀಯರು, ನಾವು ಭಾರತದವರು ಎಂದು ನಿರೂಪಿಸಬೇಕಾಗಿ ಬಂದಿದೆ. ನಾನು ಭಾರತೀಯ ಹೌದೋ ಅಲ್ಲವೋ ಎಂದು ನಿರ್ಧರಿಸಲು ನರೇಂದ್ರ ಮೋದಿ ಯಾರು? ಯಾರು ಭಾರತೀಯರು, ಯಾರು ಅಲ್ಲ ಎಂದು ನಿರ್ಧರಿಸಲು ಅವರಿಗೆ ಲೈಸನ್ಸ್‌ ನೀಡಿದ್ದು ಯಾರು? ನನಗೆ ಗೊತ್ತು ನಾನು ಭಾರತೀಯ ಎಂದು ನಾನು ಇದನ್ನು ಯಾರ ಮುಂದೆಯೂ ಸಾಬೀತು ಮಾಡಬೇಕಾಗಿಲ್ಲ,” ಎಂದು ರಾಹುಲ್‌ ಗಾಂಧಿ ಹರಿಹಾಯ್ದರು.


from India & World News in Kannada | VK Polls https://ift.tt/2U51xbP

''ಭಾರತದ ಯುವಕರು ಹಿಂದೂಸ್ತಾನವನ್ನು ಮಾತ್ರವಲ್ಲ, ದೇಶವನ್ನೂ ಬದಲಾಯಿಸಬಹುದು'' ಎಂದಿದ್ದರೇ ರಾಹುಲ್‌ ಗಾಂಧಿ?

ಹರಿದಾಡುತ್ತಿದ್ದ ಸುದ್ದಿ ಏನು? 'ಪುಷ್ಪೇಂದ್ರ ಕುಲಶ್ರೇಷ್ಠ ಫ್ಯಾನ್ಸ್ ಕ್ಲಬ್' ಎಂಬ ಹೆಸರಿನ ಫೇಸ್‌ಬುಕ್ ಅಕೌಂಟೊಂದು 6 ಸೆಕೆಂಡುಗಳ ಉದ್ದದ ವಿಡಿಯೋ ತುಣುಕನ್ನು ಪೋಸ್ಟ್ ಮಾಡಿ, ರಾಹುಲ್ ಗಾಂಧಿ ಭಾಷಣದ ವೇಳೆ ಮತ್ತೆ ತಪ್ಪು ಮಾಡಿದ್ದಾರೆ. ಅವರು ಮತ್ತೆ ನಶೆಯಲ್ಲಿದ್ದಾರೆ ಎಂದು ಹೇಳಿದ್ದಾರೆ. ವೀಡಿಯೊದಲ್ಲಿ, ಪ್ರಪಂಚ ಎಂಬ ಹಿಂದಿ ಪದ ಬಳಸುವ ಬದಲು ರಾಷ್ಟ್ರ ಎಂಬ ಹಿಂದಿ ಪದ ಬಳಸಿದ್ದಾರೆ. 'ಪೊಲಿಟಿಕಲ್ ಕೀಡಾ' ಎಂದು ಲೋಗೋ ಇರುವ ವಿಡಿಯೋವನ್ನು ಇವರು ಶೇರ್‌ ಮಾಡಿಕೊಂಡಿದ್ದರು. ಇದೇ ವೀಡಿಯೊವನ್ನು ಟ್ವಿಟ್ಟರ್‌ನಲ್ಲಿ ಅನೇಕ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ. ಟ್ವಿಟರ್ ಹ್ಯಾಂಡಲ್ 'ಹ್ಯೂಮರ್_ಸಿಲ್ಲಿ' ಎಂಬುವರು ಈ ವಿಡಿಯೋ ಕ್ಲಿಪ್‌ ಹಂಚಿಕೊಂಡಿದ್ದು, "ಹಿಂದೂಸ್ತಾನ - ದೇಶ ಎರಡೂ ಬೇರೆ ಬೇರೆಯೇ ಅಂದರೆ, ಭಾರತ ಮತ್ತು ರಾಷ್ಟ್ರ, ಈ ಎರಡು ಪರಸ್ಪರ ಭಿನ್ನವಾಗಿವೆ ಎಂದೂ ಹೇಳಿಕೊಂಡಿದ್ದಾರೆ. ಟ್ವೀಟ್‌ನ ಆರ್ಕೈವ್ ಮಾಡಲಾದ ಆವೃತ್ತಿ ಇಲ್ಲಿದೆ. ಇದೇ ವೀಡಿಯೊವನ್ನು ವಾಟ್ಸಾಪ್‌ನಲ್ಲಿಯೂ ವ್ಯಾಪಕವಾಗಿ ಹರಡಲಾಗುತ್ತಿದೆ. ಸತ್ಯ ಆರು ಸೆಕೆಂಡುಗಳ ವೀಡಿಯೊ ಕ್ಲಿಪ್ ದೀರ್ಘ ವಿಡಿಯೋದ ಟ್ರಿಮ್ ಮಾಡಿದ ಆವೃತ್ತಿಯಾಗಿದೆ. ರಾಹುಲ್‌ ಗಾಂಧಿ ತಪ್ಪು ಮಾತಾಡಿದ್ದನ್ನು ಮಾತ್ರ ಈ ವಿಡಿಯೋದಲ್ಲಿ ತೋರಿಸಲಾಗಿದೆ. ಆದರೆ, ರಾಹುಲ್‌ ಗಾಂಧಿ ತನ್ನ ತಪ್ಪನ್ನು ತಕ್ಷಣದ ಒಂದು ಸೆಕೆಂಡಿನೊಳಗೆ ಸರಿಪಡಿಸಿಕೊಳ್ಳುತ್ತಾರೆ ಮತ್ತು ಆ ಭಾಗವನ್ನು ವಿಡಿಯೋದಲ್ಲಿ ತೋರಿಸಲಾಗುವುದಿಲ್ಲ. ಪರಿಶೀಲನೆ ಮತ್ತು ವಿಧಾನ '28 ಜನವರಿ 'ಯಂದು ರಾಹುಲ್‌ ಗಾಂಧಿ ಈ ಭಾಷಣ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಸೂಚನೆಯನ್ನು ತೆಗೆದುಕೊಂಡು, ನಾವು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಪೂರ್ಣ ಭಾಷಣದ ವಿಡಿಯೋವನ್ನು ಹುಡುಕಿದೆವು. ರಾಜಸ್ಥಾನದ ಜೈಪುರದ ರಾಮ್ ನಿವಾಸ್ ಬಾಗ್‌ನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಯುವ ಅಕ್ರೋಶ್ ರ‍್ಯಾಲಿಯಲ್ಲಿ ರಾಹುಲ್‌ ಗಾಂಧಿ ಮಾತನಾಡುತ್ತಿದ್ದರು. 'ಶ್ರೀ ರಾಹುಲ್ ಗಾಂಧಿ ರಾಜಸ್ಥಾನದ ಜೈಪುರದಲ್ಲಿ ಯುವ ಆಕ್ರೋಶ್ ರ‍್ಯಾಲಿಯನ್ನು ಉದ್ದೇಶಿಸಿ' ಎಂಬ ಶೀರ್ಷಿಕೆಯೊಂದಿಗೆ, 2020 ರ ಜನವರಿ 28 ರಂದು ಚಾನೆಲ್‌ಗೆ ಅಪ್‌ಲೋಡ್ ಮಾಡಿದ ಮೂಲ ವಿಡಿಯೋದಲ್ಲಿ, ಸಂಬಂಧಿತ ಭಾಗವು 2.40 - 2.53 ನಿಮಿಷಗಳಲ್ಲಿ ಈ ತಪ್ಪು ಮಾತನ್ನಾಡಿದ್ದಾರೆ. ಭಾರತದ ಯುವಕರು ಹಿಂದೂಸ್ತಾನವನ್ನು ಮಾತ್ರವಲ್ಲ, ರಾಷ್ಟ್ರವನ್ನೂ ಬದಲಾಯಿಸಬಹುದು ಎಂದು ರಾಹುಲ್‌ ಗಾಂಧಿ ಹೇಳಿದ್ದನ್ನು ಕೇಳಬಹುದು. ಮತ್ತು ತಕ್ಷಣವೇ ತನ್ನ ತಪ್ಪನ್ನು ಸರಿಪಡಿಸಿಕೊಂಡಿರುವ ರಾಹುಲ್‌ ಗಾಂಧಿ, ಜಗತ್ತನ್ನು ಬದಲಾಯಿಸಬಹುದು.. ಕ್ಷಮಿಸಿ. ರಾಷ್ಟ್ರವಲ್ಲ, ಅವರು ಜಗತ್ತನ್ನೇ ಬದಲಾಯಿಸಬಹುದು ಎಂದು ಹೇಳಿದ್ದಾರೆ. ಈ ವಿಡಿಯೋವನ್ನು ಇಲ್ಲಿ ನೋಡಿ.. ತೀರ್ಮಾನ ಯುವ ಆಕ್ರೋಶ್ ರ‍್ಯಾಲಿಯಲ್ಲಿ ಭಾಷಣ ಮಾಡುವಾಗ ರಾಹುಲ್ ಗಾಂಧಿ ತಪ್ಪು ಮಾಡಿದ್ದಾರೆ ಎಂಬ ಅಭಿಪ್ರಾಯವನ್ನು ನೀಡಲು ಟ್ರಿಮ್ ಮಾಡಿದ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳು ಮತ್ತು ವಾಟ್ಸಾಪ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ ಎಂದು ಟೈಮ್ಸ್ ಫ್ಯಾಕ್ಟ್ ಚೆಕ್ ಕಂಡುಹಿಡಿದಿದೆ. ರಾಹುಲ್‌ ಗಾಂಧಿ ತಪ್ಪು ಮಾಡಿರುವುದು ನಿಜವಾಗಿದ್ದರೂ, ಮುಂದಿನ ಸೆಕೆಂಡಿನಲ್ಲಿ ತನ್ನ ತಪ್ಪನ್ನು ಸರಿಪಡಿಸುವುದನ್ನು ಮೂಲ, ದೀರ್ಘ ವಿಡಿಯೋ ತೋರಿಸುತ್ತದೆ.


from India & World News in Kannada | VK Polls https://ift.tt/31436YS

ವರನ ತಂದೆ ಜೊತೆ ವಧುವಿನ ತಾಯಿ ಪರಾರಿ: 16 ದಿನಗಳ 'ಹನಿಮೂನ್‌' ಬಳಿಕ ಮರಳಿದ 'ಒಲವಿನ' ಜೋಡಿ!

ಗಾಂಧಿನಗರ: ಮಕ್ಕಳ ಮದುವೆಗೆ ಏರ್ಪಾಡಿನ ನಡುವೆ ಸದ್ದಿಲ್ಲದೆ ಓಡಿ ಹೋಗಿದ್ದ ಪೋಷಕರು 16 ದಿನಗಳ ನಂತರ ವಾಪಾಸಾಗಿದ್ದಾರೆ. ವರನ ತಂದೆ ಮತ್ತು ವಧುವಿನ ತಾಯಿ ಇಬ್ಬರು ಮಕ್ಕಳ ಮದುವೆಯ ಚಿಂತೆ ಬಿಟ್ಟು ತಮ್ಮ ಯೌವನದ ಪ್ರೀತಿ ನೆನೆದು ಓಡಿಹೋಗಿದ್ದರು. ಈ ಬಗ್ಗೆ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಓಡಿ ಹೋಗಿದ್ದ ಪೋಷಕರ ಜೋಡಿ ಮರಳಿ ಬಂದಿರುವ ಬಗ್ಗೆ ಮಾಹಿತಿ ನೀಡಿದ ಎಸ್‌ಪಿ ಗಿರೀಶ್‌ ಪಾಂಡೆ, ''ಫೆಬ್ರವರಿಯಲ್ಲಿ ರಾಕೇಶ್‌ ಅವರ ಮಗ ಮತ್ತು ಸ್ವಾತಿ ಅವರ ಮಗಳ ಜೊತೆ ವಿವಾಹ ನಿಕ್ಕಿಯಾಗಿತ್ತು. ಆದರೆ ಜನವರಿ 10 ರಂದು ರಾಕೇಶ್‌ ಹಾಗೂ ಸ್ವಾತಿ ಕಾಣೆಯಾಗಿದ್ದರು. ಜನವರಿ 26ರಂದು ಇವರಿಬ್ಬರು ಮನೆ ಸೇರಿದ್ದಾರೆ. ಇವರಿಬ್ಬರು ಮಧ್ಯ ಪ್ರದೇಶದ ಉಜ್ಜೈನ್‌ನಲ್ಲಿ ನೆಲೆಸಿದ್ದರು. ಸ್ವಾತಿ ಅವರನ್ನು ಪತಿ ಮನೆಗೆ ಸೇರಿಸಿಕೊಳ್ಳಲು ಒಪ್ಪದಿದ್ದ ಕಾರಣ ತವರು ಮನೆ ಸೇರಿಕೊಂಡಿದ್ದಾರೆ'' ಎಂದು ತಿಳಿಸಿದರು. ರಾಕೇಶ್ ಹಾಗೂ ಸ್ವಾತಿ ಬಹುಕಾಲದ ಗೆಳೆಯರು ಎಂಬುದು ನಾಪತ್ತೆಯಾದ ನಂತರ ಎರಡೂ ಮನೆಯವರಿಗೆ ಅರಿವಿಗೆ ಬಂದಿತ್ತು. ಇಬ್ಬರೂ ಪರಸ್ಪರ ಮಾತನಾಡಿಕೊಂಡೇ ಓಡಿ ಹೋಗಿದ್ದಾರೆ ಎಂದು ತನಿಖೆ ವೇಳೆ ಬಯಲಾಯ್ತು. ಎರಡೂ ಮನೆಯವರು ಒಂದೇ ಸಮುದಾಯಕ್ಕೆ ಸೇರಿದ್ದ ಕಾರಣ, ಘರ್ಷಣೆಗೆ ಅವಕಾಶ ಕೊಡದಂತೆ ಮಾತುಕತೆ ನಡೆಸಲಾಯ್ತು. ವಧುವಿನ ತಾಯಿ ಸ್ವಾತಿ ಜೊತೆ ಓಡಿಹೋದ ವರನ ತಂದೆ ರಾಕೇಶ್, ಗುಜರಾತ್‌ನ ಅಮ್ರೇಲಿ ಜಿಲ್ಲೆಯಲ್ಲಿ ಜವಳಿ ಉದ್ಯಮಿಯಾಗಿ ಹೆಸರು ಮಾಡಿರುವಾತ. ರಾಜಕೀಯ ಪಕ್ಷವೊಂದರ ನಾಯಕ ಕೂಡಾ ಆಗಿದ್ದಾರೆ. ಇಬ್ಬರ ಪತ್ತೆಗೆ ಪೊಲೀಸರು ದೇಶಾದ್ಯಂತ ಬಲೆ ಬೀಸಿದ್ದರು.


from India & World News in Kannada | VK Polls https://ift.tt/2ObccOx

ಕಿವೀಸ್ ಆಟಗಾರರ ಕ್ರೀಡಾಸ್ಫೂರ್ತಿಗೆ ಮನಸೋತ ರೋಹಿತ್ ಶರ್ಮಾ

ಹೊಸದಿಲ್ಲಿ: ಕ್ರಿಕೆಟ್ ಆಡುವ ದೇಶಗಳ ಪೈಕಿ ಆಟಗಾರರು ಅತಿ ಹೆಚ್ಚು ಕ್ರೀಡಾಸ್ಫೂರ್ತಿಯನ್ನು ಮೆರೆಯುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಯಾವುದೇ ಮಾದರಿಯ ಆಟವೇ ಆಗಿರಲಿ. ನ್ಯೂಜಿಲೆಂಡ್ ಆಟಗಾರರು ಎಲ್ಲೇ ಮೀರುವುದಿಲ್ಲ. ಇದೇ ಕಾರಣಕ್ಕಾಗಿ ಜಗತ್ತಿನಾದ್ಯಂತ ಹೆಚ್ಚಿನ ಜನಪ್ರಿಯತೆ ಹಾಗೂ ಗೌರವಕ್ಕೆ ಪಾತ್ರವಾಗಿದ್ದಾರೆ. ಇದೀಗ ಕಿರಿಯರ ವಿಶ್ವಕಪ್‌ನಲ್ಲೂ ನ್ಯೂಜಿಲೆಂಡ್ ಜೂನಿಯರ್ ಆಟಗಾರರು ಅತ್ಯುತ್ತಮ ಕ್ರೀಡಾ ಸ್ಫೂರ್ತಿಯನ್ನು ಮೆರೆಯುವ ಮೂಲಕ ಗಮನ ಸೆಳೆದಿದ್ದಾರೆ. ತೀವ್ರ ಗಾಯದಿಂದ ಬಳಲುತ್ತಿದ್ದ ಎದುರಾಳಿ ತಂಡದ ಆಟಗಾರನಿಗೆ ಹೆಗಲು ಕೊಟ್ಟು ಎತ್ತಿಕೊಂಡು ಮೈದಾನಕ್ಕೆ ಹೊರಕ್ಕೆ ಸಾಗಿಸುವ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಪ್ರಸ್ತುತ ದಕ್ಷಿಣ ಆಫ್ರಿಕಾದಲ್ಲಿ ಸಾಗುತ್ತಿರುವ ಅಂಡರ್ 19 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ಹಾಗೂ ವೆಸ್ಟ್‌ಇಂಡೀಸ ನಡುವಣ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಈ ಸ್ಪೂರ್ತಿದಾಯಕ ವಿಡಿಯೋ ದರ್ಶನವಾಗಿತ್ತು. ಮೊದಲು ಬ್ಯಾಟಿಂಗ್ ನಡೆಸಿದ ವೆಸ್ಟ್‌ಇಂಡೀಸ್ ಕಿರ್ಕ್ ಮೆಕೆಂಝಿ ಅಮೋಘ ಬ್ಯಾಟಿಂಗ್ ನೆರವಿನ ಹೊರತಾಗಿಯೂ 47.5 ಓವರ್‌ಗಳಲ್ಲಿ 238 ರನ್‌ಗಳಿಗೆ ತನ್ನೆಲ್ಲ ವಿಕೆಟುಗಳನ್ನು ಕಳೆದುಕೊಂಡಿತು. ಸ್ನಾಯು ಸೆಳೆತಕ್ಕೊಳಗಾಗಿರುವ ಮೆಕೆಂಝಿ ಕೇವಲ ಒಂದು ರನ್ ಅಂತರದಿಂದ ಶತಕ ವಂಚಿತರಾದರು. ಈ ಹಂತದಲ್ಲಿ ಮೆಕೆಂಝಿಗೆ ನಡೆದಾಡಲು ಸಾಧ್ಯವಾಗಿರುತ್ತಿರಲಿಲ್ಲ. ಅಲ್ಲದೆ ಪೆವಿಲಿಯನ್‌ಗೆ ಹಿಂತಿರುಗಲು ಪರದಾಡುತ್ತಿದ್ದರು. ಈ ವೇಳೆಯಲ್ಲಿ ಕಿವೀಸ್ ಆಟಗಾರರು ಹೆಗಲು ಕೊಟ್ಟು ವಿಂಡೀಸ್ ಆಟಗಾರರನ್ನು ಎತ್ತಿಕೊಂಡು ಪೆವಿಲಿಯನ್‌ನತ್ತ ಸಾಗಿಸಿದರು. ಪ್ರಸ್ತುತ ಕಿವೀಸ್ ಆಟಗಾರರ ಕ್ರೀಡಾ ಮನೋಭಾವಕ್ಕೆ ವಿಶ್ವದೆಲ್ಲೆಡೆಯಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಭಾರತೀಯ ಆಟಗಾರರು ಇದರಿಂದ ಹೊರತಾಗಿಲ್ಲ. ಸದ್ಯ ನ್ಯೂಜಿಲೆಂಡ್ ಪ್ರವಾಸದಲ್ಲಿದ್ದು, ಗುರುವಾರವಷ್ಟೇ ನ್ಯೂಜಿಲೆಂಡ್ ವಿರುದ್ಧ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಬಾರಿಸಿ ಸೂಪರ್ ಸರಣಿ ಗೆಲುವಿಗೆ ಕಾರಣವಾಗಿರುವ ಹಿಟ್‌ಮ್ಯಾನ್ ಖ್ಯಾತಿಯ , ಕಿವೀಸ್ ಆಟಗಾರರ ಕ್ರೀಡಾಸ್ಫೂರ್ತಿಗೆ ಮನಸೋತಿದ್ದಾರೆ. 'ಈ ವಿಡಿಯೋ ನೋಡಲು ತುಂಬಾನೇ ಖುಷಿಯಾಗುತ್ತಿದೆ. ಸ್ಪಿರಿಟ್ ಆಫ್ ಕ್ರಿಕೆಟ್ ತನ್ನ ಉತ್ತುಂಗದಲ್ಲಿದೆ' ಎಂದು ಟ್ವೀಟ್ ಮಾಡಿದ್ದಾರೆ. ಈ ಪೈಕಿ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಹೇಳಿಕೆಯು ಇನ್ನು ಹೆಚ್ಚಿನ ಗಮನ ಸೆಳೆದಿದೆ. 'ಮಾನವಿಯತೆಯು ಹೆಚ್ಚು ನಮ್ರತೆಯಿಂದ ಪ್ರಾರಂಭವಾಗುತ್ತದೆ. ಅತ್ಯುತ್ತಮ ಪರಂಪರೆಯನ್ನು ನ್ಯೂಜಿಲೆಂಡ್ ಮುಂದಿನ ಪೀಳಿಗೆಯ ಆಟಗಾರರು ಸುಂದರವಾಗಿ ಮುಂದಕ್ಕೆ ಸಾಗಿಸುತ್ತಿದ್ದಾರೆ. ಇದೇ ಕಾರಣಕ್ಕಾಗಿ ನಮ್ಮ ಕಾಲದಲ್ಲಿ ಅತಿ ಹೆಚ್ಚು ಪ್ರೀತಿಗೆ ಪಾತ್ರವಾಗಿರುವ ತಂಡವೆನಿಸಿದೆ' ಎಂದು ಹಾಡಿ ಹೊಗಳಿದ್ದಾರೆ. ಇತ್ತಿಚೇಗಷ್ಟೇ ಸರಣಿಗೂ ಮುನ್ನ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ನ್ಯೂಜಿಲೆಂಡ್ ಆಟಗಾರರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು. 'ಏಕದಿನ ವಿಶ್ವಕಪ್ ಸೋಲಿಗೆ ಸೇಡು ತೀರಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಕಿವೀಸ್ ಆಟಗಾರರನ್ನು ನೋಡಿದಾಗ ಅಂತಹ ಭಾವನೆಯೇ ಮೂಡುವುದಿಲ್ಲ. ಅವರು ಅಷ್ಟೊಂದು ಒಳ್ಳೆಯ ವ್ಯಕ್ತಿಗಳಾಗಿದ್ದು, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉತ್ತಮ ನಿದರ್ಶನವನ್ನು ಬರೆದಿದ್ದಾರೆ' ಎಂದು ನುಡಿದಿದ್ದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2RCr1eQ

ಕಿವೀಸ್ ವಿರುದ್ಧ ಗೆಲ್ಲಲು ಭಾರತ ಅರ್ಹವಲ್ಲವೇ? ವಿಲಿಯಮ್ಸನ್‌ಗಾಗಿ ಮಿಡಿದ ಹೃದಯ

ಹ್ಯಾಮಿಲ್ಟನ್: ನ್ಯೂಜಿಲೆಂಡ್ ವಿರುದ್ದ 'ಟೈ'ನಲ್ಲಿ ಅಂತಗೊಂಡ ಪಂದ್ಯದಲ್ಲಿ ಸೂಪರ್ ಓವರ್‌ನಲ್ಲಿ ರೋಚಕ ಗೆಲುವು ಬಾರಿಸಿರುವ ಟೀಮ್ ಇಂಡಿಯಾ ಐದು ಪಂದ್ಯಗಳ ಟಿ20 ಸರಣಿಯನ್ನು ಇನ್ನೆರಡು ಪಂದ್ಯಗಳು ಬಾಕಿ ಉಳಿದಿರುವಂತೆಯೇ 3-0 ಅಂತರದಲ್ಲಿ ವಶಪಡಿಸಿಕೊಂಡಿದೆ. ಈ ಮೊದಲು ಆಕ್ಲೆಂಡ್‌ನಲ್ಲಿ ನಡೆದ ಮೊದಲೆರಡು ಟಿ20 ಪಂದ್ಯಗಳಲ್ಲೂ ಭಾರತ ಗೆಲುವು ಬಾರಿಸಿತ್ತು. ಮೂರನೇ ಟಿ20 ಪಂದ್ಯದಲ್ಲೂ ವಿಜಯ ಗಳಿಸುವಲ್ಲಿ ಭಾರತ ಯಶಸ್ವಿಯಾಗಿರಬಹುದು. ಆದರೆ ಎದುರಾಳಿ ತಂಡವು ತೋರಿರುವ ಹೋರಾಟ ಮನೋಭಾವವನ್ನು ಭಾರತ ತಂಡದ ನಾಯಕ ಮೆಚ್ಚಿದ್ದಾರೆ. ವಿಶೇಷವಾಗಿಯೂ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್‌ ಅವರಿಗಾಗಿ ಕೊಹ್ಲಿ ಹೃದಯ ಮಿಡಿಯಿತು. 'ನನಗನಿಸುತ್ತದೆ ಒಂದು ಹಂತದಲ್ಲಿ ನಮ್ಮ ಕೈಯಿಂದ ಪಂದ್ಯ ಕೈ ಜಾರಿತು ಎಂದು ಅಂದುಕೊಂಡಿದ್ದೆ. ನಮ್ಮ ಕೋಚ್ ಬಳಿಯೂ ಎದುರಾಳಿಗಳು ಗೆಲುವಿಗೆ ಅರ್ಹವಾಗಿದ್ದಾರೆ ಎಂದೇ ನುಡಿದಿದ್ದೆ. 95 ರನ್‌ಗಳಲ್ಲಿ ಬ್ಯಾಟಿಂಗ್ ಮಾಡಿದ ರೀತಿ ನೋಡಿದರೆ ಅವರಿಗಾಗಿ ಬೇಸರ ಅನಿಸುತ್ತಿದೆ. ಫಲಿತಾಂಶಗಳು ನಿಮ್ಮ ಪರವಾಗಿಲ್ಲದಿದ್ದಾಗ ಅಂತಹ ಇನ್ನಿಂಗ್ಸ್ ಭಾವನೆಗಳನ್ನು ಅರಿತುಕೊಳ್ಳಬಲ್ಲೆ' ಎಂದರು. ಮೊದಲು ಬ್ಯಾಟಿಂಗ್ ನಡೆಸಿದ ಭಾರತ ರೋಹಿತ್ ಶರ್ಮಾ ಅರ್ಧಶತಕದ (65) ನೆರವಿನಿಂದ ಐದು ವಿಕೆಟ್ ನಷ್ಟಕ್ಕೆ 179 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತ್ತು. ಬಳಿಕ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್, ನಾಯಕ ವಿಲಿಯಮ್ಸನ್ ಅದ್ಭುತ ಆಟದಿಂದ ಇನ್ನೇನು ಗೆದ್ದೇ ಬಿಟ್ಟಿತು ಎಂದು ಅಂದುಕೊಂಡಿದ್ದೆವು. ಆದರೆ ಮೊಹಮ್ಮದ್ ಶಮಿ ಅಂತಿಮ ಓವರ್‌ನಲ್ಲಿ ವಿಲಿಯಮ್ಸನ್ ವಿಕೆಟ್ ಒಪ್ಪಿಸುವುದರೊಂದಿಗೆ ಪಂದ್ಯದ ಚಿತ್ರಣವು ಬದಲಾಯಿತು. ಅಂತಿಮವಾಗಿ ರೋಚಕ ಟೈನಲ್ಲಿ ಪಂದ್ಯ ಅಂತ್ಯಗೊಂಡಿತು. ವಿರೋಚಿತ ಹೋರಾಟ ನೀಡಿದ ವಿಲಿಯಮ್ಸನ್ 48 ಎಸೆತಗಳಲ್ಲಿ ಎಂಟು ಬೌಂಡರಿ ಹಾಗೂ ಆರು ಸಿಕ್ಸರ್‌ಗಳಿಂದ 95 ರನ್ ಗಳಿಸಿದರು. ಇದರಿಂದ ಸರಣಿ ಸೋಲಿನ ಮುಖಭಂಗಕ್ಕೊಳಗಾದರು. ಅದೇ ಹೊತ್ತಿಗೆ ಕೊನೆಯ ಎಸೆತವನ್ನು ನೇರವಾಗಿ ವಿಕೆಟ್‌ಗೆ ದಾಳಿ ಮಾಡಲು ಮೊಹಮ್ಮದ್ ಶಮಿ ಜೊತೆಗೆ ಮಾತುಕತೆ ನಡೆಸಿರುವುದಾಗಿ ಕೊಹ್ಲಿ ಗೇಮ್ ಪ್ಲ್ಯಾನ್ ವಿವರಿಸಿದರು. ಯಾಕೆಂದರೆ ಬೇರೆ ಯಾವುದೇ ದಾಳಿಯನ್ನು ಪ್ರಯತ್ನಿಸಿದರೂ ಕನಿಷ್ಠ ಸಿಂಗಲ್ಸ್ ದೊರಕುವ ಅವಕಾಶವಿತ್ತು ಎಂದು ಹೇಳಿದರು. ಪಂದ್ಯದ ಅಂತಿಮ ಎಸೆತದಲ್ಲಿ ರಾಸ್ ಟೇಲರ್ ಅವರನ್ನು ಮೊಹಮ್ಮದ್ ಶಮಿ ಕ್ಲೀನ್ ಬೌಲ್ಡ್ ಮಾಡಿದ್ದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/31gr2IV

ರೈತರ ಹಕ್ಕು ರಕ್ಷಿಸದ ಬೀಜ ಮಸೂದೆ ಬೇಡ: ರೈತರು, ತಜ್ಞರಿಂದ ಹೋರಾಟದ ಎಚ್ಚರಿಕೆ

ಬೆಂಗಳೂರು: ಕೇಂದ್ರದ ಉದ್ದೇಶಿತ ಬೀಜ ಮಸೂದೆಯು ರೈತರ ಹಿತಾಸಕ್ತಿ ಕಾಪಾಡದಿದ್ದಲ್ಲಿ ಅಂತಹ ಕಾನೂನು ರೂಪಿಸುವ ಅಗತ್ಯ ಇಲ್ಲ. ಬೀಜ ಉತ್ಪಾದಿಸುವ ಹಕ್ಕನ್ನು ಅನ್ನದಾತರಿಂದ ಕಸಿಯಲು ಯತ್ನಿಸಿದರೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಕೃಷಿ ತಜ್ಞರು ಎಚ್ಚರಿಸಿದರು. ಗಾಂಧಿ ಭವನದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬುಧವಾರ ಆಯೋಜಿಸಿದ್ದ 'ಬೀಜ ಮಸೂದೆ-2019' ವಿಚಾರ ಸಂಕಿರಣದಲ್ಲಿ ರೈತ ಮುಖಂಡರ ಒತ್ತಾಯಕ್ಕೆ ಕೃಷಿ ತಜ್ಞರು ಕೂಡ ಸಾಥ್‌ ನೀಡಿದರು. ಉತ್ತಮ ಗುಣಮಟ್ಟದ ಬೀಜ ಹಾಗೂ ತಂತ್ರಜ್ಞಾನ ಆಧರಿತ ಬಿಜೋತ್ಪಾದನೆ ಇಳುವರಿಗೆ ರಹದಾರಿಯಾಗಲಿದೆ. ಇದರಿಂದ ರೈತರ ಆದಾಯ ವೃದ್ಧಿಸಲಿದೆ. ಆದರೆ, ರೈತರ ಹೆಸರಿನಲ್ಲಿಖಾಸಗಿ ಕಂಪನಿಗಳ ಏಕಸ್ವಾಮ್ಯಕ್ಕೆ ಅವಕಾಶ ನೀಡುವಂತಿದ್ದಲ್ಲಿ ಅಂತಹ ಮಸೂದೆಯನ್ನು ಜಾರಿ ಮಾಡುವ ದುಸ್ಸಾಹಸಕ್ಕೆ ಸರಕಾರ ಕೈ ಹಾಕಬಾರದು ಎಂಬ ಒಟ್ಟಾಭಿಪ್ರಾಯ ಕೇಳಿಬಂತು. ಕೃಷಿ ತಜ್ಞ ಡಾ.ಪ್ರಕಾಶ್‌ ಕಮ್ಮರಡಿ ಮಾತನಾಡಿ, ''ಉದ್ದೇಶಿತ ಬೀಜ ಮಸೂದೆ ಮೇಲ್ನೋಟಕ್ಕೆ ರೈತರ ಪರ ಎನ್ನುವಂತಿದ್ದರೂ ಒಳಹೊಕ್ಕು ನೋಡಿದರೆ ಕೃಷಿಕರಿಗೆ ಮಾರಕದಂತಿದೆ. ಒಂದು ದೇಶಕ್ಕೆ ಬೇಕಾದ ಬೀಜವನ್ನು ಒಂದೇ ಕಂಪನಿಯಿಂದ ಮಾರಾಟ ಮಾಡುವ ವ್ಯವಸ್ಥೆ ಅನುಮಾನ ಹುಟ್ಟಿಸುತ್ತದೆ. ಹಿಂದಿನ ಮಸೂದೆಗಳು ಹಾಗೂ ಕಾನೂನುಗಳನ್ನು ಮೂಲೆಗುಂಪು ಮಾಡಿರುವ ಬೀಜ ವ್ಯಾಖ್ಯಾನವು ಹಾಸ್ಯಾಸ್ಪದವಾಗಿದೆ. ಗೊಂದಲದ ಗೂಡಾಗಿರುವ ಮಸೂದೆ ಕುರಿತು ಸಂಸತ್ತಿನಲ್ಲಿ ಸವಿಸ್ತಾರವಾಗಿ ಚರ್ಚಿಸದಿದ್ದಲ್ಲಿ ಕಾಯಿದೆ ಆಗಲು ಅರ್ಹವಲ್ಲ,'' ಎಂದು ಪ್ರತಿಪಾದಿಸಿದರು. ''ಬೀಜ ಮಸೂದೆ-2019ನ್ನು ಆತುರವಾಗಿ ಜಾರಿಗೆ ತರುವ ಅಗತ್ಯ ಇಲ್ಲ. 2001ರಲ್ಲಿ ಕೇಂದ್ರ ಸರಕಾರ ಒಪ್ಪಿದ್ದ 'ಬೆಳೆ ವೈವಿಧ್ಯ ರಕ್ಷಣೆ ಹಾಗೂ ರೈತರ ಹಕ್ಕು (ಪಿವಿಪಿಎಫ್‌ಆರ್‌) ಕಾಯಿದೆ ಪೂರ್ಣವಾಗಿ ಅನುಷ್ಠಾನಕ್ಕೆ ಬಂದಿಲ್ಲ. 2004ರ ಬೀಜ ನೀತಿಯಲ್ಲಿನ ಅಂಶಗಳು ಕಡತ ಬಿಟ್ಟು ಮುಂದೆ ಹೋಗಿಲ್ಲ. 1986ರ ನೋಂದಣಿ ಕಾಯಿದೆಯಂತೆ ದೇಶದ 22 ಬೆಳೆ ವೈವಿಧ್ಯತಾ ವಲಯಗಳ ರಕ್ಷಣೆಗೆ ನೀಡಿದ್ದ ಭರವಸೆ ಹುಸಿಯಾಗಿದೆ. ಈ ತಪ್ಪುಗಳನ್ನು ಸರಿಪಡಿಸಿಕೊಂಡ ನಂತರವೇ ಸರಕಾರ ರೈತರ ವಿಶ್ವಾಸ ಪಡೆದು ಮಸೂದೆಗೆ ಅಂಗೀಕಾರ ಪಡೆಯಲಿ,'' ಎಂದು ವಿಶ್ಲೇಷಿಸಿದರು. ರೈತರ ಬೀಜ ಹಕ್ಕು ಮೊಟಕಾಗ ಬಾರದು: ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ಮಾತನಾಡಿ, ''ಬೀಜೋತ್ಪಾದನೆ ಭೂಮಿಯಿಂದಲೇ ಆರಂಭವಾಗುತ್ತದೆ. ಇದನ್ನು ರೈತ ಹೊಲದಲ್ಲಿದ್ದುಕೊಂಡೇ ಮಾಡಬೇಕು. ಈ ಸತ್ಯವನ್ನು ಅರಿಯುವ ತಿಳಿವಳಿಕೆ ತಜ್ಞರು ಹಾಗೂ ಸರಕಾರಕ್ಕೆ ಇರಬೇಕು. ಏನೇ ತಿದ್ದುಪಡಿ ಆದಲ್ಲಿ ರೈತನ ಬೀಜ ಹಕ್ಕು ಮೊಟಕು ಆಗಬಾರದು,'' ಎಂದರು. ''ಉದ್ದೇಶಿತ ಮಸೂದೆಯಲ್ಲಿಕೆಲವು ಅಂಶಗಳು ರೈತ ಪರವಾಗಿವೆ. ಆದರೆ, ಇಡೀ ದೇಶಕ್ಕೆ ಒಂದೇ ಬೀಜ ವಿತರಣೆ ಕಂಪನಿ ಏಕಿರಬೇಕು? ಪ್ರಾದೇಶಿಕ ಅಭಿವೃದ್ಧಿಗೆ ಒತ್ತು ನೀಡದಿರುವುದು ಏಕೆ? ರೈತನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದಿಲ್ಲ ಎಂಬ ಗ್ಯಾರಂಟಿ ಏನು? ಇತ್ಯಾದಿ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಸಿಗುವವರೆಗೂ ಮಸೂದೆಗೆ ಒಪ್ಪಿಗೆ ನೀಡಬಾರದು,'' ಎಂದು ಅವರು ಒತ್ತಾಯಿಸಿದರು. ರಾಷ್ಟ್ರೀಯ ಕಾನೂನು ಶಾಲೆಯ ಪ್ರಾಧ್ಯಾಪಕ ಪ್ರೊ.ಎಂ.ಕೆ.ರಮೇಶ್‌ ಅವರು 'ಬೀಜ ಮಸೂದೆ ಹಾಗೂ ಕಾನೂನು' ವಿಷಯದ ಕುರಿತು ರೈತರಿಗೆ ಮಾಹಿತಿ ಒದಗಿಸಿದರು. ಮಾರಕ ಅಂಶ ವಿರೋಧಿಸಿ: ಬೀಜ ಪರಿಣಿತ ಡಾ.ಶರಣ್‌ ಅಂಗಡಿ ಮಾತನಾಡಿ, "ಉದ್ದೇಶಿತ ಮಸೂದೆಯಿಂದ ಬೀಜದ ಮೇಲೆ ರೈತನಿಗಿರುವ ಹಕ್ಕಿಗೆ ಚ್ಯುತಿ ಆಗದು. ರೈತರು ಬೀಜಗಳನ್ನು ವಿನಿಮಯ ಮಾಡಿಕೊಳ್ಳಲು ಅವಕಾಶವಿದ್ದು, ಮಾರಾಟ ಮಾಡುವಂತಿದ್ದಲ್ಲಿ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಗ್ರಾಹಕ ಕೋರ್ಟ್‌ ಮೊರೆ ಹೋಗಲು ಅವಕಾಶ ಸಿಗಲಿದೆ. ರೈತರಿಗೆ ಮಾರಕವಾಗುವ ಅಂಶಗಳಿದ್ದಲ್ಲಿ ಅವುಗಳನ್ನು ಮಸೂದೆಯಿಂದ ಕೈಬಿಡಬೇಕೆಂಬ ಒತ್ತಾಯ ಮಾತ್ರ ಇರಲಿ,'' ಎಂದು ಸಲಹೆ ನೀಡಿದರು. ಕಂಪನಿಯಿಂದ ಪಡೆದ ಬೀಜದಿಂದ ಫಸಲು ಬಾರದೆ ನಷ್ಟವುಂಟಾದಲ್ಲಿ ರೈತರಿಗೆ ಪರಿಹಾರ ಸಿಗಬೇಕು. ಈ ಅಂಶವನ್ನು ಮಸೂದೆಯಲ್ಲಿ ಅಡಕಗೊಳಿಸದ ಹೊರತು ರೈತರಿಗೆ ನ್ಯಾಯ ಸಿಗದು. - ಎಚ್‌.ಆರ್‌. ಬಸವರಾಜ, ರೈತ ಮುಖಂಡ ಬೀಜ ಉತ್ಪಾದಿಸುವವನು ಭೂಮಿಯ ಒಡೆಯನಾಗಿರಬೇಕೆಂಬ ಮಸೂದೆಯ ಅಂಶವನ್ನು ಪರಿಗಣಿಸಿದರೆ ನಾಲ್ಕು ಎಕರೆ ಉಳ್ಳ ಖಾಸಗಿ ಕಂಪನಿ ಮಾಲೀಕನನ್ನೂ ರೈತ ಎಂದು ಒಪ್ಪಿಕೊಳ್ಳಬೇಕೆ? - ಡಾ. ಪ್ರಕಾಶ್‌ ಕಮ್ಮರಡಿ, ಕೃಷಿ ತಜ್ಞ


from India & World News in Kannada | VK Polls https://ift.tt/2Oc0RgX

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...